Showing posts with label floods. Show all posts
Showing posts with label floods. Show all posts

Monday, September 1, 2025

PARYAYA: ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ

 ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ

ಹಿಮಾಚಲ ಪ್ರದೇಶದ ಚಂಬಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಚಿತ್ರಿಸಿದ ವಿಡಿಯೋ ಪೋಸ್ಟ್‌ ಒಂದು ಸಾಮಾಜಿಕ ಜಾಲಗಳಲ್ಲಿ ವೈರಲ್‌ ಆಗಿದೆ. @GoHimachal_ ಎಂಬ X (ಟ್ವಿಟರ್) ಎಂಬ ಈ ಟ್ವೀಟ್‌ ಸಂದೇಶದಲ್ಲಿ ಹಿಮಾಚಲ ಪ್ರದೇಶದ ಚಂಬಾದ ರಾವಿ ನದಿಯು ಮರದ ದಿಮ್ಮಿಗಳಿಂದ ತುಂಬಿಹೋಗಿರುವ ಪುಟ್ಟ ವಿಡಿಯೋ ಇದೆ.

ನದಿಯಲ್ಲಿ ಮರದ ದಿಮ್ಮಿಗಳ ಪ್ರವಾಹಕ್ಕೆ ಅರಣ್ಯ ಮಾಫಿಯಾಗಳ ಅಕ್ರಮ ಮರ ಕಡಿಯುವಿಕೆಯ ಕಾರಣ. ಇಂತಹ ಕೃತ್ಯಗಳು ಪ್ರವಾಹದ ವಿನಾಶಕಾರಿ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಪರಿಸರ ಹಾನಿ ಮತ್ತು ನೈಸರ್ಗಿಕ ವಿಕೋಪಗಳ ನಡುವಿನ ಸಂಬಂಧವನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಅಕ್ರಮ ಮರ ಕಡಿಯುವಿಕೆಯು ಕೇವಲ ಕಾಡು ನಾಶ ಮಾಡುವುದಲ್ಲ, ನೆಲದಲ್ಲಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರಿಂದ ಪ್ರವಾಹದ ಅಪಾಯ ಹೆಚ್ಚುತ್ತದೆ. ನದಿಯಲ್ಲಿ ಕಂಡುಬಂದ ಅಧಿಕ ಪ್ರಮಾಣದ ಮರದ ದಿಮ್ಮಿಗಳು ಭಾರತದಲ್ಲಿ ನಡೆಯುತ್ತಿರುವ ಅಕ್ರಮ ಅರಣ್ಯ ನಾಶಕ್ಕೆ ಪುರಾವೆಯಾಗಿದೆ. 1988ರಿಂದ ಮರ ಕಡಿಯುವಿಕೆಗೆ ನಿಷೇಧವಿದ್ದರೂ, ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.


ವರ್ಲ್ಡ್ ರೈನ್‌ಫಾರೆಸ್ಟ್ ಮೂವ್‌ಮೆಂಟ್‌ನಂತಹ ಅಧ್ಯಯನಗಳು
, ಭಾರತದ ಅರಣ್ಯಗಳು ನಿರಂತರವಾಗಿ ತಮ್ಮ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತಿವೆ ಎಂದು ಸೂಚಿಸುತ್ತವೆ. ಭ್ರಷ್ಟಾಚಾರ ಮತ್ತು ಕಾನೂನು ಜಾರಿ ಕೊರತೆಯಿಂದಾಗಿ ಸಂಘಟಿತ ಅಪರಾಧ ಸಿಂಡಿಕೇಟ್‌ಗಳು ಅಕ್ರಮ ಮರ ಹತ್ಯೆಯಲ್ಲಿ ತೊಡಗಿಕೊಂಡಿವೆ. (ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ)

ಮರದ ದಿಮ್ಮಿಗಳ ಪ್ರವಾಹದ ಈ ಘಟನೆಯು ಹಿಮಾಚಲ ಪ್ರದೇಶದಲ್ಲಿ ಮುಂಗಾರು ಸಂಬಂಧಿತ ದುರಂತಗಳ ಹೆಚ್ಚಳದ ಒಂದು ಭಾಗ. ಹವಾಮಾನ ಬದಲಾವಣೆಯಿಂದಾಗಿ ಅನಿಶ್ಚಿತ ಮಳೆಯ ಜೊತೆಗೆ ಅಕ್ರಮ ಮರ ಮಾರಣದಂತಹ ಮಾನವ ಚಟುವಟಿಕೆಗಳು ವಿಪರೀತ ಪ್ರವಾಹಕ್ಕೆ ಕಾರಣವಾಗುತ್ತಿವೆ.

2025ರ ಪ್ರವಾಹದಲ್ಲಿ ಸಾವು ನೋವಿನ ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ಅರಣ್ಯಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇಡುವುದು ಮತ್ತು ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಮೇಲಿನ ಮಾಧ್ಯಮ ಮತ್ತು ಸಾರ್ವಜನಿಕ ಚರ್ಚೆಗಳು ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಟೀಕಿಸಿವೆ.


ಹಿಮಾಚಲ ಪ್ರದೇಶದ ರಾವಿ ನದಿಯ ಮರದಿಮ್ಮಿ ಪ್ರವಾಹದ ವಿಡಿಯೋಕ್ಕೆ ಪ್ರತಿಕ್ರಿಯೆಯಾಗಿ ʼಮೊದಲು ಕುಲ್ಲು, ಈಗ ಚಂಬಾ!ʼ ಎಂಬುದಾಗಿ ಎಂಬುದಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ಕುಲ್ಲು ಮನಾಲಿಯಲ್ಲಿ ಬಿಯಾಸ್ ನದಿ ಪ್ರವಾಹದಲ್ಲಿ ಕಾಣಿಸಿಕೊಂಡ ಮರಗಳ ದಿಮ್ಮಿಗಳ ಪ್ರವಾಹದ ವಿಡಿಯೋ ಹಾಕಿದ್ದರು.

ಈ ಘಟನೆ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆದರೆ ನಾವು ಇನ್ನೆಷ್ಟು ದಿನ ಈ ವಿಷಯವನ್ನು ನಿರ್ಲಕ್ಷಿಸುತ್ತೇವೆ? ದುರಾಸೆಯೇ ಹಿಮಾಲಯದ ಪರಿಸರ ಹಾನಿಗೆ ಕಾರಣ ಮತ್ತು ಪ್ರತಿ ವರ್ಷ ಅಮಾಯಕರು ಇದರ ಬೆಲೆಯನ್ನು ತೆರುತ್ತಿದ್ದಾರೆ ಎಂಬ ಪ್ರತಿಕ್ರಿಯೆಗಳು ಟ್ವೀಟಿಗರಿಂದ ಕೇಳಿ ಬಂದಿದೆ.

ಇದು ಕೇವಲ ಹಿಮಾಚಲದ ಸಮಸ್ಯೆಯಷ್ಟೇ ಅಲ್ಲ. ಕರ್ನಾಟಕದಲ್ಲೂ ಮರಗಳ ಮಾರಣ ಹೋಮ ಪರಿಣಾಮವಾಗಿ ಮುಂಗಾರು ಮಳೆಯ ಹೊತ್ತಿನಲ್ಲಿ ಭೂಕುಸಿತಗಳು ಹೆಚ್ಚುತ್ತಿರುವ ವರದಿಗಳು ಕಳೆದ ಹಲವಾರು ವರ್ಷಗಳಿಂದ ಬರುತ್ತಲೇ ಇವೆ.

ಆದರೆ ಮರ ಮಾರಣಹೋಮ ನಿಂತಿದೆಯೇ?

-ನೆತ್ರಕೆರೆ ಉದಯಶಂಕರ

PARYAYA: ಹಿಮಾಚಲ ʼದಿಮ್ಮಿ ಪ್ರವಾಹʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ:   ಹಿಮಾಚಲ ʼ ದಿಮ್ಮಿ ಪ್ರವಾಹ ʼ ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ ಹಿ ಮಾಚಲ ಪ್ರದೇಶದ ಚಂಬಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಚಿತ್ರಿಸಿ ದ ವಿಡಿಯೋ ಪೋಸ್ಟ್‌ ಒಂದು ಸಾಮಾಜಿಕ...

Monday, August 12, 2019

ಕುಂಭದ್ರೋಣ ಮಳೆ ಪ್ರವಾಹಕ್ಕೆ ಕೊಚ್ಚಿಹೋದ ಮನೆ

ಕುಂಭದ್ರೋಣ ಮಳೆ ಪ್ರವಾಹಕ್ಕೆ ಕೊಚ್ಚಿಹೋದ ಮನೆ

ನವದೆಹಲಿ: ದಕ್ಷಿಣ ಭಾರತವನ್ನು ನಲುಗಿಸಿರುವ ಕುಂಭದ್ರೋಣ ಮಳೆ ಇದೀಗ ಉತ್ತರಾಖಂಡಕ್ಕೂ ಕಾಲಿರಿಸಿದ್ದು, ಚಮೋಲಿ ಜಿಲ್ಲೆಯಲ್ಲಿ 2019 ಆಗಸ್ಟ್ 12ರ ಸೋಮವಾರ ಬೆಳಗ್ಗೆ ಎರಡು ಮನೆಗಳನ್ನು ಬಲಿತೆಗೆದುಕೊಂಡಿದೆ.

ಮೇಘಸ್ಫೋಟದೊಂದಿಗೆ ಸುರಿದ ಮಳೆಗೆ ಉಂಟಾದ ದಿಢೀರ್ ಪ್ರವಾಹದಲ್ಲಿ ಮನೆ ಕುಸಿದು ಕೊಚ್ಚಿ ಹೋದಾಗ ಒಬ್ಬ ಮಹಿಳೆ ಮತ್ತು ಒಂಬತ್ತು ವರ್ಷದ  ಆಕೆಯ ಪುತ್ರಿ ಸಾವನ್ನಪ್ಪಿದರು ಮತ್ತು ಇನ್ನೊಬ್ಬ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿಹೋದ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಮನೆ ಕುಸಿದು ಕೊಚ್ಚಿ ಹೋದ ಪರಿಣಾಮವಾಗಿ ಸಾವನ್ನಪ್ಪಿದ ಮಹಿಳೆಯನ್ನು ರೂಪಾದೇವಿ (35) ಎಂಬುದಾಗಿ ಗುರುತಿಸಲಾಗಿದೆ. ಸೋಮವಾರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿತು.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಲಂಖಿ ಗ್ರಾಮದ ವಿಕಾಸ್ ಖಂಡ್ ಘಟ್ಟದಲ್ಲಿ ಪ್ರವಾಹಕ್ಕೆ ತುತ್ತಾಗಿ ಮನೆ ಕೊಚ್ಚಿ ಹೋಗುತ್ತಿರುವ  ಈ ವಿಡಿಯೋ ಇದೀಗ ವೈರಲ್ ಆಗಿದೆ.

ಸ್ಥಳೀಯ ನಿವಾಸಿಗಳು ಮತ್ತು  ವಿಕೋಪ ಸ್ಪಂದನಾ ಪಡೆ (ಎಸ್ ಡಿಆರ್ ಎಫ್) ತಂಡ ಸ್ಥಳಕ್ಕೆ ಧಾವಿಸಿದ್ದು, ಶೋಧ, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ವರದಿಗಳು ಹೇಳಿವೆ.

ವಿಡಿಯೋ ವೀಕ್ಷಿಸಲು ಕೆಳಗಿನ ಕೊಂಡಿ ಚಿತ್ರ  ಕ್ಲಿಕ್ ಮಾಡಿರಿ: