ನಾನು ಮೆಚ್ಚಿದ ವಾಟ್ಸಪ್

Saturday, September 22, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 22

ಇಂದಿನ ಇತಿಹಾಸ History Today ಸೆಪ್ಟೆಂಬರ್  22

2018: ಬೆಂಗಳೂರು:  ಗೆಳೆಯರನ್ನು, ಗೆಳತಿಯರನ್ನು ಸಂಪಾದಿಸುವುದು ಸಣ್ಣ ಕೆಲಸವಲ್ಲ. ಅವರೊಂದಿಗಿನ ಒಡನಾಟ ಅಷ್ಟೊಂದು ಆಪ್ತವಾಗಿದ್ದಾಗ ಮತ್ತು ಗೆಳೆಯರು, ಗೆಳತಿಯರು ಹತ್ತಿರವಾಗುತ್ತಾರೆಪರಸ್ಪರ ಯಾವುದೇ ರೀತಿಯ ನೆರವಿಗೂ ಸಿದ್ಧರಾಗುತ್ತಾರೆ. ಭರವಸೆ ಹುಟ್ಟಿಸುತ್ತಿದ್ದ ಯುವ ಕಲಾವಿದ, ಛಾಯಾಗ್ರಾಹಕ, ವಿಡಿಯೋ ಎಡಿಟರ್  ಅನುಪಕೃಷ್ಣ ಭಟ್  ನೆತ್ರಕೆರೆ  ಗೆಳೆತನದ ಸಂಪತ್ತನ್ನು ತನ್ನ ಒಡಲೊಳಗೆ ಬೆಚ್ಚಗೆ ಇಟ್ಟುಕೊಂಡ ವ್ಯಕ್ತಿ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಔಷಧದ ಅಡ್ಡ ಪರಿಣಾಮವಾಗಿ ತಲೆಗೂದಲು ಉದುರಿದಾಗ, ಗೆಳೆಯರು ಆತನಿಗಾಗಿ ತಮ್ಮ ತಲೆಗೂದಲುಗಳನ್ನೂ ಬೋಳಿಸಿಕೊಂಡಿದ್ದರು. ಆತನ ಜನ್ಮದಿನ ಬಂದಾಗ ಆಸ್ಪತ್ರೆಯ ವೈದ್ಯರ ಬಳಿ ಮಾತನಾಡಿ, ಅಸ್ಪತ್ರೆಯಲ್ಲೇ ಆತನ ಜನ್ಮದಿನ ಆಚರಿಸಿ ಅಲ್ಲಿದ್ದವರಿಗೆಲ್ಲ ಸಿಹಿ ಹಂಚಿದ್ದರು.ಅನುಪ ತನ್ನೊಂದಿಗೆ ಓದಿದವರ ಜೊತೆಗಷ್ಟೇಅಲ್ಲ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಜೊತೆಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಜೊತೆಗೂ ಅಷ್ಟೇ ಆತ್ಮೀಯನಾಗಿದ್ದ. ತಾನು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಮಾಡಬೇಕು ಎಂಬ  ಅದಮ್ಯ  ಆಸೆಯೊಂದು ಅವನಿಗಿತ್ತು. ಅವನಿಗೆ ಅದನ್ನು ಪೂರೈಸಿಕೊಳ್ಳಲು ವಿಧಿ ಅವಕಾಶ ಕೊಡಲಿಲ್ಲ. ಆದರೆ ಆತನ ಗೆಳೆಯರು, ಗೆಳತಿಯರು ಸುಮ್ಮನಾಗಲಿಲ್ಲ. ಆತನ  ಆಶಯವನ್ನು ಈಡೇರಿಸಬೇಕು  ಎಂದು ಸಂಕಲ್ಪಿಸಿದರು. ಸ್ವತಃ ಹಣ ಸಂಗ್ರಹಿಸಿದರು. ಕಂಪ್ಯೂಟರಿನಲ್ಲಿ, ಹಾರ್ಡ್ ಡಿಸ್ಕ್ ಗಳಲ್ಲಿ ಇದ್ದ ಅನುಪನೇ ಕ್ಲಿಕ್ಕಿಸಿದ್ದ ಛಾಯಾಚಿತ್ರಗಳನ್ನು ಹುಡುಕಿ ಆಯ್ಕೆ ಮಾಡಿದರು. ಅನುಪನನ್ನು ಕಲಾವಿದ, ಛಾಯಾಗ್ರಾಹಕನನ್ನಾಗಿ ರೂಪಿಸಿ ಕೆನ್ ಕಲಾಶಾಲೆಯಲ್ಲೇ  ಈದಿನದಿಂದ ( ಸೆಪ್ಟೆಂಬರ್ ೨೨ರಿಂದ ೨೪ರವರೆಗೆ)  ಮೂರು ದಿನಗಳಫೊಟೋಗ್ರಫಿ ಶೋ  ಸಂಘಟಿಸಿದರುಕೆನ್ ಕಲಾಶಾಲೆಯ ಪ್ರಾಂಶುಪಾಲ ಉಮೇಶ್ ಆರ್ ಮತ್ತು ಪ್ರಮುಖ ಮಾಧ್ಯಮ ವ್ಯಕ್ತಿ ಡಾ. ನರೇಂದ್ರ ಮಡಿಕೇರಿ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಗೆಳೆಯರು  ಛಾಯಾಚಿತ್ರ ಪ್ರದರ್ಶನದ ಜೊತೆಗೆ ಅನುಪನೇ ಎಡಿಟ್ ಮಾಡಿದ್ದ ವಿಡಿಯೋಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಿದ್ದರು. ತನ್ಮೂಲಕ ಗೆಳೆತನದ ಸಾರ್ಥಕತೆಯನ್ನು ಪ್ರದರ್ಶಿಸಿದರು.


2017: ಲಖನೌ:ಫೈಜಾಬಾದಿನ ಸನ್ಯಾಸಿ ಗುಮ್ನಾಮಿ ಬಾಬಾ ಅವರೇ ನೇತಾಜಿ ಸುಭಾಶ್ ಚಂದ್ರ ಬೋಸ್ಆಗಿದ್ದರು ಎಂದು ಹೆಚ್ಚು ಜನ ನಂಬಿದ್ದರುಎಂದು ನಿವೃತ್ತ ನ್ಯಾಯಮೂರ್ತಿ ವಿಷ್ಣು ಸಹಾಯ್ರಾಜ್ಯಪಾಲರಿಗೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದರು. ಗುಮ್ನಾಮಿ ಬಾಬಾ ಬಗ್ಗೆ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ನಾಯಕ್ಅವರಿಗೆ ವಿಷ್ಣು ಸಹಾಯ್ಅವರು 347 ಪುಟಗಳ ವರದಿ ಸಲ್ಲಿಸಿದರು. ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರುಎಂದು ವಾದಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ಹೈಕೋರ್ಟ್‌, ಬಗ್ಗೆ ಆಯೋಗವೊಂದನ್ನು ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿತ್ತು. ಹೈಕೋರ್ಟ್ಆದೇಶದಂತೆ ಉತ್ತರ ಪ್ರದೇಶ ಸರ್ಕಾರ ಕಳೆದ ವರ್ಷ ಜೂನ್ನಲ್ಲಿ ವಿಷ್ಣು ಸಹಾಯ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ. ಆಯೋಗಕ್ಕೆ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ನಂಬಿದ್ದರು. ಕೆಲವರು ಅವರು ನೇತಾಜಿ ಆಗಿದ್ದಿರಬಹುದು ಎಂದು ಹೇಳಿದ್ದರು. ಕೆಲವರು ಅವರು ನೇತಾಜಿ ಆಗಿರಲಿಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದಾರೆಎಂದು ವಿಷ್ಣು ಸಹಾಯ್ಹೇಳಿದರು. ರಾಜ್ಯಪಾಲರಿಗೆ ಸಲ್ಲಿಸಿರುವ ವರದಿಯ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ವಿಷ್ಣು ಸಹಾಯ್ನಿರಾಕರಿಸಿದರು.
2017: ನ್ಯೂಯಾರ್ಕ್: ಭಾರತ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ. ಪಾಕ್ನಲ್ಲಿ ಉಗ್ರರ ಅಡಗುತಾಣಗಳಿಲ್ಲ. ಗಡಿಯ ಅಶಾಂತಿಗೆ ನಾವು ಕಾರಣರಲ್ಲ. ಜನವರಿಯಿಂದ ಇಲ್ಲಿಯವರೆಗೆ 600ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದರೂ ನಾವು ಸುಮ್ಮನಿದ್ದೇವೆ. ಭಾರತದ ಪ್ರಚೋದನೆಗೆ ನಮ್ಮ ಸೇನೆ ದಿಟ್ಟ ಉತ್ತರ ನೀಡಲಿದೆ ಎಂದು ವಿಶ್ವ ಸಂಸ್ಥೆಯ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಾಹಿದ್ಖಾನ್ಅಬ್ಬಾಸಿ ಅವರಿಗೆ  ವಿಶ್ವಸಂಸ್ಥೆಯಲ್ಲಿನ ಭಾರತದ ಮೊದಲ ಕಾರ್ಯದರ್ಶಿ ಈನಮ್ ಗಂಭೀರ್.ದಿಟ್ಟ ಉತ್ತರ ನೀಡಿದರು. ಅಬ್ಬಾಸಿ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಈನಮ್  ಪಾಕಿಸ್ತಾನ ಈಗ ಭಯೋತ್ಪಾದಕ ರಾಷ್ಟ್ರವಾಗಿದೆ. ಪಾಕ್ ಎಂದರೆ ಉರ್ದು ಭಾಷೆಯಲ್ಲಿ ಶುದ್ಧ ಎಂದರ್ಥ. ಇಂದು ಪಾಕಿಸ್ತಾನ ಟೆರರಿಸ್ತಾನ್ ಆಗಿ ಮಾರ್ಪಟ್ಟಿದೆ. ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮಾನಾರ್ಥಕ ಪದವಾಗಿ ಗುರುತಿಸಿಕೊಂಡಿದೆ. ಆದರೆ ಇದೀಗ ಉಗ್ರ ರಾಷ್ಟ್ರವಾಗಿದೆ ಎಂದು ಹೂಂಕರಿಸಿದರು. ಒಸಾಮಾ ಬಿನ್ ಲಾಡೆನ್, ಮುಲ್ಲಾ ಓಮರ್ ಗೆ ರಕ್ಷಣೆ ನೀಡಿದ ದೇಶ ಅದು. 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕ್ ನಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಮತ್ತು ರಫ್ತು ಮಾಡುವುದು ಪಾಕಿಸ್ತಾನದ ಮುಖ್ಯಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಪಾಕ್ ನೆನಪಿನಲ್ಲಿಡಲಿ, ಉಗ್ರರನ್ನು ಗಡಿಯಾಚೆಯಿಂದ ಭಾರತಕ್ಕೆ ನುಸುಳಿ ಬಿಡುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕೆಳ ಮಟ್ಟಕ್ಕಿಳಿಸಲು ಎಂದಿಗೂ ಅಸಾಧ್ಯವಾದ ಮಾತು ಎಂದು ಗುಡುಗುವ ಮೂಲಕ ಪಾಕ್ ಮಾನ ಹರಾಜು ಮಾಡಿದರು. ಅಂದಹಾಗೆ ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರ ಕಚೇರಿಯ ಕಾರ್ಯದರ್ಶಿ ಆಗಿರುವ ಈನಮ್ಗಂಭೀರ್ಪಾಕ್ಗೆ ರೀತಿಯ ಖಡಕ್ ಉತ್ತರ ನೀಡಿದ್ದು ಇದು ಮೊದಲೇನೂ ಅಲ್ಲ. ಕಳೆದ ವರ್ಷ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 71ನೇ ಮಹಾಧಿವೇಶನದಲ್ಲಿ ಭಾರತದ ವಿರುದ್ಧ ಆರೋಪಗಳ ಸುರಿಮಳೆಗರೆದ ಪಾಕ್ಪ್ರಧಾನಿ ನವಾಜ್ಷರೀಫ್ಅವರಿಗೆ ಈನಮ್ ಇದೇ ರೀತಿ ತಿರುಗೇಟು ನೀಡಿದ್ದರು. ಕಾಶ್ಮೀರಿಗಳ ಮೇಲೆ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಡೆಯುತ್ತಿದೆ ಎಂದು ಷರೀಫ್ ಭಾರತದ ಮೇಲೆ ಆರೋಪ ಹೊರಿಸಿದ್ದರು.ಜೊತೆಗೆ ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎಂಬಂಥ ವಾದವನ್ನೂ ಮುಂದಿಟ್ಟಿದ್ದರು.
2017: ಬನಿಹಾಲ್‌/ಜಮ್ಮು : ಜಮ್ಮು ಕಾಶ್ಮೀರದ ಬನಿಹಾಲ್ಪಟ್ಟಿಯಲ್ಲಿ ಸೆ.20ರ ಬುಧವಾರ ಎಸ್ಎಸ್ಬಿ ಭದ್ರತಾ ತಂಡದವರ ಮೇಲೆ ನಡೆದಿದ್ದ  ದಾಳಿಯಲ್ಲಿ ಶಾಮೀಲಾಗಿದ್ದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.  ಉಗ್ರ ದಾಳಿಯಲ್ಲಿ ಓರ್ವ ಎಸ್ಎಸ್ಬಿ ಜವಾನ ಮೃತನಾಗಿ ಇನ್ನೋರ್ವ ಗಾಯಗೊಂಡಿದ್ದ. ಉಗ್ರ ದಾಳಿಯಲ್ಲಿ ಶಾಮೀಲಾಗಿದ್ದ ಗಜ್ನಫರ್‌ ಮತ್ತು ಆರಿಫ್ ಎಂಬ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದರು ಎಂದು ಹಿರಿಯ ಅಧಿಕಾರಿ ತಿಳಿಸಿದರು. ಬನಿಹಾಲ್ಪಟ್ಟಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ 24 ತಾಸಿನೊಳಗೆ ಉಗ್ರರಿಬ್ಬರನ್ನು ಸೆರೆ ಹಿಡಿಯಲಾಗಿದೆ; ಅವರಿಂದ ಎರಡು ಸರ್ವಿಸ್ರೈಫಲ್ಳು, ಎಕೆ ಅಸಾಲ್ಟ್ ರೈಫಲ್ವಶಪಡಿಸಿಕೊಳ್ಳಲಾಗಿದೆ; ಇವುಗಳನ್ನು ಉಗ್ರರು ದಾಳಿಯ ವೇಳೆ ಜವಾನರಿಂದ ಕಸಿದು ಪರಾರಿಯಾಗಿದ್ದರು  ಎಂದು ರಾಮಬನ್ಎಸ್ಎಸ್ಪಿ, ಮೋಹನ್ಲಾಲ್ತಿಳಿಸಿದರು. ಗಜ್ನಫರ್‌ ಮತ್ತು ಆರಿಫ್ ನನ್ನು ಚೀನಾಬ್ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸುವುದಕ್ಕಾಗಿ ನೇಮಕ ಮಾಡಲಾಗಿತು. ಅಕಿಬ್ವಾಹೀದ್ಎಂಬ ಇನ್ನೋರ್ವ ಉಗ್ರನ ಜತೆ ಸೇರಿ ಇವರು ಬನಿಹಾಲ್ಪಟ್ಟಿಯಲ್ಲಿ ಯೋಧರ ಮೇಲೆ ದಾಳಿ ಎಸಗಿದ್ದರು. ದಾಳಿಯ ಬಳಿಕ ಪರಾರಿಯಾಗಿರುವ ವಾಹೀದ್ಗಾಗಿ ಈಗ ವ್ಯಾಪಕ ಶೋಧ ನಡೆಯುತ್ತಿದೆ ಎಂದು ಎಸ್ಎಸ್ಪಿ ಹೇಳಿದರು. 21 ಹರೆಯದ ಗಜ್ನಫರ್‌  ಮತ್ತು 22 ಹರೆಯದ ಅಕಿಬ್ವಾಹೀದ್ಅನಂತ್ನಾಗ್ಪದವಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಾಗಿದ್ದಾರೆ. ಇವರ ಕುಟುಂಬದವರಿಗೆ ಹಿಂದೆ ಹಿಜ್ಬುಲ್ಮುಜಾಹಿದೀನ್ನಂಟಿತ್ತು ಎಂದು ಎಸ್ಎಸ್ಪಿ ತಿಳಿಸಿದರು.
2017: ಅಯೋಧ್ಯೆ: ಅಯೋಧ್ಯೆಯ  ಬಾಬ್ರಿ ಮಸೀದಿರಾಮ ಜನ್ಮಮಂದಿರದ ವಿವಾದಿತ ಸ್ಥಳಕ್ಕೆ ಇಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ವೀಕ್ಷಕರನ್ನಾಗಿ ನೇಮಿಸಲಾಯಿತು. ಸುಪ್ರೀಂಕೋರ್ಟ್ನಿರ್ದೇಶನದ ಮೇರೆಗೆ ಅಲಹಾಬಾದ್ಹೈಕೋರ್ಟ್ ನೇಮಕ ಮಾಡಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಸ್ತಿಯ ಇರ್ಫಾನ್ಅಹ್ಮದ್ಮತ್ತು ಫೈಜಾಬಾದ್ ಅಮರಜೀತ್ತ್ರಿಪಾಠಿ ಅವರನ್ನು ವೀಕ್ಷಕರಾಗಿ ನೇಮಿಸಿದ್ದು, 15 ದಿನಗಳಿಗೊಮ್ಮೆ ವಿವಾದಿತ ಸ್ಥಳದ ಕುರಿತು ವರದಿ ಸಲ್ಲಿಸಲಿದ್ದಾರೆ. ಸೆ.11ರಂದು ಸುಪ್ರೀಂಕೋರ್ಟ್ ಮೂವರು ನ್ಯಾಯಮೂರ್ತಿಗಳನ್ನೊಂಡ ವಿಶೇಷ ಪೀಠವು, ನ್ಯಾಯಾಧೀಶರಾದ ಟಿ.ಎಂ ಖಾನ್ಮತ್ತು ಎಸ್‌.ಕೆ. ಸಿಂಗ್ಅವರನ್ನು ಬದಲಾಯಿಸುವಂತೆ ಆದೇಶ ನೀಡಿತ್ತು. ಇಬ್ಬರನ್ನು 2003ರಲ್ಲಿ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಇವರಲ್ಲಿ ಒಬ್ಬರು ವೀಕ್ಷಕರು ನಿವೃತ್ತಿಯಾಗಿದ್ದು, ಇನ್ನೊಬ್ಬರು ಹೈಕೋರ್ಟ್ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದಾರೆ ಎಂದು ಹಿರಿಯ ವಕೀಲ ರಾಕೇಶ್ದ್ವಿವೇದಿ ಅವರು ಸುಪ್ರೀಂಕೋರ್ಟ್ಗಮನಕ್ಕೆ ತಂದಿದ್ದರು. ಬಳಿಕ ನ್ಯಾಯಾಲಯ ವೀಕ್ಷಕರ ಬದಲಾವಣೆಗೆ ಆದೇಶ ಹೊರಡಿಸಿತ್ತು.
2017: ನವದೆಹಲಿ: ಹನಿಪ್ರೀತ್ ಇನ್ಸಾನ್ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಅಲ್ಲ. ಕಾನೂನು ಪ್ರಕಾರ ಹನಿಪ್ರೀತ್ ಅವಳನ್ನು ದತ್ತು ಪಡೆದುಕೊಂಡಿಲ್ಲ ಎಂದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತ ಬಹಿರಂಗಪಡಿಸಿದರು.  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಪ್ತ, ಹನಿಪ್ರೀತ್ ಬಾಬಾನ ದತ್ತುಪುತ್ರಿಯೇ ಅಲ್ಲ, ಇದೆಲ್ಲಾ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಬಾಬಾನ ನಾಟಕವಾಗಿತ್ತು ಎಂದು ಆರೋಪಿಸಿದರು. ನಾನು ಹಾಗೂ ನನ್ನ ಕುಟುಂಬ ಡೇರಾ ಬಾಬಾನಿಗೆ ತುಂಬಾ ನಿಕಟವಾಗಿತ್ತು. ಹೀಗಾಗಿ 1999ರಲ್ಲಿ ನಾನು ಹನಿಪ್ರೀತ್ ಜತೆ ವಿವಾಹವಾಗಿದ್ದೆ. ನಾನು ಅವಳನ್ನು ನೋಡದೆಯೇ ಮದುವೆ ಆಗಿದ್ದೆ. ಗುರ್ಮಿತ್ ನನ್ನ ಮಗ ಎಂಬಂತೆ ಉಪಚರಿಸುತ್ತಿದ್ದ. ಆದರೆ ಡೇರಾ ಪೂರ್ಣಪ್ರಮಾಣದಲ್ಲಿ ಬಾಬಾನ ನಿಯಂತ್ರಣದಲ್ಲಿಯೇ ಇರುತ್ತಿತ್ತು ಎಂದು ಗುಪ್ತ ಹೇಳಿದರು. ಅಷ್ಟೇ ಅಲ್ಲ ಡೇರಾದೊಳಗಿನ ಗುಹೆಯಲ್ಲಿ ಬಿಗ್ ಬಾಸ್ ರೀತಿಯಲ್ಲಿ ದೊಡ್ಡ ಮಟ್ಟದ ಗೇಮ್ ಅನ್ನು ನಡೆಸುತ್ತಿದ್ದ, ಅಲ್ಲಿ ನಾವು 6 ಮಂದಿ (ಗಂಡ -ಹೆಂಡತಿ) ಸುಮಾರು 28 ದಿನಗಳ ಕಾಲ ಕಳೆಯಬೇಕಾಗಿತ್ತು. ಗೇಮ್ ನಲ್ಲಿ ಸೋತವರು ಬಾಬಾನ ಜತೆ ಗುಹೆಯಲ್ಲಿ ಕಾಲ ಕಳೆಯಬೇಕಾಗಿತ್ತು. ಹಾಗಾಗಿ ಹನಿಪ್ರೀತ್ ಬೇಕಂತಲೇ ಗೇಮ್ ನಲ್ಲಿ ಸೋಲುತ್ತಿದ್ದಳು. ಬಾಬಾ ಮತ್ತು ಹನಿಪ್ರೀತ್ ಅಪ್ಪ, ಮಗಳಂತೆ ಇರಲಿಲ್ಲ, ಅವರು ಗಂಡ ಹೆಂಡತಿ ರೀತಿ ಇದ್ದರು. ಒಂದೇ ಬೆಡ್ ನಲ್ಲಿ ರಾಮ್ ರಹೀಂ ಮತ್ತು ಹನಿಪ್ರೀತ್ ಮಲಗುತ್ತಿದ್ದರು ಎಂದು ವಿಶ್ವಾಸ್ ತಿಳಿಸಿದರು.

2014: ಬೆಂಗಳೂರು: ಮಂಗಳ ನೌಕೆಯ ಪಥ ಸರಿಪಡಿಸುವಿಕೆ ಮತ್ತು ಮುಖ್ಯ ದ್ರವ ಎಂಜಿನ್ನಿನ ದಹನಶೀಲತೆಯ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು  ಇಸ್ರೊ ಪ್ರಕಟಿಸಿತು. ಮಂಗಳ ನೌಕೆ ಕಕ್ಷೆ ಪ್ರವೇಶಿಸುವುದಕ್ಕೆ ಪೂರ್ವಭಾವಿಯಾಗಿ ಈ ಪರೀಕ್ಷೆ ನಡೆಸಬೇಕಿತ್ತು. ವಿಜ್ಞಾನಿಗಳು ಇದನ್ನು ಅಗ್ನಿಪರೀಕ್ಷೆ ಎಂದೇ ಕರೆದಿದ್ದರು. ‘ನೌಕೆಯ ಪಥವನ್ನು ನಾಲ್ಕನೇ ಬಾರಿಗೆ ಸರಿಪಡಿಸಲು ಈ ಪರೀಕ್ಷೆ ನಡೆಸಬೇಕಿತ್ತು. ಸುಮಾರು ೪ ಸೆಕೆಂಡುಗಳ ಕಾಲ ದ್ರವ ಎಂಜಿನ್ ಉರಿಸುವ ಈ ಪರೀಕ್ಷೆ ಯಶಸ್ವಿಯಾಗಿದೆ’ ಎಂದು ಇಸ್ರೊ ಸ್ಪಷ್ಟಪಡಿಸಿತು. ೩೦೦ ದಿನಗಳಿಂದ ನಿದ್ರಾವಸ್ಥೆಯಲ್ಲಿ ಇರಿಸಲಾಗಿದ್ದ ಎಂಜಿನ್ ಮತ್ತೆ ಸರಿಯಾಗಿ ಉರಿಯಲಿದೆಯೇ ಎಂಬುದೇ ಕುತೂಹಲದ ವಿಷಯವಾಗಿತ್ತು. ಸೆ.೨೪ ರಂದು ನೌಕೆ ಮಂಗಳನ ಕಕ್ಷೆ ಸೇರಲಿದೆ. ಸದ್ಯ ಪ್ರತಿ ಸೆಕೆಂಡ್ಗೆ ೨೨.೧ ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನೌಕೆಯ ವೇಗ ಪ್ರತಿ ಸೆಕೆಂಡ್ಗೆ ೪.೪  ಕಿ.ಮೀಗೆ ತಗ್ಗಲಿದೆ. ಈ ವೇಗವನ್ನು ತಗ್ಗಿಸಲು ಎಂಜಿನ್ ಅನ್ನು ೨೪ ನಿಮಿಷಗಳ ಕಾಲ ಹೆಚ್ಚುವರಿಯಾಗಿ ಉರಿಸಬೇಕಾಗುತ್ತದೆ ಎಂದೂ ಇಸ್ರೊ ಹೇಳಿತು. ಇದಕ್ಕೂ ಮುನ್ನ ಈದಿನ ಬೆಳಗ್ಗೆ ನೌಕೆ ಮಂಗಳನ ಪ್ರಭಾವ ವಲಯವನ್ನು ಪ್ರವೇಶಿಸಿತ್ತು. 'ನಮ್ಮ ಲೆಕ್ಕಾಚಾರದ ಪ್ರಕಾರ ಮಂಗಳಯಾನ ನೌಕೆಯು ಮಂಗಳ ಗ್ರಹದ ಗುರುತ್ವಾಕರ್ಷಣ ವಲಯವನ್ನು ಈದಿನ ಮುಂಜಾನೆ 9 ಗಂಟೆ ಸುಮಾರಿಗೆ ಪ್ರವೇಶಿಸಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಿರಿಯ ಅಧಿಕಾರಿಯೊಬ್ಬರು ಇಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು.

2014: ಮುಂಬೈ: ಹಿರಿಯ ಬಾಲಿವುಡ್ ನಟ ಶಶಿ ಕಪೂರ್ (76) ಅವರನ್ನು ಹೃದಯ ಸೋಂಕಿನ ಕಾರಣ ಇಲ್ಲಿನ ಆಸ್ಪತ್ರೆಯೊಂದರಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಯಿತು. ಶಶಿ ಕಪೂರ್ ಅವರನ್ನು ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡದ್ದನ್ನು ಅನುಸರಿಸಿ ಹಿಂದಿನ ದಿನ ಸಂಜೆ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯ ಸೋಂಕಿಗಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದರು.

2014: ಇಂಚೋನ್  (ದಕ್ಷಿಣ ಕೊರಿಯಾ): ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿಯಿತು. ರಾಹಿ ಸರ್ನೊಬತ್‌, ಅನಿಸಾ ಸಯ್ಯದ್‌ ಹಾಗೂ ಹೀನಾ ಸಿಧು ಅವರನ್ನೊಳಗೊಂಡ ಭಾರತದ ಮಹಿಳೆಯರ ತಂಡವು 25 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿತು.ಮೂವರು ಶೂಟರ್ ಗಳನ್ನು ಒಳಗೊಂಡ ಭಾರತದ ತಂಡ 1729 ಪಾಯಿಂಟ್‌ಗಳನ್ನು ಕಲೆಹಾಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಚೀನಾಬೆಳ್ಳಿ ಗೆದ್ದರೆ ಆತಿಥೇಯ ದಕ್ಷಿಣ ಕೊರಿಯ ಚಿನ್ನದ ಪದಕವನ್ನು ಬಾಚಿಕೊಂಡಿತು. ಭಾರತಕ್ಕೆ ಶೂಟಿಂಗ್‌ನಲ್ಲಿ ದೊರೆತ ನಾಲ್ಕನೇ ಪದಕ ಇದು. ಜಿತು ರಾಯ್‌ ಅವರನ್ನೊಳಗೊಂಡ ಭಾರತದ ಪುರುಷರ ತಂಡ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಹಿಂದಿನ ದಿನ ಕಂಚಿನ ಪದಕ ಗೆದ್ದಿತ್ತು. ಇದಕ್ಕೂ ಮೊದಲು ಜಿತು ಅವರು 50 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಸಾಧನೆ ತೋರಿದ್ದರು. 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಶ್ವೇತಾ ಚೌಧರಿ ಅವರು ಕಂಚಿನ ಪದಕ ಪಡೆದಿದ್ದರು. ಈ ಮಧ್ಯೆ ಮಹಿಳೆಯರ ಸಿಂಗಲ್ಸ್ ಸ್ಕಾವಷ್ ಸೆಮಿಫೈನಲ್​ನಲ್ಲಿ ಸೋತ ದೀಪಿಕಾ ಪಲ್ಲಿಕ್ಕಲ್ ಅವರು ಕಂಚಿನ ಪದಕಕ್ಕೆ ತೃಪ್ತರಾಗಬೇಕಾಯಿತು. ಪಲ್ಲಿಕ್ಕಲ್ ಅವರು ವಿಶ್ವದ ನಂಬರ್ 1 ಆಟಗಾರ್ತಿ ನಿಕೋಲ್ ಡೇವಿಡ್ ಅವರಿಂದ 4-11, 4-11, 5-11 ಅಂಕಗಳೊಂದಿಗೆ ಪರಾಜಿತರಾದರು.
2014: ಈರೋಡ್ (ತಮಿಳ್ನಾಡು): ನಾಲ್ಕು ಅಂತಸ್ತಿನ ಸರ್ಕಾರಿ ಕಟ್ಟಡದ ಎರಡನೇ ಅಂತಸ್ತಿನ ಬಾಲ್ಕನಿ ಕುಸಿದ ಪರಿಣಾಮವಾಗಿ 22ರ ಹರೆಯದ ಮಹಿಳೆಯೊಬ್ಬರು ಮೃತರಾಗಿ ಇನ್ನೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಇಲ್ಲಿ ಘಟಿಸಿತು. ಘಟನೆಯಲ್ಲಿ ಮೃತರಾದ ಮತ್ತು ಗಾಯಗೊಂಡ ಇಬ್ಬರೂ ಮಹಿಳೆಯರು ಕೊಳೆಗೇರಿ ನಿಮೂಲನಾ ಮಂಡಳಿಯ ಕಟ್ಟಡದ ಎರಡನೇ ಅಂತಸ್ತಿನ ಬಾಲ್ಕನಿ ಕುಸಿದಾಗ ಒಂದನೇ ಮಹಡಿಯ ಮೆಟ್ಟಿಲ ಬಳಿ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನ ರಾತ್ರಿ 11.30 ರ ವೇಳೆಗೆ ಈ ಘಟನೆ ಸಂಭವಿಸಿತು ಎಂದು ಅವರು ನುಡಿದರು.

2014: ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಆರೋಗ್ಯ ಪರಿಸ್ಥಿತಿ ಸ್ವಲ್ಪ ಏರು ಪೇರಾದ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಮಧುಮೇಹದ ಸಮಸ್ಯೆಯ ಹಿನ್ನೆಲೆಯಲ್ಲಿ ಜೇಟ್ಲಿ ಅವರನ್ನು ಈ ತಿಂಗಳ ಆದಿಯಲ್ಲಿ ರಾಜಧಾನಿಯ ಖಾಸಗಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೇಟ್ಲಿ ಅವರ ಹಠಾತ್ ಅಸ್ವಸ್ಥತೆ ಹಿನ್ನೆಲೆಯಲ್ಲಿ ಈದಿನ ನಡೆಯಬೇಕಾಗಿದ್ದ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಉದ್ಘಾಟನಾ ಸಮಾರಂಭವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ರದ್ದು ಪಡಿಸಿತು. ಜೇಟ್ಲಿ ಅವರ ಕೈಯಿಂದಲೇ ವೆಬ್ ಸೈಟ್ ಉದ್ಘಾಟನೆ ನಿಗದಿಯಾಗಿತ್ತು. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾದ ಕೈರ್ನ್ಸ್ನಲ್ಲಿ ನಡೆದ ಜಿ-20 ಹಣಕಾಸು ಸಚಿವರ ಮಹತ್ವದ ಸಭೆಯೊಂದರಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

2014: ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ 25 ವರ್ಷಗಳಷ್ಟು ಹಳೆಯದಾದ ಮೈತ್ರಿಯನ್ನು ಕೊನೆಗೊಳಿಸದಂತೆ ಒತ್ತಾಯಿಸಿದರು. ಮಹಾರಾಷ್ಟ್ರ ಕೋರ್ ಕಮಿಟಿಯ ಬಹುತೇಕ ಸದಸ್ಯರು ಮತ್ತು ಶಿವಸೇನೆ ಜೊತೆಗೆ ಮೈತ್ರಿ ಮುಂದುವರಿಸಲು ಆಸಕ್ತಿ ಇಲ್ಲದ ಹಿರಿಯ ಬಿಜೆಪಿ ನಾಯಕರ ಮಧ್ಯೆ ಭಿನ್ನಮತ ಹೆಚ್ಚಿದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಠಾಕ್ರೆ ಅವರನ್ನು ಭೇಟಿ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವುದೇ ಇಲ್ಲವೇ ಎಂಬುದು ಮೇಲೆ ಶಾ- ಠಾಕ್ರೆ ಭೇಟಿಯಿಂದ ಸ್ಪಷ್ಟವಾಗುವುದು ಎನ್ನಲಾಯಿತು. ಶಿವಸೇನೆಯು ಹೆಚ್ಚು ಸ್ಥಾನಗಳಿಗಾಗಿ ತನ್ನ ಪಟ್ಟು ಮುಂದುವರಿಸಿದರೆ ಅದರ ಜೊತೆಗೆ ಮೈತ್ರಿ ಮುಂದುವರಿಕೆ ಬೇಡ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಜ್ಯ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಮತ್ತಿತರ ಹಲವರು ಅಭಿಪ್ರಾಯ ಪಟ್ಟಿದ್ದರು. ನಿತಿನ್ ಗಡ್ಕರಿಯಂತಹ ಕೆಲವರು ಶಿವಸೇನಾ ಜೊತೆಗೆ ಬಾಂಧವ್ಯ ಮುಂದುವರಿಕೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತ ಪಡಿಸಿದ್ದರು. ಶಿವಸೇನೆಯು ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಹಲವಾರು ಬಾರಿ ನಿತಿನ್ ಗಡ್ಕರಿ ಮೇಲೆ ಹರಿಹಾಯ್ದಿತ್ತು.

2008: ಭಾರತದೊಂದಿಗೆ ನಾಗರಿಕ ಪರಮಾಣು ಶಕ್ತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ತೀವ್ರ ಯತ್ನ ನಡೆಸುತ್ತಿದ್ದಂತೆಯೇ, ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕುವ ಆಶಯದೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಹತ್ತು ದಿನಗಳ ಅಮೆರಿಕ ಮತ್ತು ಫ್ರಾನ್ಸ್ ಪ್ರವಾಸವನ್ನು ಆರಂಭಿಸಿದರು.

2008: ಚೀನದಾದ್ಯಂತ ಸುಮಾರು 13 ಸಾವಿರ ಮಕ್ಕಳು ದೋಷಯುಕ್ತ ಹಾಲನ್ನು ಸೇವಿಸಿ ಆಸ್ಪತ್ರೆಗೆ ದಾಖಲಾದವು. ಬಿಳಿಯ ಹರಳು ರೂಪದ ಕಾರ್ಬನಿಕ್ ಸಂಯುಕ್ತ ಪದಾರ್ಥವಾದ `ಮೆಲಾಮೈನ್'ಯುಕ್ತ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ಸೇವಿಸಿದ ಈ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದವು. ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ 12,892 ಕೂಸುಗಳು ಚಿಕಿತ್ಸೆಗಾಗಿ ದಾಖಲಾದವು. ಈ ಸಂಬಂಧ ಸುಮಾರು 53 ಸಾವಿರ ಮಕ್ಕಳು ವೈದ್ಯಕೀಯ ಪರೀಕ್ಷೆಗೊಳಗಾದವು. ನಾಲ್ಕು  ಮಕ್ಕಳು ಸತ್ತಿದ್ದು, 104 ಮಕ್ಕಳ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಝಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು. ಹೆಬೈ ಪ್ರಾಂತ್ಯದಲ್ಲಿನ ಸಾನ್ಲು ಗ್ರೂಪಿನ ಮಕ್ಕಳ ಹಾಲಿನ ಪುಡಿ ತಯಾರಿಕಾ ಕೇಂದ್ರದಲ್ಲಿ ಈ ಪುಡಿ ತಯಾರಿಸಲಾಗಿತ್ತು. ಸಾಮಾನ್ಯವಾಗಿ `ಮೆಲಾಮೈನ್' ರಾಸಾಯನಿಕ ಪದಾರ್ಥವನ್ನು ಪ್ಲಾಸ್ಟಿಕ್ ಹಾಗೂ ಜಿಲೆಟಿನ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

2007: ಬೆಂಗಳೂರಿನ ಎನ್. ಎ. ಸಂದೀಪ್ ಎಲ್ಲೈಸಿ 61ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಅವರು ತಮ್ಮ ಜೀವನದ ಮೊಟ್ಟ ಮೊದಲ ರಾಷ್ಟ್ರೀಯ ಪದಕ ಗೆದ್ದುಕೊಂಡರು. ಪಣಜಿಯ ಕಂಪಾಲ್ ಈಜುಗೊಳದಲ್ಲಿ ನಡೆದ ಪುರುಷರ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಸಂದೀಪ್ ಅವರು ದೂರವನ್ನು 28.3 ಸೆಕೆಂಡುಗಳಲ್ಲಿ ಕ್ರಮಿಸಿ ಈ ಸಾಧನೆ ಮಾಡಿದರು. ಕಳೆದ ಬಾರಿಯ ಚಾಂಪಿಯನ್ ಅರ್ಜುನ್ ಮುರಳೀಧರನ್ ಅವರು ಭಾರಿ ಪೈಪೋಟಿ ಒಡ್ಡಿದರಾದರೂ, ಕೊನೆಯ ಹಂತದಲ್ಲಿ ತಮ್ಮ ವೇಗದಲ್ಲಿ ಕೊಂಚ ಹಿನ್ನಡೆದದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಭಗವಾನ್ ಮಹಾವೀರ್ ಜೈನ್ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ತಿ ಸಂದೀಪ್ ಆರಂಭದಲ್ಲಿ ಸ್ವಲ್ಪ ಹಿಂದೆ ಇದ್ದರೂ, ನಿರ್ಣಾಯಕ ಘಟ್ಟದಲ್ಲಿ ವೇಗವಾಗಿ ಈಜಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಕಂಚಿನ ಪದಕವನ್ನು ತಮಿಳುನಾಡಿನ ಬಾಲಕೃಷ್ಣನ್ ಅವರು 28.51ಸೆ. ಗಳೊಂದಿಗೆ ತಮ್ಮ ಕೊರಳಿಗೆ ಹಾಕಿಸಿಕೊಂಡರು. ಮಹಿಳೆಯರ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ಶಿಖಾ ಟಂಡನ್ ಬಂಗಾರದ ಪದಕವನ್ನು ತಮ್ಮ ಕೊರಳಿಗೆ ಹಾಕಿಸಿಕೊಂಡರು. ಒಲಿಂಪಿಯನ್ ಶಿಖಾ ಅವರು ಈ  ದೂರವನ್ನು 31.48ಸೆಕೆಂಡುಗಳಲ್ಲಿ ಕ್ರಮಿಸಿದರು. ಕೂಟದ ಮೂರನೇ ದಿನ ಕರ್ನಾಟಕ ತಂಡಕ್ಕೆ ಒಟ್ಟು ಮೂರು ಚಿನ್ನದ ಪದಕ ದೊರೆತವು.

2007: ಭಾರತ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಅಧಿಕೃತ ವೆಬ್ ಸೈಟ್ ತಿತಿತಿ. ಜಠಟಿ.ಠಡಿರ  ಹೆಸರಿನ ವೆಬ್ ಸೈಟನ್ನು ಈದಿನ ಕೋಲ್ಕತ್ತದಲ್ಲಿ ಆರಂಭಿಸಲಾಯಿತು.

2007: ಮೆಕ್ಸಿಕೊ ನಗರದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವುದರಲ್ಲಿ ಯಶಸ್ವಿಯಾದರು. ಎಂಟನೇ ಸುತ್ತಿನ ಪಂದ್ಯದಲ್ಲಿ ಕೇವಲ ಅರ್ಧ ಪಾಯಿಂಟ್ ಗಿಟ್ಟಿಸಿದರೂ ಭಾರತದ ಆನಂದ್ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿ ನಿಲ್ಲುವಲ್ಲಿ ಯಶಸ್ವಿಯಾದರು. ಬೋರಿಸ್ ಗೆಲ್ಫಾಂಡ್ ಅವರೊಂದಿಗೆ ಜಂಟಿಯಾಗಿದ್ದ ವಿಶ್ವನಾಥನ್ ಆನಂದ್ ಅವರು ಬೋರಿಸ್ ಅವರನ್ನು ಅರ್ಧ ಪಾಯಿಂಟಿನಿಂದ ಹಿಂದೆ ತಳ್ಳಿದರು.

 2007: ಲಾರಿ ಡಿಕ್ಕಿಯಿಂದಾಗಿ ಪುರುಷತ್ವ ಕಳೆದುಕೊಂಡ ಬೈಕ್ ಸವಾರ, ರಾಜ್ಯ ಗುಪ್ತಚರ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿದ್ದ ಟಿ.ದ್ಯಾವೇಗೌಡ (43) ಅವರಿಗೆ ಎಂಟು ಲಕ್ಷ ರೂಪಾಯಿಗಳ ಪರಿಹಾರವನ್ನು ಅರ್ಜಿ ಸಲ್ಲಿಸಿದ ದಿನದಿಂದ ಶೇಕಡಾ 8 ವಾರ್ಷಿಕ ಬಡ್ಡಿ ಸಹಿತವಾಗಿ ಪಾವತಿ ಮಾಡುವಂತೆ ಯುನೈಟೆಡ್ ಇಂಡಿಯಾ ಇನ್ ಶ್ಯೂರೆನ್ಸ್ ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಆಜ್ಞಾಪಿಸಿತು. ನ್ಯಾಯಮೂರ್ತಿಗಳಾದ   ಕೆ.ಎಲ್. ಮಂಜುನಾಥ ಹಾಗೂ ಜಾವೇದ್ ರಹೀಂ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶ ನೀಡಿತು. ದ್ಯಾವೇಗೌಡ ಅವರು 1999ರ ಜುಲೈ 26ರಂದು ಅವರು ಸ್ಕೂಟರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿತ್ತು. ಗಾಯಗೊಂಡ ಅವರಿಗೆ ಐದು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸೊಂಟದ ಕೆಳಭಾಗ ಸಂಪೂರ್ಣ ಹಾನಿಗೊಳಗಾದ ಕಾರಣ, ಅವರು ಪೇದೆ ಕೆಲಸ ನಿರ್ವಹಿಸಲೂ ಅಶಕ್ತರಾದರು. ಅಷ್ಟೇ ಅಲ್ಲದೇ ಜೀವನ ಪರ್ಯಂತ ಪ್ರತಿದಿನ ಮೂತ್ರದ ನಳಿಕೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯೂ ಉಂಟಾಯಿತು. ಮೋಟಾರು ವಾಹನ ಅಪಘಾತ ನ್ಯಾಯಾಲಯ ಅವರಿಗೆ ರೂ. 3.27 ಲಕ್ಷ  ಪರಿಹಾರಕ್ಕೆ ಆದೇಶಿಸಿತ್ತು. ಪರಿಹಾರದ ಹಣವನ್ನು ಹೆಚ್ಚು ಮಾಡುವಂತೆ ಅವರು ಹೈಕೋರ್ಟ್  ಮೊರೆ ಹೋಗಿದ್ದರು.

2007: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಂಡನೆಗೆ ಒತ್ತು ನೀಡುವುದರ ಜೊತೆಗೆ ಪಕ್ಷದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ನಿರ್ಣಯವನ್ನು ಭೋಪಾಲಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಅಂಗೀಕರಿಸಿತು. ಮೀಸಲಾತಿ ಕುರಿತಂತೆ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನೇತೃತ್ವದ ಸಮಿತಿ ಸಿದ್ಧಪಡಿಸಿದ್ದ ವರದಿಯನ್ನು ಬಿಜೆಪಿ ರಾಷ್ಟ್ರೀಯ ಮಂಡಳಿ ಅಂಗೀಕರಿಸಿತು. ಈ ವರ್ಷದ ಜೂನ್ 26ರಂದು ರಾಜನಾಥ್ ಸಿಂಗ್ ಈ ಸಮಿತಿ ರಚಿಸಿದ್ದರು. ಪಕ್ಷದ ಎಲ್ಲಾ ಘಟಕಗಳಲ್ಲೂ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ಒದಗಿಸಲಾಗುವುದು ಎಂದು ಪಕ್ಷ ಹೇಳಿತು.

2007: ಅಮೆರಿಕದಲ್ಲಿ ನೆಲೆಸಿದ ಭಾರತೀಯ ಮೂಲದ ನಾಲ್ವರು, ಫೋರ್ಬ್ಸ್ ಪತ್ರಿಕೆ ಪ್ರಕಟಿಸಿದ ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಳಿಸಿದರು. ಐಪಾಡ್ ಸ್ಪೀಕರ್, ಹೋಮ್ ಥಿಯೇಟರ್, ಗದ್ದಲ ನಿಯಂತ್ರಕ ಹೆಡ್ ಫೋನ್ ತಯಾರಿಕೆಯಲ್ಲಿ ಮೊದಲಿಗರಾದ ಅಮರ್ ಬೋಸ್, ಗೂಗಲ್ ಸಂಸ್ಥಾಪಕ ನಿರ್ದೇಶಕ ಕವಿತಾರ್ಕ್ ಶ್ರೀರಾಮ್, ಬಂಡವಾಳ ಹೂಡಿಕೆದಾರ ವಿನೋದ್ ಖೋಸ್ಲಾ ಮತ್ತು ಹೊರಗುತ್ತಿಗೆ ಸಂಸ್ಥೆ ಇನ್ಫೋಟೆಕ್ಕಿನ ಭರತ್ ದೇಸಾಯಿ ಮತ್ತು ಅವರ ಪತ್ನಿ ನೀರಜಾ ದೇಸಾಯಿ ಪಟ್ಟಿಯಲ್ಲಿ ಸ್ಥಾನ ಪಡೆದವರು. 77 ವರ್ಷದ ಅಮರ್ ಬೋಸ್ ಹಾಗೂ ಗೂಗಲ್ ನ ಶ್ರೀರಾಮ್ ಪಟ್ಟಿಯಲ್ಲಿ 271ನೇ ಸ್ಥಾನ ಹಂಚಿಕೊಂಡಿದ್ದಾರೆ. ಅವರಿಬ್ಬರೂ ತಲಾ ಸುಮಾರು 180 ಶತ ಕೋಟಿ ಡಾಲರಿನಷ್ಟು ಆಸ್ತಿ ಹೊಂದ್ದಿದಾರೆ. ಕಳೆದ ವರ್ಷ ಇವರಿಬ್ಬರು 242ನೇ ಸ್ಥಾನವನ್ನು ಹಂಚಿಕೊಂಡಿದ್ದರು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಟೈಗರ್ ಮೆಮನ್ ನ ಇಬ್ಬರು ನಿಕಟವರ್ತಿಗಳಾದ ದಾವೂದ್ ಮೊಹಮ್ಮದ್ ಫಾನ್ಸೆ ಯಾನೆ ದಾವೂದ್ ಟಾಕ್ಲಾ (82) ಮತ್ತು ಷರೀಫ್ ಅಬ್ದುಲ್ ಗಫೂರ್ ಪಾರ್ಕರ್ ಯಾನೆ ದಾದಾಭಾಯಿ (75) ದೋಷಿಗಳು ಎಂದು ಟಾಡಾ ವಿಶೇಷ ನ್ಯಾಯಾಲಯ ತೀರು ನೀಡಿತು. ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಪಾತ್ರ ಇರುವುದನ್ನು ನ್ಯಾಯಾಲಯ ಇದೇ ಮೊದಲ ಬಾರಿಗೆ ಎತ್ತಿ ಹಿಡಿಯಿತು.

2006: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಮಲಪ್ರಭಾ ನದಿಗೆ ಕಳಸಾ ಮತ್ತು ಬಂಡೂರಿ ನಾಲೆಗಳ ಜೋಡಣೆ ಕಾಮಗಾರಿಗೆ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದರು.

2006: ಪ್ಯಾಂತಲೂನ್ ರಿಟೇಲ್ (ಇಂಡಿಯಾ) ಲಿಮಿಟೆಡ್ನ ಬಿಗ್ ಬಜಾರ್ ತನ್ನ 32ನೇ ಬಿಗ್ ಬಜಾರ್ ಮಳಿಗೆಯನ್ನು ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಆರಂಭಿಸಿತು. ಇದು ದೇಶದಲ್ಲೇ ಅತಿ ದೊಡ್ಡ ಮಳಿಗೆ ಎಂಬುದು ಕಂಪೆನಿಯ ಪ್ರತಿಪಾದನೆ.

1989: ಕವಿ ಇರ್ವಿಂಗ್ ಬರ್ಲಿನ್ ಅವರು ತಮ್ಮ 101ನೇ ವಯಸಿನಲ್ಲಿ ನ್ಯೂಯಾರ್ಕ್ ನಗರದಲ್ಲಿನಿಧನರಾದರು.

1986: ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಕ್ರಿಕೆಟ್ ಪಂದ್ಯ `ಟೈ' ಆಯಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಟೈ ಆದದ್ದು ಇದು ಎರಡನೆಯದು. ಇದು ಸುನಿಲ್ ಗಾವಸ್ಕರ್ ಅವರ 100ನೇ ಟೆಸ್ಟ್ ಪಂದ್ಯವೂ ಆಗಿತ್ತು.

1981: ಸೌರಶಕ್ತಿಯ ಮೋಟಾರ್ ಸೈಕಲನ್ನು ತಯಾರಿಸಿರುವುದಾಗಿ ಶ್ರೀಲಂಕಾ ವಿಜ್ಞಾನಿಗಳು ಕೊಲಂಬೋದಲ್ಲಿ ಪ್ರಕಟಿಸಿದರು. ಇಂಧನ ಬಿಕ್ಕಟ್ಟನ್ನು ನಿವಾರಿಸುವುದೇ ಸೌರಶಕ್ತಿಯ ಮೋಟಾರ್ ಸೈಕಲ್ ತಯಾರಿಕೆಯ ಉದ್ದೇಶ ಎಂದು ಅವರು ನುಡಿದರು.

1980: ಪರ್ಷಿಯ ಕೊಲ್ಲಿಯ ಉತ್ತರ ಕರಾವಳಿಯಲ್ಲಿನ ಶಟ್ ಅಲ್ ಅರಬ್ ಜಲಮಾರ್ಗದ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಇರಾನಿನ ಮೇಲೆ ಇರಾಕ್ ದಾಳಿ ಮಾಡಿತು. ಇದರೊಂದಿಗೆ ಪರ್ಷಿಯ ಕೊಲ್ಲಿ ಘರ್ಷಣೆ ಪೂರ್ಣ ಪ್ರಮಾಣದ ಸಮರವಾಗಿ ಮಾರ್ಪಟ್ಟಿತು.

1977: ಜಮಾತ್-ಎ- ಇಸ್ಲಾಮೀ ಸಂಸ್ಥಾಪಕ ಮೌಲಾನಾ ಅಬ್ದುಲ್ ಅಲಿ ಮೌದುದಿ ನಿಧನ.

1954: ಸಾಹಿತಿ ಚಿನ್ನಾಸ್ವಾಮಿ ಮೂಡ್ನಕೂಡು ಜನನ.

1953: ಸಾಹಿತಿ ಓ.ಎಲ್. ನಾಗಭೂಷಣ ಸ್ವಾಮಿ ಜನನ.

1952: ಖ್ಯಾತ ತೆಲುಗು ಸಾಹಿತಿ ಬಾಪಿರಾಜು ನಿಧನ.

1941: ಖ್ಯಾತ ಸಾಹಿತಿ ಪ್ರೇಮಾ ಭಟ್ ಜನನ.

1938: ಸಾಹಿತಿ ಟಿ.ಎಲ್. ದೇವರಾಜು ಜನನ.

1895: ಆಸ್ಟ್ರಿಯಾ ಸಂಜಾತ ಅಮೆರಿಕನ್ ಚಿತ್ರ ನಟ ಪೌಲ್ ಮುನಿ (1895-1967) ಜನ್ಮದಿನ. (ಕುತೂಹಲದ ಸಂಗತಿ ಗೊತ್ತೆ? ಭಾರತದ ಖ್ಯಾತ ನಟ ಅಶೋಕ್ ಕುಮಾರ್ ಅವರು `ದಾದಾಮೋನಿ' ಎಂದೇ ಜನಪ್ರಿಯರಾಗಿದ್ದರು. ತಾನು ಪೌಲ್ ಮುನಿಯ ಸಹೋದರ `ದಾದಾ ಮುನಿ' ಎಂಬುದಾಗಿ ಅಶೋಕ್ ಕುಮಾರ್ ತಮಾಷೆ ಮಾಡುತ್ತಿದ್ದರು.)

1857: ಮೂವರು ಮೊಘಲ್ ರಾಜಕುಮಾರರನ್ನು ಕ್ಯಾಪ್ಟನ್ ಹೊಡ್ಸನ್ ದೆಹಲಿಯಲ್ಲಿ ಕೊಂದು ಹಾಕಿದ (ರಾಜಕುಮಾರರಲ್ಲಿ ಇಬ್ಬರು ಎರಡನೇ ಬಹಾದುರ್ ಶಹಾನ ಮಕ್ಕಳು ಮತ್ತು ಮೂರನೆಯವ ಮೊಮ್ಮಗ). ಮೂವರೂ ರಾಜಕುಮಾರರ ಬಟ್ಟೆ ಬಿಚ್ಚಿಸಿ ಒಳ ಉಡುಪುಗಳಲ್ಲಿ ನಿಲ್ಲಿಸಿದ ಹೊಡ್ಸನ್ ಅತ್ಯಂತ ಸಮೀಪದಿಂದ ಅವರಿಗೆ ಗುಂಡು ಹಾರಿಸಿದ. ಅವರ ಶವಗಳನ್ನು ನಾಯಿಗಳು ಹಾಗೂ ಹದ್ದುಗಳಿಗೆ ತಿನ್ನಲು ಎಸೆಯಲಾಯಿತು.

1599: ಭಾರತದಲ್ಲಿ ವ್ಯಾಪಾರ ನಡೆಸುವ ಸಲುವಾಗಿ 24 ಮಂದಿ ವರ್ತಕರು ಲಂಡನ್ನಿನಲ್ಲಿ ಸಭೆ ಸೇರಿ 30,133 ಪೌಂಡ್ ಪಾಲುಬಂಡವಾಳದೊಂದಿಗೆ `ದಿ ಗವರ್ನರ್ ಅಂಡ್ ಕಂಪೆನಿ ಆಫ್ ಮರ್ಚೆಂಟ್ಸ್ ಆಫ್ ಲಂಡನ್ ಟ್ರೇಡಿಂಗ್ ಇನ್ ಟು ದಿ ಈಸ್ಟ್ ಇಂಡೀಸ್' ಹೆಸರಿನಲ್ಲಿ ಕಂಪೆನಿಯನ್ನು ಆರಂಭಿಸಿದರು. ಈ ಕಂಪೆನಿ `ಈಸ್ಟ್ ಇಂಡಿಯಾ ಕಂಪೆನಿ' ಎಂದೇ ಖ್ಯಾತಿ ಪಡೆಯಿತು.

(ಸಂಗ್ರಹನೆತ್ರಕೆರೆಉದಯಶಂಕರ)

No comments:

Post a Comment