Tuesday, April 28, 2020

ಇಂದಿನ ಇತಿಹಾಸ History Today ಏಪ್ರಿಲ್ 28

2020: ನವದೆಹಲಿ: ಕೋರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಸಲುವಾಗಿ ಭಾರತಕ್ಕೆ . ಬಿಲಿಯನ್ (೧೫೦ ಕೋಟಿ) ಅಮೆರಿಕನ್ ಡಾಲರ್ ನೆರವನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್- ಎಡಿಬಿ) 2020 ಏಪ್ರಿಲ್ 28ರ ಮಂಗಳವಾರ ಮಂಜೂರು ಮಾಡಿತು. ರೋಗವನ್ನು ಹತೋಟಿಯಲ್ಲಿ ಇಡವುದು ಮತ್ತು ಹರಡದಂತೆ ತಡೆಯುವುದು ಹಾಗೂ ಬಡವರು ಮತ್ತು ಅರ್ಥಿಕವಾಗಿ ದುರ್ಬಲರಾದ ವರ್ಗಗಳಿಗೆ ಸಾಮಾಜಿಕ ರಕ್ಷಣೆ ಒದಗಿಸುವುದೇ  ಮುಂತಾದ ತತ್ ಕ್ಷಣದ ಅದ್ಯತೆಗಳಿಗೆ ಬೆಂಬಲವಾಗಿ ಸಾಲವನ್ನು ಮಂಜೂರು ಮಾಡಿರುವುದಾಗಿ ಬ್ಯಾಂಕ್ ತಿಳಿಸಿದೆ. ಅಭೂತಪೂರ್ವ ಸವಾಲನ್ನು ಎದುರಿಸುವಲ್ಲಿ ಭಾರತ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲು ತಾನು ಬದ್ಧವಾಗಿರುವುದಾಗಿ ಎಡಿಬಿ ಅಧ್ಯಕ್ಷ ಮಸತ್ಸುಗು ಅಸಕವಾ ಹೇಳಿದರು. ಸರ್ಕಾರ ಮತ್ತು ಇತರ ಅಭಿವೃದ್ಧಿ ಪಾಲುದಾರರ ಜೊತೆಗಿನ ನಿಕಟ ಸಮನ್ವಯದೊಂದಿಗೆ ಎಡಿಬಿಯು ವಿಶಾಲ ಪ್ಯಾಕೇಜಿನ ಭಾಗವಾಗಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಲಿದೆ ಎಂದು ಅವರು ನುಡಿದರು. ಕೋವಿಡ್-೧೯ರ ವಿರುದ್ಧ ಭಾರತವು ಹಮ್ಮಿಕೊಂಡಿರುವ ದೃಢ ಕಾರ್ಯಕ್ರಮಗಳನ್ನು ಬೆಂಬಲಿಸಲು ನಾವು ನಿರ್ಧರಿಸಿದ್ದೇವೆ. ಮತ್ತು ಭಾರತದ ಕಾರ್ಯಕ್ರಮಗಳು ದೇಶದ ಜನತೆಗೆ ವಿಶೇಷವಾಗಿ ಬಡ ಮತ್ತು ಅತ್ಯಂತ ದುರ್ಬಲ ವರ್ಗಗಳಿಗೆ ಪರಿಣಾಮಕಾರಿ ಬೆಂಬಲ ನೀಡುವುದೆಂಬ ಖಚಿತತೆ ನಮಗಿದೆ ಎಂದು ಅಸಕವಾ ಹೇಳಿಕೆಯೊಂದರಲ್ಲಿ ತಿಳಿಸಿದರು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ಲಕ್ನೋ: ಕೋವಿಡ್ ೧೯ ದಿಗ್ಬಂಧನ (ಲಾಕ್ಡೌನ್) ಜಾರಿಯಲ್ಲಿರುವಾಗಲೇ ಉತ್ತರಪ್ರದೇಶದ ಬುಲಂದ್ ಶಹರದ ದೇವಾಲಯ ಒಂದರಲ್ಲಿ ಇಬ್ಬರು ಸಾಧುಗಳನ್ನು ಹತ್ಯೆಗೈದಿರುವ ಘಟನೆ 2020 ಏಪ್ರಿಲ್ 28ರ ಮಂಗಳವಾರ ನಸುಕಿನಲ್ಲಿ ಘಟಿಸಿದೆ ನಡೆದಿದೆ ಎಂದು ವರದಿಯೊಂದು ತಿಳಿಸಿತು. ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದ ಇಬ್ಬರು ಸಾಧುಗಳ ಹತ್ಯೆ ಘಟನೆಯ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದ ಬುಲಂದಶಹರದ ಪಗೋಣ ಗ್ರಾಮದಲ್ಲಿ ಘಟನೆ ಘಟಿಸಿತು. ೫೫ವರ್ಷದ ಜಗನ್ ದಾಸ್ ಹಾಗೂ ೩೫ ವರ್ಷದ ಸೇವಾದಾಸ್ ಎಂಬ ಸಾಧುವನ್ನು ತಲವಾರಿನಿಂದ ಕಡಿದು ಹತ್ಯೆಗೈಯಲಾಗಿದೆ. ಇಬ್ಬರು ಸಾಧುಗಳು ಸಣ್ಣ ದೇವಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸ್ತವ್ಯ ಹೂಡಿದ್ದರು. ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ತನಿಖೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ರಕ್ತಸಿಕ್ತ ದೇಹಗಳನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಹತ್ಯೆ ಘಟನೆ ಬೆಳಕಿಗೆ ಬಂದಿದೆ. ಅರ್ಚಕರಿಂದ ಕಳ್ಳತನದ ಆರೋಪಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನನ್ನು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದರು.  (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ವಿರುದ್ಧ ಪ್ಲಾಸ್ಮಾ ಥೆರೆಪಿಯನ್ನು ನಿಯಮಿತ ಬಳಕೆ ಮಾಡುವುದರ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್ 28ರ ಮಂಗಳವಾರ ಎಚ್ಚರಿಕೆ ನೀಡಿತು ಮತ್ತು ಇದರ ಪರಿಣಾಮಕಾರಿತ್ವ ಬಗ್ಗೆ ವೈಜ್ಞಾನಿಕ ಸಾಕ್ಷ್ಯಾಧಾರ ಲಭಿಸುವವರೆಗೆ ಇದನ್ನು ಸಂಶೋಧನೆ ಮತ್ತು ಪ್ರಾಯೋಗಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಎಂದು ಸಲಹೆ ಮಾಡಿತು.  ಸಮರ್ಪಕವಾಗಿ ನೀಡದೇ ಇದ್ದಲ್ಲಿ ಪ್ಲಾಸ್ಮಾ ಥೆರೆಪಿಯು ಜೀವಕ್ಕೆ ಅಪಾಯವಾಗುವಂತಹ ಸಮಸ್ಯೆಗಳನ್ನು ತಂದೊಡ್ಡಬಹುದು ಎಂದೂ ಸರ್ಕಾರ ಎಚ್ಚರಿಸಿತು.. ಪ್ಲಾಸ್ಮಾ ಥೆರೆಪಿ ಸೇರಿದಂತೆ ಕೋವಿಡ್ -೧೯ಕ್ಕೆ ದೇಶದಲ್ಲಿ ಯಾವುದೇ ಅನುಮೋದಿತ ಥೆರೆಪಿ ಇಲ್ಲ. ಪ್ಲಾಸ್ಮಾ ಥೆರೆಪಿಯನ್ನು ಪ್ರಯೋಗ ಮಾಡಲಾಗುತ್ತಿದೆ ಮತ್ತು ಅದನ್ನು ಚಿಕಿತ್ಸೆ ಎಂಬುದಾಗಿ ದೃಢಪಡಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅದು ಇನ್ನೂ ಪ್ರಾಯೋಗಿಕ ಹಂತದಲ್ಲಿ ಮಾತ್ರವೇ ಇದೆ. ಸಮರ್ಪಕವಾಗಿ ಬಳಸದೇ ಇದ್ದಲ್ಲಿ ಅದು ಜೀವಕ್ಕೆ ಬೆದರಿಕೆ ಒಡ್ಡುವಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು. ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಪ್ಲಾಸ್ಮಾ ಥೆರೆಪಿಯ ಪರಿಣಾಮಕಾರಿತ್ವದ ಪತ್ತೆಗಾಗಿ ಅಧ್ಯಯನ ನಡೆಸುತ್ತಿದೆ. ಅಲ್ಲಿಯವರೆಗೂ, ಪ್ರಾಯೋಗಿಕ ಉದ್ದೇಶಗಳಿಗಾಗಿ ಮಾತ್ರವೇ ಅದನ್ನು ಬಳಸುವಂತೆ ವೈದ್ಯರಿಗೆ ಸಲಹೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ನುಡಿದರು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೊನಾವೈರಸ್ ಬಿಕ್ಕಿಟ್ಟಿನ ಮಧ್ಯೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆ ಹೊಂದುತ್ತಿರುವ ಪ್ರಮಾಣವು ಶೇಕಡಾ ೨೩.೩ಕ್ಕೆ ಏರಿಕೆಯಾಗಿರುವ ಸಮಾಧಾನಕರ ಸುದ್ದಿ ಬಂದಿದೆ. ಇದೇ ವೇಳೆಗೆ ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಐಟಿ ವೃತ್ತಿಪರರಿಗೆ ಜುಲೈ ೩೧ರವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ 2020 ಏಪ್ರಿಲ್ 28ರ ಮಂಗಳವಾರ ಅನುಮತಿ ನೀಡಿತು. ದೇಶದಲ್ಲಿ ಈವರೆಗೆ ಇದುವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ ,೦೨೭ಕ್ಕೆ ಏರಿದೆ. ಸೋಮವಾರದ ವರೆಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾಗುವವರ ಸರಾಸರಿಯು ಶೇಕಡಾ ೨೨.೧೭ರಷ್ಟಿತ್ತು. ಮಂಗಳವಾg ವೇಳೆಗೆ ಪ್ರಮಾಣದಲ್ಲಿ ಮತ್ತಷ್ಟು ಸುಧಾರಣೆ ಕಂಡಿದ್ದು, ಶೇಕಡಾ ೨೩.೩ಕ್ಕೆ ತಲುಪಿದೆ. ೨೪ ಗಂಟೆಗಳಲ್ಲಿ ೬೮೪ ಮಂದಿ ಗುಣಮುಖರಾಗಿದ್ದಾರೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿತು. ಈ ಮಧ್ಯೆ ಹೊಸತಾಗಿ ೧೫೯೪ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೩೦,೦೦೦ದ ಸಮೀಪಕ್ಕೆ ಬಂದಿದೆ. ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೨೯,೯೭೪ಕ್ಕೆ ಏರಿಕೆಯಾಯಿತು. ಕಳೆದ ೨೪ ಗಂಟೆಗಲ್ಲಿ ೫೧ ಮಂದಿಯ ಸಾವಿನೊಂದಿಗೆ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ೯೩೭ಕ್ಕೆ ಏರಿದೆ. ೨೯,೯೭೪ ಕೊರೋನಾಸೋಂಕು ಪ್ರಕರಣಗಳಲ್ಲಿ ,೦೨೭ ರೋಗಿಗಳು ಗುಣಮುಖರಾಗಿದ್ದು ೨೨,೦೧೦ ಸೋಂಕಿನ ಸಕ್ರಿಯ ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ತಿಳಿಸಿದರು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಹಿಂದಕ್ಕೆ ಕರೆತರುವ ಯೋಜನೆಯ ಬಗ್ಗೆ ವಿದೇಶಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಕೆಲಸ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳಾಂತರಿಸುವ ಯೋಜನೆಯ ನಿಯಮಗಳನ್ನು ಸ್ಪಷ ಪಡಿಸಿದ್ದಾರೆ. ವಿದೇಶದಲ್ಲಿ ಸಿಲುಕಿರುವ ಭಾರತದ ಬ್ಲೂ ಕಾಲರ್ ಕಾರ್ಮಿಕರು ವಿಶೇಷ ವಿಮಾನಗಳಲ್ಲಿ ಮೊದಲ ಸ್ಥಾನಗಳನ್ನು ಪಡೆಯಲಿದ್ದು, ಮೊದಲು ಅವರನ್ನು ತಾಯ್ನಾಡಿಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ಬ್ಲೂ ಕಾಲರ್ ಕಾರ್ಮಿಕರ ಬಳಿಕ, ವಿವಿಧ ದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ನಂತರ ಕೆಲಸಕ್ಕಾಗಿ ಪ್ರಯಾಣಿಸಿದ್ದ ಭಾರತೀಯರು ಹಾಗೂ ಬಳಿಕ ಉಳಿದ ಎಲ್ಲರನ್ನೂ ಭಾರತಕ್ಕೆ ಕರೆತರುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. "ಪ್ರಧಾನ ಮಂತ್ರಿ ಬಹಳ ಸ್ಪಷ್ಟವಾಗಿದ್ದಾರೆ. ... ಭಾರತೀಯ ವಲಸಿಗ ಉದ್ಯೋಗಿಗಳಿಗೆ ಮರಳಲು ಮೊದಲ ಆಯ್ಕೆ ಸಿಗಬೇಕು ಎಂಬುದಾಗಿ ಅವರು ಹೇಳಿದ್ದಾರೆ" ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)

2020:  ತಿರುವನಂತಪುರಂ: ಕೊರೋನಾವೈರಸ್  ವಿರುದ್ಧ ಹೋರಾಡುತ್ತಿರುವುದರ ನಡುವೆಯೇ ರಾಜ್ಯ ಸರ್ಕಾರಿ ನೌಕರರ ಸಂಬಳವನ್ನು ಕಡಿತಗೊಳಿಸುವ ಕೇರಳ ಸರ್ಕಾರದ ಆದೇಶಕ್ಕೆ ಹೈಕೋರ್ಟ್ 2020 ಏಪ್ರಿಲ್ 28ರ ಮಂಗಳವಾರ ತಡೆಯಾಜ್ಞೆ ನೀಡಿತು ಎಂದು ವರದಿ ತಿಳಿಸಿತು. ‘ರಾಜ್ಯ ಸರ್ಕಾರಿ ನೌಕರರ ಪ್ರತಿ ತಿಂಗಳ ಆರು ದಿನದ ಸಂಬಳವನ್ನು ಮುಂದಿನ ಐದು ತಿಂಗಳ ಕಾಲ ಕಡಿತಗೊಳಿಸಲಾಗುವುದು’ ಎಂದ ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಇದು ಎಲ್ಲ ಸರ್ಕಾಋಇ ಸ್ವಾಮ್ಯದ  ಉದ್ಯಮಗಳು, ಸರ್ಕಾರಿ ರಂಗದ ಕಾರ್ಖಾನೆಗಳು,  ಅರೆ ಸರ್ಕಾರಿ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿತ್ತು. ಸಂಬಳ ಕಡಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಲವು ಸರ್ಕಾರಿ ನೌಕರರು ಹಾಗೂ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ೨೦ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರ ಸಂಬಳವನ್ನು ಕಡಿತಗೊಳಿಸಬಾರದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ವರದಿ ವಿವರಿಸಿತು.. ಸರ್ಕಾರದ ಆದೇಶದಲ್ಲಿ ಸಚಿವರು, ಶಾಸಕರು, ವಿವಿಧ ನಿಗಮದ ಸದಸ್ಯರು, ಸ್ಥಳೀಯ ಪಂಚಾಯತ್ ಸದಸ್ಯರು, ವಿವಿಧ ಆಯೋಗಗಳ ಸಂಬಳವನ್ನು ಮುಂದಿನ ಒಂದು ವರ್ಷದವರೆಗೆ ಶೇ,.೩೦ರಷ್ಟು ಸಂಬಳ ಕಡಿತ ಮಾಡಲಾಗುವುದು ಎಂದು ತಿಳಿಸಲಾಗಿತ್ತು. (ವಿವರಗಳಿಗೆ   ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment