Saturday, July 21, 2018

ಇಂದಿನ ಇತಿಹಾಸ History Today ಜುಲೈ 21

ಇಂದಿನ ಇತಿಹಾಸ History Today ಜುಲೈ 21
2019: ನವದೆಹಲಿ: ಅಮೆರಿಕ ಭೇಟಿಗೆ ತೆರಳಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ  ಭಾರೀ ಮುಜುಗರದ ಪರಿಸ್ಥಿತಿ ಉಂಟಾಗಿದ್ದು, ಸಾಮಾನ್ಯವಾಗಿ ವಿದೇಶಗಳ ಮುಖ್ಯಸ್ಥರಿಗೆ ನೀಡಲಾಗುವ ಭವ್ಯವಾದ ಅಧಿಕೃತ ಸ್ವಾಗತ ಲಭಿಸಲಿಲ್ಲಬದಲಿಗೆ ತಮ್ಮ ಸರ್ಕಾರದ ಸಚಿವರಿಂದಲೇ ಸ್ವಾಗತಿಸಿಕೊಳ್ಳುವ ಸ್ಥಿತಿ ಅವರದಾಯಿತು!. ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸೊಹೈಲ್ ಮಹಮೂದ್ ಮತ್ತು ವಾಣಿಜ್ಯ ಸಲಹೆಗಾರ ಅಬ್ದುಲ್ ರಜಾಕ್ ಅವರೊಂದಿಗೆ ಹೋಗಿ ಅಮೆರಿಕದಲ್ಲಿ ಇಳಿದಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಮತ್ತು ಭಾರೀ ಸಂಖ್ಯೆಯ ಪಾಕಿಸ್ತಾನಿ ಅಮೆರಿಕನ್ ಪ್ರಜೆಗಳು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಅಮೆರಿಕದ ಉನ್ನತ ಅಧಿಕಾರಿ ಶಿಷ್ಟಾಚಾರ ಅಧಿಕಾರಿ (ಪ್ರೊಟೋಕಾಲ್ ಆಫೀಸರ್) ಮಾತ್ರ. ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಅಮೆರಿಕಕ್ಕೆ ನೀಡಿರುವ ಚೊಚ್ಚಲ ಭೇಟಿ ಇದಾಗಿದ್ದು, ಖಾನ್ ಅವರು ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಮಾತುಕತೆ ನಡೆಸಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಮತ್ತೆ ಗಟ್ಟಿಗೊಳಿಸುವ ಯತ್ನ ನಡೆಸಿದ್ದರು.  ಅಮೆರಿಕದ ಅಧ್ಯಕ್ಷರು ಪಾಕಿಸ್ತಾನವನ್ನು ಬಹಿರಂಗವಾಗಿ ಟೀಕಿಸಿ, ಅದಕ್ಕೆ ನೀಡಲಾಗುತ್ತಿದ್ದ ಸೇನಾ ನೆರವು ಕಡಿತಗೊಳಿಸಿ ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಇನ್ನಷ್ಟು ಬಲತುಂಬುವಂತೆ ಸೂಚಿಸಿದ ಬಳಿಕ ಅಮೆರಿಕದ ಜೊತೆಗಿನ ಪಾಕ್ ಬಾಂಧವ್ಯ ನಶಿಸಿತ್ತು. ೬೬ರ ಹರೆಯದ ಖಾನ್ ಅವರು ಜುಲೈ 22ರ ಸೋಮವಾರ ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಫ್  ಅವರನ್ನು ಭೇಟಿ ಮಾಡಲಿದ್ದಾರೆ. ಸಂದರ್ಭದಲ್ಲಿ ಅಮೆರಿಕದ ನಾಯಕತ್ವವು ಪಾಕಿಸ್ತಾನಿ ನೆಲದಿಂದ ಕಾರ್ಯ ಎಸಗುತ್ತಿರುವ ಭಯೋತ್ಪಾದಕ ಮತ್ತು ಉಗ್ರಗಾಮಿ ಗುಂಪುಗಳ ವಿರುದ್ಧನಿರ್ಣಾಯಕ ಮತ್ತು ಶಾಶ್ವತ’  ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ತಾಲಿಬಾನ್ ಜೊತೆ ಶಾಂತಿ ಮಾತುಕತೆಗೆ ಅನುವು ಮಾಡಿಕೊಡುವಂತೆ ಅವರ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆಇಮ್ರಾನ್ ಖಾನ್ ಅವರು ಖತಾರ್ ಏರ್ವೇಸ್ ವಾಣಿಜ್ಯ ವಿಮಾನದಲ್ಲಿ ಅಮೆರಿಕಕ್ಕೆ ಆಗಮಿಸಿದ್ದು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರಿ ಅಸದ್ ಮಜೀದ್ ಖಾನ್ ಅವರ ಅಧಿಕೃತ ನಿವಾಸದಲ್ಲಿ ತಂಗಿದರು. ಅಮೆರಿಕಕ್ಕೆ ೨೦೧೫ರಲ್ಲಿ ಅಧಿಕೃತ ಪ್ರವಾಸ ಮಾಡಿದ್ದ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರು ಅಮೆರಿಕಕ್ಕೆ ಭೇಟಿ ಮಾಡಿದ್ದ ಕೊನೆಯ ಪಾಕ್ ಪ್ರಧಾನಿಯಾಗಿದ್ದಾರೆಟ್ರಂಪ್ ಅವರ ಆಡಳಿತದ ಅವಧಿಯುದ್ದಕ್ಕೂ ಅಮೆರಿಕ ಮತ್ತು ಪಾಕಿಸ್ತಾನದ ಬಾಂಧವ್ಯ ಪ್ರಕ್ಷುಬ್ಧವಾಗಿತ್ತು. ಅಮೆರಿಕದ ಅಧ್ಯಕ್ಷರು ಬಹಿರಂಗವಾಗಿಯೇ ಪಾಕಿಸ್ತಾನವು ನಮಗೆಸುಳ್ಳುಗಳು ಮತ್ತು ವಂಚನೆಯ ಹೊರತಾಗಿ ಬೇರೇನನ್ನೂ ನೀಡಿಲ್ಲಎಂದು ಹೇಳಿ, ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿರುವುದಕ್ಕಾಗಿ ಭದ್ರತೆ ಮತ್ತು ಇತರ ನೆರವುಗಳನ್ನು ಅಮಾನತುಗೊಳಿಸಿದ್ದರು. ಆಫ್ಘಾನ್ ಶಾಂತಿ ಪ್ರಕ್ರಿಯೆ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿನ ವಿರುದ್ಧದ ಪಾಕಿಸ್ತಾನ ಸರ್ಕಾರದ ಕ್ರಮ ಮತ್ತು ಪಾಕಿಸ್ತಾನಕ್ಕೆ ಸೇನಾ ನೆರವಿನ ಪುನಾರಂಭವು ಖಾನ್ ಅವರ ಹಾಕಿ ಪ್ರವಾಸದ ಪ್ರಮುಖ ಅಂಶಗಳು ಎಂದು ಇಸ್ಲಾಮಾಬಾದಿನ ರಾಜತಾಂತ್ರಿಕ ಮೂಲಗಳು ಮುನ್ನ ತಿಳಿಸಿದ್ದವು. ಅಮೆರಿಕ ಮತ್ತು ಆಫ್ಘನ್ ತಾಲೀಬಾನ್ ನಡುವಣ ಮಾತುಕತೆಗಳು ನಿರ್ಣಾಯಕ ಹಂತಕ್ಕೆ ಪ್ರವೇಶಿಸಿದೆ ಎನ್ನಲಾಗಿರುವ ಹೊತ್ತಿನಲ್ಲೇ ಖಾನ್ ಅವರು ಅಮೆರಿಕಕ್ಕೆ ಭೇಟಿ ನೀಡಿದರು. ತಾಲೀಬಾನ್ ಜೊತೆಗೆ ಶಾಂತಿ ಮಾತುಕತೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪಾಕಿಸ್ತಾನ ನಡೆಸಿರುವ ಪ್ರಯತ್ನಗಳಿಗೆ ಮೆಚ್ಚುಗೆ ಲಭಿಸಿದೆ. ಜಮಾತ್ -ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದಕ್ಕಾಗಿ ಕೈಗೊಂಡಿರುವ ಕ್ರಮಗಳು ಭಾರತ ಮತ್ತು ಅಮೆರಿಕದ ಕಾಳಜಿಯತ್ತ  ಗಮನ ಹರಿಸಿರುವುದರ ದ್ಯೋತಕ ಎಂದು ಭಾವಿಸಿಲಾಗಿತ್ತು. ಪ್ರಧಾನಿಯಾಗುವುದಕ್ಕೆ ಮುನ್ನ ಖಾನ್ ಅವರು ಅಮೆರಿಕಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಮತ್ತು ಪಾಕಿಸ್ತಾನದಲ್ಲಿ ಅವರು ಗಮನಾರ್ಹ ಗಾತ್ರದಲ್ಲಿ ಬೆಂಬಲಿಗರನ್ನು ಹೊಂದಿದ್ದರು.
2019: ನವದೆಹಲಿ: ದೆಹಲಿಯ ಆಸ್ಪತ್ರೆಯಲ್ಲಿ ಹೃದಯಘಾತದಿಂದ  ಹಿಂದಿನ ದಿನ  ನಿಧನರಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ನಿಗಮಬೋಧ್ ಘಾಟ್ನಲ್ಲಿ  ಈದಿನ  ಮಧ್ಯಾಹ್ನ ನೆರವೇರಿತು. ಎಲ್ಲ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಗೌರವ ವ್ಯಕ್ತ ಪಡಿಸಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅಹ್ಮದ್ ಪಟೇಲ್ ಮತ್ತು ಮುಖ್ಯಮಂತ್ರಿಗಳಾದ ಅಶೋಕ ಗೆಹ್ಲೋಟ್ ಮತ್ತು ಕಮಲನಾಥ್ ಸೇರಿದಂತೆ ಹಲವಾರು ಮಂದಿ ಉನ್ನತ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಕಚೇರಿಯಲ್ಲಿ ದಿವಂಗತ ನಾಯಕಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದರು.  ‘ಅವರು ಒಬ್ಬ ಗೆಳತಿಯಾಗಿದ್ದರು.. ಅದಕ್ಕೂ ಹೆಚ್ಚಾಗಿ ಹಿರಿಯ ಸಹೋದರಿಯಂತಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟಎಂದು ಸೋನಿಯಾಗಾಂಧಿ ಅವರು ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಇದಕ್ಕೆ ಮುನ್ನ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್ ಅವರು ದೀಕ್ಷಿತ್ ಅವರ ನಿವಾಸಕ್ಕೆ ತೆರಳಿ ಹಿರಿಯ ನಾಯಕರಿಗೆ ತಮ್ಮ ಭಾಷ್ಪಾಂಜಲಿ ಸಲ್ಲಿಸಿದ್ದರು.  ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದ ದೀಕ್ಷಿತ್ ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ೧೯೯೮ರಿಂದ ದೀಕ್ಷಿತ್ ಅವರಿಗೆ ಕಾಂಗ್ರೆಸ್ ಕಚೇರಿಯೇ ರಾಜಕೀಯದ ಕೇಂದ್ರ ಕಚೇರಿಯಾಗಿತ್ತು. ಕಾಂಗ್ರೆಸ್ ಕೇಂದ್ರ ಕಚೇರಿಯ ಬಳಿಕ ಪಾರ್ಥಿವ ಶರೀರವನ್ನು ನಿಗಮ್ ಬೋಧ್ ಘಾಟ್ಗೆ ಒಯ್ಯುವುದಕ್ಕೆ ಮುನ್ನ ಎಐಸಿಸಿ ಕಚೇರಿಗೆ ತರಲಾಯಿತು. ಅಲ್ಲಿ ಮನಮೋಹನ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ತಮ್ಮ ಗೌರವ ಸಲ್ಲಿಸಿದ ಬಳಿಕ ಅಂತಿಮ ಯಾತ್ರೆ ನಡೆಯಿತು. ನಿಜಾಮುದ್ದೀನ್ ನಿವಾಸದಿಂದ ದೀಕ್ಷಿತ್ ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕಚೇರಿಗೆ ತಂದಾಗ ತಮ್ಮ ನಾಯಕಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಜಡಿಮಳೆಯನ್ನೂ ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಧಾವಿಸಿದರು. ಅಂತಿಮಯಾತ್ರೆಯಲ್ಲಿ ಪಾಲ್ಗೊಂಡ ಹಾಗೂ ರಸ್ತೆಯ ಇಕ್ಕೆಲಗಳಲ್ಲೂ ಸೇರಿದ್ದ ಬೆಂಬಗಲಿಗರುಜಬ್ ತಕ್ ಸೂರಜ್ ಚಾಂದ್ ರಹೇಗಾ ಶೀಲಾ ಜಿ ಕಾ ನಾಮ್ ರಹೇಗಾಮಂತ್ರ ಪಠಿಸಿದರು. ಸೋನಿಯಾಗಾಂಧಿ ಮತ್ತು ಪ್ರಿಯಾಂಕಾ ಸೇರಿದಂತೆ ಹಲವು ಧುರೀಣರು ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರವೇ ದೀಕ್ಷಿತ್ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದರು.
2019: ನವದೆಹಲಿ: ಹತ್ತು ಮಂದಿಯ ಸಾವು ಮತ್ತು ೨೪ ಮಂದಿ ಗಾಯಗೊಳ್ಳಲು ಕಾರಣವಾದ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಉಂಭಾ ಗ್ರಾಮದ  ಆಘಾತಕಾರಿ ಗುಂಡಿನ ಘರ್ಷಣೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅವರು  ಪರಸ್ಪರ ಟೀಕಾ ಪ್ರಹಾರ ಮಾಡಿಕೊಂಡರು. ಯೋಗಿ ಆದಿತ್ಯನಾಥ್ ಅವರುಘಟನೆಗೆ ವಿರೋಧಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಕಾರಣಎಂಬುದಾಗಿ ದೂರಿದರು.  ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ಸರಣಿ ಟ್ವೀಟ್ಗಳ ಮೂಲಕ ಮುಖ್ಯಮಂತ್ರಿ ಮತ್ತು ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಿಂದಿಯಲ್ಲಿ ಟ್ವೀಟ್ ಮಾಡಿದ ಪ್ರಿಯಾಂಕಾ ಅವರು ನ್ಯಾಯವನ್ನು ಪ್ರೀತಿಸುವ ಕಾಂಗ್ರೆಸ್ಸಿನ ಸಹಸ್ರಾರು ಮಂದಿ ಉಂಭಾ ಸಂತ್ತಸ್ಥರ ಬೆಂಬಲಕ್ಕೆ ಬಂದ ಬಳಿಕವಷ್ಟೇ ಉತ್ತರ ಪ್ರದೇಶ ಸರ್ಕಾರಕ್ಕೆ ಗಂಭೀರ ಘಟನೆ ಅರಿವಿಗೆ ಬಂದಿದೆಈದಿನ ಸರ್ಕಾರ ಮಾಡಿದ ಪ್ರಕಟಣೆ ತತ್ ಕ್ಷಣ ಜಾರಿಗೆ ಬರಬೇಕು. ಬುಡಕಟ್ಟು ಜನರಿಗೆ ಭೂಮಿಯ ಮಾಲೀಕತ್ವ ಲಭಿಸಬೇಕು ಮತ್ತು ಅತ್ಯಂತ ಮುಖ್ಯವಾಗಿ ಗ್ರಾಮದ ಜನರಿಗೆ ರಕ್ಷಣೆ ಸಿಗಬೇಕುಎಂದು ಆಗ್ರಹಿಸಿದರು. ಸ್ವಲ್ಪ ಹೊತ್ತಿನ ಬಳಿಕ ಮಾಡಿದ ಎರಡನೇ ಟ್ವೀಟ್ನಲ್ಲಿ ಮುಖ್ಯಮಂತ್ರಿಯವರುತಡವಾಗಿಭೇಟಿ ಮಾಡಿದ್ದಕ್ಕಾಗಿ ಪ್ರಿಯಾಂಕಾ ತೀವ್ರವಾಗಿ ಟೀಕಿಸಿದರು.  ‘ಮುಖ್ಯಮಂತ್ರಿಯವರ ಸೋನಭದ್ರ ಭೇಟಿಯನ್ನು ನಾನು ಸ್ವಾಗತಿಸುತ್ತೇನೆ ಮತ್ತು ಗೌರವಿಸುತ್ತೇನೆ. ತಡವಾಗಿದ್ದರೂ, ಸಂತ್ರಸ್ಥರ ಜೊತೆಗೆ ನಿಲ್ಲಬೇಕಾದದ್ದು ಸರ್ಕಾರದ ಕರ್ತವ್ಯ. ನಿಮ್ಮ ಕರ್ತವ್ಯವನ್ನು ತಿಳಿದುಕೊಂಡದ್ದು ಒಳ್ಳೆಯದು. ಉಂಭಾ ಗ್ರಾಮವು ದೀರ್ಘ ಕಾಲದಿಂದ ನ್ಯಾಯಕ್ಕಾಗಿ ಕಾಯುತ್ತಿದೆ. ಉಂಭಾದ ಸಂತ್ರಸ್ಥರಿಗೆ ನ್ಯಾಯಲಭಿಸುತ್ತದೆ ಮತ್ತು ಐದು ಬೇಡಿಕೆಗಳು ಈಡೇರಿಸಲ್ಪಡುತ್ತವೆ ಎಂದು ನಿರೀಕ್ಷಿಸುತ್ತೇನೆಎಂದು ಪ್ರಿಯಾಂಕಾ ತಮ್ಮ ಎರಡನೇ ಟ್ವೀಟಿನಲ್ಲಿ ಬರೆದರು. ಗ್ರಾಮದ ಮುಖ್ಯಸ್ಥ ಯಜ್ಞದತ್ತ ಮತ್ತು ೨೦೦ ಮಂದಿ ನಿಕಟವರ್ತಿಗಳಿಂದ ರೈತರ ಗುಂಪಿನ ಮೇಲೆ ನಡೆದ ೩೦ ನಿಮಿಷಗಳ ಗುಂಡಿನ ದಾಳಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ಹತ್ಯಾಕಾಂಡಗಳಲ್ಲಿ ಒಂದು ಎಂಬುದಾಗಿ ಪರಿಗಣಿತವಾಗಿದೆ. ಬುಡಕಟ್ಟು ರೈತರು ದಶಕಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶೂಟೌಟ್ ಘಟನೆ ಸಂಭವಿಸಿತ್ತು. ಗ್ರಾಮದ ಮುಖ್ಯಸ್ಥ ಸಮಾಜವಾದಿ ಪಕ್ಷದ ಸದಸ್ಯನಾಗಿದ್ದು, ಆತನ ಸಹೋದರ ಮಾಯಾವತಿ ಅವರ ಬಹುಜನ ಸಮಾಜ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎಂದು ಆಪಾದಿಸಿದ ಯೋಗಿ ಆದಿತ್ಯನಾಥ್ ಅವರುಗುಂಡಿನ ಹಾರಾಟದ ಘಟನೆಯು ದೊಡ್ಡ ರಾಜಕೀಯ ಸಂಚು. ಇದರ ಅಡಿಪಾಯವನ್ನು ಕಾಂಗ್ರೆಸ್ ಪಕ್ಷವು ದಶಕಗಳಷ್ಟು ಹಿಂದೆಯೇ ಹಾಕಿತ್ತುಎಂದು ದೂರಿದರು. ೧೯೫೫ರಲ್ಲಿ ಭೂಮಿಯನ್ನು ಟ್ರಸ್ಟ್ ಒಂದಕ್ಕೆ ವರ್ಗಾಯಿಸುವ ಮೂಲಕ ರಾಜಕೀಯ ಸಂಚಿಗೆ ಅಡಿಪಾಯ ಹಾಕಲಾಗಿತ್ತು. ೧೯೮೯ರಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಸರ್ಕಾರವು ಭೂಮಿಯನ್ನು ಸದಸ್ಯರಿಗೆ ಮರುವರ್ಗಾವಣೆ ಮಾಡಿತ್ತುಎಂದು ಮುಖ್ಯಮಂತ್ರಿ ನುಡಿದರುಭೂಮಿ ವರ್ಗಾವಣೆಯು ಭೂಮಿಯ ಅತಿಕ್ರಮಣ ಯತ್ನವಾಗಿದ್ದು ಇದು ಕಾಂಗೆಸ್ ಪಕ್ಷದ ದಲಿತವಿರೋಧಿ, ಅರಣ್ಯವಾಸಿ ವಿರೋಧಿ ಮತ್ತು ಬುಡಕಟ್ಟು ಜನ ವಿರೋಧಿ ಮುಖವನ್ನು ಅನಾವರಣಗೊಳಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.  ಗುಂಡು ಹಾರಾಟದ ಘಟನೆಯಲ್ಲಿ ಮೃತರಾದವರ ಕುಟುಂಬಗಳನ್ನು ಭೇಟಿ ಮಾಡಲು ಯತ್ನಿಸಿದಾಗ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಪೊಲೀಸರು ತಡೆದು ದಿಗ್ಬಂಧನಕ್ಕೆ ಒಳಪಡಿಸಿದ್ದರು. ಪ್ರಿಯಾಂಕಾ ಅವರನ್ನು ತಡೆದ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಯಿತು. ಕೆಲವು ಸಂತ್ರಸ್ಥ ಕುಟುಂಬಗಳ ಸದಸ್ಯರಿಗೆ ಪ್ರಿಯಾಂಕಾ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ ಬಳಿಕ ಪ್ರಿಯಾಂಕಾ ತಡೆ ಬಿಕ್ಕಟ್ಟು ಇತ್ಯರ್ಥಗೊಂಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಈದಿನ ಲಕ್ನೋದಿಂದ ಸೋನಭದ್ರಕ್ಕೆ ವಿಮಾನ ಮೂಲಕ ಹೋಗಿ ಅಲ್ಲಿಂದ ಉಂಭಾ ಗ್ರಾ,ಮಕ್ಕೆ ರಸ್ತೆಯ ಮೂಲಕ ತೆರಳಿ ಸಂತ್ರಸ್ಥರ ಕುಟುಂಬಗಳನ್ನು ಭೇಟಿ ಮಾಡಿದರು. ಶೂಟೌಟ್ ಘಟನೆಯ ಮುಖ್ಯ ಆರೋಪಿಯಾಗಿರುವ ಯಜ್ಞದತ್ತ ಸಮಾಜವಾದಿ ಪಕ್ಷದ ಸದಸ್ಯ ಎಂದು ಅವರು ಹೇಳಿದರು. ಮುಖ್ಯಮಂತ್ರಿಯವರು ಉಂಭಾ ಗ್ರಾಮದಲ್ಲಿ ಗುಂಡೇಟಿನಿಂದ ಹತರಾದ ೧೦ ಮಂದಿಯ ಉತ್ತರಾಧಿಕಾರಿಗಳಿಗೆ ತಲಾ ೧೮.೫೦ ಲಕ್ಷ ರೂಪಾಯಿಗಳ ಪರಿಹಾರ ಮುತ್ತು ಗಾಯಾಳುಗಳಿಗೆ ತಲಾ . ಲಕ್ಷ ರೂಪಾಯಿಗಳ ಪರಿಹಾರ ಪ್ರಕಟಿಸಿದರು. ಸರ್ಕಾರವು ಮುನ್ನ ಕ್ರಮವಾಗಿ ಲಕ್ಷ ರೂಪಾಯಿ ಮತ್ತು ೫೦,೦೦೦ ರೂಪಾಯಿಗಳ ಪರಿಹಾರ ಘೋಷಿಸಿತ್ತು. ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿ ಗ್ರಾಮದ ಮುಖ್ಯಸ್ಥ ಯಜ್ಞದತ್ತ ಮತ್ತು ಬೆಂಬಲಿಗರು ಗುಂಡು ಹಾರಿಸಿದರು ಎನ್ನಲಾಗಿದ್ದು, ಗೊಂಡ್ ಬುಡಕಟ್ಟು ಸಮುದಾಯದ ೧೦ ಮಂದಿ ಸಾವನ್ನಪ್ಪಿದ್ದರು. ಆರೋಪಿಗಳ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ’ಯಾರನ್ನೂ ಬಿಡಲಾಗುವುದಿಲ್ಲ. ಪ್ರತಿಯೊಬ್ಬ ಆರೋಪಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದುಎಂದು ಅವರು ನುಡಿದರು.
2019: ತಿರುನಂತಪುರಂಬಾಹ್ಯಾಕಾಶ ಯೋಜನೆಗಳಲ್ಲಿನ ವಿವಿಧ ತಂತ್ರಜ್ಞಾನ ಮತ್ತು ಪರಿಕರ ಪೂರೈಕೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಸುಸಜ್ಜಿತ ಸ್ಪೇಸ್ಸಿಸ್ಟಮ್ಸ್ ಪಾರ್ಕ್ಅನ್ನು ಕೇರಳದಲ್ಲಿ ಸ್ಥಾಪಿಸಲಾಗುತ್ತಿದೆತಿರುವನಂತಪುರದಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನೊಳಗೊಂಡ ದೇಶದ ಮೊದಲ ಸ್ಪೇಸ್ ಸಿಸ್ಟಮ್ಸ್ ಪಾರ್ಕ್ ಸ್ಥಾಪಿಸಲು ಕೇರಳ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಐಟಿ ಕಂಪನಿಗಳಿಗಾಗಿ ಕಾದಿರಿಸಿರುವ ಟೆಕ್ನೋ ಸಿಟಿ ಕ್ಯಾಂಪಸ್ನಲ್ಲಿ ನೂತನ ಪಾರ್ಕ್ ನಿರ್ಮಾಣವಾಗಲಿದೆಇಸ್ರೋದ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ ಸಹಕಾರದೊಂದಿಗೆ, ಸ್ಪೇಸ್ಪಾರ್ಕ್ನಲ್ಲಿ ಎಪಿಜೆ ಅಬ್ದುಲ್ ಕಲಾಂ ನಾಲೆಜ್ ಸೆಂಟರ್ ಮತ್ತು ಸ್ಪೇಸ್ ಮ್ಯೂಸಿಯಂ ನಿರ್ಮಾಣವಾಗಲಿದೆ. ಅದಕ್ಕಾಗಿ 20 ಎಕರೆ ಭೂಮಿಯನ್ನು ಸರ್ಕಾರ ಕಾದಿರಿಸಲಿದೆ. ಕೇರಳ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ಯೋಜನೆಯನ್ನು ಜಾರಿಗೊಳಿಸಲಿದೆ
 ಎಂದು ಸರ್ಕಾರಿ ಮೂಲಗಳು ತಿಳಿಸಿದವು.

2018: ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಚಂಡೀಗಢದಿಂದ ಲೇಹ್ ಗೆ ಹಾರಾಟ ನಡೆಸುತ್ತಿದ್ದಾಗ ಅಪಘಾತಕ್ಕೆ ಈಡಾಗಿದ್ದ ಭಾರತೀಯ ವಾಯುಪಡೆಯ ಎಎನ್-೧೨ ವಿಮಾನದಲ್ಲಿದ್ದ ಯೋಧರ ಪೈಕಿ ಒಬ್ಬ ಯೋಧನ ಶವವನ್ನು ಪರ್ವತಾರೋಹಣ ತಂಡವೊಂದು ೫೦ ವರ್ಷಗಳ ಬಳಿಕ ಪತ್ತೆ ಹಚ್ಚಿದೆ ಎಂದು ವರದಿಗಳು ತಿಳಿಸಿದವು. ಹಿಂದಿನ ಸೋವಿಯತ್ ಒಕ್ಕೂಟ ನಿರ್ಮಿಸಿದ್ದ ಈ ವಿಮಾನವು ೧೯೬೮ರ ಫೆಬ್ರುವರಿ ೭ರಂದು ೯೮ ಮಂದಿ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯೊಂದಿಗೆ ಚಂಡೀಗಢದಿಂದ ಲೇಹ್ ಗೆ ಪ್ರಯಾಣ ಮಾಡುತ್ತಿದ್ದಾಗ ಕಣ್ಮರೆಯಾಗಿತ್ತು. ಪ್ರತಿಕೂಲ ಹವಾಮಾನದ ಕಾರಣ ವಿಮಾನವನ್ನು ಹಿಂದಕ್ಕೆ ತಿರುಗಿಸಲು ಪೈಲಟ್ ನಿರ್ಧರಿಸಿದ ಬಳಿಕ ಈ ಘಟನೆ ಸಂಭವಿಸಿತ್ತು. ವಿಮಾನ ಕೊನೆಯ ಬಾರಿಗೆ ರೇಡಿಯೋ ಸಂಪರ್ಕ ಮಾಡಿದಾಗ ಅದು ರೋಹ್ತಾಂಗ್ ಕಣಿವೆಯ ಮೇಲಿತ್ತು ಎಂದು ವರದಿಗಳು ಹೇಳಿದ್ದವು.  ಜುಲೈ ೧-೧೫ರ ನಡುವಣ ಅವಧಿಯಲ್ಲಿ ಚಂದ್ರಭಾಗ-೧೩ ಶಿಖರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದ ಪರ್ವತಾರೋಹಿಗಳ ತಂಡಕ್ಕೆ ಜೀರ್ಣಾವಸ್ಥೆಯಲ್ಲಿದ್ದ ಯೋಧನ ಶವ ಕಂಡು ಬಂದಿತು ಎಂದು ವರದಿ ಹೇಳಿದೆ. ಅವಶೇಷಗಳು ಸಮುದ್ರ ಮಟ್ಟದಿಂದ ೬,೨೦೦ ಮೀಟರ್ ಎತ್ತರದಲ್ಲಿನ ಧಾಕಾ ಗ್ಲೇಸಿಯರ್ ತಳ ಶಿಬಿರದಲ್ಲಿ ಪತ್ತೆಯಾದವು.  ‘ವಿಮಾನದ ಅವಶೇಷಗಳು ಮತ್ತು ಜೀರ್ಣಾವಸ್ಥೆಯಲ್ಲಿದ್ದ ಯೋಧನ ಶವ ಧಾಕಾ ಗ್ಲೇಸಿಯರ್ ನಲ್ಲಿ ಕಂಡಾಗ ನಮಗೆ ದಿಗ್ಭ್ರಮೆಯಾಯಿತು. ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದು ಪರ್ವತಾರೋಹಣ ತಂಡದ ನಾಯಕ ರಾಜೀವ್ ರಾವತ್ ಹೇಳಿದರು.  ‘ಮೊದಲು ವಿಮಾನದ ಅವಶೇಷಗಳು ನಮಗೆ ಕಂಡು ಬಂದವು. ಬಳಿಕ ತಲೆ ಕೆಳಗಾಗಿ ಬಿದ್ದಿದ್ದ ಯೋಧನ ಜೀರ್ಣಾವಸ್ಥೆಯಲ್ಲಿದ್ದ ಶವ ಪತ್ತೆಯಾಯಿತು. ಅಪಘಾತವಾಗಿ ೫೦ ವರ್ಷಗಳು ಸಂಭವಿಸಿದ್ದರೂ ಕೈ ಮತ್ತು ಕೂದಲು ಒಂದಿಷ್ಟೂ ಶಿಥಿಲಗೊಂಡಿರಲಿಲ್ಲ ಎಂದು ಅವರು ನುಡಿದರು.  ಭಗ್ನ ವಿಮಾನದ ಅವಶೇಷ ಜುಲೈ ೧೧ರಂದು ಪತ್ತೆಯಾಯಿತು. ಆದರೆ ತಂಡವು ಜುಲೈ ೧೫ರಂದು ಕೆಳಕ್ಕೆ ತಲುಪಿದ ಬಳಿಕ ಸೇನೆಗೆ ತಿಳಿಸಲಾಯಿತು. ನಾವು ಏನನ್ನೂ ಮುಟ್ಟಲಿಲ್ಲ. ಆದರೆ ಚಿತ್ರಗಳನ್ನು ತೆಗೆದುಕೊಂಡೆವು ಮತ್ತು ವಿಡಿಯೋ ಮಾಡಿ ಅದನ್ನು ಸೇನಾ ಅಧಿಕಾರಿಗಳಿಗೆ ಕಳುಹಿಸಿದೆವು ಎಂದು ಅವರು ಹೇಳಿದರು. ಹಿಮಪಾತ ಕಡಿಮೆಯಾದದ್ದರಿಂದ ದಟ್ಟ ಹಿಮದ ಅಡಿಯಲ್ಲಿ ಹುಗಿಯಲ್ಪಟ್ಟಿದ್ದ ಅವಶೇಷಗಳು ಮೇಲಕ್ಕೆ ಕಾಣಿಸಿಕೊಂಡಿರಬಹುದು. ವಿಮಾನದ ಅವಶೇಷಗಳು ಮತ್ತು ಶವಗಳು ೨-೨.೫ ಕಿಮೀ ವ್ಯಾಪ್ತಿಯಲ್ಲಿ ಬಿದ್ದಿರಬಹುದು ಎಂದು ಅವರು ನುಡಿದರು. ಮನಾಲಿಯ ಎಬಿವಿ ಪರ್ವತಾರೋಹಣ ಮತ್ತು ಸಂಬಂಧಿತ ಕ್ರೀಡಾ ಸಂಸ್ಥೆಯ ಪರ್ವತಾರೋಹಿಗಳ ತಂಡವೊಂದು ೨೦೦೩ರಲ್ಲಿ ವಿಮಾನದ ಅವಶೇಷ ಮತ್ತು ಯೋಧನೊಬ್ಬನ ಶವವನ್ನು ಪತ್ತೆ ಹಚ್ಚಿತ್ತು. ಬಳಿಕ ಆ ಯೋಧನನ್ನು ಸಿಪಾಯಿ ಬೇಲಿ ರಾಮ್ ಎಂಬುದಾಗಿ ಗುರುತಿಸಲಾಗಿತ್ತು.  ೨೦೧೭ರಲ್ಲಿ ಸೇನೆಯು ಇನ್ನೂ ಮೂರು ಶವಗಳನ್ನು ಪತ್ತೆ ಹಚ್ಚಿತ್ತು. ಈ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು ೫ ಶವಗಳು ಮಾತ್ರ ಪತ್ತೆಯಾದಂತಾಗಿದೆ.

2018: ನವದೆಹಲಿ: ಸ್ಯಾನಿಟರಿ ನ್ಯಾಪ್ ಕಿನ್‌ಗಳು ಸೇರಿದಂತೆ ಹಲವಾರು ಗ್ರಾಹಕ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯಿಂದ (ಜಿ ಎಸ್ ಟಿ) ವಿನಾಯ್ತಿ ನೀಡುವ ಹಾಗೂ 50ಕ್ಕೂ ಹೆಚ್ಚಿನ ಗ್ರಾಹಕ ಬಳಕೆಯ ವಸ್ತುಗಳಿಗೆ ತೆರಿಗೆ ಇಳಿಸುವ ಮಹತ್ವದ ನಿರ್ಧಾರವನ್ನು ಈದಿನ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಂಡಳಿಯ ಸಭೆ ಕೈಗೊಂಡಿತು. ಜಿಎಸ್ ಟಿ ಮಂಡಳಿ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವ ಪೀಯೂಶ ಗೋಯೆಲ್ ಅವರು ಈ ವಿಚಾರವನ್ನು ತಿಳಿಸಿದರು.  ಒಂದು ವರ್ಷ ಹರೆಯದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಪ್ರಕಾರ ಸ್ಯಾನಿಟರಿ ನ್ಯಾಪ್ ಕಿನ್ ಗಳಿಗೆ ಶೇಕಡಾ ೧೨ರಷ್ಟು ತೆರಿಗೆ ವಿಧಿಸಲಾಗಿತ್ತು. ಇದು ರಾಷ್ಟ್ರಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನ್ಯಾಪ್ ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸುವಂತೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.  ೨೮ನೇ ಜಿಎಸ್ ಟಿ ಮಂಡಳಿ ಸಭೆಯ ಬಳಿಕ ವರದಿಗಾರರ ಜೊತೆ ಮಾತನಾಡಿದ ಸಚಿವರು ಬಿದಿರಿನ ಮೇಲಿನ ತೆರಿಗೆಯನ್ನೂ ಶೇಕಡಾ ೧೨ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.  ಸ್ಯಾನಿಟರಿ ನ್ಯಾಪ್ ಕಿನ್ ಗಳ ಉತ್ಪಾದನೆ ವೇಳೆ ಪ್ರವೇಶ ತೆರಿಗೆ ವಿಧಿಸಿದರೂ, ಅದನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು  ಇದರ ಅರ್ಥ.  ನ್ಯಾಪ್ ಕಿನ್ ಗಳನ್ನು ತೆರಿಗೆ ಮುಕ್ತ ಗೊಳಿಸಿರುವುದರ ಜೊತೆಗೆ ಇತರ ಹಲವಾರು ವಸ್ತುಗಳಿಗೂ ತೆರಿಗೆ ವಿನಾಯ್ತಿ ಹಾಗೂ ರಿಯಾಯ್ತಿಗಳನ್ನು ನೀಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ ಮಂಡಲಿಯು ಗ್ರಾಹಕರ ಮೇಲಿನ ತೆರಿಗೆ ಹೊರೆಯನ್ನು ತಗ್ಗಿಸಿದೆ ಎಂದು ಸಚಿವ ಪೀಯೂಶ್ ಗೋಯೆಲ್ ಹೇಳಿದರು.  ಜಿಎಸ್ ಟಿ ತೆರಿಗೆ ವಿನಾಯ್ತಿ ಪಡೆದ ಉತ್ಪನ್ನಗಳಲ್ಲಿ ಕಲ್ಲು, ಮಾರ್ಬಲ್ ಅಥವಾ ಮರದಿಂದ ಮಾಡಲಾದ ದೇವರ ವಿಗ್ರಹಗಳು, ಅತ್ಯಮೂಲ್ಯ ಹರಳುಗಳು ಮತ್ತು ಸಾಲ್ ಎಲೆಗಳನ್ನು ಬಳಸದ ರಾಖಿಗಳು ಸೇರಿವೆ. ರಿಫ್ರಿಜರೇಟರ್ (ಫ್ರಿಜ್), 25 ಅಂಗುಲವರೆಗಿನ ಸಣ್ಣ ಪರದೆಯ ಟೆಲಿವಿಷನ್ ಗಳು, ಲಿಥಿಯಂ ಬ್ಯಾಟರಿಗಳು, ಅಯಾನ್ ಬ್ಯಾಟರಿಗಳು, ವ್ಯಾಕ್ಯೂಂ ಕ್ಲೀನರ್ ಗಳು, ಫುಡ್ ಗ್ರೈಂಡರುಗಳು, ಮಿಕ್ಸರ್‌ಗಳು, ಸ್ಟೋರೇಜ್ ವಾಟರ್ ಹೀಟರುಗಳು, ಹೇರ್ ಡ್ರೈಯರುಗಳು, ಪೆಯಿಂಟ್, ವಾರ್ನಿಶ್ಗಳು, ವಾಟರ್ ಕೂಲರುಗಳು, ಸುಗಂಧ ದ್ರವ್ಯಗಳು, ಟಾಯ್ಲೆಟ್ ಸ್ಪ್ರೇಗಳು, ಸೌಂದರ್‍ಯ ವರ್ಧಕಗಳ ತೆರಿಗೆಯನ್ನು ಶೇಕಡಾ ೨೮ರಿಂದ ಶೇಕಡಾ ೧೮ಕ್ಕೆ ಇಳಿಸಲಾಗಿದೆ. ೧೦೦೦ ರೂಪಾಯಿಗಳವರೆಗಿನ ಪಾದರಕ್ಷೆಗಳ ಜಿಎಸ್ಟಿಯನ್ನು ಶೇಕಡಾ ೫ರಷ್ಟು, ಹ್ಯಾಂಡ್ ಬ್ಯಾಗುಗಳು, ಚಿನ್ನಾಭರಣ ಬಾಕ್ಸ್ ಗಳು, ಗಾಜಿನ ಕಲಾಕೃತಿಗಳು, ಆರ್ನಮೆಂಟಲ್ ಫ್ರೇಮಿನ ಕನ್ನಡಿಗಳ ತೆರಿಗೆಯನ್ನು ಶೇಕಡಾ ೧೨ಕ್ಕೆ ಇಳಿಸಲಾಯಿತು. ಪರಿಷ್ಕೃತ ತೆರಿಗೆ ದರಗಳು ಜುಲೈ ೨೭ರಿಂದ ಜಾರಿಗೆ ಬರಲಿವೆ ಎಂದು ಸಚಿವರು ಹೇಳಿದರು.

2018: ಶಹಜಾನ್ ಪುರ (ಉ.ಪ್ರ): ಸಂಸತ್ತಿನಲ್ಲಿ ತಮಗೆ ಎದುರಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ
’ಅನಪೇಕ್ಷಿತ ಅಪ್ಪುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬಿಜೆಪಿ ವಿರುದ್ಧ ಹಲವಾರ ಪಕ್ಷಗಳು ಒಂದಾಗುತ್ತಿರುವುದು ’ಕಮಲವು ಅರಳಲು ಇನ್ನಷ್ಟು ನೆರವಾಗುವುದು ಎಂದು ಅವರು ಹೇಳಿದರು.  ಹಿಂದಿನ ದಿನ ಶುಕ್ರವಾರ ಲೋಕಸಭೆಯಲ್ಲಿ ತೆಲುಗುದೇಶಂ ಪಕ್ಷವು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲು ಹಲವಾರು ವಿರೋಧ ಪಕ್ಷಗಳು ಒಗ್ಗೂಡಿದ ಹಿನ್ನೆಲೆಯಲ್ಲಿ ಪ್ರಧಾನಿ ಈ ಟೀಕಾ ಪ್ರಹಾರ ಮಾಡಿದರು.  ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಶುಕ್ರವಾರ ಲೋಕಸಭೆಯಲ್ಲಿ ತೆಲುಗುದೇಶಂ ಪಕ್ಷವು (ಟಿಡಿಪಿ) ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ೧೨ ಗಂಟೆಗಳ ಚರ್ಚೆಯ ಬಳಿಕ ಪರಾಭವಗೊಳಿಸಿತ್ತು. ೨೦೧೯ರ ಮಹಾಚುನಾವಣೆಗೆ ವೇದಿಕೆ ಸಜ್ಜುಗೊಳಿಸಿದ ಈ ಅವಿಶ್ವಾಸ ನಿರ್ಣಯದ ಪರವಾಗಿ ೧೨೬ ಮತಗಳು ಬಂದರೆ, ಸರ್ಕಾರದ ಪರವಾಗಿ ೩೨೫ ಮತಗಳು ಬಂದಿದ್ದವು. ಸದನದಲ್ಲಿ ಹಾಜರಿದ್ದ ಯಾರೂ ಮತದಾನಕ್ಕೆ ಗೈರು ಹಾಜರಾಗಲಿಲ್ಲ.  ‘ಅವರ ಅವಿಶ್ವಾಸ ನಿರ್ಣಯಕ್ಕೆ ಕಾರಣಗಳೇನು ಎಂದು ನಾವು ಕೇಳಿದೆವು. ಅವರು ಉತ್ತರ ನೀಡಲು ವಿಫಲರಾದರು. ಅನಗತ್ಯ ಅಪ್ಪುಗೆ ನೀಡುವುದರೊಂದಿಗೆ ಈ ಅವಿಶ್ವಾಸ ಕೊನೆಗೊಂಡಿತು ಎಂದು ಮೋದಿ ಅವರು ರಾಹುಲ್ ಗಾಂಧಿ ಅಪ್ಪುಗೆಯನ್ನು ಉಲ್ಲೇಖಿಸುತ್ತಾ ಹೇಳಿದರು.  ಶಹಜಾನ್ ಪುರದಲ್ಲಿ ರೈತ ಕಲ್ಯಾಣ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ’ಅಲ್ಲಿ ಕೇವಲ ಒಂದು ದಳ (ರಾಜಕೀಯ ಪಕ್ಷ) ಇರಲಿಲ್ಲ. ದಳದ ಮೇಲೆ ದಳಗಳಿದ್ದವು ಪರಿಣಾಮವಾಗಿ ’ದಳ ದಳಗಳಾಗಿ ಅಂತಿಮವಾಗಿ ’ಕಮಲ (ಬಿಜೆಪಿಯ ಚುನಾವಣಾ ಚಿಹ್ನೆ) ಅರಳಲಿದೆ ಎಂದು ನುಡಿದರು.  ಹಲವಾರು ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗುತ್ತಿರುವುದು ಒಂದು ಅವಕಾಶವಾಗಲಿದೆ ಎಂದು ಅವರು ಹೇಳಿದರು.  ವಿರೋಧ ಪಕ್ಷಗಳ ಮೇಲೆ ಪ್ರಹಾರ ನಡೆಸಿದ ಮೋದಿ, ’ಅವರು ಪ್ರಧಾನಿ ಕುರ್ಚಿಗಾಗಿ ಬಡವರು, ಯುವಕರು, ರೈತರನ್ನು ನಿರ್ಲಕ್ಷಿಸಿ ಓಡುತ್ತಿದ್ದಾರೆ ಎಂದು ಟೀಕಿಸಿದರು.  ಒಂದು ದಳವನ್ನು (ಪಕ್ಷ) ಇನ್ನೊಂದು ದಳದ ಜೊತೆಗೆ ಸೇರಿಸಿದರೆ ಅದು ’ದಳ ದಳವಾಗುತ್ತದೆ ಹೀಗೆ ಆಗುವುದು ’ಕಮಲ ಅರಳಲು ಅನುಕೂಲಕರ ಎಂದು ಪ್ರಧಾನಿ ನುಡಿದರು.  ‘ಲೋಕಸಭೆಯಲ್ಲಿ ಆದ ಘಟನಾವಳಿ ಬಗ್ಗೆ ನಿಮಗೆ ತೃಪ್ತಿ ಇದೆಯೇ ಎಂದು ಜನತೆಯನ್ನು ಪ್ರಶ್ನಿಸಿದ ಮೋದಿ ’ವಿರೋಧ ಪಕ್ಷಗಳಿಗೆ ಪ್ರಧಾನಿ ಕುರ್ಚಿಯ ಮೇಲಷ್ಟೇ ಕಣ್ಣಿದೆ ಎಂದು ಟೀಕಿಸಿದರು.  ‘ಲೋಕಸಭೆಯಲ್ಲಿ ನಿನ್ನೆ ಏನಾಯಿತೋ ಅದರ ಬಗ್ಗೆ ನಿಮಗೆ ತೃಪ್ತಿ ಇದೆಯೇ? ಯಾರು ತಪ್ಪು ಮಾಡಿದ್ದಾರೆ ಎಂದು ನಿಮಗೆ ಗೊತ್ತಾಗಿದೆಯೇ? ಅವರಿಗೆ ಬಡವರು ಮತ್ತು ರಾಷ್ಟ್ರ ಕಾಣುತ್ತಿಲ್ಲ, ಆದರೆ ಅವರ ಕಣ್ಣುಗಳು ಪ್ರಧಾನಿ ಕುರ್ಚಿಯ ಮೇಲೆ ಮಾತ್ರವೇ ಇವೆ ಎಂದು ಪ್ರಧಾನಿ ನುಡಿದರು.  ‘ನಾನು ಏನಾದರೂ ತಪ್ಪು ಮಾಡಿದ್ದೇನೆಯೇ? ನಾನು ಕೇವಲ ಬಡವರು ಮತ್ತು ರಾಷ್ಟ್ರಕ್ಕಾಗಿ ಶ್ರಮಿಸುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಇದೇ ನನ್ನ ಅಪರಾಧವಾಗಿದೆ ಎಂದು ಮೋದಿ ಹೇಳಿದರು. ಹಿಂದಿನ ಸರ್ಕಾರಗಳಿಗೆ ರೈತರಿಗೆ ನೆರವಾಗುವ ಇಚ್ಛೆ ಇರಲಿಲ್ಲ ಎಂದು ಆಪಾದಿಸಿದ ಪ್ರಧಾನಿ, ರೈತರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿದರು ಮತ್ತು ಈ ಹಿಂದೆ ಆಡಳಿತ ನಡೆಸಿದ ಪಕ್ಷಗಳಿಗೆ ರೈತ ಪರ ಗುರಿ ಇರಲಿಲ್ಲ ಎಂದು ಟೀಕಿಸಿದರು.  ಇದೇ ಮೊತ್ತ ಮೊದಲ ಬಾರಿಗೆ ಸರ್ಕಾರವು ಡಿಸೆಂಬರ್ ೧ರಿಂದ ಗಿರಣಿಗಳಿಗೆ ಕಾಕಂಬಿಯಿಂದ ಇಥನಾಲ್ ಉತ್ಪಾದನೆಗೆ ಮತ್ತು ಕಬ್ಬಿನ ರಸ ಉತ್ಪಾದನೆಗೆ ಅವಕಾಶ ನೀಡಲು ನಿರ್ಧರಿಸಿದೆ ಎಂದು ಪ್ರಧಾನಿ ಹೇಳಿದರು.  ಕಳೆದ ವಾರ ಅಜಂಗಢ, ಮಿರ್ಜಾಪುರ ಮತ್ತು ವಾರಾಣಸಿಯಲ್ಲಿ ಮತದಾರರನ್ನು ಭೇಟಿ ಮಾಡಿದ್ದ ಮೋದಿ ಈದಿನ ಅತಿದೊಡ್ಡ ಸಗಟು ಧಾನ್ಯ ಮಾರುಕಟ್ಟೆ ಹಾಗೂ ಲೋಕಸಭೆಗೆ ೮೦ ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಯುವ ಅತಿ ದೊಡ್ಡ ಜಿಲೆಯಾದ ಶಹಜಾನ್ ಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.  ಮೋದಿ ಅವರು ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ರಾಜ್ಯಕ್ಕೆ ನೀಡಿರುವ ಮೂರನೇ ಭೇಟಿ ಇದಾಗಿದ್ದು, ಹರ್ದೋಯಿ, ಲಖೀಂಪುರ, ಖೇರಿ, ಪಿಲಿಭಿಟ್, ಸೀತಾಪುರ, ಬರೇಲಿ ಮತ್ತು ಬದೌನ್ ಇತ್ಯಾದಿ ಸಮೀಪದ ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ರೈತರು ಸಭೆಗೆ ಆಗಮಿಸಿದ್ದರು.  ತೆಲುಗುದೇಶಂ ಪಕ್ಷವು (ಟಿಡಿಪಿ) ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ತಮ್ಮ ಪಕ್ಷವನ್ನು ವಿಜಯದೆಡೆಗೆ ಮುನ್ನಡೆಸಿದ ಬಳಿಕ ಪ್ರಧಾನಿ ಮೋದಿ ಅವರು ಬಹಿರಂಗ ಭಾಷಣ ಮಾಡಿದ ಮೊದಲ ಸಾರ್ವಜನಿಕ ಸಭೆ ಇದು. ಬಿಜೆಪಿ ನೇತೃತ್ವದ ಎನ್ ಡಿಎ ಅವಿಶ್ವಾಸ ನಿರ್ಣಯವನ್ನು ಗೆದ್ದಿತ್ತು.

2018: ನವದೆಹಲಿ : ಮದ್ರಾಸ್ ಹೈಕೋರ್ಟಿನ  ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಶೀಘ್ರವೇ ಮುಂಬೈ ಹೈಕೋರ್ಟಿನ ನ್ಯಾಯಮೂರ್ತಿ ವಿಜಯ ಕಮ್ಲೇಶ್ ತಾಹಿಲ್ ರಮಣಿ (ವಿ.ಕೆ. ತಾಹಿಲ್ ರಮಣಿ) ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ  ಇಂದಿರಾ ಬ್ಯಾನರ್ಜಿ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಗಿದೆ.   ಭಾರತದ ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ ನೇತೃತ್ವದ ವರಿಷ್ಠ ನ್ಯಾಯ ಮಂಡಳಿ ಬಿಡುಗಡೆ ಮಾಡಿರುವ ಟಿಪ್ಪಣಿ ಪ್ರಕಾರ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟಿಗೆ ಶಿಫಾರಸು ಮಾಡಲಾಗಿದೆ. ಹೀಗಾಗಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನ ತೆರವಾಗಲಿರುವುದರಿಂದ "ಎಲ್ಲ ದೃಷ್ಟಿಯಿಂದಲೂ ಸೂಕ್ತ ಎನಿಸಿರುವ ನ್ಯಾಯಮೂರ್ತಿ ತಾಹಿಲ್ ರಮಣಿ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿದೆ.  ಇದೇ ವೇಳೆ ಪಾಟ್ನಾ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲಿ ಈಗ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ  ಗೀತಾ ಮಿತ್ತಲ್ ಅವರನ್ನು ಜಮ್ಮು ಕಾಶ್ಮೀರ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿಯಾಗಿ  ನೇಮಿಸಲಾಗಿದೆ. ಇಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನ್ಯಾಯಮೂರ್ತಿ ಬಿ ಡಿ ಅಹ್ಮದ್ ಅವರು ಈ ವರ್ಷ ಮಾರ್ಚ್ ೧೫ರಂದು ನಿವೃತ್ತರಾಗಿದ್ದರು.

2018: ಪುಣೆ : ಪುಣೆ ನಗರದ ಮುಂಧ್ವಾ ಪ್ರದೇಶದಲ್ಲಿ ಬೆಳಗ್ಗೆ ೩೦ ವರ್ಷ ಹಳೆಯ ಕಟ್ಟಡ ಕುಸಿದು ಬಿದ್ದು ಐವರು ಮೃತರಾಗಿ, ಹಲವರು ಗಾಯಗೊಂಡರು. ಕಟ್ಟಡ ಕುಸಿದ ಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಕುಸಿದ ಕಟ್ಟಡದ ಅವಶೇಷಗಳಡಿಯಿಂದ ಕನಿಷ್ಠ ೮ ಮಂದಿಯನ್ನು ಮೇಲಕ್ಕೆತ್ತಿ ರಕ್ಷಿಸಲಾಯಿತು. ಮಗುವೊಂದು ಇನ್ನೂ ಅವಶೇಷಗಳಡಿ ಸಿಲುಕಿದೆ ಎಂದು ವರದಿಗಳು ಹೇಳಿದವು. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಯಿತು.  ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮೂರು ದಶಕದಷ್ಟು ಹಳೆಯದಾಗಿರುವ ಈ ಕಟ್ಟಡ ಅತ್ಯಂತ ಜೀರ್ಣಾವಸ್ಥೆಗೆ ತಲುಪಿದ್ದು ಇದನ್ನು  ಕೆಡವಿ ಹಾಕುವಂತೆ ಸಿಟಿ ಮುನಿಸಿಪಲ್ ಕೌನ್ಸಿಲ್ ನೋಟಿಸ್ ಜಾರಿ ಮಾಡಿತ್ತು ಎಂದು ವರದಿ ತಿಳಿಸಿತು.

2018: ವಾಷಿಂಗ್ಟನ್ : ಅಮೆರಿಕದ ಹತ್ತು ರಾಜ್ಯಗಳಲ್ಲಿ ಹರಡಿಕೊಂಡಿರುವ ವಿಶ್ವ ಪ್ರಸಿದ್ಧ ಮೆಕ್‌ಡೊನಾಲ್ಡ್‌ನ ರೆಸ್ಟೋರೆಂಟ್‌ಗಳಲ್ಲಿ ಸಲಾಡ್ ತಿಂದ ಸುಮಾರು ೧೬೩ ಮಂದಿ ಸೈಕ್ಲೋಸ್ಪೋರಿಯಾಸಿಸ್ ಎಂಬ ಕಾಯಿಲೆ ತಗುಲಿ ಅಸ್ವಸ್ಥರಾದ ಘಟನೆ ಘಟಿಸಿತು.  ಆದರೆ ಯಾರೂ ಸಾವನ್ನಪ್ಪಿದ ವರದಿಗಳು ಬರಲಿಲ್ಲ.  ಅಮೆರಿಕದ ಆರೋಗ್ಯ ಅಧಿಕಾರಿಗಳು ಘಟನೆಯನ್ನು ಅನುಸರಿಸಿ ಮೆಕ್ ಡೊನಾಲ್ಡ್ ಸಲಾಡ್ ತಿಂದವರಲ್ಲಿ ಕಂಡು ಬಂದ ಸೈಕ್ಲೋಸ್ಪೋರಿಯಾಸಿಸ್ ಕಾಯಿಲೆಗೆ ಕಾರಣವಾಗಿರುವ ಯಾವ ವಸ್ತು ಸಲಾಡ್‌ನಲ್ಲಿದೆ ಎಂಬ ಬಗ್ಗೆ ವೈಜ್ಞಾನಿಕ ಪರೀಕ್ಷೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಕೂಡಾ ಕೂಲಂಕಷ ತನಿಖೆ ಆರಂಭವಾಯಿತು.  ಈ  ವೈಜ್ಞಾನಿಕ ಪರೀಕ್ಷೆಗೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಇಸಿ) ಹಾಗೂ ಸ್ವತಃ ಮೆಕ್‌ಡೊನಾಲ್ಡ್ ಖಾದ್ಯ ಪರಿಣತರು ನೆರವು ನೀಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದವು.  ಅಮೆರಿಕದ ಹತ್ತು ರಾಜ್ಯಗಳಲ್ಲಿರುವ ಮೆಕ್‌ಡೊನಾಲ್ಡ್ ಸರಣಿ ರೆಸ್ಟೋರೆಂಟ್ ಗಳಲ್ಲಿ  ಗ್ರಾಹಕರಿಗೆ ಲಭ್ಯವಿದ್ದ ಸಲಾಡ್‌ನಲ್ಲಿ ಇರುವ ಏಕಪ್ರಕಾರದ ರೋಗಕಾರಕ ಅಂಶ ಯಾವುದು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ. ಸಲಾಡ್ ತಿಂದ ಅನೇಕರಿಗೆ ಅತಿಸಾರ, ಹಸಿವು ನಷ್ಟ, ತೂಕ ನಷ್ಟ, ವಾಂತಿ, ಬಸವಳಿಕೆ, ತಲೆನೋವು, ಮೈ ಕೈ ನೋವು ಕಂಡು ಬಂದಿತು.  ಜುಲೈ ೧೩ರಂದು ಮೆಕ್‌ಡೊನಾಲ್ಡ್ ಹೊರಡಿಸಿರುವ ಪ್ರಕಟಣೆಯಲ್ಲಿ ತಾನು ಸ್ವಯಂ ಪ್ರೇರಣೆಯಿಂದ ತನ್ನ ಸರಣಿ ರೆಸ್ಟೋರೆಂಟ್‌ಗಳಲ್ಲಿ  ಸಲಾಡ್ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ಹೇಳಿತು.  ಇಲಿನಾಯ್ಸ್, ಐಯೋವಾ, ಇಂಇಯಾನಾ, ವಿಸ್ಕಾನ್‌ಸಿನ್, ಮಿಶಿಗನ್, ಒಹಾಯೋ, ಮಿನೆಸೋಟಾ, ನೆಬ್ರಾಸ್ಕಾ, ದಕ್ಷಿಣ ಡಕೋಟ, ಮೋಂಟಾನಾ, ಉತ್ತರ ಡಕೋಟ, ಕೆಂಟುಕಿ, ಪಶ್ಚಿಮ ವರ್ಜಿನಿಯಾ ಮತ್ತು ಮಿಸೋರಿಯಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಹೊಸ ಬಗೆಯ ಸಲಾಡ್ ಪೂರೈಕೆಗೆ ಸಾಧ್ಯವಾಗುವವರೆಗೆ ತಾನು ಈಗಿನ ಸಲಾಡ್ ಪೂರೈಕೆಯನ್ನು ನಿಲ್ಲಿಸಿರುವುದಾಗಿ  ಮೆಕ್ ಡೊನಾಲ್ಡ್  ತಿಳಿಸಿತು. ಅಮೆರಿಕದ ಮಧ್ಯ-ಪಶ್ಚಿಮ ಪ್ರದೇಶಗಳಲ್ಲಿ ಮೆಕ್‌ಡೊನಾಲ್ಡ್ ನ ೩,೦೦೦ ರೆಸ್ಟೋರೆಂಟ್ ಗಳಿವೆ.  ಈ ಮಧ್ಯೆ, ಮೆಕ್‌ಡೊನಾಲ್ಡ್‌ನ ರೋಗಕಾರಕ ಸಲಾಡ್ ತಿಂದು ಸೈಕ್ರೋಸ್ಪೋರಿಯಾಸಿಸ್ ಕಾಯಿಲೆಯ ಗುಣಲಕ್ಷಣಗಳೊಂದಿಗೆ ಅಸ್ವಸ್ಥರಾದವರು ಒಡನೆಯೇ ಆರೋಗ್ಯ ಸೇವೆ ಪೂರೈಕೆದಾರರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಎಂದು ಅಮೆರಿಕದ ಎಫ್ಡಿಐ ಸೂಚನೆ ನೀಡಿತು.

2018: ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಿಂಗಿಸಿ ನಗುವಿನ ಅಲೆ ಉಕ್ಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈದಿನ ಜನರಲ್ಲಿ ಪ್ರೀತಿ ಮತ್ತು ಸಹಾನುಭೂತಿ ಮೂಡಿಸುವುದು ಮಾತ್ರವೇ ರಾಷ್ಟ್ರ ನಿರ್ಮಾಣದ ಏಕೈಕ ಹಾದಿ ಎಂದು ಹೇಳಿದರು.  ‘ಪ್ರಧಾನಿಯವರು ತಮ್ಮ ನಿರೂಪಣಾ ತಂತ್ರವಾಗಿ ಕೆಲವರ ಹೃದಯಗಳಲ್ಲಿ ದ್ವೇಷ, ಭೀತಿ ಮತ್ತು ಸಿಟ್ಟನ್ನು ಬಿತ್ತುತ್ತಿದ್ದಾರೆ. ಆದರೆ ಪ್ರೀತಿ ಮತ್ತು ಸಹಾನುಭೂತಿ ಮೂಲಕ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆಯಲ್ಲಿ ಹೇಳಿದ್ದರು.  ಪ್ರಧಾನಿಯವರು ತಮ್ಮ ನಿರೂಪಣಾ ತಂತ್ರವಾಗಿ ಕೆಲವರ ಹೃದಯಗಳಲ್ಲಿ ದ್ವೇಷ, ಭೀತಿ ಮತ್ತು ಸಿಟ್ಟನ್ನು ಬಿತ್ತುತ್ತಿರುವುದು ನಿನ್ನೆ ಸಂಸತ್ತಿನಲ್ಲಿ ನಡೆದ ಚರ್ಚೆಯ ಅಂಶವಾಗಿತ್ತು. ಎಲ್ಲ ಭಾರತೀಯರ ಹೃದಯಗಳಲ್ಲಿ ಪ್ರೇಮ ಮತ್ತು ಸಹಾನುಭೂತಿಯನ್ನು ಬಿತ್ತುವುದು ಮಾತ್ರವೇ ರಾಷ್ಟ್ರ ನಿರ್ಮಾಣದ ಏಕೈಕ ದಾರಿ ಎಂಬುದನ್ನು ನಾವು ಸಾಬೀತು ಮಾಡಲಿದ್ದೇವೆ ಎಂದು ರಾಹುಲ್ ಟ್ವೀಟ್ ಮಾಡಿದರು.  ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆಯಲ್ಲಿ ಸರ್ಕಾರದ ವಿರುದ್ಧ ೪೫ ನಿಮಿಷಗಳ ವಾಗ್ದಾಳಿ ನಡೆಸಿದ್ದರು. ನೋಟು ಅಮಾನ್ಯೀಕರಣ, ಉದ್ಯೋಗದ ಅಭಾವ, ರಫೇಲ್ ವ್ಯವಹಾರ, ದುರ್ಬಲ ಆರ್ಥಿಕತೆ, ಗುಂಪು ಹಿಂಸಾಚಾರ, ಗುಂಪು ಹತ್ಯೆ, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳ ರೂಪದಲ್ಲಿ  ಪ್ರಧಾನಿಯವರು ಜನರ ಮೇಲೆ ’ಜುಮ್ಲಾ ಸ್ಟ್ರೈಕ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆಪಾದಿಸಿದ್ದರು.  ತಮ್ಮ ಭಾಷಣ ಮುಗಿಸಿದ ಬಳಿಕ ರಾಹುಲ್ ಗಾಂಧಿಯವರು ಪ್ರಧಾನಿಯವರು ಕುಳಿತಿದ್ದ ಆಸನದತ್ತ ತೆರಳಿ ಮೋದಿಯವರನ್ನು ಅಲಿಂಗಿಸಿದ್ದರು.  ಪ್ರಧಾನಿಯವರು ತಮ್ಮ ಬಳಿಗೆ ಬಂದ ರಾಹುಲ್ ಗಾಂಧಿಯವರಿಗೆ ಹಸ್ತಲಾಘವ ನೀಡಿದ್ದರು. ಆದರೆ ಬಿಜೆಪಿ ನಾಯಕನನ್ನು ಆಲಿಂಗಿಸಲು ಸಾಧ್ಯವಾಗುವಂತೆ ನಿಲ್ಲಲು ಮಾಡಿದ ಕೋರಿಕೆಯನ್ನು ನಿರ್ಲಕ್ಷಿಸಿದ್ದರು. ಏನಿದ್ದರೂ ಕಾಂಗ್ರೆಸ್ ನಾಯಕ ಮೋದಿಯವರತ್ತ ಬಾಗಿ, ಕೂತಿದ್ದಂತೆಯೇ ಅವರನ್ನು ಆಲಿಂಗಿಸಿದ್ದರು.
ಮೊದಲಿಗೆ ತಬ್ಬಿಬ್ಬಾದವರಂತೆ ಕಂಡ ಮೋದಿ, ಆಲಿಂಗಿಸಿಕೊಳ್ಳಲು ಎದ್ದು ನಿಲ್ಲಲಿಲ್ಲ. ಆದರೆ ತತ್ ಕ್ಷಣವೇ ಸುಧಾರಿಸಿಕೊಂಡ ಅವರು ರಾಹುಲ್ ಗಾಂಧಿಯವರನ್ನು ಪುನಃ ಕರೆದು ಅವರ ಬೆನ್ನು ತಟ್ಟಿದ್ದರು ಮತ್ತು ಅವರ ಬಳಿ ಮಾತನಾಡಿದ್ದರು. ಅವರು ಮಾತುಗಳು ಕೇಳಿಸಲಿಲ್ಲ. ಚರ್ಚೆಗೆ ನೀಡಿದ ತಮ್ಮ ಉತ್ತರದಲ್ಲಿ ಪ್ರಧಾನಿಯವರು ರಾಹುಲ್ ಗಾಂಧಿ ಮಾಡಿದ್ದ ಟೀಕೆಗಳಿಗೆ ಅಂಶ ಅಂಶವಾಗಿ ಎದಿರೇಟು ನೀಡಿದ್ದರು.


2017: ಬೀಜಿಂಗ್‌: ಭಾರತೀಯ ಸೇನೆಯನ್ನು ಚೀನಾ ಸೇನೆಯ ಜತೆಗೆ ಹೋಲಿಸುವುದು ಹಾಸ್ಯಾಸ್ಪದ ಎಂದು ಚೀನಾದ ದಿನ ಪತ್ರಿಕೆದಿ ಗ್ಲೋಬಲ್ಟೈಮ್ಸ್‌’ ವರದಿ ಮಾಡಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ವಿಶ್ವದ ಹಲವು ದೇಶಗಳು ತಮಗೆ ಬೆಂಬಲ ನೀಡುತ್ತವೆ ಎಂದು ಸಂಸತ್ತಿನಲ್ಲಿ ಮಾತನಾಡುತ್ತಿದ್ದಾರೆ. ಭಾರತದ ಉದ್ದೇಶ ಚೀನಾ ಭೂಪ್ರದೇಶವನ್ನು ಆತಿಕ್ರಮಿಸುವುದೇ ಆಗಿದೆ. ಅದು ನೀಡುತ್ತಿರುವ ಪ್ರಚೋದನೆ ಅಂತರರಾಷ್ಟ್ರೀಯ ಸಮುದಾಯದ ಗಮನಕ್ಕೂ ಬಂದಿದ್ದು, ಯಾವ ದೇಶವೂ ಭಾರತಕ್ಕೆ ಬೆಂಬಲ ನೀಡುವುದಿಲ್ಲಎಂದು ತನ್ನ ವರದಿಯಲ್ಲಿ ಅದು ಉಲ್ಲೇಖಿಸಿತು. ಭಾರತ ಚೀನಾದ ತಾಳ್ಮೆ ಪರೀಕ್ಷಿಸುತ್ತಿದೆ. ಒಂದು ವೇಳೆ ದೋಕಲಾನಿಂದ ತನ್ನ ಸೇನೆಯನ್ನು ವಾಪಸ್ಸು ಕರೆಯಿಸಿಕೊಳ್ಳದಿದ್ದರೆ ಯುದ್ಧಕ್ಕೆ ಸಿದ್ಧವಾಗಬೇಕಾಗುತ್ತದೆಎಂದು  ರೀತಿ ಬರೆದುಕೊಂಡಿತು. ಟಿಬೆಟ್ನಲ್ಲಿ ನಾವು ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ಹಾಗೂ ಸೇನಾ ಕವಾಯತು ನಡೆಸುತ್ತಿರುವುದು ಕೇವಲ ತೋರಿಸಿಕೊಳ್ಳುವುದಕ್ಕಲ್ಲಎಂದೂ ಹೇಳಿರುವಟೈಮ್ಸ್‌’, ‘ಭಾರತ ಇದೇ ನಡೆಯನ್ನು ಮುಂದುವರಿಸಿದರೆ ಯುದ್ಧ ಸಂಭವಿಸಲಿದೆ. ಯುದ್ಧದಲ್ಲಿ ಸೋತು ತನ್ನ ಸ್ವಂತ ಭೂಪ್ರದೇಶವನ್ನೂ ಕಳೆದುಕೊಳ್ಳಬೇಕಾಗುತ್ತದೆಎಂದು ಎಚ್ಚರಿಸಿದೆ. ‘ಭಾರತೀಯ ಸೇನೆಯ ಸಾಮರ್ಥ್ಯ ಚೀನಾ ಸೇನೆಗಿಂತ ಬಹಳಷ್ಟು ಹಿಂದುಳಿದಿದ್ದು, ಯುದ್ಧವನ್ನು ಬಯಸುವುದಾದರೆ ಭಾರತಕ್ಕೆ ಸೋಲು ಖಂಡಿತಎಂದು ಬರೆದುಕೊಂಡಿತು.
2017: ಮುಂಬೈಬಾಲಿವುಡ್ನಟಿ ಸನ್ನಿ ಲಿಯೋನ್ಹಾಗೂ ಅವರ ಪತಿ ಡೇನಿಯಲ್ವೆಬರ್ಹೆಣ್ಣುಮಗುವನ್ನು ದತ್ತು ಸ್ವೀಕರಿಸಿದರು. ಮಹಾರಾಷ್ಟ್ರದ ಲಾತೂರ್ಜಿಲ್ಲೆಯ  21 ತಿಂಗಳ ಮಗುವನ್ನು ದತ್ತು ಸ್ವೀಕರಿಸಿರುವ ದಂಪತಿ, ನಿಶಾ ಕೌರ್ವೆಬರ್ಎಂದು ನಾಮಕರಣ ಮಾಡಿದರು. ಮೂಲತಃ ಕರಣ್ಜಿತ್ಕೌರ್ವೊಹ್ರಾ  ಹೆಸರಿನ ಮಗುವಿನ ಜತೆಗೆ ದಂಪತಿ ಇರುವ ಚಿತ್ರ ಟ್ವಿಟ್ಟರ್ನಲ್ಲಿ ವೈರಲ್ಆಗಿದೆ. ಸಾಕಷ್ಟು ಜನರು ದಂಪತಿಗೆ ಅಭಿನಂದನೆ ಸಲ್ಲಿಸಿ ಸಂದೇಶ ಕಳುಹಿಸಿದ್ದಾರೆ. ‘ನಿಮ್ಮೆಲ್ಲರ ಪ್ರೀತಿಯ ಸಂದೇಶ, ಬೆಂಬಲಕ್ಕೆ ಧನ್ಯವಾದಗಳುಎಂದು ಸನ್ನಿ ಟ್ವೀಟ್ಮಾಡಿದರು. ನಟಿ ಶೆರ್ಲಿನ್ಚೋಪ್ರಾ ಮೊದಲಿಗೆ ಟ್ವೀಟ್ಮಾಡುವ ಮೂಲಕ ದತ್ತು ವಿಷಯ ದೃಢಪಡಿಸಿದರು. ಪುಟ್ಟ ದೇವತೆ ನಿಶಾ ಕೌರ್ವೆಬರ್ಳನ್ನು ತಮ್ಮ ಜೀವನಕ್ಕೆ ಸ್ವಾಗತಿಸಿರುವ ಸನ್ನಿ ಲಿಯೋನ್ಹಾಗೂ ಡೇನಿಯಲ್ವೆಬರ್ಗಾಗಿ ಸಂತಸ ಪಡುತ್ತೇನೆಎಂದು ಶೆರ್ಲಿನ್ಚೋಪ್ರಾ ಟ್ವೀಟ್ಮಾಡಿದರು.
2017: ಅಹ್ಮದಾಬಾದ್‌: ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ಸಿಂಗ್ವಘೇಲಾ ಕಾಂಗ್ರೆಸ್
ಪಕ್ಷವನ್ನು ತೊರೆದರು. ತಮ್ಮ 77ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ವಘೇಲಾ ತಮ್ಮ ನಿರ್ಧಾರ ಘೋಷಿಸಿದರು. ಸಮಾರಂಭದಲ್ಲಿ ಕೇಸರಿ ಅಂಗವಸ್ತ್ರ ಧರಿಸಿದ್ದ ವಘೇಲಾ, ‘ಕಾಂಗ್ರೆಸ್ ಕುತಂತ್ರಗಳಿಗೆ ಬಲಿಪಶುವಾದವನು ನಾನುಎಂದರು. ನಾನು ಸಮಾರಂಭದಲ್ಲಿ ಏನು ಹೇಳಿಬಿಡುತ್ತೇನೋ ಎಂದು ಭೀತಿಗೊಂಡಿದ್ದ ಕಾಂಗ್ರೆಸ್‌ 24 ಗಂಟೆಗಳ ಹಿಂದೆಯೇ ನನ್ನನ್ನು ಪಕ್ಷದಿಂದ ಹೊರಹಾಕಿದೆಎಂದು ಹೇಳಿದರು. ಆದರೆ, ವಘೇಲಾ ಅವರ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್ವಕ್ತಾರ ರಂದೀಪ್ಸಿಂಗ್ಸುರ್ಜೆವಾಲಾ, ‘ವಘೇಲಾ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಪಕ್ಷದಿಂದ ಹೊರಕ್ಕೂ ಹಾಕಿಲ್ಲ. ಅವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಪಕ್ಷ ತೊರೆದಿರುವುದು ಅವರ ವೈಯಕ್ತಿಕ ನಿರ್ಧಾರಎಂದರು. ರಾಜ್ಯ ಕಾಂಗ್ರೆಸ್ ಈಗಿರುವ ಅಧ್ಯಕ್ಷರನ್ನು ತೆಗೆದುಹಾಕಿ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬುದು ವಘೇಲಾ ಬಯಕೆಯಾಗಿತ್ತು. ಆದರೆ, ಕಾಂಗ್ರೆಸ್ನಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯಎಂದು ಸುರ್ಜೆವಾಲಾ ತಿಳಿಸಿದರು. ನಾನು ಈಗಲೇ ರಾಜಕೀಯದಿಂದ ನಿವೃತ್ತನಾಗಲಾರೆ. ನನಗೆ ಈಗ 77 ವರ್ಷ. ನಾನು ಸೋತಿಲ್ಲ. ಸೋಲುವುದೂ ಇಲ್ಲ. ಆದರೆ, ನಾನು ಬಿಜೆಪಿ ಸೇರಲಾರೆಎಂದು ವಘೇಲಾ ಹೇಳಿದರು. ದ್ದಾರೆ.

 2017: ಪುದುಚೆರಿ: ಕಾಂಗ್ರೆಸ್ ಪಕ್ಷವು ಬೇಡಿ ಅವರನ್ನು “ಅಡಾಲ್ಫ್ ಹಿಟ್ಲರ್’ನಂತೆ ಬಿಂಬಿಸುವ ಪೋಸ್ಟರುಗಳನ್ನು ಪ್ರಕಟಿಸುವುದರೊಂದಿಗೆ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಕಾಂಗ್ರೆಸ್ ನಡುವಣ ಘರ್ಷಣೆ ಅತ್ಯಂತ ಕೊಳಕು ತಿರುವನ್ನು ಪಡೆದುಕೊಂಡಿತು. ಸ್ವತಃ ಕಿರಣ್ ಬೇಡಿ ಅವರು ಈ ಪೋಸ್ಟರನ್ನು ಗುರುವಾರ, 20 ಜುಲೈ 2017ರಂದು ಟ್ವೀಟ್ ಮಾಡಿದರು. ಪೋಸ್ಟರಿನಲ್ಲಿ ಕಿರಣ್ ಬೇಡಿ ಚಿತ್ರಕ್ಕೆ ಹಿಟ್ಲರ್ ಮೀಸೆಯನ್ನು ಬಿಡಿಸಲಾಗಿದೆ. ಶಾಸಕರ  ನಾಮಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ತಮ್ಮನ್ನು ಖಂಡಿಸುವ ಭರದಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕವು ತಮ್ಮ ಚಿತ್ರವನ್ನು ಈ ರೀತಿಯಾಗಿ ವಿರೂಪಗೊಳಿಸಿದೆ ಎಂದು ಕಿರಣ್ ಬೇಡಿ ಹೇಳಿದರು. ಇದಕ್ಕೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಮೂವರು ಬಿಜೆಪಿ ಸದಸ್ಯರನ್ನು ಪುದುಚರಿ ವಿಧಾನಸಭೆಗೆ ತಮ್ಮ ಬಳಿ ಸಮಾಲೋಚಿಸದೆಯೇ ನಾಮಕರಣ ಮಾಡಿದ್ದನ್ನು ಪ್ರತಿಭಟಿಸಿ ಮೆರವಣಿಗೆ ನಡೆಸಿದ್ದರು.
2016: ಢಾಕಾ: ಬಾಂಗ್ಲಾದೇಶದ ವಿರೋಧ ಪಕ್ಷ ನಾಯಕಿ ಖಾಲೀದಾ ಜಿಯಾ ಪುತ್ರ ತಾರಿಖ್ ರಹಮಾನ್ ಗೆ (48)  2.5 ಮಿಲಿಯನ್ ಡಾಲರ್ ಹಣ ದುರ್ಬಳಕೆ ಆರೋಪದಲ್ಲಿ ಢಾಕಾ ಹೈಕೋರ್ಟ್ 7 ವರ್ಷ ಸೆರೆವಾಸ ಶಿಕ್ಷೆ ಪ್ರಕಟಿಸಿತು. ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷರಾದ ರಹಮಾನ್ಗೆ ದ್ವಿ ಸದಸ್ಯ ಪೀಠ 2003 ರಿಂದ 2007 ವರೆಗೆ ಅಧಿಕಾರದಲ್ಲಿದ್ದ ಬಿಎನ್ಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಹಣ ಕಬಳಿಸಿ ಸಿಂಗಾಪುರಕ್ಕೆ ವರ್ಗಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷ ಸೆರೆವಾಸ ವಿಧಿಸಿತು. ಪ್ರಕರಣದಲ್ಲಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಸರಿಯಾಗಿ ಸ್ಪಂದಿಸದ ರಹಮಾನ್ ದೇಶಭ್ರಷ್ಟ ಎಂದು ತೀರ್ಮಾನಿಸಿ ಶಿಕ್ಷೆ ನೀಡಲಾಯಿತು. ಲಂಡನ್ನಲ್ಲಿ ನೆಲೆಸಿರುವ ರಹಮಾನ್ ವಿರುದ್ಧ ಹಣ ದುರ್ಬಳಕೆ ಕಾಯ್ದೆ ಅಡಿ ಚಾರ್ಜ್ಶೀಟ್ ದಾಖಲಿಸಿದ ಕೋರ್ಟ್, ಆತನಿಗೆ 200 ಮಿಲಿಯನ್ ಟಾಕಾ (ಬಾಂಗ್ಲಾ ಕರೆನ್ಸಿ) ದಂಡ ವಿಧಿಸಿತು. 2013 ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಹಮಾನ್ ಉದ್ಯಮ ಮಿತ್ರ ಗಿಯಾಸುದ್ದೀನ್ ಅಲ್ ಮಾಮುನ್ಗೆ ಕೆಳನ್ಯಾಯಾಲಯ 7 ವರ್ಷ ಜೈಲುವಾಸದ ಜೊತೆಗೆ 400 ಟಾಕಾ ದಂಡ ವಿಧಿಸಿತ್ತು. 2004 ಢಾಕಾ ಗ್ರೆನೆಡ್ ದಾಳಿಯಲ್ಲಿ 24 ಮಂದಿ ನಾಗರಿಕರು ಸೇರಿದಂತೆ ಆವಾಮಿ ಲೀಗ್ ಈಗಿನ ಪ್ರಧಾನಿ ಶೇಖ್ ಹಸೀನಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಪ್ರಕರಣದ ಮುಖ್ಯ ಸಂಚುಗಾರನಾಗಿ ಇದೇ ರಹಮಾನ್ ವಿರುದ್ಧ ಖಟ್ಲೆ ದಾಖಲಾಗಿತ್ತು.

2016: ನವದೆಹಲಿ: ಗುಜರಾತಿನ ಉನಾದ ಮಸಡಿಯಾಣಾ ಗ್ರಾಮದಲ್ಲಿ ಮೃತ ಜಾನುವಾರುಗಳ ಚರ್ಮ ತೆಗೆಯುತ್ತಿದ್ದ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ ಗೋರಕ್ಷಕ ಗುಂಪಿನ ಹದಿನಾರು ಮಂದಿ ಸದಸ್ಯರನ್ನು ಬಂಧಿಸಲಾಯಿತು. ಘಟನೆಯನ್ನು ಖಂಡಿಸಿ ದಲಿತರು ಬೀದಿಗಿಳಿದು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಲಾಯಿತು. ಈ ಕರಿತು ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ಹಲ್ಲೆ ನಡೆಸಿದವರ ಮೇಲೆ ಈಗಾಗಲೇ ಕ್ರಮ ಜಾರಿ ಮಾಡಲಾಗಿದೆ. ಹದಿನಾರು ಜನರನ್ನು ಬಂಧಿಸಲಾಗಿದೆ. ಇದರ ಜತೆಗೆ ಘಟನೆ ಹತ್ತಿಕ್ಕುವಲ್ಲಿ ವಿಫಲರಾದ ನಾಲ್ವರು ಪೊಲೀಸ್ ಅಧಿಕಾರಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಮೃತ ಜಾನುವಾರುಗಳ ಚರ್ಮ ತೆಗೆಯುತ್ತಿದ್ದ ಕೆಲ ದಲಿತ ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ರಸ್ತೆ ಬದಿಯಲ್ಲೇ ಅವರನ್ನು ಅರೆ ಬೆತ್ತಲೆಗೊಳಿಸಿ ಥಳಿಸಲಾಗಿತ್ತು. ಇದರಿಂದಾಗಿ ದಲಿತ ಸಮುದಾಯದವರು ಭಾರಿ ಪ್ರತಿಭಟನೆ ನಡೆಸಿದ್ದರು. ಇಬ್ಬರು ಮೃತರಾದ ನಂತರ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತ್ತು.

2016: ನವದೆಹಲಿ:  ಹೆಚ್ಚುತ್ತಿರುವ ಭಯೋತ್ಪಾದನ ದಾಳಿಗಳನ್ನು ಹತ್ತಿಕ್ಕಲು ಭಾರತ ಸಹಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಖ್ ಹಸಿನಾ ಅವರಿಗೆ ಭರವಸೆ ನೀಡಿದರು. ಗಡಿಯಲ್ಲಿನ ಚೆಕ್ ಪೋಸ್ಟ್ ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಉಭಯ ಮುಂಖಂಡರು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ ಪ್ರಧಾನಿ ಮೋದಿ, ನಮ್ಮ ನಡುವಿನ ಒಪ್ಪಂದ ಕೇವಲ ದ್ವೀಪಕ್ಷಿಯ ವ್ಯಾಪಾರ ವೃದ್ಧಿಗೆ ಸೀಮಿತವಾಗಿರದೆ ಭಯೋತ್ಪಾದನೆ ನಿಗ್ರಹ, ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಬೇಕೆಂದು ತಿಳಿಸಿದರು. ಇದಕ್ಕೆ ಬಾಂಗ್ಲಾ ಪ್ರಧಾನಿ ಕೂಡ ಸಹಮತ ವ್ಯಕ್ತಪಡಿಸಿದರುಮುಂದಿನ ದಿನಗಳಲ್ಲಿ ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ಇದೇ ರೀತಿ ಎಂಟು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು. ಭಾರತ ಹಾಗೂ ಬಾಂಗ್ಲಾದೇಶದ ಪಾಲಿಗೆ ಪೆಟ್ರೊಪೊಲ್ ಅತ್ಯಂತ ಮಹತ್ವದ ಸ್ಥಳವಾಗಿದೆ. ಸುಮಾರು 50ರಷ್ಟು ವ್ಯಾಪಾರ-ವ್ಯವಹಾರಗಳು ಭಾಗದಲ್ಲೇ ನಡೆಯುತ್ತವೆ ಎಂದು ಮೋದಿ ಹೇಳಿದರು. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಶೇಖ್ ಹಸಿನಾ ಹಾಗೂ ಬಾಂಗ್ಲಾ ಜನತೆಗೆ ಈದ್ ಶುಭಶಯ ಹೇಳಿದರು. ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಎರಡು ಭಯೋತ್ಪಾದಕ ದಾಳಿಗಳು ನಡೆದಿದ್ದವು. ಜುಲೈ 1ರಂದು ಐಸಿಸ್ ಉಗ್ರರು ನಡೆಸಿದ ದಾಳಿಗೆ 20ಜನರು ಬಲಿಯಾದರೆ, ಜುಲೈ 7ರಂದು ನಡೆದ ದಾಳಿಗೆ ನಾಲ್ವರು ಬಲಿಯಾಗಿದ್ದರು.

2016: ನವದೆಹಲಿ: ಧೀರ್ಘಕಾಲದಿಂದ ರಕ್ತದೊತ್ತಡ ಎದುರಿಸುತ್ತಿರುವವರು ಹಾಗೂ ಹೃದಯ ಕಾಯಿಲೆ ಸಮಸ್ಯೆ ಇರುವವರು ಜ್ಯೂಸ್ ಜತೆ ಮಾತ್ರೆ ಸೇವಿಸಿದರೆ ಅದು ಪರಿಣಾಮಕಾರಿ ಆಗುವುದಿಲ್ಲ. ಬದಲಾಗಿ ಮಾತ್ರೆ ಸೇವಿಸಲು ನೀರನ್ನೇ ಬಳಸಿ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಹೇಳಿತು. ಇದು ಎಲ್ಲಾ ರೋಗಿಗಳಿಗೂ ಅನ್ವಯಿಸುವಂತದ್ದೂ ಆಗಿರುತ್ತದೆ ಎಂದು ಐಎಂಎ ಕಿವಿಮಾತು ಹೇಳಿತು. ಜ್ಯೂಸ್ಗಳನ್ನು ಬಳಸುವುದರಿಂದ ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ರೋಗಕ್ಕೆ ಕಾರಣವಾದ ಸೋಂಕುಗಳನ್ನು ಸದೆಬಡಿಯುವ ಶಕ್ತಿಗಳನ್ನೇ ಮಾತ್ರೆ ಕಳೆದುಕೊಂಡಿರುತ್ತದೆ. ಅದರಲ್ಲೂ ಕೆಲವೊಂದು ಜ್ಯೂಸ್ಗಳು ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ನೀರಿನಲ್ಲಿಯೇ ಮಾತ್ರೆಗಳನ್ನು ಸೇವಿಸುವುದು ಉತ್ತಮ ಎಂದು ಸಂಸ್ಥೆ ಹೇಳಿತು. ಕಿತ್ತಳೆ ಮತ್ತು ಸೇಬು ಹಣ್ಣಿನ ಜ್ಯೂಸ್ಗಳಂತೂ ಮಾತ್ರೆಗಳಲ್ಲಿನ ಹೀರುವಿಕೆಯ ಸಾಮರ್ಥ್ಯವನ್ನೇ ಕುಗ್ಗಿಸುತ್ತವೆ. ಇದರಿಂದಾಗಿ ಮಾತ್ರೆ ದೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ದ್ರಾಕ್ಷಿ ಹಣ್ಣಿನ ಜ್ಯೂಸ್ ಕೆಲವು ಔಷಧಗಳಲ್ಲಿನ ಹೀರುವಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದು ಐಎಂಎ ಕಾರ್ಯದರ್ಶಿ ಡಾ. ಕೆ.ಕೆ. ಅಗರ್ವಾಲ್ ಹೇಳಿದರು. ಕೆನಡದ ಒಂಟಾರಿಯೋ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ ಎಂದು ಅವರು ತಿಳಿಸಿದರು. ಆದರೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ (ಎಫ್ಡಿಎ) ದ್ರಾಕ್ಷಿ ಜ್ಯೂಸ್ನೊಂದಿಗೆ ಯಾವುದೇ ಔಷಧ ಸೇವನೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿತು.

2016: ನವದೆಹಲಿ: ನಾಲ್ವರು ಮಹಿಳಾ ಬೈಕರ್ಗಳು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಬೇಟಿ ಬಚಾವೊ ಬೇಟಿ ಪಡಾವೊಕುರಿತು ಜನರಲ್ಲಿ ಜಾಗ್ರತಿ ಮೂಡಿಸಲು ಹತ್ತು ದೇಶಗಳಿಗೆ ಭೇಟಿ ನೀಡಿ, ಬಾಲಕಿಯರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಜನರಲ್ಲಿ ವಿನಂತಿಸಿಕೊಂಡಿದ್ದು, ಇದಕ್ಕಾಗಿ 10,000 ಕಿ.ಮೀ ಸಂಚರಿಸಿದ ಸಾಧನೆ ಮಾಡಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಾಲಕಿಯರು ನಾನಾ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತದ ಎನ್ಡಿಎ ಸರ್ಕಾರ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಕುರಿತು ಜನರಲ್ಲಿರುವ ಪೂರ್ವಾಗ್ರಹಗಳನ್ನು ತೊಲಗಿಸಿ ಮಹಿಳೆಯರ ರಕ್ಷಣೆ ಮಾಡಬೇಕೆಂದು ಡಾ. ಸಾರಿಕಾ ಮೆಹತಾ, ಯುಗ್ಮಾ ದೇಸಾಯಿ, ದುರ್ರಿಯಾ ತಾಪಿಯ ಹಾಗೂ ಖ್ಯಾತಿ ದೇಸಾಯಿ ಸ್ವಯಂಪ್ರೇರಿತರಾಗಿ ಮೋದಿ ಕನಸಿಗೆ ಕೈಜೋಡಿಸಿದ್ದಾರೆ. ನಾಲ್ವರು ಮಹಿಳೆಯರ ಬೈಕಿಂಗ್ ಕ್ವಿನ್ಸ್ ಗುಂಪು ಥೈಲ್ಯಾಂಡ್, ನೇಪಾಳ, ಲಾವೋಸ್, ವಿಯಟ್ನಾ, ಭೂತಾನ್, ಮ್ಯಾನ್ಮಾರ್, ಸಿಂಗಾಪುರ, ಕಾಂಬೋಡಿಯಾ ಹಾಗೂ ಮಲೇಷ್ಯಾ ದೇಶಗಳಿಗೆ ಭೇಟಿ ನೀಡಿದ್ದಾರೆ. 39 ದಿನಗಳ ಸುದೀರ್ಘ ಪ್ರಯಾಣ ಇದೀಗ ಮಹಿಳೆಯರಿಗೆ ತೃಪ್ತಿ ನೀಡಿದೆ. ಕುರಿತು ಸಾರಿಕಾ ಮೆಹ್ತಾ ಪ್ರತಿಕ್ರಿಯಿಸಿ, ಹತ್ತು ದೇಶಗಳಲ್ಲಿ ಬಾಲಕಿಯರ ಕುರಿತು ಜಾಗೃತಿ ಮೂಡಿಸಿರುವುದು ಸಂತೋಷ ತಂದಿದೆ. ಮೋಟಾರ್ ಬೈಕ್ ಸವಾರಿ ಮಾಡಲು ಕೇವಲ ಪುರುಷರು ಮಾತ್ರ ಅರ್ಹರು ಎಂಬ ಪೂರ್ವಾಗ್ರಹ ಮನಸ್ಥಿತಿ ನಿರ್ಮೂಲ ಮಾಡಲು ನಾವು ಬೈಕ್ನಲ್ಲಿ ಸಂಚರಿಸಿದ್ದೇವೆ ಎಂದು ತಿಳಿಸಿದರು. ಜೂನ್ 6, 2016ರಂದು ನಾಲ್ವರು ಮಹಿಳೆಯರು ಕಠ್ಮಂಡುವಿನಿಂದ ತಮ್ಮ ಪ್ರಯಾಣ ಆರಂಭಿಸಿದ್ದರು.

2016: ನವದೆಹಲಿ: ಏಷ್ಯಾದ ಐವತ್ತು ಅಗ್ರ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪ್ರಕಟವಾಗಿದ್ದು, ಇದರಲ್ಲಿ ಭಾರತದ ಐದು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದವು. ಭಾರತದ ಐದು ವಿಶ್ವವಿದ್ಯಾಲಯ ಐವತ್ತು ಅಗ್ರ ವಿಶ್ವವಿದ್ಯಾಲಯಗಳಲ್ಲಿ ಸ್ಥಾನಪಡೆದಿವೆ ಎಂದು ಕ್ಯೂಎಸ್ ವಿಶ್ವವಿದ್ಯಾಲಯ ಶ್ರೇಯಾಂಕ ಏಷ್ಯಾ 2016 ಘೋಷಿಸಿತು. ಹದಿನೇಳು ದೇಶಗಳ 350 ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿದ್ದವು. ಅಷ್ಟೇ ಅಲ್ಲ ಕ್ಯೂಎಸ್ ಬ್ರಿಕ್ಸ್ ಶ್ರೇಯಾಂಕ  2016ರಲ್ಲಿ ಭಾರತದ ಎಂಟು ವಿಶ್ವವಿದ್ಯಾಲಯಗಳು ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಹತ್ತು ಅಗ್ರ ಸ್ಥಾನದಲ್ಲಿ ಆರನೇ ಸ್ಥಾನವನ್ನು ಭಾರತೀಯ ವಿಜ್ಞಾನ ಸಂಸ್ಥೆ ಪಡೆದುಕೊಂಡಿತು. 250 ಅಗ್ರ ವಿವಿಗಳಲ್ಲಿ ಕಳೆದ ವರ್ಷ ಭಾರತದ 31 ವಿವಿಗಳು ಸ್ಥಾನಪಡೆದಿದ್ದವು. ಆದರೆ ವರ್ಷ 44 ವಿಶ್ವವಿದ್ಯಾಲಯಗಳು ಪಟ್ಟಿಗೆ ಸೇರ್ಪಡೆಯಾದವು. ಶೈಕ್ಷಣಿಕ ಸಂಸ್ಥೆಗಳ ಸಾಧನೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿ, ಶಿಕ್ಷಣಕ್ಕೆ ಸಮಾಜವನ್ನು ಪರಿವರ್ತಿಸುವ ಶಕ್ತಿಯಿದೆ. ಮುಂದಿನ ದಿನಗಳಲ್ಲಿ ಭಾರತ ಸುವರ್ಣ ಯುಗದತ್ತ ಕಾಲಿಡಲಿದೆ ಎಂದು ತಿಳಿಸಿದರು.

2016: ನವದೆಹಲಿ: ಬಹುದಿನಗಳಿಂದ ಹರಿದಾಡುತ್ತಿದ್ದ ವಾಟ್ಸ್ ಆಪ್ ವಾಯ್ಸ್ ಮೇಲ್ ಮತ್ತು ಕಾಲ್ ಬ್ಯಾಕ್ ಸೇವೆಯನ್ನು ವಾಟ್ಸ್ ಆಪ್ ತನ್ನ ಹೊಸ ಬೀಟಾ ವರ್ಶಿನ್ನಲ್ಲಿ ಪ್ರಾರಂಭಿಸಿತು. ಗೂಗಲ್ ಪ್ಲೇಸ್ಟೋರ್ನಲ್ಲಿ ಹೊಸ ಮಾದರಿ ವಾಟ್ಸ್ ಆಪ್ ಸೇವೆ ಸದ್ಯಕ್ಕೆ ಲಭ್ಯವಿಲ್ಲ. ವಾಟ್ಸ್ ಆಪ್ ಬೀಟಾ ವರ್ಷನ್ 2.16.189 ನಲ್ಲಿ ಮಾತ್ರ ಸೇವೆ ಲಭ್ಯವಿರುತ್ತದೆ. ವಾಯ್ಸ್ ಮೇಲ್ ಮತ್ತು ಕಾಲ್ ಬ್ಯಾಕ್ ಸೇವೆಗಳು ವಾಟ್ಸ್ ಆಪ್ ಕರೆ ಸ್ವೀಕರಿಸದೇ ಇದ್ದಲ್ಲಿ ಮೊಬೈಲ್ ಪರದೆ ಮೇಲೆ ಗೋಚರವಾಗಲಿವೆ. ಇನ್ನು ವಾಯ್ಸ್ ಮೇಲ್ ಸೇವೆ ವಾಟ್ಸ್ ಆಪ್ನಲ್ಲಿ ನಿಮ್ಮ ಧ್ವನಿ ರೆಕಾರ್ಡ್ ಮಾಡಿದಷ್ಟೆ ಸುಲಭವಾಗಿ ಉಪಯೋಗಿಸಬಹುದಾದ ಸೇವೆಯಾಗಿದೆ. ಎಪಿಕೆ ಮಿರರ್ ವೆಬ್ಸೈಟ್ನಿಂದ ಮಾತ್ರ ನೂತನ ವಾಟ್ಸ್ ಆಪ್ ವರ್ಶಿನ್ ಡೌನ್ಲೋಡ್ ಮಾಡಬಹುದಾಗಿದೆ.

2008: ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮ್ ಬರನ್ ಯಾದವ್ ಅವರು ನೇಪಾಳದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಯಾದವ್ ಅವರು ಮಾವೋವಾದಿ ಬೆಂಬಲದಿಂದ ಸ್ಪರ್ಧಿಸಿದ್ದ ರಾಮರಾಜಾ ಪ್ರಸಾದ್ ಸಿಂಗ್ ಅವರನ್ನು ಸೋಲಿಸಿದರು. 594 ಸದಸ್ಯರ ಸಂವಿಧಾನ ರಚನಾ ಸಭೆಯಲ್ಲಿ ಯಾದವ್ ಅವರು 308 ಮತಗಳನ್ನು ಪಡೆದರೆ ಸಿಂಗ್ ಅವರು 282 ಮತಗಳನ್ನು ಗಳಿಸಿದರು.

2007: ಭಾರತದ 13ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಯುಪಿಎ- ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅಧಿಕ ಬಹುಮತದಿಂದ ಆಯ್ಕೆಯಾಗುವುದರೊಂದಿಗೆ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1934 ಡಿಸೆಂಬರ್ 19 ರಂದು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಜನಿಸಿದ ಪ್ರತಿಭಾ ಅವರು ಜಲಗಾಂವ್ ಎಂ. ಜೆ. ಕಾಲೇಜಿನಲ್ಲಿ ಪದವಿ ಪಡೆದು ನಂತರ ಮುಂಬೈನ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾನೂನು ಪದವಿ ಪಡೆದರು. 1965ರ ಜುಲೈಯಲ್ಲಿ ದೇವಿಸಿಂಗ್ ರಾಣಾಸಿಂಗ್ ಶೆಖಾವತ್ ಅವರ ಜತೆ ವಿವಾಹ. ರಾಜಕೀಯ ಜೀವನ ಆರಂಭಕ್ಕೆ ಮುನ್ನ ಅವರು ಸ್ವಂತ ಊರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಮಹಿಳಾ ಹಕ್ಕುಗಳ ಪ್ರತಿಪಾದಕರಾದ ಪ್ರತಿಭಾ ಅವರು ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಭಾರತದ ನಿಯೋಗದೊಂದಿಗೆ ಆಸ್ಟ್ರೇಲಿಯಾ ಮತ್ತು ಬೀಜಿಂಗ್ ಗೆ ಭೇಟಿ ನೀಡಿದ್ದರು. 1962ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದರು. 1985ರವರೆಗೆ ಸತತವಾಗಿ ಐದು ಬಾರಿ ಅವರು ಶಾಸಕರಾಗಿ ಆಯ್ಕೆಯಾದರು. ಪ್ರಥಮ ಬಾರಿಗೆ 1967ರಲ್ಲಿ ವಸಂತ್ ರಾವ್ ನಾಯ್ಕ ಸಂಪುಟದಲ್ಲಿ ಉಪಸಚಿವರಾಗಿ ಸಾರ್ವಜನಿಕ ಆರೋಗ್ಯ, ಪಾನ ನಿಷೇಧ, ಪ್ರವಾಸೋದ್ಯಮ, ವಸತಿ, ಸಂಸದೀಯ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದರು. ನಂತರ ಸಂಪುಟ ದರ್ಜೆ ಸಚಿವರಾದ ಅವರು ಸಮಾಜ ಕಲ್ಯಾಣ ಖಾತೆಯನ್ನು ನಿರ್ವಹಿಸಿದರು. ನಂತರ ಶಂಕರರಾವ್ ಚವ್ಹಾಣ್ ಮತ್ತು ವಸಂತದಾದಾ ಪಾಟೀಲ್ ಮಂತ್ರಿಮಂಡಲದಲ್ಲೂ ಪುನರ್ವಸತಿ, ಸಾಂಸ್ಕೃತಿಕ ಹಾಗೂ ಶಿಕ್ಷಣ ಸಚಿವರಾದರು. 1977ರಲ್ಲಿ ಕಾಂಗ್ರೆಸ್ಸಿನಲ್ಲಿ ಒಡಕು ಮೂಡಿದಾಗ ರಾಜಕೀಯ ಗುರು ವೈ. ಬಿ. ಚವ್ಹಾಣ್ ಸೇರಿದಂತೆ ಅನೇಕ ಮುಖಂಡರು ದೇವರಾಜ್ ಅರಸು ನೇತೃತ್ವದ ಕಾಂಗ್ರೆಸ್ (ಯು)ಗೆ ಸೇರಿದರೂ ಪ್ರತಿಭಾ ಅವರು ಇಂದಿರಾ ಗಾಂಧಿ ಜತೆ ಉಳಿದರು. 1978ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಜುಲೈ 1979ರಿಂದ ಫೆಬ್ರುವರಿ 1980ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಬಾಬಾ ಸಾಹೇಬ್ ಭೋಂಸ್ಲೆ ಮತ್ತು ವಸಂತದಾದಾ ಪಾಟೀಲ್ ಸಂಪುಟದಲ್ಲಿ ನಗರಾಭಿವೃದ್ಧಿ, ವಸತಿ, ನಾಗರಿಕ ಸರಬರಾಜು ಮತ್ತು ಸಮಾಜ ಕಲ್ಯಾಣ ಸಚಿವರಾಗಿ (1982ರಿಂದ 1985) ಕಾರ್ಯ ನಿರ್ವಹಿಸಿದರು. 1985ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು. 1986ರಿಂದ 1988ರ ನವೆಂಬರ್ ವರೆಗೆ ರಾಜ್ಯಸಭೆಯ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದರು. 1988ರಿಂದ 1990ರ ವರೆಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1991ರಲ್ಲಿ ಲೋಕಸಭೆಗೆ ಆಯ್ಕೆಯಾದ ಪ್ರತಿಭಾ ಸದನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1996ರ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದ ಪ್ರತಿಭಾ ಅವರನ್ನು ಯುಪಿಎ ಸರ್ಕಾರ 2004ರ ನವೆಂಬರಿನಲ್ಲಿ ರಾಜಸ್ತಾನದ ರಾಜ್ಯಪಾಲರನ್ನಾಗಿ ನೇಮಿಸಿತು. ಭಾರಿ ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಭಾ ಪಾಟೀಲ್, ಶೆಖಾವತ್ ಅವರಿಗಿಂತ 3 ಲಕ್ಷ 06, 810ರಷ್ಟು ಮೌಲ್ಯದ ಅಧಿಕ ಮತ ಗಳಿಸಿದರು. ಸಂಜೆ 4 ಗಂಟೆಯ ಹೊತ್ತಿಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಮತ ಎಣಿಕೆ ಆರಂಭವಾದಾಗಿನಿಂದ ಮುನ್ನಡೆ ಸಾದಿಸಿದ್ದ ಪ್ರತಿಭಾ ಪಾಟೀಲ್, ಎಣಿಕೆ ಪೂರ್ಣಗೊಂಡಾಗ ಒಟ್ಟು 6 ಲಕ್ಷ 38,116ರಷ್ಟು ಮೌಲ್ಯದ ಮತ ಪಡೆದರು. ಅವರ ಪ್ರತಿಸ್ಪರ್ಧಿ ಎನ್ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ 3 ಲಕ್ಷ 31,306 ರಷ್ಟು ಮೌಲ್ಯದ ಮತ ಗಳಿಸಿದರು. ಪ್ರತಿಭಾ ಒಟ್ಟು 2,931 ಮತ ಗಳಿಸಿದರೆ, ಶೆಖಾವತ್ ಅವರಿಗೆ 1,449 ಮತಗಳು ಬಂದವು.

2007: ಅಮಾನತಿನಲ್ಲಿದ್ದ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧರಿ ಅವರನ್ನು ಮರುನೇಮಕಗೊಳಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೌಧರಿ ಅವರು ಈದಿನ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು. ಚೌಧರಿ ಅವರ ಅಮಾನತನ್ನು ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದ್ದಿದವು. ಕೆಲವೆಡೆ ನಡೆದ ಪ್ರತಿಭಟನೆಗಳು ಹಿಂಸಾರೂಪವನ್ನೂ ಪಡೆದಿದ್ದವು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ ಚೌಧರಿ ಅವರನ್ನು ಅಮಾನತು ಮಾಡಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಫಕೀರ್ ಹುಸೇನ್ ಅವರನ್ನೂ ಸರ್ಕಾರ ಅಮಾನತುಗೊಳಿಸಿತ್ತು. ಹುಸೇನ್ ಅವರನ್ನು ಹುದ್ದೆಗೆ ಮರುನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್ ಆದೇಶ ನೀಡಿತು.

2007: ವಾಯವ್ಯ ಪಾಕಿಸ್ತಾನದಲ್ಲಿ ಭಾರಿ ಚಂಡಮಾರುತದಿಂದ ಸಂಭವಿಸಿದ ಮಳೆ ಹಾಗೂ ಭೂ ಕುಸಿತಕ್ಕೆ 50 ಮಂದಿ ಬಲಿಯಾದರು. ಎರಡು ಗ್ರಾಮಗಳು ಸಂಪೂರ್ಣ ನಾಮಾವಶೇಷವಾದವು. ಪೇಶಾವರದಿಂದ 150 ಮೈಲು ದೂರದ ದಿರ್ಬಾಲ ಜಿಲ್ಲೆಯಲ್ಲಿರುವ ಈ ಎರಡು ಗ್ರಾಮಗಳಲ್ಲಿ ಕುಸಿದ ಮನೆಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಯಿತು. ಚಂಡಮಾರುತದಲ್ಲಿ ನೂರಾರು ಮಂದಿ ನಾಪತ್ತೆಯಾದರು.

2007: ವಿಶ್ವದ ಪುಸ್ತಕ ಪ್ರಿಯರನ್ನು ಮಾಯಾಜಾಲದಂತೆ ಸೆಳೆದ `ಹ್ಯಾರಿ ಪಾಟರ್' ಪುಸ್ತಕ ಸರಣಿಯ ಏಳನೇ ಹಾಗೂ ಕೊನೆಯ ಆವೃತ್ತಿ `ಹ್ಯಾರಿ ಪಾಟರ್ ಅಂಡ್ ಡೆಥ್ಲಿ ಹ್ಯಾಲೋಸ್' ಪುಸ್ತಕ ವಿಶ್ವದಾದ್ಯಂತ ಈದಿನ ಬಿಡುಗಡೆಯಾಗಿದ್ದು ಎಲ್ಲೆಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿಸಿ ದೋಸೆಯಂತೆ ಮಾರಾಟವಾಯಿತು. ಬ್ರಿಟನ್, ಆಸ್ಟ್ರೇಲಿಯಾದ ಸಿಡ್ನಿ, ಸಿಂಗಪುರ, ಭಾರತದ ನವದೆಹಲಿಯಂತಹ ನಗರಗಳಲ್ಲಿ ಬೆಳಗ್ಗೆಯಿಂದಲೇ ಈ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗಳ ಮುಂದೆ ಜನರ ಸಾಲುಗಳು ಕಂಡು ಬಂದವು.

2006: ಬೆಂಗಳೂರು - ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆಯ (ಬಿಎಂಐಸಿ) ಹೆಚ್ಚುವರಿ ಭೂಮಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.

1999: ಜನತಾದಳವು ಎಚ್.ಡಿ. ದೇವೇಗೌಡ ಅವರ ನೇತ್ವತ್ವದಲ್ಲಿ ವಿಭಜನೆಗೊಂಡಿತು.

1995: ಖ್ಯಾತ ಸಂಗೀತ ನಿರ್ದೇಶಕ ಸಜ್ಜದ್ ಹುಸೇನ್ ನಿಧನ.

1977: ನೀಲಂ ಸಂಜೀವರೆಡ್ಡಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು.

1956: ಕಛ್ ಪ್ರಾಂತ್ಯದ ರಾಜಧಾನಿಯಾದ ಭುಜ್ನ ಆಗ್ನೇಯಕ್ಕೆ 24 ಮೈಲಿ ದೂರದಲ್ಲಿರುವ ಅಂಜಾರ್ ಪಟ್ಟಣ ಮತ್ತು ಸುತ್ತಮುತ್ತಣ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 87 ಜನ ಸತ್ತು 250ಕ್ಕೂ ಹೆಚ್ಚು ಜನ ಗಾಯಗೊಂಡರು.

1947: ಭಾರತದ ಸಂವಿಧಾನ ಸಮಿತಿಯು ಮೂರು ಬಣ್ಣವುಳ್ಳ ಬಾವುಟವನ್ನು ರಾಷ್ಟ್ರಧ್ವಜವಾಗಿ ಅಂಗೀಕರಿಸಿತು.

1937: ಸಾಹಿತ್ಯ ವಿಮರ್ಶಕ, ಕಲಾಪ್ರೇಮಿ, ಸಂಗೀತ ಪ್ರಿಯ ಕೃಷ್ಣಯ್ಯ ಅವರು ಹುಚ್ಚಯ್ಯ- ಕೆಂಪಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಶಿಸ್ತಿನ ಪ್ರವಚನಕಾರರಾದ ಕೃಷ್ಣಯ್ಯ ಅವರು ಸುಮಾರು 30 ಕೃತಿಗಳು ಪ್ರಕಟವಾಗಿವೆ. ಅವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

1937: ಸಾಹಿತಿ ನಾ.ಸು. ಭರತನ ಹಳ್ಳಿ ಜನನ.

1930: ಗೀತ ರಚನೆಕಾರ ಆನಂದ್ ಬಕ್ಷಿ ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಡಬ್ಲ್ಯೂ.ಸಿ. ಬ್ಯಾನರ್ಜಿ ನಿಧನರಾದರು. 1844ರ ಡಿಸೆಂಬರ್ 29ರಂದು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಜನಿಸಿದ ಬ್ಯಾನರ್ಜಿ 1885ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ಸಿನ ಮೊದಲ ಅಧಿವೇಶನದ ಅಧ್ಯಕ್ಷರಾಗಿದ್ದರು.

1798: ಪಿರಮಿಡ್ ಕಾಳಗದಲ್ಲಿ ನೆಪೋಲಿಯನ್ 60,000 ಮಮೆಲ್ಲೂಕರನ್ನು ಸೋಲಿಸಿದ.

No comments:

Post a Comment