ನಾನು ಮೆಚ್ಚಿದ ವಾಟ್ಸಪ್

Tuesday, May 19, 2020

ಇಂದಿನ ಇತಿಹಾಸ History Today ಮೇ 19

2020: ನವದೆಹಲಿ:  ದೇಶದಲ್ಲಿ ಕೋವಿಡ್ -೧೯ ವಿರುದ್ಧದ ಯುದ್ಧವನ್ನು ಮುನ್ನಡೆಸುತ್ತಿರುವ ಆರೋಗ್ಯ ಸಚಿವ ಹರ್ಷ ವರ್ಧನ್  ಅವರು  ಮುಂದಿನ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್) ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಲು ಭಾರತದ ನಾಮನಿರ್ದೇಶಿತರಾಗಲಿದ್ದಾರೆ ಎಂದು ನಂಬಲರ್ಹ ಮೂಲಗಳು 2020  ಮೇ 19ರ ಮಂಗಳವಾರ ತಿಳಿಸಿದವು. ಮೇ ೨೨ ರಂದು ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಆರೋಗ್ಯ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚುನಾವಣೆಯು ಕಾರ್ಯವಿಧಾನದ  ಔಪಚಾರಿಕತೆ ಮಾತ್ರವಾಗಿದೆ."ಇದು ಪೂರ್ಣಾವಧಿಯ  ಹುದ್ದೆ ಅಲ್ಲ ... ಆದರೆ ಕಾರ್ಯನಿರ್ವಾಹಕ ಮಂಡಳಿಯ ದ್ವೆ-ವಾರ್ಷಿಕ ಸಭೆಗಳ ಅಧ್ಯಕ್ಷತೆಯನ್ನು ವಹಿಸಲು ಡಾ. ಹರ್ಷ ವರ್ಧನ್  ಇರಬೇಕಾಗುತ್ತದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರುವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಗುಂಪು ಕಳೆದ ವರ್ಷ  ಭಾರತವನ್ನು  2020 ಮೇ ತಿಂಗಳಿನಿಂದ ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಾಹಕ ಮಂಡಳಿಗೆ ಆಯ್ಕೆ ಮಾಡಲು  ಸರ್ವಾನುಮತದಿಂದ ನಿರ್ಧರಿಸಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಬೀಜಿಂಗ್ ಮೂಲದ ವಿಶ್ವವಿದ್ಯಾಲಯದ ವಿಶೇಷ ಸಂಶೋಧನಾ ತಂಡವೊಂದು ತಾನು ಕೋವಿಡ್-೧೯ ರೋಗಿಗ ಚೇತರಿಕೆಯ ಅವಧಿಯನ್ನು ಕಡಿಮೆಗೊಳಿಸುವ ಔಷಧವನ್ನು ಅಭಿವೃದ್ಧಿ ಪಡಿಸುತ್ತಿರುವುದಾಗಿ ಪ್ರಕಟಿಸಿದ್ದು, ಔಷಧವು ರೋಗಿಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು  2020 ಮೇ 19ರ ಮಂಗಳವಾರ ಹೇಳಿತು.  ಬೀಜಿಂಗ್‌ನ ಪ್ರತಿಷ್ಠಿತ ಪೆಕಿಂಗ್ ವಿಶ್ವ ವಿದ್ಯಾಲಯದ ಬೀಜಿಂಗ್ ಅತ್ಯಾಧುನಿಕ ಜೆನೋಮಿಕ್ಸ್ (ತಳಿ ನಕ್ಷೆ) ಸಂಶೋಧನಾ ಕೇಂದ್ರವು ಪ್ರಾಣಿಗಳ ಮೇಲೆ ಔಷಧವನ್ನು ಯಶಸ್ವಿಯಾಗಿ ಪ್ರಯೋಗಿಸಿದೆ ಎಂದು ಹೇಳಿತು. ಸನ್ನಿ ಕ್ಷೀ ನೇತೃತ್ವದ ಜಂಟಿ ಸಂಶೋಧನಾ ತಂಡವೊಂದು ಉಸಿರಾಟದ ತೊಂದರೆಗೆ ಕಾರಣವಾಗುವ ಕೋವಿಡ್ -೧೯ಕ್ಕೆ ಕಾರಣವಾಗುವ ಕೊರೋನಾವೈರಸ್ -ಸಾರ್ಸ್-ಕೋವ್- ವೈgಸ್ ವಿರುದ್ಧ ಪ್ಲಾಸ್ಮಾದಿಂದ ಸಿಂಗಲ್ -ಸೆಲ್ -ಸೀಕ್ವೆನ್ಸಿಂಗ್ ಮೂಲಕ ಪ್ರತಿಕಾಯಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ ಎಂದು ಪೆಕಿಂಗ್ ವಿಶ್ವ ವಿದ್ಯಾಲಯವು ಹೇಳಿಕೆಯೊಂದರಲ್ಲಿ ಪ್ರಕಟಿಸಿತು.  ಆನ್ ಲೈನ್ ಮೆಡಿಕಲ್ ಜರ್ನಲ್ ಸೆಲ್‌ನಲ್ಲಿ ಸಂಶೋಧನೆಯನ್ನು ಪ್ರಕಟಿಸಲಾಗಿದ್ದು, ವೈರಾಣುಗಳನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ರೋಗಕ್ಕೆ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮವಾಗಿ ಬಳಸುವ ಔಷಧಗಳಲ್ಲಿ ಉಪಯೋಗಿಸಿಕೊಳ್ಳಬಹುದು ಎಂದು ಹೇಳಿಕೆ ತಿಳಿಸಿತು. ಚಳಿಗಾಲದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಪುನಃ ಕಾಣಿಸಿಕೊಂqರೆ, ವೇಳೆಗೆ ನಮ್ಮ ತಟಸ್ಥಗೊಳಿಸುವ ಪ್ರತಿಕಾಯಗಳು ಲಭ್ಯವಿರಬಹುದು ಎಂದು ಕ್ಷೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಜಿನೇವಾ/ ನವದೆಹಲಿ: ಹಲವು ರಾಷ್ರಗಳಿಂದ, ನಿರ್ದಿಷ್ಟವಾಗಿ ಅಮೆರಿಕದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ಸಂಬಂಧಿತ ಸ್ಪಂದನೆ ಮತ್ತು ಕಾರ್ಯವೈಖರಿ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ವಿಶ್ವ ಆರೋಗ್ಯ ಅಧಿವೇಶನವು  2020 ಮೇ 19ರ ಮಂಗಳವಾರ ಒಪ್ಪಿಗೆ ನೀಡಿತು.  ಕೋವಿಡ್-೧೯ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಕ್ರಮಗಳು ಮತ್ತು ಅವುಗಳ ಸಮಯ ಸೂಚಿಗಳ ಬಗ್ಗೆ ತನಿಖೆಯೂ ಸೇರಿದಂತೆ ಕೊರೋನಾ ಬಿಕ್ಕಟ್ಟಿನ ಕುರಿತ ಅಂತಾರಾಷ್ಟ್ರೀಯ ಸ್ಪಂದನೆಯ ಬಗ್ಗೆ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನ ನಡೆಸಬೇಕು ಎಂದು ಮಹಾ ಅಧಿವೇಶನವು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧನೊಮ್ ಅವರಿಗೆ ಸೂಚಿಸಿತು.  ಪ್ರಾಥಮಿಕವಾಗಿ ಐರೋಪ್ಯ ಒಕ್ಕೂಟವು ಸಿದ್ಧ ಪಡಿಸಿದ ನಿರ್ಣಯವನ್ನು ೧೩೦ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲಿಸಿವೆ. ಕೋವಿಡ್ ೧೯ರ ಮೂಲದ ತನಿಖೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದ ಚೀನೀ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರು ಸೋಮವಾರ ಸಮಗ್ರ ತನಿಖೆಯನ್ನು ಚೀನಾ ಬೆಂಬಲಿಸುವುದು ಎಂದು ಒತ್ತಿ ಹೇಳಿದ್ದರು. ಆದರೆ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡದ್ದಲ್ಲದೆ, ಲಕ್ಷಾಂತರ ಮಂದಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ರೋಗದ ಬಗ್ಗೆ ತನಿಖೆ ನಡೆಯಬೇಕೆಂಬ ಜಾಗತಿಕ ಒತ್ತಡ ತೀವ್ರಗೊಂಡ ಬಳಿಕವಷ್ಟೇ ಕ್ಷಿ ಅವರಿಂದ ಮಾತು ಬಂದಿತ್ತು. .  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿಶ್ವಸಂಸ್ಥೆಯ ಅಧ್ಯಕ್ಷ ಟೆಡ್ರೋಸ್ ಆಧನೊಮ್ ಅವರು ಚೀನಾ ಹೇಳಿದಂತೆ ಕುಣಿಯುತ್ತಿದ್ದಾರೆ ಮತ್ತು ಕೋವಿಡ್ -೧೯ ಸಾಂಕ್ರಾಮಿಕದ ಆರಂಭದ ಹಂತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ದುರುಪಯೋಗ ಮಾಡಿದ್ದಾರೆ ಎಂದು ಆಪಾದಿಸಿ ಖಡಕ್ ಪತ್ರ ಬರೆದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವ ಬೆದರಿಕೆ ಹಾಕಿದರು. ‘ಸಾಂಕ್ರಾಮಿಕಕ್ಕೆ ಸ್ಪಂದಿಸುವಲ್ಲಿನ ನಿಮ್ಮ ಮತ್ತು ನಿಮ್ಮ ಸಂಸ್ಥೆಯ ಪುರಾವರ್ತಿತ ತಪ್ಪು ಹೆಜ್ಜೆಗಳು ವಿಶ್ವಕ್ಕೆ ಅತ್ಯಂತ ತುಟ್ಟಿಯಾಗಿ ಪರಿಣಮಿಸಿವೆ. ಚೀನಾದಿಂದ ಮುಕ್ತಗೊಂಡು ಸ್ವಾತಂತ್ರ್ಯ ಪ್ರದರ್ಶನ ಮಾಡುವುದು ಮಾತ್ರವೇ ವಿಶ್ವ ಆರೋಗ್ಯ ಸಂಸ್ಥೆಯ ಮುಂದಿರುವ ಏಕೈಕ ದಾರಿ ಎಂದು ಟ್ರಂಪ್ ಅವರು ಪತ್ರದಲ್ಲಿ ತಿಳಿಸಿದರು. ಕಳೆದ ಡಿಸೆಂಬರಿನಿಂದ ಪ್ರತಿಯೊಂದು ಸಂದರ್ಭದಲ್ಲೂ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಬಳಿ ಇದ್ದ ಮಾಹಿತಿಗೆ ಅನುಗುಣವಾಗಿ ಕಾರ್ಯ ಎಸಗಿಲ್ಲ. ತಪ್ಪು ಪ್ರತಿಪಾದನೆಗಳನ್ನು ಮಾಡುತ್ತಾ ಅಥವಾ ವಿಶ್ವಕ್ಕೆ ಕೆಟ್ಟ ಸಲಹೆಗಳನ್ನೂ ನೀಡುತ್ತಾ ಕಾಲ ತಳ್ಳಿತು ಎಂದು ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಟ್ರಂಪ್ ಆಪಾದಿಸಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020:  ನವದೆಹಲಿ: ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಸಲುವಾಗಿ ಓಡಿಸಲಾಗುತ್ತಿರುವ ಶ್ರಮಿಕ ರೈಲುಗಳ ಓಡಾಟಕ್ಕೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು  ರೂಪಿಸಿರುವ ಗೃಹ ಸಚಿವಾಲಯವು ರೈಲು ಪ್ರವೇಶಕ್ಕೆ ಸಂಬಂಧಪಟ್ಟ ರಾಜ್ಯದ ಒಪ್ಪಿಗೆ ಅಗತ್ಯ ಎಂಬ ನಿಯಮವನ್ನು 2020 ಮೇ 19ರ ಮಂಗಳವಾರ ರದ್ದು ಪಡಿಸಿತು. ಕೋವಿಡ್ ದಿಗ್ಬಂಧನದ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಕರೆದೊಯ್ಯುವ ಸಲುವಾಗಿ ರೂಪಿಸಿದ ನಿಯಮಾವಳಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು, ’ಶ್ರಮಿಕ ರೈಲುಗಳ ಸಂಚಾರಕ್ಕೆ ರೈಲ್ವೇ ಇಲಾಖೆಯು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಅನುಮತಿ ನೀಡಬಹುದು ಎಂದು ತಿಳಿಸಿತು.  ಮೇ ೨ರಂದು ಹೊರಡಿಸಲಾಗಿದ್ದ ಅಧಿಸೂಚನೆಯ ಪ್ರಕಾರ ಶ್ರಮಿಕ ವಿಶೇಷ ರೈಲುಗಳ ಓಡಾಟಕ್ಕೆ ಸಂಬಂಧಪಟ್ಟ ರಾಜ್ಯಗಳ ಒಪ್ಪಿಗೆ ಪಡೆಯಲಾಗುವುದು ಎಂದು ರೈಲ್ವೇ ಸಚಿವಾಲಯವು ತಿಳಿಸಿತ್ತು. ’ಸಿಕ್ಕಿಹಾಕಿಕೊಂಡ ವ್ಯಕ್ತಿಗಳ ಸಮೂಹವು ಒಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದಕ್ಕೆ ರೈಲಿನ ಮೂಲಕ ಹೋಗಬೇಕಿದ್ದರೆ, ಕಳುಹಿಸುವ ಮತ್ತು ತಲುಪಬೇಕಾಗಿರುವ ಎರಡೂ ರಾಜ್ಯಗಳ ಪರಸ್ಪರ ಒಪ್ಪಿಗೆ ಅಗತ್ಯ ಎಂದು ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆ ತಿಳಿಸಿತ್ತು.  ತಲುಪಬೇಕಾಗಿರುವ ರಾಜ್ಯಗಳ ಒಪ್ಪಿಗೆಯನ್ನು  ವ್ಯಕ್ತಿಗಳು ಹೊರಡಬೇಕಾಗಿರುವ ರಾಜ್ಯಗಳು ಪಡೆದುಕೊಳ್ಳಬೇಕು ಮತ್ತು ಅಂತಹ ಒಪ್ಪಿಗೆಯ ಪತ್ರವನ್ನು ರೈಲು ಹೊರಡುವುದಕ್ಕೆ ಮುನ್ನ ರೈಲ್ವೇ ಅಧಿಕಾರಿಗಳಿಗೆ ತಲುಪಿಸಬೇಕು ಎಂದು ಅಧಿಸೂಚನೆ ಹೇಳಿತ್ತು. .  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸೋಂಕಿನ ಪ್ರಕರಣಗಳು ,೦೦,೦೦೦ ದಾಟುವ ಮೂಲಕ ಕೊರೋನಾಸೋಂಕು ತಟ್ಟಿದ ವಿಶ್ವದ ಟಾಪ್ ೧೧ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದ್ದರೂ, ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿಯೇ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರ 2020 ಮೇ 19ರ ಮಂಗಳವಾರ ಇಲ್ಲಿ ಹೇಳಿತು. ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ, ವಿಶ್ವ ಕಂಡ ಅತ್ಯಂತ ಕೆಟ್ಟ ಬಿಕ್ಕಟ್ಟಿನ ಮಧ್ಯೆ, ಭಾರತದಲ್ಲಿ ಸಾಂಕ್ರಾಮಿಕದಿಂದ ಗುಣಮುಖರಾಗಿ ಚೇತರಿಸುತ್ತಿರುವವರ ಸಂಖ್ಯೆ  ಆರೋಗ್ಯಕರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಉಲ್ಲೇಖಿಸಿತು. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ,೩೫೦ ಮಂದಿ ಕೋವಿಡ್-೧೯ ರೋಗಿಗಳು ಗುಣಮುಖರಾಗಿದ್ದು ಚೇತರಿಸಿದವರ ಸಂಖ್ಯೆ ೪೦,೦೦೦ದ ಸಮೀಪಕ್ಕೆ ಬಂದಿದೆ ಎಂದು  ಸಚಿವಾಲಯ ಹೇಳಿದೆ. ‘ಈವರೆಗೆ ೩೯,೧೭೪ ರೋಗಿಗಳು ಕೋವಿಡ್-೧೯ ಸೋಂಕಿನಿಂದ ಗುಣಮುಖರಾಗಿದ್ದಾರೆ.  ಅಂದರೆ ಚೇತರಿಕೆ ಪ್ರಮಾಣ ಶೇಕಡಾ ೩೮.೭೩ಕ್ಕೆ ಏರಿದೆ. ಚೇತರಿಕೆ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಲೇ ಇದೆ ಎಂದು ಸಚಿವಾಲಯ ಹೇಳಿತು.  ದೇಶದಲ್ಲಿ ಪ್ರಸ್ತುತ ೫೮,೮೦೨ ಸಕ್ರಿಯ ಸೋಂಕಿನ ಪ್ರಕರಣಗಳಿವೆ. ಎಲ್ಲ ಪ್ರಕರಣಗಳೂ ಸಕ್ರಿಯ ವೈದ್ಯಕೀಯ ನಿಗಾದಲ್ಲಿ ಇರುವ ಪ್ರಕರಣಗಳಾಗಿದ್ದು, ಪೈಕಿ ಶೇಕಡಾ .೯ರಷ್ಟು ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. .  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
  
ಇಂದಿನ ಇತಿಹಾಸ  HistoryTodayಮೇ 19  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment