ನಾನು ಮೆಚ್ಚಿದ ವಾಟ್ಸಪ್

Thursday, April 30, 2020

ಇಂದಿನ ಇತಿಹಾಸ History Today ಏಪ್ರಿಲ್ 30

2020: ಮುಂಬೈ:  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ, ’ಒರಿಜಿನಲ್ ಚಾಕೋಲೇಟ್ ಬಾಯ್ ರಿಷಿ ಕಪೂರ್ (೬೭) ಅವರು   2020  ಏಪ್ರಿಲ್  30ರ  ಗುರುವಾರ ಬೆಳಗ್ಗೆ ಮುಂಬೈ  ಆಸ್ಪತ್ರೆಯಲ್ಲಿ ನಿಧನರಾದರು೨೦೧೮ರಲ್ಲಿ  ಕ್ಯಾನ್ಸರ್  ಬಾಧೆಗೆ  ಗುರಿಯಾದ  ರಿಷಿ  ಕಪೂರ್ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆದಿದ್ದರುಬುಧವಾರ ಉಸಿರಾಟದ ಸಮಸ್ಯೆ ಕಂಡು ಬಂದಿದ್ದರಿಂದ  ಮುಂಬೈಯ ಸರ್ ಹೆಚ್. ಎನ್. ರಿಲಯನ್ಸ್ ಫೌಂಡೇಶನ್  ಆಸ್ಪತ್ರೆಗೆ ದಾಖಲಾಗಿದ್ದರುರಿಷಿ ಕಪೂರ್ ನಿಧನದ ಸುದ್ದಿಯನ್ನು ಅವರ ಸಹೋದರ ರಣಧೀರ್ ಕಪೂರ್ ಖಚಿತಪಡಿಸಿದರುಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖ ಮಾಸುವ ಮೊದಲೇ ಭಾರತೀಯ ಚಿತ್ರರಂಗದ ಮತ್ತೊಬ್ಬ ದಿಗ್ಗಜ ರಿಷಿ ಕಪೂರ್ ಇಂದು ನಮ್ಮನಗಲಿದರು.  ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಾಸಾದ ಬಳಿಕ, ಕಳೆದ ಫೆಬ್ರುವರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ರಿಷಿ ಕಪೂರ್ ಎರಡು ಭಾರೀ  ಆಸ್ಪತ್ರೆಗೆ ದಾಖಲಾಗಿದ್ದರು. ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡುವುದಾಗಿಯೂ ರಿಷಿ ಕಪೂರ್ ಇತ್ತೀಚೆಗಷ್ಟೇ ಘೋಷಣೆ ಕೂಡ ಮಾಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ರಿಷಿ ಕಪೂರ್ ಟ್ವಿಟರ್ ಖಾತೆಯಿಂದ ಏಪ್ರಿಲ್ ೨ರ ನಂತರ ಯಾವುದೇ ಟ್ವೀಟ್ ಪ್ರಕಟವಾಗಿರಲಿಲ್ಲ. ಖ್ಯಾತ ನಟ ರಾಜ್ ಕಪೂರ್ ಹಾಗೂ ಕೃಷ್ಣ ರಾಜ್ ಕಪೂರ್ ಪುತ್ರನಾದ ರಿಷಿ ಕಪೂರ್, ‘ಮೇರಾ ನಾಮ್ ಜೋಕರ್’ ಮೂಲಕ ೧೯೭೦ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ಅವರಿಗೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)


2020:  ನವದೆಹಲಿ: ಎಲ್ಲ ಹೊಸ ಸ್ಮಾರ್ಟ್ ಪೋನ್ಗಳನ್ನು ನೋಂದಾಯಿಸಲು ಇನ್ನು ಮುಂದೆ ಅವುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಸರ್ಕಾರಿ ಮೂಲಗಳು   2020 ಏಪ್ರಿಲ್ 30ರ ಗುರುವಾರ ತಿಳಿಸಿದವು.  ಫೋನ್ ಪ್ರತಿಷ್ಠಾಪನೆ ಮತ್ತು ಅದನ್ನು ಬಳಸುವ ಮೊದಲು ಆರೋಗ್ಯ ಸೇತು ಆಪ್ನ್ನು ಅದರಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಲಿದೆ ಎಂದು ಮೂಲಗಳು ಹೇಳಿದವು.  ದಿಗ್ಬಂಧನ (ಲಾಕ್ ಡೌನ್) ಬಳಿಕ ಭಾರತ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲ ಸ್ಮಾರ್ಟ್ ಫೋನ್ಗಳಲ್ಲೂ  ಆರೋಗ್ಯ ಸೇತು ಅಪ್ಲಿಕೇಷನ್ ಸೇರ್ಪಡೆ ಮಾಡುವುದು ಮಾತ್ರವೇ ಅಲ್ಲ, ಖರೀದಿಸಿದ ಎಲ್ಲರೂ ಬಳಸುವ ಮುನ್ನ ಆಪ್ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳುವುದನ್ನೂ ಖಚಿತಪಡಿಸಿಕೊಳ್ಳುವುದನ್ನೂ ಕಡ್ಡಾಯಗೊಳಿಸಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿದವು.   ಎಲ್ಲ ಹೊಸ ಫೋನ್ ಉಪಕರಣಗಳಲ್ಲೂ ಯಾರೂ ತಪ್ಪಿಸಿಕೊಳ್ಳದಂತೆ ಆರೋಗ್ಯಸೇತು ಆಪ್ ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳೂವ ಹೊಣೆಗಾರಿಕೆಯನ್ನು ನೋಡಲ್ ಸಂಸ್ಥೆಗಳಿಗೆ ವಹಿಸುವ ನಿರ್ಧಾರಕ್ಕೂ ಸರ್ಕಾರ ಬಂದಿದೆ. ಇದರಿಂದ ಆರೋಗ್ಯ ಸೇತು ಅಪ್ಲಿಕೇಷನ್ ಭಾರತದಲ್ಲಿ ನಿರ್ಮಾಣಗೊಳ್ಳುವ ಹಾಗೂ ಮಾರಾಟವಾಗುವ ಎಲ್ಲ ಹೊಸ ಸ್ಮಾರ್ಟ್ ಫೋನುಗಳಲ್ಲೂ ಅಂತರ್ಗತ ವೈಶಿಷ್ಠ್ಯವಾಗಲಿದೆ. (ಇನ್ ಬಿಲ್ಟ್ ಫೀಚರ್ ).  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020: ನವದೆಹಲಿ: ಕೋರೋನಾವೈರಸ್ ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮವಾಗಿ ಇಂಧನ ಬೇಡಿಕೆ ಕುಗ್ಗಿರುವ ಹಿನ್ನೆಲೆಯಲ್ಲಿ ತನ್ನ ಹೈಡ್ರೋ ಕಾರ್ಬನ್ ವಿಭಾಗದ ಕೆಲವು ನೌಕರರಿಗೆ ಶೇಕಡಾ ೧೦ರಷ್ಟು ವೇತನ ಕಡಿತಗೊಳಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಡ್   2020 ಏಪ್ರಿಲ್  30ರ ಗುರುವಾರ ಪ್ರಕಟಿಸಿತು.  ಕಂಪೆನಿಯ ಆಡಳಿತ ಮಂಡಳಿ ಸದಸ್ಯರೂ ತಮ್ಮ ವೇತನದ ಶೇಕಡಾ ೩೦ರಿಂದ ೫೦ರಷ್ಟನ್ನು ತ್ಯಜಿಸಲಿದ್ದಾರೆ ಮತ್ತು ಕಂಪೆನಿಯ ಅಧ್ಯಕ್ಷ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಅವರು ಸಂಪೂರ್ಣ ವೇತನವನ್ನು ಪರಿಹಾರಕ್ಕಾಗಿ ತ್ಯಜಿಸಲಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯಕಾರಿ ನಿರ್ದೇಶಕ ಹಿತಲ್ ಆರ್ ಮೇಸ್ವಾನಿ ಅವರು ಸಹಿ ಮಾಡಿರುವ ಪತ್ರ ತಿಳಿಸಿತು.  ವೇತನ ಕಡಿತವು ವಾರ್ಷಿಕ ೧೫ ಲಕ್ಷ ರೂಪಾಯಿಗಳಿಗಿಂತ ಹೆಚ್ಚು  ವರಮಾನ ಹೊಂದಿರುವ ಹೈಡ್ರೋಕಾರ್ಬನ್ ವಿಭಾಗದ ನೌಕರರಿಗೆ ಅನ್ವಯಿಸುತ್ತದೆ. ಇದಕ್ಕಿಂತ ಕಡಿಮೆ ವರಮಾನ ಹೊಂದಿರುವವರಿಗೆ ನಿರ್ಧಾರದಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಪತ್ರ ಸ್ಪಷ್ಟ ಪಡಿಸಿತು.  ಸಂಸ್ಕರಿತ ಉತ್ಪನ್ನಗಳು ಮತ್ತು ಪೆಟ್ರೋಕೆಮಿಕಲ್ಸ್ ಬೇಡಿಕೆ ಕುಸಿದಿರುವುದರಿಂದ ಹೈಡ್ರೋಕಾರ್ಬನ್ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಇದು ನಮ್ಮ ಹೈಡ್ರೋಕಾರ್ಬನ್ಸ್ ವ್ಯವಹಾರದ ಮೇಲೆ ಒತ್ತಡ ಉಂಟು ಮಾಡಿದ್ದು ಎಲ್ಲ ರಂಗಗಳಲ್ಲಿ ವೆಚ್ಚ ಇಳಿಕೆಯನ್ನು ಗರಿಷ್ಠಗೊಳಿಸುವ ಅಗತ್ಯವನ್ನು ಸೃಷ್ಟಿಸಿದೆ ಎಂದು ಪತ್ರ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ).

2020: ನವದೆಹಲಿ: ಭಾರತದಲ್ಲಿ ಕೋರೋನಾ ಪಾಸಿಟಿವ್ ರೋಗಿಗಳ ಚೇತರಿಕೆ ಪ್ರಮಾಣ ಕಳೆದ ಎರಡು ವಾರಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ, ೧೪ ದಿನಗಳ ಹಿಂದೆ ಚೇತರಿಕೆಯ ಪ್ರಮಾಣ ಶೇಕಡಾ ೧೩ರಷ್ಟು ಇದ್ದುದು, ಈಗ ಶೇಕಡಾ ೨೫.೧೯ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಏಪ್ರಿಲ್ 30ರ ಗುರುವಾರ ತಿಳಿಸಿತು.  ಇದೇ ವೇಳೆಗೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೮೨೩ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ ೩೩,೬೧೦ಕ್ಕೆ ಏರಿದೆ. ೨೪ ಗಂಟೆಗಳ ಅವಧಿಯಲ್ಲಿ ೬೭ ಸಾವುಗಳು ವರದಿಯಾಗಿದ್ದು ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ ೧೦೭೫ಕ್ಕೆ ಏರಿದೆ. ಒಟ್ಟು ಸೋಂಕಿತರಲ್ಲಿ ,೩೭೩ ಮಂದಿ ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ೨೪,೧೬೨ ಎಂದು ಸಚಿವಾಲಯ ಹೇಳಿತು.  ಕೋವಿಡ್ -೧೯ ರೋಗಿಗಳು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚುತ್ತಿರುವ ಆಶಾದಾಯಕ ಪ್ರವೃತ್ತಿ ಕಳೆದ ಕೆಲವು ದಿನಗಳಿಂದ ಕಂಡು ಬರುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬೩೦ ಮಂದಿ ಚೇತರಿಸಿದ್ದಾರೆ. ಒಟ್ಟು ಚೇತರಿಕೆಯ ಪ್ರಮಾಣ ಶೇಕಡಾ ೨೫.೧೯ಕ್ಕೆ ಏರಿದೆ. ಹೀಗಾಗಿ ಕಳೆದ ೧೪ ದಿನಗಳ ಅವಧಿಯಲ್ಲಿ ರಾಷ್ಟ್ರದ ಕೋವಿಡ್ ಚೇತರಿಕೆ ಪ್ರಮಾಣ ಶೇಕಡಾ ೧೩ರಿಂದ ಈಗಿನ ಶೇಕಡಾ ೨೫ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ  ಅಗರವಾಲ್  ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಭಾರತದಲ್ಲಿ ಪ್ರಸ್ತುತ ಸಾವಿನ ಪ್ರಮಾಣ ಶೇಕಡಾ .೨ರಷ್ಟಿದೆ. ಮೃತರಲ್ಲಿ ಶೇಕಡಾ ೬೫ರಷ್ಟು ಮಂದಿ ಪುರುಷರಾಗಿದ್ದರೆ, ಶೇಕಡಾ ೩೫ರಷ್ಟು ಮಂದಿ ಮಹಿಳೆಯರು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020:  ವಾಷಿಂಗ್ಟನ್: ಫೆಬ್ರುವರಿ ತಿಂಗಳಲ್ಲಿ ಭಾರತ ಭೇಟಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಟ್ವಿಟರ್ ಖಾತೆಗಳನ್ನು ಫಾಲೋ ಮಾಡಿ ಆತ್ಮೀಯ ಟ್ವೀಟುಗಳನ್ನು  ಹಂಚಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಕಿದ್ದಂತೆ ಖಾತೆಗಳನ್ನು ದಿಢೀರನೆ ಅನ್ ಫಾಲೋ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದರು. ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ ಅವರ ಟ್ವಿಟ್ಟರ್ ಖಾತೆಗಳನ್ನು ಅನ್ ಫಾಲೋ ಮಾಡಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನಿಸಿದ ಬೆನ್ನಲ್ಲೇ ಶ್ವೇತಭವನವು  2020 ಏಪ್ರಿಲ್ 30ರ ಗುರುವಾರ ತನ್ನ ವರ್ತನೆಗೆ ಸ್ಪಷ್ಟನೆ ನೀಡಿತು.  ಯಾವುದೇ ದೇಶಕ್ಕೆ ಪ್ರವಾಸ ಮಾಡುವ ವೇಳೆಯಲ್ಲಿ ಆಯಾ ದೇಶದ ಗಣ್ಯರು ಮತ್ತು ಅವರ ಕಚೇರಿಯ ದೈನಂದಿನ ಬೆಳವಣಿಗೆಗಳ ಮಾಹಿತಿ ಪಡೆಯಲು ಅಮೆರಿಕ ರ್ಕಾರ ಹೊಸ ಖಾತೆಗಳನ್ನು ಫಾಲೋ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದು, ಇದರಿಂದ ಪ್ರವಾಸಕ್ಕೆ ಅನುಕೂಲ ಆಗುತ್ತದೆ. ಪ್ರವಾಸದ ನಂತರ ಗಣ್ಯರ ಖಾತೆಗಳನ್ನು ಅನ್ ಫಾಲೋ ಮಾಡಲಾಗುತ್ತದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟ ಪಡಿಸಿದರು.  ಇದೇ ಮಾದರಿಯಲ್ಲಿ ಫಾಲೋ ಮಾಡಲಾಗಿದ್ದ ನರೇಂದ್ರ ಮೋದಿ, ರಾಮನಾಥ್ ಕೋವಿಂದ್, ಪ್ರಧಾನಿ ಕಾರ್ಯಾಲಯ, ಅಮೆರಿಕದಲ್ಲಿನ ಭಾರತದ ರಾಯಭಾರ ಕಚೇರಿಯ ಟ್ವಿಟರ್ ಖಾತೆಗಳು ಸೇರಿದಂತೆ ಒಟ್ಟು ಆರು ಖಾತೆಗಳನ್ನು ಈಗ ಅನ್ ಫಾಲೋ ಮಾಡಿದ್ದೇವೆ ಎಂದು ಅಧಿಕಾರಿ ಸಮಜಾಯಿಷಿ ನೀಡಿದರು. ಶ್ವೇತಭವನವು ಅನ್ ಫಾಲೋ ಮಾಡಿರುವುದು ಕೇಳಿ ನನಗೆ ಆತಂಕ ಹಾಗೂ ಅಚ್ಚರಿಯಾಗಿದೆ. ಕುರಿತು ವಿದೇಶಾಂಗ ಸಚಿವಾಲಯ ಪರಿಶೀಲಿಸುವುದೇ?’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸರ್ಕಾರದ ಕಾಲೆಳೆದಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
2020:  ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಖಾಲಿ ಸ್ಥಾನಗಳಿಗೆ ಆದಷ್ಟೂ ಬೇಗನೆ ಚುನಾವಣೆ ಘೋಷಿಸುವಂತೆ ಚುನಾವಣಾ ಆಯೋಗಕ್ಕೆ 2020 ಏಪ್ರಿಲ್ 30ರ ಗುರುವಾರ  ಸೂಚಿಸಿದರು.. ಇದರೊಂದಿಗೆ ವಿಧಾನ ಪರಿಷತ್ ಪ್ರವೇಶಿಸಬಯಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಭಾರೀ ನಿರಾಳತೆ ಲಭಿಸಿತು.  ಮೇ ೨೮ರ ಒಳಗೆ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ಮೂಲಕ ಸದನದ ಸದಸ್ಯತ್ವ ಪಡೆಯಲು ಉದ್ಧವ್ ಠಾಕ್ರೆ ಬಯಸಿದ್ದಾರೆ. ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯತ್ವ ಪಡೆಯದೇ ಇದ್ದಲ್ಲಿ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನವನ್ನು ತೆರವುಗೊಳಿಸಬೇಕಾಗುತ್ತದೆ. ಮುಖ್ಯಮಂತ್ರಿಯಾದ ಆರು ತಿಂಗಳ ಒಳಗಾಗಿ ವಿಧಾನಸಭೆ ಇಲ್ಲವೇ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕಾದ್ದು ಕಡ್ಡಾಯವಾಗಿದೆ. ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಚಾರದಲ್ಲಿ ಕೇಂದ್ರವು ಹಲವಾರು ಸಡಿಲಿಕೆಗಳನ್ನು ಪ್ರಕಟಿಸಿದ್ದನ್ನು ಅನುಸರಿಸಿ ಮಾರ್ಗಸೂಚಿಗೆ ಅನುಗುಣವಾಗಿ ಆದಷ್ಟೂ ಬೇಗ ವಿಧಾನಪರಿಷತ್ತಿನ ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಇದಕ್ಕೆ ಮುನ್ನ ಚುನಾವಣೆ ನಡೆಸುವಂತೆ ರಾಜ್ಯಪಾಲರು ಸೂಚನೆ ನೀಡುವ ಲಕ್ಷಣಗಳಿಲ್ಲ ಎಂಬ ಆತಂಕದಿಂದ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಎಯಲ್ಲಿ ಸ್ಥಾನಗಳ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ತಡೆ ಹಿಡಿದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)



No comments:

Post a Comment