Thursday, April 23, 2020

ಇಂದಿನ ಇತಿಹಾಸ History Today ಏಪ್ರಿಲ್ 23

2020: ನವದೆಹಲಿ: ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದ್ದ ತನ್ನ ನೌಕರರು ಮತ್ತು ಪಿಂಚಣಿದಾರರ ಹೆಚ್ಚುವರಿ ತುಟ್ಟಿಭತ್ಯೆಯನ್ನು (ಡಿಎ) ಕೇಂದ್ರ ಸರ್ಕಾರವು  2020 ಏಪ್ರಿಲ್ 23ರ ಗುರುವಾರ ಅಮಾನತುಗೊಳಿಸಿತು ಮತ್ತು ಮುಂದಿನ ಎರಡು ತುಟ್ಟಿಭತ್ಯೆ ಏರಿಕೆಯನ್ನೂ ಸ್ಥಗಿತಗೊಳಿಸಲು ನಿರ್ಧರಿಸಿತು. ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕತೆಗೆ ಉಂಟಾಗಿರುವ ತೀವ್ರ ಧಕ್ಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿರ್ಧಾರ ಕೈಗೊಂಡಿತು.  ಸ್ಥಗಿತದ ಪರಿಣಾಮವಾಗಿ ಸರ್ಕಾರವು ೨೦೨೦ ಜನವರಿ ೦೧ರಿಂದ ನೀಡಬೇಕಾಗಿದ್ದ ತುಟ್ಟಿಭತ್ಯೆಯನ್ನು ಪಾವತಿ ಮಾಡುವುದಿಲ್ಲ ಮತ್ತು ತುಟ್ಟಿಭತ್ಯೆ ದರಗಳು ಮುಂದಿನ ವರ್ಷ ಜುಲೈವರೆಗೂ ಬದಲಾವಣೆ ಇಲ್ಲದೆ ಹಾಗೆಯೇ ಮುಂದುವರೆಯುವುವು ಎಂದು ಸರ್ಕಾರ ಈದಿನ ಹೊರಡಿಸಿದ ಅಧಿಸೂಚನೆ ತಿಳಿಸಿತು.  ೨೦೨೦ ಜನವರಿ ೦೧ರಿಂದ ೨೦೨೧ ಜೂನ್ ೩೦ರವರೆಗಿನ ಅವಧಿಗೆ ಯಾವುದೇ ಬಾಕಿಯನ್ನೂ ಪಾವತಿ ಮಾಡಲಾಗುವುದಿಲ್ಲ ಎಂದೂ ಸರ್ಕಾರ ತಿಳಿಸಿತು.  ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಸಂಪುಟವು ಮಾರ್ಚ್ ತಿಂಗಳಲ್ಲಿ ಜನವರಿ ೨೦೨೦ರಿಂದ ಅನ್ವಯಾಗುವಂತೆ ತುಟ್ಟಿಭತ್ಯೆಯನ್ನು ಶೇಕಡಾ ೪ರಷ್ಟು ಹೆಚ್ಚಿಸಿ ಮೂಲ ವೇತನದ ಶೇಕಡಾ ೨೧ರಷ್ಟು ತುಟ್ಟಿಭತ್ಯೆ ನೀಡಲು ಅನುಮೋದನೆ ನೀಡಿತ್ತು. ತುಟ್ಟಿಭತ್ಯೆಯ ಹೆಚ್ಚುವರಿ ಕಂತುಗಳು ಮತ್ತು ೨೦೨೦ ಜುಲೈ ೦೧ರಿಂದ ೨೦೨೧ ಜನವರಿ ೦೧ರವರೆಗಿ ತುಟ್ಟಿಭತ್ಯೆ ಪರಿಹಾರ ಬಾಕಿಯನ್ನು ಕೂಡಾ ಪಾವತಿ ಮಾಡಲಾಗುವುದಿಲ್ಲ ಎಂದ ವಿತ್ತ ಸಚಿವಾಲಯವು ತಿಳಿಸಿತು.  (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಅವಧಿ ಮೇ ೩ಕ್ಕೆ ನಿರೀಕ್ಷೆಯಂತೆ ಮುಗಿದ ಬಳಿಕದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಸ್ಪಷ್ಟ ಕಲ್ಪನೆ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಏಪ್ರಿಲ್ 23ರ ಗುರುವಾರ  ಇಲ್ಲಿ ಟೀಕಿಸಿದರು. ಹಾಲಿ ಸ್ವರೂಪದ ದಿಗ್ಬಂಧನವನ್ನು ದಿನಾಂಕದ ಬಳಿಕವೂ ಮುಂದುವರೆಸುವುದು ಇನ್ನೂ ಹೆಚ್ಚು ವಿನಾಶಕಾರಿಯಾಗುತ್ತದೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿ ನಡೆದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ ಸೋನಿಯಾ ಗಾಂಧಿ ಎಚ್ಚರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ ೨೫ರಿಂದ ಮೊದಲಿಗೆ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಪ್ರಕಟಿಸಿದ್ದರು. ಬಳಿಕ ಅದನ್ನು ಮೇ ೩ರ ವರೆಗೆ ವಿಸ್ತರಿಸಿದ್ದರು. ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ಏಪ್ರಿಲ್ ೧೭ರಂದು ವಿಡಿಯೋ ಸಂವಹನ ನಡೆಸಿದ ಬಳಿಕ ದಿಗ್ಬಂಧನ ತೆರವಿನ ಬಗ್ಗೆ ಪ್ರಧಾನಿಯವರು ನಿರ್ಧರಿಸುವ ಸಾಧ್ಯತೆ ಇದೆ. ಕೋವಿಡ್-೧೯ರ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮತ್ತು ಸ್ಥಳೀಯ ಸರ್ಕಾರಗಳು ಮುಂಚೂಣಿಯಲಿವೆ. ಆದರೆ ಕೇಂದ್ರ ಸರ್ಕಾರದಿಂದ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕಾನೂನುಬದ್ಧವಾಗಿ ಬರಬೇಕಾದ ನಿಧಿಗಳು ಬರುತ್ತಿಲ್ಲ, ಅವುಗಳನ್ನು ತಡೆ ಹಿಡಿಯಲಾಗಿದೆ ಎಂದು ಸೋನಿಯಾ ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಸೋಂಕಿನ ವಿರುದ್ಧ ಭರವಸೆದಾಯಕವಾದs ಹಾಗೂ ಚೀನಾ, ಜಪಾನ್ ಮತ್ತು ಯುರೋಪಿನಲ್ಲಿ ಬಳಸಲಾಗುತ್ತಿರುವ ಫವಿಪಿರವೀರ್  ವೈರಾಣು ನಿರೋಧೀ ಔಷzs ತಯಾರಿಯ ಸೂತ್ರ ಸಿದ್ಧವಾಗಿದ್ದು ಭಾರತವು ಅದರ ಉತ್ಪಾದನೆಗೆ ಸಜ್ಜಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)  2020 ಏಪ್ರಿಲ್ 23ರ ಗುರುವಾರ ಹೇಳಿತು. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಚಾರವನ್ನು ಬಹಿರಂಗ ಪಡಿಸಿದರು. ಸಿಎಸ್‌ಐಆರ್ ಆಡಳಿತ ನಿರ್ದೇಶಕ ಡಾ. ಶೇಖರ್ ಸಿ ಮಾಂಡೆ ಅವರು ಖಾಸಗಿ ಫಾರ್ಮಾಸ್ಯೂಟಿಕಲ್ ಕಂಪೆನಿ ಒಂದಕ್ಕೆ ಸೂತ್ರವನ್ನು ನೀಡಲಾಗಿದ್ದು, ಕೋವಿಡ್-೧೯ ಬಳಕೆಗಾಗಿ ಔಷಧ ಉಪಯೋಗಕ್ಕೆ ಈಗ ಭಾರತದ ಔಷಧ ಮಹಾ ನಿಯಂತ್ರಕರು (ಡಿಜಿಸಿಐ) ಒಪ್ಪಿಗೆ ನೀಡಬೇಕಾಗಿದೆ ಎಂದು ಹೇಳಿದರು. ಫವಿಪಿರವೀರ್ ಔಷಧವು ಇನ್‌ಫ್ಲುಯೆಂಜಾ ವೈರಾಣುಗಳ ವಿರುದ್ಧ ಉತ್ತಮ ಫಲಿತಾಂಶ ನೀಡಿದೆ. ಚೀನಾ, ಜಪಾನ್, ರಶ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಕೋವಿಡ್-೧೯ ವಿರುದ್ಧ ಅದನ್ನು ಬಳಸುವ ಸಾಧ್ಯತೆ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ ಎಂದು ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಇಡೀ ಜಗತ್ತು ಕೊರೋನಾವೈರಸ್ (ಕೋವಿಡ್-೧೯) ವಿರುದ್ಧ ಸಮರ ನಡೆಸುತ್ತಿರುವ ಹೊತ್ತಿನಲ್ಲೇ ಭಾರತವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ) ಕೇಂದ್ರ ಕಚೇರಿಯಲ್ಲಿ ನಾಯಕತ್ವದ ಪಾತ್ರ ವಹಿಸಲಿದೆ ಎಂಬ ವರ್ತಮಾನ ಬಂದಿದೆ. ಮುಂದಿನ ತಿಂಗಳು ನಡೆಯಲಿರುವ ಜಾಗತಿಕ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕುರಿತು ನಿರ್ಧಾರವಾಗಲಿದೆ ಎಂದು ಸುದ್ದಿ ಮೂಲಗಳು 2020 ಏಪ್ರಿಲ್ 23ರ ಗುರುವಾರ ತಿಳಿಸಿದವು. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾಗಿ ಭಾರತವನ್ನು ನಾಮನಿರ್ದೇಶನ ಮಾಡುವ ವಿಚಾರ ವಿಶ್ವ ಆರೋಗ್ಯ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ಸಾರ್ಸ್-ಕೋವ್- ಮಾರಕ ವೈರಾಣು ಹರಡುವುದನ್ನು  ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಶತಾಯಗತಾಯ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ ಸಂಸ್ಥೆಯ ಆಡಳಿತದ ಹೊಣೆ ಭಾರತದ ಹೆಗಲಿಗೆ ಏರುವ ಸಾಧ್ಯತೆಗಳು ಬಲವಾಗಿವೆ ಎಂದು ಮೂಲಗಳು ಹೇಳಿವೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಈಗಾಗಲೇ ವಿಶ್ವಾದ್ಯಂತ ,೮೦,೦೦೦ಕ್ಕಿಂತಲೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ೨೬ ಲಕ್ಷಕ್ಕಿಂತಲ್ಲೂ ಹೆಚ್ಚಿನ ಮಂದಿಗೆ ಸಾಂಕ್ರಾಮಿಕದ ಸೋಂಕು ತಗುಲಿದೆ. ಪರಿಣಾಮವಾಗಿ ವಿಶ್ವಾದ್ಯಂತ ದೇಶಗಳು ದಿಗ್ಬಂಧನಗಳ (ಲಾಕ್ ಡೌನ್) ಮೊರೆ ಹೋಗಿದ್ದು, ಜಗತ್ತು ವರ್ಷ ಟ್ರಿಲಿಯನ್ ಡಾಲರುಗಳಿಗೂ ಹೆಚ್ಚಿನ ಆರ್ಥಿಕ ನಷ್ಟ ಅನುಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾಸಭೆಯ ಬಳಿಕ ನಡೆಯಲಿರುವ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ಮೇ ೨೨ರಂದು ಭಾರತವು ಮುಂಚೂಣಿಯ ಹುದ್ದೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ದೇಶದಲ್ಲಿ ಎರಡನೇ ಅವಧಿಗೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ವಿಸ್ತರಣೆಯಾಗಿದ್ದರೂ,  ಕೊರೋನಾಸೋಂಕಿಗೆ ಬಲಿಯಾಗುತ್ತಿರುವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ ೨೪ ಗಂಟೆಗಳಲ್ಲಿ ೧೪೦೯ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾದವು. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೧,೭೦೦ಕ್ಕೇರಿತು.  ದೇಶಾದ್ಯಂತ ಇದುವರೆಗೂ ೨೧,೭೦೦ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ೧೬,೬೮೯ ಪ್ರಕರಣಗಳು ಸಕ್ರಿಯವಾಗಿದ್ದು, ,೩೨೪ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಸಾವಿನ ಸಂಖ್ಯೆ ೬೮೬ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್  2020 ಏಪ್ರಿಲ್ 23ರ ಗುರುವಾರ ಹೇಳಿದರು. ೧೨ ಜಿಲ್ಲೆಗಳಲ್ಲಿ ಕಳೆದ ೨೮ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಈವರೆಗಿನ ಮಾಹಿತಿಯಂತೆ ೧೨ ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ೭೮ ಜಿಲ್ಲೆUಳಲ್ಲಿ (೨೩ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು) ಕಳೆದ ೧೪ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಅಗರವಾಲ್ ನುಡಿದರು. ಜಗತ್ತಿನಾದ್ಯಂತ ಕೊರೊನಾ ವೈರಸ್ ದಾಂಗುಡಿ ಮುಂದುವರೆದಿದೆ. ಇಲ್ಲಿಯವರೆಗೆ ,೮೪,೧೮೬ ಜನ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೇ, ೨೬,೩೬,೯೮೯ ಜನರಿಗೆ ಸೋಂಕು ಅಂಟಿಕೊಂಡಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾವೈರಸ್ ಎರಡನೇ ಬಲಿ ಪಡೆದುಕೊಂಡಿದ್ದು ಕೊರೋನಾಸೋಂಕು ತಗುಲಿದ್ದ ವೃದ್ಧೆ 2020 ಏಪ್ರಿಲ್ 23ರ ಗುರುವಾರ ಸಾವನ್ನಪ್ಪಿದರು. ಕೊರೊನಾವೈರಸ್ಸಿನಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿರುವವರಿಬ್ಬರೂ ಬಂಟ್ವಾಳದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೋಮವಾರದಂದು ಸೊಸೆ ಮೃತರಾಗಿದ್ದು, ಗುರುವಾರದಂದು ಅತ್ತೆ ಸಾವನ್ನಪ್ಪಿದರು. ಬಂಟ್ವಾಳದಲ್ಲಿ ಹಿಂದೆ ಮೃvರಾಗಿದ್ದ್ದ ಮಹಿಳೆಯ ಅತ್ತೆಯಲ್ಲಿ ಗುರುವಾರ ಬೆಳಗ್ಗೆ ಸೋಂಕು ದೃಢಪಟ್ಟಿತ್ತು. ವೆನ್ಲಾಕ್ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ೭೫ರ ಹರೆಯದ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಆಕೆ ಕೊನೆಯುಸಿರು ಎಳೆದರು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ ೨೦ರಂದು ಬಂಟ್ವಾಳ ಮೂಲದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಮೃತರಾಗಿದ್ದರು. ಬಳಿಕ ಆಕೆಗೆ ಕೊರೋನಾವೈರಸ್ ಅಂಟಿದ್ದು ಖಾತರಿಯಾಗಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

No comments:

Post a Comment