Sunday, April 5, 2020

ಇಂದಿನ ಇತಿಹಾಸ History Today ಏಪ್ರಿಲ್ 05

2020: ನವದೆಹಲಿ: ಕೊರೊನಾವೈರಸ್ (ಕೋವಿಡ್- ೧೯) ಮಹಾಮಾರಿಯ ವಿರುದ್ಧ ನಡೆಯುತ್ತಿರುವ ಹೋರಾಟದ ಸಂದರ್ಭದಲ್ಲಿ ಮಾರಕ ಸೋಂಕು ಹರಡಿರುವ ಕತ್ತಲನ್ನು ನಿವಾರಿಸಿ ಮಾನವ ಜನಾಂಗವನ್ನು ಬೆಳಕಿನ ಕಡೆಗೆ ಒಯ್ಯುವ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಇಡೀ ಭಾರತ 2020 ಏಪ್ರಿಲ್ 5 ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಲೈಟುಗಳನ್ನು ಆರಿಸಿ ದೀಪಗಳನ್ನು ಬೆಳಗುವ ಮೂಲಕಬೆಳಕಿನ ಸಂಕಲ್ಪವನ್ನು ಮಾಡಿತು. ದೆಹಲಿಯಿಂದ ಹಿಡಿದು ಹಳ್ಳಿ ಹಳ್ಳಿಗಳವರೆಗೂ ದೇಶಾದ್ಯಂತ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರು ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಇಲ್ಲವೇ ಮೊಬೈಲ್ ಫ್ಲಾಷ್ ಲೈಟುಗಳನ್ನು ಬೆಳಗಿಸಿ ಪ್ರಧಾನಿಯ ಕರೆಗೆ ಓಗೊಟ್ಟರು. ತನ್ಮೂಲಕ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಸಂಕಷ್ಟದ ಸನ್ನಿವೇಶದಲ್ಲಿ ತಮಗಾಗಿ ಹಗಲಿರುಳು ದುಡಿಯುತ್ತಿರುವ ಸೇವಾ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಹೋರಾಟದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ ಎಂದು ಸಾರಿದರು. ರಾತ್ರಿ ಗಂಟೆಗೆ ನಿಮಿಷಗಳ ಕಾಲ ನಮ್ಮ ತಮ್ಮ ಮನೆ, ಕಛೇರಿ ಹಾಗೂ ವಾಸ ಸ್ಥಳಗಳಲ್ಲಿನ ವಿದ್ಯುತ್ ದೀಪವವನ್ನು ಆರಿಸಿ ಬೆಳಗಿದ ದೀಪಗಳ ಬೆಳಕಿನಲ್ಲಿ ಇಡೀ ದೇಶ ಪ್ರಜ್ವಲಿಸಿತು. ಪ್ರಧಾನಿ ಮೋದಿ ಅವರು ತಮ್ಮ ದೆಹಲಿ ನಿವಾಸದಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ ಎಣ್ಣೆ ಬತ್ತಿ ದೀಪಗಳನ್ನು ಬೆಳಗುವ ಮೂಲಕ ತಾವೂ ಕೂಡಾ ದೀಪ ಅಭಿಯಾನಕ್ಕೆ ಕೈಜೋಡಿಸಿದರು. ರಾತ್ರಿ ಗಂಟೆಗೆ ಸರಿಯಾಗಿ ನಿಮಿಷಗಳ ಕಾಲ ದೀಪ ಹಚ್ಚಿದರು. ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಆತ್ಮಸೈರ್ಯ ತುಂಬಲು ಅಭಿಯಾನ ಪ್ರೇರಕ ಶಕ್ತಿಯಾಯಿತು.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಮೆಲ್ಬೋರ್ನ್:  ಪ್ರಪಂಚದಾದ್ಯಂತ ಈಗಾಗಲೇ ಲಭ್ಯವಿರುವ ಪರಾವಲಂಬಿ ನಿರೋಧಿ  ಔಷಧವು ಪ್ರಯೋಗಾಲಯಗಳಲ್ಲಿ ಜೀವಕೋಶ ಸಂಸ್ಕರಣೆ ವಿಧಾನದಲ್ಲಿ (ಸೆಲ್ ಕಲ್ಚರ್)  ಬೆಳೆದ ಕೊರೋನಾವೈರಸ್ಸನ್ನು ಕೇವಲ ೪೮ ಗಂಟೆಗಳ ಒಳಗೆ ಕೊಲ್ಲುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸಂಶೋಧನೆಯು ಕೋವಿಡ್ -19 ವೈರಾಣು ವಿರುದ್ಧ ಹೊಸ ಕ್ಲಿನಿಕಲ್ ಚಿಕಿತ್ಸಾ ವಿಧಾನದ ಅಭಿವೃದ್ಧಿ ಮತ್ತು ಪ್ರಯೋಗಕ್ಕೆ ನಾಂದಿ ಹಾಡುವ ಸಾಧ್ಯತೆಗಳಿವೆ.ಆಂಟಿವೈರಲ್ ರಿಸರ್ಚ್ ನಿಯತಕಾಲಿಕದಲ್ಲಿ 2020 ಏಪ್ರಿಲ್ 5 ಭಾನುವಾರ ಪ್ರಕಟವಾದ ಅಧ್ಯಯನದ ಪ್ರಕಾರ, ‘ಐವರ್ಮೆಕ್ಟಿನ್ ಎಂಬ ಔಷಧವು ಎಸ್‌ಎಆರ್ಎಸ್-ಸಿಒವಿ-2 ವೈರಸ್ಸನ್ನು ೪೮ ಗಂಟೆಗಳ ಒಳಗೆ ಜೀವಕೋಶದ ಸಂಸ್ಕರಣೆ ವಿಧಾನದಲ್ಲಿ ಬೆಳೆಯದಂತೆ ತಡೆಯಿತು.‘ಒಂದೇ ಒಂದು ಪ್ರಮಾಣ (ಡೋಸ್) ಕೂಡಾ ಎಲ್ಲಾ ವೈರಲ್ ಆರ್‌ಎನ್‌ಎಗಳನ್ನು ೪೮ ಗಂಟೆಗಳ ಒಳಗೆ ನಿವಾರಣೆ ಮಾಡಬಹುದು ಮತ್ತು 2 ಗಂಟೆಗಳಲ್ಲಿ ಕೂಡಾ ಗಮನಾರ್ಹವಾದ ಇಳಿಕೆ ಕಂಡುಬಂದಿರುವುದನ್ನು ನಾವು ಕಂಡುಕೊಂಡಿದ್ದೇವೆಎಂದು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಅಧ್ಯಯನದ ಸಹ-ಲೇಖಕ ಕೈಲಿ ವ್ಯಾಗ್ಸ್ಟಾಫ್ ಹೇಳಿದರು. ಐವರ್ಮೆಕ್ಟಿನ್ ಅನುಮೋದಿತ ಪರಾವಲಂಬಿ ವಿರೋಧಿ ಔಷಧವಾಗಿದ್ದು, ಎಚ್‌ಐವಿ, ಡೆಂಗ್ಯೂ, ಇನ್ಫ್ಲುಯೆಂಝಾ ಮತ್ತು ಜಿಕಾ ವೈರಸ್ ಸೇರಿದಂತೆ ವ್ಯಾಪಕ ಶ್ರೇಣಿಯ ವೈರಸ್‌ಗಳ ವಿರುದ್ಧ ಪರೀಕ್ಷಾ ಹಂತದಲ್ಲಿ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ನುಡಿದರು.ಆದಾಗ್ಯೂ, ಅಧ್ಯಯನದಲ್ಲಿ ನಡೆಸಿದ ಪರೀಕ್ಷೆಗಳು ಆರಂಭಿಕ ಹಂತದಲ್ಲಿವೆ ಮತ್ತು ಜನರಲ್ಲಿ ಪರಿಣಾಮಕಾರಿತ್ವ ಬಗ್ಗೆ ಪ್ರಯೋಗಗಳನ್ನು ನಡೆಸುವ ಅವಶ್ಯಕತೆಯಿದೆ ಎಂದು ವ್ಯಾಗ್‌ಸ್ಟಾಫ್ ಎಚ್ಚರಿಸಿದರು.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ದೆಹಲಿಯ ನಿಜಾಮುದ್ದೀನ್ಪ್ರದೇಶದ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡು ಅಧಿಕಾರಿಗಳ ಕಣ್ಣು ತಪ್ಪಿಸಿ ಸ್ವದೇಶಕ್ಕೆ ಮರಳಲು ವಿಶೇಷ ವಿಮಾನ ಏರಿ ಕುಳಿತಿದ್ದ ಮಲೇಷ್ಯಾದ ಎಂಟು ಜನರನ್ನು 2020 ಏಪ್ರಿಲ್ 5ರ ಭಾನುವಾರ ಬಂಧಿಸಲಾಯಿತು. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಭಾರತದಲ್ಲಿ ಸಿಲುಕಿರುವ ತನ್ನ ದೇಶದ ಪ್ರಜೆಗಳನ್ನು ಕರೆ ತರಲು ಅನ್ಯ ದೇಶಗಳು ಕಳುಹಿಸುವ ವಿಶೇಷ ವಿಮಾನಗಳ ಹಾರಾಟಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಹೀಗೆ ಮಲೇಷ್ಯಾ ಸರಕಾರ ಕಳುಹಿಸಿದ್ದ ಮಲಿಂದೊ ಏರ್ ವಿಮಾನಯಾನ ಸಂಸ್ಥೆಯ ವಿಮಾನ, ೩೦ ಮಲೇಷ್ಯಾ ಪ್ರಜೆಗಳನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು. ಪೈಕಿ ಮಂದಿ ಪ್ರಯಾಣಿಕರು ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದರು. ಇದರ ಸುಳಿವು ಅರಿತ ವಲಸೆ ವಿಭಾಗದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ನಂತರ ಪೊಲೀಸರಿಗೆ ಒಪ್ಪಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಶಿಬಿರಕ್ಕೆ ಕಳುಹಿಸಲಾಯಿತು. ಈಗ ಬಂಧನಕ್ಕೊಳಗಾಗಿರುವ ಮಲೇಷ್ಯಾ ಪ್ರಜೆಗಳ ವಿರುದ್ಧ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರದ ನವಿ ಮುಂಬಯಿಯಲ್ಲೂ ಇದೇ ರೀತಿಯ ಪ್ರಕರಣ ನಡೆದಿದ್ದು, ಫಿಲಿಪ್ಪೀನ್ಸ್ ೧೦ ಜನರ ವಿರುದ್ಧ ಪ್ರಕರಣ ದಾಖಲಾಯಿತು.

2020: ಜೋಹಾನ್ಸ್ ಬರ್ಗ್:ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ತಬ್ಲೀಘಿ ಧಾರ್ಮಿಕ ಸಭೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾಕ್ಕೆ ವಾಪಸ್ ಮರಳಿದ್ದ ಮುಸ್ಲಿಂ ಮೌಲ್ವಿ ಕೋವಿಡ್ ೧೯ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿರುವುದಾಗಿ ವರದಿ ತಿಳಿಸಿತು. ಮೌಲಾನಾ ಯೂಸೂಫ್ ಟೂಟ್ಲಾ(೮೦ವರ್ಷ) ಎಂಬ ವ್ಯಕ್ತಿ ಮಾರ್ಚ್ ೧ರಿಂದ ೧೫ರವರೆಗೆ ನಡೆದ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ವರದಿ ಹೇಳಿತು.  ಟೂಟ್ಲಾ ಮಂಗಳವಾರ ಸಾವನ್ನಪ್ಪಿದ್ದು, ಇಸ್ಲಾಮಿಕ್ ರುದ್ರಭೂಮಿಯಲ್ಲಿ ಶವದ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ ಎಂದು ವರದಿ ತಿಳಿಸಿತು. ದೆಹಲಿಯ ನಿಜಾಮುದ್ದೀನ್ ಪ್ರದೇಶ ೧೪ನೇ ಶತಮಾನದ ಸೂಫಿ ಸಂತ ಖ್ವಾಜಾ ನಿಜಾಮುದ್ದೀನ್ ಆಹ್ಲುಲಿಯಾ ದರ್ಗಾವಾಗಿದೆ ಎಂದು ವರದಿ ತಿಳಿಸಿತು.



No comments:

Post a Comment