Saturday, September 22, 2018

ಅನುಪ ಕೃಷ್ಣ ಭಟ್ ನೆತ್ರಕೆರೆ ಛಾಯಾಚಿತ್ರ ಪ್ರದರ್ಶನ

ಅನುಪ ಕೃಷ್ಣ ಭಟ್ ನೆತ್ರಕೆರೆ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಅನುಪ ಕೃಷ್ಣ ಭಟ್ ನೆತ್ರಕೆರೆ ಸ್ಮರಣಾರ್ಥ ಅವರೇ ಕ್ಲಿಕ್ಕಿಸಿದ ಛಾಯಾಚಿತ್ರಗಳ (ಫೊಟೋಗಳು) ಪ್ರದರ್ಶನವನ್ನು ಅವರು ಚಿತ್ರಕಲೆ, ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಯನ್ನು ಅಧ್ಯಯನ ಮಾಡಿದ ಬೆಂಗಳೂರಿನ ಶೇಷಾದ್ರಿ ಪುರಂನ  ಕೆನ್ ಕಲಾ ಶಾಲೆಯಲ್ಲಿ (ಕೆನ್ ಸ್ಕೂಲ್ ಆಫ್ ಆರ್ಟ್ಸ್) 2018 ಸೆಪ್ಟೆಂಬರ್ 22 ಶನಿವಾರ ಸಂಘಟಿಸಲಾಗಿತ್ತು.

ಭರವಸೆ ಮೂಡಿಸುತ್ತಿದ್ದ ಛಾಯಾಗ್ರಾಹಕ ಹಾಗೂ ವಿಡಿಯೋ ಎಡಿಟರ್ ಅನುಪ್ ಕೃಷ್ಣಭಟ್ ಅವರು ಸ್ವತಃ ತೆಗೆದ ಆಯ್ದ, ಪರಿಣಾಮಕಾರಿ ಅಭಿವ್ಯಕ್ತಿಗಳ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.

ಪ್ರಮುಖ ಮಾಧ್ಯಮ ವ್ಯಕ್ತಿ ಡಾ. ನರೇಂದ್ರ ಮಡಿಕೇರಿ ಮತ್ತು ಕೆನ್ ಕಲಾಶಾಲೆಯ ಪ್ರಾಂಶುಪಾಲ ಶ್ರೀ ಉಮೇಶ ಆರ್. ಅವರು ಚಿತ್ರಪ್ರದರ್ಶನವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದರು.

ಅನುಪ್ ಅವರ ತಂದೆ ನೆತ್ರಕೆರೆ ಉದಯಶಂಕರ, ತಾಯಿ ಎನ್. ಸಾಧನಾ, ಅಕ್ಕ ಅನುಷ ಭಟ್ ನೆತ್ರಕೆರೆ, ಸಹೋದರ ಮಧು ಭಟ್ ಪೂರ್ಲುಪಾಡಿ, ಚಿಕ್ಕಮ್ಮ ಕಲ್ಪನಾ ಮತ್ತಿತರರು ಸಂದರ್ಭದಲ್ಲಿ ಹಾಜರಿದ್ದರು.

ಸಂಪೂರ್ಣ ಕಾರ್ಯಕ್ರಮವನ್ನು ಅನುಪ ಕೃಷ್ಣಭಟ್ ಗೆಳೆಯರೂ ಕೆನ್ ಕಲಾಶಾಲೆಯ ವಿದ್ಯಾರ್ಥಿಗಳೂ ಆಗಿದ್ದ ರಾಜೇಶ್, ಶಿಲ್ಪ ಸತೀಶ್, ಪೃಥ್ವಿ, ಮಂಜು, ನವೀನ್, ಶ್ರೇಯಸ್ವಿವೇಕ್, ಶಿವು, ಉಮರ್, ಪ್ರೀತಮ್, ವಿಜಿ, ಮುನಿಕೃಷ್ಣ, ಹರೀಶ್, ವಿಜಯಕೃಷ್ಣ, ಕಾರ್ತಿಕ್, ಶ್ವೇತಾ ಮತ್ತಿತರರು ಹಾಗೂ ಕೆನ್ ಸ್ಕೂಲಿನ ಸಹೋದ್ಯೋಗಿಗಳ ತಂಡ ಸಂಘಟಿಸಿತ್ತು. ಕೆನ್ ಕಲಾಶಾಲೆಯ ಶಿಕ್ಷಕ, ಸಿಬ್ಬಂದಿ ಕೂಡಾ ಸಮಾರಂಭದಲ್ಲಿ ಹಾಜರಿದ್ದರು.

ಛಾಯಾಚಿತ್ರ ಪ್ರದರ್ಶನ ಜೊತೆಗೆ ಅನುಪ್ ಕೃಷ್ಣ ಭಟ್ ಅವರ ಕಾಲೇಜು ಬದುಕು, ಚಿಕಿತ್ಸಾ ಕಾಲದಲ್ಲಿ ಅವರೇ ನಿರ್ಮಿಸಿದ್ದ ಅವರ ಜೀವನೋತ್ಸಾಹ ಮತ್ತು ಆತ್ಮೀಯ ವ್ಯಕ್ತಿತ್ವವನ್ನು ಪರಿಚಯಿಸುವ ವಿಡಿಯೋಗಳನ್ನೂ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಛಾಯಾಚಿತ್ರ ಪ್ರದರ್ಶನವು 2018 ಸೆಪ್ಟೆಂಬರ್ 24 ಸೋಮವಾರ ಸಂಜೆವರೆಗೆ ಮುಂದುವರೆಯಲಿದೆ. ಭಾನುವಾರ ಮತ್ತು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ತೆರೆದಿರುತ್ತದೆ.

ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದ ವಿಡಿಯೋ ವೀಕ್ಷಿಸಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:

No comments:

Post a Comment