ನಾನು ಮೆಚ್ಚಿದ ವಾಟ್ಸಪ್

Monday, July 23, 2018

ಇಂದಿನ ಇತಿಹಾಸ History Today ಜುಲೈ 23

ಇಂದಿನ ಇತಿಹಾಸ History Today ಜುಲೈ 23
2019: ಬೆಂಗಳೂರು:  6 ದಿನಗಳ ಪ್ರಹಸನದ ಬಳಿಕ ವಿಶ್ವಾಸ ಮತದಲ್ಲಿ ಮತಗಳ ಅಂತರದಲ್ಲಿ ಸೋಲುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ೧೪ ತಿಂಗಳುಗಳ ಜನತಾದಳ (ಎಸ್)- ಕಾಂಗ್ರೆಸ್ ಮೈತ್ರಿ ಸರ್ಕಾರ  ಈದಿನ ರಾತ್ರಿ  ರಾತ್ರಿ ಪತನಗೊಂಡಿತು. ವಿಧಾನಸಭೆಯಲ್ಲಿ ವಿಶ್ವಾಸ ಮತ ನಿರ್ಣಯಕ್ಕೆ ಸೋಲಾಗುತ್ತಿದ್ದಂತೆಯೇ ಕುಮಾರ ಸ್ವಾಮಿಯವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ೨೦೧೮ರ ಮೇ  ೨೩ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕುಮಾರ ಸ್ವಾಮಿಯರು ತಾವು ಅಧಿಕಾರ ವಹಿಸಿಕೊಂಡ ದಿನಾಂಕದಂದೇ ರಾಜೀನಾಮೆ ಸಲ್ಲಿಸಿದ್ದು, ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಹಂಗಾಮೀ  ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿದರು. ಕಾಂಗ್ರೆಸ್ ಮತ್ತು ಜನತಾದಳದ ೧೬ ಮಂದಿ ಶಾಸಕರ ರಾಜೀನಾಮೆಯ ಹಿನ್ನೆಲೆಯಲ್ಲಿ ಜುಲೈ ೧೮ರಂದು ಮಂಡಿಸಲಾದ  ವಿಶ್ವಾಸಮತ ನಿರ್ಣಯವನ್ನು  ಈದಿನ ರಾತ್ರಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ ಕುಮಾರ್ ಅವರು ಮತಕ್ಕೆ ಹಾಕಿದಾಗ ಸದನದಲ್ಲಿ ಹಾಜರಿದ್ದ ಸದಸ್ಯರ ಪೈಕಿ ನಿರ್ಣಯದ ಪರವಾಗಿ ೯೯ ಮಂದಿ ಮತ ಚಲಾಯಿಸಿದರೆ ನಿರ್ಣಯದ ವಿರುದ್ಧವಾಗಿ ೧೦೫ ಮಂದಿ  ಮತಚಲಾಯಿಸಿದರು. ವಿಶ್ವಾಸ ಮತ ನಿರ್ಣಯದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಉತ್ತರ ನೀಡಿದ ಬಳಿಕ ಸಭಾಧ್ಯಕ್ಷರು ಮೊದಲು ಧ್ವನಿ ಮತದ ಮೂಲಕ ನಿರ್ಣಯಕ್ಕೆ ಒಪ್ಪಿಗೆ ಕೇಳಿದರು. ಬಳಿಕ ವಿರೋಧ ಪಕ್ಷದ ನಾಯಕರು ಮತವಿಭಜನೆಗೆ ಕೋರಿದಾಗ ಸಭಾಧ್ಯಕ್ಷರು ನಿರ್ಣಯವನ್ನು ಮತಕ್ಕೆ ಹಾಕಿದರು. ವಿಶ್ವಾಸಮತ ಕಲಾಪ ಮುಕ್ತಾಯದ ಬಳಿಕ ಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು. ವಿಶ್ವಾಸಮತ ನಿರ್ಣಯ ಮಂಡಿಸಿದ ಬಳಿಕ ಇಲ್ಲಿಯವರೆಗೆ ನಡೆದ ಚರ್ಚೆಗೆ ಉತ್ತರ ನೀಡಿದ ಕುಮಾರ ಸ್ವಾಮಿ ಅವರು ತಮ್ಮ ಬಗೆಗಿನ ನಕಾರಾತ್ಮಕ ವರದಿಗಳು ತಮಗೆ ಅತ್ಯಂತ ವೇದನೆ ಉಂಟು ಮಾಡಿವೆ. ಆದ್ದರಿಂದ ಮುಖ್ಯಮಂತ್ರಿ ಪದವನ್ನುಅತ್ಯಂತ ಖುಷಿಯೊಂದಿಗೆತ್ಯಜಿಸಲು ತಾನು ಸಿದ್ಧನಾಗಿದ್ದೇನೆ ಎಂದು ಹೇಳಿದರು. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದಂದಿನಿಂದ ಇಲ್ಲಿಯವರೆಗಿನ ಘಟನಾವಳಿಗಳನ್ನು ನೆನಪು ಮಾಡಿಕೊಂಡ ಅವರು  ’ನಿರಂತರ ಪತನ ಭೀತಿಯಲ್ಲೇ ನಾನು ಸರ್ಕಾರವನ್ನು ನಡೆಸಿದ್ದೇನೆ ಎಂದು ಹೇಳಿದರುತಮ್ಮ ಸರ್ಕಾರದ ಬಗೆಗಿನ ಆರೋಪಗಳೆಲ್ಲವನ್ನೂ ಅಲ್ಲಗಳೆದ ಮುಖ್ಯಮಂತ್ರಿನನ್ನನ್ನು ವಚನ ಭ್ರಷ್ಟಎಂಬುದಾಗಿ ಕರೆಯಬೇಡಿ ಎಂದು ಕೋರಿದರು. ಕಲಾಪದ ಮಧ್ಯೆ ಒಂದು ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ರಮೇಶ ಕುಮಾರ್ ಅವರುಈದಿನ ಯಾವುದೇ ಪರಿಸ್ಥಿತಿ ಎದುರಿಸಲೂ ನಾನು ಸಜ್ಜಾಗಿಯೇ ಬಂದಿದ್ದೇನೆಎಂಬುದಾಗಿ ಹೇಳಿ ತಾವು ಬರೆದು ಕಿಸೆಯಲ್ಲಿ ಇಟ್ಟುಕೊಂಡಿದ್ದ ರಾಜೀನಾಮೆ ಪತ್ರವನ್ನು ಓದುವಂತೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಳುಹಿಸಿಕೊಟ್ಟರುವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಶಾಸಕರನ್ನು ದ್ರೋಹಿಗಳು ಎಂಬುದಾಗಿ ಟೀಕಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಅವರನ್ನು ಎಂದಿಗೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲಎಂಬುದಾಗಿ ಸದನದಿಂದಲೇ ರಾಜೀನಾಮೆ ನೀಡಿದ ಶಾಸಕರಿಗೆ ಎಚ್ಚರಿಕೆ ರವಾನಿಸಿದರು.  ರಾಜೀನಾಮೆ ನೀಡಿದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ ಎಂದು ಬಿಜೆಪಿಗೆ ಸಲಹೆ ಮಾಡಿದ ಸಿದ್ದರಾಮಯ್ಯಅಧಿಕಾರಕ್ಕೆ ಬಂದ ಸ್ವಲ್ಪ ದಿನದಲ್ಲೇ ನಿಮಗೂ ಅನುಭವ ಆಗಲಿದೆ. ಆಗ ನಿಮ್ಮ ಶಾಸಕರು ನಮ್ಮ ಕಡೆಗೆ ಬರಲಿದ್ದಾರೆಎಂದು ಭವಿಷ್ಯ ನುಡಿದರುರೈತರ ಸಾಲಮನ್ನಾದಿಂದ ಹಿಡಿದು ಬರಗಾಲ, ಕೊಡಗಿನ ಅತಿವೃಷ್ಟಿ ಸಂದರ್ಭದಲ್ಲಿ ನೀಡಿದ ನೆರವನ್ನು ನೆನಪಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ, ತಾವು ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸಿರುವುದಾಗಿ ಪ್ರತಿಪಾದಿಸಿದರು. ’ಕಿಸಾನ್ ಸಮ್ಮಾನ್ಯೋಜನೆಯ ಫಲಾನುಭವಿ ರೈತರ ಹೆಸರುಗಳನ್ನು ಕೂಡಾ ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು. ರಾಜೀನಾಮೆ ಕೊಟ್ಟ ಶಾಸಕರು ತಮ್ಮ ಬಗ್ಗೆ ಮಾಡಿದ ಆಪಾದನೆಗಳನ್ನು ಕೂಡಾ ತಳ್ಳಿಹಾಕಿದ ಮುಖ್ಯಮಂತ್ರಿ ಬಂಡಾಯಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ ಅನುದಾನ, ಅವರಿಗೆ ಕೊಟ್ಟ ಅಧಿಕಾರದ ಹುದ್ದೆಗಳನ್ನು ನೆನಪಿಸಿದರು.  ಜುಲೈ 18ರ ಗುರುವಾರದಿಂದ  ಈದಿನದವರೆಗೂ ನಿರ್ಣಯದ ಮೇಲೆ ವಿಶ್ವಾಸ ಮತಯಾಚನೆ ಮಾಡುವಂತೆ ವಿರೋಧಿ ಬಿಜೆಪಿಯ ಆಗ್ರಹದ ಜೊತೆಗೆ ರಾಜ್ಯಪಾಲರೂ ಎರಡು ಬಾರಿ ಗಡುವುಗಳನ್ನು ನೀಡಿದ್ದರು. ಜುಲೈ 20ರ ಶನಿವಾರ ವಿಶ್ವಾಸಮತ ಕಲಾಪವನ್ನು ಮುಗಿಸುವಂತೆ ಸಭಾಧ್ಯಕ್ಷ ರಮೇಶ ಕುಮಾರ್ ಅವರು ಮೈತ್ರಿ ಸರ್ಕಾರಕ್ಕೆ  ಪಟ್ಟು ಹಿಡಿದು ಸೂಚಿಸಿದ್ದರು. ಆದರೆ ಮುಖ್ಯಮಂತ್ರಿ  ಕುಮಾರ ಸ್ವಾಮಿ ಮತ್ತು ಆಡಳಿತಾರೂಢ ಮೈತ್ರಿ ಸರ್ಕಾರದ ನಾಯಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿ ನೀಡಿರುವ ಸುಪ್ರೀಂಕೋರ್ಟಿನ ತೀರ್ಪಿನಿಂದ ತಮ್ಮ ವಿಪ್ ನೀಡಿಕೆ ಹಕ್ಕಿಗೆ ಧಕ್ಕೆಯಾಗಿದೆ ಎಂದು ಹೇಳಿ ಅದರ ಬಗ್ಗೆ ಮೊದಲು ಇತ್ಯರ್ಥವಾಗಬೇಕು ಎಂದು ಆಗ್ರಹಿಸಿದ್ದರು. ವಿಚಾರವಾಗಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಯವರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯ ಬಗೆಗಿನ ಸುಪ್ರೀಂಕೋರ್ಟ್ ತೀರ್ಮಾನದವರೆಗೂ ಕಾಯಬೇಕು ಎಂದು ಆಗ್ರಹಿಸಿದ್ದರುಜುಲೈ  22ರ ಸೋಮವಾರ ಕಲಾಪ ಮುಕ್ತಾಯಗೊಳಿಸುವುದಾಗಿ ಆಡಳಿತ ಪಕ್ಷ ನೀಡಿದ ಭರವಸೆಯನ್ನು ಅನುಸರಿಸಿ ಸಭಾಧ್ಯಕ್ಷರು ಶುಕ್ರವಾರ ಕಲಾಪವನ್ನು  ಮುಂದೂಡಿದ್ದರು. ಆದರೆ  ಜುಲೈ 22ರ ಸೋಮವಾರ ಕೂಡಾ ಆಡಳಿತಾರೂಢ ಮೈತ್ರಿಕೂಟದ ಸದಸ್ಯರ ಗದ್ದಲದಿಂದಾಗಿ ಕಲಾಪ ರಾತ್ರಿ ೧೧ ಗಂಟೆಯವರೆಗೂ ಪೂರ್ಣಗೊಳ್ಳದೆ ಸಭಾಧ್ಯಕ್ಷರು ಈದಿನಕ್ಕೆ ಕಲಾಪವನ್ನು ಮುಂದೂಡಿದ್ದರು. ಏನಿದ್ದರೂ ಸಂಜೆ ೬ಗಂಟೆಯ ಒಳಗಾಗಿ ಕಲಾಪ ಮುಕ್ತಾಯಗೊಳಿಸಲೇಬೇಕು ಎಂಬುದಾಗಿ ಗಡುವು  ನೀಡಿದ್ದರು. ಮಧ್ಯೆ ಪಕ್ಷೇತರ ಸದಸ್ಯರು ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬೆಳಗ್ಗೆ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ ಈದಿನ ಸಂಜೆಯ ಒಳಗಾಗಿ ವಿಶ್ವಾಸಮತ ಕಲಾಪ ಮುಕ್ತಾಯಗೊಳ್ಳುವ ವಿಶ್ವಾಸ ವ್ಯಕ್ತ ಪಡಿಸಿ ವಿಚಾರಣೆಯನ್ನು  ಮುಂದೂಡಿತ್ತು. ಮಧ್ಯೆ, ರಾಜೀನಾಮೆ ಸಲ್ಲಿಸಿ, ಮುಂಬೈಗೆ ತೆರಳಿದ್ದ ಬಂಡಾಯ ಶಾಸಕರು ತಾವು ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಖಡಾಖಂಡಿತ ಸಂದೇಶವನ್ನು ವಿಡಿಯೋ ಮೂಲಕ ನೀಡಿದ್ದರು. ಬೆಳಗ್ಗೆ ಕಲಾಪ ಆರಂಭವಾದರೂ ಮುಖ್ಯಮಂತ್ರಿ ಸದನಕ್ಕೆ ಆಗಮಿಸದೆ ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆಗಳಲ್ಲಿ ಮಗ್ನರಾಗಿದ್ದರು. ಬಿಜೆಪಿಯು ಟ್ವೀಟ್ ಮೂಲಕ ಮುಖ್ಯಮಂತ್ರಿಯ ವರ್ತನೆಯನ್ನು ಟೀಕಿಸಿತ್ತು. ಮಧ್ಯಾಹ್ನ ಮೈತ್ರಿನಾಯಕರು ಸದನಕ್ಕೆ ಆಗಮಿಸಿ ಕಲಾಪದಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸುದೀರ್ಘವಾಗಿ ಮಾತನಾಡಿ ತಮ್ಮ ರಾಜಕೀಯ, ಆರೋಪಗಳ ಬಗ್ಗೆ ನೆನಪು ಮಾಡಿದರು. ರಾಜೀನಾಮೆ ನೀಡಿದ ಶಾಸಕರು ಬಿಜೆಪಿ ಭರವಸೆಗೆ ಬಲಿಯಾಗದೆ ಸದನಕ್ಕೆ ಬರಬೇಕು ಎಂದು ಹಂತದಲ್ಲೂ ಅವರು ಮನವಿ ಮಾಡಿದರು. ಬರದೇ ಇದ್ದಲ್ಲಿ ಅವರು ಸದಸ್ಯತ್ವದಿಂದ ಅನರ್ಹಗೊಂಡು ಶಾಶ್ವತವಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಲಿದ್ದಾರೆ ಎಂದೂ ಎಚ್ಚರಿಸಿದರು. ೨೨೫ ಸದಸ್ಯಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್-ಜನತಾದಳ (ಎಸ್)ಮೈತ್ರಿ ಸರ್ಕಾರ ೧೧೭ ಸದಸ್ಯರನ್ನು ಹೊಂದಿತ್ತು. ಅವರ ಪೈಕಿ ೭೮ ಮಂದಿ ಕಾಂಗ್ರೆಸ್, ೩೭ ಮಂದಿ ಜೆಡಿ(ಎಸ್) ಮತ್ತು ಒಬ್ಬರು ಬಿಎಸ್ಪಿ ಸದಸ್ಯರಾಗಿದ್ದರೆ, ಒಬ್ಬರು ನಾಮನಿರ್ದೇಶಿತ ಸದಸ್ಯ ಮತ್ತು ಒಬ್ಬರು ಸಭಾಧ್ಯಕ್ಷರು. ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ವಿಧಾನಸಭೆಯಲ್ಲಿ ೧೦೭ ಸದಸ್ಯರ ಬೆಂಬಲ ಪಡೆದಿತ್ತು. ೧೬ ಮಂದಿ ಶಾಸಕರ ರಾಜೀನಾಮೆಯ ಪರಿಣಾಮವಾಗಿ ಆಡಳಿತಾರೂಢ ಮೈತ್ರಿ ಸರ್ಕಾರದ ಸದಸ್ಯ ಬಲ ೧೦೧ಕ್ಕೆ ಇಳಿದು ಅದು ಅಲ್ಪಮತಕ್ಕೆ ಕುಸಿದಿತ್ತು. ವಿಶ್ವಾಸ ಮತವನ್ನು ಈದಿನ ಮತಕ್ಕೆ ಹಾಕಿದಾಗ ಆಡಳಿತಾರೂಢ ಮೈತ್ರಿಕೂಟದ ೧೭ ಸದಸ್ಯರು ಸೇರಿದಂತೆ ಒಟ್ಟು ೨೦ ಶಾಸಕರು ಸದನದಲ್ಲಿ ಗೈರು ಹಾಜರಾಗಿದ್ದರು. ಗೈರುಹಾಜರಾದವರಲ್ಲಿ ಇಬ್ಬರು ಪಕ್ಷೇತರರಾದರೆ, ಇನ್ನೊಬ್ಬ ಸದಸ್ಯ ಬಿಎಸ್ಪಿಯ ಎನ್.ಮಹೇಶ್. ಬಿಎಸ್ಪಿ ಸದಸ್ಯ ಕೊಳ್ಳೆಗಾಲದ ಮಹೇಶ್ ಅವರಿಗೆ ಮೈತ್ರಿ ಸರ್ಕಾರವನ್ನು ಬೆಂಬಲಿಸುವಂತೆ ನಾಯಕಿ ಮಾಯಾವತಿ ಸೂಚಿಸಿತ್ತು. ಆದರೆ, ಮಹೇಶ್ ಅವರು ಅದನ್ನು ನಿರ್ಲಕ್ಷಿಸಿದ್ದರು.  ಸರ್ಕಾರ ಪತನದ ಬೆನ್ನಲ್ಲೇ  ಬಿಎಸ್ ಪಿ ನಾಯಕ ಮಾಯಾವತಿ ಅವರು ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಟ್ವೀಟ್ ಮಾಡಿದರು.
2019: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು ಮುದ್ದಾದ ಮಗು ಒಂದರ ಜೊತೆಗೆ ಆಟವಾಡುತ್ತಿರುವ ಎರಡು ಸುಂದರ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ  ಈದಿನ  ಪ್ರಕಟಿಸಿದ್ದು, ಚಿತ್ರಗಳು ಸಾಮಾಜಿಕ ಮಾಧ್ಯಮವನ್ನು ಹುಚ್ಚೆಬ್ಬಿಸಿದವು. ‘ಮೋದಿ ಅವರ ಕೈಗಳಲ್ಲಿ ಕಿಸಿ ಕಿಸಿ ನಗುತ್ತಿರುವ ಮಗು ಯಾರು?’ ಎಂಬ ಪ್ರಶ್ನೆ ಇನ್ಸ್ಟಾ ಗ್ರಾಮ್ ಮತ್ತು ಟ್ವಿಟ್ಟರಿನಲ್ಲಿ ವೈರಲ್ ಆಯಿತು.  ‘ಮೋದಿಯವರು ಚಿತ್ರಗಳ ಜೊತೆಗೆ  ’ಸಂಸತ್ತಿಗೆ ತಮ್ಮನ್ನು ಭೇಟಿ ಮಾಡಲು ಬಂದ ವಿಶೇಷ  ಗೆಳೆಯಎಂಬುದಾಗಿ ಉಲ್ಲೇಖಿಸಿದ್ದರು.  ’ಅತ್ಯಂತ ವಿಶೇಷ ಗೆಳೆಯರೊಬ್ಬರು ನನ್ನನ್ನು ಭೇಟಿ ಮಾಡಲು ಈದಿನ ಸಂಸತ್ತಿಗೆ ಬಂದಿದ್ದಾರೆಎಂಬುದಾಗಿ ಪ್ರಧಾನಿ ಮೊದಲ ಫೋಟೋ ಕೆಳಗೆ ಕ್ಯಾಪ್ಷನ್ ಬರೆದಿದ್ದರು. ಮೊದಲ ಫೋಟೋದಲ್ಲಿ ಮಗು ಮೋದಿಯವರನ್ನು ನೋಡುತ್ತಾ ನಗುತ್ತಿರುವ ದೃಶ್ಯವಿತ್ತು.  ಎರಡನೇ ಫೊಟೋದಲ್ಲಿ ಮಗು ತನ್ನ ಮುಂದೆ ಮೇಜಿನ ಮೇಲೆ ಇಡಲಾಗಿದ್ದ ಚಾಕೋಲೇಟ್ ಬಾರ್ಗಳನ್ನು ಸೆಳೆದುಕೊಳ್ಳಲು ಹವಣಿಸುತ್ತಿರುವಂತಿಂತಿತ್ತು. ಪ್ರಧಾನಿ ಮೋದಿಯವರು ಮಕ್ಕಳ ಜೊತೆಗೆ ಫೊಟೋ ತೆಗೆಸಿಕೊಳ್ಳುವುದು ಇದೇ ಮೊದಲೇನಲ್ಲ, ಆದರೆ ಮಗುವನ್ನು ಅವರುವಿಶೇಷ ಗೆಳೆಯಎಂಬುದಾಗಿ ಕರೆದಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಿದ್ದರೆ ಮಗು ನಿಜವಾಗಿ ಯಾರು ಎಂಬ ಪ್ರಶ್ನೆಯನ್ನು ಎಲ್ಲರಲ್ಲೂ ಹುಟ್ಟು ಹಾಕಿತು. ಚಿತ್ರಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಕ್ಕೂ ಹೆಚ್ಚು ಲೈಕ್ಗಳು ಮತ್ತು ಪ್ರತಿಕ್ರಿಯೆಗಳಂತೂ ಬಂದಿದ್ದು ಬಹುತೇಕ ಮಂದಿ ಮಗು ಯಾರು ಇರಬಹುದು ಎಂಬುದಾಗಿ ಪ್ರಶ್ನೆ ಕೇಳಿದರು ಇಲ್ಲವೇ ಊಹೆ ಮಾಡಿದರು. ಇನ್ಸ್ಟಾಗ್ರಾಮ್ ಪ್ರತಿಕ್ರಿಯೆಗಳ ವಿಭಾಗದಲ್ಲಿ ಪ್ರಶ್ನೆಗಳ ಪ್ರವಾಹವೇ ಹರಿಯಿತು. ಇನ್ಸಾಗ್ರಾಮ್ ಬಳಕೆದಾರರೊಬ್ಬರು ಮಗು ರೋಹಿತ್ ಶರ್ಮ ಅವರ ಪುತ್ರಿ ಇರಬಹುದು ಎಂದು ಊಹೆ ಮಾಡಿದರೆ,   ಇನ್ನೊಬ್ಬರು ಗೃಹ ಸಚಿವ ಅಮಿತ್ ಶಾ ಅವರ ಮೊಮ್ಮಗು ಇರಬಹುದು ಎಂದು ಬರೆದರು. ಆದರೆ  ಉತ್ತರ ಮಾತ್ರ ಯಾರಿಗೂ ಲಭಿಸಲಿಲ್ಲ.
2019: ನವದೆಹಲಿ: ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಮನವಿಯನ್ನೂ ಮಾಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು  ಸಂಸತ್ತಿನ ಉಭಯ ಸದನಗಳಲ್ಲೂ ಸ್ಪಷ್ಟ ಪಡಿಸಿದರು.  ‘ಅಂತಹ ಯಾವುದೇ ಮನವಿಯನ್ನೂ ಪ್ರಧಾನಿ ಮೋದಿಯವರು ಮಾಡಿಲ್ಲ ಎಂಬುದಾಗಿ ಸದನಕ್ಕೆ ನಾನು ಖಡಾಖಂಡಿತ ಭರವಸೆ ನೀಡಲು ಇಚ್ಛಿಸುತ್ತೇನೆಎಂದು ಜೈಶಂಕರ್ ಅವರು ಸಂಸತ್ತಿನ ಉಭಯ ಸದನಗಳಲ್ಲೂ ನೀಡಿದ ಒಂದೇ ರೀತಿಯ ಹೇಳಿಕೆಗಳಲ್ಲಿ ತಿಳಿಸಿದರುಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದ ವಿರೋಧಿ ಸದಸ್ಯರು ಪ್ರಧಾನಿ ಮೋದಿ ಅವರ ಹೇಳಿಕೆಗಾಗಿ ಆಗ್ರಹಿಸಿ, ಬಳಿಕ ಸಭಾತ್ಯಾಗ ಮಾಡಿದರುಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವರು ಪಾಕಿಸ್ತಾನದ ಜೊತೆಗಿನ  ಯಾವುದೇ ಬಾಕಿ ವಿಷಯಗಳನ್ನು ದ್ವಿಪಕ್ಷೀಯವಾಗಿ ಮಾತ್ರವೇ ಚರ್ಚಿಸಲಾಗುವುದು ಎಂಬುದು ಭಾರತ ನಿರಂತರವಾಗಿ ತಾಳಿರುವ ನಿಲುವು ಎಂದು ಹೇಳಿದರು. ‘ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯು ಭಾರತ ಮತ್ತು ಪಾಕಿಸ್ತಾನದ ನಡುವಣ ಎಲ್ಲ ವಿಷಯಗಳನ್ನೂ ದ್ವಿಪಕ್ಷೀಯವಾಗಿ ಇತ್ಯರ್ಥ ಪಡಿಸಲು ಅಡಿಪಾಯ ಒದಗಿಸಿವೆಎಂದು ಜೈಶಂಕರ್ ನುಡಿದರುಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗೆ ಸೋಮವಾರ ನಡೆಸಿದ ಪ್ರಾಥಮಿಕ ಮಾತುಕತೆ ವೇಳೆಯಲ್ಲಿ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಣ ಕಾಶ್ಮೀರ ವಿಷಯವನ್ನು ಇತ್ಯರ್ಥ ಪಡಿಸಲು ನೆರವು ನೀಡುವುದಾಗಿ ತಿಳಿಸಿದ ಬಗೆಗಿನ ವರದಿಗಳು ಪ್ರಕಟವಾದ ಒಂದು ದಿನದ ಬಳಿಕ ಸಚಿವರು ಸ್ಪಷ್ಟನೆ ನೀಡಿದರು.  ಪ್ರಧಾನಿ ಮೋದಿ ಅವರು ಕೆಲವು ವಾರಗಳ ಹಿಂದೆ ತಮ್ಮ ಜೊತೆಗಿನ ಭೇಟಿ ಕಾಲದಲ್ಲಿ ಇಂತಹುದೇ ಮನವಿಯನ್ನು ಮಾಡಿದ್ದರು ಎಂಬುದಾಗಿ ಟ್ರಂಪ್ ಹೇಳಿದ್ದರು. ಟ್ರಂಪ್ ಅವರ ಪ್ರತಿಪಾದನೆಯನ್ನು ಭಾರತ ತಿರಸ್ಕರಿಸಿತ್ತು.  ‘ನಾನು ನೆರವು ನೀಡಲು ಸಾಧ್ಯವಾಗುವುದಾದರೆ, ಮಧ್ಯಸ್ಥಿಕೆದಾರನಾಗಲು ನಾನು ಇಷ್ಟಪಡುತ್ತೇನೆಎಂದು ಟ್ರಂಪ್ ಹೇಳಿದ್ದರು. ಶ್ವೇತಭವನದಲ್ಲಿ ಜಂಟಿಯಾಗಿ ಕಾಣಿಸಿಕೊಂಡ ವೇಳೆಯಲ್ಲಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯವನ್ನು ಇತ್ಯರ್ಥಪಡಿಸಲು ಅಮೆರಿಕದ ನೆರವನ್ನು ತಾವು ಇಷ್ಟ ಪಡುವುದಾಗಿ ಹೇಳಿದ್ದನ್ನು ಅನುಸರಿಸಿ ಟ್ರಂಪ್ ಮಧ್ಯಸ್ಥಿಕೆದಾರನಾಗುವ ಕೊಡುಗೆ ಮುಂದಿಟ್ಟಿದ್ದರು. ಏನಿದ್ದರೂ, ಕಾಶ್ಮೀರವುದ್ವಿಪಕ್ಷೀಯ ವಿಷಯವಾಗಿದ್ದುಉಭಯ ರಾಷ್ಟ್ರಗಳು ಬಯಸಿದರೆ ಮಾತ್ರ ತಾನು ಭಾರತ-ಪಾಕಿಸ್ತಾನಕ್ಕೆ ನೆರವು ನೀಡುವುದಾಗಿ ಹೇಳುವ ಮೂಲಕ ಅಮೆರಿಕವು ತನ್ನ ಹೇಳಿಕೆಯಿಂದ  ಈದಿನ ಹಿಂದೆ ಸರಿಯಿತು.  ‘ಭಯೋತ್ಪಾದನೆ ನಿಗ್ರಹ ಕ್ರಮಗಳನ್ನು ಸಮಪರ್ಕಕವಾಗಿ ಕೈಗೊಳ್ಳುವ ಅಗತ್ಯವಿದೆ ಎಂಬುದಾಗಿ ತಿಳಿಸುವ ಮೂಲಕ ವಿವಾದ ಇತ್ಯರ್ಥಕ್ಕೆ ಪಾಕಿಸ್ತಾನವೇ ಜವಾಬ್ದಾರಿ ಮತ್ತು ಉತ್ತರದಾಯಿಎಂದು ಪಾಕಿಸ್ತಾನಕ್ಕೆ ಖಡಾಖಂಡಿತ ಮಾತುಗಳಲ್ಲಿ ಅಮೆರಿಕ ನೆನಪಿಸಿತು.  ‘ಭಾರತ ಮತ್ತು ಪಾಕಿಸ್ತಾನದ ನಡುವಣ ಯಾವುದೇ ಯಶಸ್ವೀ ಮಾತುಕತೆಗೆ ಪಾಕಿಸ್ತಾನವು ಉಗ್ರಗಾಮಿಗಳು ಮತ್ತು ಭಯೋತ್ಪಾದಕರ ವಿರುದ್ಧ ತನ್ನ ನೆಲದಲ್ಲಿ  ಕೈಗೊಳ್ಳುವ ದೃಢ ಮತ್ತು ಶಾಶ್ವತ ಕ್ರಮಗಳೇ ಆಧಾರಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದರುಪ್ರಧಾನಿಯಿಂದ ದ್ರೋಹ- ರಾಹುಲ್: ಮಧ್ಯೆ, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿಯವರು ತಮ್ಮನ್ನು ಕೋರಿದ್ದಾರೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಪಾದನೆ ನಿಜವಾಗಿದ್ದರೆ, ನರೇಂದ್ರ ಮೋದಿಯವರು ರಾಷ್ಟ್ರದ ಹಿತಾಸಕ್ತಿಗಳಿಗೆ ದ್ರೋಹ ಎಸಗಿದ್ದಾರೆ (ಎಂದು ಅರ್ಥ)’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಟೀಕಿಸಿದರು.  ಟ್ವೀಟ್ ಒಂದನ್ನು ಮಾಡಿದ ರಾಹುಲ್ವಿದೇಶಾಂಗ ಸಚಿವಾಲಯದ ದುರ್ಬಲ ನಿರಾಕರಣೆಯಿಂದ ಪ್ರಯೋಜನವಿಲ್ಲ. ಟ್ರಂಪ್ ಜೊತೆಗಿನ ತಮ್ಮ ಮಾತುಕತೆಯಲ್ಲಿ ಏನು ನಡೆಯಿತು ಎಂಬುದನ್ನು ಮೋದಿಯವರು ರಾಷ್ಟ್ರಕ್ಕೆ ವಿವರಿಸಬೇಕುಎಂದು ಆಗ್ರಹಿಸಿದರು.   ಮಧ್ಯೆ ಕಾಂಗ್ರೆಸ್ ಪಕ್ಷವು ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿ ಶಾಮೀಲಾಗುವ ಪ್ರಶ್ನೆಯಿಲ್ಲ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ್ದನ್ನು ಕಾಂಗ್ರೆಸ್ ಸ್ವಾಗತಿಸಿತು. ಆದರೆ ಟ್ರಂಪ್ ಅವರ ಪ್ರತಿಪಾದನೆ ಬಗ್ಗೆ ಮೋದಿಯವರು ಏಕೆ ಮೌನ ತಾಳಿದ್ದಾರೆ ಎಂದು ಪಕ್ಷ ಪ್ರಶ್ನಿಸಿತುಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಮೋದಿಯವರು ತಮಗೆ ಮನವಿ ಮಾಡಿದ್ದರು ಎಂಬುದಾಗಿ ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಸಂದರ್ಭದಲ್ಲಿ ಹೇಳಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿರಸ್ಕರಿಸಿತ್ತು.
2019: ನವದೆಹಲಿ: ಅಸ್ಸಾಮ್ ವಿಧಾನಸಭೆಯಲ್ಲಿ ರಾಷ್ಟ್ರೀಯ ಪೌರ ದಾಖಲೆಯನ್ನು (ಎನ್ಆರ್ಸಿ) ಪ್ರಕಟಿಸುವ ಅಂತಿಮ ಗಡುವನ್ನು ಸುಪ್ರೀಂಕೋರ್ಟ್ ಮಂಗಳವಾರ ಒಂದು ತಿಂಗಳ ಅವಧಿಗೆ, ಜುಲೈ ೩೧ರ ಬದಲಿಗೆ ಆಗಸ್ಟ್ ೩೧ರವರೆಗೆ ವಿಸ್ತರಿಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವರ ಹೆಸರುಗಳನ್ನು ತಪ್ಪಾಗಿ ಸೇರಿಸಲಾಗಿದೆ ಅಥವಾ ಕೈಬಿಡಲಾಗಿದೆಯಾದ್ದರಿಂದ ಅಂತಿಮ ದಾಖಲೆ ಪ್ರಕಟಣೆಗೆ ಸಮಯ ಬೇಕು ಎಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿದ ಬಳಿಕ ಸುಪ್ರೀಂಕೋರ್ಟ್ ಅಂತಿಮ ದಾಖಲೆ ಪ್ರಕಟಣೆಯ ಗಡುವನ್ನು ವಿಸ್ತರಣೆ ಮಾಡಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜುಲೈ ೧೭ರಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಬಾಂಗ್ಲಾದೇಶದ ಗಡಿಯಲ್ಲಿರುವ ಅಸ್ಸಾಮಿನ ಜಿಲ್ಲೆಗಳಲ್ಲಿನ ಶೇಕಡಾ ೨೦ರಷ್ಟು ಹೆಸರುಗಳನ್ನು ಮತ್ತು ಉಳಿದ ಜಿಲ್ಲೆಗಳ ಶೇಕಡಾ ೧೦ರಷ್ಟು ಹೆಸರುಗಳನ್ನು ಅಂತಿಮ ರಾಷ್ಟ್ರೀಯ ಪೌರ ದಾಖಲೆಗೆ ಸೇರಿಸಿರುವ ಬಗ್ಗೆ ಮರು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿದ್ದವು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠವು ಅಸ್ಸಾಮ್ ರಾಷ್ಟ್ರೀಯ ಪೌರ ದಾಖಲೆ ಸಮನ್ವಯಕಾರ ಪ್ರತೀಕ್ ಹಜೇಲ ಅವರು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿ, ಆದೇಶವನ್ನು ನೀಡಿತು.  ಕೇಂದ್ರ ಮತ್ತು ಅಸ್ಸಾಮ್ ಸರ್ಕಾರದ ನಿಲುವನ್ನು ಕ್ರಮವಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟಿನ ಮುಂದಿಟ್ಟರು. ಉಭಯ ಸರ್ಕಾರಗಳೂ ಜುಲೈ ೧೯ರಂದುಭಾರತವು ವಿಶ್ವದ ನಿರಾಶ್ರಿತರ ರಾಜಧಾನಿಯಾಗಬಾರದುಎಂದು ಹೇಳಿ, ಅಸ್ಸಾಮ್ ಪೌರ ದಾಖಲೆಯನ್ನು ಪೂರ್ಣಗೊಳಿಸಲು ನೀಡಲಾದ ಜುಲೈ ೩೧ರ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದವು. ಬಾಂಗ್ಲಾದೇಶದ ಗಡಿಭಾಗದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಪೌರ ದಾಖಲೆಯಲ್ಲಿ ಹಲವಾರು ಅಕ್ರಮ ವಲಸಿಗರ ಹೆಸರುಗಳು ನುಸುಳಿವೆ ಎಂಬ ಗುಮಾನಿಗಳನ್ನು ನಿವಾರಿಸಲು ಮಾದರಿ ಮರುಪರಿಶೀಲನೆ ನಡೆಸಲಾಗುವುದು. ಇಂತಹ ಮರುಪರಿಶಿಲನೆಯನ್ನು ರಾಜ್ಯ ಸರ್ಕಾರದ ಬೇರೆ ಜಿಲ್ಲೆಗಳ ಅನುಭವಸ್ಥ ಮೊದಲ ದರ್ಜೆ ಅಧಿಕಾರಿಗಳು ನಡೆಸುವಂತೆ ನಿರ್ದೇಶನ ನೀಡಬೇಕೆಂದೂ ಕೇಂದ್ರ ಕೋರಿತ್ತು. ಮಾದರಿ ಮರುಪರಿಶೀಲನೆಗೆ ಪ್ರಾಥಮಿಕ ರಾಷ್ಟ್ರೀಯ ಪೌರ ದಾಖಲೆ ತಯಾರಿಸಿದ ಸ್ಥಳಕ್ಕೆ ಸಮೀಪದಲ್ಲಿ ಇರದ ಸ್ಥಳವನ್ನು ನಿಗದಿಪಡಿಸುವಂತೆಯೂ ಉಭಯ ಸರ್ಕಾರಗಳು ಕೋರಿದ್ದವು. ಪ್ರಭಾವ, ಪಕ್ಷಪಾತ, ಬೆದರಿಕೆಗಳು ನಡೆಯದಂತೆ ಎಚ್ಚರ ವಹಿಸಲು ಇಂತಹ ಕ್ರಮ ಅಗತ್ಯ ಎಂದು ಅವು ಹೇಳಿದ್ದವು. ಭಾರತೀಯ ನಾಗರಿಕರ ಹೆಸರುಗಳನ್ನು ದಾಖಲೆಯಿಂದ ಕೈಬಿಡಲಾಗಿದ್ದು ಅಕ್ರಮ ಬಾಂಗ್ಲಾದೇಶಿ ವಲಸಿಗರ ಹೆಸರುಗಳು ಕರಡುದಾಖಲೆಯಲ್ಲಿ ಸೇರ್ಪಡೆಯಾಗಿದ್ದವು ಎಂದೂ ಸರ್ಕಾರಗಳು ಆಪಾದಿಸಿದ್ದವು. ಅಸ್ಸಾಮ್  ರಾಷ್ಟ್ರೀಯ ಪೌರ ದಾಖಲೆಯ ಮೊದಲ ಕರಡನ್ನು ೨೦೧೭ರ ಡಿಸೆಂಬರ್ ೩೧ ಮತ್ತು ೨೦೧೮ರ ಜನವರಿ೧ರ ನಡುವಣ ರಾತ್ರಿ ಸುಪ್ರೀಂಕೋರ್ಟಿನ ಆದೇಶದ ಪ್ರಕಾರ ಪ್ರಕಟಿಸಿಲಾಗಿತ್ತು. .೨೯ ಕೋಟಿ ಅರ್ಜಿದಾರರ ಪೈಕಿ . ಕೋಟಿ ಜನರ ಹೆಸರನ್ನು ದಾಖಲೆಗೆ ಸೇರ್ಪಡೆ ಮಾಡಲಾಗಿತ್ತು. ೨೦ನೇ ಶತಮಾನದ ಆದಿಯಿಂದ, ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸಿರುವ ಬರುತ್ತಿರುವ ಅಸ್ಸಾಂ ರಾಜ್ಯದಲ್ಲಿ ಮಾತ್ರವೇ ರಾಷ್ಟ್ರೀಯ ಪೌರ ದಾಖಲೆಯನ್ನು ತಯಾರಿಸಲಾಗಿದ್ದು, ಮೊದಲ ದಾಖಲೆಯನ್ನು ೧೯೫೧ರಲ್ಲಿ ತಯಾರಿಸಲಾಗಿತ್ತು.



2018:  ನವದೆಹಲಿ: ರಾಜಸ್ಥಾನದ ಆಳ್ವಾರ್‌ನಲ್ಲಿ ಇತ್ತೀಚೆಗೆ ಗೋ ಕಳ್ಳಸಾಗಣೆಗಾರನೆಂಬ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಗುಂಪುಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಂದ್ರ  ವಿತ್ತ ಸಚಿವ ಪಿಯೂಷ್ ಗೋಯಲ್  ಅವರು "ದ್ವೇಷದ ದಲ್ಲಾಳಿ ಎಂದು ಟೀಕಿಸಿದರು.  ‘ರಾಜಸ್ಥಾನ ಸರ್ಕಾರವು ಗುಂಪು ಹಿಂಸೆಯ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸುವುದಾಗಿ ಹೇಳಿ ಈಗಾಗಲೇ ಚುರುಕಿನ ತನಿಖೆಯನ್ನು ನಡೆಸುತ್ತಿದೆ. ಹಾಗಿದ್ದರೂ ರಾಹುಲ್ ಗಾಂಧಿ ಅವರು ಮೊಸಳೆ ಕಣ್ಣೀರು ಸುರಿಸಿ ಚುನಾವಣಾ ಲಾಭಕ್ಕಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಗೋಯಲ್ ಅವರು ಟ್ವಿಟರ್‌ನಲ್ಲಿ ಬೆಂಕಿ ಉಗುಳಿದರು.  ‘ಪ್ರತಿಬಾರಿಯೂ ಅಪರಾಧ ಸಂಭವಿಸಿದಾಗ ಖುಷಿ ಪಡುವುದನ್ನು ನಿಲ್ಲಿಸಿ ಎಂದು ಗೋಯಲ್ ರಾಹುಲ್ ಅವರನ್ನು ಒತ್ತಾಯಿಸಿದರು. ಆಳ್ವಾರ್ ಗುಂಪು ದಾಳಿಯಲ್ಲಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಕೆಲವೇ ಕೆಲವು ಕಿಮೀಗಳಷ್ಟು ದೂರವಿದ್ದ ಆಸ್ಪತ್ರೆಗೆ ಒಯ್ಯಲು ಪೊಲಿಸರು ಮೂರು ಗಂಟೆಗಳನ್ನು ತೆಗೆದುಕೊಂಡರು ಎಂದು ರಾಹುಲ್ ಗಾಂಧಿ ಆಪಾದಿಸಿದ್ದರು. ‘ಕೇವಲ ೬ ಕಿಮೀ ದೂರವಿದ್ದ ಆಸ್ಪತ್ರೆಗೆ ಗುಂಪುದಾಳಿಯಿಂದ ಗಾಯಗೊಂಡ ರಕ್ಬರ್ ಖಾನ್ ಅವರನ್ನು ಒಯ್ಯಲು ಆಳ್ವಾರ್ ಪೊಲೀಸರು ೩ ಗಂಟೆ ತೆಗೆದುಕೊಂಡರು. ಏಕೆ? ಮಾರ್ಗಮಧ್ಯದಲ್ಲಿ ಅವರು ಚಹಕ್ಕಾಗಿ ವಾಹನ ನಿಲ್ಲಿಸಿದರು. ಇದು ಮೋದಿ ಕ್ರೌರ್‍ಯದ ’ಹೊಸ ಭಾರತ, ಇಲ್ಲಿ ಮಾನವೀಯತೆಯ ಜಾಗವನ್ನು ದ್ವೇಷ ಆಕ್ರಮಿಸಿದೆ ಮತ್ತು ಜನರನ್ನು ಚಚ್ಚಿ ಕೊಲ್ಲಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಟ್ವೀಟ್ ಮಾಡಿದ್ದರು.  ‘ರಾಜ್ಯ ಸರ್ಕಾರ ಈಗಾಗಲೇ ಸೂಕ್ತವಾದ ಕಠಿಣ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಅಧ್ಯಕ್ಷರು ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು ಎಂದು ಗೋಯಲ್ ಸೂಚಿಸಿದರು. ಇದೇ ವೇಳೆ ಕೇಂದ್ರ ಸಚಿವೆಯಾಗಿರುವ ಬಿಜೆಪಿ ನಾಯಕಿ ಸ್ಮತಿ ಇರಾನಿ ಅವರು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ "ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  "೧೯೮೪ರ ಸಿಖ್ ವಿರೋಧಿ ಹಿಂಸೆಯಲ್ಲಿ ರಾಹುಲ್ ಗಾಂಧಿ ಕುಟುಂಬ ಆ ಘೋರ ಪ್ರಕರಣದ ನೇತೃತ್ವವನ್ನೇ ವಹಿಸಿತ್ತು. ಮಾತ್ರವಲ್ಲದೆ ಭಾಗಲ್ಪುರ ಮತ್ತು ನೆಲ್ಲೀ ಹಾಗೂ ಅಂತಹ ಇತರ ಪ್ರಕರಣಗಳಲ್ಲಿ ಕೂಡ ಕಾಂಗ್ರೆಸ್ ಪಕ್ಷ  ಹಿಂಸೆಯ ರೂವಾರಿಯಾಗಿತ್ತು. ರಾಹುಲ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಒಂದೇ ಒಂದು ಅವಕಾಶವನ್ನು ಕೂಡ ಬಿಟ್ಟುಕೊಡುತ್ತಿಲ್ಲ ಎಂದು ಇರಾನಿ ಟೀಕಿಸಿದರು.  ಹರಿಯಾಣದ ಮೇವತ್ ಜಿಲ್ಲೆಯ ಕೊಲ್ಗಾಂವ್ ಗ್ರಾಮದ ಮುಸ್ಲಿಮ್ ಡೈರಿ ಮಾಲೀಕ ರಕ್ಬಾರ್ ಖಾನ್ ಅವರನ್ನು ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ೭ ಮಂದಿಯ ಗುಂಪೊಂದು ಅಕ್ರಮ ದನ ಸಾಗಣೆ ಮಾಡುತ್ತಿರುವುದಾಗಿ ಶಂಕಿಸಿ ಗುಂಪು ಹತ್ಯೆ ಗೈದಿತ್ತು.  ೨೮ರ ಹರೆಯದ ವ್ಯಕ್ತಿಯ ಗುಂಪುಹತ್ಯೆ ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಹೆಚ್ಚುತ್ತಿರುವ ಮೋದಿ ಜನಪ್ರಿಯತೆಗೂ ಈ ಘಟನೆಗೂ ನಂಟು ಬೆಸೆದು ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ಮಸಿ ಬಳಿಯಲು ಸಂಚು ನಡೆದಿದೆ ಎಂದು ಆಪಾದಿಸಿದ್ದರು.  ಗುಂಪು ಹತ್ಯೆಯನ್ನು ಅನುಸರಿಸಿ ರಾಜಸ್ಥಾನ ಪೊಲೀಸರು ಇಬ್ಬರು ಆರೋಪಿಗಳಾದ ಧರ್ಮೇಂದ್ರ ಯಾದವ್ ಮತ್ತು ಪರಮಜೀತ್ ಸಿಂಗ್ ಅವರನ್ನು ಶನಿವಾರ ಬಂಧಿಸಿದ್ದು, ನರೇಶ ಸಿಂಗ್ ಎಂಬ ಮೂರನೇ ಆರೋಪಿಯನ್ನು ಬಳಿಕ ಬಂಧಿಸಿದರು.  ಮೂರೂ ಮಂದಿ ಆರೋಪಿಗಳನ್ನು ರಾಮಗಢ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಐದು ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ನೀಡಿತ್ತು. ೨೦೧೭ರಲ್ಲಿ ಪೆಹ್ಲು ಖಾನ್ ಎಂಬ ಡೈರಿ ರೈತನೊಬ್ಬನನ್ನು ಅಕ್ರಮ ಜಾನುವಾರು ಸಾಗಣೆ ಮಾಡುತ್ತಿರುವ ಶಂಕೆಯಲ್ಲಿ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಪು ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.

2018: ನವದೆಹಲಿ: ರಫೇಲ್ ಯುದ್ದ ವಿಮಾನ ವ್ಯವಹಾರದ ವಿವರಗಳಿಗೆ ಸಂಬಂಧಿಸಿದಂತೆ ಲೋಕಸಭೆಯನ್ನು ದಾರಿ ತಪ್ಪಿಸಿದ್ದಕ್ಕಾಗಿ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ತರುವುದಾಗಿ ಕಾಂಗ್ರೆಸ್ ಪ್ರಕಟಿಸಿತು.  ‘ಬೆಲೆಯನ್ನು ಬಹಿರಂಗ ಪಡಿಸಲು ಸರ್ಕಾರಕ್ಕೆ ಅವಕಾಶ ನೀಡದಂತಹ ಯಾವುದೇ ವಿಷಯ ರಕ್ಷಣಾ ಒಪ್ಪಂದದಲಿ ಇಲ್ಲ ಎಂಬುದಾಗಿ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಹೇಳಿದ್ದಾರೆ. ಫ್ರೆಂಚ್ ನಿರ್ಮಿತ ಮಿರಾಜ್ ವಿಮಾನ ಸೇರಿದಂತೆ ಹಲವಾರು ವ್ಯವಹಾರಗಳ ಮೌಲ್ಯವನ್ನು ತಾನು ಬಹಿರಂಗ ಪಡಿಸಿದ್ದೇನೆ ಎಂದು ಅವರು ದೃಢ ಪಡಿಸಿದರು.  ‘ಈ ಘಟನೆ ಲೋಕಸಭೆಯಲ್ಲಿ ಘಟಿಸಿರುವುದರಿಂದ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಸದನದ ಸದಸ್ಯರು ಸೂಕ್ತ ಕ್ರಮ ಕೈಗೊಳ್ಳುವರು ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಆನಂದ ಶರ್ಮ ಹೇಳಿದರು. ‘ಬೆಲೆಯನ್ನು ಮಹಾಲೇಖಪಾಲ (ಸಿಎಜಿ- ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್) ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತಿಳಿಸಬೇಕು ಎಂದು ಸಂವಿದಾನವೇ ಹೇಳುತ್ತದೆ ಎಂದೂ ಆಂಟನಿ ಹೇಳಿದರು. ಪಕ್ಷವು ಹಕ್ಕುಚ್ಯುತಿ ನಿರ್ಣಯವನ್ನು ತರಲಿದೆ, ಆದರೆ ಕೇವಲ ರಕ್ಷಣಾ ಸಚಿವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಬೇಕೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಹಕ್ಕುಚ್ಯುತಿ ನಿರ್ಣಯ ತರಬೇಕೆ ಎಂಬ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ನುಡಿದರು.  ‘ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ಶ್ರೀಮತಿ ಸೀತಾರಾಮನ್ ಅವರು ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆಯಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಆಪಾದಿಸಿದ್ದರು.  ಇದಕ್ಕೆ ಉತ್ತರ ನೀಡಿದ ಸೀತಾರಾಮನ್ ಅವರು ಆಗಿನ ರಕ್ಷಣಾ ಸಚಿವರು ಒಪ್ಪಂದದ ರಹಸ್ಯಕ್ಕೆ ಸಂಬಂಧಿಸಿದಂತೆ ಸಹಿ ಹಾಕಿದ್ದು ಈ ಒಪ್ಪಂದವು ಸ್ಪಷ್ಟವಾಗಿ ವಿಮಾನಗಳ ಮೌಲ್ಯವನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಹೇಳಿದೆ ಎಂದು ತಿಳಿಸಿದ್ದರು.

2018:  ಪಾಟ್ನಾ: ಬಿಹಾರಿನ ಮುಜಾಫ್ಫರಪುರದ ಸರ್ಕಾರಿ ನೆರವಿನ ಮಕ್ಕಳ ಅಶ್ರಯ ಧಾಮದಲ್ಲಿ ಕನಿಷ್ಠ ೩೦ಕ್ಕೂ ಹೆಚ್ಚು ಮಂದಿ ಬಾಲಕಿಯರು ನಿತ್ಯಹಿಂಸೆ, ಕ್ರೌರ್ಯ, ಅತ್ಯಾಚಾರಗಳ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿದ್ದು ಸ್ವತಃ ಗಾಯಮಾಡಿಕೊಳ್ಳುವಿಕೆ ಇಲ್ಲವೇ ಆತ್ಯಹತ್ಯೆ ಯತ್ನ ನಡೆಸುತ್ತಿರುವ ಪ್ರಕರಣ ವರದಿಯಾಯಿತು. ಕನಿಷ್ಠ ಎರಡು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಾದ ನಲಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎನ್ ಎಂಸಿಎಚ್) ಹಾಗೂ ಕೊಯಿಲ್ವಾರ್ ಮಾನಸಿಕ ಆಸ್ಪತ್ರೆಯ ವೈದ್ಯರು ಈ ಬಾಲಕಿಯರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯೂ ಕಾಣುತ್ತಿಲ್ಲ ಎಂದು ಹೇಳಿದ್ದು, ಹೈದರಾಬಾದ್ ಮೂಲದ ಎನ್ ಫೋಲ್ಡ್ ಇಂಡಿಯಾ ಮತ್ತು ದೆಹಲಿಯ ಏಮ್ಸ್ ನನ್ನು ನೆರವಿಗಾಗಿ ಸಂಪರ್ಕಿಸಿದರು.  ಎನ್ ಫೋಲ್ಡ್ ಇಂಡಿಯಾ ಮತ್ತು ಏಮ್ಸ್ ನ ವೈದ್ಯರು ಮತ್ತು ಮಾನಸಿಕ ತಜ್ಞರನ್ನು ಒಳಗೊಂಡ ವಿಶೇಷ ತಜ್ಞರ ತಂಡ ಸೋಮವಾರ ಇಲ್ಲಿಗೆ ಆಗಮಿಸಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ರಾಜ್ ಕುಮಾರ್ ಹೇಳಿದರು.  ಸಣ್ಣ ಪತ್ರಕರ್ತ ಮತ್ತು ಸ್ಥಳೀಯವಾಗಿ ಪ್ರಬಲ ವ್ಯಕ್ತಿಯಾಗಿರುವ ಬೃಜೇಶ್ ಥಾಕುರ್ ಮಾಲೀಕತ್ವದ ಸರ್ಕಾರೇತರ ಸಂಘಟನೆ ಸೇವಾ ಸಂಕಲ್ಪ ಏವಂ ವಿಕಾಸ ಸಮಿತಿ ನಡೆಸುತ್ತಿರುವ ಮುಜಾಫ್ಫರಪುರದ ’ಬಾಲಿಕಾ ಗೃಹದಲ್ಲಿ ೪೨ ಬಾಲಕಿಯರಿದ್ದು, ಅವರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಯನ್ನು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ ಎಸ್) ವರದಿಯು ಬಹಿರಂಗ ಪಡಿಸಿದ ಬಳಿಕ ಈ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಬೃಜೇಶ್ ಥಾಕುರ್ ಮತ್ತು ಇತರ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಏಳರ ಹರೆಯದ ಬಾಲಕಿಯೊಬ್ಬಳೂ ಸೇರಿದಂತೆ ಅಪ್ರಾಪ್ತ ವಯಸ್ಸಿನ ೨೪ ಮಂದಿ ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದು ಅವರನ್ನು ದೈಹಿಕವಾಗಿಯೂ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ ಎಂದು ವೈದ್ಯಕೀಯ ತಪಾಸಣೆಯು ಖಚಿತ ಪಡಿಸಿತು. ಲೈಂಗಿಕ ಶೋಷಣೆಯ ಜೊತೆಗೆ ಈ ಬಾಲಕಿಯರ ದೇಹದಲ್ಲಿ ಸುಟ್ಟ ಹಾಗೂ ಗಾಯಗೊಳಿಸಿದ ಗುರುತುಗಳು ಕಂಡು ಬಂದಿದ್ದು ಅವರನ್ನು ನಿರಂತರ ಚಿತ್ರಹಿಂಸೆಗೆ ಗುರಿಮಾಡುತ್ತಿದ್ದುದು ವೈದ್ಯಕೀಯ ತಪಾಸಣೆಗಳಿಂದ ಸ್ಪಷ್ಟವಾಗಿದೆ ಎಂದು ಟಿಐಎಸ್ ಎಸ್ ವರದಿ ಹೇಳಿತು. ಮುಜಾಫ್ಫರಪುರ ಆಶ್ರಯಧಾಮದ ಬಾಲಕಿಯರ ವಿರುದ್ಧದ ಈ ಅಪರಾಧ ಕೃತ್ಯದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮತ್ತು ಸಂಸ್ಥೆಯ ಮುಖ್ಯಸ್ಥನೇ ಶಾಮೀಲಾಗಿರುವುದಾಗಿ ಆರೋಪಿಸಲಾಗಿದ್ದು, ಬಾಲಕಿಯರನ್ನು ರಕ್ಷಿಸುವ ಹೊಣೆಗಾರಿಕೆ ಹೊರಬೇಕಾಗಿದ್ದವರೇ ’ರಾಕ್ಷಸರಾದ ಘಟನೆ ಈ ಪ್ರಕರಣದಲ್ಲಿ ಘಟಿಸಿದೆ ಎಂದು ವರದಿ ತಿಳಿಸಿತು. ಪ್ರತಿಭಟಿಸಿದ ಬಾಲಕಿಯೊಬ್ಬಳನ್ನು ಥಳಿಸಿ ಕೊಂದು ಆಶ್ರಯಧಾಮದ ಆವರಣದಲ್ಲೇ ಹುಗಿಯಲಾಗಿದೆ ಎಂದೂ ವರದಿ ಹೇಳಿತು. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಅಪರಾಧ ನಿಗ್ರಹ ನಿಟ್ಟಿನಲ್ಲಿ ವಿಫಲವಾದುದಕ್ಕಾಗಿ ರಾಜ್ಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿರುವುದು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವನ್ನು ಇನ್ನಷ್ಟು ಒತ್ತಡದಲ್ಲಿ ಸಿಲುಕಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಫ್ಫರಪುರ ಪೊಲೀಸರು ವಾರದ ಒಳಗೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವ ಸಾಧ್ಯತೆಗಳಿವೆ.  ಶಂಕಿತರ ವಿರುದ್ಧ ಕ್ರಮ ಕೈಗೊಂಡ ಬೆನ್ನಲ್ಲೇ ಮೇ ೩೧ರಂದು ಆಶ್ರಯಧಾಮದ ಎಲ್ಲ ಬಾಲಕಿಯರನ್ನೂ ಪಟ್ನಾ ಮತ್ತು ಮಧುಬನಿಗೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಆದರೆ ಆ ಬಳಿಕ ಕೆಲವೇ ದಿನಗಳಲ್ಲಿ ಅವರಲ್ಲಿ ಬಹುತೇಕ ಬಾಲಕಿಯರಲ್ಲಿ ತೀವ್ರ ಖಿನ್ನತೆಯ ಲಕ್ಷಣಗಳು ಕಂಡು ಬಂದಿವೆ ಎಂದು ಮೂಲಗಳು ಹೇಳಿವೆ. ಚಿಕಿತ್ಸೆಯ ಕಾಲದಲ್ಲಿ ಈ ಬಾಲಕಿಯರು ತೀವ್ರವಾಗಿ ವ್ಯಗ್ರರಾಗುತ್ತಿದ್ದಾರೆ ಎಂದು ರಾಜ್ ಕುಮಾರ್ ಹೇಳಿದರು.  ಈ ಬಾಲಕಿಯರ ನರಕವಾಸದ ಅನುಭವವನ್ನು ವಿವರಿಸಿದ ರಾಜ್ ಕುಮಾರ್, ’ಈ ಬಾಲಕಿಯರಿಗೆ ಪ್ರತಿನಿತ್ಯ ಮಾದಕ ದ್ರವ್ಯದ ಚುಚ್ಚುಮದ್ದು ನೀಡಿ ಬಳಿಕ ಅತ್ಯಾಚಾರ ನಡೆಸಲಾಗುತ್ತಿತ್ತು. ಅವರ ದೇಹದಲ್ಲಿ ಇಂಜೆಕ್ಷನ್ ಗಾಯಗಳು ಕಂಡು ಬಂದಿವೆ. ಮಾದಕ ದ್ರವ್ಯದ ಪರಿಣಾಮವಾಗಿ ಅವರೀಗ ವ್ಯಗ್ರ ವರ್ತನೆ ತೋರುತ್ತಿದ್ದಾರೆ. ಕೆಲವರು ತಮ್ಮ ತಲೆಗಳನ್ನು ಎದುರು ಕಾಣಿಸುವ ಯಾವುದೇ ಲೋಹಕ್ಕೆ ಚಚ್ಚಲು ಯತ್ನಿಸುತ್ತಿದ್ದಾರೆ, ಎದುರಿಗೆ ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್ ಕಂಡರೂ ಅದಕ್ಕೆ ತಲೆ ಚಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ನುಡಿದರು.  ಸಂತ್ರಸ್ಥ ಬಾಲಕಿಯರ ಜೊತೆ ಕಾಲ ಕಳೆದಿರುವ ಯುನಿಸೆಫ್ ನ ಸುನಿಲ್ ಝಾ ಅವರು ’ನಿರಂತರ ಚಿತ್ರಹಿಂಸೆಯು ಅವರ ಹೃದಯಗಳನ್ನು ಛಿದ್ರಗೊಳಿಸಿದೆ. ಸಾಮಾನ್ಯ ಬದುಕಿನ ಭರವಸೆಯನ್ನೇ ಅವರು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಚಾರ್ಜ್‌ಶೀಟ್ ಸಲ್ಲಿಕೆಯ ಬಳಿಕ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಬೇಕಾಗಿರುವುದರಿಂದ ಈ ಬಾಲಕಿಯರ ಸ್ಥಿತಿ ಸುಧಾರಣೆಗೆ ಅಧಿಕಾರಿಗಳು ಆದ್ಯತೆ ನೀಡಿದರು.

2018: ನವದೆಹಲಿ: ಧರಣಿ, ಪ್ರತಿಭಟನೆ, ಸಾರ್ವಜನಿಕ ಭಾಷಣ ಕಾರ್ಯಕ್ರಮ ಇತ್ಯಾದಿಗಳಿಗೆ ಖ್ಯಾತಿ ಪಡೆದಿರುವ ದೆಹಲಿಯ  ಜಂತರ್ ಮಂತರ್ ಮತ್ತು ಬೋಟ್ ಕ್ಲಬ್ ಪ್ರದೇಶಗಳಲ್ಲಿ ಪ್ರತಿಭಟನೆ, ಧರಣಿ ನಡೆಸುವುದರ ವಿರುದ್ಧ ಸರ್ಕಾರ ವಿಧಿಸಿದ್ದ ಸಂಪೂರ್ಣ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತು.  ಸಾರ್ವಜನಿಕರು ಸೇರುವ ಇಂತಹ ತಾಣಗಳಲ್ಲಿ ಪ್ರತಿಭಟನೆ, ಧರಣಿಗಳಿಗೆ ಸಂಪೂರ್ಣ ನಿಷೇಧ ಹೇರುವಂತಿಲ್ಲ ಎಂದು ನ್ಯಾಯಾಲಯ ಹೇಳಿತು. ನಿಷೇಧಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ಒಳಗಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ತನ್ನ ಮುಂದೆ ಮಂಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್  ನಿರ್ದೇಶಿಸಿತು.  ಪರಸ್ಪರ ವಿರೋಧಾತ್ಮಕವಾಗಿರುವ ಪ್ರತಿಭಟನೆಯ ಹಕ್ಕು ಮತ್ತು ಶಾಂತಿಯುತ ಬಾಳ್ವೆಯ ಪ್ರಜಾ ಹಕ್ಕು ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ  ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ ಹೇಳಿತು.  ಜಂತರ್ ಮಂತರ್ ಮತ್ತು ಬೋಟ್ ಕ್ಲಬ್‌ನಂತಹ ಪ್ರದೇಶಗಳಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳನ್ನೂ ನಿಷೇಧಿಸುವ ನಿರ್ಧಾರವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಕೈಗೊಂಡಿತ್ತು. ಅದನ್ನು ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. 

2018: ನವದೆಹಲಿ: ವದಂತಿಗಳಿಗೆ ಕಿವಿಗೊಟ್ಟು ಮಕ್ಕಳ ಕಳ್ಳರೆಂದು, ಕೋಳಿ ಕಳ್ಳರೆಂದು ಕೆಲವು ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ನಡೆಸುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇದನ್ನು ತಡೆಗಟ್ಟಲು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಮುಂದಾಯಿತು.  ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತು. ಗುಂಪು ದಾಳಿಗಳನ್ನು ನಿಯಂತ್ರಿಸುವ ಬಗ್ಗೆ ಅಧ್ಯಯನ ಸಮಿತಿಯು ಸಲಹೆ, ಸೂಚನೆ, ಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಿದೆ.  ಕಾನೂನು, ನ್ಯಾಯಾಂಗ ಮತ್ತು ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳು, ತಜ್ಞರು ಅಧ್ಯಯನ ಸಮಿತಿಯ ಸದಸ್ಯರಾಗಿದ್ದಾರೆ.  ರಾಜೀವ್ ಗೌಬಾ ನೇತೃತ್ವದ ಸಮಿತಿಯುವ ನೀಡುವ ವರದಿಯನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಗೃಹ ಸಚಿವ ರಾಜ್‌ನಾಥ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಚಿವರ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಿದೆ.

2018: ಮುಂಬೈ: ಚಾಣಕ್ಯನ ನಿಜವಾದ ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಅವನ ’ನೀತಿಯನ್ನು ರಾಷ್ಟ್ರದ ಹಿತಕ್ಕಾಗಿ ಬಳಸಿಕೊಳ್ಳುವಂತೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕತ್ವಕ್ಕೆ ತಿಳಿ ಹೇಳಿದರು. ಸಾಮ್ನಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿಗೆ ಈ ಬೋಧನೆ ಮಾಡಿರುವ ಉದ್ಧವ್ ಠಾಕ್ರೆ, ’ಚಾಣಕ್ಯನ ಬೋಧನೆಗಳನ್ನು ಆಧುನಿಕ ಚಾಣಕ್ಯರು ನಿಜವಾಗಿಯೂ ಅಳವಡಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.  ‘ಮೂಲ ಪ್ರಶ್ನೆ ಏನೆಂದರೆ ಈ ಆಧುನಿಕ ಚಾಣಕ್ಯರು ತಮ್ಮ ನೀತಿಯನ್ನು ರಾಷ್ಟ್ರಕ್ಕಾಗಿ ಬಳಸುತ್ತಿದ್ದಾರೆಯೇ ಅಥವಾ ತಮ್ಮ ಪಕ್ಷಕ್ಕಾಗಿ ಬಳಸುತ್ತಿದ್ದಾರೆಯೇ ಎಂಬುದು ಎಂದು ಅವರು ನುಡಿದರು.  ‘ನಿಮ್ಮ ಪಕ್ಷವನ್ನು ವಿಸ್ತರಿಸಲು ಚಾಣಕ್ಯ ನೀತಿಯ ಅಗತ್ಯವಿಲ್ಲ. ಚಾಣಕ್ಯ ಚಂದ್ರಗುಪ್ತನ ಬೆನ್ನ ಹಿಂದೆ ನಿಂತದ್ದು ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ ಮತ್ತು ರಾಷ್ಟ್ರ -ರಾಜ್ಯ ನಿರ್ಮಾಣಕ್ಕಾಗಿ ಎಂದು ಉದ್ಧವ್ ಠಾಕ್ರೆ ಹೇಳಿದರು. ಬಿಜೆಪಿಯು ಚುನಾವಣಾ ಲಾಭಕ್ಕಾಗಿ ಅನುಸರಿಸುತ್ತಿರುವ ’ಭೇದ ನೀತಿ ಬಗ್ಗೆ ಜನರನ್ನು ಎಚ್ಚರಿಸಿದ ಸೇನಾ ಮುಖ್ಯಸ್ಥ, ’ಆಧುನಿಕ ಚಾಣಕ್ಯರು ಸಂಕುಚಿತ ವೋಟ್ ಬ್ಯಾಂಕಿಗಾಗಿ ತಮ್ಮನ್ನು ವಿಭಜಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಬಗ್ಗೆ ಹಿಂದುಗಳು ಚಿಂತಿಸಬೇಕು. ರಾಜಕೀಯದ ವಾಣಿಜ್ಯೀಕರಣವು ಸಮಾಜದ ಈಗಿನ ಧ್ರುವೀಕರಣಕ್ಕೆ ಕಾರಣ ಎಂಬ ಬಗ್ಗೆ ಜನರು ಚಿಂತಿಸುವ ಅಗತ್ಯವಿದೆ ಮತ್ತು ಹಣದಿಂದ ಪ್ರೇಮ ಮತ್ತು ಕಾಳಜಿಯನ್ನು ಖರೀದಿಸಲಾಗದು ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ನುಡಿದರು. ರಾಷ್ಟ್ರದಲ್ಲಿ ಪ್ರಸ್ತುತ ಅನುಸರಿಸಲಾಗುತ್ತಿರುವ ಹಿಂದುತ್ವವನ್ನು ಕೂಡಾ ಠಾಕ್ರೆ ಟೀಕಿಸಿದರು. ’ಕಳೆದ ಮೂರ್‍ನಾಲ್ಕು ವರ್ಷಗಳಿಂದ ರಾಷ್ಟ್ರದಲ್ಲಿ ಅನುಸರಿಸಲಾಗುತ್ತಿರುವ ಹಿಂದುತ್ವವನ್ನು ನಾನು ಅಂಗೀಕರಿಸಲಾರೆ. ಇದು ನಮ್ಮ ಹಿಂದುತ್ವದ ಕಲ್ಪನೆಯಲ್ಲ. ಇಂದು ನಮ್ಮ ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಮತ್ತು ನೀವು ಗೋವುಗಳನ್ನು ರಕ್ಷಿಸುತ್ತಿದ್ದೀರಿ. ತಮ್ಮ ಆಹಾರದ ಆದ್ಯತೆಗಳಿಗಾಗಿ ನೀವು ಜನರನ್ನು ಗುರಿ ಮಾಡಲಾಗದು ಎಂದು ಅವರು ಹೇಳಿದರು.  ‘ಇಂದಿನ ಹಿಂದುತ್ವವು ನಕಲಿ. ಭಾರತವು ಮಹಿಳೆಯರ ಪಾಲಿನ ಅತ್ಯಂತ ಅಸುರಕ್ಷಿತ ರಾಷ್ಟ್ರಗಳಲ್ಲಿ ಒಂದು ಎಂದು ಹೇಳಲು ನಾವು ನಾಚಿಕೆ ಪಡಬೇಕು. ಆಹಾರದ ಆದ್ಯತೆಗಳಿಗಾಗಿ ಜನರನ್ನು ಗುಂಪುಗೂಡಿ ಕೊಲ್ಲಲಾಗುತ್ತಿದೆ. ನಮ್ಮ ಮಹಿಳೆಯರು ಅಸುರಕ್ಷಿತರಾಗಿದ್ದಾಗ ನಮ್ಮ ಗೋವುಗಳನ್ನು ರಕ್ಷಿಸುವುದು ನಕಲಿ ಹಿಂದುತ್ವ ಎಂದು ಅವರು ನುಡಿದರು.  ಸರ್ಕಾರದ ನೀತಿಗಳನ್ನು ಟೀಕಿಸುವವರಿಗೆ ’ದೇಶದ್ರೋಹಿಗಳು ಎಂಬ ಹಣೆಪಟ್ಟಿ ಹಚ್ಚುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಠಾಕ್ರೆ, ’ನೀವು ಏನು ಯೋಚಿಸುತ್ತಿದ್ದೀರಿ? ನೀವು ಮಾತ್ರವೇ ದೇಶಭಕ್ತರು ಮತ್ತು ನಾವು ದೇಶದ್ರೋಹಿಗಳೇ?’ ಎಂದು ಪ್ರಶ್ನಿಸಿದರು.  ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಸ್ತಾಪಿಸಿದ ಠಾಕ್ರೆ, ’ಗೆಳೆಯನಿಂದ ಅವಿಶ್ವಾಸ ನಿರ್ಣಯ ಮಂಡನೆಯಾದದ್ದು ರಾಷ್ಟ್ರದ ಇತಿಹಾಸದಲ್ಲೇ ಮೊದಲು. ಅವಿಶ್ವಾಸ ನಿರ್ಣಯವನ್ನು ಪ್ರಸ್ತಾಪಿಸಿದ್ದು ಯಾರು ಎಂದು ಗಮನಿಸಿ. ಟಿಡಿಪಿ ಅದನ್ನು ತಂದಿತು. ಟಿಡಿಪಿ ಯಾರು? ಅದು ಬಿಜೆಪಿಯ ಮಿತ್ರ ಪಕ್ಷ. ಮಿತ್ರರು ಹೀಗೇಕೆ ಯೋಚಿಸುತ್ತಿದ್ದಾರೆ ಎಂಬುದು ಪ್ರಶ್ನೆ ಎಂದು ನುಡಿದರು. ನಿರ್ಣಯವನ್ನು ಮತಕ್ಕೆ ಹಾಕುವ ವೇಳೆಯಲ್ಲಿ ಶಿವಸೇನೆ ಗೈರುಹಾಜರಾದದ್ದು ಏಕೆ ಎಂಬ ಪ್ರಶ್ನೆಗೆ ’ಯಾರು ಯಾರಲ್ಲಿ ವಿಶ್ವಾಸ ವ್ಯಕ್ತ ಪಡಿಸಬೇಕು? ನಾವು ವಿರೋಧ ಪಕ್ಷದ ಜೊತೆಗೆ ಹೋಗಬೇಕೆ? ಹಾಗಿದ್ದರೆ ವಿರೋಧ ಪಕ್ಷಗಳು ಮಾಡಿದ್ದೇನು? ಅವರೇನು ಜನರಿಗೆ ಸಂಬಂಧ ಪಟ್ಟ ವಿಷಯಗಳನ್ನು ಪ್ರಸ್ತಾಪಿಸಿದರೇ? ಮೊದಲ ಮೂರು ದಿನಗಳ ಒಳಗಾಗಿ ನೋಟು ಅಮಾನ್ಯೀಕರಣದ ವಿರುದ್ಧ ಮಾತನಾಡಿದ ಏಕೈಕ ಪಕ್ಷ ಶಿವಸೇನೆ. ಇಂದು ವಿರೋಧ ಪಕ್ಷಗಳು ಅದೇ ವಿಷಯಗಳ ಬಗ್ಗೆ ಮಾತನಾಡುತ್ತಿವೆ. ಆಗ ಅದರ ವಿರುದ್ಧ ಮಾತನಾಡಿದವರೆಲ್ಲರನ್ನೂ ದೇಶದ್ರೋಹಿಗಳೂ ಎನ್ನಲಾಯಿತು. ನಮಗೆ ಮೊದಲ ದೇಶದ್ರೋಹಿಗಳು ಎಂಬ ಹಣೆಪಟ್ಟಿ ಅಂಟಿಸಲಾಯಿತು ಎಂದು ಠಾಕ್ರೆ ಹೇಳಿದರು. 

2017: ನವದೆಹಲಿ: ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಸಂಸತ್ತು ಈದಿನ ಗೌರವ ಪೂರ್ವಕ ವಿದಾಯ ಹೇಳಿತು. ತಮ್ಮ ಅಧಿಕಾರ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಅವರು ಧನ್ಯವಾದ ಹೇಳಿದರು. ಸಂಸತ್ತಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ವೇಳೆ ವಿದಾಯ ಭಾಷಣ ಮಾಡಿದ ಪ್ರಣವ್ ಮುಖರ್ಜಿ ಅವರು, “ನನ್ನ ಅಧಿಕಾರವಧಿಯಲ್ಲಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲರೂ ಬೆಂಬಲಿಸಿದ್ದು ಸಂತಸ ತಂದಿದೆ. ಇನ್ನು ನನಗೆ ಅದ್ಧೂರಿ ಬೀಳ್ಕೊಡುಗೆ ನೀಡಿದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು.  ಸಂಸತ್ತಿನಲ್ಲಿ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು  ಅಂಗೀಕರಿಸಿರುವುದು ಪ್ರಜಾಪ್ರಭುತ್ವದ ಪ್ರಬುದ್ಧತೆಯನ್ನು ಮತ್ತು ದೇಶದ ಆಡಳಿತ ವ್ಯವಸ್ಥೆಯ ಒಗ್ಗಟ್ಟನ್ನು ತೋರಿಸುತ್ತದೆ ಎಂದು ಹೇಳಿದರು.  ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ನನ್ನ ವೃತ್ತಿ ಜೀವನಕ್ಕೆ ಮಾರ್ಗದರ್ಶನ ನೀಡಿದ ಅಪ್ರತಿಮ ನಾಯಕಿ. ಮೇರು ವ್ಯಕ್ತಿತ್ವ ಹೊಂದಿದ್ದ ಅವರು ನಿಜಕ್ಕೂ ಧೈರ್ಯ ಶಾಲಿಯಾಗಿದ್ದರು. ತುರ್ತು ಪರಿಸ್ಥಿತಿ ನಂತರ ಅಧಿಕಾರ ಕಳೆದುಕೊಂಡ ಇಂದಿರಾಗಾಂಧಿ ಅವರು 1978ರಲ್ಲಿ ಲಂಡನ್ನಿಗೆ ತೆರಳಿದ್ದಾಗ ಅಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ್ದರು ಎಂದರು. ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ ಅವರು ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

2017: ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ  ನಡೆದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 9 ರನ್ ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ಪನ್ನು ಮುಡಿಗೇರಿಸಿಕೊಂಡಿತು. ಇಂಗ್ಲೆಂಡ್ ನೀಡಿದ್ದ 228 ರನ್ ಗಳ  ಮೊತ್ತವನ್ನು ಬೆನ್ನಟ್ಟಿದ  ಮಿಥಾಲಿ ರಾಜ್ ಪಡೆ ಕೇವಲ 219 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಇಂಗ್ಲೆಂಡ್ ವಿರುದ್ಧ 9 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಅನುಭವಿಸಿತು. ಚೊಚ್ಚಲ ವಿಶ್ವಕಪ್‌ ಗೆಲ್ಲುವ ಮಹದಾಸೆಯೊಂದಿಗೆ ಕಣಕ್ಕಿಳಿದ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತಾದರೂ, ಇಂಗ್ಲೆಂಡ್ ಪ್ರಭಾವಿ ಬೌಲಿಂಗ್ ದಾಳಿಗೆ ನಲುಗಿ 219 ರನ್ ಗಳಿಗೆ ಶರಣಾಯಿತು. ಇಂಗ್ಲಂಡ್‌ ತಂಡ ನೀಡಿದ 228 ರನ್ ಗಳ  ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫ‌ಲರಾದ ಭಾರತೀಯ ಆಟಗಾರ್ತಿಯರು ಅಂತಿಮವಾಗಿ 48.4 ಓವರುಗಳಲ್ಲಿ 219 ರನ್ ಗಳಿಗೆ ಆಲೌಟ್‌ ಆಗುವ ಮೂಲಕ ಹಾಲಿ ಚಾಂಪಿಯನ್ನರಿಗೆ 9 ರನ್ ಗಳಿಂದ ಶರಣಾದರು. ಭಾರತಕ್ಕೆ ಪೂನಂ ರಾವತ್‌ (86ರನ್) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೆಮಿ ಫೈನಲ್‌ ಪಂದ್ಯದ ಹೀರೋಯಿನ್‌ ಹರ್ಮನ್‌ ಪ್ರೀತ್‌ ಕೌರ್‌ (51ರನ್) ಮತ್ತು ವೇದ ಕೃಷ್ಣಮೂರ್ತಿ (35ರನ್) ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತುಂಬಿದರು. ಆದರೆ 19 ರನ್ ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳು ಉರುಳಿದ್ದು ಮಿಥಾಲಿ ಪಡೆಗೆ ಮಾರಕವಾಯಿತು. ಇಂಗ್ಲಂಡ್‌ ಪರ ಮಧ್ಯಮ ವೇಗಿ ಆನ್ಯಾ ಶ್ರುಭ್ಸೋಲ್‌ 6 ವಿಕೆಟ್‌ ಪಡೆದು ಮಿಂಚಿ ಆಂಗ್ಲರ ಪಾಲಿನ ಗೆಲುವಿನ ರೂವಾರಿಯಾದರು. ಅಂತಿಮವಾಗಿ ಭಾರ‌ತ 219 ರನ್ ಗಳಿಗೆ ಆಲೌಟ್‌ ಆಗಿ ಕೇವಲ 9 ರನ್ ಗಳಿಂದ ವಿಶ್ವಕಪ್‌ ಟ್ರೋಫಿಗೆ ಮುತ್ತಿಕ್ಕುವ ಅವಕಾಶದಿಂದ ವಂಚಿತಗೊಂಡಿತು.


2017: ನವದೆಹಲಿ:  ಉಗ್ರರಿಗೆ ನೆರವು ನೀಡುವ ವಿಚಾರದಲ್ಲಿ ಪಾಕಿಸ್ಥಾನ ವಿರುದ್ಧ ಎನ್‌ಡಿಎ ಉಪರಾಷ್ಟ್ರಪತಿ
ಅಭ್ಯರ್ಥಿ ವೆಂಕಯ್ಯ ನಾಯ್ಡು ಕಿಡಿ ಕಾರಿದರು. ಕಾರ್ಗಿಲ್‌ ಪರಾಕ್ರಮ ಪರೇಡ್‌ ಕಾರ್ಯಕ್ರಮದಲ್ಲಿ ಮಾಡತನಾಡಿದ ನಾಯ್ಡು 'ಪಾಕ್‌ ಉಗ್ರರಿಗೆ ನೆರವು ನೀಡುವುದನ್ನು ಬಿಡಬೇಕು. 1971 ರ ಯುದ್ಧದಲ್ಲಿ ಏನಾಗಿದೆ ಎಂದು ನೆನಪು ಮಾಡಿಕೊಳ್ಳಿ. ಉಗ್ರವಾದವನ್ನು ಪೋಷಿಸುವುದರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ' ಎಂದು ಎಚ್ಚರಿಸಿದರು. 'ಮಾನವತೆಯ ವಿರೋಧಿ ಉಗ್ರವಾದ,ಅದನ್ನು ಪಾಕ್‌ ಧರ್ಮದಲ್ಲಿ ಬೆರೆಸಿದೆ ಮತ್ತು ದುರದೃಷ್ಟವಷಾತ್‌ ರಾಜನೀತಿಯನ್ನಾಗಿಸಿಕೊಂಡಿದೆ' ಎಂದರು. 'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನಃರುಚ್ಚರಿಸಿದ ಅವರು ಒಂದು ಇಂಚು ಭೂಮಿಯನ್ನು ಪಾಕ್‌ಗೆ ಬಿಟ್ಟುಕೊಡುವ ಪ್ರಶ್ನೆ ಇಲ್ಲ' ಎಂದು ಹೇಳಿದರು.  'ನಮ್ಮದು ಶಾಂತಿ ಬಯಸುವ ದೇಶ, ಯುದ್ಧ ನಮಗೆ ಬೇಡ.ಆದರೆ ತಾಳ್ಮೆ ಕೆಡಿಸುವ ಯತ್ನ ಮಾಡಿದರೆ ನಮ್ಮ ಸೈನಿಕರು ದಿಟ್ಟ ಉತ್ತರ ನೀಡಲಿದ್ದಾರೆ' ಎಂದರು. 1971 ರಲ್ಲಿ ಬಾಂಗ್ಲಾ ವಿಮೋಚನೆಗಾಗಿ 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಕ್‌ ಸೋತು ಸುಣ್ಣವಾಗಿತ್ತು. 

2017: ಮುಂಬೈ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸಂಪೂರ್ಣ ದೋಷಮುಕ್ತ ಎಂಬುದಾಗಿ
ಭಾರತದ ಚುನಾವಣಾ ಆಯೋಗ ನಿರಂತರ ಪ್ರತಿಪಾದಿಸುತ್ತಿದ್ದರೂ, ಇವಿಎಂ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಪ್ರಕರಣ ಮಹಾರಾಷ್ಟ್ರದಲ್ಲಿ ಘಟಿಸಿತು. ಮಾಹಿತಿ ಹಕ್ಕು ಕಾಯ್ದೆಯ ಅಡಿ ಒದಗಿಸಲಾದ ಮಾಹಿತಿಯಿಂದ ಇದು ಬೆಳಕಿಗೆ ಬಂದಿತು. ಬುಲ್ದಾನ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಲ್ತಾನಪುರ ಮತಗಟ್ಟೆಯಲ್ಲಿ ಈ ಘಟನೆ ಘಟಿಸಿತು. ಯಾರೇ ವ್ಯಕ್ತಿ ಪಕ್ಷೇತರ ಅಭ್ಯರ್ಥಿ ಒಬ್ಬರ ತೆಂಗಿನಕಾಯಿ ಚಿಹ್ನೆಗೆ ಮತ ಹಾಕಿದಾಗಲೆಲ್ಲ, ಬಿಜೆಪಿಯ ಕಮಲ ಚಿಹ್ನೆಯ ಮುಂಭಾಗದ ಎಲ್ಇಡಿ ಬಲ್ಬ್ ಮಿನುಗುತ್ತಿತ್ತು ಎಂದು ಆರ್ ಟಿಐ ಮಾಹಿತಿ ಹೇಳಿತು. ಇತರ ಅಭ್ಯರ್ಥಿಗಳಿಗೆ ಮತ ಹಾಕಿದಾಗಲೂ ಹೀಗೆಯೇ ಆಗುತ್ತಿತ್ತು. ಚುನಾವಣಾಧಿಕಾರಿ ಈ ವಿಷಯವನ್ನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದರು ಎಂದು ಆರ್ ಟಿ ಐ ಮಾಹಿತಿ ತಿಳಿಸಿತು.
2016: ನವದೆಹಲಿ: ಇಪ್ಪತ್ತನಾಲ್ಕು ಗಂಟೆ ಕಳೆದರೂ ನಾಪತ್ತೆಯಾದ ವಾಯುಪಡೆ ವಿಮಾನ ಎಎನ್-32 ಇನ್ನೂ ಪತ್ತೆಯಾಗಲಿಲ್ಲ. ವಾಯುಪಡೆ, ನೌಕಾಪಡೆ, ಕರಾವಳಿ ಕಾವಲುಪಡೆಗಳು ಬಂಗಾಳ ಕೊಲ್ಲಿಯಲ್ಲಿ ನಿರಂತರ ಹುಡುಕಾಟ ನಡೆಸಿದವು. 12 ಗಂಟೆಗಳಿಂದ ಜಲಾಂತರ್ಗಾಮಿ ನೌಕೆಯೂ ಹುಡುಕಾಟ ನಡೆಸಿತು. ನಡುವೆ ಈದಿನ ಬೆಳಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಘಟನೆಗೆ ಸಂಬಂಧಿಸಿ ವೈಮಾನಿಕ ಸಮೀಕ್ಷೆ ನಡೆಸಿ, ಐಎಎಫ್ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಹಿಂದಿನ ದಿನ ಬೆಳಗ್ಗೆ ಚೆನ್ನೈನಿಂದ ಹಾರಿದ ವಿಮಾನ ಅಂಡಮಾನ್ ನಿಕೋಬಾರ್ ಪೋರ್ಟ್ ಬ್ಲೇರ್ಗೆ 11.30 ವೇಳೆಗೆ ತಲುಪಬೇಕಿತ್ತು. ಆದರೆ ನಾಪತ್ತೆಯಾದ ವಿಮಾನದ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಹೆಚ್ಚೂಕಡಿಮೆ 23,000 ಎತ್ತರಕ್ಕೆ ತಲುಪಿದ ಬಳಿಕ ವಿಮಾನ ಮತ್ತೆ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿತ್ತು. ವಿಮಾನದಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆ ಮಂಗಳೂರಿನ ಬೆಳ್ತಂಗಡಿ ಯೋಧ ಏಕನಾಥ ಶೆಟ್ಟಿ ಸೇರಿದಂತೆ ಒಟ್ಟು 29 ಮಂದಿ ವಿಮಾನದಲ್ಲಿ ಪಯಣಿಸಿದ್ದರು.

2016: ಕಾಬೂಲ್: ಆಫ್ಘಾನಿಸ್ತಾನದ ಕಾಬೂಲ್ನಲ್ಲಿ ಪ್ರತಿಭಟನಾ ಮೆರವಣಿಗೆ ಮೇಲೆ ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 80 ಜನ ಸಾವನ್ನಪ್ಪಿ, 231ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಕಾಬೂಲಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಶಿಯಾ ಹಜಾರಸ್ ಸಮುದಾಯದವರ ಮೇಲೆ ಬಾಂಬ್ ದಾಳಿ ನಡೆಯಿತು. ದಾಳಿಯ ಹೊಣೆಯನ್ನು ಐಸಿಸ್ ಸಂಘಟನೆ ಹೊತ್ತು ಕೊಂಡಿತು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಮೂವರು ಆತ್ಮಾಹುತಿ ದಾಳಿಕೋರ ಪೈಕಿ ಇಬ್ಬರು ಗುಂಪಿನೊಳಗೆ ಬಾಂಬ್ ಸ್ಪೋಟಿಸಿದರು. ಮೂರನೆಯ ದಾಳಿಕೋರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದವು. ಗಾಯಗೊಂಡವರಿಗೆ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಫ್ಘಾನಿಸ್ತಾನದ ಆಂತರಿಕ ಸಚಿವಾಲಯ ತಿಳಿಸಿತು.

2016: ನವದೆಹಲಿ: ಭಾರತೀಯ ನವ್ಯ ಚಿತ್ರಕಲಾವಿದರಾಗಿ ಖ್ಯಾತಿಗಳಿಸಿದ್ದ ಎಸ್.ಎಚ್. ರಜ ಈದಿನ ಬೆಳಗ್ಗೆ ನವದೆಹಲಿಯಲ್ಲಿ ನಿಧನರಾದರು. ಕಳೆದ ಕೆಲದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಎರಡು ತಿಂಗಳಿನಿಂದ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ರಜ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ರಜ ಅವರ ಆಪ್ತ ಸ್ನೇಹಿತ ಕವಿ ಅಶೋಕ್ ವಾಜಪೇಯಿ ತಿಳಿಸಿದರು. ದೇಶದ ಖ್ಯಾತನಾಮ ಚಿತ್ರಕಲಾವಿದರಲ್ಲಿ ಒಬ್ಬರಾಗಿದ್ದ ರಜ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

2016: ಲೂಧಿಯಾನ: ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರದಲ್ಲಿ ತನ್ನೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ಗೆ ಸವಾಲು ಎಸೆದಿದ್ದ 15 ಹರೆಯದ ಬಾಲಕಿ ಜಾಹ್ನವಿ ಬೆಹಲ್, ಪಾಕಿಸ್ತಾನದ ಭಯೋತ್ಪಾದಕ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಸವಾಲು ಹಾಕಿದರು. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವೆ. ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನಿಗಳಿಗೆ ಸಾಧ್ಯವಿದ್ದರೆ ಬಂದು ತಡೆಯಲಿ ಎಂದು ನಾನು ಸವಾಲು ಎಸೆಯುತ್ತಿದ್ದೇನೆ ಎಂದು ಹೇಳಿರುವ ಬೆಹಲ್, ಕಾಶ್ಮೀರಿಗಳನ್ನು ಒಡೆಯುವ ಮತ್ತು ಅವರನ್ನು ಭೀತಿ ಹಾಕುವ ಪ್ರವೃತ್ತಿಯನ್ನು ಕೊನೆಗೊಳಿಸುವಂತೆ ಸಯೀದ್ಗೆ ಸೂಚಿಸಿದ್ದಾರೆ. ‘ಸ್ವಾತಂತ್ರ್ಯ ದಿನಾಚರಣೆಯ ದಿನ ಎಲ್ಲಾ ಸಂಸತ್ ಸದಸ್ಯರಿಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮಿತಿ ನೀಡುವಂತೆ ಕೋರಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಅವರು ನನ್ನ ಮನವಿಯನ್ನು ಅಂಗೀಕರಿಸಿದ್ದಾರೆ. ಅವರಂತಹಅತ್ಯುತ್ತಮ ಪ್ರಧಾನಿಮಾತ್ರ ಹೀಗೆ ಮಾಡಲು ಸಾಧ್ಯಎಂದು ಬೆಹಲ್ ಹೇಳಿದರು.ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿರುವ ಶ್ರೀನಗರದ ಲಾಲ್ ಚೌಕದಲ್ಲಿ ಆಗಸ್ಟ್ 15ರಂದು ನಾನು ರಾಷ್ಟ್ರಧ್ವಜವನ್ನು ಹಾರಿಸುವೆ. ಸಾಧ್ಯವಿದ್ದರೆ ನನ್ನಲ್ಲಿ ತಡೆಯಿರಿ ಎಂದು ಪ್ರತ್ಯೇಕತಾವಾದಿಗಳು, ಪಾಕಿಸ್ತಾನಿಗಳಿಗೆ ನಾನು ಸವಾಲು ಹಾಕುತ್ತಿದ್ದೇನೆಎಂದು ಬೆಹಲ್ ಹೇಳಿದರು.

2016: ಚೆನ್ನೈ: ಸೂಪರ್ ಸ್ಟಾರ್ರಜನಿಕಾಂತ್ ಅಭಿನಯದಕಬಾಲಿಚಿತ್ರ ಮೊದಲ ದಿನವೇ 250 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗ್ಗಿತು. ಚಿತ್ರದ ಕಲೆಕ್ಷನ್ ಕುರಿತು ನಿರ್ಮಾಪಕರು ಮಾಹಿತಿ ಬಿಡುಗಡೆ ಮಾಡಿದರು. ಕಬಾಲಿ ತಮಿಳುನಾಡಿನಲ್ಲೇ 100 ಕೋಟಿ ರೂ. ಗಳಿಸಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಮತ್ತು ಹೊರ ದೇಶಗಳಲ್ಲಿ ಒಟ್ಟು 150 ಕೋಟಿ ರೂ. ಗಳಿಸಿದೆ. ಮೊದಲ ದಿನ ಒಟ್ಟು 250 ಕೋಟಿ ರೂ. ಗಳಿಸಿದೆ. ಹಿಂದೆ ಬೇರೆ ಯಾವ ಚಿತ್ರವೂ ಒಂದೇ ದಿನಕ್ಕೆ ಇಷ್ಟು ಕಲೆಕ್ಷನ್ ಮಾಡಿದ ದಾಖಲೆ ಇಲ್ಲ ಎಂದು ನಿರ್ಮಾಪಕ ಎಸ್. ಥನು ತಿಳಿಸಿದರು. ಅಮೆರಿಕದಲ್ಲಿ 480, ಮಲೇಷ್ಯಾದಲ್ಲಿ 490 ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ 500 ಸ್ಕ್ರೀನ್ ಸೇರಿ ಕಬಾಲಿ ಚಿತ್ರ ವಿಶ್ವದಾದ್ಯಂತ ಸುಮಾರು 8 ಸಾವಿರದಿಂದ 10 ಸಾವಿರ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿತ್ತು. ಜತೆಗೆ ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ, ಸ್ವಿಜರ್ಲೆಂಡ್, ಡೆನ್ಮಾರ್ಕ್, ಹಾಲೆಂಡ್, ಸ್ವೀಡನ್, ದಕ್ಷಿಣ ಆಫ್ರಿಕಾ, ನೈಜೀರಿಯಾದಲ್ಲೂ ಚಿತ್ರ ಬಿಡುಗಡೆಯಾಗಿತ್ತು.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಯತ್ನಿಸಿದ ಉಗ್ರರು ನಡೆಸಿದ ಗುಂಡಿನ ದಾಳಿಗೆ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾದರು. ಹಿಂದಿನ ದಿನ ಮಧ್ಯರಾತ್ರಿ ಉಗ್ರರು ಗಡಿಯಲ್ಲಿ ಒಳನುಸುಳಲು ಯತ್ನಿಸಿದರು. ಆದರೆ ಸಂದರ್ಭದಲ್ಲಿ ಯೋಧರು ಅವರತ್ತ ಗುಂಡು ಹಾರಿಸಿದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಗಾಯಗೊಂಡಿದ್ದರು. ಅವರು ಬಳಿಕ ಆಸ್ಪತ್ರೆಯಲ್ಲಿ ಮೃತರಾದರು. ಉಗ್ರರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಯಿತು. ಎಂದು ಸೇನೆಯ ಅಧಿಕಾರಿಗಳು ತಿಳಿಸಿದರು.

2016: ಮಥುರಾ: ಸಾವನ್ ಮೇಳ ಮತ್ತು ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೆ ಒಬ್ಬ ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಕ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಶಾಂತಿ, ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಹೊಸ ಹೆಜ್ಜೆ ಇರಿಸಿತು. ಕಳೆದ ತಿಂಗಳಷ್ಟೇ ಗಲಭೆಯಿಂದ ಪ್ರಕ್ಷುಬ್ಧಗೊಂಡಿದ್ದ ಮಥುರಾದಲ್ಲಿ ಸಾವನ್ ಮೇಳ ಮತ್ತು ಕೃಷ್ಣ ಜನ್ಮಾಷ್ಠಮಿಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಹಿನ್ನೆಲೆಯಲ್ಲಿ ಭಕ್ತ ಸಮೂಹಕ್ಕೆ ಯಾವುದೇ ರೀತಿಯ ತೊಂದರೆ, ತಾಪತ್ರಯ ಸಂಭವಿಸಬಾರದು ಎಂಬ ಹಿನ್ನೆಲೆಯಲ್ಲಿ ವಿನೂತನ ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಾಬು ಕುಮಾರ್ ಹೇಳಿದರು. ಠಾಣೆಗೆ ಬರುವ ದೂರು ದಾಖಲಾದ 24 ಗಂಟೆಯೊಳಗೆ ಸಮಸ್ಯೆ ವಿಚಾರಣೆಗೊಂಡು ನೊಂದವರಿಗೆ ಪರಿಹಾರ ದೊರಕಬೇಕು ಎಂಬುದು ಹೊಸ ಉಪಕ್ರಮದ ಉದ್ದೇಶ ಎಂದು ಅವರು ಹೇಳಿದರು. ಪ್ರಯೋಗದಲ್ಲೇ ಯಶಸ್ಸು: ಪ್ರತಿ ಠಾಣೆಯ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಒಬ್ಬ ಸಬ್ ಇನ್ಸ್ಪೆಕ್ಟರ್ ಮತ್ತು ಒಬ್ಬ ಮುಖ್ಯಪೇದೆ ಜವಾಬ್ದಾರಿ ನಿರ್ವಹಿಸುತ್ತಾರೆ. ನೂತನ ಉಪಕ್ರಮದ ಪ್ರಯೋಗಾರ್ಥ ಅವಧಿಯ 20 ದಿನದಲ್ಲಿ 1000ಕ್ಕೂ ಹೆಚ್ಚು ಪ್ರಕರಣ 24 ಗಂಟೆಯೊಳಗೆ ಇತ್ಯರ್ಥಗೊಂಡಿದೆ. ಯಶಸ್ಸಿನ ಹಿನ್ನೆಲೆಯಲ್ಲಿ ಇಲಾಖೆಯು ಕೃಷ್ಣದರ್ಶನಕ್ಕೆ ಬರುವ ಲಕ್ಷಾಂತರ ಮಂದಿ ಭಕ್ತರ ಕ್ಷೇಮ ಪಾಲನೆ ಮಾಡಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.

2016: ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಕಾಶ್ಮೀರವನ್ನು ಭಯೋತ್ಪಾದಕರ ಸ್ವರ್ಗವಾಗಿ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕ್ ಪ್ರಧಾನಿ ಷರೀಫ್ಗೆ ತಿರುಗೇಟು ನೀಡಿದರು. ಉಗ್ರ ಬುರ್ಹಾನ್ ವನಿಯ ಹತ್ಯೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಉಂಟಾಗಿರುವ ಅಶಾಂತಿಯ ಲಾಭ ಪಡೆಯಲು ಬಯಸುತ್ತಿರುವ ಪಾಕಿಸ್ತಾನ ಕಾಶ್ಮೀರಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ. ಜತೆಗೆ ಕಾಶ್ಮೀರವನ್ನು ಬೆಂಬಲಿಸಿ ಕರಾಳ ದಿನವನ್ನು ಸಹ ಆಚರಿಸಿತ್ತು. ಮಧ್ಯೆ ಪಾಕ್ ಪ್ರಧಾನಿ ನವಾಜ್ ಷರೀಫ್ ಕಾಶ್ಮೀರ ಒಂದು ದಿನ ಪಾಕಿಸ್ತಾನದ ಭಾಗವಾಗಲಿದೆ ತಿಳಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ ಪಾಕ್ ಪ್ರಧಾನಿ ಭ್ರಮೆಯಲ್ಲಿದ್ದಾರೆ, ಅವರು ಕಾಣುತ್ತಿರುವ ಕನಸು ಎಂದಿಗೂ ನನಸಾಗುವುದಿಲ್ಲ. ಪಾಕಿಸ್ತಾನ ಕಾಶ್ಮೀರದಲ್ಲಿ ಉಗ್ರವಾದಕ್ಕೆ ನೀಡುತ್ತಿರುವ ಬೆಂಬಲ ಎಂದಿಗೂ ಫಲಿಸುವುದಿಲ್ಲ. ವಿಶ್ವಸಂಸ್ಥೆಯೇ ಭಯೋತ್ಪಾದಕ ಎಂದು ಗುರುತಿಸಿರುವ ಹಫೀಜ್ ಸಯೀದ್ಗೆ ಪಾಕಿಸ್ತಾನ ಬೆಂಬಲ ಸೂಚಿಸುವ ಮೂಲಕ ಕಾಶ್ಮೀರದಲ್ಲಿ ಶಾಂತಿ ಕದಡಲು ಬಯಸುತ್ತಿದೆ. ಆದರೆ ಪಾಕಿಸ್ತಾನ ಪ್ರಯತ್ನವನ್ನು ಭಾರತ ಸಮರ್ಥವಾಗಿ ಮೆಟ್ಟಿ ನಿಲ್ಲಲಿದೆ ಎಂದು ಸುಷ್ಮಾ ಸ್ವರಾಜ್ ಷರೀಫ್ಗೆ ತಿರುಗೇಟು ನೀಡಿದರು. ಬುರ್ಹಾನ್ ವನಿಯನ್ನು ಪಾಕ್ ಪ್ರಧಾನಿ ಹೊಗಳಿದ್ದರು. ಆದರೆ ಆತನ ವಿರುದ್ಧ ಭಾರತದಲ್ಲಿ ಹಲವು ಮೊಕದ್ದಮೆಗಳು ದಾಖಲಾಗಿದ್ದವು. ಆತ ಅನೇಕ ಯೋಧರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಹತ್ಯೆಯಲ್ಲಿ ಭಾಗಿಯಾಗಿದ್ದ. ಆತನ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಸಹ ಘೊಷಿಸಲಾಗಿತ್ತು. ಜುಲೈ 8 ರಂದು ನಡೆದ ಎನ್ಕೌಂಟರ್ನಲ್ಲಿ ವನಿ ಹತ್ಯೆಯಾಗಿದ್ದ.

2016: ಕೊಚ್ಚಿ: ಭಾರತದ ಸಮರ ನೌಕೆ ಐಎನ್ಎಸ್ ವಿರಾಟ್ ಕೇರಳದ ಕೊಚ್ಚಿಯ ನೌಕಾದಳ ಯಾರ್ಡ್ ತಲುಪಿದ್ದು, ಅವಶ್ಯಕ ರಿಪೇರಿ ಮತ್ತು ಡ್ರೖೆ ಡಾಕಿಂಗ್ ನಂತರ ನೀರಿನ ಮೇಲೆ ತನ್ನ ಕೊನೆ ಪಯಣ ನಡೆಸಲಿದೆ. ವರ್ಷಾಂತ್ಯಕ್ಕೆ ನೌಕಾದಳದಿಂದ ವಿರಾಟ್ಗೆ ಸೇವೆಯಿಂದ ಮುಕ್ತಿಗೊಳಿಸಲು ನಿರ್ಧರಿಸಲಾಗಿದೆ.

ವೈಸ್ ಅಡ್ಮಿರಲ್ ಗಿರೀಶ್ ಲುಥ್ರಾ ಮತ್ತು ನೌಕಾದಳದ ಹಿರಿಯ ಅಧಿಕಾರಿಗಳು ಶಿಪ್ಯಾರ್ಡ್ಗೆ ಭೇಟಿ ನೀಡಿ ಹಡಗಿನ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಬಂದರಿಗೆ ಆಗಮಿಸುತ್ತಿದ್ದ ಐಎನ್ಎಸ್ ವಿರಾಟ್ ಸ್ವಾಗತಕ್ಕೆ ಪಶ್ಚಿಮ ನೌಕಾನೆಲೆಯ ಹೆಲಿಕ್ಪಾಪ್ಟರ್ಗಳು ಸ್ವಾಗತ ಕೋರಿದವು. ನೌಕಾಪಡೆ ಯೋಧರಿಗೆ ಇದೊಂದು ದುಃಖಭರಿತ ಸನ್ನಿವೇಶವಾಗಿತ್ತು, ಕೊಚ್ಚಿಯಿಂದ ಮುಂಬೈನ ಶಿಪ್ಯಾರ್ಡ್ಗೆ ಪಯಣ ಬೆಳೆಸಲು ಸನ್ನದ್ಧವಾದ ವಿರಾಟ್ ಇದೇ ಕೊನೆ ಬಾರಿ ಸ್ವಂತ ಬಲದೊಂದಿಗೆ ಪ್ರಯಾಣಕ್ಕೆ ಅನುವಾಗಿದೆ. 1987 ಮೇ 12 ರಂದು ಸೇವೆಗೆ ಅಣಿಯಾಗಿದ್ದ ವಿರಾಟ್ ಫೈಟರ್ ಪ್ಲೇನ್ ಮತ್ತು ಸಬ್ವುರಿನ್ ಹೊಡೆದುರುಳಿಸುವ ಹೆಲಿಕಾಪ್ಟರ್ ಮತ್ತು ಚೇತಕ್, ಕಮಾಂಡೋ ಹೆಲಿಕಾಪ್ಟರ್ಗಳನ್ನು ಹೊಂದಿತ್ತು. ಭಾರತೀಯ ನೌಕಾದಳದಲ್ಲಿ 29 ವರ್ಷಗಳ ಸುದೀರ್ಘ ಸೇವೆ ನಂತರ ನೇಪಥ್ಯಕ್ಕೆ ಸರಿಯಲು ಐಎನ್ಎಸ್ ವಿರಾಟ್ ಅಣಿಯಾಗಿದೆ.
2008: ಅಣು ಒಪ್ಪಂದ ವಿಷಯದಲ್ಲಿ ಎಡಪಕ್ಷಗಳನ್ನು ಬೆಂಬಲಿಸದೇ ನಿಷ್ಪಕ್ಷಪಾತವಾಗಿ ನಡೆದುಕೊಂಡ ಕಾರಣಕ್ಕೆ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಕೊನೆಗೂ ತಲೆದಂಡ ತೆತ್ತರು. ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಸಿಪಿಎಂ, ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಸುಮಾರು 40 ವರ್ಷಗಳಿಂದ ಸಿಪಿಎಂನಲ್ಲಿದ್ದು, 10 ಬಾರಿ ಸಂಸದರಾಗಿ ಆಯ್ಕೆಯಾದ ಚಟರ್ಜಿ, ತಮ್ಮ 79 ನೇ ಜನ್ಮದಿನ ಆಚರಣೆಗೆ ಎರಡು ದಿನ ಮೊದಲು ಪಕ್ಷದಿಂದ ಉಚ್ಚಾಟಿತರಾದರು.

2007: ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10 ರಂದು ನಡೆಯುವ ಚುನಾವಣೆಗಾಗಿ ಯುಪಿಎ ಹಾಗೂ ಎಡಪಕ್ಷ ಬೆಂಬಲಿತ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಮೊಹ್ಮದ್ ಹಮೀದ್ ಅನ್ಸಾರಿ ಹಾಗೂ ಎನ್ ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಅವರು ನಾಮಪತ್ರ ಸಲ್ಲಿಸಿದರು. ಉಭಯ ಸ್ಪರ್ಧಿಗಳೂ ತಮ್ಮ ತಮ್ಮ ಪಕ್ಷಗಳ ಮುಖಂಡರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿ ಯೋಗೇಂದ್ರ ನಾರಾಯಣ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

2007: ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರು. ಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರು. ದೊರೆ ಆಗ ದೇಶದಲ್ಲಿ ಇರಲಿಲ್ಲ. ಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರು. ದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರು. ಮತ್ತೆ ಅವರು ದೇಶಕ್ಕೆ ವಾಪಸಾದದ್ದು ತಾಲಿಬಾನ್ ಆಡಳಿತ ಅಂತ್ಯಗೊಂಡ (2001) ಹಲವು ತಿಂಗಳುಗಳ ನಂತರ. ಸುಮಾರು 29 ವರ್ಷಗಳ ನಂತರ ದೇಶಕ್ಕೆ ವಾಪಸಾದ ಅವರನ್ನು ಆಫ್ಘನ್ನಿನ ಹೊಸ ಸರ್ಕಾರ `ರಾಷ್ಟ್ರಪಿತ' ಎಂಬ ಬಿರುದು ನೀಡಿ ಗೌರವಿಸಿತಷ್ಟೆ ಅಲ್ಲ, ದೊರೆ ಆಳಿದ 40 ವರ್ಷಗಳ ಕಾಲ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿತ್ತು ಎಂದು ಬಣ್ಣಿಸಿತು. ದೊರೆ ದೇಶಕ್ಕೆ ವಾಪಸಾದ ಕೆಲ ದಿನಗಳ ನಂತರ 2002ರಲ್ಲಿ ಅವರ ಪತ್ನಿ ಹೊಮೈರಾ ಸಹ ದೇಶಕ್ಕೆ ವಾಪಸಾಗಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ನಿಧನ ಹೊಂದಿದರು.

2007: ಮಾಜಿ ನಟಿ, ಭೂಗತ ದೊರೆ ಅಬು ಸಲೇಮ್ ಪ್ರೇಯಸಿ ಮೋನಿಕಾ ಬೇಡಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತು. ನಕಲಿ ಪಾಸ್ಪೋರ್ಟ್ ಸಂಬಂಧದಲ್ಲಿ ಆಕೆಗೆ ಆಂಧ್ರಪ್ರದೇಶ ಹೈಕೋರ್ಟ್ ಮೂರು ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಆದರೆ ಮುಂಬೈ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ 1999 ಜೂನ್ 24ರಂದು ನೀಡಿದ್ದ ಪಾಸ್ಪೋರ್ಟ್ ಕಳೆದು ಹೋಗಿದೆ. ಹೀಗಾಗಿ ಅದನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಆಕೆಯ ತಂದೆ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಪಾಸ್ಪೋರ್ಟ್ ರದ್ದು ಪಡಿಸಿ, ಜಾಮೀನಿನ ಮೇಲೆ ಬೇಡಿ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

2007: ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ `ಆನು ದೇವಾ ಹೊರಗಣವನು...' ಕೃತಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಎಚ್. ಎಸ್. ಮಹದೇವಪ್ರಸಾದ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ನವದೆಹಲಿಯಲ್ಲಿ ನಡೆದ ಎಂಟನೆಯ ಏಷ್ಯಾ ಸಿನೆಮಾ ಉತ್ಸವದ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ `ಸುದ್ದ' (ತಿಥಿ) ತುಳು ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಕನ್ನಡ ಚಲನ ಚಿತ್ರವು ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡವು.

2006: ಭಾರತದ ಮೊತ್ತ ಮೊದಲ ಬೌದ್ಧಿಕ ಆಸ್ತಿಗಳ ಹಕ್ಕು ಶಾಲೆ (Intellectual Property Right School) ಈದಿನ ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಆರಂಭಗೊಂಡಿತು.

2006: ಆರು ವರ್ಷದ `ಬೆತ್ತಲೆ ರಾಜಕುಮಾರ' ಪ್ರಿನ್ಸ್ ಈದಿನ ಸಂಜೆ 7.45ಕ್ಕೆ ಶ್ವೇತವಸ್ತ್ರ ಸುತ್ತಿಕೊಂಡು ಸೈನಿಕನ ಬೆಚ್ಚನೆಯ ತೋಳಿನ ಮೂಲಕ 60 ಅಡಿ ಆಳದ ಕೊಳವೆಬಾವಿಯ ಒಳಗಿನಿಂದ ಹೊರಕ್ಕೆ ಬಂದ. ಹರಿಯಾಣದ ಕುರುಕ್ಷೇತ್ರ ಬಳಿಯ ಹಲ್ವೇರಿ ಗ್ರಾಮದಲ್ಲಿ ಜುಲೈ 21ರಂದು ಆಕಸ್ಮಿಕವಾಗಿ ಈ ಕೊಳವೆ ಬಾವಿಯೊಳಕ್ಕೆ ಬಿದ್ದ ಪ್ರಿನ್ಸ್ 49 ಗಂಟೆಗಳ ಕಾಲ ಅದರೊಳಗೆ ಜವರಾಯನ ಜೊತೆಗೆ ಹೋರಾಟ ನಡೆಸಿದ್ದ. ಕೊಳವೆ ಬಾವಿಯಿಂದ 10 ಅಡಿ ದೂರದಲ್ಲಿ ಇನ್ನೊಂದು ಬಾವಿ ತೋಡಿ ಅದರ ಮೂಲಕ ಇಳಿದು ಅದಕ್ಕೆ ಅಡ್ಡ ಸುರಂಗ ಕೊರೆದು ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

2006: ಆಂಧ್ರಪ್ರದೇಶದ ಜಲ್ಲಮಲ್ಲ ಅರಣ್ಯದಲ್ಲಿ ಈದಿನ ನಸುಕಿನಲ್ಲಿ ನಡೆದ ಘರ್ಷಣೆಯಲ್ಲಿ ಮಾವೋವಾದಿ ನಕ್ಸಲೀಯರ ಉನ್ನತ ನಾಯಕ ಮಾಧವನನ್ನು ಪೊಲೀಸರು ಕೊಂದು ಹಾಕಿದರು. ಘರ್ಷಣೆಯಲ್ಲಿ ಐವರು ಮಹಿಳೆಯರು ಸೇರಿ 7 ಜನ ಅಸು ನೀಗಿದರು.
1981: ಇಂದಿರಾಗಾಂಧಿ ಅವರು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷವೇ `ನಿಜ'ವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಈದಿನ ಮಾನ್ಯತೆ ನೀಡಿದ ಚುನಾವಣಾ ಆಯೋಗವು ದೇವರಾಜ ಅರಸು ಅಧ್ಯಕ್ಷೆಯ ಪಕ್ಷದ ಮಾನ್ಯತೆಯನ್ನು ರದ್ದು ಮಾಡಿತು.

1948: ಭಾಗೀರಥಿ ಹೆಗಡೆ ಜನನ.

1936: ಸಾಹಿತಿ ವೆಂಕಟೇಶ ಕುಲಕರ್ಣಿ ಜನನ.

1930: ರತ್ನಮ್ಮ ಸುಂದರರಾವ್ ಜನನ.

1908: ನವೋದಯ ಕಾಲದ ಪ್ರತಿಭಾನ್ವಿತ ಕವಿ ಗಣಪತಿ ರಾವ್ ಪಾಂಡೇಶ್ವರ ಅವರು ರಾಮಚಂದ್ರರಾಯ- ಸೀತಮ್ಮ ದಂಪತಿಯ ಪುತ್ರನಾಗಿ ಬ್ರಹ್ಮಾವರದಲ್ಲಿ ಜನಿಸಿದರು. ಮುಳಿಯ ತಿಮ್ಮಪ್ಪಯ್ಯ, ಐರೋಡಿ ಶಿವರಾಮಯ್ಯ ಅವರ ಶಿಷ್ಯರಾಗಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಮೂರೂ ಭಾಷೆಗಳಲ್ಲಿ ಸಮಾನ ವಿದ್ವತ್ ಗಳಿಸಿದ್ದ ಪಾಂಡೇಶ್ವರ 17ರ ಹರೆಯದಲ್ಲೇ `ವಿವೇಕಾನಂದ ಚರಿತಂ' ಕವನ ಬರೆದು ಖ್ಯಾತಿ ಪಡೆದಿದ್ದರು.

1906: ಹದಿಹರೆಯದಲ್ಲೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಮಧ್ಯಪ್ರದೇಶದ ಝಾಬ್ರಾದಲ್ಲಿ ಈದಿನ ಜನಿಸಿದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣತೆತ್ತ ಆಜಾದ್ ಸ್ವಾತಂತ್ರ್ಯ ಕಲಿಗಳಿಗೆ ಆದರ್ಶಪ್ರಾಯರಾದರು.

1856: ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯ ಹಾಕಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಪಂಡಿತ, ಗಣಿತಜ್ಞ, ತತ್ವಜ್ಞಾನಿ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಈ ದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು.

No comments:

Post a Comment