Saturday, April 4, 2020

ಇಂದಿನ ಇತಿಹಾಸ History Today ಏಪ್ರಿಲ್ 04

2020: ನವದೆಹಲಿ:  ಆವೋ ಫಿರ್ ಸೆ ದೀಪ್ ದಿಯಾ ಜಲಾಯೇ’ (ಬನ್ನಿ ಮತ್ತೊಮ್ಮೆ ಜ್ಯೋತಿ ಬೆಳಗೋಣ) ಎಂಬ ತಮ್ಮ ಕವನವನ್ನು ಸ್ವತಃ ಹಾಡುವುದನ್ನು ತೋರಿಸುವ ಮಾಜಿ ಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೫ರ ಭಾನುವಾರ ರಾತ್ರಿ ಗಂಟೆಗೆ ಜ್ಯೋತಿ ಬೆಳಗುವ ಕಾರ್‍ಯವನ್ನು 2020 ಏಪ್ರಿಲ್ 04ರ ಶನಿವಾರ ಜನತೆಗೆ ನೆನಪಿಸಿದರು. ಭಾನುವಾರ ರಾತ್ರಿ ಗಂಟೆಗೆ ತಮ್ಮ ಮನೆಗಳಲ್ಲಿ ಎಲ್ಲ ಲೈಟುಗಳನ್ನೂ ಆರಿಸಿ ನಿಮಿಷಗಳ ಕಾಲ ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫ್ಲಾಷ್ ಲೈಟನ್ನು ಬೆಳಗುವ ಮೂಲಕ ಕೊರೋನಾವೈರಸ್ ವಿರೋಧಿ ಸಮರದಲ್ಲಿ ರಾಷ್ಟ್ರದ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ ಒಂದು ದಿನದ ಬಳಿಕ ಪ್ರಧಾನಿ ಮೋದಿಯವರು  ಅಟಲ್ ಜಿ ಕವನ ಹಾಡುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಜ್ಯೋತಿ ಬೆಳಗುವ ಉತ್ಸಾಹದಲ್ಲಿ ತಮ್ಮ ಮನೆಗಳಿಂದ ಹೊರಬರದಂತೆ ಜನತೆ ಎಚ್ಚರಿಕೆ ನೀಡಿದ ಪ್ರಧಾನಿ, ಚಟುವಟಿಕೆಯಲ್ಲಿ ಪಾಲ್ಗೊಳ್ಳುವಾಗ ಸಾಮಾಜಿಕವಾಗಿ ಒಟ್ಟಾಗಬೇಡಿ ಎಂದು ಹೇಳಿದರು. ’ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಲಕ್ಷ್ಮಣ ರೇಖೆಯನ್ನು ಯಾರೂ ದಾಟಬಾರದುಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ:  ಕೊರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು 2020 ಏಪ್ರಿಲ್ 04ರ ಶನಿವಾರ ತತ್ ಕ್ಷಣದಿಂದ  ಜಾರಿಗೆ ಬರುವಂತೆ ರೋಗಪತ್ತೆ ಕಿಟ್‌ಗಳ ರಫ್ತಿಗೆ ನಿರ್ಬಂಧ ಹೇರಿತು. ‘ಡಯಗ್ನೊಸ್ಟಿಕ್ (ರೋಗಪತ್ತೆ) ಕಿಟ್‌ಗಳ ರಫ್ತು (ಬೆಂಬಲ, ತಯಾರಿಕೆ,  ರೋಗಪತ್ತೆ ಅಥವಾ ಪ್ರಯೋಗಾಲಯದ ಕಾರಕಗಳ (ಪ್ರತಿಕ್ರಿಯಾತ್ಮಕ ವಸ್ತು) ರಫ್ತನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ  ನಿರ್ಬಂಧಿಸಲಾಗಿದೆ’  ಎಂದು ವಿದೇಶ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತನ್ನ ಅಧಿಸೂಚನೆಯಲ್ಲಿ ತಿಳಿಸಿತು. ರೋಗಿಗಳ ಪರೀಕ್ಷೆಗೆ ಕಿಟ್‌ಗಳು ಅಗತ್ಯವಿರುವುದರಿಂದ ಕೋವಿಡ್ -೧೯ ಬಿಕ್ಕಟ್ಟನ್ನು ಎದುರಿಸಲು ಕ್ರಮವು ನೆರವಾಗುತ್ತದೆ.  ದೇಶದಲ್ಲಿ ಕೋವಿಡ್ -೧೯ ಪ್ರಕರಣಗಳು ,೦೦೦ದ ಸಮೀಪಕ್ಕೆ ಬಂದಿದ್ದು, ಇವುಗಳಲ್ಲಿ ,೬೫೦ ಸಕ್ರಿಯ ಪ್ರಕರಣಗಳಾಗಿವೆ. ೧೮೩ ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದು, ಮತ್ತು ೬೮ ಸಾವುಗಳು ಸಂಭವಿಸಿವೆ. ಕೊರೋನವೈರಸ್ ಬಿಕ್ಕಟ್ಟನ್ನು ನಿರ್ವಹಿಸಲು ಆರೋಗ್ಯ ರಕ್ಷಣೆ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಕೋವಿಡ್ -೧೯ ವಿರುದ್ಧದ ಹೋರಾಟಕ್ಕೆ ಅನುಕೂಲವಾಗುವಂತೆ ರಕ್ಷಣಾ ಸಾಧನಗಳು ಮತ್ತು ಅಗತ್ಯ ವಸ್ತುಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರಾಷ್ಟ್ರ ರಾಜಧಾನಿಯು ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕೊರತೆಯನ್ನು ಎದುರಿಸುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಶನಿವಾರ ಹೇಳಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇಂದ್ರ ದೆಹಲಿಯ ತಬ್ಲಿಘಿ ಜಮಾತ್ ಕೇಂದ್ರ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಆರೋಗ್ಯ ಕಾರ್‍ಯಕರ್ತರು ವಾರಾರಂಭದಲ್ಲಿ ,೩೦೦ ಮಂದಿಯನ್ನು ತೆರವುಗೊಳಿಸಿದಾಗ, ಪೊಲೀಸ್ ತನಿಖೆಗಳು ದೆಹಲಿಯ ಇತರ ಮಸೀದಿಗಳಲ್ಲಿ ಇನ್ನಷ್ಟು ವಿದೇಶೀಯರು ವಾಸ್ತವ್ಯದಲ್ಲಿದ್ದಾರೆ ಎಂಬ ತೀರ್‍ಮಾನಕ್ಕೆ ಬಂದಿದ್ದವು. ಆದರೆ ಈಗ ಹೀಗೆ ಇತರ ಮಸೀದಿಗಳಲ್ಲಿ ಅಡಗಿರುವವರ ಸಂಖ್ಯೆ ೮೦೦ನ್ನೂ ಮೀರಿದೆ ಎಂಬ ವರದಿಗಳು  2020 ಏಪ್ರಿಲ್ 04ರ ಶನಿವಾರ  ಬಂದಿದ್ದು ಇದು ಭಾರೀಕೋವಿಡ್ ಸ್ಫೋಟಅಪಾಯದ ಗಂಟೆಯನ್ನು ಮೊಳಗಿಸಿತು. ಮಾರ್ಚ್ ೩೧ರಂದು ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಕಟ್ಟಡವ ತೆರವು ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ದೆಹಲಿ ಪೊಲೀಸರು ದೆಹಲಿ ಸರ್ಕಾರಕ್ಕೆ ತುರ್ತು ಸಂದೇಶವನ್ನು ಕಳುಹಿಸಿ ನಗರದ ವಿವಿಧ ಮಸೀದಿಗಳಲ್ಲಿ ಇರುವ ಉಳಿದ ಜಮಾತ್ ಕಾರ್‍ಯಕರ್ತರನ್ನು ಪತ್ತೆ ಹಚ್ಚಲು ನೆರವು ನೀಡುವಂತೆ ಕೋರಿದ್ದರು. ಪೊಲೀಸ್ ಸಂದೇಶದಲ್ಲಿ ೧೬ ಮಸೀದಿಗಳನ್ನು ಪಟ್ಟಿ ಮಾಡಲಾಗಿತ್ತು. ತನಿಖೆಗಾರರು ೧೮೭ ವಿದೇಶೀಯರು ಮತ್ತು ಸುಮಾರು ಎರಡು ಡಜನ್ ಭಾರತೀಯ ಪ್ರಜೆಗಳನ್ನು ಜಮಾತ್ ಕೇಂದ್ರ ಕಚೇರಿಯಿಂದ ಇತರ ಮಸೀದಿಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸುಳಿವು ನೀಡಿದ್ದರು. ಆದರೆ ಲೆಕ್ಕಾಚಾರ ಸಂಪೂರ್ಣ ತಪ್ಪು ಎಂಬುದು ಈಗ ಬೆಳಕಿಗೆ ಬಂದಿದೆ. ಪೊಲೀಸರು, ಆರೋಗ್ಯ ಕಾರ್‍ಯಕರ್ತರು ಮತ್ತು ನಾಗರಿಕ ಸೇವಕರನ್ನು ಒಳಗೊಂಡ ತಂಡಗಳು ನಾಲ್ಕು ದಿನಗಳಲ್ಲಿ ನಡೆಸಿದ ಒಗ್ಗಟ್ಟಿನ ಶೋಧ ಕಾರ್‍ಯಾಚರಣೆಯ ಪರಿಣಾಮವಾಗಿ ಇದೀಗ ರಾಷ್ಟ್ರ ರಾಜಧಾನಿಯಲ್ಲಿನ ಜಮಾತ್‌ಗೆ ಸಂಬಂಧಿಸಿದ ೮೦೦ಕ್ಕೂ ಹೆಚ್ಚು ವಿದೇಶೀಯರನ್ನು ಪತ್ತೆ ಹಚ್ಚಲಾಗಿದೆ. ಕೆಲವು ಮಸೀದಿಗಳಲ್ಲಿ ಶೋಧನೆಯನ್ನು ಅವರು ಇನ್ನೂ ಮಾಡಬೇಕಷ್ಟೇ. ’ ೮೦೦ ಮಂದಿಯ ಪೈಕಿ ಹಲರಿಗೆ ಈಗಾಗಲೇ ಕೊರೋನಾವೈರಸ್ ಸೋಂಕು ಬಾಧಿಸಿರಬಹುದು, ಅಷ್ಟೇ ಅಲ್ಲ ಅಂತಹವರು ಇತರ ಅನೇಕರಿಗೂ ಸೋಂಕನ್ನು ಅಂಟಿಸಿರಬಹುದುಎಂದು ಅಧಿಕಾರಿಯೊಬ್ಬರು ತಿಳಿಸಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಏಪ್ರಿಲ್ ೫ರ ಭಾನುವಾರ ರಾತ್ರಿ ಗಂಟೆಗೆ ಎಲ್ಲ ಲೈಟುಗಳನ್ನೂ ಆರಿಸಿ, ’ಜ್ಯೋತಿಬೆಳಗುವ ಮೂಲಕ ಕೊರೋನಾವೈರಸ್ ವಿರೋಧಿ ಹೋರಾಟದಲ್ಲಿ ದೇಶದ ಒಗ್ಗಟ್ಟನ್ನು ಜಗತ್ತಿಗೆ ಸಾಬೀತು ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿರುವ ಕರೆಯಿಂದ ದೇಶದ ವಿದ್ಯುತ್ ಜಾಲದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದೆಂಬ ಆತಂಕದ ಅಗತ್ಯವಿಲ್ಲ ಎಂದು ವಿದ್ಯುತ್ ಸಚಿವಾಲಯವು 2020 ಏಪ್ರಿಲ್ 04ರ ಶನಿವಾರ ಸ್ಪಷ್ಟ ಪಡಿಸಿತು.  ಪ್ರಧಾನಿಯವರ ಕರೆಯಂತೆ ದೇಶಾದ್ಯಂತ ಏಕಾಏಕಿ ದೀಪಗಳನ್ನು ಆರಿಸಿದರೆ ವಿದ್ಯುತ್ ಜಾಲದಲ್ಲಿ ಅಸ್ಥಿರತೆ ಉಂಟಾಗಿ ವಿದ್ಯುತ್ ಜಾಲಕ್ಕೆ (ಪವರ ಗ್ರಿಡ್) ಧಕ್ಕೆ ಉಂಟಾಗಬಹುದು ಎಂಬ ಅನುಮಾನಗಳುತಪ್ಪು ಅಭಿಪ್ರಾಯಗಳುಎಂದು ವಿದ್ಯುತ್ ಇಲಾಖೆ ಹೇಳಿತು.  ಭಾರತೀಯ ವಿದ್ಯುಚ್ಚಕ್ತ್ತಿ ಜಾಲವು ಅತ್ಯಂತ ದೃಢ ಹಾಗೂ ಸ್ಥಿರವಾದುದಾಗಿದ್ದು ಬೇಡಿಕೆಯಲ್ಲಿನ ವ್ಯತ್ಯಾಸಗಳನ್ನು  ನಿಭಾಯಿಸುವ ಸೂಕ್ತ ವ್ಯವಸ್ಥೆಗಳು ಮತ್ತು ಶಿಷ್ಟಾಚಾರಗಳನ್ನು ಹೊಂದಿದೆ ಎಂದು ವಿದ್ಯುತ್ ಸಚಿವಾಲಯದ ಪ್ರಕಟಣೆ ತಿಳಿಸಿತು. ದೀಪಗಳನ್ನು ಆರಿಸುವಂತೆ ನೀಡಿರುವ ಕರೆಯು ಸ್ವಯಂ ಇಚ್ಛೆಯದ್ದಾಗಿದ್ದು, ಬೀದಿ ದೀಪಗಳು, ಅಥವಾ ಕಂಪ್ಯೂಟರ್, ಟಿವಿ, ಫ್ಯಾನ್,  ರಿಫ್ರಿಜರೇಟರ್‌ನಂತಹ ವಿದ್ಯುತ್ ಉಪಕರಣಗಳಿಗೆ ಮತ್ತು ಮನೆಗಳಲ್ಲಿನ ಹವಾನಿಯಂತ್ರಿತ ವ್ಯವಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ತಿಳಿಸಿತು. ಕೇವಲ ದೀಪಗಳನ್ನು ಮಾತ್ರವೇ ಆರಿಸಬೇಕುಎಂದು ಹೇಳಿಕೆ ಸ್ಪಷ್ಟ ಪಡಿಸಿತು. ಆಸ್ಪತ್ರೆಗಳು ಮತ್ತು ಸಾರ್ವಜನಿಕ ಬಳಕೆ ಸ್ಥಳಗಳು, ಮುನಿಸಿಪಲ್ ಸೇವೆಗಳು, ಕಚೇರಿUಳು, ಪೊಲೀಸ್ ಠಾಣೆಗಳು, ಉತ್ಪಾದನಾ ಘಟಕಗಳು ಇತ್ಯಾದಿ ಅಗತ್ಯ ಸೇವೆಗಳಲ್ಲಿನ ಎಲ್ಲ ದೀಪಗಳು ಆರದೆ ಹಾಗೆಯೇ ಇರುತ್ತವೆ ಎಂದೂ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020:  ಮೊರೇನಾ (ಮಧ್ಯಪ್ರದೇಶ): ತನ್ನ ತಾಯಿಯ ಅಂತ್ಯ ಕ್ರಿಯೆ ನೆರವೇರಿಸುವ ಸಲುವಾಗಿ ಮಾರ್ಚ್ ೧೭ರಂದು ದುಬೈಯಿಂದ ಮಧ್ಯಪ್ರದೇಶದ ಮೊರೇನಾ ಜಿಲ್ಲೆಗೆ ಬಂದಿದ್ದ ವ್ಯಕ್ತಿಯೊಬ್ಬನಿಂದ ಆತನ ಕುಟುಂಬದ ೧೧ ಮಂದಿಗೆ ಕೊರೋನಾವೈರಸ್ ಸೋಂಕು ಹರಡಿದ ಘಟನೆ ಘಟಿಸಿದೆ. ದುಬೈಯಿಂದ ವಾಪಸಾದ ವ್ಯಕ್ತಿ ಮತ್ತು ಆತನ ಪತ್ನಿಗೆ ಕೋವಿಡ್-೧೯ ಸೋಂಕು ತಗುಲಿದ್ದು ಬುಧವಾರ ಖಚಿತವಾಗಿತ್ತು. ಅವರ ಕುಟುಂಬ ಸದಸ್ಯರಿಗೂ ವ್ಯಾಧಿಯ ಸೋಂಕು ಅಂಟಿರುವುದು ಶುಕ್ರವಾರ ಸಂಜೆ ಖಚಿತ ಪಟ್ಟಿತು. ಮುಂಜಾಗರೂಕತಾ ಕ್ರಮವಾಗಿ ಪರೀಕ್ಷೆಗೆ ಕರೆದೊಯ್ದಾಗ ಸದರಿ ವ್ಯಕ್ತಿಯ ಕುಟುಂಬ ಸದಸ್ಯರಿಗೂ ಕೊರೋನಾವೈರಸ್ ಬಾಧಿಸಿದ್ದು ಗೊತ್ತಾಯಿತು. ’ಮೊದಲೇ ಸೋಂಕು ತಗುಲಿದ್ದ ವ್ಯಕ್ತಿಯಿಂದ ಕುಟುಂಬದ ಇತರ ೧೦ ಸದಸ್ಯರಿಗೆ ಹೊಸದಾಗಿ ಕೊರೋನಾವೈರಸ್ ಸೋಂಕು ತಗುಲಿದೆ. ನಾವು ಕುಟುಂಬ ಸದಸ್ಯರು ಸೇರಿದಂತೆ ಆತನ ಜೊತೆ ಸಂಪರ್ಕಕ್ಕೆ ಬಂದ ೨೮ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆಎಂದು ಮೊರೇನಾ ಜಿಲ್ಲಾಧಿಕಾರಿ ಪ್ರಿಯಂಕಾ ದಾಸ್ ಹೇಳಿದರು. ಇದು ಬಡ ಕುಟುಂಬವಾಗಿದ್ದು, ಸಣ್ಣ ಇಕ್ಕಟ್ಟಾದ ಗುಡಿಸಲಿನಲ್ಲಿ ಎಲ್ಲರೂ ವಾಸವಾಗಿದ್ದಾರೆ. ಕೊರೋನಾ ಇತರ ಸದಸ್ಯರಿಗೂ ಹರಡಲು ಇದೇ ಕಾರಣ. ಪರೀಕ್ಷೆ ನಡೆಸಲಾದ ಇತರ ೧೮ ಮಂದಿಗೆ ಸೋಂಕು ತಗುಲಿಲ್ಲ ಎಂದು ವರದಿ ಹೇಳಿದೆ ಎಂದು ಜಿಲ್ಲಾಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೮ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಸರ್ವ ಪಕ್ಷ ಸಭೆ ನಡೆಸಲಿದ್ದಾರೆ ಎಂದು 2020 ಏಪ್ರಿಲ್ 04ರ ಶನಿವಾರ ಪ್ರಕಟಿಸಲಾಯಿತು. ಮಾರಕ ಸೋಂಕು ದೇಶವನ್ನು ವ್ಯಾಪಿಸಲು ಆರಂಭವಾದ ಬಳಿಕ ವ್ಯಾಧಿ ಹರಡದಂತೆ ತಡೆಯಲು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ ಹಲವು ದಿನಗಳ ಬಳಿಕ ರಾಜಕೀಯ ಪಕ್ಷಗಳ ಜೊತೆ ಪ್ರಧಾನಿಯವರು ನಡೆಸುತ್ತಿರುವ ಮೊತ್ತ ಮೊದಲ ಸಭೆ ಇದಾಗಿದೆ. ಸಂಸತ್ತಿನಲ್ಲಿ ಐದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳ ಸದನ ನಾಯಕರನ್ನು ಸಭೆಯಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಪತ್ರ ತಿಳಿಸಿತು.  ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಪ್ರವಾಸ ನಿಯಮಗಳ ಮಿತಿಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣವಾದ ಸಭೆಯನ್ನು ವಿಡಿಯೋ ಸಂವಹನ (ವಿಡಿಯೋ ಕಾನ್ಫರೆನ್ಸ್) ಮೂಲಕ ನಡೆಸಲಾಗುವುದು ಎಂದು ಪತ್ರ ಹೇಳಿತು. ಸಾಂಕ್ರಾಮಿಕ ಪಿಡುಗು ಸಮಾಜದ ವಿವಿಧ ವರ್ಗಗಳ ಮೇಲೆ ಅದರಲ್ಲೂ ವಿಶೇಷವಾಗಿ ದೇಶದ ಆರ್ಥಿಕ ಸ್ಥಿತಿಯ ಮೇಲೆ ಬೀರುತ್ತಿರುವ ದೂರಗಾಮೀ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿಯವರ ಜೊತೆಗೆ ಸರ್ವಪಕ್ಷ ಸಭೆ ನಡೆಸುವಂತೆ ಹಲವಾರು ವಿರೋಧ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.  ಪ್ರಧಾನಿಯವರು ಸಭೆಯಲ್ಲಿ ಮಾರಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂದಿನ ಮಾರ್ಗ ನಕ್ಷೆ ಕುರಿತು ವಿವಿಧ ಪಕ್ಷಗಳಿಂದ ಸಲಹೆ ಕೋರಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯು ಪ್ರಧಾನಿ ಮೋದಿ ಅವರ ಪ್ರಾಸ್ತಾವಿಕ ಮಾತುಗಳೊಂದಿಗೆ ಬೆಳಗ್ಗೆ ೧೧ ಗಂಟೆಗೆ ಆರಂಭವಾಗಲಿದೆ. ಪ್ರಾಸ್ತಾವಿಕ ಭಾಷಣದಲ್ಲಿ ಪ್ರಧಾನಿಯವರು ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಪಕ್ಷ ನಾಯಕರಿಗೆ ತಿಳಿಸಲಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕಾಬೂಲ್ ಗುರುದ್ವಾರದ ಮೇಲೆ ಮಾರ್ಚ್ ೨೫ರಂದು ನಡೆದ ದಾಳಿಯ ಸೂತ್ರಧಾರಿ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿನ್ಸ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆಯ ಸ್ವಯಂಘೋಷಿಸ ಅಮೀರ್ ಮೌಲವಿ ಅಬ್ದುಲ್ಲ ಅಕ ಅಸ್ಲಂ ಫರೂಖಿಯನನು ಅಪ್ಘನ್ ಭದ್ರತಾ ಪಡೆಗಳು 2020 ಏಪ್ರಿಲ್ 04ರ ಶನಿವಾರ ವಿಶೇಷ ಕಾರ್‍ಯಾಚರಣೆಯೊಂದರಲ್ಲಿ ಬಂಧಿಸಿದವು. ಪಾಕಿಸ್ತಾನಿ ಪ್ರಜೆಯಾದ ಮೌಲವಿ ಅಬ್ದುಲ್ಲ ಹಿಂದೆ ಲಷ್ಕರ್--ತಯ್ಬಾ(ಎಲ್ ಇಟಿ) ಮತ್ತು ಆಗಿನ ತೆಹ್ರೀಕ್ -- ತಾಲಿಬಾನ್ ಭಯೋತ್ಪಾದಕ ಗುಂಪುಗಳ ಜೊತೆಗೆ ಕೆಲಸ ಮಾಡಿದ್ದು,  ೨೦೨೯ರ ಏಪ್ರಿಲ್‌ನಲ್ಲಿ ಮೌಲವಿ ಜಿಯಾ-ಉಲ್-ಹಕ್ ಅಕ ಅಬು ಒಮರ್ ಖೊರಾಸಾನಿ ಜಾಗದಲ್ಲಿ ಐಎಸ್ ಕೆಪಿ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.  ಹಖ್ಖಾನಿ ಜಾಲ ಮತ್ತು ಎಲ್ ಇಟಿ ಸೂಚನೆ ಮೇರೆಗೆ ಕಾಸರಗೋಡಿನ ನಿವಾಸಿ ಮುಶಿನ್ ಟಿಕಾರಿಪುರ ಮತ್ತು ಇನ್ನೊಬ್ಬ ಉರ್ದು ಪಂಜಾಬಿ ಮಾತನಾಡುವ ವ್ಯಕ್ತಿಯನ್ನು ಬಳಸಿಕೊಂಡು ಮೌಲವಿ ಫರೂಕಿ, ಕಾಬೂಲಿನ ೨೭ ಮಂದಿ ಮುಗ್ಧ ಸಿಕ್ ಪುರುಷರು ಹಾಗೂ ಮಹಿಳೆಯರನ್ನು ಕಾಬೂಲಿನ ಶೋರ್ ಬಜಾರ್ ಪ್ರದೇಶದ ಗುರುದ್ವಾರದಲ್ಲಿ ಕೊಲ್ಲಿಸಿದ್ದ. ಹತ್ಯಾಕಾಂಡದಲ್ಲಿ ಕಾಸರಗೋಡಿನ ಯುವಕನಾದ ಮುಶಿನ್ ಸಾವನ್ನಪ್ಪಿದ್ದು, ಆತನ ತಾಯಿಗೆ ಮಗನ ಸಾವಿನ ಬಗ್ಗೆ ತಿಳಿಸಲಾಗಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

೨೦೨೦: ನವದೆಹಲಿ:  ಜಾಗತಿಕ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಒಗ್ಗೂಡಿ ಹೋರಾಡಲು ಭಾರತ ಮತ್ತು ಅಮೆರಿಕಾ ನಿರ್ಧರಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ೨೦೨೦ ಏಪ್ರಿಲ್ ೦೪ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಮಾತುಕತೆ ನಡೆಸಿದರು. ವೇಳೆ ಕೋವಿಡ್-೧೯ ವಿರುದ್ಧ ಎರಡೂ ರಾಷ್ಟ್ರಗಳು ತಮ್ಮ ಸಹಭಾಗಿತ್ವವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದವು.  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದೆ. ನಾವು ಉತ್ತಮ ಚರ್ಚೆ ನಡೆಸಿದೆವು ಮತ್ತು ಕೋವಿಡ್-೧೯ ವಿರುದ್ಧ ಹೋರಾಡಲು ಭಾರತ - ಅಮೆರಿಕಾ ಸಹಭಾಗಿತ್ವದ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲು ಒಪ್ಪಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಟ್ಟೀಟ್ ಮಾಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

 


No comments:

Post a Comment