Thursday, April 9, 2020

ಇಂದಿನ ಇತಿಹಾಸ History Today ಏಪ್ರಿಲ್ 09

2020: ನವದೆಹಲಿ: ಕೊರೋನಾವೈರಸ್ ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವೈದ್ಯಕೀಯ ಸಂಸ್ಥೆಗಳ ಮೇಲೆ ಅನುಚಿತ ಆರ್ಥಿಕ ಹೊರೆ ಉಂಟು ಮಾಢುವುದರ ಜೊತೆಗೆ ವಿಶ್ವದಲ್ಲಿ ಈಗಾಗಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಕೋವಿಡ್ ಪರೀಕ್ಷೆಗಳ ಪ್ರಮಾಣವನ್ನು ಇನ್ನಷ್ಟು ಕುಗ್ಗಿಸಬಹುದು ಎಂಬ ಆತಂಕ  2020 ಏಪ್ರಿಲ್ 09ರ ಗುರುವಾರ ಉದ್ಯಮ ವಲಯಗಳು ಮತ್ತು ಆರೋಗ್ಯ ತಜ್ಞರಿಂದ ವ್ಯಕ್ತವಾಯಿತು.  ಇತರ ಹಲವಾರು ವ್ಯಾಪಾರೋದ್ದಿಮೆ ಸಂಸ್ಥೆಗಳಂತೆಯೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಯಾವುದೇ ಹಣಕಾಸು ನೆರವೂ ಇಲ್ಲದೆಯೇ ಉಚಿತವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕಾಗಿ ಬಂದರೆ ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ಉದ್ಯಮ ವಲಯಗಳು ಅಭಿಪ್ರಾಯಪಟ್ಟವು. ಭಾರತದ ಅತಿದೊಡ್ಡ ಬಯೋಟೆಕ್ ಸಂಸ್ಥೆಗಳಲ್ಲಿ ಒಂದಾಗಿರುವ ಬಯೋಕಾನ್ ಲಿಮಿಟೆಡ್ ಕಾರ್ ನಿರ್ವಾಹಕ ಅಧ್ಯಕ್ಷರಾಗಿರುವ ಕಿರಣ್ ಮಜುಂದಾರ್ ಶಾ ಅವರುಖಾಸಗಿ ಸಂಸ್ಥೆಗಳು ಸಾಲದ ಮೇಲೆ ನಡೆಯಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮಾನವೀಯ ಉದ್ದೇಶವು ಸರಿ, ಆದರೆ ಅನುಷ್ಠಾನದೃಷ್ಟಿಯಿಂದ ಪ್ರಾಯೋಗಿಕವಲ್ಲ, ಪರೀಕ್ಷೆಗಳೇ ಕುಸಿದುಬೀಳಬಹುದು ಎಂಬ ಭೀತಿ ನನಗಿದೆ ಎಂದು ಶಾ ಗುರುವಾರ ಟ್ವೀಟ್ ಮೂಲಕ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ. ’ಇವೆಲ್ಲ ಸಣ್ಣ ಉದ್ಯಮಗಳು. ಅವುಗಳು ಪರೀಕ್ಷೆಗಳಿಗೆ ವೆಚ್ಚವನ್ನಷ್ಟೇ ಪಡೆಯುತ್ತಿವೆ, ಲಾಭ ಪಡೆಯುತ್ತಿಲ್ಲ. ಅವುಗಳು ತಮ್ಮ ಉದ್ಯೋಗಿಗಳಿಗೆ ಹೇಗೆ ವೇತನ ನೀಡುತ್ತವೆ?’ ಎಂದು ಶಾ ಪ್ರಶ್ನಿಸಿದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಬುಧವಾರಖಾಸಗಿ ವೈದ್ಯಕೀಯ ಸಂಸ್ಥೆಗಳು ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ  ಉದಾತ್ತ ಪಾತ್ರ ವಹಿಸಬೇಕು ಮತ್ತು ಭಾರತದ ಬಡವರು ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ವೈರಸ್ ಪತ್ತೆಯ ಪರೀಕ್ಷೆಯನ್ನು ಕೂಡಾ ಮಾಡಿಸಿಕೊಳ್ಳಲಾಗದ ಪರಿಸ್ಥಿತಿಗೆ ತಾನು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು.  (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ಕಾಸರಗೋಡು: ಕೊರೋನಾವೈರಸ್ ಹಾವಳಿಗೆ ತುತ್ತಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹೇರಲಾಗಿರುವ ದಿಗ್ಬಂಧನದಿಂದ ತೊಂದರೆಗೆ ಒಳಗಾಗಿರುವ ಜನರಿಗೆ ಈಗ ಪೊಲೀಸರೇ ಅಗತ್ಯವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸಿದ್ದಾರೆ. -ಕಾಮರ್ಸ್ ದೈತ್ಯ ಅಮೆಜಾನ್ಗಿಂತಲೂ ವೇಗವಾಗಿ ಜನರಿಗೆ ಪೊಲೀಸರು ಅಗತ್ಯ ವಸ್ತುಗಳನ್ನು ತಲುಪಿಸಲಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು 2020 ಏಪ್ರಿಲ್ 09ರ ಗುರುವಾರ  ಭರವಸೆ ನೀಡಿದರು.  ದಿನಸಿ ಸಾಮಗ್ರಿ, ಔಷಧಗಳಂತಹ ತಮ್ಮ ತಮ್ಮ ದೈನಂದಿನ ಅಗತ್ಯಗಳ ಪಟ್ಟಿಯನ್ನು ನಿವಾಸಿಗಳು ನೂತನ ಉಪಕ್ರಮದ ಭಾಗವಾಗಿ ಜಿಲ್ಲಾ ಪೊಲೀಸರು ಒದಗಿಸಿರುವ ವಾಟ್ಸಪ್ ನಂಬರುಗಳಿಗೆ ಕಳುಹಿಸಿದರಾಯಿತು. ಪಟ್ಟಿಯಲ್ಲಿರುವ ವಸ್ತುಗಳು ಅವರ ಮನೆಗಳಿಗೆ ಪೊಲೀಸರ ಮೂಲಕವೇ ಸರಬರಾಜು ಆಗುತ್ತವೆ. ಸಾರ್ವಜನಿಕ ಓಡಾಟವನ್ನು ಇನ್ನಷ್ಟು ನಿಯಂತ್ರಿಸುವ ಸಲುವಾಗಿ ಕೇರಳ ಪೊಲೀಸರು ಉಪಕ್ರಮ ಕೈಗೊಂಡರು.  ನೀವು ಅಗತ್ಯವಸ್ತುಗಳು ನಿಮ್ಮ ಮನೆಬಾಗಿಲಿಗೆ ಬರಬೇಕು ಎಂಬುದಾಗಿ ಬಯಸಿದರೆ, ಸರಳವಾಗಿ ಪೊಲೀಸರ ವಾಟ್ಸಪ್ ನಂಬರುಗಳಿಗೆ ಸಂದೇಶ ಕಳುಹಿಸಿ ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ ಸಖಾರೆ ಅವರು ಲಾಕ್ ಡೌನ್  ನಿರ್ಬಂಧಗಳಿಗೆ ಒಳಗಾಗಿರುವ ಜಿಲ್ಲೆಯ ಜನರಿಗೆ ಸೂಚಿಸಿದರು. ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-೧೯ ಸೋಂಕು ಪ್ರಕರಣಗಳು ದಾಖಲಾಗಿವೆ.  ಅಗತ್ಯ ವಸ್ತುಗಳನ್ನು ಖರೀದಿಸಲು ದಿಗ್ಬಂಧನಕ್ಕೆ ಒಳಗಾಗಿರುವ ಜನರು  ತಮ್ಮ ಮನೆಗಳಿಂದ ಹೊರಗೆ ಬರಬೇಕಾಗಿಲ್ಲ ಎಂದು ಮನೆ ಮನೆಗೆ ಅಗತ್ಯವಸ್ತು ವಿತರಣೆ ಸೇವೆಯನ್ನು ಪ್ರಕಟಿಸುತ್ತಾ ಸಖಾರೆ ಹೇಳಿದರು. ಸಖಾರೆ ಅವರು ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದಾರೆ. ‘ಪೊಲೀಸರೇ ಜನರ ಅಗತ್ಯ ವಸ್ತುಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸುತ್ತಾರೆ ಎಂದು ಸಖಾರೆ ನುಡಿದರು.  (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಜಾಗತಿಕವಾಗಿ ವ್ಯಾಪಿಸಿರುವ ಮಾರಕ ಕೊರೋನಾವೈರಸ್ (ಕೋವಿಡ್-೧೯) ಸೋಂಕು ಭಾರತದ ಬೆಳವಣಿಗೆಯ ದೃಷ್ಟಿಕೋನವನ್ನುತೀವ್ರವಾಗಿ ಬದಲಿಸಿದೆ ಎಂದು  2020 ಏಪ್ರಿಲ್ 09ರ ಗುರುವಾರ ಆರ್ಬಿಐ ವರದಿ ಹೇಳಿತು.  ಕೊರೋನವೈರಸ್ ಸೋಂಕು ಭಾರತದ ಆರ್ಥಿಕ ಚೇತರಿಕೆಯ ದೃಷ್ಟಿಕೋನವನ್ನು ಏಕಾಏಕಿಯಾಗಿ ತೀವ್ರ ಸ್ವರೂಪದಲ್ಲಿ ಬದಲಾಯಿಸಿದೆ ಎಂದು ಕೇಂದ್ರೀಯ ಬ್ಯಾಂಕ್ ತನ್ನ ಹಣಕಾಸು ನೀತಿ ವರದಿಯಲ್ಲಿ ತಿಳಿಸಿದೆ, ದಕ್ಷಿಣ ಏಷ್ಯಾದ ಬೆಳವಣಿಗೆ ಯಂತ್ರದ ಮೇಲೆ ಸಾಂಕ್ರಾಮಿಕ ರೋಗದ ಗಾಢವಾದ ಪರಿಣಾಮ ಎದ್ದು ಕಾಣುತ್ತಿದೆ ಎಂದು ವರದಿ ಹೇಳಿತು. ಕೋವಿಡ್ -೧೯ ಸಂಭವಿಸುವುದಕ್ಕೆ ಮುನ್ನ ೨೦೨೦-೨೧ರ ಬೆಳವಣಿಗೆಯ ದೃಷ್ಟಿಕೋನ ಮೇಲ್ಮುಖವಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಹೇಳಿತು.  ಕೋವಿಡ್ -೧೯ ಸಾಂಕ್ರಾಮಿಕವು ದೃಷ್ಟಿಕೋನವನ್ನು ತೀವ್ರವಾಗಿ ಬದಲಾಯಿಸಿದೆ. ಕೋವಿಡ್ ನಂತರದ ಮುನ್ನೆಣಿಕೆಗಳು ಸೂಚಿಸುವಂತೆ ಜಾಗತಿಕ ಆರ್ಥಿಕತೆಯು ೨೦೨೦ ರಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಕುಸಿಯುವ ನಿರೀಕ್ಷೆಯಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿತು.  ಭಾರತದ ಆರ್ಥಿಕತೆಯ ವೇಗ ೨೦೧೯ ಕೊನೆಯ ಮೂರು ತಿಂಗಳಲ್ಲಿ ಕಳೆದ ಆರು ವರ್ಷಗಳಿಗಿಂತಲೂ ಕಡಿಮೆಯಾಗಿತ್ತು ಮತ್ತು ಪೂರ್ಣ ವರ್ಷದಲ್ಲಿ ಶೇಕಡಾ ೫ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ, ಇದು ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ ಎಂದು ವರದಿ ಹೇಳಿತು. ಅಂತಾರಾಷ್ಟ್ರೀಯ ಕಚ್ಚಾ ತೈಲಬೆಲೆಯಲ್ಲಿನ ದೀರ್ಘಕಾಲದ ಕುಸಿತದ ಪರಿಣಾಮವಾಗಿ ವ್ಯಾಪಾರದ ದೃಷ್ಟಿಯಿಂದ ಕಂಡುಬರುವ ಯಾವುದೇ ಪ್ರಯೋಜನವು ಆರ್ಥಿಕತೆಗೆ ಸಿಕ್ಕಿಲ್ಲ. ಇದಕ್ಕೆ ಕೊರೋನಾವೈರಸ್ ಹರಡುವಿಕೆ ತಡೆಯಲು ಘೋಷಿಸಿರುವ ದಿಗ್ಬಂಧನದಿಂದಾಗಿ ಉಂಟಾಗಿರುವ ಬಾಹ್ಯ ಬೇಡಿಕೆಯ ನಷ್ಟ ಕಾರಣ. ಹೀಗಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲಬೆಲೆಯ ಕುಸಿತದ ವ್ಯಾಪಾರೀ ಲಾಭವು ಆರ್ಥಿಕ ಕುಸಿತವನ್ನು ಸರಿದೂಗಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿತು. ಕಳೆದ ತಿಂಗಳು ತನ್ನ ನೀತಿ ಹೇಳಿಕೆಯಲ್ಲಿ ತಿಳಿಸಿದಂತೆ, ಪರಿಸ್ಥಿತಿಗಳು ಹೆಚ್ಚು ಅನಿಶ್ಚಿತವಾಗಿ ಉಳಿದಿವೆ ಎಂಬುದನ್ನು ಪುನರುಚ್ಚರಿಸಿದ ರಿಸರ್ವ್ ಬ್ಯಾಂಕ್, ಜಿಡಿಪಿ ಬೆಳವಣಿಗೆಯ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ತನ್ನನ್ನು ತಾನು ಸ್ವತಃ ನಿಯಂತ್ರಿಸಿಕೊಂಡಿತು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶದಲ್ಲಿ ೧೬೬ ಜೀವಗಳನ್ನು ಬಲಿತೆಗೆದುಕೊಂಡಿರುವ ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕದ ವಿರುದ್ಧ ಸಮರ ಹೂಡಲು ರಾಜ್ಯಗಳಿಗೆ ೧೫,೦೦೦ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೇಂದ್ರ ಸರ್ಕಾರವು 2020 ಏಪ್ರಿಲ್ 09ರ ಗುರುವಾರ ಮಂಜೂರು ಮಾಡಿತು.  ಕೇಂದ್ರ ಸರ್ಕಾರವು  ಮಂಜೂರು ಮಾಡಿರುವ ಪ್ಯಾಕೇಜ್ ಹಣವನ್ನು ಕೋವಿಡ್-೧೯ರ ವಿರುದ್ಧದ ಹೋರಾಟದಲ್ಲಿ ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆಗಳಿಗಾಗಿ ವ್ಯಯಿಸಲಾಗುವುದು. ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಮೂರು ವಾರಗಳ ದಿಗ್ಬಂಧನವನ್ನು ಪ್ರಧಾನಿಯವರು ಘೋಷಿಸಿದ ಎರಡು ವಾರಗಳ ಬಳಿಕ ಪ್ಯಾಕೇಜನ್ನು ಪ್ರಕಟಿಸಲಾಯಿತು.  ೧೫,೦೦೦ ಕೋಟಿ ರೂಪಾಯಿಗಳ ಪೈಕಿ ,೭೭೪ ಕೋಟಿ ರೂಪಾಯಿಗಳನ್ನು ಕೋವಿಡ್-೧೯ ತುರ್ತು ಸ್ಪಂದನೆಗಾಗಿ ಮತ್ತು ಉಳಿದ ಹಣವನ್ನು ೨೦೨೦ರ ಜನವರಿಯಿಂದ ೨೦೨೪ರ ಮಾರ್ಚ್ವರೆಗಿನ ವರ್ಷಗಳ ಅವಧಿಗೆ  ಮಧ್ಯಮಾವಧಿ ಬೆಂಬಲಧನವಾಗಿ ಒದಗಿಸಲಾಗುವುದು. ರೋಗ ನಿರ್ಣಯ (ಡಯಾಗ್ನಾಸ್ಟಿಕ್) ಉಪಕರಣಗಳ ಅಭಿವೃದ್ಧಿ, ಕೋವಿಡ್-೧೯ಕ್ಕೆ ಮೀಸಲಾದ ಚಿಕಿತ್ಸಾ ಸವಲತ್ತುಗಳು, ಅಗತ್ಯ ವೈದ್ಯಕೀಯ ಉಪಕರಣಗಳ ಕೇಂದ್ರೀಕೃತ ದಾಸ್ತಾನು ಮತ್ತು ಸೋಂಕಿತ ರೋಗಿಗಳಿಗೆ ಚಿಕಿತ್ಸೆಗೆ ಬೇಕಾದ ಔಷಧ, ಭವಿಷ್ಯದಲ್ಲಿ ರೋಗವನ್ನು ತಡೆಯುವ ನಿಟ್ಟಿನಲ್ಲಿ ಸಜ್ಜಾಗಿರಲು ಸ್ಥಿತಿಸ್ಥಾಪಕ ಸ್ವರೂಪದ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಮತ್ತು ನಿರ್ಮಾಣ - ಇವುಗಳಿಗೆ ಒತ್ತುಕೊಟ್ಟು ಹಣವನ್ನು ಬಳಸಲಾಗುವುದು. ಕೇಂದ್ರ ಸರ್ಕಾರವು ಈವರೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ,೧೧೩ ಕೋಟಿ ರೂಪಾಯಿಗಳನ್ನು ಕೋವಿಡ್ಗೆ ಸಂಬಂಧಿಸಿದಂತೆ ಬಳಸಲು ತುರ್ತು ನಿಧಿಯಾಗಿ ವಿತರಿಸಿದೆ.  ಕೇಂದ್ರವು ೧೦ ಉನ್ನತ ಮಟ್ಟದ ಬಹು ಕ್ಷೇತ್ರ ಪರಿಣತರ ಕೇಂದ್ರೀಯ ತಂಡಗಳನ್ನು ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ರಾಜ್ಯಗಳ ನೆರವಿಗಾಗಿ ರಚಿಸಿದೆ. ತಂಡಗಳು ಬಿಹಾರ, ರಾಜಸ್ಥಾನ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಈಗಾಗಲೇ ಧಾವಿಸಿದ್ದು ರೋಗ ಹತೋಟಿ ಸಿದ್ಧತೆ, ಆಸ್ಪತ್ರೆ ಸಿದ್ಧತೆ ಮತ್ತು ವೆಂಟಿಲೇಟರ್ ನಿರ್ವಹಣೆಯಲ್ಲಿ ನೆರವು ನೀಡಲಿವೆ.  ಇತರ ಕೇಂದ್ರೀಯ ಸಚಿವಾಲಯಗಳ ಜೊತೆಗೆ ರೈಲ್ವೇ ಸಚಿವಾಲಯ ಕೂಡಾ ೫೦೦೦ ಬೋಗಿಗಳನ್ನು ಐಸೋಲೇಷನ್ ಸವಲತ್ತುಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಲು ಮುಂದೆ ಬಂದಿದೆ. ಇದರಿಂದ ೮೦,೦೦೦ ಹೆಚ್ಚುವರಿ ಹಾಸಿಗೆಗಳು ಲಭ್ಯವಾಗಲಿವೆ.  (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ/ ಮುಂಬೈ:  ಮುಂಬೈಯಲ್ಲಿ ೨೧ ಸ್ಥಳಗಳನ್ನು ಕೊರೋನಾವೈರಸ್ (ಕೋವಿಡ್-೧೯) ಹಾಟ್ ಸ್ಪಾಟ್ಗಳು ಎಂಬುದಾಗಿ ಗುರುತಿಸಲಾಗಿದ್ದು, ರೋಗ ಹರಡದಂತೆ ತಡೆಯುವ ಸಲುವಾಗಿ ತತ್ ಕ್ಷಣದಿಂದಲೇ ಕರ್ಫ್ಯೂ ಮಾದರಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಮಹಾರಾಷ್ಟ್ರದ ಸಚಿವರೊಬ್ಬರು 2020 ಏಪ್ರಿಲ್ 09ರ ಗುರುವಾರ ತಿಳಿಸಿದರು.  ಉತ್ತರಪ್ರದೇಶ ಮತ್ತು ದೆಹಲಿ ಇಂತಹುದೇ ಕ್ರಮ ಕೈಗೊಂಡ ಬಳಿಕ ಮಹಾರಾಷ್ಟ್ರವೂ ಮುಂಬೈಯಲ್ಲಿ ಇದೇ ಮಾದರಿ ಕ್ರಮ ಕೈಗೊಂಡಿತು.  ಕಟ್ಟು ನಿಟ್ಟಿನ ನಿರ್ಬಂಧಗಳು ತತ್ ಕ್ಷಣದಿಂದಲೇ ಜಾರಿಯಾಗಲಿದ್ದು, ಮುಂದಿನ ಆದೇಶದವರೆಗೂ ಮುಂದುವರೆಯಲಿವೆ. ಹಾಟ್ ಸ್ಪಾಟ್ ಗಳಲ್ಲಿ ಯಾರಿಗೂ ಮನೆಯಿಂದ ಹೊರಕ್ಕೆ ಬರಲು ಅವಕಾಶವಿಲ್ಲ. ಅಗತ್ಯ ವಸ್ತುಗಳನ್ನು ಮನೆಗೇ ವಿತರಿಸಲಾಗುವುದು, ಔಷಧ ಅಂಗಡಿಗಳು ಮಾತ್ರವೇ ತೆರೆದಿರುತ್ತವೆ ಎಂದು ರಾಜ್ಯ ಸಚಿವ ಸಂಪುಟ ನಿರ್ಧರಿಸಿತು.  ದೆಹಲಿಯ ೨೩ ರೋಗ ಹತೋಟಿ ವಲಯಗಳಲ್ಲಿ ಮತ್ತು ಉತ್ತರ ಪ್ರದೇಶದ ೧೦೦ಕ್ಕೂ ಹೆಚ್ಚು ಹಾಟ್ ಸ್ಪಾಟ್ಗಳಲ್ಲಿ ಔಷಧದ ಅಂಗಡಿಗಳಿಗೂ ತೆರೆಯಲು ಅವಕಾಶವಿಲ್ಲ. ಆರೋಗ್ಯ ರಕ್ಷಣಾ ಸಿಬ್ಬಂದಿ ಮತ್ತು ವೈದ್ಯರಂತಹ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರವೇ ಮನೆಗಳಿಂದ ಹೊರಕ್ಕೆ ಬರಲು ಅವಕಾಶ ನೀಡಲಾಯಿತು.  (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ

No comments:

Post a Comment