ನಾನು ಮೆಚ್ಚಿದ ವಾಟ್ಸಪ್

Wednesday, April 22, 2020

ಇಂದಿನ ಇತಿಹಾಸ History Today ಏಪ್ರಿಲ್ 22

2020: ವಾಷಿಂಗ್ಟನ್/ ನವದೆಹಲಿ: ಜಗತ್ತಿನ ೧೮೦ಕ್ಕೂ ಹೆಚ್ಚು ದೇಶಗಳನ್ನು ಕಂಗೆಡಿಸಿರುವ ಕೊರೋನಾವೈರಸ್ (ಕೋವಿಡ್-೧೯) ಚೀನಾದಮಾನವ ಸೃಷ್ಟಿಎಂಬುದಾಗಿ ಫ್ರಾನ್ಸಿನ ನೊಬೆಲ್ ಪ್ರಶಸ್ತಿ ವಿಜೇತ ವೈದ್ಯಕೀಯ ವಿಜ್ಞಾನಿ ಲುಕ್ ಮಾಂಟೆಗ್ನೇರ್ ಅವರು ಪ್ರತಿಪಾದಿಸಿದ ಕೆಲವೇ ದಿನಗಳ ಬಳಿಕ  ಚೀನಾದ ವಿರುದ್ಧ ಅಮೆರಿಕದ ಮಿಸೌರಿ ರಾಜ್ಯ ಮೊಕದ್ದಮೆ ದಾಖಲಿಸಿತು.  ಇದೇ ವೇಳೆಗೆ ಚೀನಾದ ಜೊತೆಗಿನ ವ್ಯಾಪಾರ ಒಪ್ಪಂದ ಕೊನೆಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದರು.  ಕೋವಿಡ್ ೧೯ ವೈರಸ್ ತಡೆಗಟ್ಟಲು ಅಸಮರ್ಪಕ ಕಾರ್ಯತಂತ್ರ ಹಾಗೂ ಉದ್ದೇಶ ಪೂರ್ವಕವಾದ ವಂಚನೆ ಎಸಗಿದೆ. ಆದ್ದರಿಂದ ಚೀನವೇ ನಷ್ಟ ಭರಿಸಬೇಕು ಎಂದು ಮಿಸೌರಿ ರಾಜ್ಯ ಹೇಳಿತು. ಅಮೆರಿಕ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಅಮೆರಿಕ ಒಕ್ಕೂಟದ ಮಿಸೌರಿ ಚೀನಾಕ್ಕೆ ದಂಡನೆ ನೀಡಬೇಕೆಂದು ಮೊಕದ್ದಮೆ ಹೂಡಿದ ಮೊದಲ ರಾಜ್ಯವಾಗಿದೆ. ಕೋವಿಡ್- ೧೯ ವೈರಸ್ ಹರಡುವಿಕೆ ಹಿಂದೆ ಬೀಜಿಂಗ್ ಕೈವಾಡ ಇದೆ ಎಂದು  ಟ್ರಂಪ್ ಮುನ್ನವೇ ಆರೋಪಿಸಿದ್ದರು. ಮಿಸೌರಿ ರಾಜ್ಯದ ಟ್ರಂಪ್ ನೇತೃತ್ವ ರಿಪಬ್ಲಿಕ್ ಪಕ್ಷ ಚೀನಾದ ವಿರುದ್ಧ ಫೆಡರಲ್ ಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಿ ನಷ್ಟ ಭರಿಸುವಂತೆ ಕೋರಿದೆ. ಆದರೆ ನಷ್ಟದ ನಿಖರ ಮೊತ್ತವನ್ನು ಅದು ದಾಖಲಿಸಿಲ್ಲ.  ಸದ್ದಿಲ್ಲದೆ ಮನುಷ್ಯನ ದೇಹ ಸೇರುವ ಕೋವಿಡ್-೧೯ ಮಾರಣಾಂತಿಕ ಹಾಗೂ ಅಪಾಯಕಾರಿ ಸೋಂಕಿನ ಬಗ್ಗೆ ಚೀನಾ ಸರ್ಕಾರ ಇಡೀ ಜಗತ್ತಿಗೆ ಸುಳ್ಳು ಹೇಳಿದೆ. ಅಲ್ಲದೇ ಸೋಂಕು ಹರಡುವುದನ್ನು ತಡೆಯುವಲ್ಲಿಯೂ ಗಂಭೀರ ಕ್ರಮ ತೆಗೆದುಕೊಂಡಿಲ್ಲ ಎಂದು ಮಿಸೌರಿ ಅಟಾರ್ನಿ ಜನರಲ್ ಎರಿಕ್ ಸ್ಕಿಮ್ಮಿಟ್ ತಿಳಿಸಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋ ತನ್ನ ಶೇ ..೯೯ ರಷ್ಟು ಪಾಲನ್ನು . ಬಿಲಿಯನ್ ಡಾಲರ್ ಅಥವಾ ೪೩,೫೭೪ ಕೋಟಿ ರೂಪಾಯಿಗಳಿಗೆ ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ ಫೇಸ್ಬುಕ್ಗೆ   2020 ಏಪ್ರಿಲ್ 22ರ ಬುಧವಾರ ಮಾರಾಟ ಮಾಡಿತು.  .೬೨ ಲಕ್ಷ ಕೋಟಿ ರೂಪಾಯಿ ಮೊತ್ತದ ಬಹುಕೋಟಿ ಡಾಲರ್ ಒಪ್ಪಂದವು ಫೇಸ್ಬುಕ್ನ್ನು ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನಲ್ಲಿ ಅತಿದೊಡ್ಡ ಅಲ್ಪಸಂಖ್ಯಾತ ಷೇರುದಾರರನ್ನಾಗಿ ಮಾಡುತ್ತದೆ.  ಪಾಲುದಾರಿಕೆಯನ್ನು ಅಭೂತಪೂರ್ವ ಎಂಬುದಾಗಿ ಬಣ್ಣಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ’ಇದು ವಿಶ್ವದ ಯಾವುದೇ ಭಾಗದಲ್ಲಿ ತಂತ್ರಜ್ಞಾನ ಕಂಪನಿಯ ಅಲ್ಪಸಂಖ್ಯಾತ ಪಾಲನ್ನು ಹೊಂದಿರುವ ಅತಿದೊಡ್ಡ ಹೂಡಿಕೆಯಾಗಿದೆ ಮತ್ತು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿದೊಡ್ಡ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಆಗಿದೆಎಂದು ಹೇಳಿತು. ಸಹಭಾಗಿತ್ವವು ಆರ್ಐಎಲ್ಗೆ ತನ್ನ ಸಾಲದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಮತ್ತು ಬೃಹತ್ ಮಾರುಕಟ್ಟೆಯಲ್ಲಿ ಫೇಸ್ಬುಕ್ಗೆ ದೃಢವಾದ ಹೆಜ್ಜೆಯನ್ನು ಇರಿಸಲು ನೆರವಾಗುತ್ತದೆ. ಸಣ್ಣ ಉದ್ಯಮಗಳೊಂದಿಗೆ ಸಂಪರ್ಕಿಸಲು ಜನರಿಗೆ ಸಹಾಯ ಮಾಡಲು ತನ್ನ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ನ್ನು ರಿಲಯನ್ಸ್ -ಕಾಮರ್ಸ್ ಉದ್ಯಮ ಜಿಯೋಮಾರ್ಟ್ನೊಂದಿಗೆ ಸಮನ್ವಯಗೊಳಿಸುವತ್ತ ಗಮನ ಹರಿಸುವುದಾಗಿ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಹೇಳಿತು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಹಲ್ಲೆ ಪ್ರಕರಣಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ್ದು ಇಂತಹ ಹಲ್ಲೆಗಳನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್  2020 ಏಪ್ರಿಲ್ 22ರ ಬುಧವಾರ ಇಲ್ಲಿ ತಿಳಿಸಿದರು.  ಸುಗ್ರೀವಾಜ್ಞೆಯ ಮೂಲಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ರಾಷ್ಟ್ರಪತಿಯವರ ಅಂಗೀಕಾರದೊಂದಿಗೆ ಸುಗ್ರೀವಾಜ್ಞೆಯನ್ನು ಅನುಷ್ಠಾನಗೊಳಿಸಲಾಗುವುದು. ಅಪರಾಧಗಳನ್ನು ಜಾಮೀನು ರಹಿತ ಮತ್ತು ದಂಡಾಧಿಕಾರಿಯ ಅಪ್ಪಣೆ ಇಲ್ಲದೆ ಬಂಧಿಸಬಹುದಾದ ಅಪರಾಧವನ್ನಾಗಿ ಮಾಡಲಾಗುವುದು ಎಂದು ಸಚಿವರು ನುಡಿದರು.  ತನಿಖೆಗಳು ೩೦ ದಿನದಲ್ಲಿ ಮುಕ್ತಾಯಗೊಳ್ಳುವುವು. ಲಕ್ಷ ರೂಪಾಯಿಗಳವರೆಗಿನ ದಂಡ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಯು ಏಳು ವರ್ಷಗಳವರೆಗಿನ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡದವರೆಗೂ ವಿಸ್ತರಿಸಲ್ಪಡುತ್ತದೆಎಂದು ಸಚಿವರು ಹೇಳಿದರು. ‘ಸಂದೇಶ ಸ್ಪಷ್ಟವಾಗಿದೆ. ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಮೇಲಿನ ದಾಳಿಗಳನ್ನು ಸಹಿಸಲಾಗುವುದಿಲ್ಲಎಂದು ಜಾವಡೇಕರ್ ನುಡಿದರು. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ, ನಿರ್ದಿಷ್ಟವಾಗಿ ಕೊರೋನಾ ಕಾಳಜಿ ವಹಿಸುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆಗಳನ್ನು ನಡೆಸಿದ ಬಗ್ಗೆ ಹಲವಾರು ದೂರುಗಳು ಸರ್ಕಾರಕ್ಕೆ ಬಂದಿದ್ದವು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೋರೋನಾ ವೈರಸ್ (ಕೋವಿಡ್-೧೯) ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ನಡೆಯುತ್ತಿರುವ  ಹಲ್ಲೆಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 22ರ ಬುಧವಾರ ಇಲ್ಲಿ ಖಂಡತುಂಡವಾಗಿ ಹೇಳಿದರು.  ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ಬಳಿಕ ಟ್ವೀಟ್ ಮಾಡಿದ ಪ್ರಧಾನಿಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ ೨೦೨೦ ಕೋವಿಡ್ -೧೯ರ ವಿರುದ್ಧ ಮುಂಚೂಣಿಯಲ್ಲಿ ನಿಂತು ದಿಟ್ಟವಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನನ್ನು ರಕ್ಷಿಸುವ ನಮ್ಮ  ಬದ್ಧತೆಯನ್ನು ತೋರಿಸುತ್ತದೆಎಂದು ಬರೆದರು. ‘ಅದು (ಸುಗ್ರೀವಾಜ್ಞೆ) ನಮ್ಮ ವೃತ್ತಿ ನಿರತರ ಸುರಕ್ಷತೆಯ ಖಾತರಿ ನೀಡುತ್ತದೆ. ಅವರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೇ ಇಲ್ಲಎಂದೂ ಪ್ರಧಾನಿ ಸ್ಪಷ್ಟ ಪಡಿಸಿದರು.  ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬಳಿಕ ಆರೋಗ್ಯ ವೃತ್ತಿ ನಿರತರು, ವೈದ್ಯಕೀಯ ಸಿಬ್ಬಂದಿ, ಮುಂಚೂಣಿಯ ಕಾರ್ಯಕರ್ತರ ಸುರಕ್ಷತೆಗೆ, ಅವರ ವಿರುದ್ಧದ ಹಿಂಸಾಚಾರ ತಡೆಯಲು ಸೂಕ್ತ ಭದ್ರತಾ ಕ್ರಮಗನ್ನು ಕೈಗೊಳ್ಳುವಂತೆಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿತು.   ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಬುಧವಾರ ೨೦,೪೭೧ಕ್ಕೆ ಏರಿದ್ದು, ಸಾವಿನ ಸಂಖ್ಯೆ ೬೪೦ಕ್ಕೆ ಏರಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೩೫೩ಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗಿದ್ದು, ೫೦ ಸಾವಿನ ವರದಿಗಳು ಬಂದಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)
2020: ಲಂಡನ್: ಕೊರೊನಾ ವೈರಸ್ ಸೋಂಕಿಗೆ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯನ್ನು 2020 ಏಪ್ರಿಲ್ ೨೩ರಿಂದ ಮನುಷ್ಯರ ಮೇಲೆ ಪ್ರಯೋಗಿಸಲು ಸಿದ್ಧತೆ ನಡೆದಿದೆ. ಲಸಿಕೆಯನ್ನು ಏಪ್ರಿಲ್ ೨೩ರ ಗುರುವಾರದಿಂದ ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು ಎಂದು ಸಂಶೋಧಕರು 2020 ಏಪ್ರಿಲ್  22ರ ಬುಧವಾರ  ಹೇಳಿದರು. ಕೋವಿಡ್-೧೯ ಸೋಂಕು ನಿಗ್ರಹಕ್ಕೆ ಸೂಕ್ತ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆಕ್ಸ್ಫರ್ಡ್ ವಿಶ್ವ ವಿದ್ಯಾಲಯವು ಕಾರ್ ಮಗ್ನವಾಗಿದ್ದು, ಇಂಗ್ಲೆಂಡ್ ಸರ್ಕಾರವು ಇದಕ್ಕಾಗಿ ಕೋಟಿ ಪೌಂಡ್ (ಸುಮಾರು ೧೮೯ ಕೋಟಿ ರೂಪಾಯಿ) ನೆರವು ನೀಡುವುದಾಗಿ ಮಂಗಳವಾರ ಘೋಷಿಸಿದೆ.  ವಿಶ್ವವಿದ್ಯಾಲಯದ  ಸಂಶೋಧಕರು ಕೋವಿಡ್-೧೯ ಸೋಂಕಿನ ನಿಗ್ರಹಕ್ಕಾಗಿ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಾರ್ಸ್-ಕೋವ್- ವೈರಸ್ ಸೋಂಕಿನಿಂದ ಉಂಟಾಗುವ ರೋಗಕ್ಕೆ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ಹೇಳಿರುವ ಪ್ರೊಫೆಸರ್ ಸರಾಹ್ ಗಿಲ್ಬರ್ಟ್ ಸೆಪ್ಟೆಂಬರಿನಲ್ಲಿ ಇದು ಮಾರುಕಟ್ಟೆಗೆ ಬರುವ ವಿಶ್ವಾವಿದೆ ಎಂದು ಹೇಳಿದ್ದಾರೆ. ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಲಸಿಕೆ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಇಂಗ್ಲೆಂಡಿನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದರು.  ಲಂಡನ್ನಿನ ಇಂಪೀರಿಯಲ್ ಕಾಲೇಜ್ ನಡೆಸುತ್ತಿರುವ ಪ್ರಯೋಗಗಳಿಗೂ .೨೫ ಕೋಟಿ ಪೌಂಡ್ ನೆರವು ನೀಡುವುದಾಗಿ ಹ್ಯಾನ್ಲಾಕ್ ನುಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್ಡೌನ್) ಅಂತಿಮವಾರಕ್ಕೆ ಪ್ರವೇಶಿಸುತ್ತಿದ್ದಂತೆಯೇ ಏಪ್ರಿಲ್ ೨೭ರ ಸೋಮವಾರ ಮತ್ತೊಮ್ಮೆ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು  2020 ಏಪ್ರಿಲ್  22ರ ಬುಧವಾರ ತೀರ್ಮಾನಿಸಿದರು.  ಮೇ ೩ರವರೆಗೆ ವಿಸ್ತರಿಸಲಾಗಿರುವ ದಿಗ್ಬಂಧನವನ್ನು ತೆರವುಗೊಳಿಸುವ ಬಗ್ಗೆ ಪ್ರಧಾನಿಯವರು ರಾಜ್ಯಗಳ ಅಭಿಪ್ರಾಯ ಕೇಳುವ ಸಾಧ್ಯತೆಗಳಿವೆ. ಇದಕ್ಕೆ ಮುನ್ನ ಬುಧವಾರ ಸರ್ಕಾರವು ಆರೋಗ್ಯ ಕಾರ್ಯಕರ್ತರನ್ನು ಹಿಂಸಾತ್ಮಕ ದಾಳಿಗಳಿಂದ ರಕ್ಷಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು. ಏಪ್ರಿಲ್ ೨೦ರಂದು ತೆಲಂಗಾಣ ರಾಜ್ಯ ಸಚಿವ ಸಂಪುಟವು ರಾಜ್ಯದಲ್ಲಿನ ದಿಗ್ಬಂಧನವನ್ನು ಮೇ ೭ರವರೆಗೆ ವಿಸ್ತರಿಸುವ ತೀರ್ಮಾನ  ಕೈಗೊಂಡಿತ್ತು. ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಬುಧವಾರ ೨೦,೪೭೧ಕ್ಕೇ ಏರಿದ್ದು, ಒಟ್ಟು ಸಾವಿನ ಸಂಖ್ಯೆ ೬೫೨ ತಲುಪಿದೆ. ಮಹಾರಾಷ್ಟ್ರ ಅತ್ಯಂತ ಹೆಚ್ಚು ಬಾಧಿತ ರಾಜ್ಯವಾಗಿದ್ದು ಸೋಂಕಿತರ ಸಂಖ್ಯೆ ,೧೯೧ಕ್ಕೇ ಏರಿದೆ. ಇದೊಂದೇ ರಾಜ್ಯದಲ್ಲಿ ೨೫೧ ಸಾವುಗಳು ಸಂಭವಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಲಿರುವ ನಾಲ್ಕನೇ ಸಂವಹನ ಇದಾಗಿದ್ದು, ಮೂರನೇ ಸಂವಹನ ಕಾಲದಲ್ಲಿ ಅವರು ಬಹುತೇಕ ಮುಖ್ಯಮಂತ್ರಿಗಳು ಮಾರ್ಚ್ ೨೫ರಂದು ಜಾರಿಗೊಳಿಸಲಾದ ದಿಗ್ಬಂಧನವನ್ನು ವಿಸ್ತರಿಸುವಂತೆ ಕೋರಿದರು ಎಂದು ತಿಳಿಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)


No comments:

Post a Comment