2020: ನವದೆಹಲಿ: ಬಿರುಗಾಳಿ ಸಹಿತವಾದ ಧಾರಾಕಾರ ಮಳೆಯೊಂದಿಗೆ ಅಂಫಾನ್ ಚಂಡಮಾರುತ 2020 ಮೇ 20ರ
ಬುಧವಾರ ಪಶ್ಚಿಮ ಬಂಗಾಳ
ಮತ್ತು ಒಡಿಶಾದಲ್ಲಿ ರೌದ್ರಾವತಾರ ತಾಳಿ ಭಾರೀ ಪ್ರಮಾಣದ ಹಾನಿಯನ್ನು ಉಂಟು ಮಾಡಿತು. ಇದರ ಮಧ್ಯೆಯೇ ಒಡಿಶಾದ ರಾಜಧಾನಿ ಭುವನೇಶ್ವರದಿಂದ ಕೆಲವು ಚಿತ್ರಗಳು 2020
ಮೇ 21ರ ಗುರುವಾರ ವೈರಲ್
ಆದವು. ನಗರದ ಮೂಲಕ
ಚಂಡಮಾರುತವು ಹಾದುಹೋದ ನಂತರ
ಒಡಿಶಾದಲ್ಲಿ ಆಕಾಶವು ನೇರಳೆ-ಗುಲಾಬಿ ಬಣ್ಣಕ್ಕೆ ತಿರುಗಿರುವುದನ್ನು ಈ ಚಿತ್ರಗಳು ತೋರಿಸಿದವು. ‘ಅತ್ಯಂತ ಭೀಕರ ಸಮಯ
ಕೂಡಾ ಮಾನವ ಚೈತನ್ಯವನ್ನು ಪುಡಿಗಟ್ಟಲು ಸಾಧ್ಯವಿಲ್ಲ’ ಎಂಬಿತ್ಯಾದಿ ಸ್ಫೂರ್ತಿದಾಯಕ ಟಿಪ್ಪಣಿಗಳೊಂದಿಗೆ ಹಲವಾರು ಮಂದಿ ಈ ಚಿತ್ರಗಳನ್ನು ಟ್ವೀಟ್ ಮಾಡಿ ಹಂಚಿಕೊಂಡರು. "ನನ್ನ
ನಗರವು ಎಷ್ಟು ಬಿರುಗಾಳಿಮಯವಾಗಿದ್ದರೂ, ನಾವು ಅನುಗ್ರಹದೊಂದಿಗೆ ಅರಳಬಲ್ಲೆವು ಎಂಬುದಕ್ಕೆ ಈ ವರ್ಣರಂಜಿತ ಆಕಾಶ ಉದಾಹರಣೆಯಾಗಿದೆ. ಎಂತಹ
ಸುಂದರವಾದ ಸಂಜೆಯ ಆಕಾಶ!’
ಎಂದು ಟ್ವಿಟ್ಟರ್ ಬಳಕೆದಾರೊಬ್ಬರು ಆಗಸದ ವರ್ಣಮಯ ನೋಟದ
ಚಿತ್ರವನ್ನು ಹಂಚಿಕೊಳ್ಳುತ್ತಾ ಬರೆದರು. ಇತರ ಹಲವರು ಕೂಡಾ
ನಗರದ ವಿವಿಧ ಪ್ರದೇಶಗಳಿಂದ ಚಿತ್ರಗಳನ್ನು ಹಂಚಿಕೊಂಡರು ಮತ್ತು
ಪ್ರಕೃತಿಯ ಸಹಜ ಸೌಂದರ್ಯದ ಚಿತ್ರಗಳನ್ನು ತೆರೆದಿಟ್ಟರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಕೋಲ್ಕತ/ ಭುವನೇಶ್ವರ: ಭಾರತದಲ್ಲಿ ಪಶ್ಚಿಮ ಬಂಗಾಳ ಮತ್ತು
ಒಡಿಶಾ ಹಾಗೂ ನೆರೆಯ
ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಅಂಫಾನ್ ಚಂಡ ಮಾರುತವು ಪಶ್ಚಿಮ ಬಂಗಾಳದಲ್ಲಿ ತನ್ನ ರುದ್ರ
ನರ್ತನವನ್ನು ತೋರಿಸಿ, ೭೨ ಮಂದಿಯನ್ನು ಬಲಿ
ತೆಗೆದುಕೊಂಡಿದೆ. ಮರಗಳು, ವಿದ್ಯುತ್, ಟೆಲಿಫೋನ್ ಕಂಬಗಳು ಉರುಳಿದ್ದು, ಹಲವಾರು ಮನೆಗಳು ಕುಸಿದಿವೆ, ಬೆಳೆದು ನಿಂತ ಫಸಲು
ಕೂಡಾ ನಷ್ಟವಾಗಿದೆ. ಚಂಡಮಾರುತಕ್ಕೆ ಬಲಿಯಾಗಿರುವ ೭೨ ಮಂದಿಯ ಪೈಕಿ
ಬಹುತೇಕರು ವಿದ್ಯುತ್ ತಾಗಿ,
ಮರಗಳ ಅಡಿಗೆ ಸಿಲುಕಿ ಇಲ್ಲವೇ ಮನೆಗಳು ಕುಸಿದ
ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು
2020 ಮೇ 21ರ ಗುರುವಾರ ಹೇಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ
ಬ್ಯಾನರ್ಜಿ ಅವರು ಮೃತ
ಕುಟುಂಬಗಳಿಗೆ ತಲಾ ೨.೫ ಲಕ್ಷ
ರೂಪಾಯಿ ಪರಿಹಾರ ಘೋಷಿಸಿದರು. ಈ ಮಧ್ಯೆ
ಚಂಡಮಾರುತದಿಂದ ತೊಂದರೆಗೆ ಒಳಗಾದ
ರಾಜ್ಯಗಳಿಗೆ ಸರ್ವ ನೆರವು
ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು
ಪ್ರಕಟಿಸಿದ್ದಾರೆ. ಚಂಡಮಾರುತದಿಂದ ಆಗಿರುವ ಹಾನಿಯ ಅಂದಾಜು ಮಾಡುವ
ಸಲುವಾಗಿ ಒಡಿಶಾ ಮತ್ತು
ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಿಶೇಷ ತಂಡಗಳನ್ನು ರಚಿಸುತ್ತಿದೆ. ಈ ಪ್ರತ್ಯೇಕ ವಿಶೇಷ
ತಂಡಗಳು ಉಪಕಾರ್ಯದರ್ಶಿ ಅಥವಾ
ಅವರಿಗಿಂತ ಉನ್ನತ
ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ರಚನೆಯಾಗುತ್ತಿದ್ದು ವಿವಿಧ ಸಚಿವಾಲಯಗಳ ಡಜನ್ ಅಧಿಕಾರಿಗಳನ್ನು ಹೊಂದಿರುತ್ತದೆ. ತಂಡಗಳು ಗುರುವಾರ ಸಂಜೆ
ಅಥವಾ ಶುಕ್ರವಾರದ ವೇಳೆಗೆ ಸಂತ್ರಸ್ಥ ರಾಜ್ಯಗಳಿಗೆ ತಲುಪಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮುಂದಿನವಾರ ಆರಂಭವಾಗಲಿರುವ ದೇಶೀ
ವಿಮಾನಯಾನಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗಾಗಿ ಹೊಸ ವಿಮಾನಯಾನ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ 2020 ಮೇ 21 ಗುರುವಾರ ಬಿಡುಗಡೆ ಮಾಡಿದ್ದು ಮೂರನೇ ಒಂದರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ
ನೀಡಲಾಗುವುದು ತಿಳಿಸಿತು.
ಪ್ರಯಾಣಿಕರು ವಿಮಾನದ ಒಳಕ್ಕೇ ಒಯ್ಯಬಹುದಾದ ಒಂದು ಬ್ಯಾಗನ್ನು ಮಾತ್ರವೇ ಒಯ್ಯಬಹುದು. ಗರ್ಭಿಣಿಯರು ಮತ್ತು ಅಸ್ವಸ್ಥ ಪ್ರಯಾಣಿಕರು ವಿಮಾನಯಾನ ಮಾಡುವುದು ಬೇಡ
ಎಂದು ಮಾರ್ಗಸೂಚಿ ತಿಳಿಸಿತು. ವಿಮಾನಯಾನ ದರಗಳನ್ನು ಸರ್ಕಾರ ನಿಗದಿ ಪಡಿಸಲಿದೆ ಎಂದು ನಾಗರಿಕ ವಿಮಾನಯಾನದ ಮಾರ್ಗಸೂಚಿ ಹೇಳಿತು. ವಿಮಾನಯಾನ ಸಂಸ್ಥೆಗಳು ಕೋವಿಡ್ ೧೯ ಸಾಂಕ್ರಾಮಿಕದ ಅವಧಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ನಿಗದಿ ಪಡಿಸುವ ದರಗಳಿಗೆ ಬದ್ಧವಾಗಿರಬೇಕು ಎಂದು ಸಚಿವಾಲಯ ಹೇಳಿತು. ಭಾರತವು ಮೇ ೨೫ರಿಂದ ದೇಶೀ ವಿಮಾನಯಾನಗಳನ್ನು ಪುನಾರಂಭ ಮಾಡಲಿದೆ ಎಂದು ಸರ್ಕಾರ ಬುಧವಾರ ಪ್ರಕಟಿಸಿತ್ತು. ಹಿರಿಯರು, ಗರ್ಭಿಣಿಯರು, ಆರೋಗ್ಯ ಸಮಸ್ಯೆಗಳು ಇರುವವರು ಪ್ರಯಾಣ ಮಾಡದಿರುವಂತೆ ಸಲಹೆ ಮಾಡಲಾಗಿದೆ. ಕಂಟೈನ್ ಮೆಂಟ್ ವಲಯದಲ್ಲಿ ವಾಸವಾಗಿರುವ ಪ್ರಯಾಣಿಕರಿಗೆ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದಿಲ್ಲ. ಕೋವಿಡ್ -೧೯ ಸೋಂಕಿನ ಪಾಸಿಟಿವ್ ವರದಿ ಬಂದರೆ ಅಂತಹವರು ಪ್ರಯಾಣ ಮಾಡುವಂತಿಲ್ಲ ಎಂದು
ಮಾರ್ಗಸೂಚಿ ಹೇಳಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು 2020 ಮೇ 21ರ ಗುರುವಾರ ೧.೧ ಲಕ್ಷವನ್ನು ದಾಟಿದವು. ಕಳೆದ
೨೪ ಗಂಟೆಗಳ ಅವಧಿಯಲ್ಲಿ ೫,೬೦೯ ಹೊಸ
ಪ್ರಕರಣಗಳು ದಾಖಲಾದವು.
ಇದು
ದೇಶದಲ್ಲಿ ಒಂದೇ ದಿನದಲ್ಲಿ ದಾಖಲಾದ ಎರಡನೇ ಅತಿ
ಹೆಚ್ಚಿನ ಸೋಂಕು ಪ್ರಕರಣಗಳ ಸಂಖ್ಯೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ
ಸಂಖ್ಯೆಗಳ ಪ್ರಕಾರ ರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ೧,೧೨,೩೫೯ಕ್ಕೆ ಏರಿದೆ. ಈ ಪೈಕಿ
೪೫,೨೯೯ ಮಂದಿ
ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೬೩,೬೨೪. ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ರಾಷ್ಟ್ರಗಳು ವಿಶ್ವಾದ್ಯಂತ ಕ್ರಮೇಣ ತೆರವುಗೊಳಿಸುತ್ತಿವೆ. ಜಗತ್ತಿನಾದ್ಯಂತ ೩ ಲಕ್ಷ ಜನರ
ಸಾವು ಮತ್ತು ೫೦ ಲಕ್ಷ ಸೋಂಕಿನ ಪ್ರಕರಣಗಳ ದಾಖಲಾತಿಯೊಂದಿಗೆ ಕೋವಿಡ್ ೧೯ ಇನ್ನೂ ತನ್ನ
ರುದ್ರ ನರ್ತನವನ್ನು ಮುಂದುವರೆಸಿದೆ ಸೋಂಕಿತ ೫೦ ಲಕ್ಷ
ಮಂದಿಯ ಪೈಕಿ ೨೦ ಲಕ್ಷ ಮಂದಿ
ಗುಣಮುಖರಾಗುವುದರೊಂದಿಗೆ ಜಾಗತಿಕ ಚೇತರಿಕೆ ಪ್ರಮಾಣ ಶೇಕಡಾ ೪೦ರ
ಸಮೀಪಕ್ಕೆ ಬಂದಿದೆ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯಲು ಹೇರಲಾದ ಹಲವಾರು ವಾರಗಳ
ಲಾಕ್ ಡೌನ್ ಬಳಿಕ
ಇದೀಗ ರಾಷ್ಟ್ರವನ್ನು ಸಹಜ
ಸ್ಥಿತಿಗೆ ಒಯ್ಯಲು ಇದೀಗ
ಸಕಾಲ ಎಂದು 2020
ಮೇ 21ರ ಗುರುವಾರ ಇಲ್ಲಿ ನುಡಿದ
ರೈಲ್ವೇ ಸಚಿವ ಪೀಯೂಷ್ ಗೋಯಲ್, ಶೀಘ್ರದಲ್ಲೇ ಇನ್ನಷ್ಟು ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಹೇಳಿದರು. ‘ಇನ್ನಷ್ಟು ರೈಲುಗಳ ಸಂಚಾರ ಪುನಾರಂಭವನ್ನು ಪ್ರಕಟಿಸಲಾಗುವುದು. ಇದು ಭಾರತವನ್ನು ಸಹಜ ಸ್ಥಿತಿಯತ್ತ ಒಯ್ಯುವ ಕಾಲ’ ಎಂದು ಪೀಯೂಷ್ ಗೋಯಲ್ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ
ತಿಳಿಸಿತು. ಸಂಬಂಧಿತ ಬೆಳವಣಿಗೆಯೊಂದರಲ್ಲಿ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರುಗಳಲ್ಲಿ ಬುಕಿಂಗುಗಳು ಶೀಘ್ರ ಆರಂಭವಾಗಲಿವೆ ಎಂದು ಸಚಿವರು ನುಡಿದರು. ‘ಬುಕಿಂಗ್‌ಗಳು ಕೂಡಾ ನಿಲ್ದಾಣಗಳ ಟಿಕೆಟ್ ಕೌಂಟರುಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಆರಂಭವಾಗಲಿವೆ. ನಾವು
ಅಧ್ಯಯನಗಳನ್ನು ಮಾಡುತ್ತಿದ್ದು ಶಿಷ್ಟಾಚಾರಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದು
ಸಚಿವರು ಹೇಳಿದರು. ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುವಲ್ಲಿ ನೀಡಿದ ಸಹಕಾರಕ್ಕಾಗಿ ಉತ್ತರ
ಪ್ರದೇಶದ ಮುಖ್ಯಮಂತ್ರಿ ಯೋಗಿ
ಆದಿತ್ಯನಾಥ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ರೈಲ್ವೇ ಸಚಿವರು ಶ್ಲಾಘಿಸಿದರು ಮತ್ತು ಅಸಹಕಾರಕ್ಕಾಗಿ ಪಶ್ಚಿಮ ಬಂಗಾಳ ಮತ್ತು
ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಟೀಕಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment