Friday, July 27, 2018

ಇಂದಿನ ಇತಿಹಾಸ History Today ಜುಲೈ 27

2018: ನವದೆಹಲಿ: ಗುಂಪು ಹತ್ಯೆಯ ಘಟನೆಗಳನ್ನು ದಮನಿಸಲು ರಾಷ್ಟ್ರಕ್ಕೆ ಪ್ರತ್ಯೇಕ ಬಿಗಿ ಕಾನೂನಿನ ಅಗತ್ಯವಿದೆಯೇ ಎಂಬುದಾಗಿ ಪರಿಶೀಲಿಸಲು ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯು ಕಲ್ಲೆತದ ಪ್ರಕರಣಗಳನ್ನೂ ಇದರ ವ್ಯಾಪ್ತಿಗೆ ತರಲಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ ರಾಥೋಡ್ ಅವರು ಇಲ್ಲಿ ಹೇಳಿದರು. ಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಿದ್ದ ಅವರು ಪ್ರತಿಯೊಂದು ಹಿಂಸೆಯನ್ನೂ ತಿರಸ್ಕರಿಸಬೇಕು ಮತ್ತು ಖಂಡಿಸಬೇಕು. ಇಂತಹ ಘಟನೆಗಳನ್ನು ನೀವು ರಾಜಕೀಯಗೊಳಿಸುವಂತಿಲ್ಲ. ಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರತನಾಗಿದ್ದಾಗ ಗುಂಪುದಾಳಿಯಿಂದ ಹತನಾದರೆ ಅದು ಕೂಡಾ ಗುಂಪುಹತ್ಯೆಯೇ ಮತ್ತು ಯಾರಾದರೂ ಒಬ್ಬ ವ್ಯಕ್ತಿ ಕಲ್ಲೇಟಿನಿಂದ ಸತ್ತರೆ ಅದು ಕೂಡಾ ಗುಂಪು ಹತ್ಯೆಯೇ ಎಂದು ನುಡಿದರು. ನೂತನ ಕಾನೂನು ರಚಿಸುವ ಸಲುವಾಗಿ ಸಮಿತಿಯು ಎಲ್ಲ ರೀತಿಯ ಗುಂಪು ಹಿಂಸಾಚಾರಗಳನ್ನೂ ಪರಿಗಣಿಸುವುದು ಎಂದು ಅವರು ಹೇಳಿದರು. ಗುಂಪು ಹತ್ಯೆಗಳ ದಮನಕ್ಕಾಗಿ ಕಾನೂನು ರೂಪಿಸುವ ಸಲುವಾಗಿ ರಚಿಸಲಾಗಿರುವ ಉನ್ನತ ಸಮಿತಿಯು ತನ್ನ ಶಿಫಾರಸುಗಳನ್ನು ಸಚಿವರ ಸಮಿತಿಗೆ ಸಲ್ಲಿಸಲಿದ್ದು, ಸಚಿವರ ಸಮಿತಿಯು ನಾಲ್ಕು ವಾರಗಳ ಒಳಗಾಗಿ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವ ನಿರೀಕ್ಷೆ ಇದೆ. ಚೆನ್ನೈಯ ಪ್ರವಾಸಿಯೊಬ್ಬರು ಇತ್ತೀಚೆಗೆ ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ  ಗುಂಪಿನ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆಯನ್ನು ಉಲ್ಲೇಖಿಸಿದ ರಾಥೋಡ್ ಗುಂಪು ಹತ್ಯೆ ನಿಗ್ರಹ ಕಾನೂನು ಬಗ್ಗೆ ಪರಿಶೀಲನೆಗಾಗಿ ರಚಿಸಲಾಗಿರುವ ನಾಲ್ವರು ಸದಸ್ಯರ ಸಮಿತಿಯು ವಿಷಯಕ್ಕೆ ಸಂಬಂಧಿಸಿದ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಹೇಳಿದರುಕಳೆದ ವರ್ಷ ಮನೆಗೆ ಹೊರಟಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣವನ್ನೂ ಪ್ರಸ್ತಾಪಿಸಿದ ರಾಥೋಡ್ ಇಂತಹ ಘಟನೆಗಳನ್ನೂ ಗಮನಿಸಿ ಸಮಿತಿಯ ಕಾರ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ ಎಂದು ನುಡಿದರುಕಳೆದ ವರ್ಷ ಜೂನ್ ತಿಂಗಳಲ್ಲಿ ಡೆಪ್ಯುಟಿ ಎಸ್ ಪಿ (ಭದ್ರತೆ) ಮೊಹಮ್ಮದ್ ಅಯೋಬ್ ಪಂಡಿತ್ ಅವರು ನಾಗರಿಕ ದುಸ್ತಿನಲ್ಲಿ ಮಸೀದಿಯೊಂದರ ಹೊರಭಾಗದಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದಾಗ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ಪೊಲೀಸ್ ಅಧಿಕಾರಿ ಸ್ವರಕ್ಷಣೆಗಾಗಿ ತಮ್ಮ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದಾಗ ಮೂವರು ಗಾಯಗೊಂಡಿದ್ದರು. ಸಿಟ್ಟಿಗೆದ್ದ ಗುಂಪು ಅವರನ್ನು ಚಚ್ಚಿ ಕೊಂದು ಹಾಕಿತ್ತು.
2018: ವಿಶ್ವಸಂಸ್ಥೆ: ವಿಶ್ವಸಂಸ್ಥೆಯು ಹಣದ ಅಭಾವವನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಎಚ್ಚರಿಸಿದ್ದು, ಕಡ್ಡಾಯ ದೇಣಿಗೆಗಳನ್ನು ಸಕಾಲದಲ್ಲಿ ಪೂರ್ತಿಯಾಗಿ ಪಾವತಿ ಮಾಡುವ ಮೂಲಕ ವಿಶ್ವಸಂಸ್ಥೆಯು ತನ್ನ ಪ್ರಮುಖ ಕಾರ್ಯಗಳನ್ನು ಮಾಡಲು ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದರು.  ವಿಶ್ವ ಸಂಸ್ಥೆ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರ್ರೆಸ್ ಅವರು ತಾವು ಜಾಗತಿಕ ಸಂಸ್ಥೆಯು ಎದುರಿಸುತ್ತಿರುವ ಕಠಿಣ ಹಣಕಾಸು ಪರಿಸ್ಥಿತಿಯ ಬಗ್ಗೆ ಸದಸ್ಯ ರಾಷ್ಟ್ರಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ರೆಗ್ಯುಲರ್ ಬಜೆಟ್ ಕಾಣಿಕೆಯನ್ನು ಪಾವತಿ ಮಾಡುವಲ್ಲಿ ಸದಸ್ಯ ರಾಷ್ಟ್ರಗಳು ವಿಳಂಬ ಮಾಡುತ್ತಿರುವುದು ವಿಶ್ವಸಂಸ್ಥೆಯಲ್ಲಿ ಹಣದ ಅಭಾವ ತಲೆದೋರಲು ಮುಖ್ಯ ಕಾರಣವಾಗಿದ್ದು, ಬಾರಿಯ ನಗದು ಅಭಾವ ಹಿಂದೆ ಸಂಭವಿಸಿದ ಹಣದ ಅಭಾವಗಳಂತಲ್ಲ ಎಂದು ಗುಟೆರ್ರ್ರೆಸ್ ತಮ್ಮ ಪತ್ರದಲ್ಲಿ ತಿಳಿಸಿದರು. ನಮ್ಮ ನಗದು ಹಣದ ಹರಿವು ವರ್ಷ ಅತ್ಯಂತ ಕಡಿಮೆಯಾಗಿದ್ದು ಹಿಂದೆಂದೂ ಇಷ್ಟೊಂದು ಕಡಿಮೆಯಾಗಿರಲಿಲ್ಲ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಾಗಿ ಶೀಘ್ರದಲ್ಲೇ ನಾವು ತೀವ್ರ ಹಣದ ಅಭಾವ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಗುಟೆರ್ರೆಸ್ ಪತ್ರ ಹೇಳಿತು.  ಜುಲೈ ೨೬ರವರೆಗಿನ ಅವಧಿಯಲ್ಲಿ ವರ್ಷ ಭಾರತ ಸೇರಿದಂತೆ ೧೧೨ ಸದಸ್ಯ ರಾಷ್ಟ್ರಗಳು ತಮ್ಮ ರೆಗ್ಯುಲರ್ ಬಜೆಟ್ ಕಾಣಿಕೆಯನ್ನು ಪೂರ್ತಿಯಾಗಿ ಪಾವತಿ ಮಾಡಿವೆ. ಭಾರತವು ೧೭.೯೧ ಮಿಲಿಯನ್ (೧೭.೯೧ ಕೋಟಿ) ಡಾಲರ್ ಗಳನ್ನು ವರ್ಷ ಜನವರಿ ೨೯ರಂದೇ ಪಾವತಿ ಮಾಡಿದೆ ವರ್ಷದ ಜೂನ್ ಅಂತ್ಯದ ವೇಳೆಗೆ ೨೦೧೮ರ ಸಾಲಿಗಾಗಿ ಸದಸ್ಯರಾಷ್ಟ್ರಗಳು ಸುಮಾರು ೧೪೯ ಕೋಟಿ (.೪೯ ಬಿಲಿಯನ್) ಅಮೆರಿಕನ್ ಡಾಲರ್ ಹಣವನ್ನು ಪಾವತಿ ಮಾಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೆಗ್ಯುಲರ್ ಬಜೆಟ್ ಗೆ ಪಾವತಿ ಮಾಡಲಾಗಿದ್ದ ಮೊತ್ತ ೧೭೦ ಕೋಟಿ (.೭೦ ಬಿಲಿಯನ್) ಅಮೆರಿಕನ್ ಡಾಲರುಗಳಿಗಿಂತ ಸ್ವಲ್ಪ ಹೆಚ್ಚು.  ಈವರೆಗೆ ತಿಂಗಳಲ್ಲಿ ಇರಾಖ್, ಮಾಲ್ದೋವ, ಜಪಾನ್, ಲಿಥುವೇನಿಯಾ ಮತ್ತು ಮೆಕ್ಸಿಕೊ ತಮ್ಮ ೨೦೧೮ರ ಸಾಲಿನ ಕಾಣಿಕೆಯಾಗಿ ಸ್ವಲ್ಪ ಹಣ ಪಾವತಿ ಮಾಡಿದ್ದರೂ, ೮೧ ಕೋಟಿ (೮೧೦ ಮಿಲಿಯನ್) ಅಮೆರಿಕನ್ ಡಾಲರುಗಳನ್ನು ಬಾಕಿ ಇರಿಸಿವೆ. ಒಟ್ಟು ೮೧ ರಾಷ್ಟ್ರಗಳು ತಮ್ಮ ರೆಗ್ಯುಲರ್ ಬಜೆಟ್ ಕಾಣಿಕೆಯನ್ನೇ ಇನ್ನೂ ಪಾವತಿ ಮಾಡಿಲ್ಲ. ರಾಷ್ಟ್ರಗಳ ಸಾಲಿನಲ್ಲಿ ಆಫ್ಘಾನಿಸ್ಥಾನ, ಬಾಂಗ್ಲಾದೇಶ, ಬ್ರೆಜಿಲ್, ಈಜಿಪ್ಟ್, ಇಸ್ರೇಲ್, ಮಾಲ್ದೀವ್ಸ್, ಪಾಕಿಸ್ತಾನ, ಸೌದಿ ಅರೇಬಿಯಾ, ಸಿಚೆಲ್ಲೆಸ್, ಸುಡಾನ್, ಸಿರಿಯಾ ಮತ್ತು ಅಮೆರಿಕ ಹಾಗೂ ಜಿಂಬಾಬ್ವೆ ಸೇರಿವೆಅಮೆರಿಕವು ವಿಶ್ವಸಂಸ್ಥೆಗೆ ಅತಿದೊಡ್ಡ ಕಾಣಿಕೆ ನೀಡುತ್ತಿರುವ ರಾಷ್ಟ್ರವಾಗಿದ್ದು ೫೪೦ ಕೋಟಿ (. ಬಿಲಿಯನ್) ಅಮೆರಿಕನ್ ಡಾಲರ್ ಮೊತ್ತದ ಮುಖ್ಯ ಬಜೆಟಿನ (ಕೋರ್ ಬಜೆಟ್) ಶೇಕಡಾ ೨೨ನ್ನು ಮತ್ತು ೭೯೦ ಕೋಟಿ (. ಬಿಲಿಯನ್ ) ಅಮೆರಿಕನ್ ಡಾಲರ್ ಮೊತ್ತದ ಶಾಂತಿಪಾಲನಾ ಬಜೆಟಿನ ಶೇಕಡಾ ೨೮.೫ನ್ನು ಭರಿಸುತ್ತದೆ. ಅಮೆರಿಕದ ಪಾಲು ಶೇಕಡಾ ೨೫ಕ್ಕೆ ಮಿತಿಯಾಗುವಂತೆ ನೋಡಿಕೊಳ್ಳುವ ಸಲುವಾಗಿ ಇತರ ರಾಷ್ಟ್ರಗಳು ತಮ್ಮ ಕಾಣಿಕೆಯ ಪಾಲನ್ನು ಹೆಚ್ಚಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹಾಲೇ ಅವರು ಹೇಳಿದ್ದಾರೆಕಳೆದ ವರ್ಷ ವಿಶ್ವಸಂಸ್ಥೆಯು ೨೦೧೮-೧೯ರ ಹಣಕಾಸು ವರ್ಷಕ್ಕೆ ೫೪೦ ಕೋಟಿ (. ಬಿಲಿಯನ್) ಅಮೆರಿಕನ್ ಡಾಲರ್ ಮೊತ್ತದ ಬಜೆಟಿಗೆ ವಿಶ್ವಸಂಸ್ಥೆ ಒಪ್ಪಿತ್ತು.   ಬಜೆಟಿನಿಂದ ೨೮.೫೦ ಕೋಟಿ (೨೮೫ ಮಿಲಿಯನ್) ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ಇಳಿಸುವಂತೆ ಅಮೆರಿಕ ಮಾತುಕತೆ ನಡೆಸಿತ್ತು. ವಿಶ್ವಸಂಸ್ಥೆಯ ಅದಕ್ಷತೆ ಮತ್ತು ಅತಿಯಾದ ವೆಚ್ಚವು ಎಲ್ಲರಿಗೂ ಗೊತ್ತಿರುವಂತಹುದೇ, ಆದ್ದರಿಂದ ಅಮೆರಿಕದ ಜನರ ಉದಾರತೆಯ ಲಾಭ ಪಡೆಯಲು ಅಥವಾ ಅದನ್ನು ತಪಾಸಿಸದೇ ಇರಲು ಇನ್ನು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಹೇಳಿತ್ತು.  ತಮ್ಮ ತಮ್ಮ ಬಜೆಟ್ ಕಾಣಿಕೆಯನ್ನು ಸಕಾಲಕ್ಕೆ, ಪೂರ್ಣವಾಗಿ ಪಾವತಿ ಮಾಡುವಂತೆ ತಾನು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದು, ಹಣದ ಅಭಾವವಾದರೆ ವಿಶ್ವಸಂಸ್ಥೆಗೆ ತನ್ನ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದು, ಇದರಿಂದ ಸಂಸ್ಥೆಯ ಪ್ರತಿಷ್ಠೆಗೂ ಧಕ್ಕೆಯಾಗಬಹುದು ಎಂದು ಗುಟೆರ್ರೆಸ್ ಹೇಳಿದರು.  ಕೆಲವು ಸದಸ್ಯ ರಾಷ್ಟ್ರಗಳ ಹಣಕಾಸು ವರ್ಷಗಳು ಭಿನ್ನವಾಗಿವೆ ಎಂಬುದು ವಿಶ್ವಸಂಸ್ಥೆಗೆ ಗೊತ್ತಿದೆ, ಆದರೆ ಹಿಂದಿನ ವರ್ಷಗಳಲ್ಲಿ ಎಂದೂ ವರ್ಷದಂತೆ ನಗದು ಹಣದ ಹರಿವು ಇಳಿದಿರಲಿಲ್ಲ ಎಂದು ಜನರಲ್ ಸೆಕ್ರೆಟರಿ ಅವರ ವಕ್ತಾರ ಸ್ಟೀಫನ್ ಡುಜರ್ರಿಕ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರುವಿಶ್ವಸಂಸ್ಥೆಯು ತನ್ನ ಖರ್ಚುವೆಚ್ಚಗಳಿಗೆ ಸದಸ್ಯ ರಾಷ್ಟ್ರಗಳ ಕೊಡುಗೆಯ ಸಕಾಲಿಕ, ಪೂರ್ಣ ಪಾವತಿಯನ್ನೇ ನೆಚ್ಚಿಕೊಂಡಿದ್ದು, ಅದಕ್ಕೆ ಬೇರೆ ಆದಾಯಗಳಿಲ್ಲ ಎಂದೂ ಅವರು ನುಡಿದರು. ವಿಶ್ವಸಂಸ್ಥೆ ಸಚಿವಾಲಯವು ಈಗ ವೆಚ್ಚ ಇಳಿಕೆಯ ದಾರಿಗಳನ್ನು ಅನ್ವೇಷಿಸುತ್ತಿದ್ದು, ಸಿಬ್ಬಂದಿಯೇತರ ವೆಚ್ಚ ಇಳಿಕೆ ಬಗ್ಗೆ ಗಮನ ಹರಿಸಿದೆ ಎಂದೂ ಅವರು ಹೇಳಿದರು.

2018: ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯವಾಗುವುದರ ಒಳಗಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ದೌರ್ಜನ್ಯ ತಡೆ ಮಸೂದೆಗೆ ತಿದ್ದುಪಡಿಗಳನ್ನು ತರುವಂತೆ ಎನ್ ಡಿಎ ಮಿತ್ರಪಕ್ಷವಾಗಿರುವ ಲೋಕಜನಶಕ್ತಿ ಪಕ್ಷವು ಗಡುವು ನೀಡಿದ್ದು, ಇಲ್ಲದೇ ಇದ್ದಲ್ಲಿ ಚಳವಳಿ ಆರಂಭಿಸುವ ಬೆದರಿಕೆ ಹಾಕಿತು.
ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಲೋಕಜನ ಶಕ್ತಿ ಪಕ್ಷವು ದುರ್ಬಲ ವರ್ಗಗಳಿಗೆ ಜಾತಿ ತಾರತಮ್ಯ ಮತ್ತು ಹಿಂಸೆಯಿಂದ ರಕ್ಷಣೆ ಒದಗಿಸುವ ಸಲುವಾಗಿ ಕಾಯ್ದೆಗೆ ಬದಲಾವಣೆಗಳನ್ನು ಮಾಡದೇ ಇದ್ದಲ್ಲಿ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿತು. ಪಕ್ಷದ ಸಂಸತ್ ಸದಸ್ಯ ಹಾಗೂ ಸಂಸದೀಯ ಮಂಡಳಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ದಲಿತರ ಸಹನೆ ಮೀರುತ್ತಿದೆ. ನಮ್ಮ ಬೇಡಿಕೆಗಳನ್ನು ಆಗಸ್ಟ್ ೯ರ ಒಳಗಾಗಿ ಈಡೇರಿಸದೇ ಇದ್ದಲ್ಲಿ ಆಗ ದಲಿತ ಸೇನೆಯು ರಸ್ತೆಗಳಿಗೆ ಇಳಿಯುವುದು  ಅನಿವಾರ್ಯವಾಗುತ್ತದೆ. ಎಲ್ ಜೆಪಿಯು ಯಾವುದೇ ನಿರ್ಧಾರ ಕೈಗೊಳ್ಳಬಹುದು. ಈಗ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನ ಮುಂದೂಡಿಕೆಯಾದಲ್ಲಿ ಕೇಂದ್ರ ಸರ್ಕಾರವು ಎಸ್ ಸಿ /ಎಸ್ ಟಿ ಕಾಯ್ದೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದರುಸುಪ್ರೀಂಕೋರ್ಟ್ ವರ್ಷ ಆದಿಯಲ್ಲಿ ನೀಡಿದ್ದ ತನ್ನ ಆದೇಶದಲ್ಲಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾದ ತತ್ ಕ್ಷಣವೇ ಆರೋಪಿಯನ್ನು ಬಂಧಿಸಲಾಗದು ಎಂದು ತಿಳಿಸಿತ್ತು. ದಲಿತ ಸಂಘಟನೆಗಳು ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಏಪ್ರಿಲ್ ಮೊದಲ ವಾರದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಿದ್ದವು. ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮವಾಗಿ ಮಂದಿ ಜೀವ ಕಳೆದುಕೊಂಡಿದ್ದರುತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಸಂಸತ್ತಿನಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ವಿರೋಧ ಪಕ್ಷಗಳು ಮತ್ತು ಎನ್ ಡಿ ಮಿತ್ರ ಪಕ್ಷಗಳು ಅಂದಿನಿಂದಲೇ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವು. ಎಲ್ ಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ ಪಾಸ್ವಾನ್ ಅವರ ನಿವಾಸದಲ್ಲಿ ಈವಾರ ಸಭೆ ಸೇರಿದ್ದ ಎನ್ ಡಿಎ ಸಂಸತ್ ಸದಸ್ಯರು ಮತ್ತು ನ್ಯಾಯಮೂರ್ತಿ ಎಕೆ ಗೋಯೆಲ್ ಅವರನ್ನು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷರಾಗಿ ನೇಮಿಸುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ನ್ಯಾಯಮೂರ್ತಿ ಗೋಯೆಲ್ ಮತ್ತು ನ್ಯಾಯಮೂರ್ತಿ ಯು ಯು ಲಲಿತ್ ಅವರನ್ನು ಒಳಗೊಂಡ ಪೀಠವು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ವರ್ಷ ಮಾರ್ಚ್ ತಿಂಗಳಲ್ಲಿ ತೀರ್ಪು ನೀಡಿತ್ತು.  ಬಿಜೆಪಿ ಸಂಸತ್ ಸದಸ್ಯ ಉದಿತ್ ರಾಜ್ ಅವರು ವಾರಾರಂಭದಲ್ಲಿ ಲೋಕಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದರು.

2018: ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್--ಮೊಹಮ್ಮದ್ (ಜೆಇಎಂ) ಪಂಜಾಬ್ ಪ್ರಾಂತ್ಯದ ಬಹವಾಲ್ ಪುರ ನಗರದ ಹೊರವಲಯದ ೧೫ ಎಕರೆ ಪ್ರದೇಶದಲ್ಲಿ ಸಹಸ್ರಾರು ಮಂದಿ ಎಳೆಯ ಮಕ್ಕಳಿಗೆ ಜೆಹಾದ್ ಸಲುವಾಗಿ ಬಲಿದಾನಕ್ಕೆ ಸಜ್ಜಗೊಳಿಸುವ ಬೃಹತ್ ತರಬೇತಿ ಸಮುಚ್ಚಯವನ್ನು ರಹಸ್ಯವಾಗಿ ನಿರ್ಮಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿತು. ಸಮುಚ್ಚಯದ ಛಾಯಾಚಿತ್ರಗಳು ಸಂಕೀರ್ಣವು ನಿಷೇಧಿತ ಸಂಘಟನೆಯು ನಗರದಲ್ಲಿ ಹೊಂದಿರುವ ಹಾಲಿ ಕೇಂದ್ರ ಕಚೇರಿಯ ಐದು ಪಟ್ಟು ದೊಡ್ಡದಾಗಿರುವುದನ್ನು ತೋರಿಸುತ್ತವೆ. ಕಳೆದ ಮೂರು ತಿಂಗಳುಗಳಿಂದ ಸ್ಥಳದಲ್ಲಿ ಸಮುಚ್ಚಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಮಹಾಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಗೆಲುವು ಮತ್ತು ಜೆಇಎಂ ತರಬೇತಿ ಸಮುಚ್ಚಯದ ವಿಸ್ತರಣೆ ಯೋಜನೆ ಕಾಕತಾಳೀಯ ಏನಲ್ಲ. ವಾಸ್ತವವಾಗಿ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿ ಬಳಿಕ ಪಾಕಿಸ್ತಾನದ ಜೊತೆ ವಿಲೀನಗೊಳಿಸುವ ಗುರಿ ಇಟ್ಟುಕೊಂಡಿರುವ ಜೆಇಎಂ ಚುನಾವಣೆಯಲ್ಲಿ ಪ್ರಸ್ತುತ ಪಾಕ್ ಪ್ರಧಾನಿಯಾಗಿ ನಿಯೋಜಿತರಾಗಿರುವ ಇಮ್ರಾನ್ ಖಾನ್ ಅವರಿಗೆ ಸಕ್ರಿಯ ಬೆಂಬಲ ನೀಡಿತ್ತು. ಹೀಗಾಗಿ ಅದು ಈಗ ಇಮ್ರಾನ್ ಖಾನ್ ಅವರಿಗೆ ಸಾಲ ಮರುಪಾವತಿ ಮಾಡುವಂತೆ ಕೋರಿದರೆ ಅಚ್ಚರಿಯೇನಿಲ್ಲ. ಜೆಇಎಂ ಸಂಘಟನೆಯು ಖಾನ್ ಅವರ ಪಾಕಿಸ್ತಾನ ತೆಹ್ರೀಕ್ --ಇನ್ಸಾಫ್ ಪಕ್ಷದ ಪರವಾಗಿ ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ನವಾಜ್ ಶರೀಫ್ ವಿರುದ್ಧ ವ್ಯಾಪಕ ಪ್ರಚಾರ ನಡೆಸಿತ್ತು. ನವಾಜ್ ಶರೀಫ್ ಅವರನ್ನು ಸಂಘಟನೆಯು ಪಾಕಿಸ್ತಾನ ಮತ್ತು ಇಸ್ಲಾಮಿನ ದ್ರೋಹಿ ಎಂಬುದಾಗಿ ಬಣ್ಣಿಸಿತ್ತುತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕಾಗಿ ಅಂತಾರಾಷ್ಟ್ರೀಯ ದಿಗ್ಬಂಧನವನ್ನು ಎದುರಿಸುತ್ತಿರುವ ಪಾಕಿಸ್ತಾನ ಭಯೋತ್ಪಾದಕ ಗುಂಪುಗಳ ವಿರುದ್ಧ ಈವರೆಗೂ ಕೈಗೊಂಡಿರುವ ಕ್ರಮ ಅತ್ಯಲ್ಪವೇ. ಜೆಇಎಂ ನಂತಹ ಭಯೋತ್ಪಾದಕ ಗುಂಪುಗಳ ದಮನಕ್ಕಾಗಿ ಕಳೆದ ವರ್ಷ ಸೆಪ್ಟೆಂಬರಿನಿಂದ ೨೬ ಅಂಶಗಳ ಕಾರ್ಯಯೋಜನೆಯನ್ನೂ ಅದು ಜಾರಿಗೊಳಿಸಲೂ ಪಾಕಿಸ್ತಾನ ಬದ್ಧವಾಗಿದೆ. ಆದರೆ ವಾಸ್ತವವಾಗಿ ನಿಷೇಧಿತ ಸಂಘಟನೆಗಳು ಪಾಕ್ ನೆಲದಲ್ಲಿ ಮುಕ್ತವಾಗಿಯೇ ಕಾರ್ಯಾಚರಿಸುತ್ತಿವೆ. ಸ್ಥಳೀಯ ಸರ್ಕಾರಿ ದಾಖಲೆಗಳ ಪ್ರಕಾರ ನೂತನ ಬಹಾವಲ್ಪುರ ಸಮುಚ್ಚಯಕ್ಕಾಗಿ ಭೂಮಿಯನ್ನು ನೇರವಾಗಿ ಸಂಘಟನೆಯ ಕಮಾಂಡರ್ ಮಸೂದ್ ಅಜರ್ ಖರೀದಿಸಿದ್ದಾನೆ. ಈತ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ಕೃತ್ಯಗಳ ಕಾರಣಕರ್ತ ಎಂದು ಭಾರತ ಆಪಾದಿಸಿದೆ.  ಸೆಂಬರ್ ೨೦೦೧ರಲ್ಲಿ ನಡೆದ ಸಂಸತ್ ಮೇಲಿನ ದಾಳಿ, ೨೦೧೬ರಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆಗಾರನಾಗಿರುವ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯೇ ನಿಯೋಜಿತ ಭಯೋತ್ಪಾದಕ ಎಂಬುದಾಗಿ ಘೋಷಿಸುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ತೀವ್ರ ಯತ್ನ ನಡೆಸಿದೆ. ಆದರೆ ಚೀನಾ ಹಲವಾರು ಬಾರಿ ವಿಶ್ವಸಂಸ್ಥೆಯಲ್ಲಿ ಯತ್ನವನ್ನು ತಡೆದಿದೆ. ಸಮುಚ್ಚಯ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ಭೂಮಿಯ ಬೆಲೆ ಎಕರೆಗೆ ೮೦ರಿಂದ ೯೦ ಲಕ್ಷ ರೂಪಾಯಿಗಳಿವೆ. ಮೂಲಗಳ ಪ್ರಕಾರ ಸಮುಚ್ಚಯದಲ್ಲಿ ಈಗಾಗಲೇ ಅಡಿಗೆಕೋಣೆಗಳನ್ನು ನಿರ್ಮಿಸಲಾಗಿದ್ದು ವೈದ್ಯಕೀಯ ಸವಲತ್ತು, ಬೋಧನಾ ಕೊಠಡಿಗಳು ಮತ್ತು ಸುಭದ್ರ ವಸತಿ ಇಲ್ಲವೇ ಗುಂಡು ಹಾರಿಸುವ ಒಳಾಂಗಣ ಜಾಗಕ್ಕಾಗಿ ವಿಶಾಲವಾದ ಭೂಗತ ಸವಲತ್ತನ್ನು ನಿರ್ಮಿಸಲಾಗುತ್ತಿದೆಈಜುಕೊಳ, ಬಿಲ್ಲುಗಾರಿಕೆ ವಲಯ, ಕ್ರೀಡಾ ಮೈದಾನಗಳಿಗೂ ಯೋಜಿಸಲಾಗಿದ್ದು ಸಮುಚ್ಚಯವು ತನ್ನ ಎಲ್ಲ ಜೆಹಾದಿ ಕಾರ್ಯಾಚರಣೆಗಳ ಕೇಂದ್ರವಾಗಲಿದೆ ಎಂದು ಜೆಇಎಂ ಆಶಿಸಿದೆ ಎಂದು ವರದಿಗಳು ಹೇಳಿವೆ. ಅಲ್ ರಹಮತ್ ಟ್ರಸ್ಟ್ ಮೂಲಕ ಹಜ್ ಯಾತ್ರಿಗಳಿಂದ ಇದಕ್ಕಾಗಿ ನಿಧಿ ಸಂಗ್ರಹ ಮಾಡಲಾಗುತ್ತಿದೆ ಎಂದೂ ವರದಿ ಹೇಳಿತು. ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಜೆಇಎಂ ಚಟುವಟಿಕೆಗಳನ್ನು ನಿಲ್ಲಿಸಲು ಯತ್ನಿಸಿದ್ದಲ್ಲದೆ ಅಜರ್ ಬಂಧನಕ್ಕೂ ಆಜ್ಞಾಪಿಸಿದ್ದರು. ಆದರೆ ಈಗ ಶರೀಪ್ ಮೂಲೆಗುಂಪಾಗಿದ್ದು, ಜೆಇಎಂ ಬೆಂಬಲ ಪಡೆದ ಇಮ್ರಾನ್ ಖಾನ್ ಅವರೇ ಅಧಿಕಾರಕ್ಕೆ ಬರುತ್ತಿರುವುದರಿಂದ ಜೆಇಎಂ ಚಟುವಟಿಕೆಗಳು ಇನ್ನಷ್ಟು ವೇಗ ಪಡೆಯುವ ಸಾಧ್ಯತೆಗಳು ಇವೆ ಎನ್ನಲಾಯಿತು.

2018: ನವದೆಹಲಿ: ಮಂಗಳ ಗ್ರಹದಲ್ಲಿ ನೀರಿಗಾಗಿ ಹುಡುಕಾಡುತ್ತಿದ್ದ ವಿಜ್ಞಾನಿಗಳಿಗೆ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಕೆಂಪು ಗ್ರಹದ ಅಂಗಳದಲ್ಲಿ ಹುದುಗಿರುವ ಭೂಗತ ಉಪ್ಪು ನೀರಿನ ಸರೋವರವನ್ನು ಇಟಲಿಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮಂಗಳ ಗ್ರಹದಲ್ಲಿ ಜೀವಿಗಳಿದ್ದಿರಬಹುದಾದ ಸಾಧ್ಯತೆಗಳನ್ನು ಇದು ಮತ್ತಷ್ಟು ಹೆಚ್ಚಿಸಿತು.  ಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮಾರ್ಸ್ ಎಕ್ಸ್ಪ್ರೆಸ್ ಉಪಗ್ರಹದಲ್ಲಿರುವ ಮಾರ್ಸಿಸ್ ರಾಡಾರ್ ಸರೋವರವನ್ನು ಪತ್ತೆ ಹಚ್ಚಿದೆ. ಮಂಗಳ ಗ್ರಹದ ದಕ್ಷಿಣ ದ್ರುವದಲ್ಲಿ ಸರೋವರವಿದ್ದು, ಇದು ತುಂಬಾ ದೊಡ್ಡ ಸರೋವರವೇನಲ್ಲ ಎನ್ನುತ್ತಾರೆ ಅಧ್ಯಯನವನ್ನು ಮುನ್ನಡೆಸಿದ ಇಟಲಿಯ ಖಗೋಳ ವಿಜ್ಞಾನಿ ರಾಬರ್ಟೋ ಒರಸಾಯ್. ಸರೋವರ ಕನಿಷ್ಟ ಮೀಟರ್ ಆಳವಿದೆ ಮತ್ತು ಸುಮಾರು೨೦ ಕಿಲೋಮೀಟರ್ ವ್ಯಾಪ್ತಿಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಮಂಗಳ ಗ್ರಹದಲ್ಲಿ ಸರೋವರ ಭೂಗತವಾಗಿರುವುದು ದೊಡ್ಡ ಅಚ್ಚರಿಯೇನಲ್ಲ. ದ್ರವ ರೂಪದಲ್ಲಿ ನೀರು ಮಂಗಳ ಗ್ರಹದ ಮೇಲ್ಮೈಯಲ್ಲಿ ಇರಲು ಸಾಧ್ಯವಿಲ್ಲ. ಕಾರಣ ಮಂಗಳ ಗ್ರಹದ ವಾತಾವರಣದಲ್ಲಿರುವ ಒತ್ತಡ ತೀರಾ ಕಡಿಮೆಯಾಗಿದೆ, ಎನ್ನುತ್ತಾರೆ ಡಬ್ಲಿನ್ ಇನ್ಸ್ಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಲಿಯೋ ಎನ್ರೈಟ್. ಸರೋವರ ಮೇಲ್ಮೈನಿಂದ . ಕಿಲೋಮೀಟರ್ ಆಳದಲ್ಲಿದೆ. ಇಲ್ಲಿನ ವಾತಾವರಣ -೧೦ ರಿಂದ -೩೦ ಡಿಗ್ರಿ ಸೆಲ್ಸಿಯಸ್ನಷ್ಟು ಶೀತವಾಗಿರುವುದರಿಂದ ನೀರು ತೀರಾ ಉಪ್ಪಾಗಿರಬಹುದು ಎಂಬುದು ಎನ್ರೈಟ್ ಅಂದಾಜು. ನೀರಿನ ಅನ್ವೇಷಣೆ ಅಂಗಾರಕನ ಅಂಗಳದಲ್ಲಿ ಜೀವಿಗಳುಇದ್ದಿರಬಹುದಾದ ಸಾಧ್ಯತೆಗಳಿಗೆ ಸಾಕ್ಷಿ ಎನ್ನುತ್ತಾರೆ ಅವರು‘ಮಂಗಳ ಗ್ರಹದಲ್ಲಿ ಜೀವಿಗಳು ಇದ್ದಿರಬಹುದು ಎಂದು ವಿಜ್ಞಾನಿಗಳು ತುಂಬಾ ಹಿಂದೆಯೇ ಅಂದಾಜಿಸಿದ್ದರು. ಮತ್ತು ಕಳೆದೊಂದು ವರ್ಷದಲ್ಲಿ ಹಲವಾರು ಮಂಗಳಯಾನಗಳು ನಿಟ್ಟಿನಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದವು. ಇವುಗಳಲ್ಲಿ ಗ್ರಹದ ಮೇಲ್ಮೈ ಮೇಲೆ ಉಪ್ಪು ನೀರು ಹರಿದಿರುವ ಲಕ್ಷಣಗಳು ಗೋಚರಿಸಿತ್ತು. ಇದೀಗ ಜೀವಿಗಳು ಇದ್ದಿರಬಹುದಾದ ಸಾಧ್ಯತೆಗಳಿಗೆ ಸಾಕ್ಷಿಯಾಗಿ ದ್ರವ ರೂಪದ ನೀರು ಪತ್ತೆಯಾಗಿದೆ

2008: ಗುಜರಾತಿನ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 45ಕ್ಕೆ ಹಾಗೂ ಗಾಯಾಳುಗಳ ಸಂಖ್ಯೆ 162ಕ್ಕೆ ಏರಿತು.

2006: ಹಿರಿಯ ಜಾನಪದ ವಿದ್ವಾಂಸ ಮತಿಘಟ್ಟ ಕೃಷ್ಣಮೂರ್ತಿ (94) ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಮತಿಘಟ್ಟ ಮೂಲದ ಕೃಷ್ಣಮೂರ್ತಿ `ಕಳಸಾಪುರದ ಹುಡುಗರು', `ಗೃಹಿಣಿ ಗೀತ', `ಸಾಂಪ್ರದಾಯಿಕ ಗೀತೆಗಳು', `ಶಕುನದ ಹಕ್ಕಿ', `ಹೊನ್ನ ಹೊತ್ತಿಗೆ', `ಮರುಗಿ', `ನಾಡಪದಗಳು' `ನಮ್ಮ ಹಳ್ಳಿಯ ಹಾಡು' ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದರು. 50,000ಕ್ಕೂ ಹೆಚ್ಚು ಜನಪದ ಹಾಡು ಕಥೆಗಳನ್ನು ಸಂಗ್ರಹಿಸಿದ್ದಲ್ಲದೆ, ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೈಲಿಗೂ ಹೋಗಿದ್ದರು.

2006: ಭಾರತ- ಅಮೆರಿಕ ಪರಮಾಣು ಶಕ್ತಿ ಒಪ್ಪಂದವನ್ನು ಅಮೆರಿಕದ ಕಾಂಗ್ರೆಸ್ (ಪ್ರತಿನಿಧಿಗಳ ಸಭೆ) ಅನುಮೋದಿಸಿತು. 4 ಗಂಟೆಗಳ ಚರ್ಚೆಯ ಬಳಿಕ 435 ಸದಸ್ಯ ಬಲದ ಸದನವು 359 ಪರ ಮತ್ತು 68 ವಿರೋಧಿ ಮತಗಳಿಂದ ಒಪ್ಪಂದಕ್ಕೆ ಅನುಮೋದನೆ ನೀಡಿತು.

2006: ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಕೊಲೆ ಆರೋಪಿ, ಆಕೆಯ ಪ್ರಿಯಕರ ಗುರುರಾಜ ಕಿಶೋರನನ್ನು ಪೊಲೀಸರು ಬಂಧಿಸಿದರು. ಮದುವೆಯಾಗಲು ನಿರಾಕರಿಸಿದ್ದರಿಂದ ಕೊಲೆ ಮಾಡಿದುದಾಗಿ ಆತ ಪೊಲೀಸರಲ್ಲಿ ತಪ್ಪು ಒಪ್ಪಿಕೊಂಡ.

2006: ಕ್ರೊಯೇಷಿಯಾದ ಜಾಗ್ರೆಬಿನಲ್ಲಿ ನಡೆದ 49ನೇ ಐಎಸ್ಸೆಸ್ಸೆಫ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ರಾಷ್ಟ್ರದ ಸಮುದಾಯ ಸೇವೆಗೆ ತೊಡಗಿಸಿಕೊಂಡವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕೆನಡಾದ ಎರಡನೇ ಉನ್ನತ ನಾಗರಿಕ ಪ್ರಶಸ್ತಿ `ಆರ್ಡರ್ ಆಫ್ ಕೆನಡಾ'ಕ್ಕೆ ಭಾರತದ ಅರ್ಥಶಾಸ್ತ್ರಜ್ಞ ಮಾನವ ಹಕ್ಕುಗಳ ಹೋರಾಟಗಾರ ವಿಠ್ಠಲ್ ರಾಜನ್ ಮತ್ತು ಆರೋಗ್ಯ ಸೇವಾ ಕಾರ್ಯಕರ್ತೆ ಲಲಿತಾ ಮಲ್ಹೋತ್ರ ಆಯ್ಕೆಯಾದರು.

1992: ಖ್ಯಾತ ಹಿಂದಿ ಚಿತ್ರನಟ ಅಮ್ಜದ್ ಖಾನ್ ನಿಧನ.

1972: ನಕ್ಸಲ್ ಚಳವಳಿಯ ಧುರೀಣ ಚಾರು ಮಜುಂದಾರ್ ಅವರು ಕಾರಾಗೃಹದಲ್ಲಿ ಈದಿನ ನಿಧನರಾದರು. ನಕ್ಸಲ್ ಚಳವಳಿಯ ನೇತೃತ್ವ ವಹಿಸಿ ಅವರು ಬಹಳ ಕಾಲ ಭೂಗತರಾಗಿ ಚಳವಳಿ ಮುಂದುವರೆಸಿದ್ದರು.

1928: ಸಾಹಿತಿ ಶ್ರೀನಿವಾಸ ಕುಲಕರ್ಣಿ ಜನನ.

1928: ಖ್ಯಾತ ಲೇಖಕ, ವಕೀಲ, ಪತ್ರಕರ್ತ ರಾಮೇಶ್ವರ ಸಹಾಯ್ ಸಕ್ಸೇನಾ ಜನನ.

1910: ಸಾಹಿತಿ ಜೋಳದರಾಶಿ ದೊಡ್ಡನಗೌಡರ ಜನನ.

1910: ಖ್ಯಾತ ಗಾಯಕ ಬಂದೇ ಅಲಿಖಾನ್ ನಿಧನ.

1906: ಮದ್ರಾಸು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪಂಡಿತ, ನಿಘಂಟು ತಜ್ಞ, ಸಂಶೋಧಕ ಪ್ರೊ. ಮರಿಯಪ್ಪ ಭಟ್ಟ (27-7-1906ರಿಂದ 21-3-1980) ಅವರು ಗೋವಿಂದ ಭಟ್ಟ- ಕಾವೇರಿ ಅಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ಹವ್ಯಕ- ಇಂಗ್ಲಿಷ್ ನಿಘಂಟು, ತುಳು- ಇಂಗ್ಲಿಷ್ ನಿಘಂಟು, ರೆ.ಎಫ್. ಕಿಟೆಲ್ ಅವರ ಕನ್ನಡ- ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ ವಿಸ್ತಾರಗೊಳಿಸಿ, ರಚಿಸಿದ ನಿಘಂಟು ಅವರ ಮಹತ್ವದ ಕಾಣಿಕೆಗಳಲ್ಲಿ ಕೆಲವು.

No comments:

Post a Comment