Friday, April 10, 2020

ಇಂದಿನ ಇತಿಹಾಸ History Today ಏಪ್ರಿಲ್ 10

2020: ವಾಷಿಂಗ್ಟನ್: ಕೊರೋನಾವೈರಸ್ಸನ್ನು ನಿಭಾಯಿಸುತ್ರಿರುವ ಪರಿಯಿಂದಾಗಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಜಗತ್ತಿನಲ್ಲಿ ಏರುಮುಖವಾಗಿ ಸಾಗುತ್ತಿದೆ. ಇಡೀ ವಿಶ್ವದ ಕಣ್ಣು ಭಾರತದಲ್ಲಿ ನೆಟ್ಟಿರುವುದರ ಮಧ್ಯೆ ಇದೀಗ, ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ಟ್ವಿಟ್ಟರ್ ಖಾತೆಯನ್ನು ಅಮೆರಿಕದ ಶ್ವೇತ ಭವನ ಅನುಸರಿಸುತ್ತಿರುವ (ಫಾಲೋ ಮಾಡುತ್ತಿರುವ) ವಿಚಾರ 2020  ಏಪ್ರಿಲ್ 10ರ ಶುಕ್ರವಾರ ಬೆಳಕಿಗೆ ಬಂದಿತು. ಅಮೆರಿಕ ಅಧ್ಯಕ್ಷರ ಸಚಿವಾಲಯವು ಕೇವಲ ೧೯ ಟ್ವಿಟ್ಟರ್ ಖಾತೆಗಳನ್ನು ಮಾತ್ರ ಅನುಸರಿಸುತ್ತಿದೆ. ಖಾತೆಯೆಲ್ಲವೂ ಅಮೆರಿಕದ ಮೂಲದ ಖಾತೆಗಳು. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಖಾತೆಯೂ ೧೯ ಖಾತೆಗಳ ಜೊತೆ ಸೇರ್ಪಡೆಯಾಗಿದೆ. ಭಾರತದ ಇಬ್ಬರು ಗಣ್ಯರ ಟ್ವಿಟ್ಟರ್ ಖಾತೆಗಳನ್ನು ಹೊರತು ಪಡಿಸಿದರೆ ಅಮೆರಿಕ ಹೊರತಾಗಿ ಬೇರೆ ಯಾವುದೇ ದೇದ ಯಾವುದೇ ನಾಯಕರ ಖಾತೆಗಳನ್ನು ಕೂಡಾ ಶ್ವೇತಭವನ ಫಾಲೋ ಮಾಡುತ್ತಿಲ್ಲ ಎಂಬುದು ವಿಶೇಷ. ಜಾಗತಿಕ ನಾಯಕರ ಪಟ್ಟಿಯಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದಾರೆ. ಮೋದಿ ಅವರ ವೈಯಕ್ತಿಯ ಖಾತೆಗೆ .೨೦ ಕೋಟಿ ಬೆಂಬಲಿಗರು ಇದ್ದರೆ, ಪ್ರಧಾನಿ ಎಂಬ ಹೆಸರಿನಲ್ಲಿ ಇರುವ ಖಾತೆಗೆ .೬೦ ಕೋಟಿ ಬೆಂಬಲಿಗರಿದ್ದಾರೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ಕೊರೋನಾವೈರಸ್ಸಿಗೆ ೩೭ ಮಂದಿ ಬಲಿಯಾಗಿದ್ದು, ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 1 ಲಕ್ಷ ದಾಟಿತು. ಭಾರತದಲ್ಲಿ ಸೋಂಕಿನ ೮೯೬ ಹೊಸ ಪ್ರಕರಣಗಳು ವರದಿಯಾಗಿವೆ. ಪರಿಣಾಮವಾಗಿ ದೇಶದ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ,೭೬೧ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ೨೦೬ಕ್ಕೆ ಏರಿದೆ. ೫೧೬ ಮಂದಿ ಗುಣಮುಖರಾಗಿ ಅಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.  ಕಳೆದ ೪೮ ಗಂಟೆಗಳ ಅವಧಿಯಲ್ಲಿ ಸುಮಾರು ,೪೮೭ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ 2020  ಏಪ್ರಿಲ್ 10ರ ಶುಕ್ರವಾರ ತಿಳಿಸಿತು.   ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 12ರ ಭಾನುವಾರ ಸಂಜೆ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ಏಪ್ರಿಲ್ ೧೪ರ ಬಳಿಕ ವಿಸ್ತರಿಸುವ ಬಗ್ಗೆ ತಮ್ಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆ ಇದೆ. ಪ್ರಧಾನಿಯವರು  2020 ಏಪ್ರಿಲ್  11ರ ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂವಹನ ನಡೆಸಿದ ಬಳಿಕ ದಿಗ್ಬಂಧನ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವರು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದವು. ಕೊರೋನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ದಿಗ್ಬಂಧನವನ್ನು ವಿಸ್ತರಿಸುವಂತೆ ಈಗಾಗಲೇ ಹಲವಾರು ರಾಜ್ಯಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದಿಗ್ಬಂಧನ ವಿಸ್ತರಣೆಗೆ ಒಲವು ತಾಳಿದೆ ಎಂದು ಮೂಲಗಳು ಸುಳಿವು ನೀಡಿವೆ. ಒಡಿಶಾದ ಬಳಿಕ ದಿಗ್ಬಂಧನವನ್ನು ಏಪ್ರಿಲ್ ೩೦ರವರೆಗೆ ವಿಸ್ತರಿಸುವ ನಿರ್ಣಯ ಕೈಗೊಳ್ಳುವ ಮೂಲಕ ಶುಕ್ರವಾರ ಪಂಜಾಬ್ ದಿಗ್ಬಂಧನ ವಿಸ್ತರಿಸಿದ ಎರಡನೇ ರಾಜ್ಯವಾಯಿತು. ತಮಿಳುನಾಡಿನಲ್ಲಿ ತಜ್ಞರ ಸಮಿತಿಯು ದಿಗ್ಬಂಧನ ವಿಸ್ತರಣೆಗೆ ಶಿಫಾರಸು ಮಾಡಿದ್ದು ರಾಜ್ಯ ಸರ್ಕಾರವು ಶನಿವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಕೋವಿಡ್-೧೯ ಸ್ಪಂದನಾ ನಿಧಿಗೆ ತಮ್ಮ ಬದ್ಧತೆಯ ನಿಧಿಯನ್ನು ಬಳಸುವ ಸಮಯ, ವಿಧಾನ ಮತ್ತು ಅನುಷ್ಠಾನವನ್ನು  ಪ್ರತಿಯೊಂದು ಸಾರ್ಕ್ ಸದಸ್ಯ ರಾಷ್ಟ್ರ ಸ್ವತಃ ನಿರ್ಧರಿಸಬಹುದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ ಸ್ಪಂದನಾ ನಿಧಿಗೆ ಪಾಕಿಸ್ತಾನವು ಪ್ರಕಟಿಸಿದ ಮಿಲಿಯನ್ (೩೦ಲಕ್ಷ) ಡಾಲರುಗಳ ಷರತ್ತಿನ ಕೊಡುಗೆಗೆ ಭಾರತವು  2020  ಏಪ್ರಿಲ್ 10ರ ಶುಕ್ರವಾರ ಕಟು ಪ್ರತಿಕ್ರಿಯೆ ವ್ಯಕ್ತ ಪಡಿಸಿತು. ನಿಧಿಯನ್ನು ಸಾರ್ಕ್ ಸಚಿವಾಲಯವೇ ನಿಭಾಯಿಸಬೇಕು ಮತ್ತು ಸದಸ್ಯ ರಾಷ್ಟ್ರಗಳ ಜೊತೆ ಸಮಾಲೋಚಿಸಿ ಬಳಸಬೇಕು ಎಂಬ ಷರತ್ತಿನೊಂದಿಗೆ ಸಾರ್ಕ್ ಕೋವಿಡ್-೧೯ ಸ್ಪಂದನಾ ನಿಧಿಗೆ ತನ್ನ ೩೦ ಲಕ್ಷ ಡಾಲರ್ ಕೊಡುಗೆಯ ಬದ್ಧತೆಯನ್ನು ಪಾಕಿಸ್ತಾನ ವ್ಯಕ್ತ ಪಡಿಸಿತ್ತು. ತಮ್ಮ ಸಾರ್ಕ್ ಕೋವಿಡ್-೧೯ ತುರ್ತು ಸ್ಪಂದನಾ ನಿಧಿಯ ಬದ್ಧತೆಗಳ ಬಳಕೆಯ ಸಮಯ, ವಿಧಾನ ಮತ್ತು ಅನುಷ್ಠಾನವನ್ನು ನಿರ್ಧರಿಸುವುದು ಪ್ರತಿಯೊಂದು ಸದಸ್ಯ ರಾಷ್ಟ್ರಕ್ಕೆ ಬಿಟ್ಟ ವಿಷಯ.ಭಾರತಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಪ್ರಕಟಿಸಿದ ಬದ್ಧತೆಯು ಈಗ ಅನುಷ್ಠಾನದ ಹಂತದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಹೇಳಿದರು. ವಸ್ತು ಮತ್ತು ಸೇವಾ ನೆರವನ್ನು ಈಗಾಗಲೇ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ವಿಸ್ತರಿಸಲಾಗಿದೆ. ಸಾರ್ಕ್ ರಾಷ್ಟ್ರಗಳು ಮುನ್ನವೇ ನಿಧಿಗೆ ತಮ್ಮ ಬದ್ಧತೆಗಳನ್ನು ವ್ಯಕ್ತ ಪಡಿಸಿವೆ. ಪ್ರತಿಯೊಂದು ರಾಷ್ಟ್ರದ ಗಂಭೀರತೆಯ ಮಟ್ಟವನ್ನು ಅವುಗಳ ವರ್ತನೆಯಿಂದ ಅಂದಾಜು ಮಾಡಬಹುದು ಎಂದು ಶ್ರೀವಾಸ್ತವ ನುಡಿದರು. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಸದಸ್ಯರ ಪೈಕಿ ನಿಧಿಗೆ ತನ್ನ ಕಾಣಿಕೆಯನ್ನು ಕೊಟ್ಟ ಕಟ್ಟ ಕಡೆಯ ಸದಸ್ಯ ರಾಷ್ಟ್ರ ಪಾಕಿಸ್ತಾನವಾಗಿದೆ. ಮಾರ್ಚ್ ೧೫ರಂದು ಸಾರ್ಕ್ ಸಮೂಹದ ನಾಯಕರ ವಿಡಿಯೋ ಸಂವಹನದ ಬಳಿಕ ನಿಧಿಯನ್ನು ಭಾರತದ ೧೦ ಮಿಲಿಯನ್ (೧೦೦) ಲಕ್ಷ ಡಾಲರ್ ಪ್ರಾಥಮಿಕ ದೇಣಿಗೆಯೊಂದಿಗೆ ರಚಿಸಲಾಗಿತ್ತು.  ಸಾರ್ಕ್ ಸಚಿವಾಲಯಕ್ಕೆ ತನ್ನ ಬದ್ಧತೆಯನ್ನು ತಿಳಿಸುವ ವೇಳೆಯಲ್ಲಿ ಪಾಕಿಸ್ತಾನವು ನಿಧಿಗೆ ಬರುವ ಎಲ್ಲ ಹಣವನ್ನು ಸಾರ್ಕ್ ಸಚಿವಾಲಯವೇ ನಿವಹಿಸಬೇಕು ಮತ್ತು ನಿಧಿ ಬಳಕೆಯ ವಿಧಿ ವಿಧಾನವನ್ನು ಸಾರ್ಕ್ ಚಾರ್ಟರ್ ಪ್ರಕಾರ ಸದಸ್ಯ ರಾಷ್ಟ್ರಗಳ ಜೊತೆಗೆ ಸಮಾಲೋಚಿಸುವ ಮೂಲಕವೇ ಅಂತಿಮಗೊಳಿಸಬೇಕು ಎಂದು ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ವಿದೇಶಾಂಗ ಕಚೇರಿಯು ವಿಚಾರವನ್ನು ತಿಳಿಸಿ ಹೇಳಿಕೆ ಪ್ರಕಟಿಸಿತ್ತು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಜ್ಯದಲ್ಲಿ ವಿಧಿಸಲಾಗಿರುವ ಕೋವಿಡ್-೧೯  ದಿಗ್ಬಂಧನವನ್ನು (ಲಾಕ್ ಡೌನ್) ಏಪ್ರಿಲ್ ೩೦ರವರೆಗೆ ವಿಸ್ತರಿಸುವುದಾಗಿ ಪಂಜಾಬ್  2020  ಏಪ್ರಿಲ್ 10ರ ಶುಕ್ರವಾರ ಪ್ರಕಟಿಸಿತು. ನಿಟ್ಟಿನ ನಿರ್ಣಯವನ್ನು ಪಂಜಾಬ್ ಸಚಿವ ಸಂಪುಟವು ಈದಿನ  ಅನುಮೋದಿಸಿತು. ಇದರೊಂದಿಗೆ ಪಂಜಾಬ್ ರಾಜ್ಯವು ಒಡಿಶಾದ ಬಳಿಕ ಲಾಕ್ ಡೌನ್ ವಿಸ್ತರಿಸಿದ ಎರಡನೇ ರಾಜ್ಯ ಎನಿಸಿತು.. ಪ್ರಧಾನಿ ನರೇಂದ್ರ ಮೋದಿಯವರು ಮಾರಕ ಕೊರೋನಾವೈರಸ್ ಹರಡವುದನ್ನು ತಡೆಯುವ ಸಲುವಾಗಿ ಮಾರ್ಚ್ ೨೩ರಂದು ಮಾಡಿದ ರಾಷ್ಟ್ರವ್ಯಾಪಿ ಭಾಷಣದಲ್ಲಿ ಏಪ್ರಿಲ್ ೧೪ರವರೆಗೆ ರಾಷ್ಟ್ರವ್ಯಾಪಿ ಗಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರು. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸಚಿವ ಸಂಪುಟವು  ದಿಗ್ಬಂಧನವನ್ನು ಏಪ್ರಿಲ್ ೩೦ರವರೆಗೆ ವಿಸ್ತರಿಸಲು ಸರ್ವಾನುಮತದ ಒಪ್ಪಿಗೆ ನೀಡಿದೆ ಎಂದು ವಿಶೇಷ ಮುಖ್ಯ ಕಾರ್‍ಯದರ್ಶಿ ಕೆಬಿಎಸ್ ಸಿಧು ಟ್ವೀಟ್ ಮಾಡಿದರು. ಇಂದಿನಿಂದ ೨೧ ದಿನಗಳ ಕಾಲ ವಿಸ್ತರಣೆ, ಕಟ್ಟು ನಿಟ್ಟಿನ ಜಾರಿ ಎಂದೂ ಸಿಧು ತಮ್ಮ ಟ್ವೀಟಿನಲ್ಲಿ ತಿಳಿಸಿದರು. ಶುಕ್ರವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಕೋವಿಡ್-೧೯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ದಿಗ್ಬಂಧನ ಮತ್ತು ಕರ್ಫ್ಯೂ ನಿರ್ಬಂಧಗಳನ್ನು ಮುಂದುವರೆಸುವ ಅಗತ್ಯವಿದೆ ಎಂದು ತಮಗೆ ಅನ್ನಿಸಿದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ 2020  ಏಪ್ರಿಲ್ 10ರ ಶುಕ್ರವಾರ ಹೊಸದಾಗಿ ಕೊರೋನಾವೈರಸ್ ಸೋಂಕಿನ ೧೮೩ ಪ್ರಕರಣಗಳು ವರದಿಯಾಗಿದ್ದು ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೯೦೩ಕ್ಕೆ ಏರಿತು.  ಶುಕ್ರವಾರ ಹೊಸದಾಗಿ ದಾಖಲಾದ ೧೮೩ ಪ್ರಕರಣಗಳ ಪೈಕಿ ೧೫೪ ಪ್ರಕರಣಗಳು ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶಕ್ಕೆ ಸಂಬಂಧಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಎರಡು ಕೊರೋನಾಸಾವುಗಳೂ ವರದಿಯಾಗಿವೆ. ಮಧ್ಯೆ ಸರ್ಕಾರವು ಕೇಂದ್ರ ಮತ್ತು ಉತ್ತರ ದೆಹಲಿಯ ಇನ್ನೆರಡು ಪ್ರದೇಶಗಳನ್ನು ಕಠಿಣ ಲಾಕ್ ಡೌನ್ ವ್ಯಾಪ್ತಿಗೆ ಸೇರಿಸಿತು. ಪ್ರದೇಶದಲ್ಲಿ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕಠಿಣ ಲಾಕ್ ಡೌನ್ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಉನ್ನತ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಜಹಾಂಗೀರಪುರಿಯ ಬಿ ಬ್ಲಾಕ್, ನಬಿ ಕರೀಮ್ ಮತ್ತು ಚಾಂದನಿ ಮಹಲ್ ಪ್ರದೇಶಗಳು ಕಠಿಣ ಲಾಕ್ ಡೌನ್ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಮೂರು ಪ್ರದೇಶಗಳು ಎಂದು ವರದಿಗಳು ಹೇಳಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)


No comments:

Post a Comment