ನಾನು ಮೆಚ್ಚಿದ ವಾಟ್ಸಪ್

Friday, April 24, 2020

ಇಂದಿನ ಇತಿಹಾಸ History Today ಏಪ್ರಿಲ್ 24

2020:  ವಾಷಿಂಗ್ಟನ್: ವಿಶ್ವವನ್ನು ಗಡ ಗಡ ನಡುಗಿಸುತ್ತಿರುವ ಕೊರೋನವೈರಸ್ ಸೂರ್ಯನ ಬೆಳಕಿನಿಂದ ಬೇಗನೆ ನಾಶವಾಗುತ್ತದೆ ಎಂದು ಅಮೆರಿಕದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.   ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೊಸ ಸಂಶೋಧನೆಯ ವಿವರಗಳನ್ನು ಪ್ರಕಟಿಸಿದ್ದಾರೆ. ಆದರೆ ಅಧ್ಯಯನವನ್ನು ಇನ್ನೂ ಬಹಿರಂಗ ಪಡಿಸಲಾಗಿಲ್ಲ ಮತ್ತು  ಬಾಹ್ಯ ಮೌಲ್ಯಮಾಪನಕ್ಕಾಗಿ ಕಾಯಲಾಗುತ್ತಿದೆ ಎಂದು ಅವರು  2020 ಏಪ್ರಿಲ್ 24ರ ಶುಕ್ರವಾರ ಹೇಳಿದರುಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಂ ಬ್ರಿಯಾನ್ ಅವರು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಿಜ್ಞಾನಿಗಳು ಸೂರ್ಯನ ನೇರಳಾತೀತ ಕಿರಣಗಳು (ಅಲ್ಟ್ರಾ ವಯೋಲೆಟ್  ರೇ) ರೋಗಕಾರಕದ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ ಮತ್ತು ಬೇಸಿಗೆಯಲ್ಲಿ ಇದರ ಹರಡುವಿಕೆಯು ಕಡಿಮೆಯಾಗಬಹುದು ಎಂಬ ಭರವಸೆ ವ್ಯಕ್ತ ಪಡಿಸಿದ್ದಾರೆಎಂದು ಹೇಳಿದರು. " ಮೇಲ್ಮೈ ಮತ್ತು ಗಾಳಿಯಲ್ಲಿನ ವೈರಾಣುವನ್ನು ಕೊಲ್ಲುವಲ್ಲಿ ಸೌರ ಬೆಳಕು ಪರಿಣಾಮ ಬೀರುತ್ತದೆ ಎಂಬುದು ಈವರೆಗಿನ ನಮ್ಮ ಗಮನಾರ್ಹವಾದ ಅವಲೋಕನ" ಎಂದು ಅವರು ಹೇಳಿದರು. "ತಾಪಮಾನ ಮತ್ತು ತೇವಾಂಶ ಎರಡರಲ್ಲೂ ನಾವು ಇದೇ ರೀತಿಯ ಪರಿಣಾಮವನ್ನು ನೋಡಿದ್ದೇವೆ, ಅಲ್ಲಿ ತಾಪಮಾನ ಮತ್ತು ತೇವಾಂಶವನ್ನು ಹೆಚ್ಚಿಸುವುದು ಅಥವಾ ಎರಡೂ ಸಾಮಾನ್ಯವಾಗಿ ವೈರಸ್ಗೆ ಕಡಿಮೆ ಅನುಕೂಲಕರವಾಗಿರುತ್ತದೆಎಂದು ಅವರು ನುಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಮೂಲಕ ದೇಶದಲ್ಲಿ ಕೊರೋನಾವೈರಸ್ ಸೋಂಕು ಹರಡುವಿಕೆಯನ್ನು ಕಡಿಮೆಗೊಳಿಸುವಲ್ಲಿ ಮತ್ತು ದುಪ್ಪಟ್ಟು ಅವಧಿಯನ್ನು ಹೆಚ್ಚಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈಗ ಸೋಂಕು . ದಿನಗಳಿಗೊಮ್ಮೆ ದುಪ್ಪಟ್ಟುಗೊಳ್ಳುವ ಬದಲಿಗೆ ೧೦ ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಏಪ್ರಿಲ್ 24ರ ಶುಕ್ರವಾರ  ಪ್ರಕಟಿಸಿತುದೇಶಾದ್ಯಂತ ಕಳೆದ  ,೭೫೨ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ೨೩,೪೫೨ಕ್ಕೆ ಏರಿದೆ. ೩೭ ಹೊಸ ಸಾವಿನ ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆ ೭೨೩ಕ್ಕೆ ಏರಿದೆ. ಸೋಂಕಿನಿಂದ ಚೇತರಿಕೆಯ ಪ್ರಮಾಣವು ಶೇಕಡಾ ೨೦.೫೭ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ನುಡಿದರುಕಳೆದ ೨೮ ದಿನಗಳಲ್ಲಿ ೧೫ ಜಿಲ್ಲೆಗಳು ಯಾವುದೇ ಹೊಸ ಪ್ರಕರಣವನ್ನು ಕಂಡಿಲ್ಲ. ಈವರೆಗೆ ದೇಶದ ೮೦ ಜಿಲ್ಲೆಗಳಲ್ಲಿ ಕಳೆದ ೧೪ ದಿನಗಳಿಂದ ಒಂದೇ ಒಂದು ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಅವರು ಹೇಳಿದರು. ರಾಷ್ಟವನ್ನು ಅಮೆರಿಕ ಅಥವಾ ಯುರೋಪಿನಂತಹ ಸ್ಥಿತಿಯಿಂದ ಪಾರುಮಾಡಲು ಸಾಮಾಜಿಕ, ಆರ್ಥಿಕ ಚಟುವಟಿಕೆಗಳನ್ನು ಕನಿಷ್ಠಗೊಳಿಸಿದ ರಾಷ್ಟ್ರವ್ಯಾಪಿ ಲಾಕ್ ಡೌನ್ ಅತ್ಯಗತ್ಯವಾಗಿತ್ತು ಎಂದು ತಜ್ಞರು ಶುಕ್ರವಾರ ಅಭಿಪ್ರಾಯಪಟ್ಟರು. ಭಾರತವು ಸಕಾಲದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನದ ನಿರ್ಧಾರವನ್ನು ಕೈಗೊಳ್ಳದೇ ಇರುತ್ತಿದ್ದರೆ ಪ್ರಸ್ತುತ ೨೩,೦೦೦ದ ಸನಿಹದಲ್ಲಿ ಇರುವ ಕೋವಿಡ್-೧೯ ಪ್ರಕರಣಗಳು ೭೩,೦೦೦ಕ್ಕೆ ಏರಿರುತ್ತಿದ್ದವು. ಲಾಕ್ ಡೌನ್ ಕಾರಣದಿಂದ ಕೋವಿಡ್-೧೯ ಪ್ರಕರಣಗಳ ದುಪ್ಪಟ್ಟು ವೇಗ ತಗ್ಗಿತು ಎಂದು ನಮ್ಮ ವಿಶ್ಲೇಷಣೆ ತೋರಿಸಿದೆ ಎಮದು ನೀತಿ ಆಯೋಗದ ಸದಸ್ಯ ಹಾಗೂ ಎಂಪವರ್ಡ್ ಗ್ರೂಪ್ ೧ರ ಅಧ್ಯಕ್ಷ ಡಾ. ವಿ.ಕೆ.ಪೌಲ್ ಹೇಳಿದರು.  (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಜನರ ಕೈಗಳಿಗೆ ಹಣ ಕೊಡುವ ಬದಲಿಗೆ ಕೇಂದ್ರೀಯ ಸೌಂದರ್ಯೀಕರಣಗಳಂತಹ ಯೋಜನೆಗಳಿಗೆ ವ್ಯರ್ಥ ವೆಚ್ಚ ಮಾಡುವುದನ್ನು ಕೇಂದ್ರ ಸರ್ಕಾರವು ಮುಂದುವರೆಸಿದೆ ಎಂದು ಕಾಂಗ್ರೆಸ್ ಪಕ್ಷವು  2020 ಏಪ್ರಿಲ್ 24ರ ಶುಕ್ರವಾರ  ಟೀಕಿಸಿತುಕೊರೋನಾವೈರಸ್ ಬಿಕ್ಕಟಿನ ಹೊರತಾಗಿಯೂ ಮೋದಿ ಸರ್ಕಾರವು ೨೩,೦೦೦ ಕೋಟಿ ರೂಪಾಯಿಗಳ ಕೇಂದ್ರೀಯ ಸೌಂದರ್ಯೀಕರಣ ಯೋಜನೆ ಮತ್ತು ,೧೦,೦೦೦ ಕೋಟಿ ರೂಪಾಯಿ ವೆಚ್ಚದ  ಬುಲೆಟ್ ಟ್ರೈನ್ ಯೋಜನೆಯಂತಹ ವ್ಯರ್ಥ ವೆಚ್ಚದ ಯೋಜನೆಗಳನ್ನು ಮುಂದುವರೆಸುತ್ತಿದೆ. ಸರ್ಕಾರಿ ವೆಚ್ಚದಲ್ಲಿ ಶೇಕಡಾ ೩೦ರಷ್ಟು ಇಳಿಕೆಯನ್ನು ಕೂಡಾ ಅದು ಪ್ರಕಟಿಸಿಲ್ಲ ಎಂದೂ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರು ಡಿಜಿಟಲ್ ಪತ್ರಿಕಾಗೋಷ್ಟಿಯಲ್ಲಿ ಶುಕ್ರವಾರ ಆಪಾದಿಸಿದರುಸೈನಿಕರು, ಪಿಂಚಣಿದಾರರು, ಸರ್ಕಾರಿ ನೌಕರರ ವೇತನ/ ಭತ್ಯೆಗಳನ್ನು ಕಡಿತಗೊಳಿಸುವ ಬದಲಿಗೆ ಕೇಂದ್ರೀಯ ಸೌಂದರ್ಯೀಕರಣ ಯೋಜನೆ ಅಥವಾ ಬುಲೆಟ್ ಟ್ರೈನ್ ಯೋಜನೆಗಳಂತಹ ಅನಗತ್ಯ ವೆಚ್ಚಗಳ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಅವರು ನುಡಿದರು. ದಾರಿತಪ್ಪಿದ ನೀತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ನಾವು ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಮೋದಿ ಸರ್ಕಾರವು ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರ ಕೈಗಳಿಗೆ ಹಣ ನೀಡಬೇಕು ಎಂದು ಸುರ್ಜೆವಾಲ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಪಶ್ಚಿಮ ಬಂಗಾಳದ ಜೊತೆಗಿನ ತೀವ್ರ ವಿವಾದದ ನಡುವೆಯೇ, ಕೋವಿಡ್-೧೯ ಸೋಂಕು ಪ್ರಸಾರದ ತಡೆಗಾಗಿ ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನ ಉಲ್ಲಂಘನೆ ಆರೋಪಗಳ ಬಗ್ಗೆ ತಪಾಸಣೆ ನಡೆಸುವ ಸಲುವಾಗಿ ಇನ್ನೂ ಮೂರು ರಾಜ್ಯಗಳಿಗೆ ಕೇಂದ್ರೀಯ ತಂಡಗಳನ್ನು ಕಳುಹಿಸಲು ಕೇಂದ್ರ ಸರ್ಕಾರ  2020 ಏಪ್ರಿಲ್ 24ರ ಶುಕ್ರವಾರ ನಿರ್ಧರಿಸಿತು. ಗುಜರಾತ್, ತೆಲಂಗಾಣ ಮತ್ತು ತಮಿಳುನಾಡು ಮೂರು ರಾಜ್ಯಗಳಿಗೆ ಅಂತರ ಸಚಿವಾಲಯ ಕೇಂದ್ರೀಯ ತಂಡಗಳು (ಐಎಂಸಿಟಿ) ಭೇಟಿ ನೀಡಲಿವೆಗುಜರಾತಿನ ಅಹ್ಮದಾಬಾದ್ ಮತ್ತು ಸೂರತ್, ಮಹಾರಾಷ್ಟ್ರದ ಥಾಣೆ, ತೆಲಂಗಾಣದ ಹೈದರಾಬಾದ್ ಮತ್ತು ತಮಿಳುನಾಡಿದ ಚೆನ್ನೈಯಂತಹ ಪ್ರಮುಖ ಹಾಟ್ಸ್ಪಾಟ್ ಸ್ಥಳಗಳು ಅಥವಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿತು. ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಲಾಕ್ ಡೌನ್ ಕ್ರಮಗಳ ಅನುಸರಣೆ ಮತ್ತು ಅನುಷ್ಠಾನ, ಆರೋಗ್ಯ ಮೂಲಸವಲತ್ತು ಸಿದ್ಧತೆ, ವೃತ್ತಿ ನಿರತರ ಸುರಕ್ಷತೆ ಮತ್ತು ಕಾರ್ಮಿಕರು ಹಾಗೂ ಬಡ ಜನರ ಪರಿಹಾರ ಶಿಬಿರಗಳ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಂಡಗಳು ಗಮನ ಹರಿಸಲಿವೆ ಎಂದು ಸರ್ಕಾರ ಹೇಳಿದೆ. ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ನೇತೃತ್ವದ ಐಎಂಸಿಟಿಗಳು ಸಾರ್ವಜನಿಕ ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ತಜ್ಞರನ್ನು ಹೊಂದಿರುತ್ತವೆ. ಇದಕ್ಕೆ ಮುನ್ನ ವಾರಾರಂಭದಲ್ಲಿ ಆರು ಐಎಂಸಿಟಿಗಳನ್ನು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಕ್ಕೆ ತಲಾ ಎರಡರಂತೆ ಮತ್ತು ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ತಲಾ ಒಂದರಂತೆ ಕೇಂದ್ರ ಸರ್ಕಾರವು ಕಳುಹಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

No comments:

Post a Comment