Sunday, July 1, 2018

ಇಂದಿನ ಇತಿಹಾಸ History Today ಜುಲೈ 01

ಇಂದಿನ ಇತಿಹಾಸ History Today ಜುಲೈ 01

2018: ನವದೆಹಲಿ: ಸರಕುಗಳು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಏಕ ದರ ತೆರಿಗೆ ಜಾರಿಗೆ ತರುವ ಪ್ರಸ್ತಾಪವನ್ನು ಭಾನುವಾರ ಇಲ್ಲಿ ತಳ್ಳಿ ಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರು ’ಮರ್ಸಿಡಿಸ್ ಮತು ಹಾಲಿಗೆ (ಮಿಲ್ಕ್) ಒಂದೇ ದರದ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಏಕರೂಪದ ಶೇಕಡಾ ೧೨ ತೆರಿಗೆಯನ್ನು ಜಿಎಸ್ ಟಿ ಅಡಿಯಲಿ ವಿಧಿಸುವಂತೆ ಕಾಂಗ್ರೆಸ್ ಮುಂದಿಟ್ಟಿರುವ ಬೇಡಿಕೆಯ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲಿನ ತೆರಿಗೆ ವ್ಯವಸ್ಥೆಗೆ ಹೆಮ್ಮೊಳೆಯಾಗುವುದು ಎಂದು ಅವರು ನುಡಿದರು. ಸರಕುಗಳು ಮತ್ತು ಸೇವಾ ತೆರಿಗೆಯು (ಜಿಎಸ್ ಟಿ) ಆರಂಭಗೊಂಡ ಒಂದು ವರ್ಷದ ಒಳಗಾಗಿ ಪರೋಕ್ಷ ತೆರಿಗೆದಾತರ ಮೂಲವನ್ನು ಶೇಕಡಾ ೭೦ರಷ್ಟು ಹೆಚ್ಚಿಸಿದೆ, ಚೆಕ್ ಪೋಸ್ಟ್ ಗಳನ್ನು ನಿವಾರಿಸಿದೆ ಮತ್ತು ೧೭ ತೆರಿಗೆಗಳು ಮತು ೨೩ ಸೆಸ್‌ಗಳನ್ನು ಏಕ ತೆರಿಗೆ ವ್ಯಾಪ್ತಿಯೊಳಗೆ ತಂದಿದೆ ಎಂದು ಮೋದಿ ಹೇಳಿದರು. ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಯಂತಹ ಕೇಂದ್ರೀಯ ಸುಂಕಗಳನ್ನು ಮತ್ತು ವ್ಯಾಟ್ ನಂತಹ ರಾಜ್ಯ ತೆರಿಗೆಗಳನ್ನು ಹೊಸ ತೆರಿಗೆ ವ್ಯವಸ್ಥೆಯು ಕ್ರೋಡೀಕರಿಸಿ ಪರೋಕ್ಷ ತೆರಿಗೆಯನ್ನು ಸರಳಗೊಳಿಸಿದೆ ಮತ್ತು ಇನ್ ಸ್ಪೆಕ್ಟರ್ ರಾಜ್ಯವನ್ನು ನಿವಾರಿಸಿದೆ ಎಂದು ಪ್ರಧಾನಿ ನುಡಿದರು. ಜಿಎಸ್ ಟಿಯು ಮಾಪನಾಂಕ ನಿರ್ಣಯ ನೆಲೆ ಹಾಗೂ ರಾಜ್ಯ ಸರ್ಕಾರಗಳು, ವ್ಯಾಪಾರಿಗಳು ಮತ್ತು ಇತರ ಪಾಲುದಾರರ ಹಿಮ್ಮಾಹಿತಿ ಆಧಾರಿತ ವ್ಯವಸ್ಥೆಯನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.  ‘ಏಕಹಂತದ ತೆರಿಗೆ ಹೊಂದುವುದು ಅತ್ಯಂತ ಸರಳ ಆದರೆ ನಾವು ಆಹಾರ ವಸ್ತುಗಳ ಮೇಲೆ ಶೂನ್ಯ ದರದ ತೆರಿಗೆ ಹೊಂದಲು ಸಾಧ್ಯವಿಲ್ಲ ಎಂಬುದು ಅದರ ಅರ್ಥವಾಗುತ್ತದೆ. ನಾವು ಹಾಲು ಮತ್ತು ಮರ್ಸಿಡಿಸ್ ಗೆ ಒಂದೇ ದರದ ತೆರಿಗೆ ವಿಧಿಸಲು ಸಾಧ್ಯವೇ? ಆದ್ದರಿಂದ ನಮ್ಮ ಕಾಂಗ್ರೆಸ್ ಮಿತ್ರರು ತಾವು ಏಕದರದ ಜಿ ಎಸ್ ಟಿ ತೆರಿಗೆ ದರ ತರುವುದಾಗಿ ಹೇಳುವಾಗ ಪ್ರಸ್ತುತ ಶೂನ್ಯದಿಂದ ಶೇಕಡಾ ೫ರಷ್ಟು ಇರುವ ಆಹಾರ ಉತ್ಪನ್ನಗಳ ಮೇಲೆ ಶೇಕಡಾ ೧೮ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೇಳುತ್ತಿದ್ದಾರೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನುಡಿದರು.  ಪತ್ರಿಕೆಯ ವೆಬ್ ಸೈಟಿನಲ್ಲಿ ಪ್ರಕಟಿಸಲಾದ ೪೫ ನಿಮಿಷಗಳ ಸಂದರ್ಶನದಲ್ಲಿ ಮೋದಿ ಅವರು ’ಒಟ್ಟು ೬೬ ಲಕ್ಷ ಪರೋಕ್ಷ ತೆರಿಗೆ ಪಾವತಿದಾರರು ಸ್ವಾತಂತ್ರ್ಯಾನಂತದ ಅವಧಿಯಲ್ಲಿ ನೋಂದಣಿಯಾಗಿದ್ದರೆ, ೨೦೧೭ರ ಜುಲೈ ೧ರಂದು ಜಿಎಸ್ ಟಿ ಅನುಷ್ಠಾನ ಗೊಳಿಸಿದ ಬಳಿಕದ ಒಂದು ವರ್ಷದ ಅವಧಿಯಲ್ಲಿ ೪೮ ಲಕ್ಷ ಹೊಸ ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.  ಸುಮಾರು ೩೫೦ ಕೋಟಿ ಇನ್‌ವಾಯಿಸ್ ಗಳನ್ನು ಪರಿಶೀಲಿಸಲಾಗಿದ್ದು, ೧೧ ಕೋಟಿ ರಿಟರ್ನ್‌ಗಳು ಸಲ್ಲಿಕೆಯಾಗಿವೆ. ಜಿಎಸ್ ಟಿಯು ನಿಜವಾಗಿಯೂ ಸಂಕೀರ್ಣವಾಗಿದ್ದರೆ ಇಷ್ಟೊಂದು ಸಂಖ್ಯೆಯ ಇನ್ ವಾಯಿಸ್, ರಿಟರ್ನ್‌ಗಳ ಸಲ್ಲಿಕೆ ಆಗುತ್ತಿತ್ತೆ? ಎಂದು ಪ್ರಧಾನಿ ಪ್ರಶ್ನಿಸಿದರು. ರಾಷ್ಟ್ರಾದ್ಯಂತ ಚೆಕ್ ಪೋಸ್ಟ್ ಗಳನ್ನು ರದ್ದು ಪಡಿಸಲಾಗಿದೆ. ರಾಜ್ಯ ಗಡಿಗಳಲ್ಲಿ ವಾಹನಗಳ ಸರತಿಯ ಸಾಲು ನಿಂತು ಹೋಗಿದೆ. ಟ್ರಕ್ ಚಾಲಕರು ತಮ್ಮ ಅಮೂಲ್ಯ ಸಮಯವನ್ನು ಉಳಿಸುತ್ತಿರುವುದಷ್ಟೇ ಅಲ್ಲ, ಸಾಗಣೆ ರಂಗಕ್ಕೆ ಒತ್ತು ಲಭಿಸುವ ಮೂಲಕ ರಾಷ್ಟ್ರದ ಉತ್ಪಾದಕತೆ ಹೆಚ್ಚುತ್ತಿದೆ. ಜಿಎಸ್ ಟಿಯು ಸಂಕೀರ್ಣವಾಗಿದ್ದರೆ ಇದು ಸಾಧ್ಯವಿತ್ತೆ? ಎಂದು ಮೋದಿ ಕೇಳಿದರು.  ಜಿಎಸ್ ಟಿ ಅನುಷ್ಠಾನ ಮೇಲಿನ ಟೀಕೆಗಳ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಧಾನಿ, ’ಹೊಸ ತೆರಿಗೆ ವ್ಯವಸ್ಥೆಯು ವ್ಯಾಪಕ ಬದಲಾವಣೆಯಾಗಿದ್ದು, ವಿಶ್ವದ ಅತ್ಯಂತ ದೊಡ್ಡ ಆರ್ಥಿಕತೆಯೊಂದನ್ನು ಸಂಪೂರ್ಣವಾಗಿ ಮರುಹೊಂದಾಣಿಕೆ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು.  ಸುಧಾರಣೆಯು ೧೭ ತೆರಿಗೆಗಳು, ೨೩ ಸೆಸ್ ಗಳನ್ನು ಏಕ ತೆರಿಗೆಯಾಗಿ ವಿಲೀನಗೊಳಿಸಿದೆ. ಅಂತಿಮವಾಗಿ ಅದನ್ನು ಅಳವಡಿಸಿದಾಗ ನಮ್ಮ ಪ್ರಯತ್ನ ಇದ್ದುದು ಅದನ್ನು ಸರಳಗೊಳಿಸುವುದು ಮತ್ತು ವ್ಯವಸ್ಥೆಯ ಸೂಕ್ಷ್ಮತೆಯನ್ನು ಖಚಿತ ಪಡಿಸುವುದಕ್ಕೆ. ಇಷ್ಟೊಂದು ದೊಡ್ಡ ಪ್ರಮಾಣದ ಸುಧಾರಣೆ ಜಾರಿಗೆ ತರುವಾಗ ಆರಂಭಿಕ ಸಮಸ್ಯೆಗಳು ಕಂಡು ಬಂದವು, ಆದರೆ ಈ ಸಮಸ್ಯೆಗಳನ್ನು ಗುರುತಿಸಲಾಯಿತು ಮತ್ತು ಸಕಾಲದಲ್ಲಿ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಯಿತು ಎಂದು ಮೋದಿ ನುಡಿದರು.  ಜಿಎಸ್ ಟಿಯು ಭಾರತೀಯ ಸಹಕಾರ ಒಕ್ಕೂಟ ತತ್ವಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ನಾವು ರಾಜ್ಯಗಳನ್ನು ಒಟ್ಟುಗೂಡಿಸಿ ಸಹಮತದೊಂದಿಗೆ ಅಭಿವೃದ್ಧಿ ಪಡಿಸಿದ್ದೇವೆ, ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ವಿಫಲವಾಗಿದ್ದವು ಎಂದು ಅವರು ಹೇಳಿದರು.  ಮೊದಲು ಹಲವಾರು ತೆರಿಗೆಗಳು ನಿಗೂಢವಾಗಿದ್ದವು. ಜಿ ಎಸ್ ಟಿ ಅಡಿಯಲ್ಲಿ ನೀವು ಏನನ್ನು ಪಾವತಿ ಮಾಡುತ್ತೀರೋ ಅದನ್ನೇ ನೋಡುತ್ತೀರಿ ಎಂದು ಪ್ರಧಾನಿ ನುಡಿದರು. ಸುಮಾರು ೪೦೦ ಸಮೂಹದ ವಸ್ತುಗಳ ತೆರಿಗೆಗಳನ್ನು ಸರ್ಕಾರ ಇಳಿಸಿದೆ.  ಸುಮಾರು ೧೫೦ ಸಮೂಹಗಳ ವಸ್ತುಗಳಿಗೆ ಶೂನ್ಯ ದರದ ತೆರಿಗೆ ಇದೆ. ಈ ದರಗಳನ್ನು ಗಮನಿಸಿದರೆ ಅವುಗಳಲ್ಲಿ ಬಹುತೇಕ ವಸ್ತುಗಳು ಅನುದಿನದ ಬಳಕೆಯ ವಸ್ತುಗಳು ಎಂಬುದು ಸ್ಪಷ್ಟವಾಗುತ್ತದೆ. ಅವುಗಳ ದರಗಳು ನಿಜವಾಗಿಯೂ ಇಳಿದಿವೆ. ಅಕ್ಕಿ ಇರಲಿ, ಗೋಧಿ ಇರಲಿ, ಸಕ್ಕರೆ ಇರಲಿ, ಮಸಾಲೆಗಳಿರಲಿ ಬಹುತೇಕ ಪ್ರಕರಣಗಳಲ್ಲಿ ವಿಧಿಸಲಾಗಿರುವ ಒಟ್ಟು ತೆರಿಗೆಯನ್ನು ಇಳಿಸಲಾಗಿದೆ. ದೈನಂದಿನ ಬಳಕೆಯ ವಸ್ತುಗಳಿಗೆ ವಿನಾಯ್ತಿ ನೀಡಲಾಗಿದೆ ಅಥವಾ ಶೇಕಡಾ ೫ರ ಹಂತದ ತೆರಿಗೆ ವಿಧಿಸಲಾಗಿದೆ. ಶೇಕಡಾ ೯೫ರಷ್ಟು ವಸ್ತುಗಳಿಗೆ ಶೇಕಡಾ ೧೮ಕ್ಕಿಂತ ಕೆಳಗಿನ ತೆರಿಗೆ ಇದೆ ಎಂದು ಮೋದಿ ಹೇಳಿದರು.  ಜಿಎಸ್ ಟಿಯನ್ನು ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಇನ್ ಸ್ಪೆಕ್ಟರ್ ರಾಜ್ಯವನ್ನು ನಿವಾರಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ರಿಟರ್ನ್ಸ್ ನಿಂದ ರಿಫಂಡ್ (ಮರುಪಾವತಿ) ವರೆಗೂ ಎಲ್ಲವೂ ಅಂತರ್ಜಾಲದ (ಆನ್ ಲೈನ್) ಮೂಲಕವೇ ಆಗುತ್ತವೆ ಎಂದು ಪ್ರಧಾನಿ ನುಡಿದರು.

2018: ಡೆಹರಾಡೂನ್: ಬಸ್ಸೊಂದು ೭೦೦ ಅಡಿ ಆಳದ ಪ್ರಪಾತಕ್ಕೆ ಬಿದ್ದು ೪೭ಮಂದಿ ದಾರುಣವಾಗಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘೋರ ದುರಂತ ಉತ್ತರಾಖಂಡದ ಪೌರಿ ಘರ್‌ವಾಲ್ ಎಂಬಲ್ಲಿ ಬೆಳಗ್ಗೆ ಘಟಿಸಿತು. ಅಪಘಾತದ ತೀವ್ರತೆಗೆ ಪ್ರಪಾತಕ್ಕೆ ಬಿದ್ದ ಬಸ್ ಎರಡು ಭಾಗಗಳಾಗಿ ಪುಡಿ ಪುಡಿಯಾಗಿದೆ. ಬಸ್ಸಿನಲ್ಲಿದ್ದ  ಪ್ರಯಾಣಿಕರು ನಜ್ಜುಗುಜ್ಜಾಗಿದ್ದಾರೆ ಎಂದು ವರದಿಗಳು ಹೇಳಿದವು. ಸ್ಥಳಕ್ಕೆ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು, ಪೊಲೀಸರು ದೌಡಾಯಿಸಿದ್ದಾರೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶವಗಳನ್ನು ಮೇಲಕ್ಕೆ ಎತ್ತಲಾಗುತ್ತಿದೆ ಎಂದು ವರದಿಗಳು ತಿಳಿಸಿದವು.  ಅಪಘಾತಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಕಮೀಷನರ್ ದಿಲಿಪ್ ಜವಾಲ್ಕರ್ ಹೇಳಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.  ಸಾಮರ್ಥ್ಯಕ್ಕಿಂತಲು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದುದು ದುರಂತದ ತೀವ್ರತೆ ಹೆಚ್ಚಲು ಕಾರಣ ಎಂದು ಹೇಳಲಾಯಿತು. ಪೊಲೀಸ್ ಮತ್ತು ಎಸ್ ಡಿ ಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್‍ಯಾಚರಣೆ ನಡೆಸುತ್ತಿದ್ದಾರೆ ಎಂದು ಗಢವಾಲ್ ವಲಯದ ಡಿಐಜಿ ಸಂಜಯ್ ಗುನಿಯಾಲ್ ಹೇಳಿದರು.  ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಕೆಕೆಕ ಪೌಲ್ ಮತ್ತು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ತಮ್ಮ ಸಂತಾಪ ವ್ಯಕ್ತ ಪಡಿಸಿದ್ದು, ಮೃತರು ಮತ್ತು ಗಾಯಾಳುಗಳ ಕುಟುಂಬಗಳಿಗೆ ಸಕಲ ನೆರವಿನ ಭರವಸೆ ನೀಡಿದರು. ಮುಖ್ಯಮಂತ್ರಿ ರಾವತ್ ಅವರು ಮೃತರ ಸಮೀಪ ಬಂಧುಗಳಿಗೆ ೨ ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ೫೦,೦೦೦ ರೂಪಾಯಿಗಳ ಪರಿಹಾರ ಘೋಷಿಸಿದರು.

2018: ನಾಗಪುರ: ದಕ್ಷಿಣ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಹಿಂದಿನ  ರಾತ್ರಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ  ಮಾವೋವಾದಿ ಕಮಾಂಡರ್ ಒಬ್ಬ ಬಲಿಯಾದ. ಸುಕ್ಮಾ ಜಿಲ್ಲೆಯ ಫುಲ್ ಬಾಗ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗುಂಡಿನ ಘರ್ಷಣೆ ಸಂಭವಿಸಿತು.  ‘ಸಿಪಿಐ (ಮಾವೋವಾದಿ) ಕಾರ್ಯಾಚರಣೆ ತಂಡದ ಕಮಾಂಡರ್ ಈ  ಗುಂಡಿನ ಘರ್ಷಣೆಯಲ್ಲಿ ಹತನಾಗಿದ್ದಾನೆ. ಒಬ್ಬ ಮಾವೋವಾದಿ ಉಗ್ರಗಾಮಿ ಉಪ ಕಮಾಂಡರನನ್ನೂ ಘರ್ಷಣೆ ನಡೆದ ಸ್ಥಳದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ಅವರು ತಿಳಿಸಿದರು.  ಛತ್ತೀಸ್ ಗಢ ಪೊಲೀಸ್‌ನ ವಿಶೇಷ ಮಾವೋವಾದಿ ವಿರೋಧಿ ಘಟಕದ ಜಿಲ್ಲಾ ಮೀಸಲು ಗಾರ್ಡ್ ಈ ಕಾರ್‍ಯಾಚರಣೆಯನ್ನು ನಡೆಸಿತು.  ಕಳೆದ ರಾತ್ರಿ ಸಂಭವಿಸಿದ ಘರ್ಷಣೆಯಲ್ಲಿ ಹತನಾದ ಮಾವೋವಾದಿಯನ್ನು ಜಗ್ಗು ಎಂಬುದಾಗಿ ಗುರುತಿಸಲಾಯಿತು.  ಡಿಆರ್ ಜಿ ತಂಡವು ಘರ್ಷಣೆ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಇತರ ವಸ್ತುಗಳನ್ನೂ ವಶ ಪಡಿಸಿಕೊಂಡಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

2018: ಮುಂಬೈ: ಮಕ್ಕಳ ಅಪಹರಣ ತಂಡದ ಸದಸ್ಯರು ಎಂಬ ಅನುಮಾನದಲ್ಲಿ ಐವರನ್ನು ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಗ್ರಾಮಸ್ಥರು ಹಲ್ಲೆ ನಡೆಸಿ ಕೊಂದು ಹಾಕಿದ ಘಟನೆ ಘಟಿಸಿತು.  ಧುಲೆ ಜಿಲ್ಲೆಯ ಬುಡಕಟ್ಟು ರೈನ್‌ಪಡಾ ಹಟ್ಟಿಗೆ ರಾಜ್ಯ ಸಾರಿಗೆ ಬಸ್ಸಿನಲ್ಲಿ ಇತರರೊಂದಿಗೆ ಬಂದಿಳಿದ ಐವರು ಅಪರಿಚಿತರ ಮೇಲೆ ಈ ದಾಳಿ ನಡೆಯಿತು ಎಂದು ಪೊಲೀಸರು ತಿಳಿಸಿದರು. ಬಸ್ಸಿನಿಂದ ಇಳಿದ ಈ ಮಂದಿಯ ಪೈಕಿ ಒಬ್ಬ ವ್ಯಕ್ತಿ ಬಾಲಕಿಯೊಬ್ಬಳ ಜೊತೆಗೆ ಮಾತನಾಡಲು ಯತ್ನಿಸಿದ್ದನ್ನು  ಸಂತೆಗಾಗಿ ಬಂದಿದ್ದ ಗ್ರಾಮಸ್ಥರು ನೋಡಿದರು ಮತ್ತು ಈ ಅಪರಿಚಿತರು ಮಕ್ಕಳ ಕಳ್ಳರು ಎಂಬುದಾಗಿ ಅನುಮಾನಿಸಿ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದರು. ಗ್ರಾಮಸ್ಥರ ಆಕ್ರೋಶ ಮತ್ತು ಹಲ್ಲೆಗೆ ಐದು ಮಂದಿ ಕೂಡಾ ಬಲಿಯಾದರು ಎಂದು ಅವರು ಹೇಳಿದರು.  ಪ್ರದೇಶದಲ್ಲಿ ಮಕ್ಕಳನ್ನು ಅಪಹರಿಸುವ ಗುಂಪು ಸಕ್ರಿಯವಾಗಿದೆ ಎಂದು ಕಳೆದ ಕೆಲವು ದಿನಗಳಿಂದ ವ್ಯಾಪಕ ವದಂತಿಗಳು ಹರಡಿದ್ದವು ಎಂದು ಪೊಲೀಸರು ತಿಳಿಸಿದರು. 

2018: ನವದೆಹಲಿ:  ಏಳು ಮಂದಿ ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ೧೧ ಮಂದಿ ನೇಣು ಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಈದಿನ  ಬೆಳಗ್ಗೆ ಬೆಳಕಿಗೆ ಬಂದಿದ್ದು ರಾಜಧಾನಿಯ ಜನ ಬೆಚ್ಚಿ ಬಿದ್ದರು. ಮೃತರ ಪೈಕಿ ೧೦ ಮಂದಿಯ ಶವಗಳು ಕಣ್ಣುಗಳನ್ನು ಪಟ್ಟಿಯಿಂದ ಕಟ್ಟಿ ಬಾಯಿಗಳಿಗೆ ಬಟ್ಟೆ ತುರುಕಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಬಹುತೇಕ ಶವಗಳು ಗುರು ಗೋವಿಂದ ಸಿಂಗ್ ಆಸ್ಪತ್ರೆಯ ಎದುರಿನ ಮನೆಯಲ್ಲಿನ ಛಾವಣಿಗೆ ನೇಣುಹಾಕಲ್ಪಟ್ಟಿದ್ದವು ಎಂದು ಪೊಲೀಸ್ ಮೂಲಗಳು ಹೇಳಿದವು.  ಮೃತರ ಪೈಕಿಯಲ್ಲೇ ಒಬ್ಬ ವ್ಯಕ್ತಿ ಇತರ ೧೦ ಮಂದಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡರು. ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲ ಮೃತರ ರಾತ್ರಿಯ ಭೋಜನಕ್ಕೆ ನಿದ್ದೆ ಬರಿಸುವ ಮದ್ದು ಹಾಕಲಾಗಿದ್ದು, ಪರಿಣಾಮವಾಗಿ ಅವರೆಲ್ಲರೂ ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಯಿತು.  ಕುಟುಂಬದ ಸದಸ್ಯರನ್ನು ಕೊಲೆಗೈಯಲು ಉದ್ದೇಶಿಸಿದ್ದ ವ್ಯಕ್ತಿ ಬಳಿಕ ಎಲ್ಲ ಸದಸ್ಯರನ್ನೂ ಒಬ್ಬರ ಬಳಿಕ ಒಬ್ಬರಂತೆ ನೇಣಿಗೆ ಏರಿಸಿದ್ದಾನೆ ಎನ್ನಲಾಯಿತು.  ಈ ಮಧ್ಯೆ ಒಬ್ಬ ಮಹಿಳೆ ಎಚ್ಚರಗೊಂಡಳು. ಆಕೆ ನೆರೆಹೊರೆಯವರನ್ನು ಎಚ್ಚರಿಸದಂತೆ ಮತ್ತು ತಪ್ಪಿಸಿಕೊಳ್ಳದಂತೆ ತಡೆಯುವ ಸಲುವಾಗಿ ಆಕೆಯ ಗುಂಟಲು ಸೀಳಲಾಗಿತ್ತು ಎಂದು ವರದಿ ತಿಳಿಸಿತು. ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದವು.  ಮೊದಲಿಗೆ ಪೊಲೀಸರು ಇದು ಆತ್ಮಹತ್ಯೆಯ ಪ್ರಕರಣ ಇರಬಹುದು ಎಂಬುದಾಗಿ ಶಂಕಿಸಿದ್ದರು. ಆದರೆ ಬಳಿಕ ಕೊಲೆ ಇಲ್ಲವೇ ಆತ್ಮಹತ್ಯಾ ಒಪ್ಪಂದ ಮಾಡಿಕೊಂಡಿರಬಹುದೇ ಎಂಬ ಬಗೆಗೂ ಪೊಲೀಸರ ತನಿಖೆ ಸಾಗಿದೆ ಎಂದು ವರದಿಗಳು ಹೇಳಿದವು. ಚಿತ್ತೋರಘಡದ  ಈ ಕುಟುಂಬ ೨೨ ವರ್ಷಗಳ ಹಿಂದೆ ಚಿತ್ತೋರಗಢಕ್ಕೆ ಆಗಮಿಸಿತ್ತು, ಮೊದಲಿಗೆ ಇಲ್ಲಿ ಕಿರಾಣಿ ಅಂಗಡಿ ಆರಂಭಿಸಿದ್ದ ಈ ಕುಟುಂಬ ಬಳಿಕ ಪ್ಲೈವುಡ್ ವ್ಯವಹಾರ ನಡೆಸುತ್ತಾ ಜೀವನ ಸಾಗಿಸುತ್ತಿತ್ತು.  ಪೊಲೀಸರು ಈ ಕುಟುಂಬದ ರಾಜಸ್ಥಾನದಲ್ಲಿನ ಬಂಧುಗಳನ್ನು ಸಂಪರ್ಕಿಸಲು ಯತ್ನ ನಡೆಸಿದರು.  ಅಪರಾಧ ಸ್ಥಳದಲ್ಲಿ ಉಲ್ಟಾ ಸ್ಥಿತಿಯಲ್ಲಿದ್ದ ಸ್ಟೂಲುಗಳು ಪತ್ತೆಯಾಗಿವೆ ಎಂದೂ ಸ್ಥಳೀಯ ಪತ್ರಿಕಾ ವರದಿಗಳು ತಿಳಿಸಿದವು. ಮೃತರನ್ನು ನಾರಾಯಣ ಭಾಟಿಯಾ (೭೫), ಆಕೆಯ ಪುತ್ರಿ ಪ್ರತಿಭಾ (೬೦), ಪ್ರತಿಭಾ ಪುತ್ರಿ ಪ್ರಿಯಾಂಕ (೩೦), ನಾರಾಯಣಳ ಹಿರಿಯ ಪುತ್ರ ಭೂಪಿ ಭಾಟಿಯಾ (೪೬), ಆತನ ಪತ್ನಿ ಸವಿತಾ (೪೨), ಅವರ ಮಕ್ಕಳಾದ ನಿತು (೨೪), ಮೀನು (೨೨) ಮತ್ತು ಧೀರು (೧೨), ನಾರಾಯಣಳ ಕಿರಿಯ ಪುತ್ರ ಲಲಿತ್ ಭಾಟಿಯಾ (೪೨), ಆತನ ಪತ್ನಿ ಟೀನಾ (೩೮) ಎಂಬುದಾಗಿ ಗುರುತಿಸಲಾಯಿತು. ನಾರಾಯಣಳ ಶವ ಮಹಡಿಯಲ್ಲಿ ಪತ್ತೆಯಾಗಿದ್ದು ಆಕೆಯನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದೆ ಎಂದು ಶಂಕಿಸಲಾಯಿತು. ಕುಟುಂಬವು ಮೊದಲ ಮಹಡಿಯಲ್ಲಿ ವಾಸವಾಗಿದ್ದು, ನೆಲಮಹಡಿಯಲ್ಲಿ ಅವರ ಅಂಗಡಿ ಇತ್ತು. ಮೂಲಗಳ ಪ್ರಕಾರ ಮನೆಯನ್ನು ನವೀಕರಣ ಮಾಡುವ ಕಾರ್ಯ  ನಡೆದಿತ್ತು. ಇತ್ತೀಚೆಗೆ ಕುಟುಂಬವು ಅಂಗಡಿಯನ್ನು ಮಾರಾಟ ಮಾಡಿತ್ತು ಮತ್ತು ಮಾರಾಟದಿಂದ ಬಂದಿದ್ದ ನಗದು ಹಣವನ್ನು ಮನೆಯಲ್ಲೇ ಇಟ್ಟುಕೊಂಡಿತ್ತು ಎಂದು ಹೇಳಲಾಯಿತು. ಈ ಹಿನ್ನೆಲೆಯಲ್ಲಿ ಇದೊಂದು ಕೊಲೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದರು.  ಏನಿದ್ದರೂ ವಿವರ ಶವ ಪರೀಕ್ಷೆಯ ಬಳಿಕವಷ್ಟೇ ಬೆಳಕಿಗೆ ಬರಬಹುದು ಎಂದು ಮೂಲಗಳು ಹೇಳಿದವು. ಹಿಂದಿನ ರಾತ್ರಿ ೧೧.೪೫ರ ವೇಳೆಗೆ ಕುಟುಂಬವು ತಮ್ಮ ಅಂಗಡಿಯ ಬಾಗಿಲುಗಳನ್ನು ಮುಚ್ಚಿತ್ತು ಮತ್ತು ಬಳಿಕ ನಿದ್ರಿಸಿತ್ತು.  ಈದಿನ  ಬೆಳಗ್ಗೆ ನೆರೆಮನೆಯವರಲ್ಲಿ ಒಬ್ಬರು ಹಾಲು ಖರೀದಿಸಲು ಅಂಗಡಿಗೆ ಬಂದಾಗ ಅದು ಮುಚ್ಚಿದ್ದುದನ್ನು ಕಂಡರು. ಮನೆಗೆ ಬೀಗ ಹಾಕಿರದೇ ಇದ್ದುದರಿಂದ ಅವರು ಮಹಡಿಗೆ ಹೋದಾಗ ಶವಗಳನ್ನು ಕಂಡರು. ತತ್ ಕ್ಷಣವೇ ಅವರು ಇತರರನ್ನು ಕರೆದು ವಿಷಯ ತಿಳಿಸಿದರು ಮತ್ತು ನಮಗೆ ತಿಳಿಸಿದರು ಎಂದು ಪೊಲೀಸರು ಹೇಳಿದರು. ನಮಗೆ ಯಾವುದೇ ಆತ್ಮಹತ್ಯಾ ಟಿಪ್ಪಣಿ ಲಭಿಸಿಲ್ಲ. ನೆರೆಹೊರೆಯವರ ಹೇಳಿಕೆಗಳನ್ನು ನಾವು ದಾಖಲಿಸುತ್ತಿದ್ದೇವೆ. ಇಂತಹ ಕ್ರಮದ ಹಿಂದಿನ ಯಾವುದೇ ಕಾರಣಗಳೂ ನಮಗೆ ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದರು.  ಮಧ್ಯಾಹ್ನದ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಮತ್ತು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಪ್ರದೇಶಕ್ಕೆ ಭೇಟಿ ನೀಡಿದರು.  ಪ್ರಕರಣದ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು  ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಕೇಜ್ರಿವಾಲ್ ’ನಾನು ನೆರೆಹೊರೆಯವರ ಜೊತೆಗೆ ಮಾತನಾಡಿದ್ದೇನೆ. ಅತ್ಯಂತ ಪ್ರೀತಿಪಾತ್ರವಾದ ಮತ್ತು ಆತ್ಮೀಯ ಸಾಮಾಜಿಕ ಕುಟುಂಬವಾಗಿತ್ತು ಎಂದು ಅವರು ಹೇಳಿದರು. ಏನಿದ್ದರೂ ನಾವು ಪೊಲೀಸರು ತಮ್ಮ ತನಿಖೆ ಪೂರ್ಣಗೊಳಿಸುವವರೆಗೂ ಕಾಯಬೇಕು ಎಂದು ಹೇಳಿದರು.

2018: ಜಲಾಲಾಬಾದ್: ಪೂರ್ವ ಆಫ್ಘನ್ ನಗರ ಜಲಾಲಾಬಾದಿನ ಕೇಂದ್ರ ಒಂದರಲ್ಲಿ ಈದಿನ ಭಾರಿ ಸ್ಫೋಟ ಸಂಭವಿಸಿ,  ಕನಿಷ್ಠ ೧೨ ಮಂದಿ ಸಾವನ್ನಪ್ಪಿ, ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಸ್ಫೋಟದ ಬಳಿಕ ಭಾರಿ ಧೂಮ ಆಕಾಶವನ್ನು ವ್ಯಾಪಿಸಿತು. ಅಧ್ಯಕ್ಷ ಅಶ್ರಫ್ ಘನಿ ಅವರು ಜಲಾಲಾಬಾದಿನಲ್ಲಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ ಕೆಲವೇ ಗಂಟೆಗಳಲ್ಲಿ ಈ ಸ್ಫೋಟ ಸಂಭವಿಸಿದ್ದು, ನಗರದ ಮುಖಾಬೆರಾತ್ ಚೌಕದ ಸುತ್ತಮುತ್ತಣ ಕಟ್ಟಡಗಳು ಮತ್ತು ಅಂಗಡಿಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಸರ್ಕಾರಿ ವಕ್ತಾರ ಹೇಳಿದರು.  ಆತ್ಮಹತ್ಯಾ ಬಾಂಬರ್ ಒಬ್ಬ ಸಿಖ್ ಅಲ್ಪಸಂಖ್ಯಾತ ಸದಸ್ಯರನ್ನು ಒಯ್ಯುತ್ತಿದ್ದ ವಾಹನವನ್ನು ಗುರಿಯಾಗಿಟ್ಟುಕೊಂಡು ಈ ಸ್ಫೋಟ ನಡೆಸಿದ್ದಾನೆ ಎಂದು ನಂಗರ್‍ಹಾರ್ ಪೊಲೀಸ್ ಮುಖ್ಯಸ್ಥ ಗುಲಾಂ ಸನಾಯಿ ಸ್ಟಾನೆಕ್ಞೈ ಹೇಳಿದರು.  ಸಿಖ್ ಅಲ್ಪಸಂಖ್ಯಾತರು ಅಧ್ಯಕ್ಷರನ್ನು ಭೇಟಿ ಮಾಡುವ ಸಲುವಾಗಿ ಹೊರಟಿದ್ದರು ಎನ್ನಲಾಯಿತು.  ಸಾವನ್ನಪ್ಪಿದ ಬಹುತೇಕ ಮಂದಿ ಸಿಕ್ಖರು ಎಂದು ಅವರು ನುಡಿದರು. ಪ್ರಾಂತಿಯ ಗವರ್‍ನರ್ ಅತಾವುಲ್ಲಾ ಖೊಗ್ಯಾನಿ ಅವರ ಪ್ರಕಾರ ಸ್ಫೋಟದಲ್ಲಿ ಕನಿಷ್ಠ ೧೨ ಮಂದಿ ಮೃತರಾಗಿ ಇತರ ೨೦ ಮಂದಿ ಗಾಯಗೊಂಡರು.  ಘನಿ ಅವರ ನಗರ ಭೇಟಿ ಹಿನ್ನೆಲೆಯಲ್ಲಿ ಜನ ಸಂಚಾರಕ್ಕೆ ನಿರ್ಬಂಧ ಇಲ್ಲದೇ ಹೋಗಿದ್ದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು.  ಸ್ಫೋಟ ಸಂಭವಿಸಿದಾಗ ಘನಿ ಅವರು ಸ್ಥಳದಲ್ಲಿ ಇರಲಿಲ್ಲ.  ಸ್ಫೋಟದ ಹೊಣೆಯನ್ನು ತತ್ ಕ್ಷಣಕ್ಕೆ ಯಾರೂ ಹೊತ್ತುಕೊಂಡಿಲ್ಲ. ನಂಗರ್ ಹಾರ ಪ್ರಾಂತ್ಯದ ರಾಜದಾನಿಯಾಗಿರುವ ಜಲಾಲಾಬಾದಿನಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಇದು ಇತ್ತೀಚಿನದಾಗಿದ್ದು, ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿಗಳ ಪ್ರಾಬಲ್ಯವಿತ್ತು.

2017: ನವದೆಹಲಿಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಜೂನ್ 30ರ ಮಧ್ಯರಾತ್ರಿ (ಜೂನ್ ಮತ್ತು ಜುಲೈ ತಿಂಗಳ ನಡುವಣ ರಾತ್ರಿ) ಜಾರಿಗೆ ತರುವ ಮೂಲಕ ಭಾರತದಲ್ಲಿ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಯುಗಾರಂಭವಾಯಿತು. ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ಮುಖರ್ಜಿ, ಉಪ ರಾಷ್ಟ್ರಪತಿ ಅಮಿದ್ಅನ್ಸಾರಿ ಸೇರಿದಂತೆ ಗಣ್ಯರು, ಭಾರತೀಯರು ಸಾಕ್ಷಿಯಾದರು. ಸ್ವಾತಂತ್ರ್ಯಾನಂತರ ದೇಶದಲ್ಲಿ ಜಾರಿಗೆ ತಂದ ಅತೀ ದೊಡ್ಡ ತೆರಿಗೆ ಸುಧಾರಣೆ ಎಂಬ ಬಣ್ಣನೆಗೆ ಪಾತ್ರವಾಗಿರುವ ಜಿಎಸ್ಟಿ ವ್ಯವಸ್ಥೆಗೆ, ಸಂಸತ್ಭವನದ ಸೆಂಟ್ರಲ್ಹಾಲ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 30 ಶುಕ್ರವಾರದ ಮಧ್ಯರಾತ್ರಿ 12ಕ್ಕೆ ಸರಿಯಾಗಿ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಜಿಎಸ್ಟಿ ದೇಶದ ಆರ್ಥ ವ್ಯವಸ್ಥೆಯ ಒಂದು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. 15 ವರ್ಷಗಳ ಪ್ರಯಣದ ನಂತರ ಜಿಎಸ್ಟಿ ರೂಪ ಪಡೆದಿದೆ. ಜಟಿಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು. ಜಿಎಸ್ಟಿ ಜಾರಿ ಆಗಿಯೇ ಆಗುತ್ತದೆ ಎಂಬ ಭರವಸೆ ನನಗಿತ್ತು. ಅದು ಇಂದು ನನಸಾಗಿದೆ. ಜಿಎಸ್ಟಿಯಿಂದ ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಮಧ್ಯರಾತ್ರಿಯಿಂದ ಜಾರಿಗೊಳಿಸುತ್ತಿದ್ದು, ಭಾರತ ಹೊಸ ಕ್ರಾಂತಿಯತ್ತ ಮುನ್ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ಜೇಟ್ಲಿ ಅವರು ಪ್ರತಿಪಾದಿಸಿದರು. ಸಂಸತ್ಭವನದ ಸೆಂಟ್ರಲ್ಹಾಲ್ನಲ್ಲಿ ಮಧ್ಯರಾತ್ರಿ
ಜಿಎಸ್ಟಿ ಚಾಲನೆಗೊಳಿಸುವ ಮುನ್ನ ವಿಶೇಷ ಅಧಿವೇಶನದಲ್ಲಿ ಹಣಕಾಸು ಸಚಿವ ಅರುಣ್ಜೇಟ್ಲಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಧ್ಯರಾತ್ರಿ ಎಲ್ಲರೂ ಸೇರಿರುವುದು ದೇಶದ ಮುಂದಿನ ಮಾರ್ಗವನ್ನು ನಿಶ್ಚಿತಗೊಳಿಸಿದೆ ಎಂದರು. ಗಂಗಾ ನಗರದಿಂದ ಇಟಾ ನಗರದ ವರೆಗೆ ಒಂದೇ ತೆರಿಗೆ ವ್ಯವಸ್ಥೆ ಜಾರಿಯಾಗಲಿದೆ. ಟೀಮ್ಇಂಡಿಯಾ ಕತೃತ್ವ ಶಕ್ತಿಗೆ ಜಿಎಸ್ಟಿ ಸಾಕ್ಷಿಯಾಗಲಿದೆ ಎಂದರು. ದೇಶದ ನೂತನ ವ್ಯವಸ್ಥೆ ಜಾರಿಯಾಗುತ್ತಿದೆ. ಕೋಟ್ಯಂತರ ಭಾರತೀಯರು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಜಿಎಸ್ಟಿ ಘಟನೆ, ಕೇವಲ ಅರ್ಥಿಕ ವ್ಯವಸ್ಥೆಗೆ ಮಾತ್ರ ಸೀಮಿತ ಅಲ್ಲ. ಹಲವು ವರ್ಷಗಳಿಂದ ಹಲವು ಅನುಭವಿಗಳ ಮಾರ್ಗದರ್ಶನ ಹಾಗೂ ಭಾರತ ಲೋಕತಂತ್ರ ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಯ ಬಹು ದೊಡ್ಡ ಕ್ಷಿಪಣಿ ಇದಾಗಿದೆ. ಆಗಮಿಸಿರುವ ಎಲ್ಲರಿಗೂ ಹೃದಯ ಪೂರ್ವಕ ಸ್ವಾಗತ ಮತ್ತು ಆಭಾರಿಯಾಗಿದ್ದೇನೆ. ಕೆಲ ಸಮಯದ ನಂತರ ದೇಶ ಹೊಸ ದಿಕ್ಕಿನತ್ತ ನಡೆಯಲಿದೆ. ಇದು ಒಂದು ಕ್ಷದ ಸಾಧನೆಯಲ್ಲ ಎಂದರುಪಂಡಿತ್ಜವಾಹರಲಾಲ್ನೆಹರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಸರೋಜಿನಿ ನಾಯ್ಡು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು 1946 ಡಿಸೆಂಬರ್ಮಧ್ಯರಾತ್ರಿ ನಡೆಸಿದ ಸಭೆಗೆ ಸಂಸತ್ಸಾಕ್ಷಿಯಾಗಿತ್ತು. ಬಳಿಕ, 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಕ್ಷಣಕ್ಕೆ ಸದನ ಸಾಕ್ಷಿಯಾಯಿತು. 1949ರಲ್ಲಿ ಸಂವಿಧಾನ ಸ್ವೀಕರಿಸಿದ ಸಮಯಕ್ಕೆ ಸಾಕ್ಷಿಯಾಯಿತು. ಇಂದು ಜಿಎಸ್ಟಿ ಚಾಲನೆಗೆ ಸದನ ಸಾಕ್ಷಿಯಾಗಿದೆ. ಇದಕ್ಕಿಂತ ಮತ್ತೊಂದು ಸೂಕ್ತ ಸ್ಥಳ ಇಲ್ಲ ಎಂದು ಮೋದಿ ಬಣ್ಣಿಸಿದರು.
2017: ಶ್ರೀನಗರಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ
ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌ –ತೋಯಿಬಾ ಕಮಾಂಡರ್ ಬಶೀರ್ ಲಷ್ಕರಿ ಮತ್ತು ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಯಿತು. ಇದೇ ಕಾರ್ಯಾಚರಣೆ ವೇಳೆ ಇಬ್ಬರು ನಾಗರಿಕರೂ ಮೃತರಾದರು. ಲಷ್ಕರಿ ನೇತೃತ್ವದ ಉಗ್ರರ ತಂಡ ದಕ್ಷಿಣ ಕಾಶ್ಮೀರದ ಅಚಾಬಲ್ಪ್ರದೇಶದಲ್ಲಿ ಜೂನ್‌ 16ರಂದು ದಾಳಿ ನಡೆಸಿ, ಆರು ಪೊಲೀಸರನ್ನು ಹತ್ಯೆ ಮಾಡಿತ್ತು. ಅಂದೇ ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು ಎಂದು ಮೂಲಗಳು ತಿಳಿಸಿದವು. ಲಷ್ಕರಿ ಮತ್ತು ಇನ್ನೂ ಕೆಲವು ಉಗ್ರರು ಅನಂತನಾಗ್ ಬ್ರೆಂತಿಬತ್ಪೋರಾ ಬಳಿಯ ಹಳ್ಳಿಯ ಮನೆಯೊಂದರಲ್ಲಿ ಅವಿತಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಹೀಗಾಗಿ ಅಲ್ಲಿ ಶನಿವಾರ ಬೆಳಿಗ್ಗೆಯೇ ಶೋಧ ಕಾರ್ಯ ಆರಂಭಿಸಲಾಯಿತುಎಂದು ಪೊಲೀಸರು ಮಾಹಿತಿ ನೀಡಿದರು. ಆದರೆ, ಭದ್ರತಾ ಸಿಬ್ಬಂದಿಯನ್ನು ಕಂಡ ಕೂಡಲೇ ಉಗ್ರರು ಗುಂಡಿನ ದಾಳಿ ನಡೆಸಿದರು. ಜತೆಗೆ, 17 ನಾಗರಿಕರನ್ನು ಮಾನವ ಗುರಾಣಿಗಳಂತೆ ಬಳಸಿಕೊಂಡರು. ನಾಗರಿಕರನ್ನು ರಕ್ಷಿಸಿ, ನಂತರ ಪ್ರತಿದಾಳಿ ನಡೆಸಬೇಕಾಯಿತು. ಹೀಗಾಗಿ, ಕಾರ್ಯಾಚರಣೆ ವಿಳಂಬವಾದರೂ, ಉಗ್ರರನ್ನು ಹತ್ಯೆ ಮಾಡಲಾಯಿತುಎಂದು ಅವರು ತಿಳಿಸಿದರು. ಆದರೆ, ಗುಂಡಿನ ಚಕಮಕಿ ವೇಳೆ ಸಮೀಪದ ಮನೆಯೊಳಗೆ ಇದ್ದ ತಹಿರಾ (49) ಅವರಿಗೆ ಗುಂಡು ತಗುಲಿ ಅವರು ಮೃತರಾದರುಎಂದು ಅವರು ಹೇಳಿದರು. ಅಲ್ಲದೆ, ಇದೇ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯುವಕ ಮೃತನಾದ.

2017: ನವದೆಹಲಿ: ‘ದೇಶದ ಬಡವರ ಹಣವನ್ನು ಲೂಟಿ ಮಾಡಿರುವವರು ಹಣವನ್ನು
ಹಿಂದಿರುಗಿಸಬೇಕಾಗುತ್ತದೆಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದರು. ಭಾರತೀಯ ಚಾರ್ಟೆಡ್ಅಕೌಂಟಂಟ್ಗಳ ಸಂಸ್ಥೆ (ಐಸಿಎಐ) ನವದೆಹಲಿಯ ಇಂದಿರಾಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಲೂಟಿಕೋರರಿರುವ ದೇಶ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಲೂಟಿಕೋರರು ದೇಶವನ್ನು ಬೆಳೆಯವಲು ಬಿಡುವುದಿಲ್ಲಎಂದು ಹೇಳಿದರು. ಕಾನೂನು ಉಲ್ಲಂಘಿಸುವ ಕಂಪೆನಿಗಳಿಗೆ ನಾವು ಕಡಿವಾಣ ಹಾಕುತ್ತಿದ್ದೇವೆ. ಇಂಥ ಒಂದು ಲಕ್ಷಕ್ಕೂ ಹೆಚ್ಚು ಕಂಪೆನಿಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ನೋಟು ರದ್ದತಿಯ ಬಳಿಕ ಸುಮಾರು 3 ಲಕ್ಷ ಕಂಪೆನಿಗಳ ಮೇಲೆ ನಿಗಾ ಇಡಲಾಗಿದೆಎಂದು ಮೋದಿ ಹೇಳಿದರು. ದೇಶದ ಆರ್ಥಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಚಾರ್ಟೆಡ್ಅಕೌಂಟಂಟ್ಗಳ ಪಾತ್ರ ಪ್ರಮುಖವಾದುದು. ತಮ್ಮ ಸೇವೆ ಪಡೆಯುತ್ತಿರುವವರು ಕಪ್ಪು ಹಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೇ ಎಂಬುದನ್ನು ಚಾರ್ಟೆಡ್ಅಕೌಂಟಂಟ್ಗಳು ಪರೀಕ್ಷಿಸಬೇಕುಎಂದು ಮೋದಿ ತಿಳಿಸಿದರು. ದೇಶದ ಆರ್ಥಿಕತೆಗೆ ಜಿಎಸ್ಟಿ ಒಂದು ಹೊಸ ಆರಂಭ, ಹೊಸ ಮಾರ್ಗಎಂದು ಮೋದಿ ನುಡಿದರು.
2016: ಬೆಂಗಳೂರು: ಸ್ವದೇಶಿ ನಿರ್ಮಿತ ಯುದ್ಧ ವಿಮಾನತೇಜಸ್ಅಧಿಕೃತವಾಗಿ ಭಾರತೀಯ ವಾಯು ಸೇನೆಗೆ ಸೇರ್ಪಡೆಗೊಂಡಿತು. ಬೆಂಗಳೂರಿನ ಎಚ್ಎಎಲ್ ಏರ್ಬೇಸ್ನಲ್ಲಿ ಹಿರಿಯ ಅಧಿಕಾರಿಗಳು ಪೂಜೆ ಸಲ್ಲಿಸಿ ಬಳಿಕ ಬಹುನಿರೀಕ್ಷಿತ ಯುದ್ಧವಿಮಾನವನ್ನು ಸೇನೆಗೆ ಅಧಿಕೃತವಾಗಿ ಹಸ್ತಾಂತರಿಸಿದರು. 30 ವರ್ಷಗಳಿಂದ ನಾನಾ ರೀತಿಯ ಸಂಶೋಧನೆಗಳ ಮೂಲಕ ಸಿದ್ಧಪಡಿಸಲಾದ ಯುದ್ಧ ವಿಮಾನ ಇದಾಗಿದೆಹಿಂದೂಸ್ತಾನ್ ಏರೋನಾಟಿಕಲ್ಸ್ ಸಂಸ್ಥೆ ನಿರ್ಮಿತ ತೇಜಸ್ ಯುದ್ಧ ವಿಮಾನಗಳ ಸೇರ್ಪಡೆಯಿಂದ ಈಗ ಭಾರತೀಯ ಸೇನೆಯ ಬಲ ಹೆಚ್ಚಿತು.  ಪ್ರತಿ ಗಂಟೆಗೆ 13,00 ಕಿ.ಮೀ ವೇಗದಲ್ಲಿ ಹಾರಾಟನಡೆಸುವ ಸಾಮರ್ಥ್ಯ ತೇಜಸ್ ಯುದ್ಧ ವಿಮಾನಗಳದ್ದಾಗಿದೆ. ಮಿಸೈಲ್ ಸೇರಿದಂತೆ 500ಕೆಜಿ ಬಾಂಬ್ ಹೊತ್ತೊಯ್ಯಲಿದೆ. ದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ಇದಾಗಿದ್ದು, 23 ಮಿಲಿ ಲೀಟರ್ ಬ್ಯಾರೆಲ್ ಗನ್ಸ್ ಹಾಗೂ ರಾಕೆಟ್ ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಿಂದೆಯೇ ತೇಜಸ್ ಯುದ್ಧ ವಿಮಾನ ವಾಯು ಸೇನೆಗೆ ಸೇರ್ಪಡೆಗೊಳ್ಳಬೇಕಿತ್ತಾದರೂ, ಹಲವು ತಾಂತ್ರಿಕ ದೋಷ ಮತ್ತು ಕಾರಣಾಂತರಗಳಿಂದ ತೇಜಸ್ ವಾಯು ಸೇನೆ ಸೇರ್ಪಡೆಗೆ ಹಿಂದೇಟು ಹಾಕಿತ್ತು.
ಸ್ವದೇಶಿ ಯುದ್ಧ ವಿಮಾನ ನಿರ್ಮಿಸಬೇಕೆನ್ನುವ ಆಲೋಚನೆಗೆ ಮೂರ್ತರೂಪ ಸಿಕ್ಕಿದ್ದು 1983ರಲ್ಲಿ. 33 ವರ್ಷಗಳಲ್ಲಿ ಕಾರಣಾಂತರಗಳಿಂದ ವಿಮಾನ ನಿರ್ಮಾಣ ವಿಳಂಬಗೊಂಡಿತ್ತು. ಇದೀಗ ಸೇನೆಯಲ್ಲಿ ಬಳಕೆಯಲ್ಲಿರುವ ಮಿಗ್-25 ಬದಲಾಗಿ ತೇಜಸ್ ಸೇರ್ಪಡೆಗೆ ಹಸಿರು ನಿಶಾನೆ ಸಿಕ್ಕಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಚ್ಎಎಲ್ ನಾಲ್ಕು ತೇಜಸ್ ವಿಮಾನಗಳನ್ನು ಹಸ್ತಾಂತರಿಸಲಿದ್ದು, ಮುಂದಿನ ಸಾಲಿನಲ್ಲಿ 8 ವಿಮಾನಗಳನ್ನು ಪೂರೈಕೆಮಾಡಲಿದೆ. ಕಳೆದ ತಿಂಗಳು ಎಚ್ಎಎಲ್ನಲ್ಲಿ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಅವರು ತೇಜಸ್ ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿದ್ದರು. ಭಾರತಿಯ ವಾಯುಪಡೆಗೆ ಸೇರಿಸಿಕೊಳ್ಳಲು ತೇಜಸ್ಯೂಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.ತೇಜಸ್ ವಿಶೇಷತೆ: ತೇಜಸ್ ವಿಮಾನವು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಆಕಾಶಮಾರ್ಗದಿಂದಲೇ ಕ್ಷಿಪಣಿ ದಾಳಿ, ಅತ್ಯಾಧುನಿಕ ದಿಕ್ಸೂಚಿ ವ್ಯವಸ್ಥೆ, ಆಕಾಶಮಾರ್ಗದಲ್ಲೆ ಇಂಧನ ಭರ್ತಿ ವ್ಯವಸ್ಥೆ, ಬಾಂಬ್ ದಾಳಿಯ ಸಾಮರ್ಥ್ಯ ಹೊಂದಿರಲಿದೆ. 3 ಸಾವಿರ ಸಲ ಪರೀಕ್ಷಾರ್ಥ ಹಾರಾಟ ನಡೆಸಿದ್ದು, 2 ಸಾವಿರ ಪರೀಕ್ಷೆ ಯಶಸ್ವಿಯಾಗಿದೆ. ಈಗಿನ ಮಾದರಿಯಲ್ಲಿ 20 ತೇಜಸ್ ನಿರ್ವಿುಸಿ, ಪರಿಷ್ಕೃತ ಆವೃತ್ತಿಯಲ್ಲಿ 80 ತೇಜಸ್ ನಿರ್ವಿುಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2017ರಲ್ಲಿ ತೇಜಸ್ ವಿನೂತನ ಮಾದರಿಯನ್ನು ಎಚ್ಎಎಲ್ ತಯಾರಿಸಲಿದ್ದು, ಎಂಕೆ1 ಎಂದು ನಾಮಕರಣ ಮಾಡಲು ತೀರ್ಮಾನಿಸಿದೆ.
2016: ಢಾಕಾ: ನೈರುತ್ಯ ಬಾಂಗ್ಲಾದೇಶದ ಮದ್ರಿಪುರದಲ್ಲಿ ಹಿಂದು ಉಪನ್ಯಾಸಕನ್ನು ಹತ್ಯೆ ಮಾಡಲು ಸಂಚು ರೂಪಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಂಗ್ಲಾದೇಶದ ಪೊಲೀಸರು ಓರ್ವ ಇಸ್ಲಾಮಿಕ್ ಉಗ್ರನನ್ನು ಬಂಧಿಸಿದರು. ಖಾಲಿದ್ ಶಫೀವುಲ್ಲಾ ಎಂಬಾತ ಮದ್ರಿಪುರ್ ನಜೀಮುದ್ದೀನ್ ಸರ್ಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿರುವ ರೂಪಿನ್ ಚಕ್ರವರ್ತಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಶಂಕಿತಸಲಾಯಿತು. ಈತನನ್ನು ಜುಲೈ 30ರ  ರಾತ್ರಿ ಢಾಕಾದ ಡೆಮ್ರಾದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಕಮಿಷನರ್ ಮಸುದುರ್ ರೆಹಮಾನ್ ತಿಳಿಸಿದರು. ಜೂನ್ 15 ರಂದು ರೂಪಿನ್ ಚಕ್ರವರ್ತಿ ಅವರ ಮೇಲೆ ಮೂರು ಜನರ ತಂಡ ದಾಳಿ ನಡೆಸಿತ್ತು. ಮಾರಕಾಸ್ತ್ರಗಳಿಂದ ಅವರನ್ನು ಕೊಚ್ಚಿ ಹತ್ಯೆ ಮಾಡಲು ಯತ್ನಿಸಿತ್ತು. ಸಂದರ್ಭದಲ್ಲಿ ನೆರೆಹೊರೆಯ ಜನರು ರೂಪಿನ್ ನೆರವಿಗೆ ಧಾವಿಸಿ ಓರ್ವ ದಾಳಿಕೋರನನ್ನು ಸೆರೆ ಹಿಡಿದಿದ್ದರು. ಉಳಿದ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ಪೊಲೀಸರು ಈತನನ್ನು ನಗರದ ಹೊರವಲಯದಲ್ಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು.
2016: ಬಂಟ್ವಾಳ: ತೆಂಕು, ಬಡಗಿನ ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿದಯಕ್ಷವಾಚಸ್ಪತಿಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ (71) ನಿಧನರಾದರು. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪ ಅಜ್ಜಿಬೆಟ್ಟುವಿನ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಮತ್ತು ಅಪಾರ ಅಭಿಮಾನಿಗಳನ್ನು ಅವರು ಅಗಲಿದರು. ಯಕ್ಷಗಾನ ಕ್ಷೇತ್ರದಲ್ಲಿ ತೆಂಕು ಮತ್ತು ಬಡಗುತಿಟ್ಟು ಎರಡರಲ್ಲೂ ಸೈ ಎನಿಸಿಕೊಂಡು ತನ್ನ ಮಾತಿನ ಮೂಲಕವೇ ಮೋಡಿ ಮಾಡಿದ್ದ ಅವರು ಸೌಮ್ಯ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದರು. ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿ ಸುದೀರ್ಘ ನಾಲ್ಕು ದಶಕಗಳ ತಿರುಗಾಟ ನಡೆಸಿದ್ದ ವಿಶ್ವನಾಥ ಶೆಟ್ಟರು ಕಾಲದ ಪ್ರತಿಯೊಬ್ಬ ಮೇರು ಕಲಾವಿದರೊಂದಿಗೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಪ್ರಸಂಗ ರಚನೆಯಲ್ಲೂ ತೊಡಗಿಸಿಕೊಂಡು ಹೆಸರು ಮಾಡಿದ್ದರು. ಸಕ್ರಿಯ ತಿರುಗಾಟದಿಂದ ಹೊರಬಂದ ಮೇಲೆ ಹೆಚ್ಚಾಗಿ ತಾಳಮದ್ದಳೆ ಕೂಟಗಳಲ್ಲಿ ವಿಶ್ವನಾಥ ಶೆಟ್ಟರು ಕಾಣಸಿಗುತ್ತಿದ್ದರು.
2016: ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಮಿತಿ ಸದಸ್ಯ ಸ್ಥಾನಕ್ಕೆ ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ರಾಜೀನಾಮೆ ನೀಡಿದರು. ಅನಿಲ್ ಕುಂಬ್ಳೆ ಐಸಿಸಿ ಸದಸ್ಯ ಸಮಿತಿಯುಲ್ಲಿ ಅಧ್ಯಕ್ಷ ಆಗಿರುವುದಕ್ಕೆ ಶಾಸ್ತ್ರಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಯಿತು. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಖ್ಯಾತ ಲೆಗ್ ಸಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಮಣೆ ಹಾಕಿತ್ತು. ಬಳಿಕ ಬ್ಯಾಟಿಂಗ್ ಕೋಚ್ ಹುದ್ದೆಗೆ ಕೂಡ ಶಾಸ್ತ್ರಿ ಅರ್ಜಿ ಸಲ್ಲಿಸಿದ್ದರು. ಇಲ್ಲಿಯೂ ಕೂಡ ಶಾಸ್ತ್ರಿ ಅವರಿಗೆ ಹುದ್ದೆ ಸಿಗಲಿಲ್ಲ. ಹೀಗಾಗಿ ಬೇಸರಗೊಂಡಿರುವ ರವಿ ಶಾಸ್ತ್ರಿ ಐಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಯಿತು. ನನಗೆ ಕೋಚ್ ಹುದ್ದೆ ಕೈತಪ್ಪಲು ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿಯೇ ಕಾರಣ ಎಂದು ಶಾಸ್ತ್ರಿ ದೂರಿದ್ದರು.

2016: ಜಮ್ಮು: ಉಗ್ರರ ದಾಳಿಯ ಭೀತಿ ಹಿನ್ನೆಲೆಯಲ್ಲಿ 48 ದಿನಗಳ ಪ್ರಸಿದ್ಧ ಅಮರನಾಥ ಯಾತ್ರೆ ಬಿಗಿ ಭದ್ರತೆಯಲ್ಲಿ ಪ್ರಾರಂಭಗೊಂಡಿತು. ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ 1282 ಯಾತ್ರಿಗಳ ಮೊದಲ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದರು. ಈದಿನ ಬೆಳಗ್ಗೆ 900 ಪುರುಷರು, 225 ಮಹಿಳೆಯರು, 13 ಮಕ್ಕಳು ಮತ್ತು 144 ಸಾಧುಗಳನ್ನು ಹೊತ್ತ 33 ವಾಹನಗಳು ಸಿಆರ್ಪಿಎಫ್ ಬಿಗಿ ಭದ್ರತೆಯಲ್ಲಿ ಅಮರನಾಥ ಗುಹೆಯೆಡೆಗೆ ಪ್ರಯಾಣ ಆರಂಭಿಸಿದವು. ಜಮ್ಮು ನಗರದ ಬಳಿಯ ಭಗವತಿ ನಗರದಲ್ಲಿ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಸ್ಥಾಪಿಸಲಾಗಿದ್ದು, 2 ದಾರಿಗಳಲ್ಲಿ ಅಮರನಾಥ ಯಾತ್ರಾರ್ಥಿಗಳು ಸಾಗಲಿದ್ದಾರೆ. ಎರಡೂ ಹಾದಿಗಳಲ್ಲಿ ಸುಮಾರು 20 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಡ್ರೋಣ್ಗಳನ್ನು ಬಳಸಿಕೊಂಡು ಭದ್ರತೆ ನೀಡಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಯಾತ್ರೆಯನ್ನು ಆಯೋಜಿಸಲು ರಾಜ್ಯ ಸರ್ಕಾರ ಮತ್ತು ಭದ್ರತಾ ಪಡೆಗಳು ಸಿದ್ಧತೆ ನಡೆಸಿವೆ ಎಂದು ಮೂಲಗಳು ತಿಳಿಸಿದವು.

2016: ಬಾಲಸೋರ್ (ಒಡಿಶಾ): ಇಸ್ರೇಲ್ ಜೊತೆಗೆ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಭೂ ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ನೂತನ ಕ್ಷಿಪಣಿಯ ಪ್ರಯೋಗ ಪರೀಕ್ಷೆಯನ್ನು ಭಾರತವು ಎರಡು ಸುತ್ತಿನ ಪ್ರಯೋಗಗಳ ಬಳಿಕ ಈದಿನ ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಿತು. ಕ್ಷಿಪಣಿ ಪ್ರಯೋಗ ಪರೀಕ್ಷೆ ಯಶಸ್ವಿಯಾಗಿದೆ. ಇದರೊಂದಿಗೆ ಮೂರು ಸತತ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಜೊತೆಗೆ ಡಿಆರ್ಡಿಒ ಇತಿಹಾಸ ನಿರ್ಮಿಸಿದೆ ಎಂದು ಡಿಆರ್ಡಿಒ ಅಧಿಕಾರಿಯೊಬ್ಬರು ತಿಳಿಸಿದರು. ಹಿಂದಿನ ದಿನ ಇದೇ ಮಾದರಿಯ ಪರೀಕ್ಷಾ ಪ್ರಯೋಗವನ್ನು ಯಶಸ್ವಿಯಾಗಿ ಎರಡು ಬಾರಿ ಮಾಡಲಾಗಿತ್ತು ಎಂದು ಅವರು ನುಡಿದರು. ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾದ ಮಧ್ಯಂತರಗಾಮೀ ಕ್ಷಿಪಣಿಯನ್ನು ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಬೆಳಗ್ಗೆ 10.26ಕ್ಕೆ ಸಂಚಾರಿ ಉಡಾವಕದ ಮೂಲಕ ಉಡಾಯಿಸಲಾಯಿತು. ಉಡಾವಣಾ ವೇದಿಕೆ 3ರಲ್ಲಿ ಸಜ್ಜಾಗಿ ನಿಂತಿದ್ದ ಕ್ಷಿಪಣಿಯು ಬಂಗಾಳ ಕೊಲ್ಲಿ ಮೇಲೆ ಬಂದ ಪೈಲಟ್ ರಹಿತ ವಿಮಾನದ ಗುರಿಯತ್ತ ರಾಡಾರ್ ಸಂಕೇತ ಸಿಗುತ್ತಿದ್ದಂತೆಯೇ ಹಾರಿತು.

2016: ವಿಶಾಖಪಟ್ಟಣಂ: ಶಂಕಿತ ಉಗ್ರರು ಇಬ್ಬರು ಭಾರತೀಯರನ್ನು ನೈಜೀರಿಯಾದಲ್ಲಿ ಅಪಹರಿಸಲಾಯಿತು. ಉತ್ತರ ಮಧ್ಯ ನೈಜೀರಿಯಾದ ಬೆನ್ಯೂ ಪ್ರಾಂತ್ಯದ ಜಿಬೊಕೋ ಪಟ್ಟಣದಿಂದ ಅಪಹರಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದರು. ಮಂಗಿಪುಡಿ ಸಾಯ್ ಶ್ರೀನಿವಾಸ್ ಮತ್ತು ಅವರ ಸಹೋದ್ಯೋಗಿ ಅನೀಶ್ ಶರ್ಮ ಅಪಹರಣಕ್ಕೀಡಾದವರು. ಘಟನೆ ಜೂನ್್ 29ರಂದು ನಡೆದಿದೆ ಎಂದು ಹೇಳಲಾಯಿತು. ಈಗಾಗಲೇ ಶ್ರೀನಿವಾಸ್ ಸಂಬಂಧಿಕರು ಜಿಲ್ಲಾಧಿಕಾರಿ ಎನ್. ಯುವರಾಜ್ ಅವರನ್ನು ಹಿಂದಿನ ರಾತ್ರಿ ಸಂರ್ಪಸಿ ಅಪಹರಣಕ್ಕೀಡಾದವರನ್ನು ಬಿಡಿಸಿಕೊಂಡು ಬರಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡರು. ಜೂನ್ 29ರ ಸಂಜೆ 7.30 ಸುಮಾರಿಗೆ ಡ್ಯಾಂಗೋಟ್ ಸೆಮೆಂಟ್ ಕಾರ್ಖಾನೆಯಿಂದ ಮನೆಗೆ ಹಿಂದಿರುಗುವ ವೇಳೆ ಬಂದೂಕುಧಾರಿಗಳ ಗುಂಪು ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದಾರೆನ್ನುವ ಮಾಹಿತಿ ಇದೆ ಎಂದು ಕುಟುಂಬ ಸದಸ್ಯರು ಹೇಳಿದರು. ಶ್ರೀನಿವಾಸ್ ಅವರು ಸಿವಿಲ್ ಇಂಜಿನಿಯರ್ ಆಗಿದ್ದು, ಡ್ಯಾಂಗೋಟ್ ಸೆಮೆಂಟ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ರಾಯ್ಪುರದ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಶ್ರೀನಿವಾಸ್ ಪತ್ನಿ ಎಂ. ಲಲಿತಾ ಹೇಳಿದ್ದಾರೆ.

2016: ಡೆಹರಾಡೂನ್: ನಿರಂತರವಾಗಿ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಉತ್ತರಾಖಂಡ ಅಕ್ಷರಶಃ ತತ್ತರಿಸಿತು. 25ಕ್ಕೂ ಹೆಚ್ಚು ಮಂದಿ ಸಾವಿನ ಭೀತಿ ಎದುರಿಸಿದರು. ಸಮುದ್ರದ ನೀರಿನ ಮಟ್ಟ ಅಧಿಕವಾದ ಪರಿಣಾಮ ಚಮೋಲಿ ಜಿಲ್ಲೆಯೊಂದರಲ್ಲೇ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿತು. ಮಂದಾಕಿನಿ ನದಿಯ ದಡದ ಸಮೀಪವಿರುವ ಹಲವು ಮನೆಗಳು ಈಗಾಗಲೇ ಜಲಾವೃತಗೊಂಡವು. ಗೋಪೇಶ್ವರದಲ್ಲಿರುವ ಹಲವು ಮನೆಗಳು ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.  ರಾಜ್ಯದಲ್ಲಿರುವ ಎಲ್ಲಾ ನದಿಗಳ ನೀರಿನ ಪ್ರಮಾಣ ಈಗಾಗಲೇ ಅಪಾಯದ ಮಟ್ಟ ತಲುಪಿತು. 24 ಗಂಟೆಯಲ್ಲಿ 55ಮೀ ಮಿ ದಾಖಲೆ ಮಳೆಯಾಯಿತು. ರಾಜ್ಯದ ಹಲವೆಡೆ ಭೂ ಕುಸಿತ ಸಂಭವಿಸಿ, ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು.

2008: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ರಿಂದ 4 ಲಕ್ಷ ಜನರಿಗೆ ಚಿಕುನ್ ಗುನ್ಯ ಬಾಧಿಸಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರದ್ಲಾಜೆ ತಿಳಿಸಿದರು. ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲಿ ್ಲಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷಿಯಲ್ಲಿ ಮಾತನಾಡಿದ ಅವರು, `ಅಧಿಕಾರಿಗಳ ಬಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಚಿಕುನ್ ಗುನ್ಯ ಪೀಡಿತರ ಅಂಕಿಸಂಖ್ಯೆಗಳು ಮಾತ್ರವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವಿವರ ಇಲ್ಲ. ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳಿಗೆ ಭೇಟಿ ನೀಡಿದ ಜ್ವರ ಪೀಡಿತರ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದವರಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ' ಎಂದು ಹೇಳಿದರು. ಚಿಕುನ್ ಗುನ್ಯ ಮಾತ್ರವಲ್ಲದೆ ಇಲಿ ಜ್ಚರ, ಡೆಂಗ್ಯೂ ಜ್ವರವೂ ಕಾಣಿಸಿಕೊಂಡಿದೆ. ಪಕ್ಕದ ಉಡುಪಿ, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳಿಗೂ ಚಿಕುನ್ ಗುನ್ಯ ಹರಡಿದ್ದು, ರೋಗ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

2008: ರಾಜ್ಯದ ವೈದ್ಯರಾದ ಕೆ.ಎಸ್.ಗೋಪಿನಾಥ್ ಮತ್ತು ಸಿ.ಡಿ.ಐರಿನ್ ಪ್ರತಿಷ್ಠಿತ ಡಾ. ಬಿ.ಸಿ.ರಾಯ್ ಪ್ರಶಸ್ತಿಗೆ ಪಾತ್ರರಾದರು. ನವದೆಹಲಿಯಲ್ಲಿ ಇಬ್ಬರೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಪದವೀಧರ ಡಾ. ಗೋಪಿನಾಥ್, ಮುಂಬೈನ ಜಿ.ಎಸ್.ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಪಾಲಿಕ್ಲಿನಿಕ್ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿರುವ ಡಾ. ಐರಿನ್ ಕೇರಳದ ತ್ರಿಶ್ಯೂರಿನವರು. ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಹಾಗೂ ದೆಹಲಿ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ `ರೋಗಶಾಸ್ತ್ರ'ದಲ್ಲಿ ಸ್ನಾತಕೋತ್ತರ ಪದವೀಧರರು.

2007: ದಕ್ಷಿಣ ಆಫ್ರಿಕದ ಬೆಲ್ಫಾಸ್ಟ್ ಸ್ಟಾರ್ಮಂಟ್ ಸಿವಿಲ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡವು ಜಾಕ್ ಕಾಲಿಸ್ ನೇತೃತ್ವದ ದಕ್ಷಿಣ ಆಫ್ರಿಕ ತಂಡದ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿತು.

2007: ಕರ್ನಾಟಕದ ಆಗುಂಬೆ ಸಮೀಪದ ಹೊಸಗದ್ದೆ ಬಳಿಯ ಗುಬ್ಬಿಗದಲ್ಲಿ ಸಶಸ್ತ್ರರಾಗಿ ಬಂದ ಒಂಬತ್ತು ಮಂದಿ ನಕ್ಸಲೀಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗೆ ಬೆಂಕಿ ಹಚ್ಚಿ, ಸರ್ಕಾರದ ಕ್ರಮಗಳಿಗೆ ಪ್ರತೀಕಾರದ ಎಚ್ಚರಿಕೆ ಹಾಕಿ ಪರಾರಿಯಾದರು. ಬೆಳಿಗ್ಗೆ ಆಗುಂಬೆಯಿಂದ 6.45ಕ್ಕೆ ಹೊರಟ ಈ ಬಸ್ ಹೊಸಗದ್ದೆ ಮಾರ್ಗದ ಗುಬ್ಬಿಗದ ಬಳಿ 7 ಗಂಟೆಗೆ ಬಂದಾಗ ರಸ್ತೆಯಲ್ಲಿ ನಕ್ಸಲೀಯರ ಗುಂಪಿನಲ್ಲಿದ್ದ ಯುವತಿ ಬಸ್ಸನ್ನು ಪ್ರಯಾಣಿಕರ ಸೋಗಿನಲ್ಲಿ ನಿಲ್ಲಿಸಿದಳು. ನಂತರ ಒಂಬತ್ತು ಜನರಿದ್ದ ಬಂದೂಕುಧಾರಿ ಯುವಕರ ತಂಡ ಬಸ್ಸನ್ನು ಸುತ್ತುವರಿದು ಚಾಲಕ ಮತ್ತು ನಿರ್ವಾಹಕರನ್ನು ಬಸ್ಸಿನಿಂದ ಕೆಳಗಿಳಿಸಿ, ಈ ಕೃತ್ಯ ನಡೆಸಿತು.

2007: ಹಿಮಾಚಲ ಪ್ರದೇಶದ ಧರ್ಮಶಾಲಾದ 103 ವರ್ಷದ ಪ್ಯಾರಾಸಿಂಗ್ ಮತ್ತು 101 ವರ್ಷದ ಹಂಸಾದೇವಿ ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಯಶಸ್ವಿ ಜೋಡಿ. 84 ವರ್ಷಕಾಲ ಸುದೀರ್ಘ ದಾಂಪತ್ಯ ನಡೆಸಿದ ಈ ಜೋಡಿಯ ಹೆಸರನ್ನು 'ಗಿನ್ನೆಸ್ ದಾಖಲೆ' ಪುಸ್ತಕದಲ್ಲಿ ದಾಖಲಿಸುವ ಸಲುವಾಗಿ ಇವರ ದಾಂಪತ್ಯ ಮಾಹಿತಿ, ಸಾಕ್ಷ್ಯಾಧಾರಗಳನ್ನು ಜೂನ್ ತಿಂಗಳಲ್ಲಿ ಗಿನ್ನೆಸ್ ದಾಖಲೆ ಕಚೇರಿಗೆ ಕಳುಹಿಸಿರುವುದಾಗಿ ಅವರ ಅವರ ಮಗ ಬಿಷಂಭರ್ ರಾಣಾ ಇಲ್ಲಿ ಈದಿನ ಬಹಿರಂಗಪಡಿಸಿದರು.

2007: ಭುವನೇಶ್ವರದ ರೂರ್ಕೆಲಾ ಪಟ್ಟಣದ ಸರೋಜ್ ಕುಮಾರ್ ರೌತ್ ಅವರು ತಮ್ಮ ಮೂರು ತಿಂಗಳ ಮಗು ಆಯುಷ್ ರಂಜನ್ ರೌತ್ ಆದಾಯ ತೆರಿಗೆ ಪಾನ್ ಕಾರ್ಡ್ ಹೊಂದಿರುವುದನ್ನು ಬಹಿರಂಗಪಡಿಸಿದರು. ರಂಜನ್, ಮುಂದಿನ ವರ್ಷದಿಂದ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ರೂಪದರ್ಶಿಯಾಗಿ ಆಯ್ಕೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಹಣ ಗಳಿಸಿದ್ದಾನೆ. ಹಾಗಾಗಿ ಮುಂದಿನ ವರ್ಷದಿಂದ ಆತನ ಹೆಸರಲ್ಲಿ ತೆರಿಗೆ ಕಟ್ಟಬೇಕಿದ್ದು ಅದಕ್ಕಾಗಿ ಈ ವರ್ಷವೇ ಅವರು ರಂಜನ್ ಹೆಸರಲ್ಲಿ ಪಾನ್ಕಾರ್ಡ್ ಮಾಡಿಸಿದರು. ರಂಜನ್ ಹುಟ್ಟಿದ್ದು 2007ರ ಮಾರ್ಚ್ 26. ಹೀಗಾಗಿ ರಂಜನ್ ಭಾರತದ ಅತ್ಯಂತ ಕಿರಿಯ ಪಾನ್ಕಾರ್ಡ್ ಹೋಲ್ಡರ್ ಎಂಬ ಹೆಗ್ಗಳಿಕೆಗೆ ಪಾತ್ರನಾದ.

2007: ಆಫ್ಘಾನಿಸ್ಥಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಅಮೆರಿಕ ನೇತೃತ್ವದ ಸೇನಾಪಡೆ ತಾಲಿಬಾನ್ ಉಗ್ರರ ಆಶ್ರಯ ತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 62 ಉಗ್ರರು ಹಾಗೂ 45 ನಾಗರಿಕರು ಸಾವಿಗೀಡಾದರು.

2007: ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ಸೇನೆಯ ಮಹಿಳಾ ಅಧಿಕಾರಿ ಕ್ಯಾಪ್ಟನ್ ಮೇಘಾ ರಾಜ್ದನ್ ಅವರು ಜಮ್ಮುವಿನ ಕುಂಜವಾನಿ ಸೇನಾ ಶಿಬಿರದಲ್ಲಿ ತಾವಿದ್ದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

2006: ಚೀನ ಮತ್ತು ಟಿಬೆಟಿಗೆ ಸಂಪರ್ಕ ಕಲ್ಪಿಸುವ ವಿಶ್ವದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿನ ಕ್ವಿಂಗೈ- ಟಿಬೆಟ್ ರೈಲು ಸಂಚಾರ ಆರಂಭಗೊಂಡಿತು. ಈ ಕ್ವಿಂಗೈ- ಟಿಬೆಟ್ ರೈಲು ಕ್ವಿಂಗೈ ಪ್ರಾಂತ್ಯದ ಜಿನಿಂಗ್ನಿಂದ ಲಾಸಾವರೆಗೆ ಹಾದು ಹೋಗುತ್ತದೆ. 1984ರಲ್ಲಿ ಜೀನಿಂಗ್ನಿಂದ ಗೊಲ್ಮಂಡ್ ವರೆಗಿನ 814 ಕಿ.ಮೀ. ದೂರದ ಯೋಜನೆ ಆರಂಭವಾಯಿತು. 2001ರ ಜೂನ್ 29ರಂದು ಗೊಲ್ಮಂಡ್- ಲಾಸಾ ರೈಲ್ವೆ ನಿರ್ಮಾಣ ಆರಂಭವಾಯಿತು. ಗೊಲ್ಮಂಡ್ ಮತ್ತು ಲಾಸಾ ನಡುವಣ 1142 ಕಿ.ಮೀ. ಕುನ್ಲುನ್ ಮತ್ತು ಟಾಂಗುಲಾ ಪರ್ವತಗಳನ್ನು ಹಾದು ಹೋಗುತ್ತದೆ. ಇದರಲ್ಲಿ 960 ಕಿ.ಮೀ. 4000 ಮೀಟರ್ ಎತ್ತರದಲ್ಲಿ ಹಾದು ಹೋಗುತ್ತದೆ. ಅತಿ ಎತ್ತರದ ಪ್ರದೇಶ 5072 ಮೀಟರ್ ಆಗಿದ್ದು, ಇದು ಪೆರುವಿನಲ್ಲಿರುವ ಅಂಡೆಸ್ ರೈಲ್ವೆಗಿಂತ 200 ಮೀಟರ್ ಎತ್ತರದಲ್ಲಿದೆ.

2006: ಗುಜರಾತಿನ ಅಕ್ಷರಧಾಮದ ಸ್ವಾಮಿನಾರಾಯಣ ದೇವಾಲಯದ ಮೇಲೆ 2002ರ ಸೆಪ್ಟೆಂಬರ್ 24ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಅಹಮದಾಬಾದಿನ ಪೋಟಾ ನ್ಯಾಯಾಲಯ ಮರಣದಂಡನೆ ವಿಧಿಸಿತು. ಈ ದಾಳಿಯಲ್ಲಿ ಇಬ್ಬರು ಎನ್ಎಸ್ಜಿ ಕಮಾಂಡೋಗಳು, ಇಬ್ಬರು ರಾಜ್ಯ ಕಮಾಂಡೋಗಳು ಹಾಗೂ 29 ಮಂದಿ ಸ್ವಾಮಿ ನಾರಾಯಣ ಭಕ್ತರು ಮೃತರಾಗಿ ಇತರ 81 ಜನ ಗಾಯಗೊಂಡಿದ್ದರು.

2006: ಮಹಾರಾಷ್ಟ್ರದ ಬರಪೀಡಿತ ವಿದರ್ಭ ರೈತರನ್ನು ಆತ್ಮಹತ್ಯೆಯ ವಿಷ ವರ್ತುಲದಿಂದ ಪಾರು ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಒಟ್ಟು 3,750 ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯನ್ನು ನಾಗಪುರದಲ್ಲಿ ಪ್ರಕಟಿಸಿದರು.

1964: ಡಾ. ಸಂಗಮನಾಥ ಲೋಕಾಪುರ ಜನನ.

1962: ಮೊಗಳ್ಳಿ ಗಣೇಶ್ ಜನನ.

1961: ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಹರಿಯಾಣದಲ್ಲಿ ಈದಿನ ಜನಿಸಿದರು. ಸಂಶೋಧನಾ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ಕಲ್ಪನಾ 2003ರ ಫೆಬ್ರುವರಿ 1ರಂದು ಕೊಲಂಬಿಯಾ ಗಗನ ನೌಕೆ ಮೂಲಕ ಬಾಹ್ಯಾಕಾಶದಿಂದ ವಾಪಸ್ ಬರುತ್ತಿರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಅಸು ನೀಗಿದರು.

1944: ಸಾಹಿತಿ ವಿಷ್ಣುನಾಯ್ಕ ಅವರು ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ ಜನಿಸಿದರು.

1936: ಕುಂಬಾಸ ಜನನ.

1934: ಎಚ್. ಆರ್. ದಾಸೇಗೌಡ ಜನನ.

1925: ಜಯತೀರ್ಥ ರಾಜಪುರೋಹಿತ ಜನನ.

1925: ಎಚ್. ಕೆ. ರಾಮಚಂದ್ರ ಮೂರ್ತಿ ಜನನ.

1924: ಹಿ.ಮ.ನಾಗಯ್ಯ ಜನನ.

No comments:

Post a Comment