Showing posts with label Rupee. Show all posts
Showing posts with label Rupee. Show all posts

Friday, May 19, 2023

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

 ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

ನವದೆಹಲಿ: ಚಲಾವಣೆಯಲ್ಲಿ ಇರುವ ಎಲ್ಲ 2000 ರೂಪಾಯಿ ನೋಟುಗಳನ್ನು ತತ್‌ ಕ್ಷಣ ಚಲಾವಣೆಯಿಂದ ಹಿಂಪಡೆಯುವುದಾಗಿ 2023 ಮೇ 19ರ  ಶುಕ್ರವಾರ ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ ಬಿಐ) ಘೋಷಿಸಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.

ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು ಮತ್ತು ನೋಟು ಹಿಂತೆಗೆತದ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಎಲ್ಲ ಬ್ಯಾಂಕುಗಳು 2023 ಸೆಪ್ಟೆಂಬರ್ 30 ರವರೆಗೆ ರೂ 2000ದ ಬ್ಯಾಂಕ್‌ ನೋಟುಗಳ ಠೇವಣಿ ಮತ್ತು ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ ಬಿಐ (RBI) ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“2000 ರೂ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 89% ರಷ್ಟನ್ನು ಮಾರ್ಚ್ 2017 ರ ಮೊದಲು ಬಿಡುಗಡೆ ಮಾಡಲಾಗಿತ್ತು. ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳು.

ಚಲಾವಣೆಯಲ್ಲಿರುವ ಈ ಬ್ಯಾಂಕ್‌ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಪ್ರಕಾರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ 37.3%) ರೂ 3.62 ಲಕ್ಷ ಕೋಟಿಗೆ ಇಳಿದಿದೆ. ಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ. ಇವುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂಬುದನ್ನು ಸಹ ಗಮನಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ “ಕ್ಲೀನ್ ನೋಟ್ ಪಾಲಿಸಿ”ಗೆ ಅನುಗುಣವಾಗಿ ಚಲಾವಣೆಯಿಂದ ರೂ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಸೆಪ್ಟೆಂಬರ್‌ 30 ರವರೆಗೆ ಮುಂದುವರಿಯಲಿವೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

Tuesday, September 4, 2018

ರೂಪಾಯಿ ಬೆಲೆ ಕುಸಿತ, ಚಿನ್ನಕ್ಕೆ ಬಂತು ಬೆಲೆ!


ರೂಪಾಯಿ ಬೆಲೆ ಕುಸಿತ, ಚಿನ್ನಕ್ಕೆ ಬಂತು ಬೆಲೆ!

ಮುಂಬೈ:  ಡಾಲರ್ ಎದುರು ರೂಪಾಯಿಯ ಬೆಲೆ ನಿರಂತರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಚಿನ್ನಕ್ಕೆ ಬೆಲೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೆಚ್ಚು ಕಡಿಮೆ 9 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ 2017-18ರ ವಿತ್ತ ವರ್ಷದಲ್ಲಿ 8.46 ಟನ್ ಚಿನ್ನವನ್ನು ಖರೀದಿಸಿದೆ.

2018ರ ಜೂನ್
30ರ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ 566.23 ಟನ್ ಚಿನ್ನವನ್ನು ಹೊಂದಿತ್ತು. 2017ರ ಜೂನ್ 30ರ ವೇಳೆಗೆ ಆರ್ ಬಿ ಐ ಹೊಂದಿದ್ದ ಚಿನ್ನದ ಪ್ರಮಾಣ 557.77 ಟನ್ ಮಾತ್ರ.

ಅಂದರೆ ಒಂದು ವರ್ಷದ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನದ ಸಂಗ್ರಹವನ್ನು 8.46 ಟನ್ನಿನಷ್ಟು ಹೆಚ್ಚಿಸಿಕೊಂಡಿದೆ ಎಂದು ಬ್ಯಾಂಕಿನ 2017-18ರ ವಾರ್ಷಿಕ ವರದಿ 2018ರ ಸೆಪ್ಟೆಂಬರ್ 4ರ ಮಂಗಳವಾರ ತಿಳಿಸಿದೆ.

ಈ ಹಿಂದೆ, 2009ರ ನವೆಂಬರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಸಿತ್ತು. ಆಗ  ಅದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) 200 ಟನ್ ಹಳದಿ ಲೋಹವನ್ನು ಖರೀದಿಸಿತ್ತು.

ಬ್ಯಾಂಕಿಂಗ್ ಇಲಾಖೆ  ಆಸ್ತಿಯ ರೂಪದಲ್ಲಿ ಹೊಂದಿರುವ ಚಿನ್ನದ ಮೌಲ್ಯ  2018ರ ಜೂನ್ 30ರ ವೇಳೆಗೆ ಶೇಕಡಾ 11.12 ರಷ್ಟು ಅಂದರೆ 69,674 ಕೋಟಿ ರೂಪಾಯಿಗಳಿಗೆ ಏರಿದೆ. 2017ರ ಜೂನ್ 30ರ ವೇಳೆಗೆ ಇದು 62,702 ಕೋಟಿ ರೂಪಾಯಿ ಆಗಿತ್ತು.ಮೂಲತಃ ಡಾಲರ್ ಎದುರು ರೂಪಾಯಿ ಬೆಲೆ ಕುಸಿದ ಪರಿಣಾಮವಾಗಿ ಮತ್ತು ಈ ವರ್ಷದಲ್ಲಿ 8.44 ಟನ್ ಚಿನ್ನದ ಸೇರ್ಪಡೆಯ ಪರಿಣಾಮವಾಗಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿರುವ ಆಸ್ತಿ ರೂಪದ ಚಿನ್ನದ ಮೌಲ್ಯ ಹೆಚ್ಚಿದೆ  ಎಂದು ವರದಿ ಹೇಳಿದೆ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ: