Showing posts with label ಅಮೆರಿಕ. Show all posts
Showing posts with label ಅಮೆರಿಕ. Show all posts

Wednesday, April 15, 2026

PARYAYA: ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ...

  ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ್‌ ಪರದಾಟ!

ಸ್ಲಾಮಾಬಾದ್: ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ವಿಜಯ ಸಾಧಿಸಲು ಹೊರಟಿದ್ದ ಪಾಕಿಸ್ತಾನಕ್ಕೆ ಈಗ ಭಾರಿ ಮುಖಭಂಗವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉನ್ನತ ಮಟ್ಟದ ಮಾತುಕತೆಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನ ಸರ್ಕಾರಕಾರ್ಯಕ್ರಮ ನಡೆದ ಹೋಟೆಲ್‌ನ ಬಾಕಿ ಹಣವನ್ನು ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದೆ.

ಘಟನೆಯ ಹಿನ್ನೆಲೆ:

ಇಸ್ಲಾಮಾಬಾದ್‌ನ ಪ್ರತಿಷ್ಠಿತ **'ಸೆರೆನಾ ಹೋಟೆಲ್'**ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಮಹತ್ವದ ಚರ್ಚೆಗಳು ನಡೆದಿದ್ದವು. ಪ್ರಾದೇಶಿಕ ಮಧ್ಯಸ್ಥಿಕೆದಾರನಾಗಿ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಪಾಕಿಸ್ತಾನ ಈ ಅವಕಾಶವನ್ನು ಬಳಸಿಕೊಂಡಿತ್ತು. ಆದರೆಹೋಟೆಲ್ ಬಿಲ್ ಪಾವತಿಸುವಲ್ಲಿ ವಿಫಲವಾದ ಕಾರಣ ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಹರಾಜಾಗಿದೆ.

ವಿವಾದದ ಮುಖ್ಯಾಂಶಗಳು:

  • ಮಾಲೀಕರೇ ಬಿಲ್ ಕಟ್ಟುವ ಸ್ಥಿತಿ: ವರದಿಗಳ ಪ್ರಕಾರಹೋಟೆಲ್ ಬಿಲ್ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೊನೆಗೆ ಹೋಟೆಲ್ ಮಾಲೀಕರೇ ಮಧ್ಯಪ್ರವೇಶಿಸಿ ಬಾಕಿಯನ್ನು ಚುಕ್ತಾ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮೂಲಗಳು ತಿಳಿಸಿವೆ.
  • ದುಬಾರಿ ವಾಸ್ತವ್ಯ: ಈ ಪಂಚತಾರಾ ಹೋಟೆಲ್‌ನಲ್ಲಿ ಒಂದು ಸಾಮಾನ್ಯ ಕೋಣೆಯ ಬಾಡಿಗೆ ಸುಮಾರು ₹13,000 ($160) ಇದ್ದರೆಪ್ರೆಸಿಡೆನ್ಶಿಯಲ್ ಸೂಟ್‌ನ ಬೆಲೆ ಪ್ರತಿ ರಾತ್ರಿಗೆ ಅಂದಾಜು ₹2 ಲಕ್ಷಕ್ಕೂ ಅಧಿಕ ($2,375).
  • ಪ್ರತಿಷ್ಠೆಗೆ ಬಿದ್ದ ಪೆಟ್ಟು: "ಒಂದು ಕಡೆ ರಾಜತಾಂತ್ರಿಕ ವಿಜಯದ ಬಗ್ಗೆ ಮಾತನಾಡುತ್ತಾಇನ್ನೊಂದು ಕಡೆ ಹೋಟೆಲ್ ಬಿಲ್ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿ ಪಾಕಿಸ್ತಾನವಿದೆ" ಎಂದು ಗುಪ್ತಚರ ಮೂಲಗಳು ವ್ಯಂಗ್ಯವಾಡಿವೆ.

ಆರ್ಥಿಕ ಮುಗ್ಗಟ್ಟಿನ ಪ್ರತಿಬಿಂಬ:

ಪಾಕಿಸ್ತಾನವು ಈಗಾಗಲೇ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕಠಿಣ ನಿಗಾ ಮತ್ತು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿದೆ. ಇಂತಹ ಸಮಯದಲ್ಲಿ ಒಂದು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಕನಿಷ್ಠ ವೆಚ್ಚವನ್ನೂ ಭರಿಸಲಾಗದ ಪಾಕಿಸ್ತಾನದ ಸ್ಥಿತಿಆ ದೇಶದ ಆಡಳಿತಾತ್ಮಕ ಮತ್ತು ಆರ್ಥಿಕ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ.

"ರಾಜತಾಂತ್ರಿಕ ಮಹತ್ವಾಕಾಂಕ್ಷೆಗಳಿಗೂ ಮತ್ತು ದೇಶದ ಆರ್ಥಿಕ ವಾಸ್ತವಕ್ಕೂ ತಾಳೆಯೇ ಆಗುತ್ತಿಲ್ಲ" ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆಯಲ್ಲಿ ಯಾವುದೇ ದೊಡ್ಡ ಒಪ್ಪಂದ ನಡೆಯದಿದ್ದರೂಕದನ ವಿರಾಮ ಮುಗಿಯುವ ಮೊದಲು ಅಮೆರಿಕ ಮತ್ತು ಇರಾನ್ ಮತ್ತೊಮ್ಮೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೆ ಪಾಕಿಸ್ತಾನಕ್ಕೆ ಮಾತ್ರ ಈ ಘಟನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

PARYAYA: ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ...:     ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ್‌ ಪರದಾಟ! ಇ ಸ್ಲಾಮಾಬಾದ್:   ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ವಿಜಯ ಸಾಧಿಸಲು ...

Sunday, March 15, 2026

PARYAYA: ಕೇಂದ್ರದ ಮಹತ್ವದ ಆದೇಶ: ಪಿಎನ್‌ ಜಿ (PNG) ಇದ್ದರೆ ಎಲ್‌ಪಿ...

 ಕೇಂದ್ರದ ಮಹತ್ವದ ಆದೇಶ: ಪಿಎನ್‌ಜಿ (PNG) ಇದ್ದರೆ ಎಲ್‌ಪಿಜಿ (LPG) ಇಲ್ಲ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಂದು ಪ್ರಮುಖ ಅಧಿಸೂಚನೆಯನ್ನು ಹೊರಡಿಸಿದ್ದುಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯ ಹೊಂದಿರುವ ಗ್ರಾಹಕರು ತಮ್ಮಲ್ಲಿರುವ ಎಲ್‌ಪಿಜಿ ಸಂಪರ್ಕವನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶಿಸಿದೆ. ಈ ವಿಚಾರವನ್ನು ಸರ್ಕಾರವು 2026 ಮಾರ್ಚ್‌ 14ರ ಶನಿವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ.

ಪ್ರಮುಖ ಮಾರ್ಗಸೂಚಿಗಳು:

  • ಒಂದೇ ಸಂಪರ್ಕಕ್ಕೆ ಅವಕಾಶ: PNG ಸಂಪರ್ಕ ಹೊಂದಿರುವವರು ಇನ್ನು ಮುಂದೆ ಗೃಹಬಳಕೆಯ LPG ಸಿಲಿಂಡರ್‌ಗಳನ್ನು ಹೊಂದುವಂತಿಲ್ಲ ಅಥವಾ ರೀಫಿಲ್ ಪಡೆಯುವಂತಿಲ್ಲ.
  • ಹೊಸ ಸಂಪರ್ಕಕ್ಕೆ ತಡೆ: ಈಗಾಗಲೇ ಪೈಪ್‌ಲೈನ್ ಅನಿಲ ಸೌಲಭ್ಯ ಇರುವವರಿಗೆ ಭವಿಷ್ಯದಲ್ಲಿ ಹೊಸ LPG ಸಂಪರ್ಕವನ್ನು ನೀಡಲಾಗುವುದಿಲ್ಲ.
  • ತೈಲ ಕಂಪನಿಗಳಿಗೆ ಸೂಚನೆ: ಸರ್ಕಾರದ ಸ್ವಾಮ್ಯದ ತೈಲ ಕಂಪನಿಗಳು ಮತ್ತು ವಿತರಕರು ಅಂತಹ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕ್ರಮ ಏಕೆ?
ಅಡುಗೆ ಅನಿಲದ ಪೂರೈಕೆಯಲ್ಲಿನ ದ್ವಿಗುಣತೆಯನ್ನು ತಡೆಯಲು ಮತ್ತು PNG ಸೌಲಭ್ಯವಿಲ್ಲದ ಮನೆಗಳಿಗೆ LPG ಸಿಲಿಂಡರ್‌ಗಳು ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೂ ಇದಕ್ಕೆ ಒಂದು ಕಾರಣವಾಗಿದೆ.

ಕಡಲ ಬಿಕ್ಕಟ್ಟಿನ ನಡುವೆ ಸಿಹಿ ಸುದ್ದಿ: ಭಾರತದ ಹಡಗುಗಳಿಗೆ ಸುರಕ್ಷಿತ ಹಾದಿ

ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿಇರಾನ್ ದೇಶವು ಪರ್ಷಿಯನ್ ಕೊಲ್ಲಿಯ 'ಹಾರ್ಮುಜ್ ಜಲಸಂಧಿಮೂಲಕ ಭಾರತದ ಎರಡು LPG ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

  • ಶಿವಾಲಿಕ್ ಮತ್ತು ನಂದಾದೇವಿ: ಈ ಎರಡು ಬೃಹತ್ ಹಡಗುಗಳು ಸುಮಾರು 92,700 ಟನ್ ಅಡುಗೆ ಅನಿಲದೊಂದಿಗೆ ಗುಜರಾತಿನ ಮುದ್ರಾ ಮತ್ತು ಕಾಂಡ್ಲಾ ಬಂದರುಗಳತ್ತ ಸಾಗಿವೆ.
  • ಇವು ಮಾರ್ಚ್ 16 ಅಥವಾ 17 ರಂದು ಭಾರತವನ್ನು ತಲುಪಲಿವೆ.
  • ಇನ್ನೂ ಬಾಕಿ ಉಳಿದಿರುವ 22 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಸರ್ಕಾರ ಮಾತುಕತೆ ನಡೆಸುತ್ತಿದೆ.

ಸಾರ್ವಜನಿಕರಲ್ಲಿ ಮನವಿ: ಗಾಬರಿ ಬೇಡ!

ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ನಾಗರಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ:

  1. ಪ್ಯಾನಿಕ್ ಬುಕಿಂಗ್ ಬೇಡ: ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ ಬುಕ್ ಮಾಡಿಗಾಬರಿಯಿಂದ ಮುಂಗಡ ಬುಕಿಂಗ್ ಮಾಡಬೇಡಿ.
  2. ವಾಣಿಜ್ಯ ಸಿಲಿಂಡರ್ ಲಭ್ಯತೆ: ರಾಜ್ಯ ಸರ್ಕಾರಗಳ ಬಳಿ ಸಾಕಷ್ಟು ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಇದ್ದುಈಗಾಗಲೇ 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆ ಆರಂಭವಾಗಿದೆ.

    ‌                      https://www.paryaya.com/search?q=%E0%B2%87%E0%B2%B0%E0%B2%BE%E0%B2%A8%E0%B3%8D&updated-max=2020-01-09T01:03:00%2B05:30&max-results=20&start=2&by-date=false
PARYAYA: ಕೇಂದ್ರದ ಮಹತ್ವದ ಆದೇಶ: ಪಿಎನ್‌ ಜಿ (PNG) ಇದ್ದರೆ ಎಲ್‌ಪಿ...:   ಕೇಂದ್ರದ ಮಹತ್ವದ ಆದೇಶ: ಪಿಎನ್‌ಜಿ ( PNG) ಇದ್ದರೆ ಎಲ್‌ಪಿಜಿ ( LPG) ಇಲ್ಲ ಕೇಂ ದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಂದು ಪ್ರಮುಖ ಅಧಿಸೂಚನೆಯನ್...

Thursday, March 12, 2026

PARYAYA: ಭಾರತದಲ್ಲಿ ʼಬೆಂಕಿʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿ...

 ಭಾರತದಲ್ಲಿ ʼಬೆಂಕಿʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದ ಸರ್ಕಾರ

ವದೆಹಲಿ: ದೆಹಲಿಯ ಭಾರತ-ಇಸ್ರೇಲ್ ಜಂಟಿ ರಕ್ಷಣಾ ಸೌಲಭ್ಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಎರಡೂ ದೇಶಗಳ ಹಲವಾರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳನ್ನು ಸರ್ಕಾರ ೨೦೨೬ ಮಾರ್ಚ್‌ ೧೨ರ ಗುರುವಾರ ತಳ್ಳಿಹಾಕಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ
 ಫ್ಯಾಕ್ಟ್ ಚೆಕ್ ಯುನಿಟ್ (Fact Check Unit) ಈ ಪೋಸ್ಟ್‌ಗಳು ಸುಳ್ಳೆಂದು ಸ್ಪಷ್ಟಪಡಿಸಿದೆ ಮತ್ತು ಇಂತಹ ಆಧಾರರಹಿತ ವದಂತಿಗಳ ಬಗ್ಗೆ ಜಾಗರೂಕರಾಗಿರುವಂತೆ ಜನರಿಗೆ ಸೂಚಿಸಿದೆ.
ಭಾರತೀಯ ಮಾಧ್ಯಮಗಳು ಈ ಘಟನೆಗೆ ಭಾರತದಲ್ಲಿರುವ ಇರಾನ್ ಬೆಂಬಲಿಗರನ್ನು ದೂಷಿಸುತ್ತಿವೆ ಎಂಬ ಸಾಮಾಜಿಕ ಜಾಲತಾಣಗಳ ಪ್ರತಿಪಾದನೆಗಳನ್ನೂ ಸಹ ಸಚಿವಾಲಯವು "ನಕಲಿ" ಎಂದು ಕರೆದಿದೆ.

ಹಾರ್ಮುಜ್ ಜಲಸಂಧಿ ಭಾರತೀಯ ಟ್ಯಾಂಕರ್‌ಗಳಿಗೆ ಸುರಕ್ಷಿತ ಮಾರ್ಗ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಇರಾನಿನ ಸಹವರ್ತಿ ಅಬ್ಬಾಸ್ ಅರಾಗ್ಚಿ ನಡುವಿನ ಮಾತುಕತೆಯ ನಂತರಇರಾನ್ ಭಾರತೀಯ ಧ್ವಜವಿರುವ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡಿದೆ. ಅಮೆರಿಕಯುರೋಪ್ ಮತ್ತು ಇಸ್ರೇಲ್‌ನ ಹಡಗುಗಳು ಈ ಆಯಕಟ್ಟಿನ ಜಲಮಾರ್ಗದಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದ್ದರೆಭಾರತೀಯ ಟ್ಯಾಂಕರ್‌ಗಳಾದ ಪುಷ್ಪಕ್’ ಮತ್ತು ಪರಿಮಳ್’ ಸುರಕ್ಷಿತವಾಗಿ ಸಂಚರಿಸುತ್ತಿವೆ.

೨೦೨೬ ಮಾರ್ಚ್‌ ೧೦ರ ಮಂಗಳವಾರ ಜೈಶಂಕರ್ ಮತ್ತು ಅರಾಗ್ಚಿ ನಡುವೆ ನಡೆದ ಸಂಭಾಷಣೆಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್‌ಗಳ ಸುರಕ್ಷಿತ ಸಂಚಾರದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿತ್ತು. ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದರು. ಇರಾನ್ ಯುದ್ಧ ಆರಂಭವಾದ ನಂತರ ಇವರಿಬ್ಬರ ನಡುವೆ ನಡೆದ ಮೂರನೇ ಸಂಭಾಷಣೆ ಇದು.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ತನ್ನ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಆಮದಿನ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಈ ಕಿರಿದಾದ ಜಲಮಾರ್ಗವನ್ನೇ ಅವಲಂಬಿಸಿದೆ. ಶಿಪ್ಪಿಂಗ್ ಮಹಾನಿರ್ದೇಶನಾಲಯದ ಪ್ರಕಾರಈ ಪ್ರದೇಶದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಭಾರತೀಯ ಧ್ವಜವಿರುವ 28 ಹಡಗುಗಳು ಹಾರ್ಮುಜ್ ಜಲಸಂಧಿ ಅಥವಾ ಅದರ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಇಂಧನ ಮಾರ್ಗಗಳಲ್ಲಿ ಭದ್ರತಾ ಕಾಳಜಿಗಳು ಮುಂದುವರಿಯುತ್ತಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

https://www.paryaya.com/search?q=%E0%B2%87%E0%B2%B0%E0%B2%BE%E0%B2%A8%E0%B3%8D&updated-max=2020-01-09T01:03:00%2B05:30&max-results=20&start=2&by-date=false
PARYAYA: ಭಾರತದಲ್ಲಿ ʼಬೆಂಕಿʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿ...:   ಭಾರತದಲ್ಲಿ ʼ ಬೆಂಕಿ ʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದ ಸರ್ಕಾರ ನ ವದೆಹಲಿ: ದೆಹಲಿಯ ಭಾರತ-ಇಸ್ರೇಲ್ ಜಂಟಿ ರಕ್ಷಣಾ ಸೌಲಭ್ಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ...

Sunday, March 1, 2026

PARYAYA: ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ: 40 ದಿನ ಶೋಕಾಚರಣೆ

 ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ40 ದಿನ ಶೋಕಾಚರಣೆ

ಟೆಹ್ರಾನ್: 1989 ರಿಂದ ಇಸ್ಲಾಮಿಕ್ ಗಣರಾಜ್ಯವನ್ನು ಮುನ್ನಡೆಸುತ್ತಿದ್ದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಕುಟುಂಬದ ಇತರ ಸದಸ್ಯರ ಜೊತೆಗೆ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಯಲ್ಲಿ 2026 ಫೆಬ್ರುವರಿ 28ರ ಶನಿವಾರ ಸಾವನ್ನಪ್ಪಿದ್ದಾರೆ ಎಂದು  ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಖಚಿತಪಡಿಸಿವೆ.

ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಪ್ರಮುಖ ತಿರುವೆಂದು ಪರಿಗಣಿಸಲಾಗಿದೆ. 86 ವರ್ಷದ ಖಮೇನಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್‌ನ ರಾಜಕೀಯಮಿಲಿಟರಿ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದ್ದರು.

40 ದಿನಗಳ ರಾಷ್ಟ್ರೀಯ ಶೋಕಾಚರಣೆ

ಖಮೇನಿ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರವು ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ನಾಯಕನ ಸಾವಿನ ನಂತರ ಇಡೀ ಇಸ್ಲಾಮಿಕ್ ಗಣರಾಜ್ಯದಲ್ಲಿ ಅಧಿಕೃತ ಶೋಕದ ಅವಧಿ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.

1989 ರಿಂದ ಇರಾನ್‌ನ ಸಾರ್ವಭೌಮತ್ವದ ಸಂಕೇತವಾಗಿದ್ದ ಖಮೇನಿ ಅವರ ನಿಧನವು ದೇಶವನ್ನು ಸೂಕ್ಷ್ಮ ಸಂಕ್ರಮಣ ಹಂತಕ್ಕೆ ತಳ್ಳಿದೆ.

ಇತರ ಹಲವರ ಸಾವು

ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಜೊತೆಗೆ ಇತರ ನಾಯಕರಾದ ಶಮ್ಖಾನಿ ಮತ್ತು ಪಾಕ್‌ಪೋರ್ ಹತರಾಗಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಇತರ ಹಿರಿಯ ಕಮಾಂಡರ್‌ಗಳು ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಖಮೇನಿ ಸ್ಥಾನಕ್ಕೆ ನೂತನ ನಾಯಕ

ಈ ಮಧ್ಯೆ, ಅಯತೊಲ್ಲ ಅಲಿ ಖಮೇನಿ ಸ್ಥಾನಕ್ಕೆ ಹಂಗಾಮಿಯಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಅವರನ್ನು ನೇಮಕ ಮಾಡಲಾಗಿದೆ. ಅರಾಫಿ ಅವರು ಗಾರ್ಡಿಯನ್‌ ಕೌನ್ಸಿಲಿನ ಧರ್ಮಗುರು ಎಂದು ವರದಿಗಳು ಹೇಳಿವೆ.

ಇರಾನ್ ಎಚ್ಚರಿಕೆ: ತನ್ನ ಉನ್ನತ ನಾಯಕರ ಹತ್ಯೆಗೆ ಪ್ರತಿಕ್ರಿಯೆಯಾಗಿಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸುವುದಾಗಿ ಇರಾನ್ ಘೋಷಿಸಿದೆ. ಇದನ್ನು "ಬಲವಾದ ಮತ್ತು ನಿರ್ಣಾಯಕ ಪ್ರತಿಕ್ರಿಯೆ" ಎಂದು ಇರಾನ್ ಅಧಿಕಾರಿಗಳು ಬಣ್ಣಿಸಿದ್ದಾರೆ.

ದಾಳಿ ವಿಡಿಯೋ ಬಿಡುಗಡೆ

ಅಯತೊಲ್ಲಾ ಅಲಿ ಖಮೇನಿ ಮತ್ತು ಇತರರು ಇದ್ದ ಸ್ಥಳದ ಮೇಲಿನ ವಾಯುದಾಳಿಯ ವಿಡಿಯೋವನ್ನು ಇಸ್ರೇಲಿ ವಾಯುಪಡೆ ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಆ ವಿಡಿಯೋ ಇಲ್ಲಿದೆ.


ಡೊನಾಲ್ಡ್ ಟ್ರಂಪ್ ಅವರಿಂದ ಕಠಿಣ ಎಚ್ಚರಿಕೆ

ಇರಾನ್‌ ಎಚ್ಚರಿಕೆಯ ಕುರಿತು ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' (Truth Social) ಖಾತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ:

"ಇರಾನ್ ಇಂದು ಹಿಂದೆಂದಿಗಿಂತಲೂ ಕಠಿಣವಾಗಿ ದಾಳಿ ಮಾಡುವುದಾಗಿ ಹೇಳಿಕೊಂಡಿದೆ. ಆದರೆ ಅವರು ಹಾಗೆ ಮಾಡದಿರುವುದು ಒಳಿತು. ಒಂದು ವೇಳೆ ಅವರು ದಾಳಿ ಮಾಡಿದರೆನಾವು ಹಿಂದೆಂದೂ ಕಾಣದ ಅತಿದೊಡ್ಡ ಶಕ್ತಿಯೊಂದಿಗೆ ಅವರ ಮೇಲೆ ಪ್ರಹಾರ ಮಾಡುತ್ತೇವೆ!" ಎಂದು ಎಚ್ಚರಿಸಿದ್ದಾರೆ.

ಜಾಗತಿಕ ಪ್ರತಿಕ್ರಿಯೆ ಮತ್ತು ಭಾರತದ ಕಳವಳ

  • ಗಲ್ಫ್ ರಾಷ್ಟ್ರಗಳು: ಅಮೆರಿಕ-ಇಸ್ರೇಲ್ ನಡೆಸಿದ ಈ ದಾಳಿಯನ್ನು ಗಲ್ಫ್ ದೇಶಗಳು ಟೀಕಿಸಿವೆ ಮತ್ತು ತಕ್ಷಣವೇ ಸಂಘರ್ಷವನ್ನು ನಿಲ್ಲಿಸುವಂತೆ ಕರೆ ನೀಡಿವೆ.
  • ಯುರೋಪ್: ಹಲವು ಯುರೋಪಿಯನ್ ರಾಷ್ಟ್ರಗಳು ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಒತ್ತಾಯಿಸಿವೆ ಮತ್ತು ಶೀಘ್ರದಲ್ಲೇ ತುರ್ತು ಸಭೆ ನಡೆಸುವ ಸಾಧ್ಯತೆಯಿದೆ.
  • ಭಾರತ: ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿರುವ ಭಾರತ ಸರ್ಕಾರಅಲ್ಲಿರುವ ತನ್ನ ನಾಗರಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಮತ್ತು ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದೆ.
PARYAYA: ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ: 40 ದಿನ ಶೋಕಾಚರಣೆ:   ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ : 40 ದಿನ ಶೋಕಾಚರಣೆ ಟೆ ಹ್ರಾನ್: 1989 ರಿಂದ ಇಸ್ಲಾಮಿಕ್ ಗಣರಾಜ್ಯವನ್ನು ಮುನ್ನಡೆಸುತ್ತಿದ್ದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮ...

Wednesday, October 1, 2025

PARYAYA: ಅಮೆರಿಕ: ಟ್ರಂಪ್‌ ಸರ್ಕಾರ ಸ್ಥಗಿತ!

 ಅಮೆರಿಕ: ಟ್ರಂಪ್‌ ಸರ್ಕಾರ  ಸ್ಥಗಿತ!

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಟ್ರಂಪ್‌ ಸರ್ಕಾರವು ಸೆಪ್ಟೆಂಬರ್‌ ೩೦ರ ಮಂಗಳವಾರ ಮಧ್ಯರಾತ್ರಿ (ಭಾರತೀಯ ಕಾಲಮಾನ ಅಕ್ಟೋಬರ್‌ ೦೧ ಬುಧವಾರ ಬೆಳಗ್ಗೆ ೧೧.೩೬ ಗಂಟೆಗೆ ಅಧಿಕೃತವಾಗಿ ಸ್ಥಗಿತಗೊಂಡಿದೆ!

ತಮ್ಮ ಬೇಡಿಕೆಗಳನ್ನು ಪೂರೈಸದ ಗಣರಾಜ್ಯೋತ್ಸವದ (Republican) ಅಲ್ಪಾವಧಿಯ ನಿಧಿಯ ಪ್ಯಾಕೇಜನ್ನು ಡೆಮಾಕ್ರಾಟ್‌ಗಳು ತಡೆದ ಪರಿಣಾಮವಾಗಿಮಧ್ಯರಾತ್ರಿ ಗಂಟೆ ಹೊಡೆಯುತ್ತಿದ್ದಂತೆ ಸರ್ಕಾರದ ನಿಧಿಯ ಗಡುವು ಮುಗಿದಿದೆ. ಇದರಿಂದಾಗಿ ಅಮೆರಿಕ ಸರ್ಕಾರವು ಅಧಿಕೃತವಾಗಿ ಸ್ಥಗಿತಗೊಂಡಿದೆ. ಕ್ಯಾಪಿಟಲ್ ಕಟ್ಟಡದೊಳಗಿನ ಯಾರಿಗೂ ಮುಂದೆ ಏನಾಗಲಿದೆ ಎಂಬ ಬಗ್ಗೆ ತಿಳಿದಿಲ್ಲ.

ಕಳೆದ ಆರು ವರ್ಷಗಳಲ್ಲಿ ಇದು ಮೊದಲ ಸರ್ಕಾರಿ ಶಟ್‌ಡೌನ್. ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ, 2018-2019ರಲ್ಲಿ ಐದು ವಾರಗಳ ಕಾಲ ಸರ್ಕಾರದ ನಿಧಿಯು ಸ್ಥಗಿತಗೊಂಡಿತ್ತುಇದರಲ್ಲಿ ಹೊಸ ವರ್ಷದ ದಿನವೂ ಸೇರಿತ್ತು.

ಶಟ್‌ಡೌನ್‌ನ ಪರಿಣಾಮಗಳು

  • ಶಟ್‌ಡೌನ್‌ನಿಂದಾಗಿಅನಗತ್ಯ ಕಾರ್ಯಾಚರಣೆಗಳು ಸಂಪೂರ್ಣವಾಗಿ ನಿಲ್ಲಲಿವೆ.
  • ಲಕ್ಷಾಂತರ ನಾಗರಿಕ ನೌಕರರು ತಾತ್ಕಾಲಿಕವಾಗಿ ವೇತನವಿಲ್ಲದೆ ಇರಬೇಕಾಗುತ್ತದೆ.
  • ಹಲವಾರು ಸಾಮಾಜಿಕ ಸುರಕ್ಷತಾ ಯೋಜನೆಗಳ (Social Safety Net) ಪ್ರಯೋಜನಗಳ ಪಾವತಿಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
  • ಮಿಲಿಟರಿ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳ ನೌಕರರು ವೇತನವಿಲ್ಲದೆ ಕೆಲಸ ಮಾಡಬೇಕಾಗುತ್ತದೆ.
  • ಅನಗತ್ಯ ಫೆಡರಲ್ ಉದ್ಯೋಗಿಗಳನ್ನು 'ಫರ್ಲೋ' (Furlough) ಮೇಲೆ ಕಳುಹಿಸಲಾಗುತ್ತದೆ. ಪಕ್ಷಪಾತರಹಿತ ಕಾಂಗ್ರೆಷನಲ್ ಬಜೆಟ್ ಕಚೇರಿಯ ಅಂದಾಜಿನ ಪ್ರಕಾರಟ್ರಂಪ್ ಶಾಶ್ವತ ವಜಾಗೊಳಿಸುವ ನಿರ್ಧಾರಕ್ಕೆ ಹೋಗದಿದ್ದರೂ ಸಹಸುಮಾರು 7,50,000 ಫೆಡರಲ್ ಕಾರ್ಮಿಕರನ್ನು ತಾತ್ಕಾಲಿಕವಾಗಿ ಫರ್ಲೋ ಮಾಡಬಹುದು.

ಈ ಬಿಕ್ಕಟ್ಟಿನ ಮಧ್ಯೆಮಂಗಳವಾರ ಅಧ್ಯಕ್ಷರುಶಟ್‌ಡೌನ್‌ನ ಸಂದರ್ಭದಲ್ಲಿ ತಮ್ಮ ಆಡಳಿತವು "ಹೆಚ್ಚಿನ" ಫೆಡರಲ್ ಕಾರ್ಮಿಕರನ್ನು ಶಾಶ್ವತವಾಗಿ ವಜಾ ಮಾಡಬಹುದು ಎಂದು ಪತ್ರಕರ್ತರಿಗೆ ತಿಳಿಸುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದಾರೆ. ಸಾಮಾನ್ಯವಾಗಿನಿಧಿಯ ಕೊರತೆಯ ಸಮಯದಲ್ಲಿ ಫೆಡರಲ್ ಸರ್ಕಾರವು ಅನಗತ್ಯ ಕಾರ್ಮಿಕರನ್ನು ತಾತ್ಕಾಲಿಕವಾಗಿ ಫರ್ಲೋ ಮಾಡಿಶಟ್‌ಡೌನ್ ಮುಗಿದ ನಂತರ ಅವರಿಗೆ ಹಿಂಬಾಕಿ ವೇತನವನ್ನು ನೀಡುತ್ತದೆ. 

PARYAYA: ಅಮೆರಿಕ: ಟ್ರಂಪ್‌ ಸರ್ಕಾರ ಸ್ಥಗಿತ!:   ಅಮೆರಿಕ: ಟ್ರಂಪ್‌ ಸರ್ಕಾರ  ಸ್ಥಗಿತ! ವಾ ಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಟ್ರಂಪ್‌ ಸರ್ಕಾರವು  ಸೆಪ್ಟೆಂಬರ್‌ ೩೦ರ ಮಂಗಳವಾರ ಮಧ್ಯರಾತ್ರಿ (ಭಾರತೀಯ ಕಾಲಮಾನ ಅಕ್ಟೋಬರ್...

Tuesday, July 29, 2025

PARYAYA: ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ!

 ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ!

ನ್ರೀ ಸುದ್ದಿ ಅಂತೀರಾಅಮೆರಿಕಾದ ದೊಡ್ಡ ಕಂಪನಿ ಕ್ಯಾಲಿಫೋರ್ನಿಯಾ ಬುರಿಟೋ ಸಿಇಒ ಬ್ರೆಟ್ ಮ್ಯುಲ್ಲರ್ ಬೆಂಗಳೂರಿಗ್ ಬಂದಿದ್ರು. ಬೆಂಗಳೂರಲ್ಲಿ ಉತ್ತರ ಕರ್ನಾಟಕದ ಊಟ ಅಂದ್ರ ಜೋಳದ ರೊಟ್ಟಿಎಣ್ಣೆಗಾಯಿಮಜ್ಜಿಗೆಸಜ್ಜಿ ಅಂತಾರಲ್ಲಾಹಂಗ ಸಖತ್ ಖಡಕ್ ಊಟಾ ಮಾಡಿ, "ಆಹಾ! ಎನ್ ಚಂದಾ ಐತಿ ಈ ಊಟಾಸಖತ್ ಆರೋಗ್ಯಕರ" ಅಂತ ಹೇಳ್ಯಾರ.

ಈ ಬ್ರೆಟ್ ಮ್ಯುಲ್ಲರ್ ಅನ್ನೋ ಮನಿಯ ಅಮೆರಿಕಾದಾಗ ಫಾಸ್ಟ್‌ಫುಡ್ ಚೈನ್ ನಡೆಸಾತಾರ. ಆದ್ರೂ ನಮ್ಮ ಉತ್ತರ ಕರ್ನಾಟಕದ ಊಟಾ ಅಂದ್ರ ಜೀವ. ಬೆಂಗಳೂರಿನಾಗ್ ಒಂದು ಚಲೋ ಸಸ್ಯಾಹಾರಿ ಹೋಟೆಲ್‌ದಾಗ ಜೋಳದ ರೊಟ್ಟಿ ಊಟಾ ಮಾಡ್ಯಾರ. ಬೆಂಗಳೂರು ಸರ್ವ್ಡ್ ಅನ್ನೋ ಫುಡ್ ಚಾನೆಲ್‌ದಾಗ ಒಂದು ವಿಡಿಯೋ ವೈರಲ್ ಆಗೈತಿ. ಅದ್ರಾಗ ಬ್ರೆಟ್ ಮ್ಯುಲ್ಲರ್ ಬಸವನಗುಡಿದಾಗ್ ಇರೋ ಕಾಮತ್ ಹೋಟೆಲ್‌ದಾಗ ಉತ್ತರ ಕರ್ನಾಟಕದ ಸ್ಟೈಲ್ ಥಾಲಿ ಊಟಾ ಮಾಡ್ಕೊಂಡ್ ನಿರಾಳವಾಗಿ ಕುಂತಾರ.

ಜೋಳದ ರೊಟ್ಟಿಎಣ್ಣೆಗಾಯಿ ಕರೀಮಜ್ಜಿಗೆ ಅಂದ್ರ ಪಂಚಪ್ರಾಣ!

ವಿಡಿಯೋದಾಗ ನೋಡಿದ್ರಬ್ರೆಟ್ ಮ್ಯುಲ್ಲರ್ ಎಷ್ಟೋ ಖುಷಿಯಾಗ್ಯಾರ ಅಂದ್ರ ಕೇಳಬೇಡ್ರಿ. "ನಾನು ಫಸ್ಟು 2014ರಾಗ ಬಂದಿದ್ದೆ ಇಲ್ಲಿನನ್ನ ಚಾರ್ಟೆಡ್ ಅಕೌಂಟೆಂಟ್ ಹೇಳಿದ್ರು ಈ ಹೋಟೆಲ್ ಬಗ್ಗೆ. ಅವಾಗ ಹೊಸಬನಿದ್ದೆ ಇಲ್ಲಿ. ಆ ಊಟಾ ಇನ್ನು ನನ್ನ ಮನಿ ಒಳಗದ" ಅಂತ ಹೇಳತಾರ. ಊಟದ ಬಗ್ಗೆ ಹೇಳ್ತಾ, "ಈ ಪ್ಲೇಟ್ ಫುಲ್ ಹೊಸ ತರಕಾರಿಸಖತ್ ಕ್ರಿಸ್ಪಿ ಸಲಾಡ್ಭಾರಿ ಖಾರಾಖಾರವಾದ ಖಾದ್ಯಗಳಿಂದ ತುಂಬೈತಿ. ಜೋಳದ ರೊಟ್ಟಿಗೆ ಬೆಣ್ಣಿ ಕರಗಿ ಬಿದ್ದಿರೋದುಅದ್ರ ಜೋಡಿ ಬದನೆಕಾಯಿ ಪಲ್ಯ ಇರ್ತಲ್ಲಾಆಹಾ! ಭಾರಿ ರುಚಿ" ಅಂತಾ ಕೊಂಡಾಡ್ಯಾರ.

ಯಾವನು ಬುರಿಟೋಬೌಲ್ಸ್ ಅಂತಾ ತನ್ನ ಬಿಸಿನೆಸ್ ಕಟ್ಟಿಕೊಂಡ್ರೂಮ್ಯುಲ್ಲರ್‌ಗೆ ನಮ್ಮ ಉತ್ತರ ಕರ್ನಾಟಕದ ಅಡುಗೆ ಅಂದ್ರ ಮನಿ ಮೂಲೇದಾಗ ಜಾಗ ಕೊಟ್ಟಾರ. ವರ್ಷಕ್ಕ ಎರಡರಿಂದ ಮೂರು ಸಲ ಬಸವನಗುಡಿಗ್ ಹೋಗಿ ಜೋಳದ ರೊಟ್ಟಿ ಊಟಾ ಮಾಡ್ತಾರಂತೆ. "ಬೆಂಗಳೂರಿನಾಗ ಹಿಂಗಿನ ಊಟಾ ಕೊಡುವಂತ ಭಾಳಾ ಹೋಟೆಲ್‌ಗಳು ಅದಾವಆದ್ರ ಈ ಹೋಟೆಲ್ ಊಟಾ ಅಂದ್ರ ಬೇರೆ ತರಾನ ಐತಿ. ಭಾಳಾ ಚಲೋ ಐತಿ," ಅಂತ ನಗ್ತಾನೇ "ಹಿಂಗಿನ ಊಟಾ ತಿಂದ್ ಆದ್ಮ್ಯಾಲೆ ಜಿಮ್ಮು ಹೋಗೋ ಪ್ರಶ್ನೆನೇ ಇಲ್ಲ," ಅಂದ್ರು.

ಅಲ್ಲದೇಊಟದ ಜೋಡಿ ಕೊಡುವ ಮಜ್ಜಿಗೆ ಬಗ್ಗೆನೂ ಹೇಳ್ಯಾರ. "ಸಾಮಾನ್ಯವಾಗಿ ನಮ್ಗೆ ಹಿಂಗಿನ ತರಾವರಿ ತರಕಾರಿ ಥಾಲಿ ಸಿಗೋದಿಲ್ಲ. ಇದು ಆರೋಗ್ಯಕ್ಕೂ ಚಲೋಹೊಟ್ಟೆನೂ ತುಂಬುತಿಭಾರಿ ರುಚಿನೂ ಐತಿ," ಅಂತ ಅಂದ್ರು.

ಊಟಾ ಎಷ್ಟೇ ಇಷ್ಟಾ ಆದ್ರೂಬೆಂಗಳೂರಿನ ಟ್ರಾಫಿಕ್ ಅಂದ್ರ ಮ್ಯುಲ್ಲರ್‌ಗೆ ಇಷ್ಟಾ ಇಲ್ಲಾ. "ಈಗ ಟ್ರಾಫಿಕ್ ಇರ್ತದಲ್ಲಾಅದಕ್ಕ ಬೇಗ ಹೋಗಾಕ್ ಆಟೋ ಏರ್ತೀನಿ," ಅಂದ್ರು ನೇರವಾಗಿ.

ಮ್ಯುಲ್ಲರ್ 2012ರಾಗ 22 ವರ್ಷದವನಿದ್ದಾಗ ಬೆಂಗಳೂರಿಗ್ ಬಂದು ಫಸ್ಟು ಕ್ಯಾಲಿಫೋರ್ನಿಯಾ ಬುರಿಟೋ ಔಟ್‌ಲೆಟ್ ಶುರುಮಾಡಿದ್ರು. ವರ್ಷದಿಂದ ವರ್ಷಕ್ಕೆ ಅವರ ಕಂಪನಿ ಭಾಳಾ ಬೆಳೆದೈತಿ. ಈಗ ಭಾರತದಾಗ 100ಕ್ಕಿಂತ ಹೆಚ್ಚು ಔಟ್‌ಲೆಟ್‌ಗಳು ಅದಾವ. ಸಿಎನ್‌ಬಿಸಿ ವರದಿ ಪ್ರಕಾರಹಿಂದಿನ ವರ್ಷ $23 ಮಿಲಿಯನ್ ಆದಾಯ ಬಂದೈತಿ.

ಲಾಕ್‌ಡೌನ್ ಟೈಮ್ದಾಗ ಬೇರೆ ವ್ಯಾಪಾರಗಳ ಹಂಗ ಮ್ಯುಲ್ಲರ್ ಕಂಪನಿಗೂ ಭಾಳಾ ನಷ್ಟ ಆಗಿತ್ತು. 37 ಅಂಗಡಿಗಳಾಗ 19 ಅಂಗಡಿಗಳನ್ನ ಬಂದ್ ಮಾಡಿದ್ರು. ಆದ್ರೂ ಆಮೇಲೆ ಮತ್ತೆ ಜೋರಾಗಿ ವಾಪಸ್ ಬಂದ್ಯಾರ. 2021ರಾಗ ₹100ರ ಮೆನು ಕ್ಯಾಂಪೇನ್ ಶುರುಮಾಡಿದ್ರುಇನ್‌ಫ್ಲುಯೆನ್ಸರ್ಸ್‌ಗಳಿಂದ ಪ್ರಚಾರ ಮಾಡ್ಸಿದ್ರು. ಅದು ಭಾಳಾ ಸಕ್ಸಸ್ ಆಗಿಜನ ಸಾಲುಗಟ್ಟಿದ್ರು. ಇತ್ತೀಚಿಗೆ ಅವರ 100ನೇ ಅಂಗಡಿ ಓಪನ್ ಮಾಡ್ಯಾರ.

ಹೀಂಗ ಐತಿ ನೋಡ್ರಿ ಅಮೆರಿಕದ ಸಿಇಒ ಮತ್ತು ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ದೋಸ್ತಿ! ಚಲೋ ಅಲ್ವಾ?

ಜೋಳದ ರೊಟ್ಟಿ ಕುರಿತ ಚರ್ಚೆ ಕೇಳಬೇಕಾದರೆ ಕೆಳಗಿನ ಚಿತ್ರಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


PARYAYA: ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ!:   ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ! ಏ ನ್ರೀ ಸುದ್ದಿ ಅಂತೀರಾ ? ಅಮೆರಿಕಾದ ದೊಡ್ಡ ಕಂಪನಿ ಕ್ಯಾಲಿಫೋರ್ನಿಯಾ ಬುರಿಟೋ ಸಿಇಒ ಬ್ರೆಟ್ ಮ್ಯುಲ್ಲ...

Sunday, June 22, 2025

PARYAYA: ಇಸ್ರೇಲ್-‌ ಇರಾನ್ ಸಮರಾಂಗಣಕ್ಕೆ ಅಮೆರಿಕದ ರಂಗಪ್ರವೇಶ

 ಇಸ್ರೇಲ್-‌ ಇರಾನ್ ಸಮರಾಂಗಣಕ್ಕೆ ಅಮೆರಿಕದ ರಂಗಪ್ರವೇಶ

ವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ಸಂಘರ್ಷ ತೀವ್ರಗೊಳ್ಳುತ್ತಿರುವ ಮಧ್ಯೆ ಅಮೆರಿಕವು ೨೦೨೫ ಜೂನ್‌ ೨೨ರ ಭಾನುವಾರ ನಸುಕಿನಲ್ಲಿ ಇರಾನ್‌ ಮೇಲೆ ದಾಳಿ ಮಾಡುವ ಮೂಲಕ ಸಮರಾಂಗಣಕ್ಕೆ ರಂಗಪ್ರವೇಶ ಮಾಡಿದೆ.
ಅಮೆರಿಕವು ಬಿ-೨ ಬಾಂಬರ್‌ ಬಳಸಿ ಇರಾನಿನ ಫೋರ್ಡೋ, ನಟಾಂಜ್‌ ಮತ್ತು ಇಸ್ಫಹಾನ್‌ ಸೇರಿದಂತೆ ಹಲವಾರು ಪ್ರಮುಖ ಪರಮಾಣು ಸವಲತ್ತುಗಳನ್ನು ಧ್ವಂಸಗೊಳಿಸಿದೆ.
ಶ್ವೇತಭವನದಲ್ಲಿ ಮಾಡಿದ ಭಾಷಣದಲ್ಲಿಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಆ ತಾಣಗಳು "ಸಂಪೂರ್ಣವಾಗಿ ನಾಶವಾಗಿವೆ" ಎಂದು ಪ್ರತಿಪಾದಿಸಿದರು ಮತ್ತು ಇರಾನ್ ಶಾಂತಿ ಸ್ಥಾಪಿಸದಿದ್ದರೆ ಅಮೆರಿಕವು ಹೆಚ್ಚುವರಿ ಗುರಿಗಳ ಮೇಲೆ ದಾಳಿ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.
ದಾಳಿಗೆ ಅಮೆರಿಕದ ಬಿ-2 ಬಾಂಬರ್‌ಗಳನ್ನು ದಾಳಿಗಳಲ್ಲಿ ಬಳಸಲಾಯಿತುಮತ್ತು ಅಮೆರಿಕವು 30,000 ಪೌಂಡ್‌ಗಳ "ಬಂಕರ್ ಬಸ್ಟರ್" ಬಾಂಬ್ ಅನ್ನು ಸಹ ಬಳಸಿದೆ ಎಂದು ಸುದ್ದಿ ಮೂಲಗಳು ಹೇಳಿವೆ. ಸೇನಾ ಕಾರ್ಯಾಚರಣೆಯಲ್ಲಿ ʼಬಂಕರ್‌ ಬಸ್ಟರ್‌ ಬಾಂಬ್‌ʼ ಬಳಸಿದ ಮೊದಲ ನಿದರ್ಶನ ಇದು ಎಂದು ಹೇಳಲಾಗಿದೆ.


ಪರಿಣಾಮ ಗೌಣ- ಇರಾನ್:
ಇರಾನಿನ ಅಧಿಕಾರಿಗಳು ದಾಳಿಗಳ ಪರಿಣಾಮವನ್ನು 
ತಳ್ಳಿಹಾಕಿದ್ದಾರೆ. ದಾಳಿಯಿಂದ ಮೇಲ್ನೋಟಕ್ಕಷ್ಟೇ ಹಾನಿ ಕಾಣುತ್ತಿದೆ. ಫೋರ್ಡೋಗೆ ಗಂಭೀರವಾಗಿ ಹಾನಿ ಆಗಿಲ್ಲ ಎಂದು ಇರಾನ್‌ ಅಧಿಕಾರಿಗಳು ಪ್ರತಿಪಾದಿಸಿದರು.
ʼಆದರೆ "ಶಾಶ್ವತ ಪರಿಣಾಮಗಳನ್ನು" ಹೊಂದಿರುತ್ತದೆ ಎಂದು ಇರಾನಿನ ನಾಯಕರು ಎಚ್ಚರಿಸಿದ್ದಾರೆ ಮತ್ತು ಯುಎನ್ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯುವಂತೆ ಕೋರಿದ್ದಾರೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
 ಹಗೆತನ ಉಲ್ಬಣ:
ಇಸ್ರೇಲ್-ಇರಾನ್ ಸಂಘರ್ಷವು ಎರಡನೇ ವಾರಕ್ಕೆ ಪ್ರವೇಶಿಸಿದೆ
ಎರಡೂ ಕಡೆಯವರು ಇನ್ನೂ ದಾಳಿ ನಡೆಸುತ್ತಿದ್ದಾರೆ. ಅಮೆರಿಕದ ದಾಳಿಯ ನಂತರಇಸ್ರೇಲ್ ಸೇನೆಯು ಇರಾನ್ ದೇಶದ ಕಡೆಗೆ ಹೊಸ ಕ್ಷಿಪಣಿಗಳ ದಂಡನ್ನು ಹಾರಿಸಿದೆ ಎಂದು ಹೇಳಿದೆ. ಇಸ್ರೇಲ್ ವಾಯುಪಡೆಯು ಪಶ್ಚಿಮ ಇರಾನ್ ಮೇಲೆ ದಾಳಿ ಮಾಡಿದೆ ಎಂದು ಸೇನೆ ಹೇಳಿದೆ.
ವಾಯುಪಡೆಯು "ಪಶ್ಚಿಮ ಇರಾನ್‌ನಲ್ಲಿ ಮಿಲಿಟರಿ ಗುರಿಗಳ ಮೇಲೆ ಸರಣಿ ದಾಳಿಗಳನ್ನು ಪ್ರಾರಂಭಿಸಿದೆ" ಎಂದು ಇಸ್ರೇಲ್‌ ರಕ್ಷಣಾ ಪಡೆಗಳು ಹೇಳಿಕೆಯಲ್ಲಿ ತಿಳಿಸಿವೆ. ಇರಾನಿನ ಪರಮಾಣು ಸವಲತ್ತುಗಳ ಮೇಲೆ ಅಮೆರಿಕ ದಾಳಿ ಮಾಡಿದ ನಂತರ  ಈ ದಾಳಿ ಮೊದಲನೆಯದು ಎಂದು ಹೇಳಿಕೆ ತಿಳಿಸಿದೆ.
"ಹೆಚ್ಚುವರಿಯಾಗಿಇಂದು ಬೆಳಿಗ್ಗೆಐಎಎಫ್ ಇಸ್ರೇಲ್ ಪ್ರದೇಶದ ಕಡೆಗೆ ಉಡಾಯಿಸಲು ಸಿದ್ಧವಾಗಿರುವ ಕ್ಷಿಪಣಿ ಉಡಾವಕಗಳನ್ನು ಮತ್ತು ಇರಾನಿನ ಸಶಸ್ತ್ರ ಪಡೆಗಳ ಸೈನಿಕರನ್ನು ಹೊಡೆದುರುಳಿಸಿತು ಎಂದು ಹೇಳಿಕೆ ತಿಳಿಸಿದೆ.
ವಿಕಿರಣ ಮಟ್ಟ ಹೆಚ್ಚಿಲ್ಲ
ಈ ಮಧ್ಯೆ, ಇರಾನ್ ಪರಮಾಣು ತಾಣಗಳಲ್ಲಿ ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ವಿಶ್ವಸಂಸ್ಥೆಯ ಕಾವಲು ಸಂಸ್ಥೆ ಹೇಳಿದೆ.
ಯುಎಸ್ ದಾಳಿಗಳಲ್ಲಿ ಗುರಿಯಾಗಿಸಿಕೊಂಡ ಮೂರು ಇರಾನಿನ ಪರಮಾಣು ತಾಣಗಳಲ್ಲಿ ಆಫ್-ಸೈಟ್ ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳ ವರದಿಯಾಗಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಭಾನುವಾರ ಹೇಳಿದೆ.
ಇರಾನ್‌ನ ಮೂರು ಪರಮಾಣು ತಾಣಗಳ ಮೇಲಿನ ದಾಳಿಯ ನಂತರ - ಫೋರ್ಡೋ ಸೇರಿದಂತೆ - ಈ ಸಮಯದಲ್ಲಿ ಆಫ್-ಸೈಟ್ ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳ ವರದಿಯಾಗಿಲ್ಲ ಎಂದು IAEA ಖಚಿತಪಡಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾದಂತೆ IAEA ಇರಾನ್‌ನ ಪರಿಸ್ಥಿತಿಯ ಕುರಿತು ಹೆಚ್ಚಿನ ಮೌಲ್ಯಮಾಪನಗಳನ್ನು ಒದಗಿಸುತ್ತದೆ, ”ಎಂದು ಅದು ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
ಅಮೆರಿಕ ನಂತರ IAEA ಯ ಮೊದಲ ಸಾರ್ವಜನಿಕ ಹೇಳಿಕೆ ಇದು.

ಇವುಗಳನ್ನೂ ಓದಿರಿ:

ಅಣುಸ್ಥಾವರ ಗುರಿ: ಇರಾನ್‌ ಮೇಲೆ ಇಸ್ರೇಲ್‌ ದಾಳಿ

ಇರಾನಿನ ಪರಮಾಣು ತಾಣಗಳ ಮೇಲೆ ಇಸ್ರೇಲ್‌ ಎರಗಿದ್ದು ಏಕೆ?

ಇರಾನಿನಿಂದ ಇಸ್ರೇಲ್‌ಅಮೆರಿಕಕ್ಕೆ ಸಂಧಾನ ಸಂದೇಶ?

PARYAYA: ಇಸ್ರೇಲ್-‌ ಇರಾನ್ ಸಮರಾಂಗಣಕ್ಕೆ ಅಮೆರಿಕದ ರಂಗಪ್ರವೇಶ:   ಇಸ್ರೇಲ್-‌ ಇರಾನ್ ಸಮರಾಂಗಣಕ್ಕೆ ಅಮೆರಿಕದ ರಂಗಪ್ರವೇಶ ನ ವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ಸಂಘರ್ಷ ತೀವ್ರಗೊಳ್ಳುತ್ತಿರುವ ಮಧ್ಯೆ ಅಮೆರಿಕವು ೨೦೨೫ ಜೂನ್‌ ೨೨ರ ಭಾನು...

Saturday, March 15, 2025

PARYAYA: ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮು...

 ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

ವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ನಿಖರವಾದ ವೈಮಾನಿಕ ದಾಳಿಯಲ್ಲಿ "ಅಬು ಖದೀಜಾ" ಎಂಬ ಅಡ್ಡ ಹೆಸರಿನ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಹತನಾಗಿದ್ದಾನೆ ಎಂದು ಅಮೆರಿಕ ೨೦೨೫ ಮಾರ್ಚ್‌ ದಿನಾಂಕ ೧೫ರಂದು ಘೋಷಿಸಿದೆ.

ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಮತ್ತು ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡರ್ ಸ್ಥಾನವನ್ನು ಹೊಂದಿದ್ದ. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಭಯೋತ್ಪಾದಕ ಕೂಡಾ ಹತನಾಗಿದ್ದಾನೆ.

ಯುಎಸ್ ಮಿಲಿಟರಿ ಅಧಿಕಾರಿಗಳ ಪ್ರಕಾರಅಬು ಖದೀಜಾ ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಸಾಗಣೆಯೋಜನೆ ಮತ್ತು ಹಣಕಾಸು ನಿರ್ವಹಣೆಯ ಮೇಲ್ವಿಚಾರಣೆ ಮಾಡುತ್ತಿದ್ದ.

ವಾಯುದಾಳಿಯ ನಂತರಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕಿ ಪಡೆಗಳು ಸ್ಥಳಕ್ಕೆ ಆಗಮಿಸಿ ಅಬು ಖದೀಜಾ ಮತ್ತು ಇನ್ನೊಬ್ಬ ಐಸಿಸ್ ಹೋರಾಟಗಾರನ ಸಾವನ್ನು ದೃಢಪಡಿಸಿದವು. CENTCOM ಪ್ರಕಾರರು ಕೂಡಾ ಸ್ಫೋಟಗೊಳ್ಳದ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದುದು ಕಂಡುಬಂದಿದೆ ಮತ್ತು ಅವರ ಬಳಿ ಬಹುವಿಧದ ಶಸ್ತ್ರಾಸ್ತ್ರಗಳಿದ್ದವು. ಅಬು ಖದೀಜಾನ ಗುರುತನ್ನು ಹಿಂದಿನ ದಾಳಿ ಕಾಲದಲ್ಲಿ ಸೆರೆ ಹಿಡಿದ ಸಂದರ್ಭದಲ್ಲಿ ಸಂಗ್ರಹಿಸಲಾದ ಮಾದರಿಗಳನ್ನು ಬಳಸಿಡಿಎನ್‌ಎ ಹೊಂದಾಣಿಕೆಯ ಮೂಲಕ ದೃಢಪಡಿಸಲಾಯಿತು.

"ಇಡೀ ಜಾಗತಿಕ ಐಸಿಸ್ ಸಂಘಟನೆಯಲ್ಲಿ ಅಬು ಖದೀಜಾ ಪ್ರಮುಖ ಐಸಿಸ್ ಸದಸ್ಯರಲ್ಲಿ ಒಬ್ಬನಾಗಿದ್ದ. ನಮ್ಮ ತಾಯ್ನಾಡು ಪ್ರದೇಶ ಮತ್ತು ಅದರಾಚೆಗಿನ  ಅಮೆರಿಕದ ಮಿತ್ರರು ಹಾಗೂ ಪಾಲುದಾರ ಸಿಬ್ಬಂದಿಗೆ ಬೆದರಿಕೆ ಹಾಕುವ ಭಯೋತ್ಪಾದಕರ ಹತ್ಯೆ, ಅವರ ಸಂಘಟನೆಗಳ ನಾಶವನ್ನು ನಾವು ಮುಂದುವರಿಸುತ್ತೇವೆ" ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.

ಸೆಂಟ್ರಲ್‌ ಕಮಾಂಡ್‌ ಸೆರೆ ಹಿಡಿದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

PARYAYA: ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮು...:   ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ , ಐಸಿಸ್ ಮುಖ್ಯಸ್ಥ ಖತಂ ನ ವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ , ಇರಾಕ್‌ನ ಅಲ್ ಅನ...