2020: ನವದೆಹಲಿ: 2020 ಏಪ್ರಿಲ್ ೫ರ ಭಾನುವಾರ ರಾತ್ರಿ ೯ ಗಂಟೆಗೆ ಸರಿಯಾಗಿ ೯ ನಿಮಿಷಗಳ ಕಾಲ
ದೇಶಾದ್ಯಂತ ಮನೆಗಳಲ್ಲಿ ಲೈಟುಗಳನ್ನು ಆರಿಸಿ, ದೀಪ, ಹಣತೆ,
ಕ್ಯಾಂಡಲ್, ಟಾರ್ಚ್ ಅಥವಾ
ಮೊಬೈಲ್ ಫ್ಲಾಷ್ ಲೈಟುಗಳನ್ನು ಬೆಳಗುವ ಮೂಲಕ ಕೊರೋನಾವೈರಸ್ ಅಂಧಕಾರವನ್ನು ಕೊನೆಗೊಳಿಸಲು ’ಬೆಳಕಿನ ಸಂಕಲ್ಪ’ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು
2020 ಏಪ್ರಿಲ್ 03ರ ಶುಕ್ರವಾರ ದೇಶದ
ಜನತೆಗೆ ಕರೆ ನೀಡಿದರು. ಏಪ್ರಿಲ್ ೫ರ ಭಾನುವಾರ ರಾತ್ರಿ ೯ ಗಂಟೆಯ
ವೇಳೆಗೆ ತಾವು ಇರುವ
ಜಾಗಗಳಲ್ಲಿಯೇ ಮನೆಬಾಗಿಲು ಇಲ್ಲವೇ ತಾರಸಿಗೆ ಬಂದು ಜ್ಯೋತಿ ಬೆಳಗುವ ಮೂಲಕ ಕೊರೋನಾವೈರಸ್ ಅಂಧಕಾರ ವಿರುದ್ಧದ ಹೋರಾಟದಲ್ಲಿ ದೇಶದ ೧೩೦ ಕೋಟಿ
ಭಾರತೀಯರು ಒಗ್ಗಟ್ಟಾಗಿದ್ದೇವೆ ಎಂಬ
ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಬೇಕು ಎಂದು ಪ್ರಧಾನಿ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದರು. ಜ್ಯೋತಿ ಬೆಳಗುವ ವೇಳೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಮತ್ತು ಗುಂಪುಗೂಡಬಾರದು ಎಂದು
ಪ್ರಧಾನಿ ಪುರುಚ್ಚರಿಸಿದರು. ಜನರು
ಮನೆಗಳ ಒಳಗೇ ವಾಸ್ತವ್ಯ ಹೂಡಬೇಕು. ಹೊರಬರುವುದಾಗಲೀ, ಮೆರವಣಿಗೆ ನಡೆಸುವುದಾಗಲೀ ಮಾಡಬಾರದು ಎಂದು
ಅವರು ನುಡಿದರು. ಮಾರ್ಚ್ ೨೪ರಂದು ಆರಂಭವಾದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್)
ವೇಳೆಯಲ್ಲಿ ಜನತೆ ಅಭೂತಪೂರ್ವ ಶಿಸ್ತು ಮತ್ತು ಸೇವಾ
ಮನೋಭಾವವನ್ನು ಪ್ರದರ್ಶಿಸಿದ್ದಾರೆ ಎಂದು
ಪ್ರಧಾನಿ ಶ್ಲಾಘಿಸಿದರು. ಕೊರೋನಾ ಬಿಕ್ಕಟ್ಟಿನ ವೇಳೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವವರೆಗೆ ಕೃತಜ್ಞತೆ ಸಲ್ಲಿಸಲು ದೇಶದ
ಹಲವಡೆಗಳಲ್ಲಿ ಮಾರ್ಚ್ ೨೨ರ
ಸಂಜೆ ಚಪ್ಪಾಳೆ ತಟ್ಟಿದ ಹಾಗೂ ಜಯಗಂಟೆ ಮೊಳಗಿಸಿದ ವೇಳೆಯಲ್ಲಿ ಜನರು ಗುಂಪುಗೂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರದ ತಮ್ಮ
ಸಂದೇಶದಲ್ಲಿ ಪ್ರಧಾನಿ ’ಸಾಮಾಜಿಕ ಅಂತರ’ ಕಾಯ್ದುಕೊಳ್ಳುವಿಕೆಗೆ ಭಂಗ
ಬರಬಾರದು ಎಂದು ಪುನರಪಿ ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮಾರಕ ಕೊರೋನಾವೈರಸ್ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ವೇಳೆಯಲ್ಲಿ ಜನರ
ಜೀವಗಳನ್ನು ಅಪಾಯಕ್ಕೆ ತಳ್ಳಿದ ೯೬೦ ಮಂದಿ ತಬ್ಲಿಘಿ ಜಮಾತ್ ವಿದೇಶೀ ಕಾರ್ಯಕರ್ತರ ವಿರುದ್ಧ ಪ್ರಥಮ ಮಾಹಿತಿ ವರದಿಗಳನ್ನು (ಎಫ್ ಐಆರ್)
ದಾಖಲಿಸುವಂತೆ ಕೇಂದ್ರ ಗೃಹ
ಸಚಿವಾಲಯವು ದೆಹಲಿ ಪೊಲೀಸ್ ಕಮೀಷನರ್ ಮತ್ತು ರಾಜ್ಯ
ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) 2020 ಏಪ್ರಿಲ್
03ರ ಶುಕ್ರವಾರ ಆಜ್ಞಾಪಿಸಿತು. ೯೬೦
ವಿದೇಶೀಯರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ವೀಸಾಗಳನ್ನು ರದ್ದು ಪಡಿಸಲಾಗಿದೆ ಎಂಬ
ಮಾಹಿತಿಯನ್ನು ಗೃಹ ಸಚಿವಾಲಯವು ಗುರುವಾರ ರಾತ್ರಿ ರಾಜ್ಯಗಳಿಗೆ ತಿಳಿಸಿತ್ತು. ಈ ವಿದೇಶೀಯರು ಪ್ರವಾಸೀ ವೀಸಾಗಳ ಆಧಾರದಲ್ಲಿ ದೇಶವನ್ನು ಪ್ರವೇಶಿಸಿದ್ದರು. ಆದರೆ
ಬಳಿಕ ರಾಷ್ಟ್ರವ್ತಾಪಿ ದಿಗ್ಬಂಧನ ಜಾರಿಯಲ್ಲಿ ಇದ್ದುದರ ಹೊರತಾಗಿಯೂ ನಿಜಾಮುದ್ದೀನ್ ಕೇಂದ್ರ ಕಚೇರಿಯಲ್ಲಿ ತಬ್ಲಿಘಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ತಬ್ಲಿಘಿ ಸಮಾವೇಶವು ದೇಶದಲ್ಲಿ ಕೊರೋನಾವೈರಸ್ ಸೋಂಕು ವ್ಯಾಪಿಸಲು ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ನಡೆದ
ತಬ್ಲಿಘಿ ಜಮಾತ್ ಸಮಾವೇಶವು ಭಾರತದಾದ್ಯಂತ ನೂರಾರು ಕೋವಿಡ್-೧೯ ಪ್ರಕರಣಗಳಿಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಗುರುವಾರ ಸಂಜೆವರೆಗಿನ ದೆಹಲಿಯ ೨೯೩
ಕೋವಿಡ್ -೧೯ ಪ್ರಕರಣಗಳಲ್ಲಿ ಶೇಕಡಾ ೬೦ರಷ್ಟು ಪ್ರಕರಣಗಳು ಜಮಾತ್ ಸಮಾವೇಶಕ್ಕೆ ಸಂಬಂಧಿಸಿದವೇ ಆಗಿವೆ ಎಂಬುದು ಖಚಿತವಾಗಿದೆ. ವಿದೇಶೀ ಜಮಾತ್ ಕಾರ್ಯಕರ್ತರ ಚಟುವಟಿಕೆಗಳು ಹಾಲಿ ಕೋವಿಡ್-೧೯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಹಲವರ
ಪ್ರಾಣಗಳನ್ನು ಅಪಾಯಕ್ಕೆ ಒಡ್ಡಿವೆ ಎಂದು ಪತ್ರ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ (ಕೋವಿಡ್-೧೯)
ಸಾಂಕ್ರಾಮಿಕ ಪಿಡುಗಿದೆ ಸಂಬಂಧಿಸಿದ ೬೪೭ ಪ್ರಕರಣಗಳು ದೇಶದಲ್ಲಿ ರೋಗದ ’ಹಾಟ್ ಸ್ಪಾಟ್’ ಆಗಿ ಪರಿಣಮಿಸಿದರುವ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್
ಧಾರ್ಮಿಕ ಸಮಾವೇಶಕ್ಕೆ ಸಂಬಂಧ
ಪಟ್ಟ ಪ್ರಕರಣಗಳಾಗಿವೆ ಎಂದ
ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್
03ರ ಶುಕ್ರವಾರ ಪ್ರಕಟಿಸಿತು. ಈ ಪ್ರಕರಣಗಳು ೧೪ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ,
ಅಸ್ಸಾಂ, ದೆಹಲಿ, ಹಿಮಾಚಲ, ಹರಿಯಾಣ, ಜಮ್ಮು ಮತ್ತು
ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ ಮತ್ತು
ಉತ್ತರ ಪ್ರದೇಶ ಈ ರಾಜ್ಯಗಳಲ್ಲಿ ಈ ಪ್ರಕರಣಗಳು ದೃಢಪಟ್ಟಿವೆ ಎಂದು ಅವರು ನುಡಿದರು. ಇಸ್ಲಾಮೀ ಧರ್ಮ
ಪ್ರಚಾರ ಗುಂಪಿನ ಸಮಾವೇಶವು ಮಾರ್ಚ್ ತಿಂಗಳಲ್ಲಿ ರಾಜಧಾನಿಯಲ್ಲಿನ ಆರು ಅಂತಸ್ತುಗಳ ಜಮಾತ್
ಕೇಂದ್ರ ಕಚೇರಿ ಕಟ್ಟಡದಲ್ಲಿ ನಡೆದಿದ್ದು, ಇದು ಅಪಾಯದ
ಕರೆಗಂಟೆಗಳನ್ನು ಬಾರಿಸಿದೆ. ನಿಜಾಮುದ್ದೀನ್ ಪ್ರದೇಶದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹಾಗೂ ಪ್ರಸ್ತುತ ದೇಶಾದ್ಯಂತ ಚದುರಿಹೋಗಿರುವ ಜಮಾತ್ ಪ್ರತಿನಿಧಿಗನ್ನು ಮತ್ತು ಅವರ ಜೊತೆಗೆ ಸಂಪರ್ಕ ಹೊಂದಿದವರ ಪತ್ತೆಗಾಗಿ ಅಧಿಕಾರಿಗಳು ತೀವ್ರ ಯತ್ನ
ನಡೆಸುತ್ತಿದ್ದಾರೆ. ಕಳೆದ
೨೪ ಗಂಟೆಗಳಲ್ಲಿ ಹನ್ನೆರಡು ಕೋವಿಡ್ -೧೯ ಸಾವುಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ೫೬ ಮುಟ್ಟಿದೆ ಎಂದು
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಲಕ್ನೋ: ಗಾಜಿಯಾಬಾದ್ ಆಸ್ಪತ್ರೆಯಲ್ಲಿ ದಾದಿಯರ (ನರ್ಸ್ಗಳ) ಜೊತೆಗೆ ಕೆಲವು ತಬ್ಲಿಘಿ ಜಮಾತ್
ಸದಸ್ಯರು ದುರ್ವರ್ತನೆ ತೋರಿದ
ವರದಿಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಉತ್ತರ ಪ್ರದೇಶ ಸರ್ಕಾರವು ಕಠಿಣವಾದ ರಾಷ್ಟೀಯ ಭದ್ರತಾ ಕಾಯ್ದೆಯ (ಎನ್ ಎಸ್
ಎ) ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು 2020 ಏಪ್ರಿಲ್
03ರ ಶುಕ್ರವಾರ ಆಜ್ಞಾಪಿಸಿತು. ಇಂದೋರ್ ಮಾದರಿಯ ಘಟನೆ ರಾಜ್ಯದಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಆದೇಶ
ನೀಡಿದರು. ನಗರದ ಆಸ್ಪತ್ರೆಗಳಿಗೆ ತಪಾಸಣೆ ಸಲುವಾಗಿ ಕರೆದೊಯ್ದಾಗ ಕೆಲವು
ಜಮಾತ್ ಸದಸ್ಯರು ಪೊಲೀಸ್ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದರು ಎಂದು ವರದಿಯಾದರೆ, ಇತರ
ಕೆಲವರು ಆಸ್ಪತ್ರೆಗೆ ದಾಖಲಿಸಿದ ಬಳಿಕ ನರ್ಸಿಂಗ್ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದರು ಎಂದು
ಆಪಾದಿಸಲಾಯಿತು. ಗಾಜಿಯಾಬಾದ್
ಅಧಿಕಾರಿಗಳು ಈವರೆಗೆ ಜಮಾತ್ಗೆ ಸಂಬಂಧಿಸಿದ ೧೫೬ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು, ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ
ಅಂತಹ ಪ್ರತಿನಿಧಿಗಳ ಜೊತೆ
ಸಂಪರ್ಕಕ್ಕೆ ಬಂದ ಇತರರನ್ನೂ ಪತ್ತೆ ಹಚ್ಚಲು ಯತ್ನಿಸಿದರು. ಸುಂದರದೀಪ ಕಾಲೇಜಿನಲ್ಲಿ ೯೦ ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಮುರದ್‌ನ ಸೂರ್‍ಯ ಆಸ್ಪತ್ರೆಯಲ್ಲಿ ೫೬ ಜನ, ಎಂಎಂಜಿ ಸರ್ಕಾರಿ ಆಸ್ಪತ್ರೆ ಹಾಗೂ
ಸಂಜಯ್ ನಗರದ ಸಂಯೋಜಿತ ಆಸ್ಪತ್ರೆಯಲ್ಲಿ ತಲಾ ಐವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಮುಖ್ಯ ವೈದ್ಯಾದಿಕಾರಿ (ಸಿಎಂಒ) ಎನ್ ಕೆ ಗುಪ್ತ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವಿಶ್ಯಾದ್ಯಂತ ೧೮೮ ರಾಷ್ಟ್ರಗಳನ್ನು ವ್ಯಾಪಿಸಿರುವ ಮಾರಕ ಕೊರೋನಾ ಸೋಂಕು ಜಗತ್ತಿನಲ್ಲಿ ೧೦,೪೦,೯೯೭
ಮಂದಿಯನ್ನು ಬಾಧಿಸಿದ್ದು, ೫೫,೧೯೫ ಮಂದಿಯನ್ನು ಬಲಿತೆಗೆದುಕೊಂಡಿದೆ. ನ್ಯೂಜೆರ್ಸಿ ಹಾಲ್
ಆಫ್ ಫೇಮ್ ಗೆ ಸೇರ್ಪಡೆಯಾಗಿದ್ದ ಖ್ಯಾತ
ಜಾಜ್ ಗಿಟಾರ್ ವಾದಕ
ಜಾನ್ ’ಬಕಿ’ ಪಿಝಾರೆಲ್ಲಿ ಅವರು ತಮ್ಮ ೯೪ನೇ
ವಯಸ್ಸಿನಲ್ಲಿ ಕೊರೋನಾವೈರಸ್ಸಿಗೆ ಬಲಿಯಾದರು. ಶ್ವೇತಭವನದಲ್ಲಿ ಹಲವಾರು ಮಂದಿ ಅಧ್ಯಕ್ಷರ ಎದುರು
ಜಾಜ್ ಗಿಟಾರ್ ನುಡಿಸಿದ್ದ ಪಿಝಾರೆಲ್ಲಿ ಅವರು ನ್ಯೂಜೆರ್ಸಿಯ ಸ್ಯಾಡ್ಲ್ ರೀವರ್‌ನ ತಮ್ಮ ನಿವಾಸದಲ್ಲಿ ಕೋವಿಡ್-೧೯ ಪರಿಣಾಮವಾಗಿ ಬುಧವಾರ ಅಸುನೀಗಿದ್ದಾರೆ ಎಂದು
2020 ಏಪ್ರಿಲ್ 03ರ ಶುಕ್ರವಾರ ಪ್ರಕಟಿಸಲಾಯಿತು. ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಅಮೆರಿಕ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿದ್ದು ಕನಿಷ್ಠ ೨,೩೪,೪೬೨ ಮಂದಿ
ಸೋಂಕಿತರಿದ್ದರೆ, ಇಟಲಿ ಮತ್ತು
ಸ್ಪೇನ್ ಕೂಡಾ ೧,೦೦,೦೦೦
ರೋಗಿಗಳ ಸಂಖ್ಯೆಯನ್ನು ದಾಟಿದೆ. ನಂತರದ ಸ್ಥಾನದಲ್ಲಿರುವ ಜರ್ಮನಿಯಲ್ಲಿ ೮೪,೨೬೪ ಸೋಂಕಿತರಿದ್ದರೆ, ಚೀನಾವು ಕನಿಷ್ಠ ೮೨,೪೩೨ ಸೋಂಕಿತರನ್ನು ಕಂಡಿತ್ತು ಎಂದು ಹಾಪ್
ಕಿನ್ಸ್ ವಿಶ್ವ ವಿದ್ಯಾಲಯದ ಅಂಕಿ ಅಂಶಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment