ನಾನು ಮೆಚ್ಚಿದ ವಾಟ್ಸಪ್

Wednesday, May 20, 2020

ಇಂದಿನ ಇತಿಹಾಸ History Today ಮೇ 20

2020: ನವದೆಹಲಿ: ಎರಡು ದಶಕಗಳ ಬಳಿಕ ಗಂಟೆಗೆ ೧೦೦ ಕಿಲೋ ಮೀಟರುಗಳಿಗಿಂತಲೂ ಹೆಚ್ಚಿನ ವೇಗದೊಂದಿಗೆ ಅಂಫನ್ ಚಂಡಮಾರುತವು ರೌದ್ರಾವತಾರದೊಂದಿಗೆ  2020 ಮೇ 20ರ  ಬುಧವಾರ  ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿದ್ದು ಭಾರೀ ಗಾಳಿ, ಮಳೆಯೊಂದಿಗೆ ಅನಾಹುತಗಳನ್ನು ಸೃಷ್ಟಿಸಿ, ಕನಿಷ್ಠ ಮೂವರನ್ನು ಬಲಿ ಪಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿತು. ಬೆಳಗ್ಗೆ .೩೦ರ ಸುಮಾರಿಗೆ ಒಡಿಶಾದ ಹಲವಾರು ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ ಬಳಿಕ ಮಧ್ಯಾಹ್ನದ ವೇಳೆಗೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ವ್ಯಾಪಿಸಿತು. ಭಾರೀ ಗಾಳಿ ಮತ್ತು ಮಳೆಯಿಂದಾಗಿ ತೀವ್ರ ಹಾನಿ ಸಂಭವಿಸಿದ್ದು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ .೫೮ ಲಕ್ಷ ಮಂದಿಯನ್ನು ತೆರವುಗೊಳಿಸಿ ಬೇರೆ ಕಡೆಗಳಿಗೆ ಸ್ಥಳಾಂತರಿಸಲಾಯಿತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ ಎಫ್) ಮಹಾ ನಿರ್ದೇಶಕ ಎಸ್ ಎನ್ ಪ್ರಧಾನ್ ಹೇಳಿದರು. ಬಾಂಗ್ಲಾದೇಶದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಯನ್ನು ಹಾದುಹೋಗುವಾಗ ಚಂಡ ಮಾರುತದ ವೇಗ ಗಂಟೆಗೆ ೧೮೫ ಕಿಮೀಗಳಷ್ಟು ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬಾಂಗ್ಲಾದೇಶದಲ್ಲಿ ಒಂದು ಸಾವು ಸಂಭವಿಸಿದೆ ಎಂದು ವರದಿಗಳು ಹೇಳಿವೆ. ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವಣ ಪ್ರದೇಶದಲ್ಲಿ ಮಧ್ಯಾಹ್ನ .೩೦ರ ವೇಳೆಗೆ ಭಾರೀ ವೇಗದೊಂದಿಗೆ ಅಪ್ಪಳಿಸಿತು ಎಂದು ಹವಾಮಾನ ಇಲಾಖೆ ತಿಳಿಸಿತು. (ವಿವರಗಳಿಗೆ   ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಓಲಾ ಕ್ಯಾಬ್ ಸಂಗ್ರಾಹಕ ಸಂಸ್ಥೆಯ ಆದಾಯ ಶೇಕಡ ೯೫ರಷ್ಟು ಕುಸಿದ ಹಿನ್ನೆಲೆಯಲ್ಲಿ ಸಂಸ್ಥೆಯು ತನ್ನ ,೪೦೦ ಮಂದಿ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ಸಿಇಒ ಭವೀಶ್ ಅಗರವಾಲ್  2020 ಮೇ 20ರ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದರು.  ನೌಕರರಿಗೆ ಕಳುಹಿಸಿರುವ ಮಿಂಚಂಚೆಯೊಂದರಲ್ಲಿ (-ಮೇಲ್) ವ್ಯವಹಾರದ ಭವಿಷ್ಯ  ಅಸ್ಪಷ್ಟ ಮತ್ತು ಅಸ್ಥಿರವಾಗಿದೆ. ಬಿಕ್ಕಟ್ಟಿನ ಪರಿಣಾಮ ನಮಗೆ ಸುದೀರ್ಘವಾದದ್ದಾಗಿರಲಿದೆ ಎಂದು ಅಗರವಾಲ್ ಹೇಳಿದರು. ವೈರಸ್ ಬಿಕ್ಕಟ್ಟಿನ ಹೊಡೆತ ನಿರ್ದಿಷ್ಟವಾಗಿ ನಮ್ಮ ಉದ್ಯಮಕ್ಕೆ ಅತ್ಯಂತ ಬಲವಾದುದಾಗಿದೆ. ನಮ್ಮ ಆದಾಯದ ಶೇಕಡಾ ೯೫ ಪಾಲು ಕಳೆದ ತಿಂಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಬಿಕ್ಕಟ್ಟು ಭಾರತದಾದ್ಯಂತ ಮಾತ್ರವೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಲಕ್ಷಾಂತರ ಮಂದಿ ಚಾಲಕರು ಮತ್ತು ಅವರ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವರು ನುಡಿದರು. ಕಂಪೆನಿಯು ತನ್ನ ಸಿಬ್ಬಂದಿ ಸಂಖ್ಯೆಯನ್ನು ಕುಗ್ಗಿಸಲು ನಿರ್ಧರಿಸಿದೆ ಮತ್ತು ,೪೦೦ ಮಂದಿ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡುತ್ತಿದೆ ಎಂದು ಅಗರವಾಲ್ ಹೇಳಿದರು. (ವಿವರಗಳಿಗೆ   ಇಲ್ಲಿ ಕ್ಲಿಕ್   ಮಾಡಿರಿ)


2020: ನವದೆಹಲಿ: ಕಲ್ಲಿದ್ದಲು ನಿಕ್ಷೇಪಗಳ ವಾಣಿಜ್ಯ ಗಣಿಗಾರಿಕೆಯನ್ನು ಭಾರತ ಶೀಘ್ರದಲ್ಲೇ ಆರಂಭಿಸಲಿದೆ. ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಏಕಸ್ವಾಮ್ಯಕ್ಕೆ ಕೊನೆ ಹಾಡುವ ವಿಧಿ ವಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020 ಮೇ 20ರ ಬುಧವಾರ ತನ್ನ ಒಪ್ಪಿಗೆ ನೀಡಿತು. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಲ್ಲಿದ್ದಲು ಮತ್ತು ಕಂದು ಕಲ್ಲಿದ್ದಲು (ಲಿಗ್ನೈಟ್) ಗಣಿಗಳನ್ನು ಆದಾಯ ಹಂಚಿಕೆ ಆಧಾರದಲ್ಲಿ ಹರಾಜು ಹಾಕುವ ವಿಧಿವಿಧಾನಕ್ಕೆ ಒಪ್ಪಿಗೆ ನೀಡಿತು. ಆದಾಯ ಹಂಚಿಕೆಯ ಮಾನದಂಡವನ್ನು ವಿಧಿ ವಿಧಾನವು ಒದಗಿಸಿದೆ. ಬಿಡ್ಡರುಗಳು ಅಥವಾ ಬೆಲೆ ಕೂಗುವವರು ಸರ್ಕಾರಕ್ಕೆ ಪಾವತಿ ಮಾಡುವ ಕಂದಾಯದ ಶೇಕಡಾವಾರು ಪಾಲನ್ನು ಬಿಡ್ ಮಾಡಬೇಕಾಗುತ್ತದೆ. ಆರಂಭಿಕ ದರವು ಕಂದಾಯ ಪಾಲಿನ ಶೇಕಡಾ ೪ರಷ್ಟು ಆಗಿರುತ್ತದೆ. ಕಂದಾಯ ಪಾಲಿನ ಶೇಕಡಾ . ಗುಣಕಗಳಲ್ಲಿ ಬಿಡ್ಗಳನ್ನ ಅಂಗೀಕರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹೇಳಿಕೆಯೊಂದು ತಿಳಿಸಿತು. ಕಲ್ಲಿದ್ದಲು ವಲಯವನ್ನು ಖಾಸಗಿ ಪಾಲ್ಗೊಳ್ಳುವಿಕೆಗಾಗಿ ತೆರೆಯಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಶನಿವಾರ ಪ್ರಕಟಿಸಿದ್ದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕು ಹರಡುವಿಕೆ ತಡೆಗಾಗಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ವಿಧಿಸಿದ್ದರಿಂದ ಮಾರ್ಚ್ ತಿಂಗಳಲ್ಲಿ ಅಮಾನತುಗೊಂಡಿದ್ದ ದೇಶೀ ವಿಮಾನಗಳ ಸಂಚಾರ ಮೇ ೨೫ರಿಂದ ಹಂತಹಂತವಾಗಿ ಆರಂಭವಾಗಲಿದೆ. ನಿಟ್ಟಿನಲ್ಲಿ ದಿಗ್ಬಂಧನ ನಿಯಮಗಳನ್ನು ಇನ್ನಷ್ಟು ಸಡಿಲಗೊಳಿಸಲಾಗಿದೆ.  ಪ್ರಸ್ತುತ ಸರಕು ಮತ್ತು ಸ್ಥಳಾಂತರಿಸುವ/ ತೆರವು ವಿಮಾನ ಸೇವೆಗಳಿಗೆ ಮಾತ್ರ ಅನುಮತಿ ಇದೆ.  ರಾಷ್ಟವ್ಯಾಪಿ ದಿಗ್ಬಂಧನವನ್ನು ಮೇ ೩೧ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ ಕೆಲವೊಂದು ಸಡಿಲಿಕೆಗಳಿಗೆ ಅವಕಾಶ ನೀಡಲಾಗಿದೆ. ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಮುಂದಿನ ವಾರದಿಂದ ವಿಮಾನ ಹಾರಾಟಕ್ಕೆ ಸಜ್ಜಾಗಿರುವಂತೆ ಸೂಚಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ  2020 ಮೇ 20ರ  ಬುಧವಾರ ಟ್ವೀಟ್ ಮಾಡಿದರು. ಪ್ರಯಾಣಿಕರ ಚಲನವಲನಕ್ಕಾಗಿ ಮಾನದಂಡ ನಿಯಮಾವಳಿಯನ್ನು  ಸಚಿವಾಲಯವು ಪ್ರತ್ಯೇಕವಾಗಿ ಬಿಡುಗಡೆ ಮಾಡಲಿದೆ ಎಂದು ಸಚಿವರು ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್ ಸೋಂಕು ಅತಿಯಾಗಿ ಬಾಧಿಸಿರುವ ಇತರ ೧೫ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಹಲವು ಪಟ್ಟು ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರವು 2020 ಮೇ 20ರ ಬುಧವಾರ ಅಂಕಿ ಸಂಖ್ಯೆಗಳ ಸಹಿತವಾಗಿ ಪ್ರತಿಪಾದಿಸಿತು. ಪಾಸಿಟಿವ್ ಪ್ರಕರಣಗಳ ಅನುಪಾತ, ಒಟ್ಟು ಜನಸಂಖ್ಯೆ ಮತ್ತು ೧೫ ದೇಗಳ ಒಟ್ಟು ಜನಸಂಖ್ಯೆ ಜೊತೆಗಿನ ಕೋವಿಡ್ ಸಾವಿನ ಅನುಪಾತದ ವಿವರಗಳನ್ನು ಸರ್ಕಾರ ಒದಗಿಸಿತು. ಆರೋಗ್ಯ ಸಚಿವಾಲಯದ ಅಧಿಕಾರಿ ಒದಗಿಸಿದ ಮಾಹಿತಿ ಪ್ರಕಾರ ವಿಶ್ವದಲ್ಲಿ ಕೊರೋನಾಸೋಂಕಿನಿಂದ ಅತಿಯಾಗಿ ಬಳಲುತ್ತಿರುವ ಅಮೆರಿಕ, ರಶ್ಯಾ, ಸ್ಪೇನ್, ಬ್ರೆಜಿಲ್, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಜರ್ಮನಿ, ಟರ್ಕಿ, ಇರಾನ್, ಪೆರು, ಕೆನಡ, ಸೌದಿ ಅರೇಬಿಯಾ, ಬೆಲ್ಜಿಯಂ ಮತ್ತು ಮೆಕ್ಸಿಕೋ ಸೇರಿದಂತೆ ೧೫ ರಾಷ್ಟ್ರಗಳ ಒಟ್ಟು ಜನಸಂಖ್ಯೆ ೧೪೨. ಕೋಟಿಯಾಗಿದ್ದು ರಾಷ್ಟ್ರಗಳಲ್ಲಿ ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೬.೪೫ ಲಕ್ಷ. ಭಾರತದ ಜನಸಂಖ್ಯೆ ೧೩೭ ಕೋಟಿಯಾಗಿದ್ದು ದಾಖಲಾಗಿರುವ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮೇ ೧೯ರವರೆಗೆ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ. ರಾಷ್ಟ್ರಗಳಲ್ಲಿ ಕೊರೋನಾವೈರಸ್ಸಿಗೆ ಬಲಿಯಾಗಿರುವವರ ಒಟ್ಟು ಸಂಖ್ಯೆ .೭೩ ಲಕ್ಷವಾಗಿದ್ದರೆ, ಭಾರತದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಕೇವಲ ,೩೦೩. ೧೫ ರಾಷ್ಟ್ರಗಳ ಒಟ್ಟು ಜನಸಂಖ್ಯೆಯ ಪ್ರಮಾಣ ಭಾರತದಷ್ಟೇ ಇದೆ, ಆದರೆ ಅಲ್ಲಿ ಭಾರತಕ್ಕಿಂತ ೩೪ ಪಟ್ಟು ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಭಾರತಕ್ಕಿಂತ ೮೩ ಪಟ್ಟು ಹೆಚ್ಚು ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು. (ವಿವರಗಳಿಗೆ   ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮೇ 20  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

No comments:

Post a Comment