ನಾನು ಮೆಚ್ಚಿದ ವಾಟ್ಸಪ್

Saturday, May 30, 2020

ಇಂದಿನ ಇತಿಹಾಸ History Today ಮೇ 29

ಇಂದಿನ ಇತಿಹಾಸ  History Today ಮೇ 29 

2020:  ನವದೆಹಲಿ: ಇಂಡಿಯಾ ಪದದ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದವನ್ನು ಬಳಸಲು ಸಂವಿಧಾನ ತಿದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್  ಜೂನ್ ೨ರಂದು ಆಲಿಸಲಿದೆ.  ಇಂಡಿಯಾ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದ ಬಳಕೆಯು ನಮ್ಮ ರಾಷ್ಟ್ರೀಯತೆ ಬಗ್ಗೆ ಹೆಮ್ಮೆಯನ್ನು ಸ್ಫುರಿಸುತ್ತದೆ ಎಂದು ಅರ್ಜಿ ಪ್ರತಿಪಾದಿಸಿದೆಹೆಸರು ಮತ್ತು ಒಕ್ಕೂಟದ ಪ್ರದೇಶದ ಜೊತೆ ವ್ಯವಹರಿಸುವ ಸಂವಿಧಾನದ ೧ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ತನ್ಮೂಲಕ, ಇಂಡಿಯಾ ಪದ ಉಲ್ಲೇಖವಾಗುವ ಎಲ್ಲ ಕಡೆ ಅದರ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದ ಬಳಕೆಯಾಗಬೇಕು ಎಂದು ಅರ್ಜಿ ಹೇಳಿದೆ. ಅರ್ಜಿಯು ನಗರದಲ್ಲಿ 2020 ಮೇ  29ರ ಶುಕ್ರವಾರ ವಿಚಾರಣೆಗಾಗಿ ಪಟ್ಟಿಯಾಗಿತ್ತು. ಆದರೆ ಭಾರತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಬೋಬ್ಡೆ ಅವರು ಲಭ್ಯರಿಲ್ಲದ ಕಾರಣ ಅದನ್ನು ಪಟ್ಟಿಯಿಂದ ಕಿತ್ತು ಹಾಕಲಾಯಿತು. ಸುಪ್ರೀಂಕೋರ್ಟಿನ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿರುವ ನೋಟಿಸ್ ಪ್ರಕಾರ ಇದೀಗ ವಿಷಯವನ್ನು ಜೂನ್ ೨ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರು ಇರುವ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

 2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಗರದಲ್ಲಿ 2020 ಮೇ  29ರ ಶುಕ್ರವಾರ ಭೇಟಿಯಾಗಿ ದಿಗ್ಬಂಧನದಿಂದ (ಲಾಕ್ಡೌನ್) ಹೊರಬರುವ ಮಾರ್ಗದ ಕುರಿತು ಸಮಾಲೋಚನೆ ನಡೆಸಿದರು. ಕಳೆದ ೨೪ ಗಂಟೆಗಳಲ್ಲಿ ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ,೪೬೭ ಹೊಸ ಪ್ರಕರಣಗಳು ದಾಖಲಾಗಿದ್ದು ಇದರೊಂದಿಗೆ ದೇಶದಲ್ಲಿನ ಕೊರೋನಾ ಪ್ರಕರಣಗಳ ಂಖ್ಯೆ ,೬೫,೭೯೯ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದು ತೀವ್ರ ಆತಂಕವನ್ನು ಸೃಷ್ಟಿಸಿದೆ.  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮುಂದಿನ ಹಂತದ ಲಾಕ್ ಡೌನ್ ವಿಸ್ತರಿಸುವ ಮತ್ತು ಭವಿಷ್ಯದ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಗೃಹ ಸಚಿವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಒಂದು ದಿನದ ಬಳಿಕ ಸಭೆ ನಡೆಯಿತು. ಆರ್ಥಿಕ ಚಟುವಟಿಕೆಗಳಿಗೆ ಸಾಕಷ್ಟು ಸಡಿಲಿಕೆಯೊಂದಿಗೆ ದಿಗ್ಬಂಧನವನ್ನು ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಗೃಹ ಸಚಿವರನ್ನು ಆಗ್ರಹಿಸಿದರು ಎಂದು ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ಚೀನಾ-ಭಾರತ ಗಡಿ ಬಿಕ್ಕಟ್ಟಿನ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಪ್ರಸ್ತಾಪವನ್ನು ಚೀನಾ ನಗರದಲ್ಲಿ 2020 ಮೇ  29ರ ಶುಕ್ರವಾರ ತಿರಸ್ಕರಿಸಿತು. ಸಮಸ್ಯೆಗಳನ್ನು ಪರಿಹರಿಸಲು ಉಭಯ ದೇಶಗಳು ಸಂವಹನ ಕಾರ್ಯವಿಧಾನಗಳನ್ನು ಹೊಂದಿವೆ ಎಂದು ಚೀನಾ ಪುನರುಚ್ಚರಿಸಿತು. "ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇದ ಅಗತ್ಯವಿಲ್ಲ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಪ್ರಸ್ತಾಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಹಿಮಾಲಯದ ನೆರೆಹೊರೆ ದೇಶಗಳಾದ ಭಾರತ ಮತ್ತು ಚೀನಾ ನಡುವಣ ನೈಜ ನಿಯಂತ್ರಣ ರೇಖೆಯಲ್ಲಿನ (ಎಲ್ ಎಸಿ) ಬಿಕ್ಕಟ್ಟಿ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ವಹಿಸಲು ತಾವು ಸಿದ್ದರಿರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದರು. ಪೂರ್ವ ಲಡಾಖ್ ಮತ್ತು ಸಿಕ್ಕಿಂ ಗಡಿಯ ಬಳಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ನಡೆಯತ್ತಿರುವ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಟ್ರಂಪ್ ಅವರ ಪ್ರಸ್ತಾಪ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ಇತ್ತೀಚಿನ ಹೇಳಿಕೆ ಬಂದಿದೆ. ಅಮೆರಿಕದ ಪ್ರಸ್ತಾವ ಬಗ್ಗೆ ಭಾರತವು ನಯವಾದ ನಿರಾಕರಣೆಯನ್ನು ಗುರುವಾರ ವ್ಯಕ್ತ ಪಡಿಸಿದ ಬಳಿಕ ಚೀನಾದಿಂದ ಟ್ರಂಪ್ ಪ್ರಸ್ತಾಪಕ್ಕೆ ನಿರಾಕರಣೆ ಬಂದಿದೆ."ನಾನು ನಿಮಗೆ ಹೇಳಿದಂತೆ, ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನಾವು ಚೀನಾದ ಜೊತೆಗೆ ತೊಡಗಿಸಿಕೊಂಡಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅನುರಾಗ್ ಶ್ರೀವಾಸ್ತವ ಅವರು ನವದೆಹಲಿಯಲ್ಲಿ ಗುರುವಾರ ಟ್ರಂಪ್ ಅವರ ಟ್ವೀಟ್ ಬಗ್ಗೆ ಕೇಳಿದಾಗ ಉತ್ತರಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮೊತ್ತ ಮೊದಲ ಬಾರಿಗೆ ಒಂದೇ ದಿನದಲ್ಲಿ ,೪೬೬ ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ನಗರದಲ್ಲಿ 2020 ಮೇ  29ರ ಶುಕ್ರವಾರ ,೬೫,೭೯೯ಕ್ಕೆ ಏರಿದವು. ಮಹಾರಾಷ್ಟ್ರದಲ್ಲಿ ಹೊಸ ಪ್ರPರಣಗಳ ಸ್ಫೋಟವಾಗಿದ್ದರೆ, ದೆಹಲಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ದಾಖಲಾದವು. ಕೋವಿಡ್-೧೯ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ. ಗುರುವಾರ ಒಂದೇ ದಿನ ೧೭೫ ಸಾವುಗಳು ವರದಿಯಾಗಿದ್ದು ಒಂದೇ ದಿನದಲ್ಲಿ ಗರಿಷ್ಠ ಸಾವುಗಳು ಸಂಭವಿಸಿದ ಮೂರನೇ ದಿನ ಇದಾಗಿದೆ. ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ ,೭೦೬ಕ್ಕೆ ಏರಿದೆ. ಶುಕ್ರವಾರ ಒಂದೇ ದಿನದಲ್ಲಿ ೭೦೦೦ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತವು ಟರ್ಕಿಯನ್ನು ಹಿಂದೆ ಹಾಕಿ ವಿಶ್ವದಲ್ಲಿ ಅತಿಬಾಧಿತವಾದ ನೇ ರಾಷ್ಟ್ರದ ಸ್ಥಾನಕ್ಕೆ ಏರಿತು. ಭಾರತದಲ್ಲಿ ಕೊರೋನಾ ಸೋಂಕಿತರಲ್ಲಿ ೮೯,೯೮೭ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೪೨ಕ್ಕೆ ಏರಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಸಂಸತ್ತಿನ ಮೇಲ್ಮನೆ ಅಥವಾ ರಾಜ್ಯಸಭೆಯ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಅವರ ಪತ್ನಿ ಹಾಗೂ ಮಕ್ಕಳಿಗೂ ರೋಗ ಹರಡಿದೆ ಎಂದು ಅಧಿಕಾರಿಗಳು ನಗರದಲ್ಲಿ 2020 ಮೇ  29ರ ಶುಕ್ರವಾರ ತಿಳಿಸಿದರು. ಕೊರೋನಾ ಸೋಂಕಿತ ಅಧಿಕಾರಿ ಕೆಲಸ ಮಾಡುತ್ತಿದ್ದ ಕಚೇರಿಗೆ ಬೀಗಮುದ್ರೆ ಮಾಡಲಾಗಿದ್ದು ಶುಚೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಯ ಜೊತೆ ಸಂಪರ್ಕಕ್ಕೆ ಬಂದಿದ್ದವರಿಗೂ ಆರೋಗ್ಯದ ಮೇಲೆ ನಿಗಾ ಇಡುವಂತೆ ಸೂಚಿಸಲಾಯಿತು. ಸಂಸತ್ತಿನ ಸಂಪಾದಕೀಯ ಮತ್ತು ಭಾಷಾಂತರ ಸೇವಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ ಒಂದು ವಾರದ ಬಳಿಕ ಘಟನೆ ಘಟಿಸಿತು. ಸದನ ಸಮಿತಿ ಸಭೆಗಳು ನಡೆಯುವ ಕೊಠಡಿಗಳು ಮತ್ತು ಬಹುತೇಕ ಸಂಸದೀಯ ಅಧಿಕಾರಿಗಳು ಇರುವ ಪಾರ್ಲಿಮೆಂಟ್ ಅನೆಕ್ಸ್ ಕಟ್ಟಡದ ೫ನೇ ಮಹಡಿಯಲ್ಲಿ ಇರುವ ತನ್ನ ಕಚೇರಿಗೆ ಅಧಿಕಾರಿ ಮೇ ೧೨ರವೆಗೆ ಹಾಜರಾಗಿದ್ದರು. ಸಂಸದೀಯ ಸಿಬ್ಬಂದಿಗೆ ಬಂದ ಎರಡನೇ ಕೋವಿಡ್-೧೯ ಪ್ರಕರಣ ಇದಾಗಿದೆ. ಏಪ್ರಿಲ್ ತಿಂಗಳಲ್ಲಿ ಹಿರಿಯ ಹೌಸ್ ಕೀಪರ್ ಒಬ್ಬರಿಗೆ ಸೋಂಕು ತಗುಲಿತ್ತು. ಲೋಕಸಭಾ ಸಚಿವಾಲಯದ ೩೦೦೦ಕ್ಕೂ ಹೆಚ್ಚು ಸಿಬ್ಬಂದಿಯ ಪೈಕಿ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮೇ 29  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 


No comments:

Post a Comment