2020: ನವದೆಹಲಿ: ಖ್ಯಾತ ವ್ಯವಹಾರೋದ್ಯಮಿ ಆನಂದ ಮಹೀಂದ್ರ ಅವರು ವಿಶ್ವಾದ್ಯಂತ ಜನರು ಹೇಗೆ ದೈನಂದಿನ ಕೆಲಸಗಳನ್ನು ಹಗುರಗೊಳಿಸುವಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುವ ಪೋಸ್ಟ್ಗಳನ್ನು
ಹಂಚಿಕೊಳ್ಳುವುದಕ್ಕೆ ಹೆಸರುವಾಸಿಯಾದ ವ್ಯಕ್ತಿ. ಅವರು ಇತ್ತೀಚೆಗೆ ಮಾಡಿರುವ ಒಂದು ಟ್ವೀಟ್ ಇಂತಹ ಹೊಸ ಕಲ್ಪನೆಯೊಂದರ ಸಾಧ್ಯತೆಯನ್ನು ತೆರೆದಿಟ್ಟಿದೆ. ಯಾರೋ ಒಬ್ಬ ವ್ಯಕ್ತಿ ತಮ್ಮ ಇ-ರಿಕ್ಷಾವನ್ನು ಈಗಿನ ದಿನದ ಅಗತ್ಯತೆಗಳಿಗೆ ಅನುಗುಣವಾಗಿ ಸಾಮಾಜಿಕ ಅಂತರ ಪಾಲನೆ ಮಾಡಲು ಯೋಗ್ಯವಾಗುವ ರೀತಿಯಲ್ಲಿ ಆಧುನೀಕರಿಸಿದ್ದನ್ನು ಈ ಟ್ವೀಟ್ ತೋರಿಸಿಕೊಟ್ಟಿತು. ಮಹೀಂದ್ರ
ಅವರು ಪುಟ್ಟ ವಿಡಿಯೋ ಒಂದನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇದು ವಾಹನದ ವಿಶಿಷ್ಠತೆಯನ್ನು ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ ಮಹಿಂದ್ರ ಅವರು ಈ ಕಲ್ಪನೆಯನ್ನು ಹೊಗಳಿ, ಇಂತಹ ಹೊಸ ಹೊಸ ಸಂಶೋಧನಾ ಪ್ರವೃತ್ತಿ ಉಳ್ಳ ವ್ಯಕ್ತಿಗಳು ತಮ್ಮ ತಂಡಗಳಲ್ಲಿ ಇರುವುದು ಉತ್ತಮ ಎಂದು ಹೇಳಿದ್ದಾರೆ. ಇಂತಹವರಿಂದ ತಾವು ಕಲಿಯುವುದು ಬಹಳಷ್ಟಿದೆ ಎಂದೂ ಮಹೀಂದ್ರ ಹೇಳಿದರು. ಮಹೀಂದ್ರ
ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಇರುವುದು ಸಾಮಾನ್ಯ ಇ-ರಿಕ್ಷಾವೇ. ಆದರೆ, ಇದನ್ನು ನಾಲ್ವರು ಪ್ರತ್ಯೇಕ ಕಂಪಾರ್ಟ್ಮೆಂಟುಗಳಲ್ಲಿ
ಪ್ರತ್ಯೇಕ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಪರಿಷ್ಕರಿಸಲಾಗಿದೆ. ಈ ಪರಿಷ್ಕರಣೆಯಿಂದಾಗಿ ನಾಲ್ವರು ವ್ಯಕ್ತಿಗಳು ಏಕಕಾಲಕ್ಕೆ ಒಂದೇ ವಾಹನದಲ್ಲಿ ಪರಸ್ಪರ ಸಂಪರ್ಕವೇ ಇಲ್ಲದಂತೆ ಸಂಚರಿಸಬಹುದು. ಕೊರೋನಾವೈರಸ್ಸಿನಿಂದಾಗಿ ಉದ್ಭವಿಸಿದ ಈಗಿನ ಸಾಮಾಜಿಕ ಅಂತರ ಪಾಲನೆಯ ಸನ್ನಿವೇಶದಲ್ಲಿ ಈ ಪರಿಷ್ಕೃತ ರಿಕ್ಷಾದ ಕಲ್ಪನೆ ಅಪ್ಯಾಯಮಾನ ಎನಿಸುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದ ಅತಿದೊಡ್ಡ ಐಟಿ ಸೇವಾ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ೩.೫ ಲಕ್ಷ ನೌಕರರ ಪೈಕಿ ಬಹುತೇಕ ಮಂದಿಗೆ ಅಂದರೆ ಶೇಕಡಾ ೭೫ರಷ್ಟು ಮಂದಿಗೆ ೨೦೨೫ರ ವೇಳೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಿದೆ. ಪ್ರಸ್ತುತ ಕಂಪೆನಿಯಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವವರ ಸಂಖ್ಯೆ ಶೇಕಡಾ ೨೦ರಷ್ಟು ಮಾತ್ರ ಇದ್ದು ಇದೀಗ ಕೊರೋನಾವೈರಸ್ ತಂದಿರುವ ’ದೂರದಿಂದ ಕೆಲಸ’ದ ಕ್ರಾಂತಿಯನ್ನು ಕಾಯಂ ಆಗಿ ಅನುಸರಿಸಲು ಕಂಪೆನಿ ಯೋಚಿಸುತ್ತಿದೆ. ‘ಶೇಕಡಾ ೧೦೦ರಷ್ಟು ಉತ್ಪಾದನೆಗೆ ನಮ್ಮ ಶೇಕಡಾ ೨೫ಕ್ಕಿಂತ ಹೆಚ್ಚಿನ ನೌಕರರು ನಮ್ಮ ಕೇಂದ್ರಗಳಲ್ಲೇ ಕೆಲಸ ಮಾಡಬೇಕು ಎಂಬುದನ್ನು ನಾವು ನಂಬುವುದಿಲ್ಲ’
ಎಂದು ಟಿಸಿಎಸ್ ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಎನ್ ಜಿ ಸುಬ್ರಮಣಿಯನ್ ಅವರು 2020 ಏಪ್ರಿಲ್
25ರ ಶನಿವಾರ ಇಲ್ಲಿ ಮಾಧ್ಯಮ ಒಂದರ ಜೊತೆ ಮಾತನಾಡುತ್ತಾ ಹೇಳಿದರು. ಹೊಸ ಮಾದರಿಯ ಪ್ರಕಾರ ಪ್ರತಿಯೊಬ್ಬ ನೌಕರನೂ ತಮ್ಮ ಕೆಲಸದ ವೇಳೆಯ ಶೇಕಡಾ ೨೫ರಷ್ಟನ್ನು ಮಾತ್ರ ಕಚೇರಿಯಲ್ಲಿ ಕಳೆಯಬೇಕು. ಇದು ತಂಡದ ಎಲ್ಲ ಸದಸ್ಯರಲ್ಲಿ, ಯೋಜನಾ ತಂಡದ ಶೇಕಡಾ ೭೫ ರಷ್ಟು ಮಾತ್ರ ಒಂದೇ ಸ್ಥಳದಲ್ಲಿರಬೇಕು ಎಂದು ಇದು ಸೂಚಿಸುತ್ತದೆ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿ ಪ್ರವೇಶಿಸಬೇಕಿದ್ದರೆ ಕೇಂದ್ರ ಸರ್ಕಾರವು ಆರಂಭಿಸಿರುವ ’ಆರೋಗ್ಯ ಸೇತು’
ಆಪ್ನ್ನು ನಾಗರಿಕರು ತಮ್ಮ ಮೊಬೈಲ್ಗಳಲ್ಲಿ
ಅಳವಡಿಸಿಕೊಳ್ಳುವ ಅಗತ್ಯವಿದೆ’
ಎಂಬ ಪ್ರಬಲ ಶಿಫಾರಸನ್ನು ಜಾರಿಗೊಳಿಸುವ ಬಗ್ಗೆ ದೆಹಲಿ ಸರ್ಕಾರ ಪರಿಶೀಲಿಸುತ್ತಿದೆ. ಕೋವಿಡ್-೧೯ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು 2020 ಏಪ್ರಿಲ್ 25ರ ಶನಿವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಈ ಶಿಫಾರಸು ಮಾಡಲಾಯಿತು.
ಆರೋಗ್ಯ ಸೇತು ಆಪ್ನ್ನು
ಅಳವಡಿಸಿಕೊಂಡ ಬಳಿಕ ಮಾತ್ರವೇ ರಾಜಧಾನಿ ಪ್ರವೇಶಿಲು ಜನರಿಗೆ ಅವಕಾಶ ನೀಡಬೇಕು ಎಂದು ನಗರ ಸರ್ಕಾರಕ್ಕೆ ಬಲವಾದ ಶಿಫಾರಸನ್ನು ಮಾಡುವಂತೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುರ್ಜಿತ್ ಕುಮಾರ್ ಸಿಂಗ್ ಶಿಫಾರಸು ಮಾಡಿದರು. ರಾಜಧಾನಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವ ಜನರ ಸಂಖ್ಯೆಯನ್ನು ಹೆಚ್ಚಿಸುವಂತೆ ಮತ್ತು ಪುನರಾವರ್ತಿತ ಕ್ಷಿಪ್ರ ಪರೀಕ್ಷೆಗಳನ್ನು ೩ನೇ, ೫ನೇ ಮತ್ತು ೧೪ನೇ ದಿನ ನಡೆಸುವ ಮೂಲಕ ತಪ್ಪು ವರದಿಯ ಕಾರಣದಿಂದ ಕೋವಿಡ್ -೧೯ ಪಾಸಿಟಿವ್ ವ್ಯಕ್ತಿ ಉಳಿಯದಂತೆ ನೋಡಿಕೊಳ್ಳಬೇಕು ಎಂದೂ ಡಾ. ಸಿಂಗ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಎರಡನೇ ಅವಧಿ ಸಾಕಷ್ಟು ಪರಿಣಾಮಕಾರಿಯಾಗುವಂತೆ ಕಂಡು ಬಂದಿದ್ದು ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಸರಣ ಪ್ರಮಾಣ ಶೇಕಡಾ ೬ಕ್ಕೆ ಇಳಿದಿದೆ. ಇದೇ ರೀತಿ ಸೋಂಕಿನ ದುಪ್ಪಟ್ಟು ಪ್ರಮಾಣದ ದಿನಗಳ ಅಂತರವೂ ಹೆಚ್ಚಾಗಿದೆ. ೧೦೦ ಪ್ರಕರಣಗಳನ್ನು ದಾಟಿದಂದಿನಿಂದ ಕಳೆದ ೨೪ ಗಂಟೆಗಳಲ್ಲಿ ಕೋವಿಡ್ -೧೯ ಸೋಂಕು ಪ್ರಸರಣದಲ್ಲಿ ಭಾರತವು ಅತ್ಯಂತ ಕಡಿಮೆ ಬೆಳವಣಿಗೆ ದರವನ್ನು ದಾಖಲಿಸಿದೆ ಎಂದು ಸರ್ಕಾರ ಹೇಳಿತು.. ಸೋಂಕಿನ ಪ್ರಕರಣಗಳ ಸರಾಸರಿ ದುಪ್ಪಟ್ಟು ಪ್ರಮಾಣವು ಇಳಿಕೆಯಾಗಿದ್ದು ೩.೫ ದಿನಗಳಿಗೊಮ್ಮೆ ದುಪ್ಪಟ್ಟಾಗುತ್ತಿದ್ದ ಪ್ರಕರಣಗಳು ಈಗ ೯.೧ ದಿನಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿದೆ. ಶುಕ್ರವಾರ ಬೆಳಗ್ಗೆ ೮ ಗಂಟೆಯಿಂದ 2020 ಏಪ್ರಿಲ್ 25ರ ಶನಿವಾರ ಬೆಳಗ್ಗೆ ೮ ಗಂಟೆಯವರೆಗಿನ ಅವಧಿಯಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ ಶೇಕಡಾ ೬ಕ್ಕೆ ಕುಸಿದಿದೆ, ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದೇಶದಲ್ಲಿ ೧೦೦ ದಾಟಿದ ಬಳಿಕ ಇದು ಇತ್ಯಂತ ಕನಿಷ್ಠ ಬೆಳವಣಿಗೆ ಎಂದು ಸರ್ಕಾರ ತಿಳಿಸಿದೆ. ಕೋವಿಡ್ -೧೯ ಕುರಿತು ಉನ್ನತ ಮಟ್ಟದ ಸಚಿವರ ತಂಡದ ೧೩ ನೇ ಸಭೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರ ಅಧ್ಯಕ್ಷತೆಯಲ್ಲಿ 2020 ಏಪ್ರಿಲ್ 25ರ ಶನಿವಾರ ನಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಲಾಕ್ಡೌನ್
ಮಧ್ಯೆ ಅಂಗಡಿಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೆ ತರಲು ದೆಹಲಿ ಸರ್ಕಾರವು 2020 ಏಪ್ರಿಲ್ 25ರ ಶನಿವಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಗತ್ಯೇತರ ಅಂಗಡಿಗಳಿಗೆ ತೆರೆಯಲು ಅವಕಾಶ ನೀಡಲಾಗುವುದು, ಆದರೆ ಕೊರೋನಾವೈರಸ್ ಕಂಟೈನ್ಮೆಂಟ್
ವಲಯಗಳಲ್ಲಿ ಅಲ್ಲ. ಕಂಟೈನ್ಮೆಂಟ್
ವಲಯಗಳಲ್ಲಿ ಯಾವುದೇ ಚಟುವಟಿಕೆಗೂ ಅವಕಾಶ ನೀಡಲಾಗುವುದಿಲ್ಲ’
ಎಂದು ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು. ರಾಷ್ಟ್ರೀಯ ರಾಜಧಾನಿಯಲ್ಲಿ ೯೨ ಕಂಟೈನ್ಮೆಂಟ್
ವಲಯಗಳಿವೆ. ಸ್ವತಂತ್ರ ಅಂಗಡಿಗಳು ಮತ್ತು ವಸತಿ ಪ್ರದೇಶಗಳಲ್ಲಿನ ಅಂಗಡಿಗಳು ತೆರೆಯಬಹುದು, ಆದರೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದು ಅಧಿಕಾರಿ ನುಡಿದರು. ಶುಕ್ರವಾರ ತಡರಾತ್ರಿಯಲ್ಲಿ ಹೊರಡಿಸಿದ ಆದೇಶದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನೆರೆಹೊರೆಯಲ್ಲಿ ಮತ್ತು ವಸತಿ ಸಮುಚ್ಚಯಗಳ ಸಮೀಪದ ಸ್ವತಂತ್ರ ಅಂಗಡಿಗಳು ಸೇರಿದಂತೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೆರವಾಗುವ ಸಲುವಾಗಿ ಕಳುಹಿಸಲಾದ ಕೇಂದ್ರದ ತಂಡವು, ತನಗೆ ರಾಜ್ಯ ಸರ್ಕಾರದಿಂದ ಮೂಲಭೂತ ಸಾಗಣೆ ಬೆಂಬಲ ಅಥವಾ ಯಾವುದೇ ಅಗತ್ಯ ಮಾಹಿತಿಗಳು ಲಭಿಸುತ್ತಿಲ್ಲ, ಆದರೂ ಸಾಂಕ್ರಾಮಿಕ ನಿಭಾವಣೆಯಲ್ಲಿನ ತೂತುಗಳು ತನ್ನ ಗಮನಕ್ಕೆ ಬಂದಿವೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ. ರಾಜ್ಯ ಪೊಲೀಸರ ಅನುಮತಿ ಇಲ್ಲದೆ ಅತಿಥಿ ಗೃಹದಿಂದ ಹೊರಕ್ಕೆ ಹೋಗದಂತೆ ತನ್ನ ಭದ್ರತೆಗಾಗಿ ನಿಯೋಜಿಸಲಾಗಿರುವ ಬಿಎಸ್ಎಫ್
ಸಿಬ್ಬಂದಿ ಪ್ರಾರಂಭದಲ್ಲೇ ತಮ್ಮ ತಂಡಕ್ಕೆ ಸೂಚಿಸಿರುವುದಾಗಿ ಹಿರಿಯ ಐಎಎಸ್ ಅಧಿಕಾರಿ ಅಪೂರ್ವ ಚಂದ್ರ ನೇತೃತ್ವದ ಅಂತರ ಸಚಿವಾಲಯ ಕೇಂದ್ರೀಯ ತಂಡವು ಕೇಂದ್ರಕ್ಕೆ ಮಾಹಿತಿ ನೀಡಿದೆ. ತಂಡವು ಏಪ್ರಿಲ್ ೨೦ರ ಸೋಮವಾರ ಕೋಲ್ಕತಕ್ಕೆ ಬಂದಿಳಿದಿತ್ತು. ‘ಬಹುಶಃ ಅವರು ಬಿಎಸ್ ಎಫ್ ಅತಿಥಿ ಗೃಹದಲ್ಲೇ ಸಿಕ್ಕಿಹಾಕಿಕೊಂಡಿರುವಂತೆ ಕಾಣುತ್ತದೆ ಮತ್ತು ಕ್ಷೇತ್ರಕ್ಕೆ ಕೇವಲ ೬ ಗಂಟೆಗಳ ಕಾಲ ಭೇಟಿ ನೀಡಲು ಸಾಧ್ಯವಾಗಿರುಂತೆ ಕಾಣುತ್ತಿದೆ’
ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment