Monday, April 27, 2020

ಇಂದಿನ ಇತಿಹಾಸ History Today ಏಪ್ರಿಲ್ 27

2020: ನವದೆಹಲಿ: ಕೇಂದ್ರ ಸರ್ಕಾರವು ಕೊರೋನಾವೈರಸ್ ಸೋಂಕು ಹರಡzಂತೆ ತಡೆಯುವ ಸಲುವಾಗಿ ವಿಧಿಸಿರುವ ರಾಷ್ಟ್ರವ್ಯಾಪಿ ದಿಗ್ಬಂಧನವು ಹಾಟ್‌ಸ್ಪಾಟ್‌ಗಳಲ್ಲಿ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 27ರ ಸೋಮವಾರ ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ವಿಡಿಯೋ ಸಂವಹನದಲ್ಲಿ ಹೇಳಿದರುಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಮುಂದಿನ ಹೋರಾಟದ ಮಾರ್ಗದ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ Zರ್ಚಿಸಿದ ಪ್ರಧಾನಿ, ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ವಿಸ್ತರಿಸುವ ಬಗ್ಗೆ ಎರಡನೇ ಹಂತದ ಲಾಕ್ ಡೌನ್ ಮೇ ೩ರಂದು ಮುಗಿದ ಬಳಿಕ ನಿರ್ಧರಿಸಲಾಗುವುದು ಎಂದು ನುಡಿದರುಏನಿದ್ದರೂ, ನಿರ್ಬಂಧಗಳನ್ನು ತೆರವುಗೊಳಿಸುವುದು ಪ್ರತಿಯೊಂದು ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಅವಲಂಬಿಸಿದೆ. ಸುಧಾರಣೆ ಕಂಡು ಬಂದ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು ಎಂದು ಪ್ರಧಾನಿ ಹೇಳಿದರುಆರ್ಥಿಕ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ ಪ್ರಧಾನಿ ಮೋದಿ ಚಿಂತಿಸಲು ಕಾರಣವಿಲ್ಲ ಎಂದು ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಅಮಿತ್ ಶಾ ಅವರುಆರ್ಥಿಕ ಚಟುವಟಿಕೆಗಳನ್ನು ನಿರಂತರ ಸ್ಥಗಿತಗೊಳಿಸಲು ಸಾಧ್ಯವಿಲ್ಲ, ಆದರೆ ಸಾಮಾಜಿಕ ಅಂತರ ಪಾಲನೆ ಮತ್ತು ಮುಖಗವಸುಗಳ ಬಳಕೆ ನಗರ ಪ್ರದೇಶಗಳಲ್ಲಿ ಮಾತ್ರವೇ ಅಲ್ಲ ಗ್ರಾಮೀಣ ಪ್ರದೇಶಗಳಲ್ಲೂ ದೈನಂದಿನ ಬದುಕಿನ ಅಂಗವಾಗಲಿದೆಎಂದು ಹೇಳಿದರು. ಇನ್ನಷ್ಟು ಸುಧಾರಣೆಗಳು ಕಾದಿದ್ದು ಶೀಘ್ರವೇ ಸರ್ಕಾರ ಅವುಗಳನ್ನು ಪ್ರಕಟಿಸಿಲಿದೆ ಎಂದು ಸುದ್ದಿ ಮೂಲಗಳು ಹೇಳಿದವು. ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ರಂಗದ ಇನ್ನೂ ಕೆಲವು ಉದ್ಯಮಗಳನ್ನು ತೆರೆಯಲು ಬಂದಿರುವ ಬೇಡಿಕೆಗಳ ಹಿನ್ನೆಲೆಯಲ್ಲಿ ಪ್ರಧಾನಿಯವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)


2020: ನವದೆಹಲಿ: ಜನರ ಪ್ರಾಣಗಳ ರಕ್ಷಣೆಯ ಜೊತೆಗೇ ಕೊರೋನಾವೈರಸ್ಸಿನಿಂದಾಗಿ ವಸ್ತುಶಃ ಸ್ಥಗಿತಗೊಂಡಿರುವ ಆರ್ಥಿಕತೆಯ ಪುನಾರಂಭಕ್ಕೆ ಅವಕಾಶ ನೀಡುವಂತಹ ದ್ವಿಮುಖ ತಂತ್ರವನ್ನು ರೂಪಿಸುವತ್ತ ಭಾರತ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 27ರ ಸೋಮವಾರ ಇಲ್ಲಿ ರಾಜ್ಯ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಹೇಳಿದರು.
ಎಲ್ಲ ಮುಖ್ಯಮಂತ್ರಿಗಳು ಅಥವಾ ಅವರ ಪ್ರತಿನಿಧಿಗಳು ವಿಡಿಯೋ ಸಂವಹನದಲ್ಲಿ ಪಾಲ್ಗೊಂಡಿದ್ದರು. ಸಮಯಾಭಾವದ ಕಾರಣ ಪಾಲ್ಗೊಂಡಿದ್ದವರ ಪೈಕಿ ಮಂದಿಗೆ ಮಾತ್ರ ಮಾತನಾಡಲು ಅವಕಾಶ ಲಭಿಸಿತು.  ತನ್ನ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ಪಡೆದ ಮೇಘಾಲಯ ಸಾಂಕ್ರಾಮಿಕ ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾಗಿರುವ ರಾಷ್ಟ್ರವಾಪಿ ದಿಗ್ಬಂಧನವನ್ನು ಮೇ ೩ರ ಆಚೆಗೂ ವಿಸ್ತರಿಸಬೇಕು ಎಂದು ಸಲಹೆ ಮಾಡಿತು. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳು ನಿರ್ಬಂಧಗಳು ಇರಬೇಕು ಎಂದು ಕೋರಿದವು, ಆದರೆ ನಿರ್ಣಯವನ್ನು ಪ್ರಧಾನಿಗೆ ಬಿಟ್ಟವು ಎಂದು ಅಧಿಕಾರಿಗಳು ತಿಳಿಸಿದರು.  ಮಿಜೋರಂ, ಪುದುಚೆರಿ, ಉತ್ತರಾಖಂಡ, ಒಡಿಶಾ, ಬಿಹಾರ ಮತ್ತು ಹರಿಯಾಣ ದಿಗ್ಬಂಧನ ತೆರವುಗೊಳಿಸಲು ಬೆಂಬಲ ನೀಡಿದವು. ಪ್ರಧಾನಿ ಮೋದಿಯವರು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮಾರ್ಚ್ ೨೫ರಂದು ಜಾರಿಗೊಳಿಸಿದ್ದರು. ಬಳಿಕ ಅದನ್ನು ಮೇ ೩ರವರೆಗೆ ವಿಸ್ತ್ತರಿಸಿದ್ದರು. ಜನರ ಜೀವಗಳು ಮತ್ತು ಬದುಕಗಳನ್ನು ಸಮತೊಲನಗೊಳಿಸುವುದು ಭಾರತ ಎದುರಿಸುತ್ತಿರುವ ಪ್ರಮುಖ ಸವಾಲು ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ಹೇಳಿದರು. ಆರ್ಥಿಕ ಚಟುವಟಿಕೆ ಸ್ಥಗಿತಗೊಂಡದ್ದರಿಂದ ಅಸಂಘಟಿತ ವಲಯಗಳ ಕಾರ್ಮಿಕರು ಭವಿಷ್ಯ ಅಯೋಮಯವಾಗಿದೆ ಮತ್ತು ಸಂಘಟಿತ ವಲಯದಲ್ಲಿ ಕೂಡಾ ಲಕ್ಷಾಂತರ ಉದ್ಯೋಗಗಳು ಸಮಸ್ಯೆಗೆ ಸಿಲುಕಿವೆ. ಇದೇ ವೇಳೆಗೆ ಆರೋಗ್ಯ ರಕ್ಷಣಾ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತುಕೊಂಡು ರೋಗ ಪ್ರಸರಣವನ್ನು ತಗ್ಗಿಸಲು ಹೋರಾಟ ನಿರತರಾಗಿದ್ದಾರೆ ಎಂದು ಪ್ರಧಾನಿ ನುಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಹೂಡಿಕೆ ನಗದೀಕರಿಸುವಂತೆ ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆದಾರರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಹಣದ ದ್ರವ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ೫೦,೦೦೦ ಕೋಟಿ ರೂಪಾಯಿಗಳ ವಿಶೇಷ ಅಗ್ಗದ ಸಾಲ ಒದಗಿಸುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2020 ಏಪ್ರಿಲ್ 27ರ ಸೋಮವಾರ ನೆರವಿನ ಹಸ್ತ ಚಾಚಿತು.  ಕಳೆದ ವಾರ ಅಮೆರಿಕ ಮೂಲದ ಫ್ರ್ಯಾಂಕ್ಲಿನ್ ಟೆಂಪಲ್ಟನ್ ಕಂಪನಿಯು ತನ್ನ ಆರು ಮ್ಯೂಚುವಲ್ ಫಂಡ್‌ಗಳನ್ನು  ರದ್ದು ಪಡಿಸಿದ ಪರಿಣಾಮವಾಗಿ ಮ್ಯೂಚುವಲ್ ಫಂಡ್ ಹಣಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಯಾಗಿತ್ತು.  ಇದರ ಜೊತೆಗೆ ಕೋವಿಡ್-೧೯ ಹಿನ್ನೆಲೆಯಲ್ಲಿ ಆರಂಭವಾದ ದಿಗ್ಬಂಧನದಿಂದ (ಲಾಕ್ ಡೌನ್) ಮ್ಯೂಚುವಲ್ ಫಂಡ್ ವಲಯದಲ್ಲಿ ಹೂಡಿಕೆ ಹಿಂಪಡೆಯುವ ಒತ್ತಡ ಹೆಚ್ಚಾಗತೊಡಗಿತ್ತು. ಕಾರಣಗಳಿಂದಾಗಿ ಆತಂPಕ್ಕೆ ಒಳಗಾಗಿದ್ದ ಹೂಡಿಕೆದಾರರ ವಿಶ್ವಾಸ ಸಂವರ್ಧನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ನೆರವು ಒದಗಿಸುವ ಕ್ರಮ ಕೈಗೊಂಡು, ಮ್ಯೂಚುವಲ್ ಫಂಡಿಗಾಗಿ ೫೦,೦೦೦ ಕೋಟಿ ರೂಪಾಯಿಗಳ ವಿಶೇಷ ಹಣದ ದ್ರವ್ಯತೆಯ ಸೌಲಭ್ಯವನ್ನು (ಸ್ಪೆಶ್ಯಲ್ ಲಿಕ್ವಿಡಿಟಿ ಫೆಸಿಲಿಟಿ) ಘೋಷಿಸಿತು.   (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಚೀನಾದ ಎರಡು ಕಂಪೆನಿಗಳಿಂದ ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳಿಗಾಗಿ ನೀಡಲಾಗಿದ್ದ ಆರ್ಡರ್‌ನ್ನು ಗುಣಮಟ್ಟ ವಿವಾದದ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು 2020 ಏಪ್ರಿಲ್ 27ರ ಸೋಮವಾರ ಪ್ರಕಟಿಸಿದ ಕೇಂದ್ರ ಸರ್ಕಾರ ಔಷಧ ಸರಬರಾಜಿಗಾಗಿ ಯಾವುದೇ ಹಣ ಪಾವತಿ ಮಾಡಲಾಗಿಲ್ಲ ಎಂದು ತಿಳಿಸಿತು. ಭಾರತವು ಕಿಟ್‌ಗಳಿಗೆ ದುಪ್ಪಟ್ಟು ದರವನ್ನು ತೆರುತ್ತಿದೆ ಎಂಬುದನ್ನು ದೆಹಲಿ ಹೈಕೋರ್ಟ್ ನೀಡಿದ ಆದೇಶವೊಂದು ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸುತ್ತಿದ ಒಂದು ದಿನದ ಬಳಿಕ ಸರ್ಕಾರ ಕ್ರಮ ಕೈಗೊಂಡಿದೆ. ಚೀನಾದ ಗುವಾಂಗ್‌ಝೊವು ವೊಂಡ್ಫೋ ಬಯೋಟೆಕ್ ಮತ್ತು ಝುಹಾಯಿ ಲಿವ್ ಝೋನ್ ಡಯಾಗ್ನಾಸ್ಟಿಕ್ - ಎರಡು ಕಂಪೆನಿಗಳು ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ತಯಾರಿಸಿದ್ದು, ಅವು ಸಮರ್ಪಕವಾಗಿ ಕಾರ್‍ಯ ನಿರ್ವಹಿಸುತ್ತಿಲ್ಲ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪತ್ತೆ ಹಚ್ಚಿತ್ತು ಎಂದು ಸರ್ಕಾರ ತಿಳಿಸಿತು.  ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿದ್ದರಿಂದ (ಹಣ ಪಾವತಿ ಮಾಡದೇ ಇರುವುದರಿಂದ) ಸರ್ಕಾರಕ್ಕೆ ಒಂದು ರೂಪಾಯಿ ಕೂಡಾ ನಷ್ಟವಾಗಿಲ್ಲ ಎಂದು ಐಸಿಎಂಆರ್ ಹೇಳಿಕೆಯೊಂದರಲ್ಲಿ ತಿಳಿಸಿತು.  ಸಾಧನವು ತಪ್ಪು ಫಲಿತಾಂಶಗಳನ್ನು ತೋರಿಸಿದ್ದರಿಂದ ಪರೀಕ್ಷಾ ಕಿಟ್‌ಗಳನ್ನು ಬಳಸಬೇಡಿ ಎಂಬುದಾಗಿ ಐಎಸಿಎಂಆರ್ ಎಲ್ಲ ರಾಜ್ಯಗಳಿಗೂ ಈಗಾಗಲೇ ಸೂಚನೆ ಕೂಡಾ ನೀಡಿದೆ. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಕೊರೋನಾವೈರಸ್ ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಹಿಂದೆ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದ ಭಾರತದ ೧೬ ಜಿಲ್ಲೆಗಳಲ್ಲಿ ಕಳೆದ ೨೮ ದಿನಗಳಿಂದ ಯಾವುದೇ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂಬ ಸುದ್ದಿ 2020 ಏಪ್ರಿಲ್ 27ರ ಸೋಮವಾರ ಬಂದಿತು. ಇದು ಚೇತರಿಸಿದವರಿಂದ ಸೋಂಕು ಪ್ರಸರಣದ ಅಪಾಯವಿಲ್ಲ ಎಂಬ ಚೇತೋಹಾರಿ ಅಂಶವನ್ನು ಬಹಿರಂಗ ಪಡಿಸಿದೆ. ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದ ಮಹಾರಾಷ್ಟ್ರದ ಗೊಂಡಿಯಾ, ಕರ್ನಾಟಕದ ದಾವಣಗೆರೆ ಮತ್ತು ಬಿಹಾರದ ಲಖಿ ಸರಾಯಿ ಮೂರು ಜಿಲ್ಲೆಗಳು ಇದೀಗ ಸೋಂಕಿನ ಯಾವುದೇ ಹೊಸ ಪ್ರಕರಣಗಳು ಕಂಡು ಬರದ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಯಾಗಿವೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯಿಂದ ಬೆಳಕಿಗೆ ಬಂದಿತು. ೨೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ೮೫ ಜಿಲ್ಲೆಗಳಲ್ಲಿ ಕೋವಿಡ್ -೧೯ ಸೋಂಕಿನ ಯಾವುದೇ ಹೊಸ ಪ್ರಕರಣ ಕಳೆದ ೧೪ ದಿನಗಳಿಂದ ವರದಿಯಾಗಿಲ್ಲ.  ಕೋವಿಡ್-೧೯ ರೋಗಿಗಳಿಗೆ ಸಂಬಂಧಿಸಿದಂತೆ ಅಂಟಿರುವ ಕಳಂಕವನ್ನು ವ್ಯಾಪಕ ಪ್ರಚಾರದ ಮೂಲಕ ಅಳಿಸಬೇಕಾಗಿದೆ. ಚೇತರಿಸಿದ ರೋಗಿಗಳಿಂದ ರೋಗ ವರ್ಗಾವಣೆಯ ಅಪಾಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಅವರು ವಾಸ್ತವವಾಗಿ ರೋಗ ವಾಸಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು. ಪ್ಲಾಸ್ಮಾ ಥೆರೆಪಿಯ ಮೂಲಕ ಅವರ ದೇಹದಲ್ಲಿನ ಪ್ರತಿಕಾಯಗಳ ಮೂಲಕ ಇತರರ ಸಂಕಷ್ಟ ನಿವಾರಣೆ ಸಾಧ್ಯಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು. ಯಾವುದೇ ಸಮುದಾಯ ಅಥವಾ ಪ್ರದೇಶವನ್ನು ಕೊರೊನಾವೈರಸ್ ಸೋಂಕು ಪ್ರಕರಣದ ಕಾರಣಕ್ಕಾಗಿ ದೂಷಿಸಬಾರದು. ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತಾ ಕಾರ್ಮಿಕರ ಮೇಲೆ ಯಾರೂ ದಾಳಿ ಮಾಡಬಾರದು, ಏಕೆಂದರೆ ಅವರು ಕೊರೋನಾವೈರಸ್ ಬಿಕ್ಕಟ್ಟನ್ನು ನಿಯಂತ್ರಣಕ್ಕೆ ತರಲು ನೆರವಾಗುತ್ತಿದ್ದಾರೆ ಎಂದು ಅಗರವಾಲ್ ನುಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)
2020: ನವದೆಹಲಿ: ಪಶ್ಚಿಮ ಬಂಗಾಳ ಸೇರಿದಂತೆ ಕನಿಷ್ಠ ರಾಜ್ಯಗಳ ಮುಖ್ಯಮಂತ್ರಿಗಳು  2020 ಏಪ್ರಿಲ್ 27ರ ಸೋಮವಾರ  ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಕೊರೋನಾವೈರಸ್ ಪ್ರಸರಣವನ್ನು ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧವನ್ನು (ಲಾಕ್ ಡೌನ್) ಮೇ ೩ರಿಂದ ಆಚೆಗೆ ವಿಸ್ತರಿಸುವಂತೆ ಆಗ್ರಹಿಸಿದರು.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕನಿಷ್ಠ ಮೇ ೨೧ರವರೆಗೆ ಲಾಕ್‌ಡೌನ್ ವಿಸ್ತರಿಸಬೇಕು ಎಂಬುದಾಗಿ ಆಗ್ರಹಿಸಿದ್ದರೆ, ಇತರ ಐವರು ಮುಖ್ಯಮಂತ್ರಿಗಳಾದ ಆಂಧ್ರಪ್ರದೇಶದ ಜಗನ್ ಮೋಹನ ರೆಡ್ಡಿ, ಗೋವಾದ ಪ್ರಮೋದ ಸಾವಂತ್, ಹಿಮಾಚಲ ಪ್ರದೇಶದ ಜೈರಾಮ್ ಠಾಕೂರ್, ಮಿಜೋರಂನ ಝೊರಾಮ್ತಂಗ ಮತ್ತು ಮೇಘಾಲಯದ ಕೊನ್ರಾಡ್ ಸಂಗ್ಮಾ ಅವರು ದಿಗ್ಬಂಧನ ವಿಸ್ತರಣೆಗೆ ಬೆಂಬಲ ಸೂಚಿಸಿದರು. ಆದರೆ ಯಾವುದೇ ಕಾಲಮಿತಿಯನ್ನು ಸೂಚಿಸಲಿಲ್ಲ. ಪತ್ರಕರ್ತರೊಂದಿಗೆ ಆನ್ ಲೈನ್ ಪತ್ರಿಕಾಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ, ನಿರ್ಬಂಧಗಳು ಮುಂದುವರೆಯಬೇಕು, ಜೊತೆಗೇ ಸಡಿಲಿಕೆಗಳೂ ಇರಬೇಕು ಎಂದು ಹೇಳಿದರು.
ನಾವು ದಿಗ್ಬಂಧನವನ್ನು ಮೇ ೨೧ರವರೆಗೆ ವಿಸ್ತರಿಸಲು ಒಲವು ಹೊಂದಿದ್ದೇವೆ. ಪ್ರಧಾನಿಯವರ ಜೊತೆಗಿನ ಈದಿನ ಸಭೆಯಲ್ಲಿ ಲಾಕ್ ಡೌನ್ ಮುಂದುವರೆಯುವುದು ಎಂಬ ಇಂಗಿತವನ್ನು ಅವರು ನೀಡಿದ್ದಾರೆ ಎಂದು ನನಗೆ ಅನಿಸಿದೆಎಂದು ಮಮತಾ ನುಡಿದರು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ : ಕೋವಿಡ್ ವೈರಸ್ ಹಾವಳಿ ಹಿನ್ನೆಲೆಯಲ್ಲಿ ತೀವ್ರ ಮಟ್ಟದ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿ ಯಾವುದೇ ಮಾಧ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಪತ್ರಕರ್ತರ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ,  ಇಂಡಿಯನ್ ನ್ಯೂಸ್ ಪೇಪರ್ಸ್ ಸೊಸೈಟಿ,  ಮತ್ತು ಸುದ್ದಿ ಪ್ರಸಾರಕರ ಸಂಘಕ್ಕೆ  ಸುಪ್ರೀಂಕೋರ್ಟ್ 2020 ಏಪ್ರಿಲ್ 27ರ ಸೋಮವಾರ ನೋಟಿಸ್ ಜಾರಿ ಮಾಡಿತು. ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಷನ್ ಕೌಲ್ ಮತ್ತು ಬಿಆರ್. ಗವಾಯಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಪ್ರಕರಣವು ಹಲವಾರು ಗಂಭೀರ ವಿಷಯಗಳನ್ನು ಎತ್ತಿರುವುದರಿಂದ ಅದನ್ನು ಪರಿಗಣಿಸುವ  ಅಗತ್ಯವಿದೆ ಎಂದು ಹೇಳಿತು. ಕೋವಿಡ್ ಕಾರಣ ನೀಡಿ ಕೆಲವು ಮಾಧ್ಯಮ ಸಂಸ್ಥೆಗಳು ಪತ್ರಕರ್ತರು,ಹಾಗೂ ಇತರೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ.ಅನೇಕರಿಗೆ ವೇತನ ಕಡಿತಗೊಳಿಸಲಾಗುತ್ತಿದೆ. ಇದರಿಂದ ಪತ್ರಕರ್ತರು ಹಾಗೂ ಅವರ ಕುಟುಂಬದವರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿ ಭಾರತೀಯ ಪತ್ರಕರ್ತರ ಸಂಘದ ಶೈಲೇಂದ್ರ ಕುಮಾರ್ ಪಾಂಡೆ, ದೆಹಲಿ ಕಾರ್ಯನಿರತ ಪತ್ರಕರ್ತರ ಸಂಘದ ಸುಜಾತ ಮಾಡೋಕ್,ಹಾಗೂ ಬೃಹನ್ ಮುಂಬೈ ಕಾರ್ಯ ನಿರತ ಪತ್ರಕರ್ತರ ಸಂಘದ ಇಂದ್ರಕುಮಾರ್ ಜೈನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)
ಇಂದಿನ ಇತಿಹಾಸ  History Today ಏಪ್ರಿಲ್ 27  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)




No comments:

Post a Comment