ನಾನು ಮೆಚ್ಚಿದ ವಾಟ್ಸಪ್

Thursday, July 19, 2018

ರಾಷ್ಟ್ರಪತಿ, ಉಪರಾಷ್ಟ್ರಪತಿ ಕಾರಿಗೂ ರಿಜಿಸ್ಟ್ರೇಶನ್ ನಂಬರ್ ಕಡ್ಡಾಯ


ರಾಷ್ಟ್ರಪತಿ, ಉಪರಾಷ್ಟ್ರಪತಿ ಕಾರಿಗೂ
ರಿಜಿಸ್ಟ್ರೇಶನ್ ನಂಬರ್ ಕಡ್ಡಾಯ

ನವದೆಹಲಿ: ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ಅಧಿಕೃತ ಕಾರುಗಳು/ ವಾಹನಗಳು ಕೂಡ ರಿಜಿಸ್ಟ್ರೇಶನ್ ನಂಬರನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ದೆಹಲಿ ಹೈಕೋರ್ಟ್  18 ಜುಲೈ 2018ರ ಬುಧವಾರ ಆಜ್ಞಾಪಿಸಿದೆ.

ದೇಶದ ಉನ್ನತ ಸಾಂವಿಧಾನಿಕ ಅಧಿಕಾರಿಗಳಾಗಿರುವ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ಗಳು ಬಳಸುವ ಅಧಿಕೃತ ಕಾರುಗಳನ್ನು ಕೂಡ ಸಂಬಂಧಪಟ್ಟ ಪ್ರಾಧಿಕಾರಗಳಲ್ಲಿ ನೋಂದಾಯಿಸಿ ಕಡ್ಡಾಯವಾಗಿ ರಿಜಿಸ್ಟ್ರೇಶನ್ ನಂಬರ್ ಅಳವಡಿಸಿರಬೇಕು ಎಂದು ದೆಹಲಿ ಹೈಕೋರ್ಟ್ ನಿರ್ದೇಶಿಸಿತು.

ಎಲ್ಲ ಉನ್ನತ ಅಧಿಕಾರಿಗಳ ಅಧಿಕೃತ ಕಾರುಗಳ ರಿಜಿಸ್ಟ್ರೇಶನ್ ನಂಬರುಗಳನ್ನು ಅವರ ವಾಹನಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಕೋರ್ಟ್ ಹೇಳಿತು.

ದೇಶದ ಉನ್ನತ ಸಾಂವಿಧಾನಿಕ ಅಧಿಕಾರಿಗಳು ಬಳಸುವ ಕಾರುಗಳಲ್ಲಿ ಸರ್ಕಾರದ ಲಾಂಛನ ಮಾತ್ರವೇ ಇರುತ್ತದೆ. ರಿಜಿಸ್ಟ್ರೇಶನ್ ನಂಬರ್ ಇರುವುದಿಲ್ಲ. ಆದುದರಿಂದ ವಾಹನಗಳು ಉನ್ನತ ಸಾಂವಿಧಾನಿಕ ಅಧಿಕಾರಿಗಳ ಕಾರುಗಳೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಹೀಗಾಗಿ ಇಂತಹ ವಾಹನಗಳು ಭಯೋತ್ಪಾದಕರ ಅಥವಾ ಯಾವುದೇ ದುರುದ್ದೇಶ ಹೊಂದಿರುವ ವ್ಯಕ್ತಿಗಳ ದುಷ್ಕೃತ್ಯಗಳಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ; ಆದುದರಿಂದ ವಾಹನಗಳಿಗೂ ಇತರ ಎಲ್ಲ ವಾಹನಗಳಂತೆ ರಿಜಿಸ್ಟ್ರೇಶನ್ ನಂಬರ್ ಅಳವಡಿಸುವುದು ಅಗತ್ಯ ಎಂದುನ್ಯಾಯಭೂಮಿ ಎಂಬ ಸರ್ಕಾರೇತರ ಸೇವಾ ಸಂಘಟನೆಯೊಂದು ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಿದ್ದ ಮಾಹಿತಿಯನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಿದ್ದ ಮಾಹಿತಿಯ ಪ್ರಕಾರ ತನ್ನ ಪ್ರೋಟೋಕಾಲ್ ವಿಭಾಗವು ನಿರ್ವಹಿಸುತ್ತಿರುವ ೧೪ ಕಾರುಗಳಲ್ಲಿ ಯಾವುದೇ ಕಾರನ್ನೂ ರಿಜಿಸ್ಟ್ರೇಶನ್ ಮಾಡಿಲ್ಲ ಎಂದು ತಿಳಿಸಲಾಗಿತ್ತು.

ರಾಷ್ಟ್ರದ ಭದ್ರತೆ ಮತ್ತು ರಾಷ್ಟ್ರಪತಿಯವರ ಭೌತಿಕ ಭದ್ರತೆಗೆ ಅಪಾಯವಾಗಬಹುದಾದ ಕಾರಣ ತನ್ನ ಬಳಿ ಇರುವ ಕಾರುಗಳ ರಿಜಿಸ್ಟ್ರೇಷನ್ ನಂಬರುಗಳನ್ನು ಒದಗಿಸಲು ರಾಷ್ಟ್ರಪತಿ ಭವನವು ನಿರಾಕರಿಸಿದೆ ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿ ತಿಳಿಸಿತ್ತು.

‘ಮಾತೃಭೂಮಿ ಅರ್ಜಿಯನ್ನು ಪುರಸ್ಕರಿಸಿದ ದೆಹಲಿ ಹೈಕೋರ್ಟ್ ಉನ್ನತ ಸಾಂವಿಧಾನಿಕ ಅಧಿಕಾರಿಗಳ ಕಾರುಗಳಿಗೂ ರಿಜಿಸ್ಟ್ರೇಷನ್ ನಂಬರ್ ಕಡ್ಡಾಯಗೊಳಿಸಿ ಆದೇಶ ನೀಡಿತು.

No comments:

Post a Comment