ನಾನು ಮೆಚ್ಚಿದ ವಾಟ್ಸಪ್

Wednesday, May 27, 2020

ಇಂದಿನ ಇತಿಹಾಸ History Today ಮೇ 27

2020: ನವದೆಹಲಿ: ದೌಲತ್ ಬೇಗ್ ಓಲ್ಡಿ (ಡಿಬಿಒ) ವಲಯದಲ್ಲಿ ಗಡಿ ಮೂಲಸೌಕರ್ಯ ನಿರ್ಮಿಸುವುದನ್ನು ನಿಲ್ಲಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ಲಡಾಖ್ ಪೂರ್ವಭಾಗದಲ್ಲಿ ಅಕ್ರಮಣಕಾರಿ ಸಂಜ್ಞೆಗಳನ್ನು  ತೋರಿಸುತ್ತಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ (ಪಿಎಲ್) ಉತ್ತರವಾಗಿ ಭಾರತವು ತನ್ನ ಹೆಚ್ಚುವರಿ ಸೇನಾ ತುಕಡಿಗಳನ್ನು ಪೂರ್ವ ಲಡಾಖ್ ವಿಭಾಗಕ್ಕೆ ರವಾನಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಉನ್ನತ ಮಟ್ಟದ ಸಮಾಲೋಚನಾ ಸಭೆಯ ಬಳಿಕ ಡೊಕ್ಲಾಮ್ ತಂಡ ಚೀನಾದ ಜೊತೆಗೆ ವ್ಯವಹರಿಸಲು ಇದೀಗ ಸನ್ನದ್ಧವಾಗಿದೆ ಎಂದು ನಂಬಲರ್ಹ ಮೂಲಗಳು 2020 ಮೇ 27ರ ಬುಧವಾರ ತಿಳಿಸಿದವು.  ಎರಡು ಬ್ರಿಗೇಡ್ ಮತ್ತು ಇನ್ನೂ ಹೆಚ್ಚಿನ ತುಕಡಿಗಳನ್ನು ಪಿಎಲ್ ಜಮಾಯಿಸಿರುವುದು, ಅದರ ವರ್ತನೆ ಸ್ಥಳೀಯ ಸೇನಾ ಕಮಾಂಡರುಗಳಿಗೆ ಸೀಮಿತವಾದದ್ದಲ್ಲ, ಇದಕ್ಕೆ ಚೀನಾ ಸರ್ಕಾರದ ಅನುಮೋದನೆ ಇದೆ ಎಂಬುದನ್ನು ಸೂಚಿಸಿದೆ ಎಂದು ರಾಜಕೀಯ ವಲಯ ವಿಶ್ಲೇಷಿಸಿತು. ಆಸ್ಟ್ರೇಲಿಯಾದಿಂದ ಹಾಂಕಾಂಗ್, ತೈವಾನ್ವರೆಗೆ, ದಕ್ಷಿಣ ಚೀನಾ ಸಮುದ್ರದಿಂದ ಭಾರತದವರೆಗೆ ಮತ್ತು ಅಮೆರಿಕದವರೆಗೆ ಸಾಧ್ಯವಿರುವಲ್ಲೆಲ್ಲ ಎಲ್ಲ ಬೆಲೆ ತೆತ್ತು ತನ್ನ ಪ್ರಾಬಲ್ಯವನ್ನು ಮೆರೆಯಲು ಚೀನಾ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಪರಿಸ್ಥಿತಿಯ ಪರಿಶೀಲನಾ ಸಭೆಯ ಬಳಿಕ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು. ಮೂರು ವರ್ಷಗಳ ಅವಧಿಯಲ್ಲಿ ಇದೇ ಮಾದರಿಯ ಸನ್ನಿವೇಶದಲ್ಲಿ ಪ್ರಧಾನಿ ಮೋದಿಯವರು ನಡೆಸಿದ ಎರಡನೇ ವ್ಯೂಹಾತ್ಮಕ ಸಭೆ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ೨೦೧೭ರಲ್ಲಿ ೭೩ ದಿನಗಳಷ್ಟು ಕಾಲ ನಡೆದಿದ್ದ ಡೊಕ್ಲಾಮ್ ಬಿಕ್ಕಟ್ಟಿಗೆ ಭಾರತದ ಪ್ರತಿಕ್ರಿಯೆಯನ್ನು ತಂಡವೇ ರೂಪಿಸಿತ್ತು. ೨೦೧೭gಲ್ಲಿ ಜನರಲ್ ರಾವತ್ ಅವರು ಆಗಿನ ಸೇನಾ ಮುಖ್ಯಸ್ಥರಾಗಿದ್ದರೆ, ಜೈಶಂಕರ್ ಅವರು ಆಗ ಭಾರತದ ವಿದೇಶಂಗ ಕಾರ್ಯದರ್ಶಿಯಾಗಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ನೇಪಾಳದ ಭೌಗೋಳಿಕ ನಕ್ಷೆಯ ವಿವಾದಾಸ್ಪದ ಬದಲಾವಣೆ ಸಲುವಾಗಿ ತರಲು ಉದ್ದೇಶಿಸಲಾದ ಸಂವಿಧಾನ ತಿದ್ದುಪಡಿಯನ್ನು ತಡೆ ಹಿಡಿಯಲಾಗಿದೆ ಎಂದು ನಂಬಲರ್ಹ ಮೂಲಗಳು  2020 ಮೇ 27ರ ಬುಧವಾರ ವರದಿ ಮಾಡಿದವು.  ನಕ್ಷೆಯನ್ನು ಬದಲಾಯಿಸುವ ಸಲುವಾಗಿ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರು ಮುಂದಿಟ್ಟಿರುವ ಸಾಂವಿಧಾನಿಕ ತಿದ್ದುಪಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ತಡೆ ತಡೆಹಿಡಿಯಲಾಗಿದೆ ಮೂಲಗಳು ಹೇಳಿದವು. ನೇಪಾಳವು ಹೊರತಂದಿರುವ ಹೊಸ ಭೌಗೋಳಿಕ ನಕ್ಷೆಯು ಭಾರತದ ಉತ್ತರಾಖಂಡಕ್ಕೆ ಸೇರಿದ ಭೂಪ್ರದೇಶಗಳಾದ ಕಾಲಾಪಾನಿ, ಲಿಂಪಿಯಧುರಾ ಮತ್ತು ಲಿಪುಲೇಖ ಪ್ರದೇಶ ನೇಪಾಳದ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವಂತೆ ತೋರಿಸಿತ್ತು. ಭಾರತದ ವಿರುದ್ಧ ಉಗ್ರ ರಾಷ್ಟ್ರೀಯವಾದ ಭಾವನೆಗಳನ್ನು ಹುಟ್ಟುಹಾಕುವ ಮೂಲಕ ನೇಪಾಳೀ ಕಮ್ಯುನಿಸ್ಟ್ ಪಕ್ಷದ ಸರ್ಕಾರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಹಂಚಿಕೆಯಾಗಿ ಪ್ರಧಾನ ಮಂತ್ರಿ ಒಲಿ ಪ್ರಯತ್ನ ನಡೆಸಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗಿತ್ತು. ಆದರೆ ನೇಪಾಳದ ರಾಜಕೀಯ ಪಕ್ಷಗಳಲ್ಲಿ ಹೊಸ ನಕ್ಷೆಯ ಬಗ್ಗೆ ಒಮ್ಮತವನ್ನು ನಿರ್ಮಿಸಲು ಒಲಿ ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಒಲಿ ಅವರು ವೈಯಕ್ತಿಕ ಲಾಭಕ್ಕಾಗಿ ಗೂರ್ಖಾ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಪ್ರಯತ್ನಕ್ಕೆ ಒಲಿ ಕೈಹಾಕಿದ್ದಾರೆ ಎಂದು ಅನೇಕರು ಭಾವಿಸಿದ್ದಾರೆ ಎಂದು ನವದೆಹಲಿ ಮತ್ತು ಕಠ್ಮಂಡುವಿನ ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮೇ ೩೧ ಬಳಿಕ ಇನ್ನೂ ಎರಡು ವಾರಗಳವರೆಗೆ ಕೆಲವು ವಿಧದ ದಿಗ್ಬಂಧನವನ್ನು (ಲಾಕ್ಡೌನ್) ವಿಸ್ತರಿಸುವ ಸಾಧ್ಯತೆಯಿದೆ. ಆದರೆ ಇನ್ನಷ್ಟು ಹೆಚ್ಚಿನ ಸಡಿಲಿಕೆಗಳು ಇರುವ ಸಂಭವವಿದೆ. ಸರ್ಕಾರದ ಉನ್ನತ ಮೂಲವೊಂದು ಮುಂದಿನ ಹಂತವನ್ನು "ಲಾಕ್ಡೌನ್ ಸ್ಫೂರ್ತಿಯುತ ವಿಸ್ತರಣೆ" ಎಂದು ವಿವರಿಸಿದೆ ಮತ್ತು ಹೆಚ್ಚಿನ ಅವಧಿಯಲ್ಲಿ ಗಮನವು ಶೇಕಡಾ ೭೦ರಷ್ಟು ಕೋವಿಡ್ ಪ್ರಕರಣಗಳು ಇರುವ ೧೧ ನಗರಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿರುತ್ತದೆ ಎಂದು 2020 ಮೇ 27ರ ಬುಧವಾರ ಹೇಳಿತು. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಅಹಮದಾಬಾದ್ ಮತ್ತು ಕೋಲ್ಕತ-   ಆರು ಪ್ರಮುಖ ಮೆಟ್ರೋ ನಗರಗಳು ಮತ್ತು ಪುಣೆ, ಥಾಣೆ, ಜೈಪುರ, ಸೂರತ್ ಮತ್ತು ಇಂದೋರ್ ೧೧ ನಗರಗಳಲ್ಲಿ ಸೇರಿವೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ . ಲಕ್ಷ ದಾಟಿದ್ದು, ಕಳೆದ ೧೪ ದಿನಗಳಲ್ಲಿ ದ್ವಿಗುಣಗೊಂಡು ೧೫೧,೭೬೭ ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ. ಭಾರತದಲ್ಲಿ ಕೋವಿಡ್ -೧೯ ಸಾವಿನ ಸಂಖ್ಯೆ ಕಳೆದ ಹದಿನಾರು ದಿನಗಳಲ್ಲಿ ದ್ವಿಗುಣಗೊಂಡು ,೩೩೭ ಕ್ಕೆ ತಲುಪಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತ ಮತ್ತು ಚೀನಾ ನಡುವಣ ಉದ್ವಿಗ್ನ ಗಡಿ ವಿವಾದವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಮೇ 27ರ ಬುಧವಾರ ಹೇಳಿದರು.  ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಪದೇ ಪದೇ ಪ್ರಸ್ತಾಪಿಸಿದ್ದ ಟ್ರಂಪ್ ಈಗ ಟ್ವೀಟ್ ಮೂಲಕ ಭಾರತ- ಚೀನಾ ಮಧ್ಯೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಮಾಡಿದರು. ತಮ್ಮ ಪ್ರಸ್ತಾಪವನ್ನು ಭಾರತ ಮತ್ತು ಚೀನಾಕ್ಕೆ ತಿಳಿಸಲಾಗಿದೆ ಎಂದು ಟ್ರಂಪ್ ನುಡಿದರು. "ನಾವು ಭಾರತ ಮತ್ತು ಚೀನಾ ಎರಡಕ್ಕೂ ಮಾಹಿತಿ ನೀಡಿದ್ದೇವೆ, ಉಲ್ಬಣಗೊಂಡಿರುವ ಗಡಿ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಿದೆ, ಇಚ್ಛಿಸಿದೆ ಮತ್ತು ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯವನ್ನೂ ಹೊಂದಿದೆ, ಧನ್ಯವಾದಗಳು ಎಂದು ಟ್ರಂಪ್ ಟ್ವೀಟ್ ಮಾಡಿದರು. ಟ್ರಂಪ್ ಇಂಗಿತಕ್ಕೆ ಭಾರತೀಯ ಅಧಿಕಾರಿಗಳಿಂದ ತತ್ಕ್ಷಣದ  ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪ್ರಸ್ತಾಪವನ್ನು ಟ್ರಂಪ್ ಅವರು ಔಪಚಾರಿಕವಾಗಿ ಭಾರತಕ್ಕೆ ತಿಳಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ತಿಂಗಳ ಆರಂಭದಲ್ಲಿ ಸಂಭವಿಸಿದ ಹಿಂಸಾತ್ಮಕ ಘರ್ಷಣೆಗಳಲ್ಲಿ ಉಭಯ ಕಡೆಗಳ ಸೈನಿಕರು ಗಾಯಗೊಂಡ ಬಳಿಕ  ಲಡಾಕ್ ವಲಯದಲ್ಲಿ ಸಹಸ್ರಾರು ಮಂದಿ ಭಾರತೀಯ ಮತ್ತು ಚೀನೀ ಸೈನಿಕರು ನೇgವಾಗಿ  ಮುಖಾಮುಖಿಯಾಗಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತದಾದ್ಯಂತ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬೩೮೭ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ೧೭೦ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2020 ಮೇ 27ರ ಬುಧವಾರ  ತಿಳಿಸಿತು. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ,೫೧,೭೬೭ಕ್ಕೆ ಏರಿಕೆಯಾಗಿದೆ. ೮೩,೦೦೪ ಸಕ್ರಿಯ ಪ್ರಕರಣಗಳಿದ್ದು, ೬೪,೪೨೫ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ,೩೩೭ ಜನ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಕೋವಿಡ್-೧೯ರಿಂದ ಅತಿಹೆಚ್ಚು ಸಂಕಷ್ಟಕ್ಕೀಡಾಗಿರುವ ಮಹಾರಾಷ್ಟ್ರದಲ್ಲಿ ಈವರೆಗೆ ೫೪,೭೫೮ ಮಂದಿಗೆ ಸೋಂಕು ತಗುಲಿದೆ. ,೭೯೨ ಸೋಂಕಿತರು ಮೃvರಾಗಿದ್ದಾರೆ. ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ೧೭,೭೨೮ಕ್ಕೆ ಏರಿಕೆಯಾಗಿದ್ದರೆ ಗುಜರಾತಿನಲ್ಲಿ ೧೪,೮೨೧, ದೆಹಲಿಯಲ್ಲಿ ೧೪,೪೬೫ ಕ್ಕೆ ತಲುಪಿತು. ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಪ್ರತಿದಿನ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜಾಗತಿಕವಾಗಿ ಅತಿ ಹೆಚ್ಚು ಸೋಂಕಿತರಿರುವ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ  HistoryTodayಮೇ 27  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment