ನಾನು ಮೆಚ್ಚಿದ ವಾಟ್ಸಪ್

Thursday, May 14, 2020

ಇಂದಿನ ಇತಿಹಾಸ History Today ಮೇ 14

2020: ನವದೆಹಲಿ: ತಾನು ತಯಾರಿಸಿದ ಅಗ್ಗದ ವೈಯಕ್ತಿಕ ರಕ್ಷಣಾ ಸಲಕರಣೆಗೆ (ಪಿಪಿಇ) ರಕ್ಷಣಾ ಸಚಿವಾಲಯವು ಯಶಸ್ವಿಯಾಗಿ ಪೇಟೆಂಟ್ ಪಡೆದುಕೊಂಡಿದೆ ಎಂದು ಭಾರತೀಯ ನೌಕಾಪಡೆಯು 2020 ಮೇ 14ರ ಗುರುವಾರ  ಪ್ರಕಟಿಸಿತು.  ಭಾರತೀಯ ನೌಕಾಪಡೆಯ ವೈದ್ಯರೊಬ್ಬರು ಅತ್ಯಂತ ಅಗ್ಗದ ವೈಯಕ್ತಿಕ ರಕ್ಷಣಾ ಉಪಕರಣವನ್ನು (ಪಿಪಿಇ) ಮುಂಬಯಿಯ ಇನ್ಸ್ಟಿಟ್ಯೂಟ್ ಆಫ್ ನೇವಲ್ ಮೆಡಿಸಿನ್ (ಐಎನ್ ಎಂ) ಇನ್ನೋವೇಷನ್ ಸೆಲ್ ಇತ್ತೀಚೆಗೆ ನಿರ್ಮಿಸಿದೆ. ಮುಂಬಯಿಯ ನೌಕಾ ಹಡಗುಕಟ್ಟೆಯಲ್ಲಿ ಪಿಪಿಇಗಳ ಮೊದಲ ಕಂತನ್ನು ಯಶಸ್ವಿಯಾಗಿ ಉತ್ಪಾದಿಸಲಾಗಿದೆ. ಶೀಘ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಉತ್ಪಾದಿಸಲಾಗುವುದು ಎಂದು ನೌಕಾ ಪಡೆ ಹೇಳಿಕೆಯೊಂದು ತಿಳಿಸಿತು.  ಕೊರೋನಾವೈರಸ್ ಚಿಕಿತ್ಸೆಯಲ್ಲಿ ಸಿಬ್ಬಂದಿ ರಕ್ಷಣೆಗೆ ವೈಯಕ್ತಿಕ ರಕ್ಷಣ ಉಪಕರಣ (ಪಿಪಿಇ) ಅತ್ಯಗತ್ಯವಾಗಿ ಬೇಕಾದ ಸಾಧನವಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ೨೦ ಲಕ್ಷ ಕೋಟಿ ರೂ. ವಿಶೇಷ ಕೊಡುಗೆಯ ಮೊದಲ ಕಂತಿನ ವಿವರಗಳನ್ನು  2020 ಮೇ 13ರ ಬುಧವಾರ ವಿವರಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಣ್ಣ ರೈತರು, ವಲಸೆ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಹಾಗೂ ಸ್ವಯಂ ಉದ್ಯೋಗಿಗಳಿಗೆ ಒದಗಿಸಲಾಗಿರುವ ವಿಶೇಷ ಸವಲತ್ತುಗಳನ್ನು 2020 ಮೇ 14ರ ಗುರುವಾರ  ಪ್ರಕಟಿಸಿದರು. ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ ಸಚಿವರು ರೈತರಿಗೆ ಬೆಳೆಸಾಲ ಒದಗಿಸುವ ಸಲುವಾಗಿ ನಬಾರ್ಡ್ ಮೂಲಕ ೩೦,೦೦೦ ಕೋಟಿ ರೂಪಾಯಿಗಳ ಹೆಚ್ಚುವರಿ ತುರ್ತು ಮೂಲ ಬಂಡವಾಳ ಒದಗಿಸಲಾಗುವುದು ಎಂದು ಘೋಷಿಸಿದರು. ಕೋಟಿ ರೈತರಿಗೆ ಇದರ ಲಾಭ ಲಭಿಸಲಿದೆ ಎಂದು ಅವರು ನುಡಿದರು.  ಗ್ರಾಮೀಣ ಸಹಕಾರ ಸಂಘಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೆರವು ಬಲ ತುಂಬಲಿದೆ ಎಂದು ಸಚಿವರು ನುಡಿದರು.  . ಕೋಟಿ ರೈತರಿಗೆ ಲಕ್ಷ ಕೋಟಿ ರಿಯಾಯ್ತಿ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ವಿತರಿಸಲಾಗುವುದು. ಪಿಎಂ ಕಿಸಾನ್ ಫಲಾನುಭವಿಗಳಿಗೆ ರಿಯಾಯ್ತಿ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಒದಗಿಸಲು ವಿಶೇಷ ಅಭಿಯಾನ ನಡೆಸಲಾಗುವುದು. ಮೀನುಗಾರರು ಮತ್ತು ಪಶು ಸಂಗೋಪನಾ ರೈತರನ್ನೂ ಅಭಿಯಾನದಲ್ಲಿ ಸೇರಿಸಿಕೊಳ್ಳಲಾಗುವುದು. . ಕೋಟಿ ರೈತರಿಗೆ ಅಭಿಯಾನದ ಮೂಲಕ ಲಕ್ಷ ಕೋಟಿ ರೂಪಾಯಿಗಳ ಸಾಲದ ಹರಿವಿನ ಲಾಭ ದೊರೆಯಲಿದೆ ಎಂದು ಸಚಿವರು ವಿವರಿಸಿದರು. ಬೆಳೆಸಾಲದ ಮರುಪಾವತಿ ಪ್ರೋತ್ಸಾಹಕವನ್ನು ಮಾರ್ಚ್ ೧ರಿಂದ ಮೇ ೩೧ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಸಮರ್ಪಕವಾಗಿ ಸಾಲಮರುಪಾವತಿ ಮಾಡುವವರಿಗೆ ಲಭಿಸುವ ರಿಯಾಯ್ತಿ ಬಡ್ಡಿ ಅನುಕೂಲಗಳು ಮೇ ೩೧ರವರೆಗೂ ಲಭಿಸಲಿವೆ ಎಂದೂ ನಿರ್ಮಲಾ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಂದಿನ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ೧೦ಕೋಟಿ ರೂಪಾಯಿ ಮೌಲ್ಯದ ಹೊಚ್ಚ ಹೊಸ ಲಿಮೋಸಿನ್ ಕಾರಿನಲ್ಲಿ ಸಂಚರಿಸುವುದಿಲ್ಲ, ಅಲ್ಲದೆ ರಾಷ್ಟ್ರಪತಿ ಭವನವು ಸರ್ಕಾರಿ ಔತಣ ಕೂಟದ ಅದ್ದೂರಿ ವೆಚ್ಚಗಳಿಗೆ ಕತ್ತರಿ ಹಾಕಲಿದೆ. ಕೊರೋನಾವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಕ್ರಮಗಳನ್ನು 2020 ಮೇ 14ರ ಗುರುವಾರ ಕೈಗೊಂಡರು. ರಾಷ್ಟ್ರಪತಿ ಭವನದ ವಿಸ್ತಾರವಾದ ಆವರಣದಲ್ಲಿ ಹೂವಿನ ಅಲಂಕಾರಗಳನ್ನು ಸೀಮಿvಗೊಳಿಸಲೂ ರಾಷ್ಟ್ರಪತಿ ನಿರ್ಧರಿಸಿದ್ದಾರೆ. ಮುಂದಿನ ಒಂದು ವರ್ಷ, ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರಪತಿ ಎಸ್ಟೇಟಿನಲ್ಲಿ ಯಾವುದೇ ಹೊಸ ನಿರ್ಮಾಣ Zಟುವಟಿಕೆಗಳಿಗೂ ಅನುಮೋದನೆ ನೀಡಲಾಗುವುದಿಲ್ಲ. ಲಕ್ಷಾಂತರ ಭಾರತೀಯರು, ವಿಶೇಷವಾಗಿ ವಲಸೆ ಕಾರ್ಮಿಕರು, ಬಡ ಕುಟುಂಬಗಳು ಮತ್ತು ದೈನಂದಿನ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು - ಕೊರೋನಾ ಹರಡುವಿಕೆ ತಡೆಯಲು ವಿಧಿಸಲಾಗಿರುವ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ಸಾಧ್ಯವಾದಷ್ಟೂ ವೆಚ್ಚ ಕಡಿತ ಮಾಡಿ ಉಳಿತಾಯ ಮಾಡಲು ಗಣರಾಜ್ಯದ ಉನ್ನತ ಕಚೇರಿಯಾಗಿರುವ ರಾಷ್ಟ್ರಪತಿ ಭವನ ನಿರ್ಧರಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಉದ್ದೇಶಪೂರ್ವಕ ಸುಸ್ತಿದಾರ, ಒಂದು ಕಾಲದ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ಸಾಲದ ಹಣವನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡು ಪ್ರಕರಣ ಮುಕ್ತಾಯಗೊಳಿಸುವಂತೆ ಭಾರತ ಸರ್ಕಾರಕ್ಕೆ 2020 ಮೇ 14ರ ಗುರುವಾರ ಮರುಮನವಿ ಮಾಡಿದರು. ಇಂಗ್ಲೆಂಡಿನಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿರುವ ಮಲ್ಯ ಅವರು ಹೊಸ ಮನವಿಯನ್ನು ಭಾರತ ಸರ್ಕಾರದ ಮುಂದಿಟ್ಟರು. ಕೊರೋನಾವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಜಾರಿಗೊಳಿಸಲಾದ ರಾಷ್ಟ್ರವಾಪಿ ದಿಗ್ಬಂಧನದಿಂದ ಕಂಗೆಟ್ಟಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಭಾರತ ಸರ್ಕಾರ ಘೋಷಿಸಿರುವ ೨೦ ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಆರ್ಥಿಕ ಕೊಡುಗೆಯನ್ನು ಸ್ವಾಗತಿಸಿದ ಮಲ್ಯ ಅವರು, ತಮ್ಮ ಬಾಕಿ ಸಾಲವನ್ನು ಮರು ಪಾವತಿಗಾಗಿ ಪದೇ ಪದೇ ಮುಂದಿಟ್ಟ ಕೊಡುಗೆಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು. "ಕೋವಿಡ್-೧೯ ಪರಿಹಾರ ಕೊಡುಗೆಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ನಗದನ್ನು ಮುದ್ರಿಸಬಹುದು. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲದ ಶೇ. ೧೦೦ ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ?" ಎಂದು ಮಲ್ಯ ಪ್ರಶ್ನಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಮಂಗಳವಾರದಿಂದ ಓಡಾಟ ಆರಂಭಿಸಿರುವ ವಿಶೇಷ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸುವವರು ತಮ್ಮ ಗಮ್ಯ ವಿಳಾಸಗಳನ್ನು ಟಿಕೆಟ್ ಬುಕಿಂಗ್ ಸಮಯದಲ್ಲಿಯೇ ನೀಡುವುದು ಕಡ್ಡಾಯ ಎಂದು ರೈಲ್ವೇ ಇಲಾಖೆ ಸೂಚಿಸಿತು.. ಕೋವಿಡ್-೧೯ ಸೋಂಕು ತಗುಲಿದವರ ಪಯಣದ ಇತಿಹಾಸ ಪತ್ತೆಗೆ ಇದರಿಂದ ಅನುಕೂಲವಾಗುತ್ತದೆ ಎಂದು ರೈಲ್ವೇ ಸಚಿವಾಲಯವು 2020 ಮೇ 14ರ ಗುರುವಾರ  ಪ್ರಕಟಿಸಿತು.  ಆನ್ ಲೈನಿನಲ್ಲಿ ಟಿಕೆಟ್ ಬುಕಿಂಗ್ ಮಾಡುತ್ತಿರುವ ಭಾರತೀಯ ರೈಲ್ವೇ ಕ್ಯಾಟರಿಂಗ್ ಪ್ರವಾಸೋದ್ಯಮ ನಿಗಮವು (ಐಆರ್ಸಿಟಿಸಿ) ಟಿಕೆಟ್ ಬುಕ್ ಮಾಡುವ ಪ್ರತಿಯೊಬ್ಬ ಪ್ರಯಾಣಿಕನ ಗಮ್ಯ ವಿಳಾಸವನ್ನೂ ಗುರುತಿಸಿಕೊಳ್ಳುವುದು ಎಂದು ಸಚಿವಾಲಯ ತಿಳಿಸಿತು. ಮುಂದಕ್ಕೆ ಸಂಪರ್ಕ ಪತ್ತೆಗೆ ಬೇಕಾದಲ್ಲಿ ಇದು ನಮಗೆ ಅನುಕೂಲಕರವಾಗುವುದು ಎಂದು ಸಚಿವಾಲಯದ ವಕ್ತಾರರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  HistoryTodayಮೇ 14 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Post a Comment