ನಾನು ಮೆಚ್ಚಿದ ವಾಟ್ಸಪ್

Thursday, May 7, 2020

ಇಂದಿನ ಇತಿಹಾಸ History Today ಮೇ 07

2020: ವಿಶಾಖ ಪಟ್ಟಣ (ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಶಾಖಪಟ್ಟಣದ ಆರ್ ಆರ್ ವೆಂಕಟಾಪುರಂ ಗ್ರಾಮದ ಎಲ್ ಜಿ ಪಾಲಿಮರ್ಸ್ ಕೆಮಿಕಲ್ ಕಾರ್ಖಾನೆಯಲ್ಲಿ 2020 ಮೇ 07ರ ಗುರುವಾರ ವಿಷಾನಿಲ ಸೋರಿಕೆಯಾದ ಪರಿಣಾಮವಾಗಿ ಇಬ್ಬರು ಮಕ್ಕಳು ಸೇರಿದಂತೆ ೧೧ ಮಂದಿ ಸಾವನ್ನಪ್ಪಿದ್ದು, ೫೦೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದರು.  ಸುಮಾರು ೩೦೦ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ತೆಗಳಿಗೆ ದಾಖಲು ಮಾಡಲಾಯಿತು.  ವಿಶಾಖಪಟ್ಟಣದ ಕಾರ್ಖಾನೆಯು ೪೦ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ ಬಳಿಕ ಗುರುವಾರ ಕಾರ್ಖಾನೆ ಪುನಾರಂಭಕ್ಕೆ ಯತ್ನಿಸುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ಮಹಾ ನಿರ್ದೇಶಕರು ತಿಳಿಸಿದರು.  ಕಣ್ಣುಗಳಲ್ಲಿ ಉರಿ ಹಾಗೂ ಉಸಿರಾಟದ ಸಮಸ್ಯೆಗಳಿಗಾಗಿ ಹಲವಾರು ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಟಿವಿ ಚಾನೆಲ್ಗಳಲ್ಲಿ ಪ್ರಸಾರಗೊಂಡ ವಿಡಿಯೋಗಳು ರಸ್ತೆಗಳಲ್ಲಿ ಜನರು ಬಹುತೇಕ ಪ್ರಜ್ಞಾಹೀನರಾಗಿ ಬಿದ್ದ ದೃಶ್ಯಗಳನ್ನು ಪ್ರಸಾರ ಮಾಡಿವೆ. ಹಲವರನ್ನು ಆಂಬುಲೆನ್ಸ್ಗಳ ಮೂಲಕ ಆಸ್ಪತ್ರೆಗಳಿಗೆ ಒಯ್ದರೆ, ಇತರ ಹಲವರು ನೆರವಿಗಾಗಿ ಮೊರೆಯಿಡುತ್ತಿದ್ದ ದೃಶ್ಯಗಳು ಕಂಡು ಬಂದವು. ಕೈಗಾರಿಕಾ ಸೈರನ್ ಹಿನ್ನೆಲೆಯಲ್ಲಿ ಮೊಳಗುತ್ತಿದ್ದ ವಿಡಿಯೋ ಒಂದರಲ್ಲಿ ರಸ್ತೆ ವಿಭಜಕದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿಯನ್ನು ಪುಟ್ಟ ಮಗುವೊಂದು ಎಬ್ಬಿಸಲು ಯತ್ನಿಸುತ್ತಿದ್ದ ಹೃದಯ ವಿದ್ರಾವಕ ದೃಶ್ಯ ಪ್ರಸಾರಗೊಂಡಿತು.  ಗ್ರೇಟರ್ ವಿಶಾಖಪಟ್ಟಣಂ ಮುನಿಸಿಪಲ್ ಕಾರ್ಪೋರೇಷನ್ ಟ್ವೀಟ್ ಮೂಲಕ ಘಟನೆಯನ್ನು ದೃಢ ಪಡಿಸಿದ್ದಲ್ಲದೆ, ಕಾರ್ಖಾನೆಗೆ ಸಮೀಪದ ಕಾಲೋನಿಗಳು, ಗ್ರಾಮಗಳಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳುವಂತೆ ಮನವಿ ಮಾಡಿತು. ಎಲ್ ಜಿ ಪಾಲಿಮರ್ಸ್ ಕೈಗಾರಿಕೆಯು ೧೯೬೧ರಲ್ಲಿ ಹಿಂದುಸ್ಥಾನ ಪಾಲಿಮರ್ಸ್ ಹೆಸರಿನಲ್ಲಿ ೧೯೬೧ರಲ್ಲಿ ಆರಂಭವಾಗಿತ್ತು. ಕಂಪೆನಿಯು ಪಾಲಿಸ್ಟೈರೇನ್ ಮತ್ತು ಸಹ ಪಾಲಿಮರ್ಸ್ನ್ನು ವಿಶಾಖಪಟ್ಟಣದಲ್ಲಿ ಉತ್ಪಾದಿಸುತ್ತಿದೆ. ೧೯೭೮ರಲ್ಲಿ ಕಂಪೆನಿಯು ಮೆಕ್ ಡೊವೆಲ್ ಮತ್ತು ಯುಬಿ ಸಮೂಹದ ಕಂಪೆನಿಯೊಂದಿಗೆ ವಿಲೀನಗೊಂಡಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 2020 ಮೇ 07ರ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ವಿಷಾನಿಲ ದುರಂತವು ೧೯೮೪ರ ಭೋಪಾಲ್ ವಿಷಾನಿಲ ದುರಂತದ ನೆನಪುಗಳು ಮರುಕಳಿಸುವಂತೆ ಮಾಡಿತು. ಮಧ್ಯಪ್ರದೇಶದ ಭೋಪಾಲದಲ್ಲಿ ೨೦ನೇ ಶತಮಾನದ ಅತಿ ದೊಡ್ಡ ಕೈಗಾರಿಕಾ ದುರಂತ ೧೯೮೪ನೇ ಇಸವಿಯ ಡಿಸೆಂಬರ್ ೨ರಂದು ಸಂಭವಿಸಿತ್ತು. ಮಧ್ಯಪ್ರದೇಶ ರಾಜಧಾನಿಯ ಯೂನಿಯನ್ ಕಾರ್ಬೈಡನ್ ಪೆಸ್ಟಿಸೈಡ್ ಘಟಕದಲ್ಲಿ ಡಿಸೆಂಬರ್ ಮಧ್ಯರಾತ್ರಿ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಗಿತ್ತು. ಕೀಟನಾಶಕ ಕಾರ್ಖಾನೆಯಿಂದ ಹೊರಹೊಮ್ಮಿದ ವಿಷಾನಿಲ ೧೫ ಸಾವಿರಕ್ಕೂ ಹೆಚ್ಚು ಮಂದಿಯ ಜೀವವನ್ನು ಬಲಿ ಪಡೆದಿತ್ತು. ದುರಂತ ಘಟನೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ವಿಷಾನಿಲ ಸೇವಿಸಿ ಅನಾರೋಗ್ಯಕ್ಕೆ ಈಡಾದರು. ಬದುಕುಳಿದ ಅನೇಕ ಮಂದಿ ಈಗಲೂ ಉಸಿರಾಟದ ತೊಂದರೆ ಹಾಗೂ ವಿವಿಧ ಅಂಗಾಂಗ ಹಾನಿಯ ತೊಂದರೆಯಿಂದ ಬಳಲುತ್ತಿದ್ದಾರೆ.  ಇದೀಗ ಕೊರೊನಾ ವೈರಸ್ ವಿರುದ್ಧ ಇಡೀ ದೇಶ ಒಗ್ಗಟ್ಟಿನಿಂದ ಹೋರಾಡುತ್ತಿರುವ ಸಂದರ್ಭದಲ್ಲಿ ಮತ್ತೊಂದು ದುರಂತ ದುರಂತ ಸಂಭವಿಸಿತು. ಮೇ ಗುರುವಾರ ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸಂಭವಿಸಿದ ಅನಿಲ ದುರಂತವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಕೈಗಾರಿಕಾ ಕ್ಷೇತ್ರದಲ್ಲಿ ಎಷ್ಟೇ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಂಡರೂ ಕೇವಲ ಒಂದೇ ಒಂದು ತಪ್ಪಿನಿಂದಾಗಿ ಹತ್ತಿರದ ಪರಿಸರ ನಿವಾಸಿಗಳ ಪ್ರಾಣಕ್ಕೆ ಕುತ್ತು ಸಂಭವಿಸುತ್ತದೆ ಎಂಬುದಕ್ಕೆ ವಿಶಾಖಪಟ್ಟಣ ದುರಂತ ಇನ್ನೊಮ್ಮೆ ಸಾಕ್ಷ್ಯ ಒದಗಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಇನ್ನೂ ತನ್ನ ಶಿಖರಕ್ಕೆ ಏರಿಲ್ಲದೇ ಇರಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ 2020 ಮೇ 07ರ ಗುರುವಾರ ಎಚ್ಚರಿಕೆ ನೀಡಿದರು. ಮಾದರಿಗಳ ಮಾಹಿತಿ ಮತ್ತು ಪ್ರಕರಣಗಳು ಹೆಚ್ಚುತ್ತಿರುವ ರೀತಿ ನೋಡಿದರೆ ಅದು ಜೂನ್ ಮತ್ತು ಜುಲೈ ವೇಳೆಗೆ ಉತ್ತುಂಗಕ್ಕೆ ಏರುವ ಸಾಧ್ಯತೆಗಳಿವೆ. ಆದರೆ ಹಲವಾರು ವ್ಯತ್ಯಾಸಗಳೂ ಇವೆ ಮತ್ತು ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಸ್ತರಣೆಯ ಪರಿಣಾಮ ಎಷ್ಟು ಮತ್ತು ಅದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ಕಾಲವೇ ಹೇಳಬೇಕಾಗಿದೆ ಎಂದು ಅವರು ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ಹೇಳಿದರು. ಇನ್ನೂ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಗದೇ ಇರುವುದರಿಂದ ಸರ್ಕಾರವು ವೈರಸ್ ಪ್ರಸರಣ ಸರಪಳಿಯನ್ನು ಕಡಿಯಲು ದಿಗ್ಬಂಧನವನ್ನೇ ಆಶ್ರಯಿಸಿದೆ. ಭಾರತದಲ್ಲಿ ಮಾರ್ಚ್ ೨೫ರಂದು ದಿಗ್ಬಂಧನವನ್ನು ಜಾರಿಗೊಳಿಸಲಾಗಿದ್ದು ಆದಿನ ಇದ್ದ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಕೇವಲ ೬೦೦. ವೇಳೆಗೆ ಸೋಂಕಿಗೆ ಬಲಿಯಾಗಿದ್ದವರ ಸಂಖ್ಯೆ ೧೩ ಮಾತ್ರ. ದಿಗ್ಬಂಧನ ಆರಂಭವಾದ ೪೩ ದಿನಗಳ ಬಳಿಕ ಗುರುವಾರ ಭಾರತದಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಸುಮಾರು ೫೩,೦೦೦ಕ್ಕೆ ತಲುಪಿದೆ. ಅಂದಾಜು ,೮೦೦ ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕ್ವಾರಂಟೈನಿನಲ್ಲಿ ಇದ್ದ ಕೋವಿಡ್ -೧೯ ರೋಗಿಗಳಲ್ಲಿ ಸೋಂಕು ನಿವಾರಣೆಯಾಗುವಲ್ಲಿ ಆಯುರ್ವೇದೀಯ ಔಷಧ ಮತ್ತು ಹೋಮಿಯೋಪಥಿ ಔಷಧ ಪರಿಣಾಮಕಾರಿಯಾಗಿದೆ ಎಂಬುದಾಗಿ ಗುಜರಾತ್ ಸರ್ಕಾರವು 2020 ಮೇ 07ರ ಗುರುವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರತಿಪಾದಿಸಿತು.. ಕ್ವಾರಂಟೈನಿನಲ್ಲಿ ಇದ್ದ ,೫೮೫ ಮಂದಿಗೆ ಆಯುರ್ವೇದ ಕಷಾಯ (ಆಯುರ್ವೇದಿಕ್ ಕಧ) ನೀಡಿದರೆ, ,೬೨೫ ಮಂದಿಗೆ ಹೋಮಿಯೋಪಥಿ ಔಷಧ ನೀಡಲಾಗಿತ್ತು. ಪೈಕಿ ೧೧ ಮಂದಿಯಲ್ಲಿ ಮಾತ್ರ ವರದಿ ಪಾಸಿಟಿವ್ ಆಗಿತ್ತು. ಏಕೆಂದರೆ ಅವರು ಸೂಚಿತ ಪ್ರಮಾಣದಲ್ಲಿ ಔಷಧ ಸೇವಿಸುವಲ್ಲಿ ವಿಫಲರಾಗಿದ್ದರು ಎಂದು ಗುಜರಾತಿನ ಮುಖ್ಯ ಆರೋಗ್ಯ ಕಾರ್ಯದರ್ಶಿ ಜಯಂತಿ ರವಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪ್ರಯೋಗವು ಕ್ವಾರಂಟೈನಿನಲ್ಲಿ ಇರುವವರಿಗೆ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಇಲ್ಲವೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸೆ ನೀಡುವುದು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ತೋರಿಸಿದೆ ಎಂದು ಜಯಂತಿ ರವಿ ಹೇಳಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ: ಕೋವಿಡ್ ೧೯ ವೈರಸ್ಗೆ ಇಬ್ಬರು ಗಡಿ ಭದ್ರತಾಪಡೆಯ (ಬಿಎಸ್ಎಫ್) ಯೋಧರು ಸಾವನ್ನಪ್ಪಿರುವ ಘಟನೆ 2020 ಮೇ 07ರ ಗುರುವಾರ ಘಟಿಸಿತು.  ಇದೇ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೫೨,೯೫೨ಕ್ಕೆ ಏರಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ೧೭೮೩ಕ್ಕೆ ಏರಿದೆ. ಒಟ್ಟು ಸೋಂಕಿತರಲ್ಲಿ ೧೫,೨೬೬ ಮಂದಿ ಚೇತರಿಸಿದ್ದು ಚೇತರಿಕೆ ಪ್ರಮಾಣ ಶೇಕಡಾ ೨೮.೮೩ಕ್ಕೆ ಏರಿತು.  ಗಡಿ ಭದ್ರತಾ ಪಡೆಯ ಒಬ್ಬ ಯೋಧ ಗುರುವಾರ ವಿಧಿವಶರಾಗಿದ್ದು, ಮತ್ತೊಬ್ಬರು ಸೋಮವಾರ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು ಎಂದು ವರದಿ ಹೇಳಿತು.  ಕಳೆದ ತಿಂಗಳು ಸಿಆರ್ಪಿಎಫ್ ೫೫ ವರ್ಷದ ಸಬ್ಇನ್ಸ್ಪೆಕ್ಟರ್ ವಿಧಿವಶರಾಗಿದ್ದರು. ಕೋವಿಡ್ ೧೯ ವೈರಸ್ ನಿಂದ ಸಾವನ್ನಪ್ಪಿರುವ ಬಿಎಸ್ಎಫ್ ಯೋಧರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ ಬಿಎಸ್ ಎಫ್ ಪ್ರಕಟಣೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಹಾರೈಸಿದೆ. ಬುಧವಾರ ನಡೆಸಿದ ಪರೀಕ್ಷೆಯಲ್ಲಿ ೮೫ ಬಿಎಸ್ಎಫ್ ಸಿಬ್ಬಂದಿಗೆ ಕೋವಿಡ್ ೧೯ ವೈರಸ್ ಪಾಸಿಟಿವ್ ವರದಿ ಬಂದಿತ್ತು. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣ ಪತ್ತೆಯಾಗಿದೆ. ಕೋವಿಡ್ ೧೯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.. ದೇಶದಲ್ಲಿ ಹೊಸ ೩೫೬೧ ಪ್ರಕರಣಗಳೊಂದಿಗೆ ದೇಶದಲ್ಲಿ ಕೋವಿಡ್-೧೯ ಸೋಂಕು ತಗುಲಿದವರ ಸಂಖ್ಯೆ ಗುರುವಾರ ೫೨,೯೫೨ಕ್ಕೆ ಏರಿತು ಮತ್ತು ೮೯ ಹೊಸ ಸಾವುಗಳೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ ,೭೮೩ಕ್ಕೆ ಏರಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು. ಒಟ್ಟು ಸೋಂಕಿತರಲ್ಲಿ ೧೫,೨೬೬ ಮಂದಿ ಗುಣಮುಖರಾಗಿದ್ದು ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ ೩೫,೯೦೨ ಆಗಿದೆ. ಹೀಗಾಗಿ ಚೇತರಿಕೆ ಪ್ರಮಾಣ ಶೇಕಡಾ ೨೮.೮೩ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ದುಬೈ: ಒಟ್ಟು ೧೭೭ ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  2020 ಮೇ 07ರ ಗುರುವಾರ ಭಾರತದತ್ತ  ಪಯಣ ಹೊರಟಿತು. ವಿಮಾನವು ಕೇರಳದ ಕೋಯಿಕ್ಕೋಡಿನಲ್ಲಿ ಬಂದು ಇಳಿಯಲಿದೆ. ಕೊರೋನಾವೈರಸ್ ದಿಗ್ಬಂಧನದ ಪರಿಣಾಮವಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುವ ಭಾರತ ಸರ್ಕಾರದ ಉಪಕ್ರಮದ ಅಡಿಯಲ್ಲಿ ಭಾರತಕ್ಕೆ ವಾಪಸಾಗುತ್ತಿರುವ ಮೊದಲ ತಂಡ ಇದಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  HistoryTodayಮೇ 07  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Post a Comment