Sunday, April 26, 2020

ಇಂದಿನ ಇತಿಹಾಸ History Today ಏಪ್ರಿಲ್ 26

2020: ನವದೆಹಲಿ: ವಿಶ್ವದ ಇತರ ಭಾಗಗಳಂತೆ ಕೊರೋನವೈರಸ್ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನ ತನ್ನ ೧೪ ಕಾರ್ಯಾಚರಣಾ ಉಡಾವಣಾ ತಾಣಗಳಿಂದ  ಕಾಶ್ಮೀರಕ್ಕೆ ನುಸುಳಲು ಕಾಯುತ್ತಿರುವ ಭಯೋತ್ಪಾದಕರ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ ಎಂದು ಅಧಿಕೃತ ಮೂಲಗಳು 2020 ಏಪ್ರಿಲ್ 26 ಭಾನುವಾರ ವರದಿ ಮಾಡಿದವು." ಉಡಾವಣಾ ತಾಣಗಳಲ್ಲಿ ಸುಮಾರು ೪೫೦ ಭಯೋತ್ಪಾದಕರನ್ನು  ಪಾಕಿಸ್ತಾನದ ಭಯೋತ್ಪಾದನಾ ತರಬೇತಿ ಶಿಬಿರಗಳಿಂದ ತಂದು ಇರಿಸಲಾಗಿದ್ದು ಅವರು  ಭಯೋತ್ಪಾದಕ ಗುಂಪುಗಳ ಜೊತೆ  ಸಂಬಂಧ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿದವು.ಪಾಕಿಸ್ತಾನದಲ್ಲಿ ಪ್ರಸ್ತುತ ಸುಮಾರು ೧೨,೭೦೦ ಕೋವಿಡ್ -೧೯ ಪ್ರಕರಣಗಳು  ವರದಿಯಾಗಿದ್ದು,  ೨೬೮ ಸಾವುಗಳು ಸಂಭವಿಸಿವೆ.(ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ:  ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು,  ಕಳೆದ ೨೪ ಗಂಟೆ ಅವಧಿಯಲ್ಲಿ ೪೭ ಮಂದಿ ಅಸುನೀಗಿದರು.  ,೯೭೫ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ  ದೇಶದಲ್ಲಿ 2020 ಏಪ್ರಿಲ್ 26ರ ಭಾನುವಾರದವರೆಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೮೨೬ಕ್ಕೆ ಏರಿದೆ. ಸೋಂಕಿತರ ಸಂಖ್ಯೆ ೨೬,೯೧೭ ತಲುಪಿದೆ. ,೮೦೩ ಮಂದಿ ಗುಣಮುಖರಾಗಿರುವ ಕಾರಣ ಕೊರೊನಾ ಸಕ್ರಿಯ ಪ್ರಕರಣಗಳು  ಸಂಖ್ಯೆ ೧೯,೮೬೮ ಆಗಿದೆ.  ಮಾರಕ ವೈರಾಣುವಿನಿಂದ  ಬಳಲುತ್ತಿರುವ ದೇಶದ ಜನರ ಪ್ರಾಣ ಉಳಿಸಲು ಹಗಲು-ರಾತ್ರಿಯೆನ್ನದೇ ವೈದ್ಯರು ಶ್ರಮಿಸುತ್ತಿದ್ದಾರೆ. ಹೀಗೆಯೇ ಕೋವಿಡ್-೧೯ ಪೀಡಿತರಿಗೆ ದೆಹಲಿಯ ಜಹಾಂಗೀರ ಪುರ ಪ್ರದೇಶದಲ್ಲಿರುವ ಬಾಬು ಜಗಜೀವನ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ೪೦ ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-೧೯ ಸೋಂಕು ತಗಲಿರುವುದು ಧೃಡಪಟ್ಟಿತು. ಇದು ಬೆಳಕಿಗೆ ಬರುತ್ತಿದ್ದಂತೆಯೇ ವೈದ್ಯರು ಆತಂಕಕ್ಕೀಡಾದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


ಇಂದಿನ ಇತಿಹಾಸ  History Today ಏಪ್ರಿಲ್ 26  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment