ನಾನು ಮೆಚ್ಚಿದ ವಾಟ್ಸಪ್

Monday, May 25, 2020

ಇಂದಿನ ಇತಿಹಾಸ History Today ಮೇ 25

2020: ಬೀಜಿಂಗ್: ಭಾರತದ ಜೊತೆಗಿನ ಗಡಿ ಪ್ರಕ್ಷುಬ್ಧತೆ ಹೆಚ್ಚುತ್ತಿರುವುದರ ಮಧ್ಯೆಯೇ ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಾರತದಲ್ಲಿರುವ ತನ್ನ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಯೋಜಿಸಿದೆ ಎಂದು ನವದೆಹಲಿಯಲ್ಲಿನ ಚೀನೀ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯೊಂದು  2020 ªÉÄà 25gÀ ಸೋಮವಾರ ತಿಳಿಸಿತು. ರಾಯಭಾರ ಕಚೇರಿಯ ವೆಬ್ಸೈಟಿನಲ್ಲಿ ಪ್ರಕಟವಾಗಿರುವ ನೋಟಿಸ್ ಪ್ರಕಾರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ  ಚೀನೀ ವಿದ್ಯಾರ್ಥಿಗಳು, ಪ್ರವಾಸಿಗಳು ಮತ್ತು ವ್ಯವಹಾರೋದ್ಯಮಿಗಳಿಗೆ ವಿಶೇಷ ವಿಮಾನ ಮೂಲಕ ಚೀನಾಕ್ಕೆ ಮರಳಲು ಅವಕಾಶ ನೀಡಲಾಯಿತು. ಪ್ರಸ್ತುತ ಭಾರತದಲ್ಲಿ ಅಧ್ಯಯನ ಮಾಡುತಿರುವ ಅಥವಾ ವಾಸ್ತವ್ಯದಲ್ಲಿ ಇರುವ ಅಥವಾ ಕೆಲಸ ಮಾಡುತ್ತಿರುವ ಚೀನೀ ನಾಗರಿಕರ ಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಚೀನಾಕ್ಕೆ ವಾಪಸಾಗಬಯಸುವ ತನ್ನ ನಾಗರಿಕರಿಗೆ ಮೇ ೨೭ರ ಬೆಳಗಿಗಿಂತ ಮುಂಚಿತವಾಗಿ ಹೆಸರು ನೋಂದಾಯಿಸುವಂತೆ ಚೀನಾ ಸರ್ಕಾರ ಸೂಚಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ವಿಮಾನಗಳಲ್ಲಿ ಮಧ್ಯದ ಆಸನಗಳಿಗೆ ಬುಕಿಂಗ್ ಮಾಡುತ್ತಿರುವುದಕ್ಕಾಗಿ ಸುಪ್ರೀಂಕೋರ್ಟ್ 2020 ಮೇ 25ರ ಸೋಮವಾರ ಕೇಂದ್ರ ಸರ್ಕಾರ ಮತ್ತು ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿತು. ಸರ್ಕಾರವು ನಾಗರಿಕರ ಆರೋಗ್ಯದ ಬಗ್ಗೆ ಚಿಂತಿಸಬೇಕು, ವಾಣಜ್ಯ ವಿಮಾನಗಳ ಆರೋಗ್ಯದ ಬಗ್ಗೆ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರಲು ಹಾರಿಸಲಾಗುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಧ್ಯದ ಆಸನಗಳಿಗೆ ಸದ್ಯಕ್ಕೆ ಮುಂಗಡ ಬುಕಿಂಗ್ ತೆಗೆದುಕೊಳ್ಳದಂತೆ ಪೀಠವು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಆದೇಶ ನೀಡಿತು. ಇತರ ಎಲ್ಲ ಕಡೆಗಳಲ್ಲಿ ಅಡಿಗಳ ಅಂತರ ಪಾಲನೆ ಕಡ್ಡಾಯ ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಿರುವಾಗ, ವಿಮಾನಗಳಲ್ಲಿ ಸಾಮಾಜಿಕ ಅಂತರದ ನಿಯಮಗಳು ಅಗತ್ಯವಿಲ್ಲ ಎಂಬುದಾಗಿ ಸರ್ಕಾರ ಭಾವಿಸಿರುವುದು ಏಕೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ಪ್ರಶ್ನಿಸಿದರು. ಭುಜಕ್ಕೆ ಭುಜ ತಾಗುವಂತೆ ಕುಳಿತುಕೊಳ್ಳುವುದು ಅಪಾಯಕಾರಿ ಮತ್ತು ಸರ್ಕಾರವು ಸ್ವತಃ ರೂಪಿಸಿದ ನಿಯಮಗಳಿಗೆ ವಿರುದ್ಧ ಎಂದು ಪೀಠವು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರಿಗೆ ಹೇಳಿತು. ಮೆಹ್ತ ಅವರು ಡಿಜಿಸಿಎ ಪರವಾಗಿ ಹಾಜರಾಗಿದ್ದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತವು ೭೦೦೦ ಹೊಸ ಪ್ರಕರಣಗಳ ದಾಖಲಾತಿಯೊಂದಿಗೆ ಇರಾನ್ನ್ನು ಹಿಂದೆ ಹಾಕುವ ಮೂಲಕ ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿನ ಹಾಟ್ಸ್ಪಾಟ್ಗಳು ಎಂಬುದಾಗಿ ಗುರುತಿಸಲಾದ ೧೦ ರಾಷ್ಟ್ರಗಳ ಸಾಲಿಗೆ 2020 ಮೇ 25ರ ಸೋಮವಾರ ಕಾಲಿಟ್ಟಿತು. ಭಾನುವಾರ ,೯೭೭ ಹೊಸ ಪ್ರಕರಣಗಳ ಮೂಲಕ ಇತ್ತೀಚಿನ ದಿನಗಳಲ್ಲೇ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳನ್ನು ಭಾರತ ದಾಖಲಿಸಿತ್ತು. ಭಾನುವಾರ ಮತ್ತು ಸೋಮವಾರದ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ,೩೮,೫೨೬ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯದ ತಿಳಿಸಿತು. ದೇಶದಲ್ಲಿ ಕೋವಿಡ್ -೧೯ಕ್ಕೆ ಬಲಿಯಾದವರ ಸಂಖ್ಯೆ ,೦೦೦ವನ್ನು ದಾಟಿತು.  ಮಹಾರಾಷ್ಟ್ರದಲ್ಲಿ ಭಾನುವಾರ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾದವು. ರಾಜ್ಯದಲ್ಲಿ ಕೊರೋನಾಸೋಂಕಿತರ ಸಂಖ್ಯೆ ೫೦,೦೦೦ವನ್ನು ದಾಟಿತು. ಕೋವಿಡ್ ಸಾವಿನ ಸಂಖ್ಯೆಯೂ ,೬೩೫ಕ್ಕೆ ತಲುಪಿತು. ಮಹಾರಾಷ್ಟ್ರವು ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಅತ್ಯಂತ ಹೆಚ್ಚು ನಲುಗಿರುವ ರಾಜ್ಯವಾಗಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಯಾರೂ ಜೊತೆಗಾರರೂ ಇಲ್ಲದೆ ಐದು ವರ್ಷದ ಪೋರನೊಬ್ಬ 2020 ಮೇ 25ರ
ಸೋಮವಾರ  ದೆಹಲಿಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಕಾಂಗಿಯಾಗಿ ಪ್ರಯಾಣ ಮಾಡಿದ ಘಟನೆ ಘಟಿಸಿತು. ಇತರ ಹಲವು ಪ್ರಯಾಣಿಕರ ಜೊತೆಗೆ ದೆಹಲಿಯಲ್ಲಿ ವಿಮಾನವೇರಿ ಬೆಂಗಳೂರು ತಲುಪಿದ ವಿಹಾನ್ ಶರ್ಮನನ್ನು ಬೆಂಗಳೂರಿನಲ್ಲಿ ಆತನ ತಾಯಿ ಸ್ವಾಗತಿಸಿದರು. ಮೂರು ತಿಂಗಳ ಬಳಿಕ ಆಕೆಗೆ ತನ್ನ ಪುತ್ರನನ್ನು ಕಾಣಲು ಸಾಧ್ಯವಾಯಿತು. ನನ್ನ ಐದು ವರ್ಷದ ಮಗ ವಿಹಾನ್ ಶರ್ಮ್ ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಪಯಣಿಸಿದ್ದಾನೆ. ಮೂರು ತಿಂಗಳ ಬಳಿಕ ಆತ ಬೆಂಗಳೂರಿಗೆ ವಾಪಸಾಗಿದ್ದಾನೆ ಎಂದು ತಾಯಿ ಹೇಳಿದ್ದನ್ನು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿ ವರದಿ ಮಾಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)


2020: ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧ ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ೧೪ ಸಂಭಾವ್ಯ ಲಸಿಕೆಗಳ (ವ್ಯಾಕ್ಸಿನ್ ಕ್ಯಾಂಡಿಡೇಟ್ಸ್) ಪೈಕಿ ನಾಲ್ಕು ಮುಂದಿನ ಮೂರರಿಂದ ಐದು ತಿಂಗಳ ಒಳಗಾಗಿ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್  2020 ಮೇ 25ರ ಸೋಮವಾರ ತಿಳಿಸಿದರು. ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರೊಂದಿಗೆ ನಡೆದ ಆನ್ ಲೈನ್ ಸಂವಾದದಲ್ಲಿ ಮಾತನಾಡಿದ ಹರ್ಷ ವರ್ಧನ್, ಸೋಂಕು ವ್ಯಾಪಿಸುವುದನ್ನು ತಡೆಯುವ ಉದ್ದೇಶದಿಂದ ಇಡೀ ವಿಶ್ವವೇ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ. ನೂರಕ್ಕೂ ಅಧಿಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳು ಬೇರೆ ಬೇರೆ ಹಂತದಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಸಮನ್ವಯದೊಂದಿಗೆ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಗಳು ನಡೆದಿವೆ ಎಂದು ಹೇಳಿದರು. ‘ಈ ಲಸಿಕೆ ತಯಾರಿ ಪ್ರಕ್ರಿಯೆಗೆ ಭಾರತವೂ ನೆರವು ನೀಡುತ್ತಿದೆ. ೧೪ ಸಂಭಾವ್ಯ ಲಸಿಕೆಗಳನ್ನು ಭಾರತ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಇವುಗಳು ಕ್ಲಿನಿಕಲ್ ಪೂರ್ವ ಪರೀಕ್ಷಾ (ಪ್ರಿ ಕ್ಲಿನಿಕಲ್ ಟ್ರಯಲ್) ಹಂತದಲ್ಲಿವೆ ಎಂದು ಅವರು ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮೇ 25  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

No comments:

Post a Comment