ನಾನು ಮೆಚ್ಚಿದ ವಾಟ್ಸಪ್

Monday, May 4, 2020

ಇಂದಿನ ಇತಿಹಾಸ History Today ಮೇ 04

2020:  ನವದೆಹಲಿ: ಭಾರತದ ಅವಿಭಾಜ್ಯ  ಅಂಗವಾಗಿರುವ ಜಮ್ಮು- ಕಾಶ್ಮೀರ ಕೆಲ ಪ್ರದೇಶಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ಅಲ್ಲಿ ಚುನಾವಣೆ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನದ ಯತ್ನಗಳನ್ನು ವಿರೋಧಿಸಿರುವ ಭಾರತ, ತಿಕ್ರಮಿಸಿಕೊಂಡಿರುವ ಪ್ರದೇಶಗಳಿಂದ  ತತ್ ಕ್ಷಣವೇ ತೊಲಗುವಂತೆ ಪಾಕಿಸ್ತಾನಕ್ಕೆ  2020 ಮೇ 04 ಸೋಮವಾರ ಸೂಚಿಸಿತು. ಗಿಲ್ಗಿಟ್-ಬಾಲ್ಟಿಸ್ಥಾನದಲ್ಲಿ  ಚುನಾವಣೆ ನಡೆಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ಇತ್ತೀಚೆಗೆ ಆದೇಶ ನೀಡಿತ್ತು. ೨೦೧೮ರಲ್ಲಿ ನೀಡಲಾಗಿದ್ದ ಆದೇಶಕ್ಕೆ ತಿದ್ದುಪಡಿ ಮಾಡಿ ಸುಪ್ರೀಂಕೋರ್ಟ್ ಹೊಸ  ಆದೇಶ ನೀಡಿತ್ತು.ಪಾಕ್ ಸುಪ್ರೀಂಕೋರ್ಟಿನ  ಹೊಸ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಭಾರತ, ಕೂಡಲೇ  ಅತಿಕ್ರಮಿತ ಪ್ರದೇಶಗಳಿಂದ ವಾಪಸ್ ತೆರಳುವಂತೆ ಸೂಚನೆ ನೀಡಿದೆ. ಗಿಲ್ಗಿಟ್-ಬಾಲ್ಟಿಸ್ತಾನ ಸೇರಿದಂತೆ ಇಡೀ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಪಾಕಿಸ್ತಾನಕ್ಕೆ ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿತು. ‘ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ  ಅಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಕುರಿತು ಆಕ್ಷೇಪ ವ್ಯಕ್ತಪಡಿಸಲಾಗಿದೆಎಂದೂ ಸಚಿವಾಲಯ ತಿಳಿಸಿತು.ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ. ಹೀಗಾಗಿ ಪ್ರದೇಶಗಳ ಮೇಲೆ ಪಾಕಿಸ್ತಾನಕ್ಕಾಗಲೀ ದೇಶದ ಸುಪ್ರೀಂ ಕೋರ್ಟಿಗಾಗಲೇ ಯಾವುದೇ ಹಕ್ಕಿಲ್ಲ ಎಂದು ಸಚಿವಾಲಯ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ಕೊರೊನಾ ವೈರಸ್ಸಿನ ಉಗಮ ಸ್ಥಳ ವುಹಾನ್ ನಗರದ ವನ್ಯಜೀವಿ  ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್ನನ್ ನಗರದ ವೈರಾಣು ಪ್ರಯೋಗಾಲಯ ( ಲ್ಯಾಬೋರೇಟರಿ) ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮುಂದಿಟ್ಟಿರುವ ವಾದವನ್ನು ಅಮೆರಿಕದ ಕಾರ್ಯದರ್ಶಿ ಮೈಕ್ ಪಾಂಪಿಯೊ ಬೆಂಬಲಿಸಿದ್ದಾರೆ. ಮಧ್ಯೆ ತನ್ನ ವಿರುದ್ಧದ  ಆಪಾದನೆಗಳನ್ನೂ ಅಲ್ಲಗಳೆದಿರುವ  ಚೀನಾ ತನ್ನ ಹಾಗೂ ಅಮೆರಿಕದ ವರ್ತನೆಗಳನ್ನು ಹೋಲಿಕೆ ಮಾಡಿ ವಿಡಿಯೋ ಒಂದನ್ನು ಬಿಡುಗಡೆ ಮಾಡುವ ಮೂಲಕ  ಎದಿರೇಟು ನೀಡಿದೆ. ಅಮೆರಿಕದ ಕೇಂದ್ರ ಗುಪ್ತದಳದ ಮಾಜಿ ಮುಖ್ಯಸ್ಥರು, ಚೀನಾದೊಂದಿಗೆ ನಡೆಯುತ್ತಿದ್ದ ವ್ಯವಹಾರಗಳ ಮುಂಚೂಣಿ  ಅಧಿಕಾರಿಗಳ ಪೈಕಿ ಪ್ರಮುಖರೂ ಆಗಿರುವ ಪಾಂಪಿಯೊ ಅಮೆರಿಕದಎಬಿಸಿಸುದ್ದಿ ವಾಹಿನಿ ನಡೆಸಿದ್ದದಿಸ್ ವೀಕ್ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕೊರೊನಾ ವೈರಸ್ ಬಂದಿರುವುದು ಚೀನಾದ ವುಹಾನ್ ನಗರದ  ಪ್ರಯೋಗಾಲಯದಿಂದ ಎಂದು ಹೇಳಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ,’ ಎಂದು ಪಾಂಪಿಯೊ ಹೇಳಿದ್ದಾರೆ. ಆದರೆ, ‘ವೈರಸ್ಸನ್ನು ಜೈವಿಕವಾಗಿ ಮಾರ್ಪಾಡು ಮಾಡಿರುವ ಬಗ್ಗೆ ಸಾಕ್ಷ್ಯಗಳಿಲ್ಲ,’ ಎಂಬುದಾಗಿ  ಗುಪ್ತದಳ ನೀಡಿರುವ ಮಾಹಿತಿಯನ್ನು ಅವರು ಒಪ್ಪಿಕೊಂಡರು. ‘ವೈರಸ್ ಹೇಗೆ ಹುಟ್ಟಿತು  ಎಂಬ ಬಗೆಗಿನ  ವರದಿಗಳನ್ನು ಪರಿಶೀಲಿಸಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಅವುಗಳನ್ನು ವರ್ಗೀಕರಿಸಿದ್ದಾರೆ. ಕೊರೊನಾ ವೈರಸ್ಸಿನಿಂದ  ಸೋಂಕು ತಗುಲಿದ್ದ  ಪ್ರಾಣಿಯೊಂದನ್ನು ಪ್ರಯೋಗಾಲಯದಲ್ಲಿ ನಾಶ ಮಾಡಲಾಗಿದೆ. ವೇಳೆ ಆಕಸ್ಮಿಕವಾಗಿ ಅಲ್ಲಿದ್ದ ಹಲವರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕೊರೊನಾ ವೈರಸ್ ಹೇಗೆ ಹರಡಿತು ಎಂಬುದರ ಬಗೆಗಿನ ಹಲವು ಸಿದ್ಧಾಂತಗಳಲ್ಲಿ ಇದೂ ಒಂದು. ಇದನ್ನು ಮತ್ತಷ್ಟು ಅಧ್ಯಯನ ಮಾಡಬೇಕಾಗಿದೆ,’ ಎಂದು ಪಾಂಪಿಯೊ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ:  ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ  ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಲು ಫೇಸ್ ಬುಕ್ ಮುಂದೆ  ಬಂದ ಬೆನ್ನಲ್ಲೇ  ವಿಶ್ವದ  ಇನ್ನೊಂದು ದಿಗ್ಗಜ ಕಂಪೆನಿ ಸಿಲ್ವರ ಲೇಕ್  ಜಿಯೋದಲ್ಲಿ ಹಣ ಹೂಡಲು ಮುಂದೆ ಬಂದಿದೆ ಎಂದು 2020 ಮೇ  04ರ ಸೋಮವಾರ  ರಿಲಯನ್ಸ್  ಇಂಡಸ್ಟ್ರೀಸ್  ಲಿಮಿಟೆಡ್ (ಆರ್ ಐ ಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ.  ಖಾಸಗಿ ಹೂಡಿಕೆ ನಿರ್ವಹಣಾ ಕಂಪೆನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ.೧ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು ೭೫೦ ಮಿಲಿಯನ್ ಡಾಲರ್, ಅಂದರೆ ಸುಮಾರು ,೬೫೫.೭೫ ಕೋಟಿ ರೂ ಮೊತ್ತವಾಗುತ್ತದೆ. ಒಪ್ಪಂದದ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, ‘ಸಿಲ್ವರ್ ಲೇಕಿನಿಂದ  ಜಿಯೋಗೆ ಹೂಡಿಕೆಯಾಗಿರುವುದು ಉತ್ತಮ ಬೆಳವಣಿಗೆ. ಭಾರತೀಯ ಡಿಜಿಟಲ್ ವ್ಯವಸ್ಥೆಗೆ ಪುಷ್ಟಿ ನೀಡಲು ಇದು ಸಹಕಾರಿಯಾಗಲಿದೆ. ಅಲ್ಲದೆ, ಇದರಿಂದ  ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮತ್ತಷ್ಟು ಮುಂಚೂಣಿಗೆ  ಸಾಗಲಿದೆ’ ಎಂದು ಹೇಳಿದರು. ಫೇಸ್ ಬುಕ್ ಈಗಾಗಲೇ ಜಿಯೋದಲ್ಲಿ ಶೇ..೯೯ ರಷ್ಟು ಷೇರು ಖರೀದಿ ಮಾಡಿದೆ. ಮೂಲಕ ರಿಲಯನ್ಸ್ ಜಿಯೋ ಕಂಪೆನಿಗೆ . ಬಿಲಿಯನ್ ಡಾಲರ್ ಹಣ ಹೂಡಿಕೆಯ ರೂಪದಲ್ಲಿ ಹರಿದು ಬಂದಿತ್ತು. ಇದೀಗ ಸಿಲ್ವರ್ ಲೇಕಿನಿಂದ  ೭೫೦ ಮಿಲಿಯನ್ ಡಾಲರ್ ಹಣ ಹೂಡಿಕೆಯಾಗಿದ್ದು, ಒಪ್ಪಂದದಿಂದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮೌಲ್ಯ ಸುಮಾರು ೬೫ ಬಿಲಿಯನ್ ಡಾಲರಿಷ್ಟು ಆಗಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ  History Today ಮೇ 04  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment