2020: ನವದೆಹಲಿ: ಕೋವಿಡ್ -೧೯ ದಿಗ್ಬಂಧನ ಅವಧಿಯಲ್ಲಿ
(ಮೇ ೩ರ ವರೆಗೂ)
ಇ-ಕಾಮರ್ಸ್ ಕಂಪೆನಿಗಳಿಂದ ಅಗತ್ಯೇತರ ವಸ್ತುಗಳ ಸರಬರಾಜನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು 2020
ಏಪ್ರಿಲ್
19ರ ಭಾನುವಾರ ತಿಳಿಸಿತು. ’ಕೋವಿಡ್-೧೯ ವಿರುದ್ಧದ ಸಮರ ಸಲುವಾಗಿ ವಿಧಿಸಲಾಗಿರುವ ಲಾಕ್‌ಡೌನ್ ೨ ಅವಧಿಯಲ್ಲಿ ಇ-ಕಾಮರ್ಸ್ ಕಂಪೆನಿಗಳಿಂದ ಅಗತ್ಯೇತರ ವಸ್ತುಗಳ ಸರಬರಾಜು ನಿಷೇಧಕ್ಕೆ ಒಳಪಟ್ಟಿದೆ’ ಎಂದು ಗೃಹ ವ್ಯವಹಾರಗಳ ವಕ್ತಾರರು ನುಡಿದರು.
ಸರ್ಕಾರವು ಈ ಮುನ್ನ ಇ-ಕಾಮರ್ಸ್ ವ್ಯವಹಾರಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿತ್ತು.
ಇ-ಕಾಮರ್ಸ್ ಕಂಪೆನಿಗಳಿಗೆ ಮೇ ೩ಕ್ಕೆ ಮುಕ್ತಾಯಗೊಳ್ಳಲಿರುವ ದಿಗ್ಬಂಧನ ಅಂತ್ಯಗೊಳ್ಳುವುದಕ್ಕೂ ಮುನ್ನವೇ ವಹಿವಾಟು ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು.
ಸರ್ಕಾರ ನೀಡಿದ್ದ ಅನುಮತಿಯನ್ನು ಆಧರಿಸಿ ಫ್ಲಿಪ್‌ಕಾರ್ಟ್ ಈಗಾಗಲೇ ಸ್ಮಾರ್ಟ್ ಫೋನುಗಳಿಗಾಗಿ ಆರ್ಡರ್ ತೆಗೆದುಕೊಳ್ಳಲು ಆರಂಭಿಸಿತ್ತು.
ಮೊದಲ ಹಂತದ ಲಾಕ್ ಡೌನ್ ಅವಧಿಯಲ್ಲಿ ಇ-ಕಾಮರ್ಸ್ ಕಂಪೆನಿಗಳಿಗೆ ಅಗತ್ಯ ವಸ್ತುಗಳ ಸರಬರಾಜಿಗೆ ಮಾತ್ರ ಸೀಮಿತ ಅವಕಾಶ ನೀಡಲಾಗಿತ್ತು.
’ಕೇಂದ್ರ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ’ ಎಂದು ಕ್ಷಿಯೋಮಿ ವಿಪಿ ಮನು ಕುಮಾರ್ ಜೈನ್ ಹೇಳಿದರು.
ಕಂಪೆನಿಯು ಈ ಮುನ್ನ ಕ್ಷಿಯೋಮಿಯ ಅಧಿಕೃತ ಇ-ಸ್ಟೋರ್ ಎಂಐ.ಕಾಮ್ ಮೂಲಕ ಆರ್ಡರ್ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪ್ರಕಟಿಸಿತ್ತು.
(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಇಡೀ ವಿಶ್ವವನ್ನೇ ಗಡಗಡ ನಡುಗಿಸುತ್ತಿರುವ ಕೊರೋನಾವೈರಸ್ಸಿನ ಉಗಮಕ್ಕೆ ಕಾರಣವಾಗಿದೆ ಎಂಬ ಹಿನ್ನೆಲೆಯಲಿ ತೀವ್ರ ಟೀಕೆಗೆ ಗುರಿಯಾಗಿರುವ ಚೀನಾದ ವುಹಾನ್ ನಗರದಲ್ಲಿರುವ ಮುಂಚೂಣಿಯ ಚೀನೀ ವೈರಾಣು ಪ್ರಯೋಗಾಲಯವು ಇದೇ ಮೊತ್ತ ಮೊದಲ ಬಾರಿಗೆ ತನ್ನ ಮೇಲಿನ ಆರೋಪವನ್ನು 2020
ಏಪ್ರಿಲ್
19ರ ಭಾನುವಾರ ತಳ್ಳಿಹಾಕಿತು. ಮಾರಕ ಕೊರೋನವೈರಸ್ ತಮ್ಮ ಸಂಸ್ಥೆಯಿಂದಲೇ ಹುಟ್ಟಿಕೊಂಡಿದೆ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವಾದ್ಯಂತ ಹಲವರು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ವೈರಾಣು ಸಂಸ್ಥೆಯ ನಿರ್ದೇಶಕ ಯುವಾನ್ ಝಿಮಿಂಗ್ ಅವರು ತಮ್ಮ ಮೊತ್ತ ಮೊದಲ ಪತ್ರಿಕಾ ಸಂದರ್ಶನ ನಡೆಸಿ ಕೊರೋನಾವೈರಸ್ಸಿನ ಹುಟ್ಟಿನ ಬಗೆಗಿನ ಎಲ್ಲ ವದಂತಿಗಳನ್ನೂ ನಿರಾಕರಿಸಿದರು.
ವಿಶ್ವಾದ್ಯಂತ ಈವರೆಗೆ ೨೩,೩೩,೧೬೦ ಮಂದಿಗೆ ಸೋಂಕು ತಗುಲಿ,
೧,೬೦,೭೯೦ ಮಂದಿಯನ್ನು ಬಲಿಪಡೆದಿರುವ ಕೊರೋನಾವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಪಾರದರ್ಶಕವಾಗಿಲ್ಲ ಎಂಬ ಕಾರಣಕ್ಕಾಗಿ ಚೀನಾದ ಮೇಲೆ ಜಾಗತಿಕ ಟೀಕೆಗಳ ಅತಿಯಾದ ಒತ್ತಡ ಬಿದ್ದಿದೆ.
ಕೊರೋನಾವೈರಸ್ ವಿಶ್ವಾದ್ಯಂತ ವ್ಯಾಪಿಸುವ ಮುನ್ನ ವುಹಾನ್ ಪ್ರಯೋಗಾಲಯದಿಂದ ’ತಪ್ಪಿಸಿಕೊಂಡಿತ್ತು’ ಎಂಬ ಬಗೆಗಿನ ವರದಿಗಳನ್ನು ತಮ್ಮ ಆಡಳಿತವು ಪರಿಶೀಲಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದರು.
’ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ.
ಬಹಳಷ್ಟು ಮಂದಿ ಹೇಳುತ್ತಿರುವುದರಲ್ಲಿ ಅರ್ಥವಿದೆ ಎನ್ನಿಸುತ್ತಿದೆ’ ಎಂದು ಟ್ರಂಪ್ ಅವರು ವುಹಾನ್ ನಗರದಲ್ಲಿ ಪ್ರಯೋಗಾಲಯದಿಂದ ತಪ್ಪಿಸಿಕೊಂಡ ಕೊರೋನಾರೋಗದ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದರು.
(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್-೧೯ ಸೋಂಕನ್ನು ಎದುರಿಸುವಲ್ಲಿ ಏಕತೆ ಮತ್ತು ಸಹೋದರತ್ವ ಬೆಳೆಸಿಕೊಳ್ಳುವಂತೆ 2020 ಏಪ್ರಿಲ್ 19ರ ಭಾನುವಾರ ಜನತೆಯನ್ನು ಒತ್ತಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ದಾಳಿಗೆ ಮುನ್ನ ಜನಾಂಗ,
ಧರ್ಮ ಅಥವಾ ಗಡಿಗಳನ್ನು ವೈರಸ್ ನೋಡುವುದಿಲ್ಲ’ ಎಂದು ಕಿವಿಮಾತು ಹೇಳಿದರು.
’ಜನಾಂಗ,
ಧರ್ಮ,
ವರ್ಣ,
ಜಾತಿ,
ಪಂಥ,
ಭಾಷೆ ಅಥವಾ ಗಡಿಗಳನ್ನು ನೋಡಿಕೊಂಡು ಕೋವಿಡ್-೧೯ ದಾಳಿ ಮಾಡುವುದಿಲ್ಲ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮಲ್ಲಿ ಏಕತೆ ಮತ್ತು ಸಹೋದರತ್ವ ಅತಿಮುಖ್ಯ.
ಈ ವಿಚಾರದಲ್ಲಿ ನಾವು ಒಟ್ಟಾಗಿದ್ದೇವೆ’ ಎಂದು ಪ್ರದಾನಿ ಮೋದಿ ಟ್ವೀಟ್ ಮಾಡಿದರು.
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಮುಸ್ಲಿಮ್ ಸಮಾವೇಶದ ಬಳಿಕ ಭಾರತದಲ್ಲಿ ಕೋವಿಡ್-೧೯ ಪ್ರಕರಣಗಳ ಅಲೆ ಹೆಚ್ಚಿದ್ದು,
ಅದರಿಂದ ಉಂಟಾದ ಸಿಟ್ಟು ಇಸ್ಲಾಂವಿರೋಧಿ ಹುಚ್ಚು ಎಬ್ಬಿಸಿದ ಹಿನ್ನೆಲೆಯಲ್ಲಿ ಪ್ರಧಾನಿಯವರಿಂದ ಈ ಹೇಳಿಕೆ ಬಂದಿದೆ.
ಇತಿಹಾಸದ ಪುಟಗಳಲ್ಲಿ ರಾಷ್ಟ್ರಗಳು ಮತ್ತು ಸಮಾಜಗಳು ಪರಸ್ಪರ ವಿರುದ್ದವಾಗಿದ್ದವು.
ಆದರೆ ಇಂದು ನಾವೆಲ್ಲರೂ ಒಟ್ಟಾಗಿ ಸಾಮಾನ್ಯ ಸವಾಲನ್ನು ಎದುರಿಸುತ್ತಿದ್ದೇವೆ ಎಂದೂ ಪ್ರಧಾನಿ ಹೇಳಿದರು.
’ಒಗ್ಗಟ್ಟಾಗಿರುವುದು ಮತು ಹೊಂದಿಕೊಂಡಿರುವುದರಲ್ಲಿ ಭವಿಷ್ಯ ಇದೆ’ ಎಂದೂ ಪ್ರಧಾನಿ ನುಡಿದರು.
(ವಿವರಗಳಿಗೆ
ಇಲ್ಲಿ ಕ್ಲಿಕ್ ಮಾಡಿರಿ)
2020: ವಾಷಿಂಗ್ಟನ್: ಕೊರೊನಾವೈರಸ್
(ಕೋವಿಡ್-೧೯)
ಸೋಂಕಿಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 2020
ಏಪ್ರಿಲ್
19ರ ಭಾನುವಾರ ೧.೬೨ ಲಕ್ಷ ದಾಟಿತು. ೧೯೩ ದೇಶಗಳಲ್ಲಿ ಈವರೆಗೆ ೨೩.೫೫ ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್ ಸೋಂಕು ಕಾಣಿಸಿಕೊಂದ್ದು,
ಸುಮಾರು ೬ ಲಕ್ಷ ಮಂದಿ ಗುಣಮುಖರಾಗಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ಮಾಹಿತಿ ಪ್ರಕಾರ,
2020 ಏಪ್ರಿಲ್
19ರ ಭಾನುವಾರ ರಾತ್ರಿ ೦೯ ಗಂಟೆ ವೇಳೆಗೆ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ೨,೩೫೫,೬೭೬ಕ್ಕೆ ಏರಿಕೆಯಾಯಿತು. ೧೬೨,೦೩೨ ಮಂದಿ ಮೃತರಾಗಿದ್ದು ೬೦೫,೧೪೩ ಮಂದಿ ಚೇತರಿಸಿಕೊಂಡಿದ್ದಾರೆ.
ಸ್ಪೇನಿನಲ್ಲಿ
೧೯೫,೯೪೪ ಮಂದಿಗೆ ಸೋಂಕು ತಗುಲಿದ್ದು,
೨೦,೪೫೩ ಜನ ಮೃತರಾಗಿದ್ದಾರೆ. ೭೭,೩೫೭ ಜನ ಗುಣಮುಖರಾಗಿದ್ದಾರೆ.
ಇಟಲಿಯಲ್ಲಿ ಸೋಂಕಿತರ ಸಂಖ್ಯೆ ೧೭೫,೯೨೫ ತಲುಪಿದ್ದು,
೨೩,೨೨೭ ಮಂದಿ ಸಾವಿಗೀಡಾಗಿದ್ದಾರೆ.
೪೪,೯೨೭ ಜನ ಚೇತರಿಸಿದ್ದಾರೆ.
ಅಮೆರಿಕದಲ್ಲಿ ೭೩೫,೩೬೬ ಪ್ರಕರಣ ದಾಖಲಾಗಿದ್ದು,
೩೯,೦೯೫ ಮಂದಿ ಮೃತರಾಗಿದ್ದಾರೆ. ೬೬,೮೫೪ ಜನ ಗುಣಮುಖರಾಗಿದ್ದಾರೆ.
ನ್ಯೂಯಾರ್ಕಿನಲ್ಲಿ ಸಾವಿನ ಸಂಖ್ಯೆ ಇಳಿಮುಖ:
‘ನ್ಯೂಯಾರ್ಕಿನಲ್ಲಿ ಕೋವಿಡ್-೧೯ರಿಂದಾಗಿ ಪ್ರತಿದಿನ ಕನಿಷ್ಠ ೫೫೦ ಮಂದಿ ಮೃತರಾಗುತ್ತಿದ್ದರು. ಎರಡು ವಾರಗಳಲ್ಲಿ ಇದೇ ಮೊದಲ ಬಾರಿಗೆ ದಿನದ ಸಾವಿನ ಪ್ರಮಾಣ ೫೫೦ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಗವರ್ನರ್ ಆಂಡ್ರ್ಯೂ ಕುಮೊ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಕಟ್ಟುನಿಟ್ಟಿನ ಲಾಕ್ ಡೌನ್ 2020 ಏಪ್ರಿಲ್
20ರ ಸೋಮವಾರದಿಂದ ಸ್ವಲ್ಪ ಪ್ರಮಾಣದಲ್ಲಿ ಸಡಿಲಿಕೆಯಾಗಲಿದ್ದು,ಕೆಲ ಕ್ಷೇತ್ರಗಳಿಗೆ ಲಾಕ್ ಡೌನ್ ನಿಂದ ಷರತ್ತು ಬದ್ಧ ವಿನಾಯಿತಿ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಏಪ್ರಿಲ್
21ರ ರಾತ್ರಿಯವರೆಗೂ ಲಾಕ್ ಡೌನ್ ಸಡಿಲಿಸದೇ ಇರಲು ಸರ್ಕಾರ ತೀರ್ಮಾನಿಸಿತು. ಈ ಮಧ್ಯೆ ಬೆಂಗಳೂರಿನ
ಪಾದರಾಯನಪುರದಲ್ಲಿ ಕ್ವಾರಂಟೈನ್ ಗೆ ಒಳಪಡುವಂತೆ ಸೂಚಿಸಲು ಹೋದ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ
ನಡೆದ ಘಟನೆ ಘಟಿಸಿತು. ಕೆಲ ಸರ್ಕಾರಿ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ..
ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಲು ಉದ್ದೇಶಿಸಿರುವ ಸೇವೆಗಳು ಹಾಗೂ ಚಟುವಟಿಕೆಗಳಿಗಾಗಿ ವಿಶೇಷ ಮಾರ್ಗಸೂಚಿಗಳನ್ನು ಕೇಂದ್ರವು ಜಾರಿಗೊಳಿಸಿತು.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಒಂದಷ್ಟು ನಿರ್ದೇಶನಗಳನ್ನು ಮತ್ತು ಮಾಹಿತಿಗಳನ್ನು ನೀಡಿದ್ದು,
ಕೆಲವು ಕ್ಷೇತ್ರಗಳು ಲಾಕ್ ಡೌನ್ ನಿಂದ ವಿನಾಯಿತಿ ಪಡೆಯಲಿದೆ.
ಆದರೆ
,ಈ ವಿನಾಯಿತಿ ಜಾರಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು.ಸರ್ಕಾರಗಳು ಬಯಸಿದರೆ ಇದನ್ನು ಜಾರಿಗೆ ತರಬಹುದು ಇಲ್ಲವೇ ಯಾಥಾ ಸ್ಥಿತಿ ಮುಂದುವರೆಸಬಹುದು ಎಂದೂ ಕೇಂದ್ರ ಗೃಹ ಸಚಿವಾಲಯ ಹೇಳಿತು. ಲಾಕ್‌ಡೌನ್ ೨.೦ ಈಗಾಗಲೇ ಜಾರಿಯಲ್ಲಿದ್ದು,
ಏ.
೨೦ರಿಂದ ಆಯಾ ಪ್ರದೇಶಗಳ ಪರಿಸ್ಥಿತಿಗನುಗುಣವಾಗಿ ಸೀಮಿತ ಸಡಿಲಿಕೆ ಮಾಡಬಹುದಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು.
ಅದರಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಸರ್ಕಾರ ಕೆಲ ಸಡಿಲಿಕೆಯೊಂದಿಗೆ ಲಾಕ್‌ಡೌನ್ ಮುಂದುವರೆಸಲಿದೆ.
ಈ ಕುರಿತು ಕೇಂದ್ರ ಟೆಲಿಕಾಂ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿ ಆರೋಗ್ಯ ಸೇವೆ,
ಕೃಷಿ ಉತ್ಪನ್ನ ಮಾರಾಟ
, ಮೀನುಗಾರಿಕೆ,
ಹೈನುಗಾರಿಕೆ ಉತ್ಪನ್ನಗಳು ವಿನಾಯ್ತಿ ಪಟ್ಟಿಯಲ್ಲಿ
ಸೇರಿವೆ. ಕಂಟೆನ್ ಮೆಂಟ್ ಜೋನ್ ಗಳಲ್ಲಿ ಯಾವುದೇ ರೀತಿಯ ಅನುಮತಿ ನೀಡಲಾಗಿಲ್ಲ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment