Tuesday, September 25, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 25

ಇಂದಿನ ಇತಿಹಾಸ History Today ಸೆಪ್ಟೆಂಬರ್ 25


2018: ನವದೆಹಲಿ: ಮಹತ್ವದ ತೀರ್ಪೊಂದರಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಪಂಚ ಸದಸ್ಯ  ಸಂವಿಧಾನ ಪೀಠವು ರಾಜಕೀಯ ಪಕ್ಷಗಳು ಪಕ್ಷದ ಟಿಕೆಟಿನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ತಮ್ಮ ಅಧಿಕೃತ ವೆಬ್ ಸೈಟ್ಗಳಲ್ಲಿ ಪ್ರಕಟಿಸಬೇಕು ಎಂದು ಆದೇಶ ನೀಡಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಕೊಲೆ, ಅತ್ಯಾಚಾರ, ಅಪಹರಣದಂತಹ ಹೀನ ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸುವ ಶಾಸನ ರೂಪಿಸುವ ಬಗ್ಗೆ ಪರಿಶೀಲಿಸಲು ಸಂಸತ್ತಿಗೆ ಸೂಚನೆ ನೀಡಿತು. ತಪ್ಪಿತಸ್ಥರು ಎಂದು ಸಾಬೀತಾಗಿ ಶಿಕ್ಷೆಗೆ ಗುರಿಯಾಗುವ ಮುನ್ನವೇ ಸಂಸತ್ ಸದಸ್ಯರು, ಶಾಸನ ಸಭಾ ಸದಸ್ಯರನ್ನು ಅನರ್ಹಗೊಳಿಸಲಾಗದು. ಸುಪ್ರೀಂಕೋರ್ಟ್ ಘೋಷಿಸುತ್ತದೆ, ಸಂಸತ್ತು ಕಾನೂನು ರೂಪಿಸುತ್ತದೆ. ಸುಪ್ರೀಂಕೋರ್ಟ್ ಸ್ವತಹ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ‘ರಾಜಕೀಯವನ್ನು ಅಪರಾಧೀಕರಣಗೊಳಿಸುವುದು ಅತ್ಯಂತ ಮಹತ್ವದ ವಿಷಯ. ಆದರೆ ವಿಷಯದಲ್ಲಿ ತಾನು ಶಾಸನಗಳನ್ನು ರೂಪಿಸಲು ಸಾಧ್ಯವಿಲ್ಲ. ನಿಟ್ಟಿನಲ್ಲಿ ಶಾಸನ ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಷಯ. ದೇಶವು ಇಂತಹ ಕಾನೂನಿಗಾಗಿ ಕಾಯುತ್ತಿದೆ ಎಂದು ಪೀಠ  ಹೇಳಿತು. ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ಟಿಕೆಟಿನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ತಮ್ಮ ಅಧಿಕೃತ ವೆಬ್ ಸೈಟ್ ಗಳಲ್ಲಿ ಪ್ರಕಟಿಸಬೇಕು ಎಂದು ಪೀಠವು ಆಜ್ಞಾಪಿಸಿತು. ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗಳನ್ನು ಪಕ್ಷಗಳು ವ್ಯಾಪಕ ಪ್ರಸಾರವುಳ್ಳ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದೂ ಪೀಠ ಸೂಚಿಸಿತು. ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಶಿಕ್ಷೆಗೆ ಗುರಿಯಾದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳ್ಳುತ್ತಾರೆ. ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಕೇವಲ ಆರೋಪಕ್ಕೆ ಗುರಿಯಾದವರು, ದೋಷಾರೋಪ ಹೊರಿಸಲ್ಪಟ್ಟವರನ್ನು ಅನರ್ಹಗೊಳಿಸಲು ಅವಕಾಶವಿಲ್ಲ. ಕೊಲೆ, ಅಪಹರಣ, ಅತ್ಯಾಚಾರಗಳಂತಹ ಹೀನ ಅಪರಾಧಗಳ ಆರೋಪಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಪಂಚ ಸದಸ್ಯ ಪೀಠವು ನಡೆಸಿತ್ತುನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್, ರೊಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರ ಅವರನ್ನು ಒಳಗೊಂಡ ಪಂಚ ಸದಸ್ಯ ಪೀಠವುಸುಪ್ರೀಂಕೋರ್ಟ್ ಸಂಸತ್ತಿಗಾಗಿ ಕಾನೂನು ರೂಪಿಸಲಾಗದು ಎಂದು ಸ್ಪಷ್ಟ ಪಡಿಸಿತು.ಪಕ್ಷಗಳಿಂದ ಪಾರದರ್ಶಕತೆಯ ಪಾಲನೆ ಸಲುವಾಗಿ ಅಭ್ಯರ್ಥಿಗಳು ಮೊದಲಿಗೆ ತಮ್ಮ ಕ್ರಿಮಿನಲ್ ಹಿನ್ನೆಲೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು  ಯಾವ ಪಕ್ಷದಿಂದ ತಾವು ಸ್ಪರ್ಧಿಸಬಯಸಿದ್ದಾರೋ ಅಂತಹ ಪಕ್ಷಗಳಿಗೆ ನೀಡಬೇಕು ಎಂದು ತೀರ್ಪು ಹೇಳಿತ್ತು. ಪಕ್ಷಗಳ ವೆಬ್ ಸೈಟ್ ಗಳಲ್ಲಿ ರೀತಿ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಪ್ರಕಟಿಸುವುದರಿಂದ ಹಣ ಹಾಗೂ ತೋಳ್ಬಲದಿಂದ ಬೇಸತ್ತ ರಾಷ್ಟ್ರದ ಸಾಮಾನ್ಯ ಮತದಾರರಿಗೆ ತಾನು ಯಾರಿಗೆ ಮತ ನೀಡಬೇಕೆಂದು ನಿರ್ಧರಿಸಲು  ’ಆಯ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಪೀಠ ಹೇಳಿತು. ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಮಾಹಿತಿಯನ್ನು ಬಹಿರಂಗಗೊಳಿಸುವ ಪ್ರಕ್ರಿಯೆಯು ,’ಸಂಸ್ಕೃತಿ ಮತ್ತು ರಾಜಕೀಯದ ಪಾವಿತ್ರ್ಯ ರಕ್ಷಣೆಗೆ ಹಾಗೂಮಾಹಿತಿಯುಕ್ತ ಪೌರತ್ವ  ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವಂತೆ  ರಾಜಕೀಯ ಪಕ್ಷಗಳ ಮೇಲೆ ಒತ್ತಡ ಬೀರಲಿದೆ. ಕ್ರಿಮಿನಲ್ ರಾಜಕಾರಣಿಗಳು ರಾಷ್ಟ್ರಕ್ಕೆ ಹೊರೆ ಹೊರತು ಬೇರೇನೂ ಅಲ್ಲ. ಅಧಿಕಾರದಲ್ಲಿನ ಅವರ ಹಾಜರಿಯು ಪ್ರಜಾಪ್ರಭುತ್ವದ ಬೇರುಗಳಿಗೇ ಧಕ್ಕೆ ಉಂಟು ಮಾಡುತ್ತದೆ. ರಾಜಕೀಯದ ಅಪರಾಧೀಕರಣ ಮತ್ತು ಭ್ರಷ್ಟಾಚಾರ, ವಿಶೇಷವಾಗಿ ಚುನಾವಣೆಗಳ ಮೂಲಕ ಪ್ರವೇಶದ ಹಂತದಲ್ಲಿ ರಾಷ್ಟ್ರೀಯ ಮತ್ತು ಆರ್ಥಿಕ ಭಯೋತ್ಪಾದನೆಯಾಗಿ ಪರಿಣಮಿಸಿದೆ. ಇದು ಸ್ವಯಂ ನಾಶದ ಕಾಯಿಲೆಯಾಗಿದ್ದು ಪ್ರತಿ ಜೀವಾಣುಗಳಿಗೂ ಜಗ್ಗುತ್ತಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತು. ರಾಜಕಾರಣಕ್ಕೆ  ಅಪರಾಧ ಸ್ವಭಾವದ ಹೆಚ್ಚಳ ತೀವ್ರ ಗತಿಯಲ್ಲಿ ಆಗುತ್ತಿದೆ ಎಂದೂ ಕೋರ್ಟ್ ಹೇಳಿತು. ಕ್ರಿಮಿನಲ್ ಶಕ್ತಿಗಳ ವಿಚಾರದಲ್ಲಿ ಪಕ್ಷಗಳು ಸ್ವತಃ ತಮ್ಮನ್ನು ಶುದ್ಧೀಕರಿಸಿಕೊಳ್ಳುವ ಅಗತ್ಯವಿದೆ ಎಂದು ಪೀಠ ಹೇಳಿತು.

2018: ಭೋಪಾಲ್: ಬಿಜೆಪಿಯಲ್ಲಿನ ಬೇರು ಮಟ್ಟದ ಕಾರ್ಯಕರ್ತರ ಮಹತ್ವವನ್ನು ಇಲ್ಲಿ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರುಪಕ್ಷವು ವಿಶ್ವದ ಅತಿದೊಡ್ಡ ರಾಜಕೀಯ ಸಂಘಟನೆಯಾಗಿದೆ ಎಂಬುದು ಪಕ್ಷಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು ’ಬಿಜೆಪಿಯು ರಾಷ್ಟ್ರದ ೧೯ ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಿರುವುದಕ್ಕೆ ನಮಗೆ ಹೆಮ್ಮೆ ಇದೆ. ಯುಪಿಎ ಸರ್ಕಾರವು ಎಂದೂ ಬಿಜೆಪಿ ನೇತೃತ್ವದ ರಾಜ್ಯಗಳಿಗೆ ಕಾರ್ ನಿರ್ವಹಿಸಲು ಅವಕಾಶವನ್ನೇ ನೀಡುತ್ತಿರಲಿಲ್ಲ. ಕಾಂಗ್ರೆಸ್ ದೇಶವನ್ನು ವಿಭಜಿಸುವ ಕೆಲಸವನ್ನು ಮಾತ್ರವೇ ಮಾಡಿದೆ. ನಾವು ವೋಟ್ ಬ್ಯಾಂಕ್ ರಾಜಕೀಯನ್ನು ನಿರ್ನಾಮ ಮಾಡಬೇಕಾಗಿದೆ ಎಂದು ಅವರು ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.  ‘ಅಧಿಕಾರ ಹೋದ ಬಳಿಕ ನಿಮ್ಮ ಮನಸ್ಸೂ ಕೆಟ್ಟಿ ಹೋಗಿದೆಯೇ?’ ಎಂದು ಪ್ರಶ್ನಿಸಿದ ಪ್ರಧಾನಿವಿರೋಧ ಪಕ್ಷ ಕೆಸರು ಎರಚುವ ಕೆಲಸ ಮಾಡುತ್ತಿದೆ. ಏಕೆಂದರೆ ಅಭಿವೃದ್ಧಿ ವಿಷಯಗಳಲ್ಲಿ ಚರ್ಚಿಸುವುದಕ್ಕಿಂತ ಕೆಸರು ಎರಚುವುದೇ ಅವರಿಗೆ ಸುಲಭವಾಗಿ ಕಾಣುತ್ತದೆ ಎಂದು ಪ್ರಧಾನಿ ರಫೇಲ್ ವ್ಯವಹಾರ ಕುರಿತ ಕಾಂಗ್ರೆಸ್ ಆರೋಪವನ್ನು ಉಲ್ಲೇಖಿಸುತ್ತಾ ನುಡಿದರುಪಕ್ಷದ ಬೃಹತ್ ಬಲ ಪ್ರದರ್ಶನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನುಒಂದು ವೈಫಲ್ಯ ಎಂಬುದಾಗಿ ಬಣ್ಣಿಸಿದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಛೇಡಿಸಿದರು. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ಬಿಜೆಪಿ ಕಾರ್ಯಕರ್ತರ ಮಹಾಮೇಳಕ್ಕೆ (ಕಾರ್ಯಕರ್ತ ಮಹಾಕುಂಭ) ಚಾಲನೆ ನೀಡಿದರು. ಹಿಂದುತ್ವ ಐಕಾನ್ ಭಾರತೀಯ ಜನಸಂಘದ ಸಹ ಸಂಸ್ಥಾಪಕ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ನ ದಿನೋತ್ಸವ ಅಂಗವಾಗಿ ಕಾರ್ಯಕರ್ತರ ಮಹಾಕುಂಭ ಸಂಘಟಿಸಲಾಗಿದೆ. ಇದು ವಿಶ್ವದಲ್ಲೇ ಪಕ್ಷವೊಂದರ ಅತಿದೊಡ್ಡ ಸಮಾವೇಶ ಎಂದು ಹೇಳಲಾಗಿದೆ.
  

2017: ಮೂಡುಬಿದಿರೆ: ಖ್ಯಾತ ಮಕ್ಕಳ ಸಾಹಿತಿ, ನಿವೃತ್ತ ಅಧ್ಯಾಪಕ ಪಳಕಳ ಸೀತಾರಾಮ ಭಟ್ಟ (86) ಅಲ್ಪಕಾಲದ ಅಸೌಖ್ಯದಿಂದ ಈದಿನ ನಿಧನರಾದರು. ಅವರು ಪತ್ನಿ, ಲೆಕ್ಕಪರಿಶೋಧಕ ರಘುಪತಿ ಭಟ್ಸಹಿತ ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದರು.
118 ಮಕ್ಕಳ ಸಾಹಿತ್ಯ, 11 ಪ್ರೌಢ ಸಾಹಿತ್ಯ ಸಹಿತ 163ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಪಳಕಳ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ  ಲಭಿಸಿತ್ತು. ಅವರ ಬಹಳಷ್ಟು ಕವನಗಳು, ಕೃತಿಗಳು, ಶಾಲಾ ಪಠ್ಯದಲ್ಲಿ ಪ್ರಕಟಗೊಂಡಿದ್ದವು. ಅವರು ಮಕ್ಕಳ ಸಾಹಿತ್ಯದ ಕಥೆ, ಕವನ, ನಾಟಕ, ರೂಪಕ, ಪ್ರಹಸನ, ಪ್ರಬಂಧ, ಪತ್ರಲೇಖನ, ಜೀವನ ಚರಿತ್ರೆ, ಕಿರು ಕಾದಂಬರಿ, ಚುಟುಕು, ಭಕ್ತಿಗೀತೆ ಸಹಿತ ಬಹು ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿ ಜನಪ್ರಿಯತೆ ಕಂಡವರು. ಜೈನ ಪ್ರಾಥಮಿಕ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕವೂ ಅವರು ಕೃಷಿ, ಸಾಹಿತ್ಯ ರಚನೆಯ ಕೈಂಕರ್ಯವನ್ನು ಮುಂದುವರಿಸಿದ್ದರು.  1954ರಲ್ಲಿಯೇ ಶಿಶು ಸಾಹಿತ್ಯ ಮಾಲೆಯನ್ನು ಸ್ಥಾಪಿಸಿ 31 ಕೃತಿಗಳನ್ನು ಪ್ರಕಟಿಸಿದ್ದರು. ರಾಜ್ಯ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿಗಳಲ್ಲಿ ಕವಿಯಾಗಿ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಿಸಿದ್ದ ಅವರು 1990 ದಶಕದಲ್ಲಿ ಅವಿಭಜಿತ .. ಜಿಲ್ಲೆಗಳ ಮಕ್ಕಳ ಸಾಹಿತಿಗಳ ವೇದಿಕೆ 'ಮಕ್ಕಳ ಸಾಹಿತ್ಯ ಸಂಗಮ'ವನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷ ರಾಗಿ ಮುನ್ನಡೆಸಿದ್ದರು.  ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕನ್ನಡ ಪಠ್ಯಗಳಲ್ಲಿ, 'ಅದಮ್ಯ ಚೇತನ' ಮತ್ತು ಕನ್ನಡ ಪರಿಮಳ ಕನ್ನಡ ವಾಚನಮಾಲೆಗಳಲ್ಲೂ ಅವರ ಕವನಗಳು ಸೇರ್ಪಡೆಗೊಂಡವು. ಪ್ರಸಾರ ಭಾರತಿಯಿಂದಲೂ ಅವರ ಕವನಗಳು ಮಾನ್ಯತೆ ಗಳಿಸಿದ್ದವು. ರಾಜ್ಯದ ಹಲವೆಡೆಗಳಲ್ಲಿ ಪಳಕಳರ ಬದುಕು ಬರಹಗಳ ಕುರಿತು ವಿಚಾರ ಸಂಕಿರಣಗಳು ನಡೆದಿದ್ದವು. ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಮಾಲಿಕೆಯಡಿ ಅವರ ಜೀವನ ಚರಿತ್ರೆಯ ಕೃತಿಯನ್ನು ಪ್ರಕಟಿಸಿತ್ತು. 2004ರಲ್ಲಿ ನಡೆದ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತೆಯ ಗೌರವ ಲಭಿಸಿದ್ದು ಎರಡು ದಶಕಗಳ ಕಾಲ ಸ್ಥಳೀಯ ಶಿಕ್ಷ ಸಂಸ್ಥೆಯ ಸಮಿತಿ ಅಧ್ಯಕ್ಷ ರಾಗಿ, ಭೂ ರಹಿತ 4 ಕುಟುಂಬಗಳಿಗೆ ತಲಾ 5ಸೆಂಟ್ಸ್ನಂತೆ ಜಾಗವನ್ನು ದಾನ ಮಾಡುವ ಉದಾರತೆಯನ್ನು ತೋರಿದ್ದರು. ನಿವೃತ್ತಿಯ ಬಳಿಕ ಬಂದ ಪಿಂಚಣಿ ಮೊತ್ತದಲ್ಲಿ ಪಳಕಳ ಪ್ರತಿಷ್ಠಾನವನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷ ಣಕ್ಕೆ ನೆರವು, ವೈದ್ಯಕೀಯ ಚಿಕಿತ್ಸೆಗೆ ನೆರವು, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಅವರ ಸಾಹಿತ್ಯ ಸೇವೆಗೆ ಮದ್ರಾಸ್ಸರಕಾರದಿಂದ ಮಕ್ಕಳ ಸಾಹಿತ್ಯ ಬಹುಮಾನ, .ಸಾ.. ಜಿ.ಪಿ ರಾಜರತ್ನಂ ದತ್ತಿ ಪುರಸ್ಕಾರ, ನವದೆಹಲಿಯ ಬಾಲ ಶಿಕ್ಷಾ ಪರಿಷತ್ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕೋ-- ಉಡುಪ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ..ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆಳ್ವಾಸ್ನುಡಿಸಿರಿ ಪ್ರಶಸ್ತಿ, .ಸಾ.. ವಾಸುದೇವ ಭೂಪಾಲಂ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದವು. ಯುಗಪುರುಷ, ನವಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ತು, ಶಿಕ್ಷ ಇಲಾಖೆ ಸಹಿತ ಅನೇಕ ಪ್ರಕಾಶನಗಳು ಅವರ ಕೃತಿಗಳನ್ನು ಪ್ರಕಟಿಸಿದ್ದವು.
 
2017: ನವದೆಹಲಿ/ ಅಬುಧಾಬಿವಿಶ್ವದ ಅತ್ಯಂತ ಭಾರದ ಮಹಿಳೆ ಎಂದೇ ಪ್ರಖ್ಯಾತಳಾಗಿದ್ದ ಈಜಿಪ್ತ್ ಎಮಾನ್ಅಹ್ಮದ್‌ (37) ಈದಿನ ಅಬುಧಾಬಿಯ ಬುರ್ಜೀಲ್ಆಸ್ಪತ್ರೆಯಲ್ಲಿ ನಿಧನರಾದರು. ಎಮಾನ್ ಮುಂಬೈನ ಆಸ್ಪತ್ರೆಯಲ್ಲಿ ಸುಮಾರು 242 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದರು. ವಿಶ್ವದ ಹೆಚ್ಚು ಸ್ಥೂಲಕಾಯದ ಮಹಿಳೆ ಎನಿಸಿದ ಎಮಾನ್ಶಸ್ತ್ರಚಿಕಿತ್ಸೆಗೆ ಒಳಪಡುವುದಕ್ಕೂ ಮುನ್ನ 504 ಕೆ.ಜಿ. ತೂಕವಿದ್ದರು. ಉತ್ತರ ಈಜಿಪ್ಟ್ ಅಲೆಕ್ಸಾಂಡ್ರಿಯಾದ ನಿವಾಸಿ ಎಮಾನ್ಅಹ್ಮದ್ ಅವರನ್ನು ಶಸ್ತ್ರಚಿಕಿತ್ಸೆಗಾಗಿ 2016 ಫೆ. 11ರಂದು ಮುಂಬೈಗೆ ಕರೆತರಲಾಗಿತ್ತು. ಬಳಿಕ, ಎಮಾನ್ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನಿಂದ ಅಬುಧಾಬಿಗೆ ಸ್ಥಳಾಂತರಿಸಲಾಗಿತ್ತು. ‘ಹೃದ್ರೋಗ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ ಎಮಾನ್ಅಹ್ಮದ್ ನಿಧನರಾಗಿದ್ದಾರೆಎಂದು ಅಬುಧಾಬಿಯ ಬುರ್ಜೀಲ್ಆಸ್ಪತ್ರೆ ವೈದ್ಯರು ಖಚಿತಪಡಿಸಿದರು. ಎಮಾನ್ಅಹಮ್ಮದ್ಅವರು ಕಳೆದ ವಾರವಷ್ಟೇ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

2017: ನವದೆಹಲಿ: ದೇಶದ ಪ್ರತಿ ಮನೆಗೆ ವಿದ್ಯುತ್ಸಂಪರ್ಕ ಕಲ್ಪಿಸುವಸೌಭಾಗ್ಯ(ಸಹಜ್ ಬಿಜ್ಲಿ ಹರ್ಘರ್‌)’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವರ್ಷದ ಡಿಸೆಂಬರ್ವೇಳೆಗೆ ಎಲ್ಲ ಗ್ರಾಮಗಳಿಗೂ ವಿದ್ಯುತ್ಸಂಪರ್ಕಿಸುವ ಯೋಜನೆ ಪೂರ್ಣಗೊಳ್ಳಲಿದ್ದು, ಮೂಲಕ ಎಲ್ಲ ಬಡ ಕುಟುಂಬದ ಮನೆಗಳಿಗೂ ಉಚಿತವಾಗಿ ವಿದ್ಯುತ್ಸಂಪರ್ಕಿಸಲು ಯೋಜಿಸಲಾಗಿದೆವಿದ್ಯುತ್ಸಂಪರ್ಕಿಸುವ ಕಾರ್ಯವನ್ನು ಎಲ್ಲ ರಾಜ್ಯಗಳಲ್ಲಿ 2019 ಮಾರ್ಚ್‌ 31 ವೇಳೆಗೆ ಪೂರ್ಣಗೊಳಿಸಬೇಕಾಗಿದೆ ಎಂದು ಸರ್ಕಾರ ತಿಳಿಸಿದೆ. ರೂ.16,320 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಗ್ರಾಮೀಣ ಭಾಗದಲ್ಲಿ ರೂ 14,025 ಹಾಗೂ ನಗರ ಪ್ರದೇಶಗಳಿಗೆ ರೂ2,295 ಕೋಟಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರವು ಯೋಜನೆಯ ಶೇ 60, ರಾಜ್ಯ ಸರ್ಕಾರಗಳು ಶೇ 10 ಹಾಗೂ ಸಾಲದ ಮೂಲಕ ಉಳಿದ ಮೊತ್ತ ಭರಿಸಲಾಗುತ್ತದೆ. ಸೌಭಾಗ್ಯ ಯೋಜನೆಗೂ ಚಾಲನೆಗೂ ಮುನ್ನ ಪ್ರಧಾನಿ ಒಎನ್ಜಿಸಿಯ ದೀನ್ದಯಾಳ್ಊರ್ಜಾ ಭವನ ಉದ್ಘಾಟಿಸಿದರು.

2017: ನವದೆಹಲಿ: ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ರಾಜೀವ್ಮಹರ್ಷಿ(62) ದೇಶದ ನೂತನ ಮಹಾಲೇಖಪಾಲರಾಗಿ (ಸಿಎಜಿ) ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ನೂತನ ಮಹಾಲೇಖಪಾಲರಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 2013 ಮೇ 23ರಂದು ಸಿಎಜಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಶಶಿಕಾಂತ್ಶರ್ಮಾ ಅವರ ಅಧಿಕಾರದ ಅವಧಿ ಸೆ.22ಕ್ಕೆ ಪೂರ್ಣಗೊಂಡಿತ್ತು. ಶಶಿಕಾಂತ್ಶರ್ಮಾ ಅವರಿಂದ ತೆರವಾದ ಸ್ಥಾನಕ್ಕೆ ರಾಜೀವ್ಮಹರ್ಷಿ ನೇಮಕಗೊಂಡಿದ್ದಾರೆ. ರಾಜಸ್ತಾನ ಕೇಡರ್ 1978ನೇ ಬ್ಯಾಚ್ಐಎಎಸ್‌ (ನಿವೃತ್ತ)ಅಧಿಕಾರಿಯಾಗಿರುವ ಮಹರ್ಷಿ, ಕೇಂದ್ರ ಗೃಹ ಖಾತೆ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಅವಧಿಯನ್ನು ಕಳೆದ ತಿಂಗಳು ಪೂರ್ತಿಗೊಳಿಸಿದ್ದರು. ಮುಂದಿನ ಮೂರು ವರ್ಷಗಳ ಅವಧಿಗೆ ಮಹರ್ಷಿ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಲಿದ್ದಾರೆ. ದೇಶದ ಸಿಎಜಿ ಆಗಿ ನೇಮಕಗೊಂಡವರು ಆರು ವರ್ಷ ಅವಧಿ ಅಥವಾ 65 ವರ್ಷ ವಯಸ್ಸು, ಎರಡರಲ್ಲಿ ಯಾವುದು ಮುಂಚಿವಾಗಿ ಅನ್ವಯವಾಗುತ್ತದೊ ಅವಧಿಯವರೆಗೂ ಕಾರ್ಯ ನಿರ್ವಹಿಸಬಹುದಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಖಾತೆಗಳ ಲೆಕ್ಕ ಪರಿಶೋಧನೆ ನಡೆಸುವುದು ಸಿಎಜಿ ಪ್ರಾಥಮಿಕ ಕಾರ್ಯವಾಗಿದೆ.


2017: ಮೈಸೂರು/ಚಾಮರಾಜನಗರ: ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು 2ನೇ ಬಾರಿಗೆ ಕುಟುಂಬ ಸಮೇತರಾಗಿ ಚಾಮುಂಡಿ ತಾಯಿಯ ದರ್ಶನ ಪಡೆದು, ದೇವಸ್ಥಾನಕ್ಕೆ 2 ಬೆಳ್ಳಿ ಆನೆಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಹರಕೆಯನ್ನು ತೀರಿಸಿದರು. ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಅವರು 31ಕೆಜಿ ತೂಕದ 2 ಬೆಳ್ಳಿ ಆನೆಗಳನ್ನು ಹರಕೆಯಾಗಿ ನೀಡಿದರು. ಹಿಂದಿನ ದಿನ ಡಿಕೆಶಿ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿ ಹರಕೆ ತೀರಿಸಿದ್ದರು. ಈದಿನ  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಡಿಕೆಶಿ ಅವರು ಸುದ್ದಿಗಾರರ ಜತೆ ಮಾತನಾಡಿ, ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ, ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ದೇವಿ ನೆರವೇರಿಸಿದ್ದಾಳೆ ಎಂದು ಹೇಳಿದರು.
2016: ಪಿಟ್ಸ್
ಬರ್ಗ್‌, ಅಮೆರಿಕ : ಅಮೆರಿಕದ ಗಾಲ್ಫ್ದಂತಕತೆ ಅರ್ನಾಲ್ಡ್ಪಾಮರ್‌ (87) ಅವರು
ನಿಧನರಾಗಿದರು. ಈ ವಿಷಯವನ್ನು ಅರ್ನಾಲ್ಡ್ಪಾಮರ್ಎಂಟರ್ಪ್ರೈಸಸ್ ಸಿಇಒ ಅಲಸ್ಟೇರ್ಜಾನ್ಸನ್ಖಚಿತಪಡಿಸಿದರು. ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದ ಪಾಲ್ಮರ್ಅವರು ಹೋದ ಚಿಕಿತ್ಸೆಗಾಗಿ ಪಿಟ್ಸ್ಬರ್ಗ್ ಯುಪಿಎಂಸಿ ಪ್ರೆಸ್ಬೈಟೇರಿಯನ್ಆಸ್ಪತ್ರೆಗೆ ದಾಖಲಾಗಿದ್ದರು.
ಪಾಮರ್ಅವರು  ಸಾರ್ವಕಾಲಿಕ ಶ್ರೇಷ್ಠ ಗಾಲ್ಫರ್ಎನಿಸಿದ್ದರು. ಅವರು ಏಳು ಪ್ರಮುಖ ಚಾಂಪಿಯನ್ಷಿಪ್ಗಳು ಹಾಗೂ  62 ಪಿಜಿಎ ಟೂರ್ಗಳಲ್ಲಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಹೊಂದಿದ್ದರು. ದಿ ಕಿಂಗ್‌’ ಎಂದೇ ಖ್ಯಾತಿ ಹೊಂದಿದ್ದ ಅವರು 1958, 1960, 1962 ಮತ್ತು 1964ರಲ್ಲಿ ಮಾಸ್ಟರ್ಸ್ಟೂರ್ನಿ, 1961 ಮತ್ತು 1962ರಲ್ಲಿ ಬ್ರಿಟಿಷ್ಓಪನ್ಹಾಗೂ 1960ರಲ್ಲಿ ಅಮೆರಿಕ ಓಪನ್ಗಾಲ್ಫ್ಚಾಂಪಿಯನ್ಷಿಪ್ಗಳಲ್ಲಿ ಪ್ರಶಸ್ತಿ ಜಯಿಸಿದ್ದರು. 1950 ದಶಕದಲ್ಲಿ ಗಾಲ್ಫ್ಕ್ರೀಡೆ ಮೊದಲ ಬಾರಿಗೆ ಟಿ.ವಿಯಲ್ಲಿ ಪ್ರಸಾರವಾಗಿತ್ತು. ಕಾಲದಲ್ಲಿ ಪಾಮರ್ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು. ‘ಅರ್ನಾಲ್ಡ್ಪಾಮರ್ಅವರು ಇಲ್ಲದೆ ಹೋಗಿದ್ದರೆ ಗಾಲ್ಫ್ಗೆ ಇಂದು ಮಟ್ಟಿಗಿನ ಜನಮನ್ನಣೆ ಸಿಗುತ್ತಿರಲಿಲ್ಲಎಂದು 2004ರಲ್ಲಿ  ಅಮೆರಿಕದ ಗಾಲ್ಫರ್ಟೈಗರ್ವುಡ್ಸ್ಹೇಳಿದ್ದರು.

2016: ಬೀಜಿಂಗ್‌ :  ಚೀನಾದಲ್ಲಿ ಸ್ಥಾಪಿಸಲಾದ ಜಗತ್ತಿನ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್
ಈದಿನ ಪರೀಕ್ಷಾರ್ಥ ಕಾರ್ಯಾರಂಭ ಮಾಡಿತು. ಐತಿಹಾಸಿಕ ಕ್ಷಣಕ್ಕೆ ನೂರಾರು ಮಂದಿ ಖಗೋಳವಿಜ್ಞಾನಿಗಳು ಹಾಗೂ ಖಗೋಳಾಸಕ್ತರು ಸಾಕ್ಷಿಯಾದರು. ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಸ್ವೀಕರಿಸಿತು. ದೂರದರ್ಶಕವು ಸದ್ಯ ಪರೀಕ್ಷಾ ಹಂತದಲ್ಲಿದ್ದು, ಮೂರು ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ. 4.5 ಕೋಟಿ ವರ್ಷಗಳ ಹಿಂದೆ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಇದ್ದ ಗುಹೆಯೊಂದು ಕುಸಿದುಬಿದ್ದು ಉಂಟಾಗಿರುವ ಬೃಹದಾಕಾರದ ಗುಳಿಯಲ್ಲಿ ಟೆಲಿಸ್ಕೋಪ್ ನಿರ್ಮಿಸಲಾಗಿದೆ. 1200 ಕೋಟಿ ರೂಪಾಯಿ ವೆಚ್ಚದ ಟೆಲಿಸ್ಕೋಪ್ ತಟ್ಟೆ 30 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆಒಟ್ಟು 4,450 ಫಲಕಗಳನ್ನು ಜೋಡಿಸಲಾಗಿದ್ದುಪ್ರತಿ ಫಲಕವೂ ತ್ರಿಕೋನಾಕೃತಿಯಲ್ಲಿ 11 ಮೀಟರ್ ಉದ್ದವಿದೆ. ಸುಮಾರು 20 ವರ್ಷಗಳ ನಿರಂತರ ಶೋಧನೆಯ ನಂತರ ಟೆಲಿಸ್ಕೋಪ್ಸ್ಥಾಪನೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು.  ಸ್ಥಳದ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ  ಜನವಸತಿ  ಪ್ರದೇಶಗಳಿಲ್ಲ ವ್ಯಾಪ್ತಿಯಲ್ಲಿ ಬೇರೆ ಯಾವ ರೀತಿಯ ರೇಡಿಯೊ ತರಂಗಗಳು ಕೆಲಸ ಮಾಡುವುದಿಲ್ಲ. ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್ಗಳು ಪತ್ತೆ   ಮಾಡದ  ಆಕಾಶಕಾಯಗಳನ್ನು ಇದು ಪತ್ತೆ ಮಾಡಲಿದೆ. ಇದಕ್ಕಿಂತ ಹೆಚ್ಚಾಗಿ ಇತರ ಆಕಾಶಕಾಯ, ಜನವಸತಿ ಪ್ರದೇಶಗಳಿಂದ ಹೊರಹೊಮ್ಮುವ ಸೂಕ್ಷಾತೀಸೂಕ್ಷ್ಮ ತರಂಗಗಳನ್ನು ಟೆಲಿಸ್ಕೋಪ್‌  ಗ್ರಹಿಸುವ ಸಾಮರ್ಥ್ಯ ಹೊಂದಿದೆ.

2016: ಕಾನ್ಪುರ: ಭಾರತದ ಭರವಸೆಯ ಸ್ಪಿನ್ನರ್ ಆರ್. ಅಶ್ವಿನ್ ನೂತನ ಮೈಲಿಗಲ್ಲು ಸ್ಥಾಪಿಸಿದರು. ಕಿವೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸುವ ಮೂಲಕ ವೇಗವಾಗಿ 200 ವಿಕೆಟ್ ಪಡೆದ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಜೊತೆಗೇ ವಿಶ್ವದಲ್ಲಿ ಎರಡನೇ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದರುಎರಡನೇ ಇನಿಂಗ್ಸ್ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 159ರನ್ಗಳಿಸಿ ಹಿಂದಿನ ದಿನ ಆಟ ಅಂತ್ಯಗೊಳಿಸಿದ್ದ ಟೀಂ ಇಂಡಿಯಾ, ಈದಿನ ಫೂಜಾರ (78), ರೋಹಿತ್ ಶರ್ಮ (58*) ಹಾಗೂ ಆರ್. ಜಡೇಯ (50*) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ರನ್ ಮಳೆ ಹರಿಸಿತು. 5 ವಿಕೆಟ್ ನಷ್ಟಕ್ಕೆ 377ರನ್ಗಳಿದ ಭಾರತ ಡಿಕ್ಲೇರ್ ಘೋಷಿಸಿತು. ಮೂಲಕ ಭಾರತ 437 ರನ್ಗಳ ಬೃಹತ್ ಸವಾಲು ನೀಡಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ಗೆ ಅಶ್ವಿನ್ ಆಘಾತ ನೀಡಿದರು. ಮೊದಲ ಮೂರು ವಿಕೆಟ್ ಕಬಳಿಸುವ ಮೂಲಕ 200 ವಿಕೆಟ್ ಸಂಪಾದಿಸಿದ ಗೌರವಕ್ಕೆ ಪಾತ್ರರಾದರು. ದಿನದ ಮೂರನೇ ಸೆಷನ್ನಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 93 ರನ್ಗಳಿಸಿ, ಆಟ ಮುಂದುವರೆಸಿತು.  ಆರ್. ಅಶ್ವಿನ್ 37 ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಸಂಪಾದಿಸಿದರೆ, ಆಸ್ಟ್ರೇಲಿಯಾದ ಕ್ಲಾರ್ಯå ಗೆಮ್ಮೆಟ್ 36 ಟೆಸ್ಟ್ನಲ್ಲಿ ಸಾಧನೆ ಮಾಡಿದ್ದರು. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೆನ್ನಿಸ್ ಲೆಲ್ಲಿ (38 ಟೆಸ್ಟ್) ಹಾಗೂ ಪಾಕಿಸ್ತಾನದ ವಕಾರ್ ಯೂನಿಸ್ (38 ಟೆಸ್ಟ್) ಜಂಟಿಯಾಗಿ ಹಂಚಿಕೊಂಡಿದ್ದರು.

2016: ನವದೆಹಲಿ: ಸೇನೆ ಮಾತನಾಡುವುದಿಲ್ಲ, ತನ್ನ ಶೌರ್ಯವನ್ನು ತನ್ನ ಕೃತಿಯ ಮೂಲಕ ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮ್ಮಮನ್ ಕಿ ಬಾತ್ಬಾನುಲಿ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ವಿಭಾಗದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪ್ರಸ್ತಾಪಿಸುತ್ತಾ ಸೂಚ್ಯವಾಗಿ ಮಾತು ಹೇಳಿದರು. ರಾಜಕಾರಣಿಗಳು ಮಾತನಾಡುತ್ತಾರೆ, ಆದರೆ ಸೈನಿಕರು ಅತ್ಯುನ್ನತ ಧೈರ್ಯವನ್ನು ಪ್ರದರ್ಶಿಸುವ ಮೂಲಕ ದೇಶ ರಕ್ಷಣೆ ಮಾಡುತ್ತಾರೆ, ನಮ್ಮ ಸೇನೆಯ ಮೇಲೆ ನಮಗೆ ಹೆಮ್ಮೆ ಇದೆ. ಉರಿ ಸೇನಾ ನೆಲೆ ಮೇಲೆ ದಾಳಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಅವರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು. ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ಕುರಿತು ದೇಶದಾದ್ಯಂತ ಜನರಲ್ಲಿ ಸಾಕಷ್ಟು ಆಕ್ರೋಶವಿದೆ. ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ಉರಿ ದಾಳಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಯಾಗುತ್ತಿದ್ದು, ಶೀಘ್ರ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ. ಕಣಿವೆ ರಾಜ್ಯದಲ್ಲಿ ಮತ್ತೆ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಮೋದಿ ತಿಳಿಸಿದರು. ಸ್ವಚ್ಛಭಾರತ ಕಾರ್ಯಕ್ರಮ ಸೇರಿದಂತೆ ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಬಗೆಗೂ ಮಾತನಾಡಿದ ಅವರು ದಿವ್ಯಾಂಗರು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟದ್ದನ್ನು ಸ್ಮರಿಸಿ ಅವರನ್ನು ಶ್ಲಾಘಿಸಿದರು.

2016: ನವದೆಹಲಿ: ಭಾರತದ ಯಶಸ್ವಿ ಕ್ರಿಕೆಟ್ ನಾಯಕ ಎಂ.ಎಸ್. ಧೋನಿ ಬಯೋಪಿಕ್ ತೆರೆಯಮೇಲೆ ಬರಲು ಸರ್ವಸನ್ನದ್ಧವಾಗಿದ್ದು, ಈ ಚಿತ್ರವನ್ನು ಜಾರ್ಖಂಡ್ ಜನತೆಗೆ ತೆರಿಗೆ ರಹಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿತು. ಜಾರ್ಖಂಡ್ನಂತಹ ಪುಟ್ಟ ರಾಜ್ಯದಲ್ಲಿ ಹುಟ್ಟಿ ಬೆಳೆದ ಮಹಿ ಇಂದು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ ತನ್ನರಾಜ್ಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮಹಾನ್ ನಾಯಕನ ಚಿತ್ರವನ್ನು ಜಾರ್ಖಂಡ್ ಜನತೆ ತೆರಿಗೆ ರಹಿತವಾಗಿ ವೀಕ್ಷಿಸಲು ಅಲ್ಲಿನ ಸರ್ಕಾರ ಅನುಮತಿ ನೀಡಿತು. 2007 ಟಿ20, 2011 ಏಕದಿನ ವಿಶ್ವಕಪ್ ಪ್ರಶಸ್ತಿ ಜಯಿಸಿದ ಕೀರ್ತಿ ಧೋನಿಯದ್ದು. ಧೋನಿ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರತಿ ಹಂತದಲ್ಲೂ ಸ್ವ ಪ್ರಯತ್ನದಿಂದಲೇ ಧೋನಿ ಮೇಲೇೆರಿದವರು. ಮಾದರಿ ನಾಯಕನ ಕಹಾನಿ ಇದೀಗ ಸುಶಾಂತ್ ಸಿಂಗ್ ಅಭಿನಯದಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿಚಿತ್ರ ಸೆ.30ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ. 60 ದೇಶದಲ್ಲಿ, ಒಟ್ಟು 4500 ಪರದೆಗಳ ಮೇಲೆ ಪ್ರದರ್ಶನ ಕಾಣುತ್ತಿರುವುದು ಮತ್ತೊಂದು ವಿಶೇಷ. ಚಿತ್ರದ ಕುರಿತು ನಿರ್ವಪಕ, ಫಾಕ್ಸ್ ಸ್ಟಾರ್ ಸ್ಟುಡಿಯೋ ಸಿಇಒ ಅಜಯ್ ಸಿಂಗ್ ಮಾತನಾಡಿ, ಜಾರ್ಖಂಡ್ ಸರ್ಕಾರ ತೆರಿಗೆ ರಹಿತ ಚಿತ್ರ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಧೋನಿಗೆ ಗೌರವ ಸೂಚಿಸಿದೆ ಎಂದು ತಿಳಿಸಿದರು.

2016: ಕೋಯಿಕ್ಕೋಡ್ (ಕೇರಳ): ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಂದಿನ ರಾಷ್ಟ್ರೀಯ ಕಾರ್ಯಕಾರಣಿ ಸಭೆಯು 2017 ಜನವರಿ 7 ಮತ್ತು 8ರಂದು ದೆಹಲಿಯಲ್ಲಿ ನಡೆಯಲಿದೆ. ಕೇರಳದ ಕೋಯಿಕ್ಕೋಡ್ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಇದೇ ವೇಳೆಯಲ್ಲಿ ಜನಸಂಘದ ಹಿರಿಯ ನಾಯಕ ದಿವಂಗತ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಉಪಾಧ್ಯಾಯರ ಪುತ್ಥಳಿ ಅನಾವರಣ ಮಾಡಿದರು.
2016: ಅಹಮದಾಬಾದ್: ಜಮ್ಮು ಮತ್ತು ಕಾಶ್ಮೀರದ ಉರಿ ವಿಭಾಗದಲ್ಲಿ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳಿಗೆ ತಮ್ಮ ವೇತನ ಹಾಗೂ ಪಾಕೆಟ್ ಮನಿ ನೀಡಲು ಇಂಗ್ಲೆಂಡ್ ನಿವಾಸಿ ನಿತಿ ರಾವ್ ತೀರ್ಮಾನಿಸಿದರು. ಉರಿ ಹುತಾತ್ಮರ ಮಕ್ಕಳಿಗೆ ಪ್ರತಿವರ್ಷವೂ 25,000 ರೂಪಾಯಿಗಳನ್ನು ಕಳುಹಿಸಿಕೊಡುವುದಾಗಿ ಅವರು ಹೇಳಿದರು. ಲಂಡನ್ಗೆ ಬಂದಲ್ಲಿ ಅಂತಹ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೂ ನೆರವಾಗುವುದಾಗಿ ಅವರು ಪ್ರಕಟಿಸಿದರು. ಲಂಡನ್ ಪ್ರತಿಷ್ಠಾನವೊಂದು ನನಗೆ 5 ಲಕ್ಷ ರೂಪಾಯಿಗಳ ಬಹುಮಾನ ಕೊಡುವುದಾಗಿ ಹೇಳಿದೆ. ಹಣವನ್ನು ಕೂಡಾ ಉರಿ ಭಯೋತ್ಪಾದಕ ದಾಳಿಯ ಹುತಾತ್ಮರ ಮಕ್ಕಳಿಗೆ ಅರ್ಪಿಸುವೆ ಎಂದು ನಿತಿ ರಾವ್ ನುಡಿದರು. ಉರಿ ಭಯೋತ್ಪಾದಕ ದಾಳಿಯಲ್ಲಿ 18 ಮಂದಿ ಸೈನಿಕರು ಹುತಾತ್ಮರಾಗಿದ್ದು ಹಲವರು ಗಾಯಗೊಂಡಿದ್ರು.

 2016: ಬೆಂಗಳೂರು: ಕಾವೇರಿ ಜಲ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸಲು ಮಧ್ಯಪ್ರವೇಶ ಮಾಡಿ ಸಹಕರಿಸುವಂತೆ ಬೆಂಗಳೂರಿನ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದರು. ಬೆಂಗಳೂರಿನ ಹೆಬ್ಬಾಳ ಕೆಂಪಾಪುರದ ಸುಮಾ ಪಬ್ಲಿಕ್ ಹೈಸ್ಕೂಲ್ ವಿದ್ಯಾರ್ಥಿಗಳು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದರು. ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋರಿ ಹೈಸ್ಕೂಲ್ ಮಕ್ಕಳು ಪ್ರದರ್ಶನವನ್ನೂ ನಡೆಸಿದರು. ಪ್ರತಿಭಟನೆಗಳ ವೇಳೆ ಪ್ರಾಣಗಳು ಕಳೆದುಹೋಗಿವೆ. ಹಲವರು ಗಾಯಗೊಂಡಿದ್ದಾರೆ. ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸಬೇಕು, ಹಿಂಸೆಯಿಂದಲ್ಲಎಂದು ಹೈಸ್ಕೂಲ್ ವಿದ್ಯಾರ್ಥಿನಿಯರು ಹೇಳಿದರು.

2016: ರಾಯಗಢ: ಸೇನಾ ಸಮವಸ್ತದಂತೆ ಕಾಣುತ್ತಿದ್ದ ಬಟ್ಟೆ ತೊಟ್ಟಿದ್ದ ಮೂವರು ಟ್ರಕ್ ಚಾಲಕರನ್ನು ಉಗ್ರರು ಎಂದು ಭಾವಿಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಘಟನೆ ಮಹಾರಾಷ್ಟ್ರದ ರಾಯಗಢದ ಸಮೀಪ ಘಟಿಸಿತು. ಇದರಿಂದಾಗಿ ಪ್ರದೇಶದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಂಬೈಯಲ್ಲಿ ಇತ್ತೀಚೆಗೆ ಕೆಲವು ಶಂಕಿತ ವ್ಯಕ್ತಿಗಳು ಶಸ್ತ್ರಾಸ್ತ್ರಗಳೊಂದಿಗೆ ಕಾಣಿಸಿಕೊಂಡ ನಂತರ ಮಹಾರಾಷ್ಟ್ರದಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೇಂದ್ರ ಕೈಗಾರಿಕಾ ಪಡೆಯ ಯೋಧರಿದ್ದ ಬಸ್ ಗವಹಾನ್ಪಟ್ಟ ಸಮೀಪ ಚಲಿಸುತ್ತಿದ್ದಾಗ ಯೋಧರು ಮೂವರು ಶಂಕಿತರನ್ನು ಗಮನಿಸಿದರು. ಇವರು ಸೇನಾ ಸಮವಸ್ತ್ರದಂತಿದ್ದ ಬಟ್ಟೆ ಧರಿಸಿ ಟ್ರಕ್ ಒಂದರ ಸಮೀಪ ನಿಂತಿದ್ದರು. ಇವರ ಮೇಲೆ ಅನುಮಾನಗೊಂಡ ಯೋಧರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಶಂಕಿತರು ತಾವು ಕಾಶ್ಮೀರ ಮೂಲದವರು ಮುನ್ನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ಖಾಸಗಿ ಟ್ರಕ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸರಕನ್ನು ಟ್ರಕ್ನಲ್ಲಿ ಹೊತ್ತೊಯ್ಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಕೂಡಲೇ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ವಿಷಯ ಮನವರಿಕೆ ಮಾಡಿಕೊಟ್ಟರು. ನಂತರ ಪೊಲೀಸರು ಶಂಕಿತರನ್ನು ಬಿಟ್ಟು ಕಳುಹಿಸಿದರು.

2016: ಲಾಸ್ ಏಂಜಲಿಸ್: ಅಮೆರಿಕದ ಪ್ರಸಿದ್ಧ ಟಿವಿ ಕಾರ್ಯಕ್ರಮದಿ ಎಲನ್ ಡಿಜೆನೆರಸ್ ಶೋದಲ್ಲಿ ಕೇರಳದ ಪ್ರಸಿದ್ಧ ಸಾಂಪ್ರದಾಯಿಕ ಆಹಾರಪುಟ್ಟುತಯಾರಿಸುವ ಮೂಲಕ 6 ವರ್ಷದ ಪುಟಾಣಿ ಚೆಫ್ ಕಿಚ್ಚ ಅಮೆರಿಕನ್ನರ ಮನಗೆದ್ದ. ಈತ ಕೇರಳದ ಕೊಚ್ಚಿಯ 6 ವರ್ಷದ ಬಾಲಕ ನಿಹಾಲ್ ರಾಜ್ ಅಥವಾ ಕಿಚ್ಚ. ಅಡುಗೆ ಮಾಡುವುದರಲ್ಲಿ ಈತ ನಿಸ್ಸೀಮ. ಅದರಲ್ಲೂ ಕೇರಳದ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸುವುದರಲ್ಲಿ ಪರಿಣಿತಿ ಪಡೆಯುತ್ತಿದ್ದಾನೆ. ಈತ ಟಿವಿ ಶೋದಲ್ಲಿಪುಟ್ಟುತಯಾರಿಸುವ ಮೂಲಕ ಈತ ಅಮೆರಿಕದಲ್ಲಿ ಮನೆ ಮಾತಾಗಿದ್ದಾನೆ. ಎಪಿಸೋಡ್ ವಿಡಿಯೋ ಫೇಸ್ಬುಕ್ನಲ್ಲಿ ಮತ್ತು ಯೂ ಟ್ಯೂಬ್ನಲ್ಲಿ ಸಾಕಷ್ಟು ಜನಪ್ರಿಯ. ಈತನ ಸಾಮರ್ಥ್ಯವನ್ನು ಗುರುತಿಸಿದ ಫೇಸ್ಬುಕ್ 2 ಸಾವಿರ ಡಾಲರ್ ನೀಡಿ ಈತ ಐಸ್ಕ್ರೀಸ್ ತಯಾರಿಸುವ ಕುರಿತು ತಿಳಿಸಿಕೊಡುವ ವಿಡಿಯೋ ಒಂದನ್ನು ಖರೀದಿಸಿತ್ತು. ಜತೆಗೆ ಈತ 2 ವರ್ಷದ ಹಿಂದೆಯೇ ಯೂಟ್ಯೂಬ್ನಲ್ಲಿ KichaTube HD channel ಎಂಬ ವಿಡಿಯೋ ಶೇರಿಂಗ್ ಖಾತೆ ಹೊಂದಿದ್ದು, ಅಡುಗೆ ತಯಾರಿಸುವ 33 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. ವಿಡಿಯೋಗಳು ಈಗ ಬಲು ಜನಪ್ರಿಯ.

2008: ಕರ್ನಾಟಕ ಕಾಂಗ್ರೆಸ್ಸಿನೊಳಗಿನ `ಮೂಲನಿವಾಸಿಗಳು' ಮತ್ತು `ವಲಸೆಕೋರರ' ನಡುವಿನ ಶೀತಲ ಸಮರದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಬಿದ್ದರು. ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನೇಮಿಸಿದರು. ಹೊಸದಾಗಿ ಸೃಷ್ಟಿಸಲಾದ ಕಾಯರ್ಾಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಒಲಿಯಿತು.. ಇದರೊಂದಿಗೆ ಮೂರು ತಿಂಗಳ ಕಾಲ ನಡೆದ ಕೆಪಿಸಿಸಿ ಅಧ್ಯಕ್ಷರ ನೇಮಕದ ಕಸರತ್ತು ಕೊನೆಗೂ ಅಂತ್ಯ ಕಂಡಿತು.. ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಹೊಸದಾಗಿ ಹುಟ್ಟಿಕೊಂಡ ಮೂಲನಿವಾಸಿಗಳು ಮತ್ತು ವಲಸೆಕೋರರ ನಡುವಿನ ಸಂಘರ್ಷದಿಂದಾಗಿ ಯಾವ ಹೆಸರನ್ನೂ ಅಂತಿಮಗೊಳಿಸಲು ಪಕ್ಷದ ಹೈಕಮಾಂಡಿಗೆ ಸಾಧ್ಯವಾಗಿರಲಿಲ್ಲ.

2008: ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಸಾಬರಮತಿ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಪ್ರಸಂಗ ಪೂರ್ವಯೋಜಿತ ಕೃತ್ಯವೇ ಹೊರತು ಅದು ಆಕಸ್ಮಿಕ ದುರಂತ ಅಲ್ಲ ಎಂದು ನಾನಾವತಿ ಆಯೋಗ ಹೇಳಿತು. ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಆಯೋಗದ ಪ್ರಥಮ ವರದಿಯಲ್ಲಿ ಈ ವಿಷಯ ತಿಳಿಸಲಾಯಿತು. ಈ ಮೂಲಕ ನರೇಂದ್ರ ಮೋದಿ ಸರ್ಕಾರ ಆಯೋಗದಿಂದ ಕಳಂಕ ರಹಿತ ಪ್ರಮಾಣ  ಪತ್ರ  ಪಡೆದಂತಾಯಿತು. ಆದರೆ, ರೈಲ್ವೆ ಸಚಿವ ಲಾಲು ಪ್ರಸಾದ್ ನಾಲ್ಕು ವರ್ಷಗಳ ಹಿಂದೆ ರಚಿಸಿದ್ದ ನ್ಯಾಯಮೂರ್ತಿ ಯು. ಸಿ. ಬ್ಯಾನರ್ಜಿ ಸಮಿತಿ ನೀಡಿದ ವರದಿಗೆ ಈ ವರದಿ ತೀರಾ ತದ್ವಿರುದ್ಧ ಆಗಿರುವುದು ಅಚ್ಚರಿ ಮೂಡಿಸಿತು. ಗೋಧ್ರಾ ಘಟನೆ ಆಕಸ್ಮಿಕ ಮತ್ತು ಇದೊಂದು ಯೋಜಿತ ಕೃತ್ಯ ಎಂಬುದನ್ನು ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಯೂ ಇಲ್ಲ ಎಂದು ಬ್ಯಾನರ್ಜಿ ವರದಿ ತಿಳಿಸಿತ್ತು. ರೈಲಿನ ಬೋಗಿ  ಸುಡುವ ಪಿತೂರಿಯ ಸಲುವಾಗಿಯೇ 140 ಲೀಟರ್ ಪೆಟ್ರೋಲ್ ಖರೀದಿಸಲಾಗಿತ್ತು. ಗೋಧ್ರಾದ ಅಮಾನ್ ಅತಿಥಿಗೃಹದಲ್ಲಿ ಪಿತೂರಿ  ರೂಪಿಸಲಾಯಿತು.  ಈ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಿಸುವುದೇ ಮುಖ್ಯ ಉದ್ದೇಶವಾಗಿತ್ತು ಎಂದು ನಾನಾವತಿ ವರದಿ ಹೇಳಿದೆ. ಮೋದಿ ಸರ್ಕಾರ ನ್ಯಾಯಮೂರ್ತಿ (ನಿವೃತ್ತ) ಜಿ. ಟಿ. ನಾನಾವತಿ ನೇತೃತ್ವದ ಸಮಿತಿಯನ್ನು 2002ರ ಮಾರ್ಚ್ ತಿಂಗಳಲ್ಲಿ ರಚಿಸಿತ್ತು.

2007: ಜನತಾದಳ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಸಾಯಿಸಲು ಯತ್ನಿಸಿದ್ದಾರೆ, ಪೊಲೀಸರೂ ಅವರೊಂದಿಗೆ ಕೈ ಜೋಡಿಸಿದ್ದಾರೆ, ಇದರಲ್ಲಿ ಮುಖ್ಯಮಂತ್ರಿಯವರ ಕೈವಾಡವಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಆರೋಪಿಸಿದರು.  ಬಳ್ಳಾರಿಯ ವಿದ್ಯಾನಗರದಲ್ಲಿ ಮಧ್ಯರಾತ್ರಿ ಶಾಸಕ ಜನಾರ್ದನ ರೆಡ್ಡಿಯವರ ಸಂಬಂಧಿಕರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶ್ರೀರಾಮುಲು ಪೊಲೀಸರ ಮೇಲೆ ಕಿಡಿ ಕಾರಿ, `ನನ್ನ ಸಾವಿಗೆ ಜೆಡಿಎಸ್ ಸಂಚು ರೂಪಿಸಿದೆ' ಎಂದು ಹೇಳಿದರು.

2007: ದೇವೇಗೌಡ ಮತ್ತು ಅವರ ಕುಟುಂಬದವರು 10 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ತೀವ್ರ ಆರೋಪ ಮಾಡಿದ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು. ಇದರಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿಯ ದಾಖಲೆ ಇದೆ ಎಂದು ಅವರು ಹೇಳಿದರು.  ಸತ್ಯಶೋಧ ಮಾಡಲು ವಿಧಾನಸೌಧದ ಮುಂದೆ ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬ ವರ್ಗದವರಿಗೆ ಖೇಣಿ ಬಹಿರಂಗ ಸವಲು ಹಾಕಿದರು.

2007:  ಒರಿಸ್ಸಾ ರಾಜ್ಯ ಮಟ್ಟದ ಸಣ್ಣ ವ್ಯಾಪಾರಸ್ಥರ ಒಕ್ಕೂಟದ ಸದಸ್ಯರು ಭುವನೇಶ್ವರದ ಲೆವಿಸ್ ರಸ್ತೆ ಮತ್ತು ಗೊಪಬಂಧು ವೃತ್ತದಲ್ಲಿನ ಎರಡು `ರಿಲಯನ್ಸ್ ಫ್ರೆಶ್' ಹಣ್ಣು, ತರಕಾರಿ ಚಿಲ್ಲರೆ ಮಾರಾಟ ಮಳಿಗೆಗೆ ದಾಳಿ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಂಗಡಿಗಳನ್ನು ತೆರೆಯದಂತೆ ರಿಲಯನ್ಸ್ ಕಂಪೆನಿಗೆ ಆದೇಶ ನೀಡಲಾಯಿತು. ಈ ನಗರದಲ್ಲಿ ಸುಮಾರು 11 ರಿಲಯನ್ಸ್ ಫ್ರೆಶ್ ಮಳಿಗೆಗಳು ಆರಂಭವಾಗಿವೆ. ಇಡೀ ರಾಜ್ಯದಲ್ಲಿ 235 ಮಳಿಗೆಗಳನ್ನು ತೆರೆಯಲು ರಿಲಯನ್ಸ್ ತಯಾರಿ ನಡೆಸಿತ್ತು. ಸಣ್ಣ ವ್ಯಾಪಾರಿ ಒಕ್ಕೂಟದವರ ವಿರೋಧವಿದ್ದದ್ದರಿಂದ ಅದು ಸಾಧ್ಯವಾಗಲಿಲ್ಲ. ಅಂದಾಜು 7 ಲಕ್ಷ ಸಣ್ಣ ವ್ಯಾಪಾರಸ್ಥರ ಜೀವನಕ್ಕೆ ಅಡ್ಡವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರಿಲಯನ್ಸ್ ಫ್ರೆಶ್ ಮಳಿಗೆಗಳನ್ನು ಮುಚ್ಚಿಸಲು `ನಿಖಿಲ್ ಒರಿಸ್ಸಾ ಉಥಾ ದೊಕನಿ ಮತ್ತು ಖ್ಯುದ್ರಾ ವೈವಶ್ಯಿ ಮಹಾಸಂಘ'ಗಳು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಕೈಹಾಕಿದವು.

 2007: ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷೇರುಪೇಟೆ  ಸೂಚ್ಯಂಕ ಏರಿದ ಪರಿಣಾಮ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಸಮೂಹದ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿ 2,04,945 ಕೋಟಿ ರೂಪಾಯಿಗೆ ತಲುಪಿತು. ಮುಖೇಶ್ ಅಂಬಾನಿ ತಮ್ಮ ಅನಿಲ್ ಅಂಬಾನಿ ಎರಡನೇ ಸ್ಥಾನಕ್ಕೆ (1,77,710 ಕೋಟಿ ರೂ), ಡಿಎಲ್ ಎಫ್ ರಿಯಲ್ ಎಸ್ಟೇಟ್ ಸಮೂಹದ ಮಾಲೀಕ ಕೆ.ಪಿ. ಸಿಂಗ್ ಮೂರನೇ ಸ್ಥಾನಕ್ಕೆ (1,15,225 ಕೋಟಿ ರೂ) ಬಂದರು. ಒಂದು ಕಾಲದಲ್ಲಿ ಅತಿ ಶ್ರೀಮಂತ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಂಜಿ ಅವರ ಆಸ್ತಿ ಮೌಲ್ಯ 50,600 ಕೋಟಿಗೆ (5ನೇ ಸ್ಥಾನ)ಇಳಿಯಿತು, ಏರ್ ಟೆಲ್ ನ ಭಾರತಿ ಮಿತ್ತಲ್ 91,500 ಕೋಟಿ ರೂಗೆ (4ನೇ ಸ್ಥಾನ) ಏರಿತು.

2007: ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಜನಾ ಕೃಷ್ಣಮೂರ್ತಿ (79) ಅವರು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1928ರಲ್ಲಿ ಮದುರೈಯಲ್ಲಿ ಜನಿಸಿದ ಕೃಷ್ಣಮೂರ್ತಿ 2001-2002 ರ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 2003ರಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಆರೆಸ್ಸೆಸ್ ಪ್ರಚಾರಕ, ಜನಸಂಘ ಕಾರ್ಯದರ್ಶಿಯಾಗಿದ್ದ ಅವರು ತಮಿಳುನಾಡಿನಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷತೆಗೆ ಏರಿದ ಮೊಟ್ಟ ಮೊದಲ ಮುಖಂಡ. ಪ್ರಸ್ತುತ ರಾಜ್ಯಸಭೆಯಲ್ಲಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು.

2007:  ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಅವರ ಸಚಿವ ಸಂಪುಟ ರಾಜೀನಾಮೆ ಸಲ್ಲಿಸಿದ್ದು ಈ ಮೂಲಕ ಅವರ ಉತ್ತರಾಧಿಕಾರಿಯಾಗಿ ಸಂಸತ್ ಹೆಸರಿಸಿರುವ ಆಡಳಿತ ಪಕ್ಷದ ಹೊಸ ನಾಯಕ ಯಸುವೋ ಫಕುಡ ಅವರು ಅಧಿಕಾರ ವಹಿಸಿಕೊಳ್ಳಲು ಮಾರ್ಗ ಸುಗಮಗೊಂಡಿತು. 53 ವರ್ಷದ ಅಬೆ ಅವರು ಸೆ. 12ರಂದು ದಿಢೀರ್ ಅಧಿಕಾರ ತ್ಯಜಿಸುವ ನಿರ್ಧಾರ ಪ್ರಕಟಿಸಿ, ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದರು.

2007: ರಿಪ್ಪನ್ಪೇಟೆ ಸಮೀಪದ ಹರತಾಳು ಶ್ರೀ ರಾಮಾಶ್ರಮದ ಸಂಸ್ಥಾಪಕರು ಹಾಗೂ ಶ್ರೀ ಗುರು ರಾಘವೇಂದ್ರರ ಆರಾಧಕರಾಗಿದ್ದ ವಿದ್ಯಾಮಿತ್ರ ತೀರ್ಥ ಸ್ವಾಮೀಜಿ (80) ಈದಿನ ಬೆಳಗ್ಗೆ ನಿಧನರಾದರು. ಶ್ರೀಶನದಾಸ ಎಂಬುದು ಅವರ ಪೂರ್ವಾಶ್ರಮದ ಹೆಸರು.

2007: ಸ್ವಸಹಾಯ ಗುಂಪುಗಳಿಗೆ (ಎಸ್ ಎಚ್ ಜಿ) 2006-07ನೇ ಸಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾಲ ಸಹಾಯ ನೀಡಿದ ಹಣಕಾಸು ಸಂಸ್ಥೆಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಮೊದಲ ಸ್ಥಾನ ಗಳಿಸಿತು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಥಾಪಿಸಿರುವ ಈ ವಾರ್ಷಿಕ ಪ್ರಶಸ್ತಿಯನ್ನು ಈದಿನ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ವಾಣಿಜ್ಯ ಬ್ಯಾಂಕ್ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಮತ್ತು ಸಿಂಡಿಕೇಟ್ ಬ್ಯಾಂಕ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವು.

2006: ಬಿಹಾರಿನ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಇಲಾಖೆಯ ಮಾಜಿ ಅಧಿಕಾರಿ ಹೇಮೇಂದ್ರ ನಾಥ ವರ್ಮ ಸೇರಿದಂತೆ ಎಂಟು ಮಂದಿ ಆಪಾದಿರತನ್ನು ವಿಶೇಷ ಸಿಬಿಐ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ್ದು, ವಿನೋದ ಕುಮಾರ್ ಝಾ ಅವರನ್ನು ಖುಲಾಸೆ ಮಾಡಿತು. ಅವಿಭಜಿತ ಬಿಹಾರಿನ ದುಮ್ಕಾ ಬೊಕ್ಕಸದಿಂದ 49 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಸರ್ಕಾರಿ ಹಣವನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಸಂಜಯ ಪ್ರಸಾದ್ ಅವರು ಈ ತೀರ್ಪು ನೀಡಿದರು. ಸೆಪ್ಟೆಂಬರ್ 23ರಂದು ನ್ಯಾಯಾಲಯವು ಪಶು ಸಂಗೋಪನಾ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಸೇರಿದಂತೆ 28 ಮಂದಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿತ್ತು. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರಿನ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಅವರೂ ಹಗರಣದಲ್ಲಿ ಆರೋಪಿಗಳು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನ ಸಹಚರರಾದ ಮೊಹಮ್ಮದ್ ಇಕ್ಬಾಲ್ ಮೊಹಮ್ಮದ್ ಯೂಸುಫ್ ಖಾನ್ ಮತ್ತು ನಸೀಂ ಬರ್ಮರೆ ತಪ್ಪಿತಸ್ಥರು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಭಯೋತ್ಪಾದಕ ಕೃತ್ಯ ಎಸಗಿದ ಮತ್ತು ಸಂಚಿನಲ್ಲಿ ಭಾಗಿಯಾದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

2006: ಅಂತಾರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನ ಮಂಡಲದ ಐತಿಹಾಸಿಕ ವಿಶೇಷ ಅಧಿವೇಶನದ ಮೊದಲ ದಿನವೇ ಉಭಯ ಸದನಗಳೂ ಅಂಗೀಕರಿಸಿದವು. ರಾಜದಾನಿ ಬೆಂಗಳೂರಿನಿಂದ ಹೊರಗೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುವುದರೊಂದಿಗೆ ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಾಣಗೊಂಡಿತು. ಕೆಎಲ್ ಇ ಶಿಕ್ಷಣ ಸಂಸ್ಥೆಯಲ್ಲಿ ಮೈದಳೆದ ಪ್ರತಿರೂಪಿ ವಿಧಾನ ಮಂಡಲದಲ್ಲಿ ಈ  ಅಧಿವೇಶನ ಸಮಾವೇಶಗೊಳ್ಳುವುದರೊಂದಿಗೆ ಹೊಸ ಮನ್ವಂತರಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಬೆಳಗಾವಿ ಮತ್ತು ಕಾಸರಗೋಡು ಎರಡೂ ಕರ್ನಾಟಕದ್ದೇ ಎಂಬ ಸ್ಪಷ್ಟ ಸಂದೇಶವನ್ನು ಚಾರಿತ್ರಿಕ ನಿರ್ಣಯ ಅಂಗೀಕಾರದ ಮೂಲಕ ವಿಧಾನ ಮಂಡಲ ಇತರ ರಾಜ್ಯಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಿತು.

2001: ಮೊಣಕಾಲಿನ ಕೆಳಗಿನ ಭಾಗಗಳಿಲ್ಲದ ಅಂಗವಿಕಲ ಕೋಲ್ಕತ್ತಾದ ಮಸುದುರ್ ರಹಮಾನ್ ಬೈದ್ಯ ಅವರು ಜಿಬ್ರಾಲ್ಟರ್ ಕಾಲುವೆಯ 22 ಕಿ.ಮೀ. ದೂರವನ್ನು 4 ಗಂಟೆ 20 ನಿಮಿಷಗಳಲ್ಲಿ ಈಜುವ ಮೂಲಕ ಈ ಸಾಹಸ ಗೈದ ಮೊದಲ ಅಂಗವಿಕಲ ಎಂಬ ಕೀರ್ತಿಗೆ ಪಾತ್ರರಾದರು.

1997: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ (ಇ.ಎಸ್. ವೆಂಕಟರಾಮಯ್ಯ)(18-12-1924ರಿಂದ 25-9-1997) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಇಂಗಳಗುಪ್ಪೆಯಲ್ಲಿ 1924ರ ಡಿಸೆಂಬರ್ 18ರಂದು ಜನಿಸಿದ್ದ ವೆಂಕಟರಾಮಯ್ಯ ಹೈಕೋರ್ಟ್ ವಕೀಲ, ಸರ್ಕಾರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

1969: ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಹ್ಯಾನ್ಸೀ ಕ್ರೋನಿಯೆ (1969-2002) ಜನ್ಮದಿನ. ಮ್ಯಾಚ್ ಫಿಕ್ಸಿಂಗ್ ಹಗರಣ ಮೂಲಕ ಕ್ರಿಕೆಟ್ ಕ್ರೀಡೆಗೆ ಮಸಿ ಬಳಿದ ಅಪಖ್ಯಾತಿಗೆ ಈಡಾದ ಇವರು ಇವರು ದಕ್ಷಿಣ ಆಫ್ರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಅಸು ನೀಗಿದರು.

1969: ಬ್ರಿಟಿಷ್ ಚಿತ್ರನಟಿ ಕ್ಯಾಥರೀನ್ ಝೇಟಾ-ಜೋನ್ಸ್ ಜನ್ಮದಿನ. ವಿಶೇಷವೆಂದರೆ ಈಕೆಯ ಪತಿ ಅಮೆರಿಕನ್ ನಟ, ನಿರ್ದೇಶಕ ಮೈಕೆಲ್ ಡಗ್ಲಾಸ್ ಅವರ ಜನ್ಮದಿನವೂ ಇದೇ ದಿನ. ಡಗ್ಲಾಸ್ ಅವರು ಜನಿಸಿದ್ದು 1944ರ ಸೆಪ್ಟೆಂಬರ್ 25ರಂದು.

1948: ಸಾಹಿತಿ ಅರ್ಜುನಪುರಿ ಅಪ್ಪಾಜಿಗೌಡ ಜನನ.

1946: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ಜನ್ಮದಿನ.

1940: ಅಧ್ಯಾಪಕ, ಸಾಹಿತಿ, ನ್ಯಾಯಾಧೀಶ ಶಂಕರ ಖಂಡೇರಿ ಅವರು ಸುಬ್ಬಪ್ಪ- ಗಂಗಮ್ಮ ದಂಪತಿಯ ಮಗನಾಗಿ ಕಾಸರಗೋಡು ತಾಲ್ಲೂಕು ಕಾಟುಕುಕ್ಕೆ ಗ್ರಾಮದ ಖಂಡೇರಿಯಲ್ಲಿ ಜನಿಸಿದರು.

1930: ಸಾಹಿತಿ ಎಚ್. ವಿ. ನಾರಾಯಣ್ ಜನನ.

1921: ನೂಜಿಲೆಂಡಿನ ಮಾಜಿ ಪ್ರಧಾನಿ ರಾಬರ್ಟ್ ಡೇವಿಡ್ ಮುಲ್ಡೂನ್ (1921) ಜನ್ಮದಿನ.

1916: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ  (1916-1968) ಜನ್ಮದಿನ.

1914: ಭಾರತದ ರಾಜಕಾರಣಿ ಹಾಗೂ ಉಪ ಪ್ರಧಾನಿಯಾಗಿದ್ದ ದೇವಿಲಾಲ್ (1914-2001) ಜನ್ಮದಿನ.

1829: ಅಸ್ಸಾಮಿ ಆಧುನಿಕ ಕಾವ್ಯದ ಜನಕ ಆನಂದರಾಮ್ ಧೇಕಿಯಲ್ ಫೂಕಾನ್ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ )

No comments:

Post a Comment