Thursday, April 16, 2020

ಇಂದಿನ ಇತಿಹಾಸ History Today ಏಪ್ರಿಲ್ 16

2020: ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ಡೌನ್ ವೇಳೆಯಲ್ಲಿ ಮನೆಯ ಒಳಗಿದ್ದುಕೊಂಡು ಸಾಮಾಜಿಕ ಅಂತರ ಪಾಲನೆ ಮಾಡಿದ ವ್ಯಕ್ತಿಗಳೂ ಪಿಜ್ಜಾ ವಿತರಕ ಹುಡುಗನ ಕಾರಣದಿಂದಾಗಿ ಏಕಾಂತವಾಸಕ್ಕೆ (ಕ್ವಾರಂಟೈನ್) ಒಳಪಡುವಂತಾದ ಘಟನೆ ದೆಹಲಿಯಲ್ಲಿ ಘಟಿಸಿತು. ಖ್ಯಾತ ಪಿಜ್ಞಾ ಮಾರಾಟ ಸರಪಣಿಯೊಂದಕ್ಕೆ ಸೇರಿದ ಪಿಜ್ಜಾ ವಿತರಕ ಹುಡುಗನಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟ ಬೆನ್ನಲ್ಲೇ ದಕಿಷಣ ದೆಹಲಿಯ ಬಡಾವಣೆಯೊಂದರ ೭೨ ಕುಟುಂಬಗಳಿಗೆ ಕ್ವಾರಂಟೈನ್ಗೆ ಒಳಪಡುವಂತೆ ಸೂಚಿಸಲಾಗಿದೆ ಎಂದು ದಕ್ಷಿಣ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು  2020 ಏಪ್ರಿಲ್ 16ರ ಗುರುವಾರ ತಿಳಿಸಿದರು. ದಕ್ಷಿಣ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಎಂ ಮಿಶ್ರ ಅವರ ಪ್ರಕಾರ ದೆಹಲಿಯ ಮಾವೀಯ ನಗರದಲ್ಲಿ ಖ್ಯಾತ ಪಿಜ್ಜಾ ಸರಪಣಿಯೊಂದರ ವಿತರಕ ಹುಡುಗನಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಮಂಗಳವಾರ ಖಚಿತಪಟ್ಟಿದೆ. ಇದನ್ನು ಅನುಸರಿಸಿ ಅಧಿಕಾರಿಗಳು ತತ್ ಕ್ಷಣವೇ ಪಿಜ್ಜಾ ವಿತರಣಾ ಸಂಸ್ಥೆಯಲ್ಲಿನ ಆತನ ೧೬ ಮಂದಿ ಸಹೋದ್ಯೋಗಿಗಳನ್ನೂ ಕ್ವಾರಂಟೈನ್ಗೆ ಒಳಪಡಿಸಲು ನಿರ್ಧರಿಸಿದರು. ಬಳಿಕ ಸೋಂಕು ತಗುಲಿದ ಪಿಜ್ಜಾ ವಿತರಕ ಹುಡುಗನು ಪಿಜ್ಜಾ ಸರಬರಾಜು ಮಾಡಿದ್ದ ಪ್ರತಿಯೊಂದು ಮನೆಯನ್ನೂ ಗುರುತಿಸಲು ಕ್ರಮ ಕೈಗೊಳ್ಳಲಾಯಿತು. ನಮಗೆ ೭೨ ಮನೆಗಳು ಆತನ ಮೂಲಕ ಪಿಜ್ಜಾ ಪಡೆದಿವೆ ಎಂಬ ಮಾಹಿತಿ ಲಭಿಸಿತು. ಕೂಡಲೇ ಮನೆಗಳ ಪ್ರತಿಯೊಬ್ಬರಿಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಮತ್ತು ಸ್ವಯಂ ಏಕಾಂತ ವಾಸಕ್ಕೆ ಒಳಪಡುವಂತೆಯೂ ಸೂಚಿಸಲಾಯಿತು ಎಂದು ಮಿಶ್ರ ನುಡಿದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಖಾಸಗಿ ವ್ಯಕ್ತಿಗಳು ಜೂಮ್ ವಿಡಿಯೋ ಕಾನ್ಪರೆನ್ಸಿಂಗ್ ಆಪ್ ಬಳಸಿ ವಿಡಿಯೋ ಸಂವಹನ ನಡೆಸುವುದು ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ 2020 ಏಪ್ರಿಲ್ 16ರ ಗುರುವಾರ ಎಚ್ಚರಿಕೆ ನೀಡಿತು. ಜೂಮ್ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಬಳಸಲು ಸರ್ಕಾರಿ ಅಧಿಕಾರಿಗಳಿಗೆ ಮುನ್ನವೇ ನಿಷೇಧ ವಿಧಿಸಲಾಗಿತ್ತು. ಭಾರತದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು (ಸಿಇಜರ್ಟಿ-ಇನ್) ಜನಪ್ರಿಯ ಆಪ್ನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುವ ಬಗ್ಗೆ ಸುಳಿವು ನೀಡಿದ ಬಳಿಕ ಸರ್ಕಾರ ಎಚ್ಚರಿಕೆಯನ್ನು ನೀಡಿತುಅತ್ಯಂತ ಜನಪ್ರಿಯವಾಗಿರುವ ಜೂಮ್ ಆಪ್ನ್ನು ಸಹಸ್ರಾರು ಮಂದಿ ವೃತ್ತಿ ನಿರತರು ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಎನ್ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ/ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್) ವೇದಿಕೆಯನ್ನು ಬಹುತೇಕ ಸರ್ಕಾರಿ ವಿಡಿಯೋ ಕಾನ್ಫರೆನ್ಸ್ ಗಳಿಗೆ ಬಳಸಲಾಗುತ್ತಿದೆ ಎಂಬುದನ್ನು  ಖಾಸಗಿ ವ್ಯಕ್ತಿಗಳು ಮತ್ತು ಅಧಿಕಾರಿUಳಿಗೆ ಸರ್ಕಾರದ ಸೈಬರ್ ಸಮನ್ವಯ ಕೇಂದ್ರ ಅಥವಾ ಸೈಕೋರ್ಡ್ (ಸಿವೈಸಿಒಆರ್ಡಿ) ಗಮನಕ್ಕೆ ತಂದಿತು. ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಮೂರನೇ ವ್ಯಕ್ತಿಗಳ ಆಪ್ ಮತ್ತು ಸೇವೆಗಳನ್ನು ಸಭೆಗಳಿಗಾಗಿ ಬಳಸದಂತೆ ಸೂಚಿಸಲಾಗಿದೆ. ಸೈಕೋರ್ಡ್ ಪೋರ್ಟಲ್ನ್ನು ಪ್ರಧಾನಿ ನರೇಂದ್ರ ಮೋದಿ ಅವರು ೨೦೧೮ರ ಡಿಸೆಂಬರ್ ತಿಂಗಳಲ್ಲಿ ಎಲ್ಲ ಸೈಬರ್ ಸಂಬಂಧಿತ ವಿಷಯಗಳನ್ನು ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಪಾಲುದಾರರ ಜೊತೆ ಹಂಚಿಕೊಳ್ಳುವ ಸಲುವಾಗಿ ಆರಂಭಿಸಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾವೈರಸ್ ಸೋಂಕನ್ನು ಹರಡದಂತೆ ತಡೆಯುವ ಸಲುವಾಗಿ ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ಲಾಕ್ಡೌನ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು  2020 ಏಪ್ರಿಲ್ 16ರ ಗುರುವಾರ ವಾಕ್ ಸಮರ ನಡೆಸಿದರು. ಕೋರೋನಾವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಲಾಕ್ಡೌನ್ ಪರಿಹಾರವಲ್ಲ ಎಂಬುದಾಗಿ ರಾಹುಲ್ ಗಾಂಧಿಯವರು ಹೇಳಿದ ಬೆನ್ನಲ್ಲೇ ಹಾಗಾದರೆ ಕಾಂಗ್ರೆಸ್ ರಾಜ್ಯಗಳು ಏಕೆ ಮೊದಲು ಲಾಕ್ಡೌನ್ ವಿಸ್ತರಿಸಿದವು? ಎಂದು ಸಂತೋಷ್ ಅವರು ಕಾಂಗ್ರೆಸ್ ನಾಯಕನಿಗೆ ಪ್ರಖರ ತಿರುಗೇಟು ನೀಡಿದರು. ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ ಸಂತೋಷ್, ರಾಹುಲ್ ಗಾಂಧಿಯವರ ಪ್ರಕಾರ ಲಾಕ್ಡೌನ್  ಪರಿಹಾರವಲ್ಲ. ಹಾಗಿದ್ದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೇಕೆ ಮೊದಲು ಲಾಕ್ ಡೌನ್ ವಿಸ್ತರಣೆ ಮಾಡಿದರು? ಎಂದು ಪ್ರಶ್ನಿಸಿದರು. ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ಪಂಜಾಬ್ ಸರ್ಕಾರಗಳು ಹಿಂದಿನ ವಾರವೇ ಲಾಕ್ಡೌನ್ ಅವಧಿಯನ್ನು ವಿಸ್ತರಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ೨೧ ದಿನಗಳ ದಿಗ್ಬಂಧನ ಮುಗಿಯುವುದಕ್ಕೂ ಮುನ್ನವೇ ರಾಜ್ಯಗಳು ದಿಗ್ಬಂಧನ ಅವಧಿ ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದವು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಜಾಗತಿಕ ಭಯೋತ್ಪಾದಕ ಸಂಘಟನೆ ಜೈಶ್--ಮೊಹಮ್ಮದ್ ಕಾರ್ಯಕರ್ತರು ಅಫ್ಘಾನಿಸ್ಥಾನದ ನಂಗರಹಾರ್ ಪ್ರಾಂತದಲ್ಲಿ ಇರುವುದು ಪತ್ತೆಯಾಗಿದ್ದು ಇದರೊಂದಿಗೆ ಜೈಶ್ ಭಯೋತ್ಪಾದಕರು ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿರುವುದಾಗಿ ಭಾರತೀಯ ಗುಪ್ತಚರ ಸಂಸ್ಥೆಗಳು ಮಾಡಿದ್ದ ಅಂದಾಜು ದೃಢಪಟ್ಟಿದೆ. ಕಾಶ್ಮೀರಕ್ಕೆ ನುಗ್ಗಿಸುವ ಸಲುವಾಗಿ ಆಯ್ದ ಭಯೋತ್ಪಾದಕ ಗುಂಪುಗಳಿಗೆ ಸಮರಗ್ರಸ್ಥ ಅಫ್ಘಾನಿಸ್ಥಾನದಲ್ಲಿ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್) ತರಬೇತಿ ಆರಂಭಿಸಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಸುಳಿವು ನೀಡಿದ್ದವು.  ನಂಗರಹಾರ್ ಪ್ರಾಂತದ ಮುಹಮಂಡ್ ದಾರಾದಲ್ಲಿ ಅಫ್ಘಾನಿಸ್ಥಾನ ಪಡೆಗಳು ತಾಲೀಬಾನ್ ಶಿಬಿರ ನಡೆಯುತ್ತಿದೆ ಎಂಬ ಗುಮಾನಿಯಲ್ಲಿ ದಾಳಿ ನಡೆಸಿದ್ದವು. ಆಗ ಭೀಕರ ಘರ್ಷಣೆ ನಡೆದಿತ್ತು. ಕೊನೆಗೆ ಏಪ್ರಿಲ್ ೧೩-೧೪ರ ರಾತ್ರಿ ಅಫ್ಘಾನಿಸ್ಥಾನದ ನಾಲ್ವರು ಭದ್ರತಾ ಸಿಬ್ಬಂದಿಯ ಬಲಿದಾನದ ಬಳಿಕ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಆಗ ಕದನದಲ್ಲಿ ಹತರಾದ ೧೫ ಜನರಲ್ಲಿ ಮಂದಿ ಮಾತ್ರವೇ ಅಫ್ಘನ್ ತಾಲೀಬಾನ್ ಮಂದಿಯಾಗಿದ್ದು ಉಳಿದ ೧೦ ಮಂದಿ ಜಮ್ಮು-ಕಾಶ್ಮೀರ ಸಮರಕ್ಕಾಗಿ ತರಬೇತಿ ಪಡೆಯುತ್ತಿದ್ದ ಜೈಶ್--ಮೊಹಮ್ಮದ್ ಭಯೋತ್ಪಾದಕರು ಎಂಬುದು ಖಚಿತವಾಗಿದೆ. ಗುಂಡಿನ ಘರ್ಷಣೆಯಲ್ಲಿ ಒಬ್ಬ ಜೈಶ್ ಭಯೋತ್ಪಾದಕ ಬದುಕಿದ್ದು ಆತನನ್ನು ಸೆರೆ ಹಿಡಿಯಲಾಯಿತು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಏಪ್ರಿಲ್ 16ರ ಗುರುವಾರ ೧೨,೭೫೯ಕ್ಕೆ ಏರಿದ್ದು, ಸಾವಿನ ಸಂಖ್ಯೆ ೪೨೦ಕ್ಕೆ ತಲುಪಿತು.. ಇದೇ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯು ತೀವ್ರವಾಗಿ ಅಸ್ವಸ್ಥರಾದ ಕೋವಿಡ್-೧೯ ರೋಗಿಗಳಿಗೆ ಪ್ಲಾಸ್ಮಾ ಥೆರೆಪಿಯನ್ನು ಆರಂಭಿಸಲಿದೆ ಎಂದು ಪ್ರಕಟಿಸಿದರು. ಪ್ಲಾಸ್ಮಾ ಒದಗಿಸುವ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಬಳಿಕ ಪ್ರಾಯೋಗಿಕ ನೆಲೆಯಲ್ಲಿ ಆರಂಭಿಸಲಾಗುವುದು. ಥೆರೆಪಿಯಲ್ಲಿ ಗುಣಮುಖರಾದ ರೋಗಿಗಳ ಪ್ಲಾಸ್ಮಾವನ್ನು ಪಡೆದು ತೀವ್ರವಾಗಿ ಅಸ್ವಸ್ಥರಾದ ಕೊರೋನಾ ರೋಗಿಗಳಿಗೆ ವರ್ಗಾವಣೆ (ಟ್ರಾನ್ಸಫ್ಯೂಷನ್) ಮಾಡಲಾಗುವುದು ಎಂದು ಮುಖ್ಯಮಂತ್ರಿ ನುಡಿದರು. ಪ್ಲಾಸ್ಮಾ ಟ್ರಾನ್ಸಫ್ಯೂಷನ್ ಮಾಡುವ ತಂತ್ರಜ್ಞಾನವು ಪ್ರಾಯೋಗಿಕ ಚಿಕಿತ್ಸೆಯಾಗಿದ್ದು ಇದೊಂದು ಆಶಾಕಿರಣವಾಗಿದೆ ಎಂದು ಕೇಜ್ರಿವಾಲ್ ಹೇಳಿದರು. ಮಧ್ಯೆ, ಚೀನಾವು ಕಳುಹಿಸಿರುವ ಕಳಪೆ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು (ಪಿಪಿಇ ಕಿಟ್) ಭಾರತವು ತಿರಸ್ಕರಿಸಲಿದೆ.. ಚೀನವು  ದಾನವಾಗಿ ಕಳುಹಿಸಿರುವ ಪಿಪಿಇ ಕಿಟ್ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂದು ಸರ್ಕಾರಿ ಮೂಲಗಳು ಹೇಳಿದವು. ಇದೇ ವೇಳೆಗೆ ದೊಡ್ಡ ಪ್ರಮಾಣದ ಪಿಪಿಇ ಉಪಕರಣಗಳ ಭಾರೀ ಸರಕು ಶೀಘ್ರವೇ ಕೊರಿಯಾ ದಿಂದ ಭಾರತಕ್ಕೆ ಬರಲಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಭಾರತದ ಒಟ್ಟು ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಗುರುವಾರ ೧೨,೭೫೯ಕ್ಕೆ ಏರಿದೆ. ಇದರಲ್ಲಿ ೧೦,೮೨೪ ಸಕ್ರಿಯ ಪ್ರಕರಣಗಳಾಗಿದ್ದು, ೧೫೧೪ ಪ್ರಕರಣಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ ೪೨೦ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿತು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)


ಇಂದಿನ ಇತಿಹಾಸ  History Today ಏಪ್ರಿಲ್ 16  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

No comments:

Post a Comment