ಇಂದಿನ ಇತಿಹಾಸ History
Today
ಮೇ 31
2020: ಕಠ್ಮಂಡು: ಚೀನಾ ಒತ್ತಡಕ್ಕೆ ಮಣಿದು ಭಾರತದ ಪ್ರದೇಶಗಳನ್ನು ತನ್ನ ನಕಾಶೆಗೆ ಸೇರಿಸಿಕೊಂಡಿರುವ ನೇಪಾಳ ಸರ್ಕಾರವು ಇದಕ್ಕೆ ಸಂಸತ್ತಿನ ಒಪ್ಪಿಗೆ ಪಡೆಯಲು 2020 ಮೇ 31ರ ಭಾನುವಾರ ವಿಧೇಯಕ ಮಂಡಿಸಿತು. ರಾಜಕೀಯ ಮತ್ತು ಆಡಳಿತಾತ್ಮಕ ಬಳಕೆಯ ನಕಾಶೆ ಬದಲಾವಣೆಗೆ ಸಂಬಂಧಿತ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡನೆಗೆ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಕೆಲ ದಿನಗಳ ಹಿಂದೆಯೇ ಯತ್ನಿಸಿತ್ತಾದರೂ ಪ್ರತಿಪಕ್ಷಗಳ ತೀವ್ರ ವಿರೋಧದ ಕಾರಣ ಸಾಧ್ಯವಾಗಿರಲಿಲ್ಲ. ಈಗ ಪ್ರತಿಪಕ್ಷಗಳ ನಾಯಕರ ಮನವೊಲಿಸಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಪ್ರಮುಖ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್ ವಿಧೇಯಕದ ಪರವಾಗಿ ನಿಲ್ಲುವ ಭರವಸೆ ನೀಡಿದೆ.ಭಾರತ ತನ್ನ ಗಡಿಯಲ್ಲಿ ಹೊಂದಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ನೇಪಾಳ ಈಗ ತನ್ನ ನಕಾಶೆಗೆ ಸೇರಿಸಿಕೊಂಡಿದೆ. ಈ ನಡೆಯು ಭಾರತ-ನೇಪಾಳದ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಆದರೂ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರ್ಕಾರವು ಸಂವಿಧಾನ ತಿದ್ದುಪಡಿಗೆ ಮುಂದಾಯಿತು.
No comments:
Post a Comment