Wednesday, April 29, 2020

ಇಂದಿನ ಇತಿಹಾಸ History Today ಏಪ್ರಿಲ್ 29

2020: ಮುಂಬೈ: ಪಶ್ಚಿಮ ಜಗತ್ತಿನಲ್ಲಿ ಭಾರತದ ಮುಖವಾಗಿ ಮಿಂಚಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ (೫೩) ಅವರು ಮುಂಬೈಯ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ   2020 ಏಪ್ರಿಲ್  29ರ ಬುಧವಾರ ಬೆಳಗ್ಗೆ ವಿಧಿವಶರಾದರು. ಖಾನ್ ನಿಧನದಿಂದ ಚಲನಚಿತ್ರ ಜಗತ್ತು ಮತ್ತು ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕಂಬನಿ ಮಿಡಿದರು.  ತಮಗೆ ಅಪರೂಪದ ನ್ಯೂರೋಎಂಡೋಕ್ರೈನ್ ಟ್ಯೂಮರ್ ಬಾಧಿಸಿರುವುದು ಪತ್ತೆಯಾಗಿದೆ ಎಂದು ೨೦೧೮ರಲ್ಲಿ ಸ್ವತಃ ಪ್ರಕಟಿಸುವ ಮೂಲಕ ಇರ್ಫಾನ್ ಖಾನ್ ಭಾರತವನ್ನು ದಂಗು ಬಡಿಸಿದ್ದರು. ’ನಾನು ಶರಣಾಗಿದ್ದೇನೆ, ಇದು ನನ್ನ ನಂಬಿಕೆ ಎಂಬುದಾಗಿ ಇರ್ಫಾನ್ ಖಾನ್ ೨೦೧೮ರಲ್ಲಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಆರಂಭಿಸಿದಾಗಲೇ ಬರೆದಿದ್ದ ಟಿಪ್ಪಣಿಯನ್ನು ಉದ್ಘರಿಸುವ ಮೂಲಕ ಇರ್ಫಾಣ್ ಕುಟುಂಬವು ಖಾನ್ ಸಾವಿನ ಸುದ್ದಿಯನ್ನು ದೃಢ ಪಡಿಸಿತು. ಇರ್ಫಾನ್ ಪತ್ನಿ ಸುತಪಾ ಸಿಕದರ್ ಹಾಗೂ ಪುತ್ರರಾದ ಬಬಿಲ್ ಮತ್ತು ಆಯಾ ಖಾನ್ ಆಸ್ಪತ್ರೆಯಲ್ಲೇ ಇದ್ದರು ಎಂದು ವರದಿ ತಿಳಿಸಿತು.  ದೊಡ್ಡ ಕರುಳಿನ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾನ್ ಅವರು ಆಸ್ಪತ್ರೆಗೆ ದಾಖಲಾದ ಬಗ್ಗೆ ನಟನ ಆಪ್ತ ಕಾರ್ಯದರ್ಶಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದರು. ಇರ್ಫಾನ್ ಅವರು ದೊಡ್ಡ ಕರುಳಿನ ಸೋಂಕಿನ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿತ್ತು. ’ಹೌದು, ಇರ್ಫಾನ್ ಖಾನ್ ಅವರು ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ನಾವು ಪ್ರತಿ ಕ್ಷಣದ ವಿವರವನ್ನು ತಿಳಿಸುತ್ತೇವೆ. ಇರ್ಫಾನ್ ಅವರು ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೂ ಅವರ ಧೈರ್ಯ ಮತ್ತು ಸಾಮರ್ಥ್ಯವೇ ಅವರಿಗೆ ಹೋರಾಡಲು ಶಕ್ತಿ ನೀಡಿದೆ. ಅವರಲ್ಲಿ ಅದ್ಭುತವಾದ ಇಚ್ಛಾಶಕ್ತಿ ಇದೆ. ಅವರು ಆರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ನಟನ ಅಧಿಕೃತ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದರು. ಇರ್ಫಾನ್ ತಾಯಿ ಸಯೀದಾ ಬೇಗಂ (೯೫ವರ್ಷ) ಅವರು ವಯೋಸಹಜ ಖಾಯಿಲೆಯಿಂದ ಜೈಪುರದಲ್ಲಿ ಕಳೆದ ಶನಿವಾರವಷ್ಟೇ ನಿಧನರಾಗಿದ್ದರು. ಆದರೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಕಾರಣ ಪುತ್ರ ಇರ್ಫಾನ್ ಅವರಿಗೆ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಇರ್ಫಾನ್ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಎರಡು ಕೊಲ್ಲಿ ರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ ಭಾರತದಿಂದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾಡಿರುವ ಮನವಿಗಳಿಗೆ ಭಾರತ  2020 ಏಪ್ರಿಲ್  29ರ ಬುಧವಾರ ತಾತ್ವಿಕ ಮನ್ನಣೆ ನೀಡಿತು. ಕುವೈತ್ ಪ್ರಧಾನಿ ಶೇಖ್ ಸಬಾಹ್ ಅಲ್ ಖಾಲಿದ್ ಅಲ್ ಹಮದ್ ಅಲ್ ಸಭಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ತಿಂಗಳ ಆದಿಯಲ್ಲಿ ಮೊತ್ತ ಮೊದಲಿಗರಾಗಿ ಭಾರತದ ವೈದ್ಯಕೀಯ ನೆರವು ಕೋರಿದ್ದರು. ಇದಕ್ಕೆ ಸ್ಪಂದನೆಯಾಗಿ ಭಾರತವು ೧೫ ಸದಸ್ಯರ ಸೇನಾ ಕ್ಷಿಪ್ರ ಸ್ಪಂದನಾ ತಂಡವನ್ನು ಭಾರತೀಯ ವಾಯುಪಡೆ ವಿಮಾನದ ಮೂಲಕ ರವಾನಿಸಿತ್ತು. ತಂಡವು ಸೋಮವಾರ ಹಿಂತಿರುಗುತ್ತಿದ್ದಂತೆಯೇ ಕುವೈತ್ ಇನ್ನಷ್ಟು ವೈದ್ಯಕೀಯ ತಂಡಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿತು. ’ನಮ್ಮ ಕ್ಷಿಪ್ರ ಸ್ಪಂದನಾ ತಂಡದ ಸೇವೆಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ನುಡಿದರು. ಇದೇ ವೇಳೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಭಾರತೀಯ ಆರೋಗ್ಯ ರಕ್ಷಣಾ ಸಿಬ್ಬಂದಿಗಾಗಿ ಮನವಿ ಬಂತು ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದರು. ಇಂತಹುದೇ ಮನವಿಗಳು ಮಾರಿಷಸ್, ಆಫ್ರಿಕಾದ ಪೂರ್ವ ಕರಾವಳಿಯಲ್ಲಿರುವ ಕೋಮ್ರೋಸ್ ದ್ವೀಪ ಸಮೂಹಗಳಿಂದಲೂ ಬಂದಿವೆ ಎಂದು ಅವರು ನುಡಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2020:  ವಾಷಿಂಗ್ಟನ್: ಕೊರೋನಾವೈರಸ್ ಸಾಂಕ್ರಾಮಿಕದಿಂದಾಗಿ ಅಮೆರಿಕದ ಉದ್ಯಮ- ವಹಿವಾಟು ಸ್ಥಗಿತಗೊಂಡಿರುವುದು ಅಲ್ಲಿನ ಎಚ್೧-ಬಿ ವೀಸಾದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿದ್ದು ಅವರು ತಮ್ಮ ಕಾನೂನುಬದ್ಧ ಸ್ಥಾನಮಾನ ಕಳೆದುಕೊಳ್ಳುವ ಅಪಾಯ ಎದುರಾಗಿದೆ ಎಂದು ವರದಿಯೊಂದು 2020 ಏಪ್ರಿಲ್  29ರ ಬುಧವಾರ ತಿಳಿಸಿತು. ಅಮೆರಿಕದಲ್ಲಿ ,೫೦,೦೦೦ ಮಂದಿ ಅತಿಥಿ ನೌಕರರು ಗ್ರೀನ್ ಕಾರ್ಡ್ ಪಡೆಯಲು ಯತ್ನಿಸುತ್ತಿದ್ದು ಅವರ ಪೈಕಿ ,೦೦,೦೦೦ ಮಂದಿ ಎಚ್೧-ಬಿ ವೀಸಾಗಳನ್ನು ಹೊಂದಿದ್ದಾರೆ. ಎಚ್೧-ಬಿ ವೀಸಾ ಹೊಂದಿರುವವರು ಜೂನ್ ಅಂತ್ಯದ ವೇಳೆಗೆ ಶಾಸನಬದ್ಧ ಸ್ಥಾನಮಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕದ ವಾಷಿಂಗ್ಟನ್ ಡಿಸಿಯ ಥಿಂಕ್ ಟ್ಯಾಂಕ್ ನಿಸ್ಕನೆನ್ ಸೆಂಟರಿನ ವಲಸೆ ನೀತಿ ವಿಶ್ಲೇಷಕರಾದ ಜೆರೆಮಿ ನ್ಯೂಫೆಲ್ಡ್ ಹೇಳಿದರು. ಇದಲ್ಲದೆ, ವಸತಿ ಸ್ಥಾನಮಾನವನ್ನು ಕೋರದೇ ಇರುವ ಇನ್ನಷ್ಟು ವ್ಯಕ್ತಿಗಳು ಕೂಡಾ ತಮ್ಮ ತಾಯ್ನಾಡಿಗೆ ಮರಳಬೇಕಾಗಬಹುದು ಎಂದೂ ನ್ಯೂಪೆಲ್ಡ್ ಹೇಳಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮುಕ್ಕಾಲು ಭಾಗದಷ್ಟು ಎಚ್೧- ಬಿ ವೀಸಾಗಳನ್ನು ನೀಡಲಾಗುತ್ತದೆ ಎಂದು ವರದಿ ತಿಳಿಸಿತು. ಕಳೆದ ಎರಡು ತಿಂಗಳುಗಳಲ್ಲಿ, ಲಕ್ಷಾಂತರ ಅಮೆರಿಕನ್ನರನ್ನು ವಜಾಗೊಳಿಸಲಾಗಿದೆ. ಆದಾಗ್ಯೂ, ವೀಸಾಗಳಲ್ಲಿ ಕೆಲಸ ಮಾಡುವವರು ಕಷ್ಟಗಳಿಗೆ ಹೆಚ್ಚು ಒಳಗಾಗುತ್ತಾರೆ. ಏಕೆಂದರೆ ಎಚ್ -ಬಿ ವೀಸಾಗಳು ಸ್ಥಳ ಮತ್ತು ದುಡಿಯುವವರಿಗೆ ಮೂಲ ವೇತನವನ್ನು ನೀಡಲು ಒಪ್ಪುವ ಉದ್ಯೋಗದಾತರಿಗೆ ಸಂಬಂಧಿಸಿವೆ. ವೇತನ ಕಡಿತ ಮತ್ತು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಕೂಡಾ ವೀಸಾ ನಿಯಮಗಳಿಗೆ ವಿರುದ್ಧವಾಗುತ್ತದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕಿನಿಂದಾಗಿ ಮೊದಲ ಸಾವು ಸಂಭವಿಸಿದ ತಿಂಗಳ ನಂತರ ದೇಶಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ 2020 ಏಪ್ರಿಲ್  29ರ ಬುಧವಾರ  ಒಂದು ಸಾವಿರ ದಾಟಿತು. ಈವರೆಗೆ ಒಟ್ಟು ,೦೦೮ ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಒಟ್ಟು ೧೮೧೩ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ೭೩ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ದೇಶದಾದ್ಯಂತ ೩೧,೭೮೭ ಸೋಂಕು ಪ್ರಕರಣಗಳು ದಾಖಲಾಗಿದ್ದು, ಅವರ ಪೈಕಿ  ,೬೯೫ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ೨೨,೬೨೯ ಸಕ್ರಿಯ ಪ್ರಕರಣಗಳು ಇವೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು. ಅತಿಹೆಚ್ಚು (,೫೯೦) ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಲ್ಲಿ ೩೮೯ ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ,೨೮೨ ಸೋಂಕಿತರು ಗುಣಮುಖರಾಗಿದ್ದಾರೆ. ಗುಜರಾತಿನಲ್ಲಿ ೧೬೨, ಮಧ್ಯಪ್ರದೇಶದಲ್ಲಿ ೧೧೩, ದೆಹಲಿಯಲ್ಲಿ ೫೪, ರಾಜಸ್ಥಾನದಲ್ಲಿ ೪೧ ಮತ್ತು ಉತ್ತರ ಪ್ರದೇಶದಲ್ಲಿ ೩೧ ಸಾವು ಸಂಭವಿಸಿವೆ. ಕರ್ನಾಟಕದಲ್ಲಿ ಇದುವರೆಗೆ ೫೨೦ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ೧೯೮ ಮಂದಿ ಗುಣಮುಖರಾಗಿದ್ದಾರೆ. ಉಳಿದ  ೩೦೨ ಜನರಿಗೆ ಚಿಕಿತ್ಸೆ ಮುಂದುವರಿದಿದೆ. ೨೦ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೋವಿಡ್-೧೯ ಸೋಂಕಿನ ೩೩ ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖೈ ೫೫೦ಕ್ಕೆ ಏರಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2020: ಹೈದರಾಬಾದ್: ಪದೇ ಪದೇ ವಿನಂತಿಸಿದರೂ ವೇತನ ಪಾವತಿದಿದ್ದುದನ್ನು ಪ್ರತಿಭಟಿಸಿ, ಸುಮಾರು ೧೬೦೦ ವಲಸೆ ಕಾರ್ಮಿಕರು ದಾಂಧಲೆ ನಡೆಸಿದ್ದಲ್ಲದೆ ಪೊಲೀಸರ ಮೇಲೆ ಲಾಠಿ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ಹೊರವಲಯದ ಸಂಗರೆಡ್ಡಿ ಜಿಲ್ಲೆಯ ಕಂಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ  2020  ಏಪ್ರಿಲ್ 29ರ ಬುಧವಾರ ಮಧ್ಯಾಹ್ನ ಘಟಿಸಿತು.  ಹಲ್ಲೆಯಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಸಂಗಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸ್ ವಾಹನ ಭಾಗಶಃ ಹಾನಿಯಾಯಿತು. ಘಟನೆಯ ಮಾಹಿತಿ ದೊರೆತ ಸಂಗರೆಡ್ಡಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಚಂದ್ರಶೇಖರ್ ರೆಡ್ಡಿ ಮತ್ತು ಡಿಎಸ್ಪಿ ಶ್ರೀಧರ್ ರೆಡ್ಡಿ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆಯು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು.  ಪೊಲೀಸ್ ವರಿಷ್ಟಾಧಿಕಾರಿಯವರು ಪ್ರತಿಭಟನಕಾರರನ್ನು ಸಮಾಧಾನಪಡಿಸಿ, ಅವರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿ, ಕಾರ್ಮಿಕರ ನಿಯೋಗವನ್ನು ಜಿಲ್ಲಾಧಿಕಾರಿ ಎಂ ಹನುಮಂತ ರಾವ್ ಅವರ ಬಳಿ ಮಾತುಕತೆಗಾಗಿ ಕರೆದೊಯ್ದರು. ಕಳೆದ ಎರಡು ತಿಂಗಳಿನಿಂದ ತಮ್ಮ ಕಂಪನಿ ತಮಗೆ ವೇತನ ನೀಡುತ್ತಿಲ್ಲ ಎಂದು ಕಾರ್ಮಿಕರು ದೂರಿದರು. ಬಾಕಿ ಇರುವ ವೇತನವನ್ನು ಗುರುವಾರ ಸಂಜೆಯೊಳಗೆ ಕಾರ್ಮಿಕರ ಖಾತೆಗಳಿಗೆ ಪಾವತಿ ಮಾಡುವಂತೆ ಜಿಲ್ಲಾಧಿಕಾರಿ  ಕಂಪೆನಿಯ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ  History Today ಏಪ್ರಿಲ್ 29  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment