ನಾನು ಮೆಚ್ಚಿದ ವಾಟ್ಸಪ್

Monday, May 18, 2020

ಇಂದಿನ ಇತಿಹಾಸ History Today ಮೇ 18

2020: ನವದೆಹಲಿ: ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿರುವ ಕೋವಿಡ್-೧೯ ಸಾಂಕ್ರಾಮಿಕದ ಮೂಲದ ತನಿಖೆ ಮತ್ತು ಸಾಂಕ್ರಾಮಿಕಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಸ್ಪಂದನೆ ಬಗ್ಗೆ ಪುನರ್ ಪರಿಶೀಲನೆಯಾಗಬೇಕು ಎಂಬ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಒತ್ತಡಕ್ಕೆ ಚೀನಾ  2020 ಮೇ 18ರ ಸೋಮವಾರ ಕೊನೆಗೂ ಮಣಿದಿದ್ದು, ಕೊರೋನಾ ಸೋಂಕಿನ ಉಗಮದ ಕುರಿತು ತನಿಖೆಗೆ ಒಪ್ಪಿತು. ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡುತ್ತಾ  ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಾಧಿಸಿರುವ ರೋಗವು ಮೊದಲಿಗೆ ಸ್ಫೋಟಗೊಂಡಾಗ ಚೀನಾವು ಮುಕ್ತತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ವರ್ತಿಸಿದೆ ಎಂದು ಹೇಳಿದರು. ಸುಮಾರು ೧೦೦ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿದ ಕರಡು ನಿರ್ಣಯವನ್ನು ಐರೋಪ್ಯ ಒಕ್ಕೂಟವು ಮಂಡಿಸಿದ ಬಳಿಕ ಅಧ್ಯಕ್ಷ ಕ್ಷಿ ಅವರನ್ನು ಮಹಾಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಂತೆ ಆಹ್ವಾನಿಸಲಾಯಿತು.  ರೋಗಕ್ಕೆ ಸಂಬಂಧಿಸಿದಂತೆ ಜಾಗತಿಕ ಸ್ಪಂದನೆಯ ಸಮಗ್ರ ಪರಿಶೀಲನೆ ನಡೆಯಬೇಕು ಎಂಬ ಕರೆಗಳನ್ನು ಬೆಂಬಲಿಸಿದ ಕ್ಷಿ, ತನಿಖೆಯನ್ನು ರೋಗದಿಂದ ಉದ್ಭವಿಸಿದ ಸಂಕಷ್ಟಮಯ ಪರಿಸ್ಥಿತಿಯ ಹಿಡಿತದಿಂದ ವಿಶ್ವವು ಮುಕ್ತಗೊಂಡ ಬಳಿಕ ನಡೆಸಬೇಕು ಎಂದು ಹೇಳಿದರು. ಜಗತ್ತಿನ ತತ್ ಕ್ಷಣದ ಆದ್ಯತೆ ಜನರ ರಕ್ಷಣೆಯಾಗಬೇಕು ಎಂದು ಅವರು ನುಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಪ್ರಸರಣ ವಿರುದ್ಧ ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್ ಡೌನ್)  2020 ಮೇ 18ರ ಸೋಮವಾರ ೪ನೇ ಹಂತವನ್ನು ಪ್ರವೇಶಿಸಿದ್ದು, ಅವಧಿಯಲ್ಲಿ ದಿಗ್ಬಂಧನ (ಲಾಕ್ ಡೌನ್) . ಮಾರ್ಗಸೂಚಿಯನ್ನು ಸಡಿಲಗೊಳಿಸದಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ  ಸೂಚಿಸಿತು.  . ಮಾರ್ಗಸೂಚಿಯ ನಿರ್ಬಂಧಗಳು ಮೇ ೩೧ರವರೆಗೆ ಜಾರಿಯಲ್ಲಿ ಇರುತ್ತದೆ.  ನನ್ನ ಹಿಂದಿನ ಪತ್ರಗಳಲ್ಲಿ ತಿಳಿಸಿರುವಂತೆ, ಗೃಹ ವ್ಯವಹಾರಗಳ ಸಚಿವಾಲಯವು ಜಾರಿಗೊಳಿಸಿರುವ ಮಾರ್ಗಸೂಚಿ ನಿರ್ಬಂಧಗಳನ್ನು ಸಡಿಲಗೊಳಿಸದಂತೆ ನೀಡಿರುವ ಸೂಚನೆಯನ್ನು ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಿಗೆ ನಾನು ಪುನರುಚ್ಚರಿಸುತ್ತೇನೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿ ಬಗೆಗಿನ ತಮ್ಮ ಅಂದಾಜಿನ ಮೇರೆಗೆ ಕೆಲವು ಚಟುವಟಿಕೆಗಳನ್ನು ವಿವಿಧ ವಲಯಗಳಲ್ಲಿ ನಿಷೇಧಿಸಬಹುದು ಅಥವಾ ಅಗತ್ಯವೆಂದು ಕಂಡು ಬರುವ ನಿರ್ಬಂಧಗಳನ್ನು ವಿಧಿಸಬಹುದು ಎಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪತ್ರವೊಂದರಲ್ಲಿ ತಿಳಿಸಿದರು. ಪ್ರಧಾನ ಮಂತ್ರಿಯವರು ಮೇ ೧೧ರಂದು ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ವಿಡಿಯೋ ಸಮ್ಮೇಳನದಲ್ಲಿ ರಾಜ್ಯ  ಸರ್ಕಾರಗಳು ನೀಡಿದ ಸಲಹೆಗಳನ್ನು ಪರಿಗಣಿಸಿ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಒತ್ತಿ ಹೇಳಿತು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ನಾಲ್ಕನೇ ಅವಧಿಗೆ ಮೇ ೩೧ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರ, ಆಯಾ ರಾಜ್ಯಗಳಿಗೆ ಕೆಂಪು, ಕಿತ್ತಳೆ, ಹಸಿರು ವಲಯಗಳ ನಿರ್ಬಂಧ ನಿರ್ಧರಿಸಲು ಅವಕಾಶ ನೀಡಿದ್ದನ್ನು ಅನುಸರಿಸಿ ದೇಶದ ವಿವಿಧ ರಾಜ್ಯಗಳು  2020 ಮೇ 18ರ ಸೋಮವಾರ ತಮ್ಮ ತಮ್ಮ ರಾಜ್ಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದವು. ಭಾರತದಲ್ಲಿ ಸೋಮವಾರ ಒಂದೇ ದಿನ ಅತ್ಯಂತ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ದಾಖಲಾದವು. ,೨೪೨ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದ ಒಟ್ಟು ಸೋಂಕು ಪ್ರಕರಣಗಳು ೯೬,೧೬೯ಕ್ಕೆ ಏರಿಕೆಯಾದವು. ಒಟ್ಟು ಸಾವುಗಳು ೩೦೨೯ಕ್ಕೆ ಏರಿವೆ. ೩೫,೮೨೩ ರೋಗಗಳು ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ೫೩,೧೬೯ ಎಂದು  ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು. ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಅಂಗಡಿಗಳನ್ನು ಸಮ-ಬೆಸ ವ್ಯವಸ್ಥೆಯಡಿಯಲ್ಲಿ ತೆರೆಯಲು ಅನುವು ಕಲ್ಪಿಸಿದರು. ಕೌರದ ಅಂಗಡಿಗಳು, ಸ್ಪಾಗಳು ಮತ್ತು ಸಲೂನ್‌ಗಳ ಮೇಲಿನ ನಿಷೇಧ ರಾಜಧಾನಿಯಲ್ಲಿ ಮುಂದುವರೆಯಲಿದ್ದು ಸಂಜೆ ೭ರಿಂದ ಬೆಳಗ್ಗೆ ೭ರವರೆಗೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆ ನಿಷೇಧಿಸಲಾಗಿದೆ ಎಂದು ಹೇಳಿದರು.  ಕರ್ನಾಟಕ, ಪಂಜಾಬ್, ಪುದುಚೆರಿ ಮತ್ತು ಕೇರಳ ಸೋಮವಾರ ಕೆಲವು ಸಡಿಲಿಕೆಗಳನ್ನು ಪ್ರಕಟಿಸಿ, ರಾಜ್ಯಗಳಲ್ಲಿ ಅಂಗಡಿಗಳು, ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದವು. . ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ದಿಗ್ಬಂಧನವನ್ನು ಮೇ ೩೧ರವರೆಗೆ ವಿಸ್ತರಿಸಿದವು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಸುಮಾರು ೨೧ ವರ್ಷಗಳ ಬಳಿಕ ಪಶ್ಚಿಮ ಬಂಗಾಳ ಮತ್ತು ಒಡಿಶಾ ಮಹಾ ಚಂಡಮಾರುತ (ಸೂಪರ್ ಸೈಕ್ಲೋನ್) ಎದುರಿಸಲು ಸಜ್ಜಾಗಿದ್ದು, ಅಂಪನ್ ಚಂಡಮಾರುತವುಸೂಪರ್ ಸೈಕ್ಲೋನ್ ಬಿರುಗಾಳಿಯಾಗಿ ಪರಿವರ್ತನೆಗೊಂಡು ಈಶಾನ್ಯ ಬಂಗಾಳ ಕೊಲ್ಲಿಯತ್ತ ಚಲಿಸಿ ಮೇ ೨೦ರಂದು ದಿಘಾ ಮತ್ತು ಹಟಿಯಾ ದ್ವೀಪಗಳ ಮಧ್ಯೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  2020 ಮೇ 18ರ ಸೋಮವಾರ (ಐಎಂಡಿ) ತಿಳಿಸಿತು. ಅಂಪನ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಉಗ್ರ ಸ್ವರೂಪ ತಾಳುತ್ತಾ ನಿಧಾನವಾಗಿ ಕರಾವಳಿಯತ್ತ ಸಾಗುತ್ತಿದೆ. ಈಗ ಅದು ಸೂಪರ್ ಸೈಕ್ಲೋನ್ ರೂಪವನ್ನು ತಾಳಿದ್ದು ಬುಧವಾರ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿತು. ಚಂಡಮಾರುತವು ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ, ದಕ್ಷಿಣ ಮತ್ತು ಉತ್ತರ ೨೪ ಪರಗಣಗಳು, ಹೌರಾ, ಹೂಗ್ಲಿ ಮತ್ತು ಕೋಲ್ಕತ ಜಿಲ್ಲೆಗಳಲ್ಲಿ ಅನಾಹುತಗಳನ್ನು ಉಂಟು ಮಾಡಬಹುದು ಎಂದು ಐಎಂಡಿ ಎಚ್ಚರಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮೇ 18  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment