2020: ನವದೆಹಲಿ: ಸಣ್ಣ ಹಾಗೂ ಮಧ್ಯಮ ಉದ್ಯಮಗಳು (ಎಸ್ಎಂಇ) ಸೇರಿದಂತೆ ವ್ಯವಹಾರಗಳಿಗೆ ಸರ್ಕಾgವು
೩ ಲಕ್ಷ ಕೋಟಿ ರೂಪಾಯಿಗಳ ಮೇಲಾಧಾರ ರಹಿತ (ಪೂರಕ ಖಾತರಿ ರಹಿತ) ಸ್ವಯಂಚಾಲಿತ ಸಾಲವನ್ನು ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮೇ 13ರ ಬುಧವಾರ ಇಲ್ಲಿ ಪ್ರಕಟಿಸಿದರು. ಕೊರೋನಾವೈರಸ್ ಹಾವಳಿ ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನದಿಂದ (ಲಾಕ್ ಡೌನ್) ಉದ್ಭವಿಸಿದ ಆರ್ಥಿಕ ಹಿನ್ನಡೆ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ ೨೦
ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪರಿಹಾರ ಕೊಡುಗೆಯ ವಿವರಗಳನ್ನು ನಿರ್ಮಲಾ ಸೀತಾರಾಮನ್ ಅವರು ಹಂಚಿಕೊಂಡರು. ಆರ್ಥಿಕ ಕೊಡುಗೆಯನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಈದಿನ ಕಂತು ೧೪ ವಿಭಿನ್ನ ಕ್ರಮಗಳನ್ನು ಹೊಂದಿದೆ ಎಂದು ವಿತ್ತ ಸಚಿವರು ನುಡಿದರು. ಪ್ರಸ್ತುತ ಕಂತಿನ ೧೪
ಕ್ರಮಗಳ ಪೈಕಿ ೬ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು (ಎಂಎಸ್ಎಂಇ)ಗಳಿಗೆ, ೨ ನೌಕರರ ಭವಿಷ್ಯನಿಧಿ ಸಂಸ್ಥೆಗೆ (ಇಪಿಎಫ್ಒ), ಎರಡು ಎನ್ಬಿಎಫ್ಸಿ ಮತ್ತು ಮ್ಯೂಚುವಲ್ ಫಂಡ್ಗಳಿಗೆ ಮತ್ತು ತಲಾ ಒಂದು ಡಿಸ್ಕಾಮ್ಗಳು, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಮತ್ತು ತೆರಿಗೆ ಕ್ರಮಗಳಿಗೆ ಎಂದು ನಿರ್ಮಲಾ ಹೇಳಿದರು. "ಈ ಸಾಲವು ೪ ವರ್ಷಗಳ ಅವದಿಯದ್ದು ಮತ್ತು ಶೇಕಡಾ ೧೦೦ ರಷ್ಟು ಖಾತರಿಯಾದುದು. ಇದು ೨೦೨೦ ರ ಅಕ್ಟೋಬರ್ ೨೧ ರವರೆಗೆ ಇರುತ್ತದೆ. ಇದು ೪೫ ಲಕ್ಷ ಘಟಕಗಳಿಗೆ ಪ್ರಯೋಜಕಾರಿಯಾಗಲಿದೆ ಮತ್ತು ಅವುಗಳಿಗೆ ಚಟುವಟಿಕೆಯ ಪುನಾರಂಭs ಮತ್ತು ಉದ್ಯೋಗ ರಕ್ಷಣೆ ನಿಟ್ಟಿನಲ್ಲಿ ಈ ಘಟಕಗಳಿಗೆ ನೆರವಾಗಲಿವೆ ಎಂದು ಸಚಿವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶೀ ಅಭಿಯಾನಕ್ಕೆ ಕರೆ ನೀಡಿದ ಬೆನ್ನಲ್ಲೇ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಗಡಿ ಭದ್ರತಾ ಪಡೆಗಳಂತಹ (ಬಿಎಸ್ಎಫ್) ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕ್ಯಾಂಟೀನ್ಗಳು ಜೂನ್ ೧ರಿಂದ ೧೦ ಲಕ್ಷ ಸಿಬ್ಬಂದಿಯ ಸುಮಾರು ೫೦ ಲಕ್ಷ ಕುಟುಂಬ ಸದಸ್ಯರಿಗೆ ದೇಶೀ ಉತ್ಪನ್ನಗಳನ್ನು ಮಾತ್ರವೇ ಮಾರಾಟ ಮಾಡಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020 ಮೇ 13ರ ಬುಧವಾರ ಘೋಷಿಸಿದರು. ಹಿಂದಿಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬನೆ ಸಲುವಾಗಿ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಹಾಕುವಂತೆ ಮನವಿ ಮಾಡಿದ್ದನ್ನು ಅನುಸರಿಸಿ ಗೃಹ ವ್ಯವಹಾರಗಳ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು. ದೇಶದಲ್ಲೇ ನಿರ್ಮಿಸಲಾದ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಮತ್ತು ಇದೇ ವೇಳೆಯಲ್ಲಿ ಇತರರನ್ನೂ ಸ್ವದೇಶೀ ನಿರ್ಮಿತ ವಸ್ತುಗಳನ್ನು ಬಳಸುವಂತೆ ಪ್ರೋತ್ಸಾಹಿಸಲು ಶಾ ರಾಷ್ಟ್ರದ ಪ್ರಜೆಗಳಿಗೆ ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಮಹಾ ಬಿಕ್ಕಟ್ಟಿನಲ್ಲಿ ಸಿಲುಕಿ ವಿಲ ವಿಲ ಒಡ್ಡಾಡುತ್ತಿರುವ ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಉತ್ತೇಜಕ ಆರ್ಥಿಕ ಕೊಡುಗೆಗಳ ಘೋಷಣೆ ಸಹಿತವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಪ್ರಧಾನಿ ನರೇಂದ್ರ ಮೋದಿಯವರೂ 2020 ಮೇ 12ರ ಮಂಗಳವಾರ ೨೦
ಲಕ್ಷ ಕೋಟಿ ರೂಪಾಯಿಗಳ ’ಮಹಾ ಕೊಡುಗೆ’ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರು ಪ್ರಕಟಿಸಿದ ಕೊಡುಗೆ ಕಡಿಮೆ ಮೊತ್ತದ್ದಲ್ಲ. ಇದು ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. ೧೦ ರಷ್ಟು ಪ್ರಮಾಣದ್ದಾಗಿದೆ. ಈ ಮೊತ್ತ ಪಾಕಿಸ್ತಾನದ ಮುಂಗಡಪತ್ರದ ಗಾತ್ರಕ್ಕೆ ಸಮವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಪ್ಯಾಕೇಜ್ ಘೋಷಿಸಿದ ದೇಶಗಳು ಅತ್ಯಂತ ವಿರಳ. ಜಿಡಿಪಿಯ ಭಾಗದ ಆಧಾರದಲ್ಲಿ ಭಾರತ ಘೋಷಿಸಿದ ಕೊಡುಗೆ ವಿಶ್ವದಲ್ಲಿ ೩ನೇ ಗರಿಷ್ಠ ಮೊತ್ತ ಎನಿಸಿದೆ. ಮೊದಲೆರಡು ಸ್ಥಾಗಳು ಜಪಾನ್ ಮತ್ತು ಅಮೆರಿಕಕ್ಕೆ ಹೋಗುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದರು. ಜಪಾನ್ ಸರ್ಕಾರ ತನ್ನ ಜಿಡಿಪಿಯ ಶೇ.
೨೧ ರಷ್ಟು ಪ್ರಮಾಣದ ಮೊತ್ತವನ್ನು ಉತ್ತೇಜಕ ಕೊಡುಗೆಯಾಗಿ ಘೋಷಿಸಿದೆ. ಅಮೆರಿಕ ಸರ್ಕಾರ ಕೂಡ ಜಿಡಿಪಿಯ ಶೇ. ೧೩ರಷ್ಟು ಪ್ರಮಾಣದ ಹಣವನ್ನು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಕಟಿಸಿದೆ. ಇದು ಬಿಟ್ಟರೆ ಬೇರೆ ಯಾವ ದೇಶಗಳೂ ಕೂಡ ಭಾರತದಕ್ಕಿಂತ ಹೆಚ್ಚು ಮೊತ್ತದ ಉತ್ತೇಜಕ ಕೊಡುಗೆಯನ್ನು ಈವರೆಗೂ ಘೋಷಿಸಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ ೨೦
ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಕೊಡುಗೆಯ ವಿವರಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ಮೇ 13ರ ಬುಧವಾರ ಬಹಿರಂಗಗೊಳಿಸಿದರು. "ಮೂಲಭೂತವಾಗಿ, ಇದು ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು. ಅದಕ್ಕಾಗಿಯೇ ಇದನ್ನು ’ಆತ್ಮ ನಿರ್ಭರ ಭಾರತ’ (ಸ್ವಾವಲಂಬಿ ಭಾರತ) ಅಭಿಯಾನ ಎಂಬುದಾಗಿ ಕರೆಯಲಾಗುತ್ತಿದೆ’ ಎಂದು ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ಈ ಕೊಡುಗೆಯು ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಚಾಲಿತ ವ್ಯವಸ್ಥೆಗಳು, ಜನಸಂಖ್ಯೆ ಮತ್ತು ಬೇಡಿಕೆ ಈ ಐದು ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿದೆ. ಹಾಗೆಯೇ ಉತ್ಪಾದನೆ, ಭೂಮಿ, ಕಾರ್ಮಿಕ, ದ್ರವ್ಯತೆ ಮತ್ತು ಕಾನೂನು ಎಂದು ಗುರುತಿಸಬಹುದಾದ ಅಂಶಗಳತ್ತ ಗಮನ ಹರಿಸಿದೆ’ ಎಂದು ಸಚಿವೆ ನುಡಿದರು. ತಾವು ಮಾಡುತ್ತಿರುವ ಪ್ರಕಟಣೆಗಳು ಪ್ರಧಾನಿ ಮೋದಿಯವರ ದೃಷ್ಟಿಗೆ ಅನುಗುಣವಾಗಿದೆ ಎಂದು ಹಣಕಾಸು ಸಚಿವೆ ಹೇಳಿದರು. ‘ಪ್ರಧಾನ ಮಂತ್ರಿಯವರು ಭಾರತವನ್ನು ಪ್ರತ್ಯೇಕಿತ ಭಾರತ ಎಂಬುದಾಗಿ ಆರ್ಥೈಸಿಲ್ಲ, ಆತ್ಮ ವಿಶ್ವಾಸದ ಭಾರತ ಎಂಬುದಾಗಿ ಹೇಳಿದ್ದಾರೆ’ ಎಂದ ಸೀತಾರಾಮನ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ರೈಲ್ವೇ ಸುರಕ್ಷತಾ ಪಡೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ಹರಡಿದ ಪರಿಣಾಮವಾಗಿ ಕೇಂದ್ರ ದೆಹಲಿಯಲ್ಲಿನ ಭಾರತೀಯ ರೈಲ್ವೇ ಕೇಂದ್ರ ಕಚೇರಿಯನ್ನು 2020 ಮೇ 13ರ ಬುಧವಾರ ಎರಡು ದಿನಗಳ ಅವಧಿಗಾಗಿ ಮುಚ್ಚಲಾಯಿತು. ಅಸ್ವಸ್ಥ ನೌಕರ ರೈಲ್ವೇ ಭವನದ ೪ನೇ ಮಹಡಿಯಲ್ಲಿರುವ ರೈಲ್ವೇ ಸುರಕ್ಷತಾ ಪಡೆಯ (ಆರ್ ಪಿಎಫ್) ಮಹಾ ನಿರ್ದೇಶಕ ಅರುಣ್ ಕುಮಾರ್ ಅವರ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸಮಾಡುತ್ತಿದ್ದು, ಆತನನ್ನು ಮೇ ೬ರಿಂದ ಕ್ವಾರಂಟೈನಿನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ನುಡಿದರು. ಬುಧವಾರ ಹೊರಡಿಸಲಾಗಿರುವ ಆದೇಶದಂತೆ ರೈಲ್ವೇ ಮಂಡಳಿ ಇರುವ ಕಟ್ಟಡವನ್ನು ಎಲ್ಲ ಕೊಠಡಿಗಳ ಸ್ವಚ್ಚತೆ ಸಲುವಾಗಿ ಮೇ ೧೪ ಮತ್ತು ೧೫ರಂದು ಮುಚ್ಚಲಾಗುವುದು ಎಂದು ತಿಳಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment