Wednesday, July 4, 2018

ಇದು ‘ಪಿಲಿಮಂಡೆ’ ಹೆಲ್ಮೆಟ್!


ಇದು ‘ಪಿಲಿಮಂಡೆ’ ಹೆಲ್ಮೆಟ್!

ಮಂಗಳೂರು:  ಮಂಗಳೂರು ನಗರದಲ್ಲಿ ಯುವಕನೊಬ್ಬ ಬೈಕ್ ಓಡಿಸುತ್ತಿದ್ದರೆ ಹತ್ತಾರು ಜನ ಆತನನ್ನೇ ತಿರು ತಿರುಗಿ ನೋಡುತ್ತಾರೆ- ಏಕೆ ಗೊತ್ತೆ? ಈ ಮಹರಾಯ ‘ಪಿಲಿಮಂಡೆ’ ಧರಿಸಿಕೊಂಡು ನಿತ್ಯ ಬೈಕಿನಲ್ಲಿ ಓಡಾಡುತ್ತಾನೆ!

ಕರಾವಳಿಯಲ್ಲಿ ನವರಾತ್ರಿ ಅಥವಾ ಅಷ್ಟಮಿ ಸಂದರ್ಭದಲ್ಲಿ ಹುಲಿವೇಷ ಕುಣಿತಗಳು ಸಾಮಾನ್ಯ. ಹುಲಿವೇಷಗಳ ಮುಖವಾಡ ಅತ್ಯಂತ ಆಕರ್ಷಕ.  ನುರಿತ ಕಲಾವಿದರಷ್ಟೇ ಮುಖವಾಡವನ್ನು ವಿಶೇಷ ರೀತಿಯಲ್ಲಿ ತಯಾರಿಸುತ್ತಾರೆ.

ಆದರೆ ನಗರದ ಆಕಾಂಕ್ಷ್  ಎಂಬ ಯುವಕರೊಬ್ಬರು ಹುಲಿಯ ಮುಖವಾಡ ಹಾಕಿಕೊಂಡು ಮಂಗಳೂರು ಸುತ್ತ ಸುತ್ತಾಡುತ್ತಾರೆ. ಹೌದು. ಆದರೆ ಅವರು ಹಾಕುತ್ತಿರುವುದು ಹುಲಿವೇಶದ ಮುಖವಾಡವಲ್ಲ, ಬದಲಿಗೆ ಅದರಂತೆಯೇ ರೂಪಿಸಲಾಗಿರುವ ಹೆಲ್ಮೆಟ್ !

ಕುತ್ತಾರಿನ ಯುವಕ ಆಕಾಂಕ್ಷ್ ಹುಲಿಮುಖದ ಹೆಲ್ಮೆಟ್ಡಿಸೈನ್ ಮಾಡಿ ಯುವಕರಲ್ಲಿ ಹೊಸ ಕ್ರೇಜ್ಹುಟ್ಟಿಸಿದ್ದಾರೆ. ವ್ಯಾಘ್ರ ಘರ್ಜಿಸುವಾಗ ಕಂಡು ಬರುವ ದೃಶ್ಯವನ್ನು ಪ್ರತಿಬಿಂಬಿಸುವಂತೆ ಹೆಲ್ಮೆಟ್ವಿನ್ಯಾಸಗೊಂಡಿದೆ ನೈಜ ಐಎಸ್ ಮಾರ್ಕ್ ಹೆಲ್ಮೆಟ್ಗೆ ವಿನ್ಯಾಸವನ್ನು ಮಾಡಿರುವುದರಿಂದ ಕಾನೂನು ಪ್ರಕಾರ ಇದನ್ನು ಧರಿಸಲು ಯಾವುದೇ ತೊಂದರೆ ಇಲ್ಲ.

ಹುಲಿ ವೇಷದ ಬಗ್ಗೆ ಚಿಕ್ಕಂದಿನಲ್ಲೇ ವಿಶೇಷ ಆಸಕ್ತಿ ಮತ್ತು ಒಲವು ಹೊಂದಿದ್ದ ಆಕಾಂಕ್ಷ್ ಅವರ ಅಜ್ಜ ಹುಲಿವೇಷ ಹಾಕಿ ಕುಣಿಯುವುದರಲ್ಲಿ ಖ್ಯಾತಿ ಪಡೆದಿದ್ದರು. ಇವರ ಇಡೀ ಕುಟುಂಬಕ್ಕೆ ಹುಲಿವೇಷದ ಬಗ್ಗೆ ಅತ್ಯಂತ ಹೆಚ್ಚು ಆಸಕ್ತಿ.

ಇದೀಗ ಆಕಾಂಕ್ಷ್ ಅವರ ಹೆಲ್ಮೆಟ್ ಮಂಗಳೂರು ಸುತ್ತಮುತ್ತ ಹೊಸ ಕ್ರೇಜ್ ಸೃಷ್ಟಿಸಿದೆ. ರಸ್ತೆಯಲ್ಲಿ ಹೋಗುವಾಗಲೆಲ್ಲ ಸುತ್ತಮುತ್ತಲಿನ ಜನರು ಇವರ ಕಡೆಗೇ ದೃಷ್ಟಿ ಹಾಯಿಸುತ್ತಿದ್ದಾರೆ.

ವಾಹನದಲ್ಲಿ ಹೋಗುವ ಪ್ರಯಾಣಿಕರು ಕೂಡಾ ಪಿಲಿ ಮಂಡೆಯನ್ನು ನೋಡಿ ಆಶ್ಚರ್ಯದಿಂದ ತಿರು ತಿರುಗಿ ನೋಡಿ ಹೋಗುತ್ತಿದ್ದಾರೆ.

ಮೂಲತಃ ಕಲಾವಿದ ಆಗಿರುವ ಆಕಾಂಕ್ಷ್ ತಾನು ನಿತ್ಯ ಧರಿಸುವ ಹೆಲ್ಮೆಟ್ಗೆ ಹುಲಿವೇಷ ಮುಖವಾಡದ ಬಣ್ಣ ಬಳೆಯುವ ಕನಸು ಹೊಂದಿದ್ದರು. ಬಗ್ಗೆ ಅವರು ಹುಲಿವೇಷದ ಮುಖವಾಡ ರಚಿಸುವಲ್ಲಿ ಪ್ರಸಿದ್ಧರಾಗಿರುವ ಉಮೇಶ್ ಬೋಳಾರ್ ಅವರನ್ನು ಸಂಪರ್ಕಿಸಿದರು. ಆದರೆ ಅವರು ತನ್ನದೇ ಐಡಿಯಾ ಬಳಸಿಕೊಂಡು ನೈಜ ಹೆಲ್ಮೆಟ್ಗೆ ಹುಲಿವೇಷ ಮುಖವಾಡದ ಆಕಾರ ನಿರ್ಮಿಸಿಕೊಟ್ಟರು.

ಈಗ ನಿರ್ಮಾಣಗೊಂಡಿರುವ ಹೆಲ್ಮೆಟ್ ನೈಜವೇ ಅಥವಾ ನವರಾತ್ರಿಯ ಹುಲಿ ಮುಖವಾಡವೇ ಎಂದು ಅನುಮಾನ ಬರುವಷ್ಟು ಸುಂದರವಾಗಿ ಮೂಡಿಬಂದಿದೆ. ಆಕಾಂಕ್ಷ್ ಬೈಕ್ ನಿಲ್ಲಿಸಿದ ಕಡೆ ಯುವಕರ ಗುಂಪು ಹೆಲ್ಮೆಟ್ನ್ನು ಒಮ್ಮೆ ಮುಟ್ಟಿ ನೋಡುವುದು ಮಾಮೂಲಾಗಿದೆ. ಅಲ್ಲದೆ ಕೆಲವು ಯುವಕರು ಕೂಡಾ ತಮ್ಮ ಬೈಕ್ಗೆ ಇದೇ ಮಾದರಿಯ ಡಿಸೈನ್ ಮಾಡಿಸಲು ಮುಂದಾಗಿದ್ದಾರೆ.

 ಉಮೇಶ ಬೋಳಾರ್ ಅವರು ನಿರ್ಮಿಸಿಕೊಟ್ಟ ‘ಪಿಲಿಮಂಡೆ ಹೆಲ್ಮೆಟ್’ ಧರಿಸಿ ಹೋಗುವುದು ಎಂದರೆ ಈಗ ನನಗೆ ಬಲು ಹೆಮ್ಮೆ ಎನ್ನುತ್ತಾರೆ ಆಕಾಂಕ್ಷ್ ಕುತ್ತಾರ್.

No comments:

Post a Comment