ನಾನು ಮೆಚ್ಚಿದ ವಾಟ್ಸಪ್

Sunday, April 15, 2018

ಬಾಲ್ಯದ ನೆನಪು: ಹೀಗೊಂದು ಮೆಲುಕು !


ಬಾಲ್ಯದ ನೆನಪು: ಹೀಗೊಂದು ಮೆಲುಕು !

ಎಪ್ರಿಲ್-ಮೇ ಬಂದರೆ ಸಾಕು, ಮಕ್ಕಳಿಗೆಲ್ಲ ಶಾಲೆಗೆ ರಜೆ. ರಜೆ ಕಳೆಯಲು ಏನು ಮಾಡಬೇಕು ಎಂಬುದು ಹಿರಿಯರಿಗೆಲ್ಲ ಚಿಂತೆ. ಕೆಲವು ದಶಕಗಳ ಹಿಂದೆ  ಹೇಗಿತ್ತು? ಶ್ರೀಕೃಷ್ಣ ಶಾಸ್ತ್ರಿಗಳು ನೆನಪಿನ ಬುತ್ತಿಯನ್ನು ಹೀಗೆ ಬಿಚ್ಚಿಟ್ಟಿದ್ದಾರೆ ನೋಡಿ: (ಕವನ  ಹವ್ಯಕ ಭಾಷೆಯಲ್ಲಿದೆ)

ಇಡೀ ತೋಟಂದ ಅಡಕ್ಕೆ ಹೆರ್ಕೆಕ್ಕು ಬೇಗ
ನಡಕೊಂಡೆ ಶಾಲೆಗೆ ಹೋಯೆಕ್ಕು ಆಗ !
ಚೀಲ,ಬುತ್ತಿ ,ಕೊಡೆ ಎಲ್ಲ ಸೇರಿ
ಎನ್ನಷ್ಟೇ ತೂಕ ಹೊತ್ತೊಂಡು ದಾರಿ !!

ಚಿಮಿಣಿ ದೀಪಲ್ಲೇ ಎಂಗೊ ಓದಿದ್ದು ಇರುಳು
ತಲೆಕಸವು ಚಿರಿಚಿರಿನೆ ಹೊತ್ತಿದ್ದು ಸುರುಳು !
ಕರೆಂಟೇ ಬೈಂದಿಲ್ಲೆ ಊರಿಂಗೇ ಆಗ
ಹೇಳಿದರೆ ಮಕ್ಕೊ ನಂಬುತ್ತವೊ ಈಗ?!!

ಐವತ್ತು ಮಾರ್ಕ್ ಸಿಕ್ಕಿದರೆ ಅರಸ !
ನಲ್ವತ್ತೇ ಸಿಕ್ಕಿದರೂ ಆನಲ್ಲ ಬುರುಸ !!
ಪಾಸಾದ್ರೂ ಸಾಕು! ಎಂತೆಂಥ ಹರುಷ !
ರಜೆಗಾಗಿ ಕಾವದು ನೂಕುತ್ತ ವರುಷ !!

ಮಗುವಣ್ಣ ,ಚಂಕಣ್ಣ,ಸುಬ್ಬಣ್ಣ ಬಕ್ಕು !
ಮಾಚಕ್ಕ ,ಶೀಲಕ್ಕ ರಜೆ ಬಂದ್ರೆ ಇಕ್ಕು !!
ಇಡಿದಿನ ಉಯ್ಯಾಲೆ,ಆಟಂಗೊ ಸೊಕ್ಕು !
ಪಾಯಸವ ತಿಂಬಾಗ ಬಟ್ಲನ್ನೇ ನಕ್ಕು !!

ತಮ್ಮಂದ್ರು ,ಅಕ್ಕಂದ್ರು ಒಟ್ಟಿಂಗೆ ಹಾರಿ
ಚೆನ್ನೆಮಣೆ,ಇಸ್ಫೇಟ್ ಬೈಕ್ಕೊಂಡು ಭಾರೀ !
ಕತ್ತೆಯಾದವ ನಾಚಿಗೆಲಿ ಕೂಗ್ಯೊಂಡು ದೂರಿ
ಹೊಟ್ಟೆಬೇನೆ ಹೇಳಿಕ್ಕಿ ಹೊಕಪ್ಪ ಜಾರಿ !!

ಪೇಪರಿನ ಬಕ್ಕಿಲಿ ಕಟ್ಟಿದರೆ ಚೆಂಡು !
ಆಡುವುದು ಅಪ್ಪ ಮನುಗಿದರೆ ಉಂಡು !!
ಕೊತ್ತಳಿಂಗೆಯ ಕೆತ್ತಿ ಮಾಡಿದ್ದು ಬ್ಯಾಟ್ !
ಮನೆಲಿಪ್ಪ ಮುಟ್ಟಾಳೇ ಹೆಲ್ಮೆಟ್_ ಹ್ಯಾಟ್ !!

ಸೋಗೆಲಿ ಕೂರುತ್ತೆ ,ಎಳೆ ನೀನು ತಮ್ಮಾ
ಕುತ್ತಕಂಡೆ ಮೊಗಚಿದರೂ ಖುಷಿಯೆಂತ ನಮ್ಮ !
ಮಣ್ಣಿನ ರಾಶಿಯೇ ಜಾರ್ಬಂಡಿ _ಕರ್ಮ
ಚಡ್ಡಿ ಹರಿಯೆಕ್ಕು ,ಮತ್ತೆ ಕಾಣೆಕ್ಕು ಅಮ್ಮ !!

ಹೊಳೆಮಾವು,ನೆಕ್ಕರೆಗೆ ಕಲ್ಲಿಡ್ಕಿ ತುಂಬಾ
ಸಿಕ್ಕಿದರೆ ಅಲ್ಲಲ್ಲೇ ವಿಲೇವಾರಿ_ತಿಂಬೊ !
ಪೇರಳೆಯ ಮರಹತ್ತಿ ಎಕ್ಕಿದರೆ ಕೊಯಿದು
ಸಿಕ್ಕದ್ರೆ ಪದುರಾಡು ಮಂಗಂಗೆ ಬೈದು !!

ಮಾಲಿಂಗ,ಚನಿಯಂದೆ ಐತ್ತಪ್ಪ ಬಕ್ಕು !
ಕಾವೇರಿ,ಕೊರಗಮ್ಮ,ಹೊನ್ನಮ್ಮ ಇಕ್ಕು !!
ಅಮ್ಮಂಗೆ ಕೆಲಸಕ್ಕೆ ಬೇಕಕ್ಕು _"ಅಕ್ಕು" !
ಕುಕ್ಕಪ್ಪ , "ನಂಕಿನಿ ಕೊಯ್ಯೋಡು ಕುಕ್ಕು" !!

ಮಾಲಿಂಗ ಮರಹತ್ತಿ ತೆಂಗಿಂದು ಮೇಲೆ
ನೀರಿಂಗೆ ಕೊಯಿದ್ಹಾಕಿ " ಅಣ್ಣೇರೆ ತೂಲೆ" !
ತೋಡಿಲಿ ಓಡುತ್ತಾ ಹೆರ್ಕೆಕ್ಕು ತೆಂಗು
ನೀರಲ್ಲೂ ಖುಷಿಯಿತ್ತು , ಎಂತೆಂಥ ರಂಗು !!

ಏಳೆಂಟು ಹಲಸು ಹಪ್ಪಳಕೆ ಬಂತು !
ಮಕ್ಕೊಲ್ಲಾ ಆಯೆಕ್ಕು ಒಟ್ಟಿಂಗೆ ಕುಂತು !!
ಆಗಾಗ್ಗೆ ರಾಶಿಂದ ಒಂದೊಂದು ತಿಂತ !
ತೋರದವ ಹಪ್ಪಳವ ಒತ್ತೆಕ್ಕು ಎಂತ !!

ಅಡಕ್ಕಗೆ ಕೈ ಹಾಕಿ ಮಕ್ಕೊಲ್ಲಾ ಸೇರಿ
ಸಾಲಾಗಿ ಕೂರೆಕ್ಕು ಚೆಂದಕ್ಕೆ ಭಾರೀ !
ನೂಕುತ್ತ ಹಿಂದ್ಹೆಂದೆ ಹೋಯೆಕ್ಕು ಜಾರಿ
ಚೆಂದಕ್ಕೆ ಹಾಕದ್ರೆ ತಪ್ಪುತ್ತು ದಾರಿ !!

ನೀರ್ಚೇಪು ಆವಾಗ ಚಿಳ್ಳಿಲೇ ಬಗ್ಗಿ
ಉರುಹೊಡೆದು ಕಲಿಯೆಕ್ಕು ಒಟ್ಟಿಂಗೆ ಮಗ್ಗಿ !
ಜೋಡೆಲ್ಲಿ? ನಡೆಯೆಕ್ಕು ಬರೆಕಾಲೇ ಎಲ್ಲ
ನಾಚಿಗೆ ,ಛೀಮುಳ್ಳು ಕಂತುತ್ತು ಮೆಲ್ಲ !!

ಬೀಂಪ್ರುಳ್ಳಿ ಮರಹತ್ತಿ ಐದಾರು ತಿಂಬೆ !
ತುಪ್ಪಿಕ್ಕಿ ಗ್ರಾಚಾರ ,ಹುಳಿಪಿಂಡ ಎಂಬೆ !!
ಬೀಜದ ಮರಹತ್ತಿ ಕುಲುಕುಸುವೆ ಚೆಂದ !
ದಡಬಡನೆ ಹಣ್ಣುಗೊ ಬೀಳುದೇ ಅಂದ !!

ಪುಳಿಂಕೊಟೆ ,ಸಾಂತಾಣಿ ,ಹಪ್ಪಳವೇ ಸ್ಟೋಕ್ !
ಹೊತ್ತೋಪಗಣ ಕಾಫಿಗೆ ಬೇರೆಂತ ಬೇಕು ?
ಬೇಕಾದ್ರೆ ಅಟ್ಟಲ್ಲಿ ಮಂಡಗೆಲಿ ಬೆಲ್ಲ !
ಅಪ್ಪಂಗೆ ಕಾಣದ್ದೆ ಹತ್ತೆಕ್ಕು ಮೆಲ್ಲ !!

ಟೀವಿ ಮೊಬೈಲ್ ಇತ್ತಿಲ್ಲೆ ಆಗ
ಒಂಬತ್ತು ಗಂಟೆಗೇ ಮನುಗೆಕ್ಕು ಬೇಗ !
ಬಾಲ್ಯದ ನೆಂಪುಗಳ ಮರೆವದು ಹೇಂಗೆ?
ಬರಕ್ಕೊಂಡೇ ಹೋದರೆ ಉದ್ದಕ್ಕು ಹೀಂಗೇ!!

© ಶ್ರೀಕೃಷ್ಣ ಶಾಸ್ತ್ರಿ
ಮಾಹಿತಿ: ನೆತ್ರಕೆರೆ ಮಠ ವಾಟ್ಸಪ್ ಗ್ರೂಪ್
ಚಿತ್ರಕೃಪೆ: ಕನ್ನಡ ಜಾನಪದ ಬ್ಲಾಗ್ ಸ್ಪಾಟ್.ಕಾಮ್

No comments:

Post a Comment