Monday, April 6, 2020

ಇಂದಿನ ಇತಿಹಾಸ History Today ಏಪ್ರಿಲ್ 06

2020:  ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗು ವಿರೋಧಿ ಹೋರಾಟಕ್ಕೆ ನಿಧಿ ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ, ಅವರ ಸಂಪುಟ ಸಚಿವರು ಮತ್ತು ಸಂಸತ್ ಸದಸ್ಯರ ವೇತನವನ್ನು ಮುಂದಿನ ಒಂದು ವರ್ಷ ಕಾಲ ಶೇಕಡಾ ೩೦ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  2020 ಏಪ್ರಿಲ್ 06ರ  ಸೋಮವಾರ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು. ಇದರೊಂದಿಗೆ ಕೋವಿಡ್-೧೯ ಸಾಂಕ್ರಾಮಿಕ ಪಿಡುಗಿನಿಂದ ಆರ್ಥಿಕತೆಯ ಮೇಲೆ ಬಿದ್ದಿರುವ ಅಸಾಧಾರಣ  ಹೊಡೆತದಿಂದ ಚೇತರಿಸಲು ಸುದೀರ್ಘ ಕಾಲ ಬೇಕಾಗುತ್ತದೆ ಎಂಬ ಸುಳಿವನ್ನು ಕೇಂದ್ರ ಸರ್ಕಾರ ನೀಡಿತು.  ಶಾಸನಕರ್ತರ ಜೊತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ವಿವಿಧ ರಾಜ್ಯಗಳ ರಾಜ್ಯಪಾಲರೂ ತಮ್ಮ ವೇತನದಿಂದ ಕೊಡುಗೆ ನೀಡುವ ನಿರ್ಧಾರವನ್ನು ಸ್ವತಃ ಕೈಗೊಂಡಿದ್ದಾರೆ. ಕೇಂದ್ರ ಸಂಪುಟವು ಅಂಗೀಕರಿಸಿದ ಸುಗ್ರೀವಾಜ್ಞೆಯ ಪ್ರಕಾರ ಪ್ರಧಾನಿ, ಸಚಿವರು ಮತ್ತು ಸಂಸದರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳು ಒಂದು ವರ್ಷ ಕಾಲ ಶೇಕಡಾ ೩೦ರಷ್ಟು ಕಡಿತವಾಗಲಿದೆ. ಹಣವನ್ನು ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಸಂಪುಟದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ  ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಪ್ರಕಟಿಸಿದರು. ಸಂಸತ್ ಸದಸ್ಯರ ವೇತನ, ಭತ್ಯೆಗಳು ಮತ್ತು ಪಿಂಚಣಿ ಕಾಯ್ದೆ ೧೯೫೪ಕ್ಕೆ ತಿದ್ದುಪಡಿ ತಂದಿರುವ ಸುಗ್ರೀವಾಜ್ಞೆಯ ಪ್ರಕಾರ ೨೦೨೦ರ ಏಪ್ರಿಲ್ ೧ರಿಂದ ಒಂದು ವರ್ಷದವರೆ ವೇತನ, ಭತ್ಯೆ, ಪಿಂಚಣಿಗಳು ಕಡಿಮೆಯಾಗಲಿವೆ. ಹಣವು ಭಾರತದ ಸಂಚಿತ ನಿಧಿಗೆ ಸೇರ್ಪಡೆಯಾಗಲಿದೆ. , ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಾಜ್ಯಪಾಲರುಗಳು ಕೂಡಾ ತಮ್ಮ ವೇತನದಿಂದ ಶೇಕಡಾ ೩೦ರಷ್ಟು ನಿಧಿಯ ಸಲುವಾಗಿ ಕಡಿತಗೊಳಿಸುವ ಕೊಡುಗೆ ನೀಡಿದ್ದಾರೆ ಎಂದು ಜಾವಡೇಕರ್ ಹೇಳಿದರು. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಎಂಪಿಲ್ಯಾಡ್) ನಿಧಿ ಯೋಜನೆಯನ್ನು ಕೂಢ ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಲೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಿಧಿಯನ್ನು ಆರೋಗ್ಯ ಸೇವೆಗಳು ಮತ್ತು ರಾಷ್ಟ್ರದಲ್ಲಿ ಉದ್ಭವಿಸಿರುವ ಕೋವಿಡ್-೧೯ ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮದ ನಿಭಾವಣೆಗಾಗಿ ಬಳಸಲಾಗುವುದು ಎಂದು ಜಾವಡೇಕರ್ ನುಡಿದರು. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿದಿ ಯೋಜನೆಯಿಂದ ಭಾರತದ ಸಂಚಿತ ನಿಧಿಗೆ ,೯೦೦ ಕೋಟಿ ರೂಪಾಯಿ ಲಭಿಸಲಿದೆ ಎಂದು ಸಚಿವರು ಹೇಳಿದರು.    (ವಿವರಗಳಿಗೆ ಇಲ್ಲಿ   ಕ್ಲಿಕ್ ಮಾಡಿರಿ)

2020:  ನವದೆಹಲಿ: ಕೊರೋನಾವೈರಸ್ ವಿರುದ್ಧದ ಸಮರ ಸುದೀರ್ಘವಾದದ್ದು ಎಂದು 2020 ಏಪ್ರಿಲ್ 06ರ ಸೋಮವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ’ ಸಮರದಲ್ಲಿ ಜಯಶಾಲಿಗಳಾಗಲೇ ಬೇಕಿರುವುದರಿಂದ ಬಳಲಬೇಡಿ ಅಥವಾ ವಿಶ್ರಮಿಸಬೇಡಿಎಂದು ಜನತೆಗೆ ಕರೆ ನೀಡಿದರು. ’ಸಂಪೂರ್ಣ ಜವಾಬ್ದಾರಿಯೊಂದಿಗೆ ನಾನು ಹೇಳುತ್ತಿದ್ದೇನೆ. ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಸಮರ ಸುದೀರ್ಘವಾದದ್ದು. ಆದರೆ ಯುದ್ಧದಲ್ಲಿ ನಾವು ಬಳಲುವಂತಿಲ್ಲ ಅಥವಾ ವಿಶ್ರಾಂತಿ ಪಡೆಯುವಂತಿಲ್ಲ, ನಾವು ವಿಜಯಶಾಲಿಗಳಾಗಲೇಬೇಕು. ಇಂದು ರಾಷ್ಟ್ರದ ಮುಂದಿರುವುದು ಒಂದೇ ಗುರಿ ಮತ್ತು ಒಂದೇ ತೀಮಾನ- ಅದು ಸಮರವನ್ನು ಗೆಲ್ಲುವುದುಎಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬಿಜೆಪಿ ಕಾರ್‍ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಧಾನಿ ನುಡಿದರು. ’ಭಾರತವು ರೋಗದ ಗಂಭೀರತೆಯನ್ನು ಹೇಗೆ ಅರ್ಥ ಮಾಡಿಕೊಂಡಿದೆ ಮತ್ತು ಅದರ ವಿರುದ್ಧ ಸಕಾಲಿಕ ಸಮರ ಸಾರಿದೆಎಂಬುದನ್ನು ಪ್ರಧಾನಿ ವಿವರಿಸಿದರು. ’ಭಾರತದ ಪ್ರಯತ್ನಗಳು ಇಡೀ ವಿಶ್ವಕ್ಕೆ ಮಾದರಿಯನ್ನು ಹಾಕಿಕೊಟ್ಟಿವೆಎಂದು ಮೋದಿ ನುಡಿದರು. ಪ್ರಸ್ತುತ ದಿಗ್ಬಂಧನ (ಲಾಕ್ ಡೌನ್) ವೇಳೆಯಲ್ಲಿ ೧೨೦ ಕೋಟಿ ಭಾರತೀಯರು ತೋರಿಸಿರುವ ಪ್ರೌಢಿಮೆಯನ್ನೂ ಪ್ರಧಾನಿ ಶ್ಲಾಘಿಸಿದರು. ’ಭಾರತದ ಪ್ರಯತ್ನಗಳು ಇಡೀ ವಿಶ್ವದ ಮುಂದೆ ಮಾದರಿಯೊಂದನ್ನು ಹಾಕಿಕೊಟ್ಟಿವೆ. ರೋಗದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವ ಮತ್ತು ಸಕಾಲಿಕ ಸಮಯದಲ್ಲಿ ಸಮರ ಸಾರಿದ ರಾಷ್ಟ್ರಗಳಲ್ಲಿ ಭಾರತ ಸೇರಿದೆ. ಭಾರತವು ಹಲವಾರು ನಿರ್ಣಯಗಳನ್ನು ಕೈಗೊಂಡಿದೆ ಮತ್ತು ಅವುಗಳ ಜಾರಿಗೆ ಸರ್ವ ಪ್ರಯತ್ನ ಮಾಡುತ್ತಿದೆಎಂದು ಬಿಜೆಪಿ ಸದಸ್ಯರನ್ನು ಉದ್ದೇಶಿಸಿದ ವಿಡಿಯೋದಲ್ಲಿ ಮೋದಿ ವಿವರಿಸಿದರು. ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಸೋಮವಾರ ೧೦೯ಕ್ಕೇ ಏರಿದ್ದು, ಸೋಂಕಿನ ಪ್ರಕರಣಗಳ ಸಂಖ್ಯೆ ೪೦,೬೭ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಔಟ್) ಏಪ್ರಿಲ್ ೧೪ರಂದು ಮುಕ್ತಾಯವಾದ ಬಳಿಕ, ಕಟ್ಟು ನಿಟ್ಟಿನ ನಿರ್ಬಂಧ ಕ್ರಮಗಳುಕೊರೋನಾವೈರಸ್ ಹಾಟ್‌ಸ್ಪಾಟ್‌ಗಳಲ್ಲಿಮಾತ್ರ ಮುಂದುವರೆಯಬಹುದುಎಂದು ಸರ್ಕಾರಿ ಮೂಲಗಳು ಮಾತ್ರ ಮಾತ್ರ  2020 ಏಪ್ರಿಲ್ 06ರ ಸೋಮವಾರ ತಿಳಿಸಿದವು.    ದಿಗ್ಬಂಧನವಿಸ್ತರಣೆಯ ಯೋಜನೆಗಳಿವೆ ಎಂಬುದನ್ನು ಕೇಂದ್ರ ಸಂಪುಟ ಕಾರ್‍ಯದರ್ಶಿ ರಾಜೀವ ಗೌಬಾ ಅವರು ವಾರದ ಹಿಂದೆಯೇ ನಿರಾಕರಿಸಿದ್ದರೂ, ನಿರ್ಬಂಧಗಳು ಮುಂದುವರೆಯಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ  ಸೇರಿದಂತೆ ಹಲವಾರು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆದಿವೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ಭಾರತದಲ್ಲಿ ಕೊರೋನಾಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಕಳೆದ ಒಂದು ವಾರದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು ಸೋಮವಾರ ಬೆಳಗಿನ ವೇಳೆಗೆ ೪೦೦೦ದ ಗಡಿ ದಾಟಿದೆ. ಈವರೆಗೆ ೧೦೯ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ಸೋಂಕಿನ ಪ್ರಕರಣಗಳ ಗತಿ ಇದೇ ರೀತಿಯಾಗಿ ಕೆಲವು ವಾರಗಳ ಕಾಲ ಮುಂದುವರೆದರೆ ಭಾರತದ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳು ಕಿಕ್ಕಿರಿಯಬಹುದು. ಭಾರತದಲ್ಲಿ ಕೊರೋನಾಸೋಂಕು ಹರಡುತ್ತಿರುವ ಪ್ರಮಾಣ ಕೊರೋನಾವೈರಸ್ಸಿನ  ಜಾಗತಿಕ ಕೇಂದ್ರವಾಗಿ ಪರಿಣಮಿಸಿರುವ ಅಮೆರಿಕಕ್ಕೆ ಹೋಲಿಸಿದರೆ ಕಡಿಮೆಯಾಗಿದ್ದರೂ, ಸಿಂಗಾಪುರ ಮತ್ತು ಜಪಾನಿನಂತಹ ಏಷ್ಯಾದ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿದೆ. ಹಿನ್ನೆಲೆಯಲ್ಲಿ  ರಾಷ್ಟಾದ್ಯಂತ ದಿಗ್ಬಂಧನ ವಿಸ್ತರಿಸುವ ಬದಲಿಗೆ, ಕೋವಿಡ್ -೧೯ರ ಹಾಟ್‌ಸ್ಪಾಟ್‌ಗಳು ಎಂಬುದಾಗಿ ಗುರುತಿಸಲಾಗಿರುವ ಸ್ಥಳಗಳಲ್ಲಿ ಮಾತ್ರವೇ ಲಾಕ್ ಡೌನ್ ವಿಸ್ತರಿಸುವ ಇನ್ನೊಂದು ಪ್ರಸ್ತಾಪವನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ. ಆರೋಗ್ಯ ಸಚಿವಾಲಯವು ಈಗಾಗಲೇ ದೇಶಾದ್ಯಂತ ೨೦ ವೈರಸ್ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಜೊತೆಗೆ ಸಂಭಾವ್ಯ ಹಾಟ್‌ಸ್ಟಾಟ್‌ಗಳಾಗಿ ಇತರ ೨೨ ಸ್ಥಳಗಳನ್ನು ಗುರುತಿಸಿದೆ. ಸುದ್ದಿಮೂಲಗಳ ಪ್ರಕಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪರಿಸ್ಥಿತಿಯನ್ನು ವಿವರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಸ್ವತಃ ಅಂತಿಮ ನಿರ್ಧಾರ ಕೈಗೊಳ್ಳುವರು ಎಂದು ಸುದ್ದಿ ಮೂಲಗಳು ಹೇಳಿದವು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ನವದೆಹಲಿ: ಇಡೀ ವಿಶ್ವದ  ದೃಷ್ಟಿ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಸಮರಕ್ಕಾಗಿ ಕೇಂದ್ರೀಕೃತವಾಗಿರುವ ಹೊತ್ತಿನಲ್ಲೇ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್--ತೊಯ್ಬಾ ಮತ್ತು ಜೈಶ್--ಮೊಹಮ್ಮದ್ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಆಚೆ ಪಾಕಿಸ್ತಾನದ ಲಾಂಚ್ ಪ್ಯಾಡ್‌ಗಳಲ್ಲಿ ಭಯೋತ್ಪಾದಕರ ಜಮಾವಣೆಗೆ ಆರಂಭಿಸಿವೆ. ಭಾನುವಾರ ನಡೆದ ಮೊದಲ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು ಕಾರ್‍ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ, ಕಾರ್‍ಯಾಚರಣೆಯಲ್ಲಿ ಸೇನೆಯ ಐವರು ಕಮಾಂಡರುಗಳೂ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು 2020 ಏಪ್ರಿಲ್ 06ರ ಸೋಮವಾರ ತಿಳಿಸಿದವು. ಗಡಿಯಾಚೆಯಿಂದ ಪ್ರಸ್ತುತ ವರ್ಷದ ಬೇಸಿಗೆಯಲ್ಲಿ ಮೊತ್ತ ಮೊದಲಿಗೆ ಗಡಿದಾಟಲು ಯತ್ನಿಸಿದ ಮೊದಲ ತಂಡಗಳ ಪೈಕಿ ಒಂದನ್ನು ಕುಪ್ವಾರದಲ್ಲಿನ ಸೈನಿಕರು ತಡೆದು ಸದ್ದಡಗಿಸಿದ್ದಾರೆ ಎಂದು  ಜಮ್ಮು -ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ ಬಾಗ್ ಸಿಂಗ್ ಹೇಳಿದರು. ಕಾಶ್ಮೀರದ ಕೇರನ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆಯ ವಿಶೆಷ ಪಡೆಗಳ ಐವರು ಕಮಾಂಡರ್‌ಗಳು ಭಯೋತ್ಪಾದಕ ನುಸುಳುಕೋರರ ಜೊತೆಗಿನ ಘರ್ಷಣೆಯಲ್ಲಿ ಹುತಾತ್ಮರಾಗಿದ್ದು ಅಷ್ಟೇ ಸಂಖ್ಯೆಯ ಭಯೋತ್ಪಾದಕರೂ ಹತರಾಗಿದ್ದಾರೆ. ಸೇನಾ ಕಮಾಂಡರ್‌ಗಳ ಪಾರ್ಥಿವ ಶರೀರ ಮತ್ತು ಭಯೋತ್ಪಾದಕರ ಶವಗು ಪರಸ್ಪರ ಕೇವಲ ಎರಡರಿಂದ ಮೂರು ಮೀಟರ್ ಗಳ ಅಂತರದಲ್ಲಿ ಪತ್ತೆಯಾಗಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಅತ್ಯುಗ್ರ ಮುಖಾಮುಖಿ ಘರ್ಷಣೆಯಲ್ಲಿ ಎಲ್ಲ ಐದೂ ಮಂದಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಸೋಮವಾರ ಸೇನೆಯ ಹೇಳಿಕೆಯೊಂದು ತಿಳಿಸಿತು. ಪಾಕಿಸ್ತಾನ ಬೆಂಬಲಿತ ನುಸುಳುಕೋರರನ್ನು ಹಿಮ್ಮೆಟಿಸುವ ಕಾರ್‍ಯಾಚರಣೆಯನ್ನು ಭಾರತೀಯ ಸೇನೆ ಕೈಗೊಂಡಿತ್ತು. ಐವರ ತಂಡ ಭಾರೀ ಮಂಜಿನ ಮುಸುಕಿನಲ್ಲಿ ನುಸುಳಲು ಯತ್ನಿಸಿತ್ತು. ಪ್ಯಾರಾ ಎಸ್ ಎಫ್ ಘಟಕದ ವೃತ್ತಿಮರ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಯ ನೇತೃತ್ವದಲ್ಲಿ ನಾಲ್ವರು ಯೋಧರನ್ನು ಹೆಲಿಕಾಪ್ಟರ್ ಮೂಲಕ ಇಳಿಸಿ, ಉಗ್ರಗಾಮಿಗಳ ನುಸಳುವಿಕೆಯನ್ನು ತಡೆಯಲಾಯಿತು ಎಂದು ಸೇನೆ ತಿಳಿಸಿತು. ಭಯೋತ್ಪಾದಕರ ನುಸುಳುವಿಕೆಯ ಮಾಹಿತಿ ಲಭಿಸಿದ ಬಳಿಕ ಕಾರ್‍ಯಚರಣೆ ನಡೆಸಲಾಯಿತು ಎಂದು ಸೇನಾ ಮೂಲಗಳು ಹೇಳಿದವು. ಐವರು ಕಮಾಂಡೋಗಳು ಕಾಳಗ ನಡೆದ ಸ್ಥಳದಲ್ಲಿಯೇ ಹುತಾತ್ಮರಾಗಿದ್ದರೆ, ಉಳಿದ ಇಬ್ಬರು ಸೇನಾ ಆಸ್ಪತ್ರೆಗೆ ಸೇರಿಸಿದ ಬಳಿಕ ಅಸು ನೀಗಿದರು ಎಂದು ಮೂಲಗಳು ಹೇಳಿವೆ. (ವಿವರಗಳಿಗೆ ಇಲ್ಲಿಕ್ಲಿಕ್   ಮಾಡಿರಿ)

2020: ಬೆಂಗಳೂರು:  ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ (೪೪) ಅವರು 2020 ಏಪ್ರಿಲ್ 06 ಸೋಮವಾರ  ನಿಧನರಾದರು.. ಅನಾರೋಗ್ಯದಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಅವರು ನಗರದ ಫೋರ್ಟೀಸ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಬುಲೆಟ್ ಪ್ರಕಾಶ್ ಅವರು ಬಹು ಅಂಗಾಗ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದರು.  ಈದಿನ ಬೆಳಿಗ್ಗೆಯಿಂದಲೇ ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಾ ಹೋಗಿತ್ತು. ಬುಲೆಟ್ ಪ್ರಕಾಶ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದರು. ಕನ್ನಡ ಚಿತ್ರರಂಗದ ವಿಶಿಷ್ಟ ಹಾಸ್ಯನಟ: ಇದುವರೆಗೂ ೩೦೦ಕ್ಕೂ ಅಧಿಕ ಕನ್ನಡ ಸಿನೇಮಾಗಳಲ್ಲಿ ಅಭಿನಯಿಸಿರುವ ಬುಲೆಟ್ ಪ್ರಕಾಶ್ ಅವರು ತಮ್ಮ ವಿಶಿಷ್ಟ ದೇಹ ಮತ್ತು ಮ್ಯಾನರಿಸಂ ಮೂಲಕ ಚಿತ್ರರಸಿಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಕಾಮಿಡಿ ಕಾಂಬಿನೇಷನ್ ಹಲವು ಕನ್ನಡ ಚಿತ್ರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ೨೦೧೫ರಲ್ಲಿ ಬುಲೆಟ್ ಪ್ರಕಾಶ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)





No comments:

Post a Comment