ನಾನು ಮೆಚ್ಚಿದ ವಾಟ್ಸಪ್

Friday, April 17, 2020

ಇಂದಿನ ಇತಿಹಾಸ History Today ಏಪ್ರಿಲ್ 17

2020:  ನವದೆಹಲಿ: ಕೊರೋನಾವೈರಸ್ ಪರಿಣಾಮವಾಗಿ ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಚ್ಚಿನ ಒತ್ತು ನಿಡುತ್ತಿದ್ದು, ನಿಟ್ಟಿನಲ್ಲಿ ರಿವರ್ಸ್ ರೆಪೋ ದರವನ್ನು ೨೫ ಬೇಸಿಸ್ ಪಾಯಿಂಟಿನಷ್ಟು ಇಳಿಕೆ ಮಾಡಲಾಗಿದೆ, ದರವು ಶೇ.೪ರಿಂದ ಶೇ..೭೫ಕ್ಕೆ ಇಳಿಕೆಯಾಗಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 2020 ಏಪ್ರಿಲ್ 17ರ ಶುಕ್ರವಾರ ಪ್ರಕಟಿಸಿದರು.  ಉತ್ಪಾದನಾ ವಲಯಗಳಿಗೆ ಸಾಲ ನೀಡಲು ಕ್ರಮವು ಬ್ಯಾಂಕುಗಳಿಗೆ ಅನುವು ಕಲ್ಪಿಸುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಾ ಹೇಳಿದರು.  ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಧೈರ್ಯ ತುಂಬುವ ಸಲುವಾಗಿ ದೀರ್ಘಗಾಮೀ ರೆಪೋ ಕಾರ್ಯಾಚರಣೆಗಾಗಿ (ಟಿಎಲ್ಟಿಆರ್) ೫೦ ಸಾವಿರ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ನೆರವು ಘೋಷಿಸುತ್ತಿರುವುದಾಗಿಯೂ ಅವರು ಹೇಳಿದರುರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ (ನಬಾರ್ಡ್), ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್ ಮತ್ತು ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕಿಗೆ (ಎಸ್ಐಡಿಬಿ-ಸಿಡ್ಬಿ) ಒಟ್ಟು ೫೦,೦೦೦ ಕೋಟಿ ರೂಪಾಯಿಗಳ ನೆರವನ್ನು ಒದಗಿಸಲಾಗುತ್ತಿದೆ ಎಂದೂ ಅರ್ಬಿಐ ಗವರ್ನರ್ ನುಡಿದರು. ಕಳೆದ ಮೂರು ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಭಾರತದ ಜಿಡಿಪಿ ಸಹ ಶೇ..೯ಕ್ಕೆ ಕುಸಿದಿದೆ. ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಪುನಶ್ಚೇತನಕ್ಕಾಗಿ ಆರ್ಬಿಐ ಹಲವು ಯೋಜನೆ ರೂಪಿಸುತ್ತಿದೆ. ಕ್ರಮಗಳ ಪರಿಣಾಮವಾಗಿ ೨೦೨೧ -೨೨ರ ಅವಧಿಯಲ್ಲಿ ದೇಶದ ಜಿಡಿಪಿ ಶೇ..೪ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಗವರ್ನರ್ ವಿಶ್ವಾಸ ವ್ಯಕ್ತಪಡಿಸಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಪಾಸಿಟಿವ್ ಪ್ರಕರಣಗಳ ದುಪ್ಪಟ್ಟು ಪ್ರಮಾಣವು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಬಳಿಕ ಇಳಿಮುಖವಾಗಿದ್ದು ಹಿಂದೆ ದಿನಗಳಿಗೊಮ್ಮ ಆಗುತ್ತಿದ್ದ ದುಪ್ಪಟ್ಟು ಸಂಖ್ಯೆ ಈಗ . ದಿನಗಳಿಗೊಮ್ಮೆ ಆಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್ 17ರ ಶುಕ್ರವಾರ ತಿಳಿಸಿತು. ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ ಮೊದಲು ಕೋವಿಡ್-೧೯ ಪ್ರಕರಣಗಳು ದಿನಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿದ್ದವು. ಆದರೆ, ಕಳೆದ ದಿನಗಳ ಮಾಹಿತಿ ಪ್ರಕಾರ ದುಪ್ಪಟ್ಟು ದರವು ಈಗ . ದಿನಗಳಾಗಿವೆ. ೧೯  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದುಪ್ಪಟ್ಟು ದರವು ಸರಾಸರಿ ದುಪ್ಪಟ್ಟು ದರಕ್ಕಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು. ೧೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದುಪ್ಪಟ್ಟು ದರವು ರಾಷ್ಟ್ರೀಯ ದುಪ್ಪಟ್ಟು ಮಟ್ಟಕ್ಕಿಂತ ಕೆಳಗಿದೆ. ಕೇರಳ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಲಡಾಖ್, ಪುದುಚ್ಚೇರಿ, ದೆಹಲಿ, ಬಿಹಾರ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಪಂಜಾಬ್, ಅಸ್ಸಾಂ, ತ್ರಿಪುರ ಎಲ್ಲ ರಾಜ್ಯಗಳಲ್ಲಿ ಕೊರೋನಾವೈರಸ್ ಪ್ರಕರಣಗಳ ದುಪ್ಪಟ್ಟು ದರವು ಕಡಿಮೆ ಇದೆ ಎಂದು ಅಗರವಾಲ್ ನುಡಿದರು. ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ ಬಳಿಕ ಮತ್ತು ಅದನ್ನು ಪುನಃ ವಿಸ್ತರಿಸಿದ ಪರಿಣಾಮವಾಗಿ ರಾಷ್ಟ್ರೀಯ ಮಟ್ಟದಲ್ಲಿ ಸೋಂಕಿನ ದುಪ್ಪಟ್ಟು ಪ್ರಮಾಣವು ೩ರಿಂದ . ದಿನಗಳಿಗೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು. ಚೇತರಿಸಿದ ಕೋವಿಡ್-೧೯ ರೋಗಿಗಳು ಮತ್ತು ಸಾವುಗಳ ಅನುಪಾತವು ದೇಶದಲ್ಲಿ ೮೦:೨೦ ಪ್ರಮಾಣದಲ್ಲಿದೆ. ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಹೆಚ್ಚು ಎಂದು ಆರೋಗ್ಯ ಅಧಿಕಾರಿ ಹೇಳಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕವನ್ನು ಪರಾಭವಗೊಳಿಸುವಲ್ಲಿ ಭಾರತೀಯರ ಸಹಕಾರವನ್ನು ಕೋರಿ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ಮೇ ೩ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಸ್ತರಿಸಿದ್ದರ ಮಧ್ಯೆಯೇ, ಭಾರತದಲ್ಲಿ ಕೋವಿಡ್-೧೯ ಸೋಂಕು ತಗುಲಿದವರ ಸಂಖ್ಯೆ 2020 ಏಪ್ರಿಲ್ 17ರ ಶುಕ್ರವಾರ ೧೩,೩೮೭ ಮತ್ತು ಮೃತರ ಸಂಖ್ಯೆ ೪೦೭ಕ್ಕೆ ಏರಿತು೧೩,೩೮೭ ಸೋಂಕಿನ ಪ್ರಕರಣಗಳಲ್ಲಿ ೧೧,೨೦೧ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ೧೭೪೮ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.  ಏಷ್ಯಾದ ಕೊಳಚೆಗೇರಿಗಳಲ್ಲೇ ಅತ್ಯಂತ ದೊಡ್ಡದಾಗಿರುವ ಮುಂಬೈಯ ಧಾರಾವಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶುಕ್ರವಾರ ೧೦೧ಕ್ಕೆ ಏರಿತು. ಪೈಕಿ ೧೦ ಮಂದಿ ಸಾವನ್ನಪ್ಪಿದ್ದಾರೆ.  ಹರಿಯಾಣದಲ್ಲಿ ಸೋಂಕಿನ ಸಂಖ್ಯೆ ೨೨೧ಕ್ಕೆ ಏರಿದ್ದು ನುಹ್ ಮತು ಪಂಚಕುಲ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾದವು. ಅತಿಬಾಧಿತ ನುಹ್ನಲ್ಲಿ ಪ್ರಕರಣಗಳು ವರದಿಯಾದರೆ, ಹಿಂದೆ ಒಂದೇ ಕುಟುಂಬದ ಮಂದಿಯಲ್ಲಿ ಸೋಂಕು ಕಂಡು ಬಂದು ಭಾರೀ ಸುದ್ದಿ ಮಾಡಿದ್ದ ಪಂಚಕುಲದಲ್ಲಿ ಶುಕ್ರವಾರ ಇನ್ನೆರಡು ಪ್ರಕರಣಗಳು ವರದಿಯಾದವುಸೇನಾ ವೈದ್ಯ, ವರ್ಷದ ಮಗುವಿಗೆ ಸೋಂಕು: ಉತ್ತರಾಖಂಡದ ಡೆಹ್ರಾಡ್ನಲ್ಲಿ ಸೇನಾ ವೈದ್ಯ ಮತ್ತು ಒಂದು ವರ್ಷದ ಮಗು ಸೇರಿದಂತೆ ಮೂವರಿಗೆ ಕೊರೋನಾಸೋಂಕು ತಗುಲಿದ ಬಗ್ಗೆ ವರದಿಯಾಗಿದ್ದು, ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೪೦ಕ್ಕೆ ಏರಿತು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ಭೋಪಾಲ್: ಮಧ್ಯಪ್ರದೇಶವು ಕೊರೋನಾವೈರಸ್ ಬಿಕ್ಕಟ್ಟಿನೊಂದಿಗೆ ಸಮರ ನಡೆಸುತ್ತಿರುವಾಗಲೇ ಬಿಜೆಪಿ ನೇತೃತ್ವದ ಸರ್ಕಾರ ರಚಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಚಿವ ಸಂಪುಟ ರಹಿತ ಮುಖ್ಯಮಂತ್ರಿಯಾಗಿ ೨೫ ದಿನಗಳನ್ನು ಪೂರೈಸುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ದಾಖಲೆಯನ್ನು ಮುರಿದಿದ್ದು ಇದು ಈಗ ಮಧ್ಯಪ್ರದೇಶದಲ್ಲಿ ರಾಜಕೀಯ ಚರ್ಚೆಗೆ ಮುನ್ನುಡಿ ಬರೆಯಿತು. ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ  ನಿಕಟವರ್ತಿಗಳನ್ನು ಶಿವರಾಜ್ ಸಿಂಗ್ ಚೌಹಾಣ್ ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಂಪುಟ ವಿಸ್ತರಣೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ತಮ್ಮ ಜೊತೆಗೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಮಂದಿಯನ್ನು ಚೌಹಾಣ್ ಸರ್ಕಾರಕ್ಕೆ ಸೇರ್ಪಡೆ  ಮಾಡುವಂತೆ ಸಿಂಧಿಯಾ ಕೋರಿದ್ದಾರೆ ಎನ್ನಲಾಗಿದೆ.  ಕೊರೋನಾವೈರಸ್ ಸೋಂಕು ದೇಶದಲ್ಲಿ ವ್ಯಾಪಕಗೊಳ್ಳತೊಡಗಿದ್ದ ಹೊತ್ತಿನಲ್ಲೇ ಮಾರ್ಚ್ ೨೩ರಂದು ಸಂಕ್ಷಿಪ್ತ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಚೌಹಾಣ್ ಅವರು ಇನ್ನೂ ತಮ್ಮ ಸಂಪುಟ ರಚನೆಯನ್ನು ಮಾಡಿಲ್ಲ. ಹೀಗೆ ಮಾಡುವ ಮೂಲಕ ಸಚಿವ ಸಂಪುಟ ರಹಿvರಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಚೌಹಾಣ್ ಬರೆದಿದ್ದಾರೆ. ಚೌಹಾಣ್ ಅವರು ಗುರುವಾರ ಮುಖ್ಯಮಂತ್ರಿಯಾಗಿ ೨೫ ದಿನಗಳನ್ನು ಪೂರೈಸಿದ್ದಾರೆ. ದಾಖಲೆ ಈವರೆಗೆ  ಅಧಿಕಾರ ವಹಿಸಿಕೊಂಡ ೨೪ ದಿನಗಳ ಬಳಿಕ ಸಂಪುಟ ರಚಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರಿನಲ್ಲಿ ಇತ್ತು.  ಕಾಂಗ್ರೆಸ್ ರಾಜ್ಯಸಭಾ ಸದಸ್ಯ ವಿವೇಕ್ ಥಂಕಾ ಅವರು 2020 ಏಪ್ರಿಲ್ 17ರ ಶುಕ್ರವಾರ ಬೆಳವಣಿಗೆಯನ್ನು ನೆನಪಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕಮ್ಯೂನಿಸ್ಟ್ ಆಡಳಿತದ ಚೀನಾ ಎಂದಿಗೂ ಪಾರದರ್ಶಕವಲ್ಲ ಎಂಬುದಾಗಿ ಜಗತ್ತಿನ ಇತರ ರಾಷ್ಟ್ರಗಳ ನಿರಂತರ ಆರೋಪದ ಮಧ್ಯೆ ಅದನ್ನು ಪುಷ್ಟೀಕರಿಸುವಂತಹ ರೀತಿಯಲ್ಲಿ ಚೀನಾ ತನ್ನ ಕೋವಿಡ್ -೧೯ ಸೋಂಕಿನ ಮೃತರ ಸಂಖ್ಯೆಯನ್ನು  2020 ಏಪ್ರಿಲ್ 17ರ ಶುಕ್ರವಾರ ಏಕಾಏಕಿ ಪರಿಷ್ಕರಿಸಿತು,.  ಕೊರೋನಾವೈರಸ್ ಸಾವು-ನೋವುಗಳ ವಿವರವನ್ನು ಚೀನಾ ಮುಚ್ಚಿಟ್ಟಿದೆ ಎಂಬುದಾಗಿ ಅಮೆರಿಕ ಸೇರಿದಂತೆ ಅನೇಕ ದೇಶಗಳು ಆರೋಪ ಮಾಡಿರುವುದರ ನಡುವೆಯೇ, ಕೊರೋನಾಸೋಂಕಿಗೆ ಬಲಿಯಾದ ತನ್ನ ಪ್ರಜೆಗಳ ಪಟ್ಟಿಯನ್ನು ಚೀನಾ ಪರಿಷ್ಕರಿಸಿ ಅದಕ್ಕೆ ೧೦೦೦ಕ್ಕೂ ಹೆಚ್ಚು ಜನರ ಹೆಸರುಗಳನ್ನು ಸೇರ್ಪಡೆ ಮಾಡಿದೆ.  ಪರಿಷ್ಕೃತ ಪಟ್ಟಿಯ ಪ್ರಕಾರ ಕೊರೋನಾ ವೈರಸ್ ಮೊದಲ ದಾಂಗುಡಿ ಇಟ್ಟ ವುಹಾನ್ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಶೇ. ೫೦ರಷ್ಟು ಹೆಚ್ಚಾಯಿತು.  ಚೀನಾ ಹಿಂದೆ ನೀಡಿದ್ದ ಮಾಹಿತಿ ಪ್ರಕಾರ, ದೇಶದಲ್ಲಿನ ಒಟ್ಟಾರೆ ಕೊರೋನಾ ಸಾವಿನ ಸಂಖ್ಯೆ ,೩೩೨ ಇತ್ತು. ವುಹಾನ್ ಪ್ರಾಂತ್ಯದಲ್ಲಿ ,೫೭೯ ಮಂದಿ ಸತ್ತಿದ್ದಾರೆ ಎಂದು ವರದಿಯಾಗಿತ್ತು.  ಬಳಿಕ ಚೀನಾ ಆಡಳಿತ ಮತ್ತೆ ಪುನರ್ಪರಿಶೀಲನೆ ನಡೆಸಿ ವುಹಾನ್ ನಗರದಲ್ಲಿ ,೨೯೦ ಮಂದಿಯನ್ನು ಪಟ್ಟಿಗೆ ಹೊಸದಾಗಿ ಸೇರಿಸಿತು. ಇಷ್ಟು ಜನರು ಕೊರೋನಾದಿಂದ ಸಾವನ್ನಪ್ಪಿದರೆಂಬ ಮಾಹಿತಿ ಆಡಳಿತಕ್ಕೆ ಸಿಕ್ಕಿರಲಿಲ್ಲ. ಈಗ ಅದು ಬೆಳಕಿಗೆ ಬಂದಿರುವುದರಿಂದ ಪಟ್ಟಿ ಪರಿಷ್ಕರಣೆ ಮಾಡಲಾಯಿತು ಎಂದು ಚೀನಾ ಪ್ರತಿಪಾದಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ) .
ಇಂದಿನ ಇತಿಹಾಸ  History Today ಏಪ್ರಿಲ್ 17  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)


No comments:

Post a Comment