Tuesday, April 21, 2020

ಇಂದಿನ ಇತಿಹಾಸ History Today ಏಪ್ರಿಲ್ 21

2020: ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕದ ಕಾರಣ ಜನರು ಮನೆಗಳ ಒಳಗೇ ಉಳಿಯುವಂತೆ ನೆರವಾಗಲು ಅವರ ಅಗತ್ಯ ವಸ್ತುಗಳು ಮತ್ತು ದಿನಸಿಯನ್ನು  ಮನೆ ಮನೆಗೇ ಸರಬರಾಜು ಮಾಡುವ ಸಲುವಾಗಿ ಅಧಿಕೃತ ಸಹಾಯವಾಣಿ ಸೇವೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  2020 ಏಪ್ರಿಲ್ 21ರ ಮಂಗಳವಾರ ಚಾಲನೆ ನೀಡಿದರು. ವಾಟ್ಸಪ್ ಮತ್ತು ಕರೆ ನೀಡುವ ಮೂಲಕ ಸಹಾಯವಾಣಿಯನ್ಜು ಬಳಸಿಕೊಳ್ಳಬಹುದು. ಗ್ರಾಹಕರು ತಮ್ಮ ದಿನಸಿ ಪಟ್ಟಿಯನ್ನು ೦೮೦೬೧೯೧೪೯೬೦ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು. ಸುಮಾರು ೫೦೦೦ ಮಂದಿ ವಿತರಣಾ ಏಜೆಂಟರನ್ನು ವಿವಿಧ ಸಂಸ್ಥೆಗಳಿಂದ ಸೇವೆಗಾಗಿ ಬಳಸಿಕೊಳ್ಳಲಾಗಿದೆ. ಇವರು ಮನೆ ಮನೆಗೆ ದಿನಸಿ ಮತ್ತು ಅಗತ್ಯವಸ್ತು ವಿತರಣೆಗೆ ನೆರವಾಗುವರು ಎಂದು ಮುಖ್ಯಮಂತ್ರಿ ನುಡಿದರು. ಉಪಕ್ರಮದಿಂದಾಗಿ ಕಡಿಮೆ ಜನರು ಮನೆಯಿಂದ ಹೊರಬರುವಂತಾಗುತ್ತದೆ ಎಂದು ನಾವು ಹಾರೈಸುತ್ತೇವೆ. ಜನರಿಗೆ ಮನೆಯಲ್ಲೇ ಉಳಿಯುವಂತೆ ಮತ್ತು ರಸ್ತೆಗಳಿಗೆ ಇಳಿಯುವುದನ್ನು ನಿವಾರಿಸುವಂತೆ ನಾವು ಆಗ್ರಹಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಸೇವೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ರೂಪಿಸಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ ಅವರು ತಮ್ಮ ಕ್ಷೇತ್ರದಲ್ಲಿ ಸೇವೆಯು ಹೇಗೆ ಜನರಿಗೆ ನೆರವಾಗಿದೆ ಎಂದು ವಿವರಿಸಿದರು. ಸಹಾಯವಾಣಿ ಬಳಸಿಕೊಂಡು ಅಗತ್ಯವಸ್ತು/ ದಿನಸಿಗಳಿಗೆ ಆದೇಶ ನೀಡುವ ಬಗೆ ಹೇಗೆ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ/ ವಾಷಿಂಗ್ಟನ್: ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಪಾತಕಿ ಸೇರಿದಂತೆ ಸುಮಾರು ,೦೦೦ ಭಯೋತ್ಪಾದಕರ ಹೆಸರನ್ನು ಪಾಕಿಸ್ತಾನವು ತನ್ನ ವಿವೇಚನಾಧಿಕಾರ ಬಳಸಿ ಭಯೋತ್ಪಾದಕರ ಮೇಲಿನ ನಿಗಾ ಪಟ್ಟಿಯಿಂದ ತೆಗೆದುಹಾಕಿದೆ ಎಂದುಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)’ ಎಂಬ ಅಮೆರಿಕದ ಸ್ಟಾರ್ಟ್ಅಪ್   2020 ಏಪ್ರಿಲ್ 21ರ ಮಂಗಳವಾರ ಬಹಿರಂಗಪಡಿಸಿತು.. ಭಾರತ ಮತ್ತು ವಿಶ್ವದ ಇತರ ಭಾಗಗಳಿಗೆ ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನದ ಸುದೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಭಯೋತ್ಪಾದಕರಿಗೆ ಧನಸಹಾಯ ಮಾಡುವುದರ ಮೇಲೆ ಕಣ್ಣಿಟ್ಟಿರುವ ಜಾಗತಿಕ ನಿಗಾ ಸಂಸ್ಥೆಯಾಗಿರುವ ಹಣಕಾಸು ಕಾರ್ಯಪಡೆಯು (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ -ಎಫ್ಎಟಿಎಫ್) ದೇಶವನ್ನು ಬೂದು ಪಟ್ಟಿಯಲ್ಲಿ ಇರಿಸಿದೆ. ಭಯೋತ್ಪಾದನೆ-ನಿಧಿಯನ್ನು ನಿಗ್ರಹಿಸುವ ನಿಟ್ಟಿನ ಪಾಕಿಸ್ತಾನದ ಕ್ರಮಗಳ ಬಗ್ಗೆ ಅಸಮಾಧಾನಗೊಂಡ ಎಫ್ಎಟಿಎಫ್, ಫೆಬ್ರವರಿಯಲ್ಲಿ ಬೂದು ಪಟ್ಟಿಯಿಂದ ಹೊರಬರಲು ಪಾಲಿಸಬೇಕಾದ ೨೭ ಷರತ್ತುಗಳಲ್ಲಿ ೧೪ ಅಂಶಗಳನ್ನು ಮಾತ್ರ ಪಾಕಿಸ್ತಾನ ಈಡೇರಿಸಿದೆ ಎಂದು ಹೇಳಿತ್ತು. ಹಣಕಾಸು ಕಾರ್ಯ ಪಡೆಯು, ನಿಟ್ಟಿನಲ್ಲಿ ಪಾಕಿಸ್ತಾನ ಮಾಡಿರುವ  ಪ್ರಗತಿಯನ್ನು ಜೂನ್ ತಿಂಗಳಲ್ಲಿ ಮತ್ತೊಮ್ಮೆ ಮೌಲ್ಯಮಾಪನ ಮಾಡಲಿದೆ. ನಿಗಾಪಟ್ಟಿ ಅನುಸರಣೆಯನ್ನು ಸ್ವಯಂಚಾಲಿತಗೊಳಿಸುವ ನ್ಯೂಯಾರ್ಕ್ ಮೂಲದ ಸ್ಟಾರ್ಟ್ಅಪ್ ಕ್ಯಾಸ್ಟೆಲ್ಲಮ್, ಕಳೆದ ಒಂದೂವರೆ ವರ್ಷದಲ್ಲಿ ಪಾಕಿಸ್ತಾನವು "ಸಾರ್ವಜನಿಕರಿಗೆ ವಿವರಣೆ ಅಥವಾ ಅಧಿಸೂಚನೆ ಇಲ್ಲದೆ, ನಿಷೇಧಿತ ವ್ಯಕ್ತಿಗಳ ಪಟ್ಟಿಯಿಂದ ,೮೦೦ ಹೆಸರುಗಳನ್ನು ಅಳಿಸಿದೆ" ಎಂಬುದನ್ನು ಕಂಡುಹಿಡಿದಿದೆ.  ಲಷ್ಕರ್--ತೊಯ್ಬಾ ನಾಯಕ ಯಾನೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ಝಕಾ ಉರ್-ರೆಹಮಾನ್ ಸೇರಿದಂತೆ, ಮಾರ್ಚ್ ರಿಂದ ತನ್ನ ಭಯೋತ್ಪಾದಕ ನಿಗಾ ಪಟ್ಟಿಯಿಂದ ಸುಮಾರು ,೮೦೦ ಹೆಸರುಗಳನ್ನು  ಇಮ್ರಾನ್ ಖಾನ್ ಸರ್ಕಾರವು ಯಾವುದೇ ಸಾರ್ವಜನಿಕ ವಿವರಣೆಯಿಲ್ಲದೆ ತೆಗೆದುಹಾಕಿದೆಎಂದು ಕ್ಯಾಸ್ಟೆಲ್ಲಮ್ ವರದಿ ತಿಳಿಸಿತು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕನಿಷ್ಠ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ - ಎರಡು ರಾಜ್ಯಗಳಿಂದ ದೋಷಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಕೋವಿಡ್-೧೯ ಕ್ಷಿಪ್ರ ಪರೀಕ್ಷಾ ಕಿಟ್ಗಳ ಬಳಕೆಯನ್ನು ಅಮಾನತುಪಡಿಸುವಂತೆ ಕೇಂದ್ರದ ಮುಂಚೂಣಿಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು (ಐಸಿಎಂಆರ್)  2020 ಏಪ್ರಿಲ್ 21ರ ಮಂಗಳವಾರ  ರಾಜ್ಯಗಳಿಗೆ ಸೂಚಿಸಿತು. ರಫ್ತು ಪ್ರತಿಕಾಯ ಪರೀಕ್ಷಾ ಕಿಟ್ಗಳು ತಪ್ಪು ಫಲಿತಾಂಶ ನೀಡುತ್ತಿವೆ ಎಂದು ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಎರಡು ರಾಜ್ಯಗಳು ದೂರಿದ್ದವು. ಮುಂದಿನ ಎರಡು ದಿನಗಳ ಅವಧಿಯಲ್ಲಿ ಎಂಟು ಐಸಿಎಂಆರ್ ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ಕ್ಷಿಪ್ರ ಪರೀಕ್ಷಾ ಕಿಟ್ ಗಳನ್ನು ಮೌಲ್ಯ ಮಾಪನ ಪರೀಕ್ಷೆಗೆ ಒಳಪಡಿಸಲಿವೆ ಮತ್ತು ಕೆಲವೊಂದು ಕಿಟ್ಗಳೇನದರೂ ದೋಷಪೂರಿತವಾಗಿವೆಯೇ ಎಂಬುದಾಗಿ ಪರಿಶೀಲಿಸುವುವು. ಅದರ ಫಲಿತಾಂಶವನ್ನು ಅನುಸರಿಸಿ ರಾಜ್ಯಗಳು ಮತ್ತು ಜನಸಾಮಾನ್ಯರಿಗೆ ಹಿಮ್ಮಾಹಿತಿ ನೀಡಲಾಗುವುದು ಎಂದು ಐಸಿಎಂಆರ್ ಉನ್ನತ ವಿಜ್ಞಾನಿ ಡಾ. ಗಂಗಾ ಖೇಡ್ಕರ್ ನುಡಿದರು. ‘ಕ್ಷಿಪ್ರ ಪರೀಕ್ಷಾ ಕಿಟ್ಗಳು ಕಡಿಮೆ ಪತ್ತೆ ಮಾಡುತ್ತಿವೆ ಎಂಬುದಾಗಿ ಒಂದು ರಾಜ್ಯವು ಸೋಮವಾರ ನಮಗೆ ದೂರು ನೀಡಿದೆ. ಆದ್ದರಿಂದ ನಾವು ಮಂಗಳವಾರ ಮೂರು ರಾಜ್ಯಗಳಿಂದ ಹಿಮ್ಮಾಹಿತಿ ಪಡೆದಿದ್ದೇವೆಎಂದು ಡಾ. ಖೇಡ್ಕರ್ ಹೇಳಿದರು. ‘ಆರ್ ಟಿ-ಪಿಸಿಆರ್ ಪಾಸಿಟಿವ್ ಮಾದರಿಗಳು (ಕ್ಷಿಪ್ರ ಪರೀಕ್ಷಾ ಕಿಟ್ಗಳ ಮೂಲಕ ಪರೀಕ್ಷಿಸಿದಾಗ) ತುಂಬಾ ವ್ಯತ್ಯಾಸಗಳನ್ನು ತೋರಿಸಿದವು. ವ್ಯತ್ಯಾಸ ಶೇಕಡಾ ೬ರಿಂದ ಶೇಕಡಾ ೭೧ರಷ್ಟಿತ್ತು ಎಂದು ಅವರು ನುಡಿದರು. ‘ಇಷ್ಟೊಂದು ವ್ಯತ್ಯಾಸಗಳು ಒಳ್ಳೆಯದಲ್ಲ, ಆದ್ದರಿಂದ ಬಗ್ಗೆ ತನಿಖೆ ಮಾಡಬೇಕಾಗಿದೆ. ಆದಾಗ್ಯೂ ವೈರಸ್ ಹೊಸತಾದ್ದರಿಂದ ಕೆಲವು ದೋಷಗಳು ನಿರೀಕ್ಷಿತವೇ ಎಂದು ಐಸಿಎಂಆರ್ ತಜ್ಞ ಹೇಳಿದರು.  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕು ಪೀಡಿತರ ಸಂಖ್ಯೆ ೧೮,೯೮೫ಕ್ಕೆ ತಲುಪಿದ್ದು,  ಸೋಂಕಿಗೆ ಬಲಿಯಾದವರ ಸಂಖ್ಯೆ ೬೦೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್ 21ರ ಮಂಗಳವಾರ ತಿಳಿಸಿತು. ಇದೇ ವೇಳೆಗೆ ಕೊರೋನಾಸೋಂಕು ರಾಷ್ಟ್ರಪತಿ ಭವನಕ್ಕೂ ಕಾಡಿದ್ದು, ೧೨೫ ಕುಟುಂಬಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಯಿತು. ಕಳೆದ ೨೪ಗಂಟೆಗಳ ಅವಧಿಯಲ್ಲಿ ೧೩೨೯ ಹೊಸ ಕೋವಿಡ್-೧೯ ವೈರಸ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಒಂದೇ ದಿನ ೪೪ ಸಾವುಗಳು ವರದಿಯಾದವು..  ದೇಶದಲ್ಲಿ ಈವರೆಗೆ ,೨೫೧ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಈವರೆಗೆ ಅತಿ ಹೆಚ್ಚು ೪೬೬೯ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಈಗಾಗಲೇ ೨೩೨ ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಕೂಡಾ ಮಹಾರಾಷ್ಟ್ರದಲ್ಲೇ ದಾಖಲಾಗಿದೆ. ದೆಹಲಿಯಲ್ಲಿ ಒಟ್ಟು ೨೦೮೧. ಪ್ರಕರಣಗಳು, ೪೭ ಮಂದಿ ಸಾವು; ತಮಿಳುನಾಡಿನಲ್ಲಿ ೧೫೨೦ ಪ್ರಕರಣಗಳು, ೧೭ ಮಂದಿ ಸಾವು; ರಾಜಸ್ಥಾನದಲ್ಲಿ ೧೫೭೬ ಪ್ರಕರಣಗಳು, ೨೫ ಸಾವು ಸಂಭವಿಸಿದೆ. ಕರ್ನಾಟಕದಲ್ಲಿ ಹತ್ತು ಕೊರೋನಾವೈರಸ್ ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ೪೧೮ ಮಂದಿಗೆ ಕೋವಿಡ್ ೧೯ ಸೋಂಕು ದೃಢಪಟ್ಟಿದ್ದು, ೧೭ ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ೧೨೯ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿತು. (ವಿವರಗಳಿಗೆ  ಇಲ್ಲಿಕ್ಲಿಕ್  ಮಾಡಿರಿ)
.2020: ನವದೆಹಲಿ: ದಿಗ್ಬಂಧನ (ಲಾಕ್ಡೌನ್) ಕ್ರಮಗಳ ಜಾರಿಯ ಪರಿಶೀಲನೆಗಾಗಿ ಕಳುಹಿಸಲಾಗಿರುವ ಎರಡು ಅಂತರಸಚಿವಾಲಯ ಕೇಂದ್ರೀಯ ತಂಡಗಳಿಗೆ ಆಯ್ದ ಜಿಲ್ಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ನಿರ್ದೇಶಿಸಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಯವು ಬಂಗಾಳ ಸರ್ಕಾರಕ್ಕೆ  2020 ಏಪ್ರಿಲ್ 21ರ ಮಂಗಳವಾರ ಎರಡನೇ ಪತ್ರ  ಬರೆಯಿತು. ಕೇಂದ್ರಿಯ ತಂಡಗಳಲ್ಲಿ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಇದ್ದು, ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕವನ್ನು ಹತೋಟಿಗೆ ತರಲು ತಂಡಗಳ ಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಪತ್ರವು ತಿಳಿಸಿತು.  ಕೋಲ್ಕತ ಮತ್ತು ಜಲಪಾಯಿಗುರಿಯಲ್ಲಿ ತಂಡಗಳಿಗೆ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನೀಡಿಲ್ಲ. ಯಾವುದೇ ಸ್ಥಳಗಳಿಗೆ ಭೇಟಿ ನೀಡದಂತೆ, ವೃತ್ತಿ ನಿರತರೊಂದಿಗೆ ಸಂವಹನ ನಡೆಸದಂತೆ ಮತ್ತು ರಾಜ್ಯದಲ್ಲಿನ ತಳಮಟ್ಟದ ಪರಿಸ್ಥಿತಿ ಅಂದಾಜು ಮಾಡದಂತೆ ಅವರನ್ನು ನಿರ್ಬಂಧಿಸಲಾಯಿತು ಎಂದು ಪತ್ರವು ಆಪಾದಿಸಿತು. ಇಂತಹ ಅಸಹಕಾರವು ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಮತ್ತು ಸುಪ್ರೀಂಕೋರ್ಟ್ ನಿರ್ದೇಶನಗಳ ಮೇರೆಗೆ ಕೇಂದ್ರ ಸರ್ಕಾರವು ಹೊರಡಿಸಿದ ಆದೇಶಗಳ ಜಾರಿಗೆ ಅಡ್ಡಿ ಪಡಿಸಿದ್ದಕ್ಕೆ ಸಮವಾಗುತ್ತದೆ ಎಂದು ಪತ್ರ ಎಚ್ಚರಿಸಿತು.ಕೇಂದ್ರೀಯ ತಂಡಗಳಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಪತ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿತು. (ವಿವರಗಳಿಗೆ  ಇಲ್ಲಿಕ್ಲಿಕ್  ಮಾಡಿರಿ)

2020: ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಕೀಯ ವಿಪ್ಲವಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಹುತೇಕ ತಿಂಗಳ ನಂತರ ಸಂಪುಟ ರಚನೆ ಮಾಡಿತು. ಮಾರ್ಚ್ ೨೩ರಂದು ಸಿಎಂ ಆಗಿ ಪ್ರಮಾಣವ ವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್  2020 ಏಪ್ರಿಲ್ 21ರ ಮಂಗಳವಾರ ಐವರು ಸಚಿವರಿರುವ ಸಂಪುಟ ರಚಿಸಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ ಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಇಂದು ಐವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನರೋತ್ತಮ್ ಮಿಶ್ರಾ, ಗೋವಿಂದ್ ಸಿಂಗ್ ರಾಜಪೂತ್, ಮೀನಾ ಸಿಂಗ್, ಕಮಲ್ ಪಟೇಲ್ ಮತ್ತು ತುಳಸೀರಾಮ್ ಸಿಲಾವತ್ ಅವರು ಇಂದು ಸಂಪುಟ ಸೇರ್ಪಡೆಗೊಂಡ ಐವರು. ಇವರ ಪೈಕಿ ಇಬ್ಬರು ಸಾಮಾನ್ಯ ವರ್ಗದವರಾದರೆ, ಇಬ್ಬರು ಎಸ್ಸಿ/ಎಸ್ಟಿ ಪಂಗಡದವರಾಗಿದ್ಧಾರೆ. ಮತ್ತೊಬ್ಬರು ಒಬಿಸಿಯವರಾಗಿದ್ದಾರೆ.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment