ನಾನು ಮೆಚ್ಚಿದ ವಾಟ್ಸಪ್

Friday, May 1, 2020

ಇಂದಿನ ಇತಿಹಾಸ History Today ಮೇ 01

ಇಂದಿನ ಇತಿಹಾಸ  History Today ಮೇ 01  
2020: ನವದೆಹಲಿ: ಕೇಂದ್ರ ಸರ್ಕಾರವು ಮೂರನೇ ಅವಧಿಗೆ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌ್ನ್) ಮೂರನೇ ಅವಧಿಗೆ  ವಿಸ್ತರಿಸುವ ನಿರ್ಧಾರವನ್ನು 2020 ಮೇ 01ರ ಶುಕ್ರವಾರ ಕೈಗೊಂಡಿತು. ಕೊರೋನಾವೈರಸ್  ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಇನ್ನೂ ಎರಡು ವಾರಗಳ ಕಾಲ ದಿಗ್ಬಂಧನ ಮುಂದುವರೆಸುವ ಕುರಿತು ಸರ್ಕಾರ ಘೋಷಣೆ ಹೊರಡಿಸಿತು.  ಮೇ. ೧೭ರ ವರೆಗೆ ದಿಗ್ಬಂಧನ ಮುಂದುವರೆಯಲಿದೆ. ದೇಶದಲ್ಲಿ ಕೆಂಪು ವಲಯದಲ್ಲಿ (ರೆಡ್ ಝೋನ್) ಇರುವ 130 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ದಿಗ್ಬಂಧನ  ಜಾರಿಯಲ್ಲಿ ಇರಲಿದ್ದು, ಕರ್ನಾಟಕದ ೩ ಜಿಲ್ಲೆಗಳೂ ಈ ವ್ಯಾಪ್ತಿಗೆ  ಸೇರಿವೆ. ಹಸಿರು ವಲಯ (ಗ್ರೀನ್ ಜೋನ್) ಮತ್ತು ಕಿತ್ತಳೆ ವಲಯಗಳಲ್ಲಿ ಕೆಲವು ಸಡಿಲಿಕೆ ನೀಡಲಾಗುತ್ತದೆ ಎನ್ನಲಾಯಿತು. ಕೈಗಾರಿಕೆಗಳಿಗೆ ಷರತ್ತುಬದ್ದ ಅನುಮತಿ ನೀಡಲಾಗಿದೆ. ಔಷಧ ವೈದ್ಯಕೀಯ ಸಲಕರಣೆಗಳ ಉತ್ಪಾದನೆಗೆ ಅವಕಾಶ ನೀಡಲಾಗಿದೆ. ಅಂತಾರಾಜ್ಯ ಸಾರಿಗೆಗೆ ಅವಕಾಶ ನೀಡಲಾಗಿಲ್ಲ. ಕೇಂದ್ರ ಸರ್ಕಾರದ  ದಿಗ್ಬಂಧನ  ವಿಸ್ತರಣೆ ಆದೇಶವು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಇಡೀ ದೇಶ ಮೇ.೧೭ರವರೆಗೆ ದಿಗ್ಬಂಧನ ಆದೇಶವನ್ನು ಪಾಲಿಸಬೇಕಾಗಿದೆ. ಮೇ. ೧೭ರವರೆಗೆ ಸಾರ್ವಜನಿಕ ಸಾರಿಗೆಗೆ ಚಾಲನೆ ದೊರೆಯುವುದಿಲ್ಲ. ರೈಲುಗಳೂ ಕೂಡ ಮತ್ತೆ ಎರಡು ವಾರಗಳ ಕಾಲ ಸ್ತಬ್ಧವಾಗಲಿವೆ. ಅಂದರೆ ರೈಲುಗಳ ಸಂಚಾರಕ್ಕೂ ಅನುಮತಿ ನೀಡಲಾಗಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೆ ಅನುಮತಿ ನೀಡಲಾಗಿಲ್ಲ. ಕಟ್ಟಡ ಕಾರ್ಮಿಕರು, ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆದರೆ, ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವಂತಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  HistoryTodayಮೇ 01  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)




No comments:

Post a Comment