ನಾನು ಮೆಚ್ಚಿದ ವಾಟ್ಸಪ್

Wednesday, October 30, 2019

ಇಂದಿನ ಇತಿಹಾಸ History Today ಅಕ್ಟೋಬರ್ 30

2019: ನ್ಯೂಯಾರ್ಕ್:  ಹೊಸ ಸಂಶೋಧನೆಗಳ ಪ್ರಕಾರ, ಏರುತ್ತಿರುವ ಸಮುದ್ರಗಳು ೨೦೫೦ ವೇಳೆಗೆ ಮುಂಬೈ ಸೇರಿದಂತೆ ವಿಶ್ವದ ಕೆಲವು ದೊಡ್ಡ ಕರಾವಳಿ ನಗರಗಳನ್ನು ಆಪೋಶನ ತೆಗೆದುಕೊಂಡು ಹಿಂದೆ ಯೋಚಿಸಿದ್ದುದಕ್ಕಿಂತ ಮೂರು ಪಟ್ಟು ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಎಚ್ಚರಿಕೆ ನೀಡಿತು. ನಿಯತಕಾಲಿಕ ಒಂದರಲ್ಲಿ 2019 ಅಕ್ಟೋಬರ್ 29ರ ಮಂಗಳವಾರ ಪ್ರಕಟವಾದ ಸಂಶೋಧನಾ ಪ್ರಬಂಧದ ಲೇಖಕರು ಹಿಂದಿನ ಕಲ್ಪಿತ ಅಂಕಿಸಂಖ್ಯೆಗಳ ಬದಲಿಗೆ ಉಪಗ್ರಹ ಮಾಹಿತಿಯನ್ನು ಆಧರಿಸಿ ಭೂ ಎತ್ತರವನ್ನು ಲೆಕ್ಕಾಚಾರ ಮಾಡುವ ಹೆಚ್ಚು ನಿಖರವಾದ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದು, ವಿಶಾಲ ಪ್ರದೇಶಗಳಲ್ಲಿ ಸಮುದ್ರ ಮಟ್ಟಏರಿಕೆಯ ಪರಿಣಾಮಗಳನ್ನು ಅಂದಾಜು ಮಾಡುವ ಪ್ರಮಾಣಿತ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ವರದಿ ಹೇಳಿತು. ಹೊಸ ಸಂಶೋಧನೆಯ ಪ್ರಕಾರ ಸುಮಾರು ೧೫೦ ಮಿಲಿಯನ್ (೧೫ ಕೋಟಿ) ಜನರು ಈಗ ವಾಸಿಸುತ್ತಿರುವ ಭೂಪ್ರದೇಶವು ಪ್ರಸ್ತುತ ಶತಮಾನದ ಮಧ್ಯಾವಧಿಯ ವೇಳೆಗೆ ಹೆಚ್ಚಿನ ಉಬ್ಬರವಿಳಿತದ ರೇಖೆಗಿಂತ ಕೆಳಗಿರುತ್ತದೆ. ಅಂದರೆ ಅಷ್ಟೂ ಮಂದಿ ನೀರಿನಡಿ ಮುಳುಗಡೆಯಾಗುವ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ವರದಿ ಹೇಳಿತು.  ದಕ್ಷಿಣ ವಿಯೆಟ್ನಾಂ ಸಂಪೂರ್ಣ ಕಣ್ಮರೆ: ವಿಯೆಟ್ನಾಂನಲ್ಲಿ ಸುಮಾರು ೨೦ ದಶಲಕ್ಷಕ್ಕೂ ( ಕೋಟಿ) ಹೆಚ್ಚು ಜನರು, ಅಂದರೆ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ಮುಳುಗಡೆ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.  ನ್ಯೂಜೆರ್ಸಿ ಮೂಲದಕ್ಲೈಮೇಟ್ ಸೆಂಟ್ರಲ್ ಎಂಬ ವಿಜ್ಞಾನ ಸಂಸ್ಥೆಯನೇಚರ್ ಕಮ್ಯುನಿಕೇಷನ್ಸ್ ಜರ್ನಲ್ ಪ್ರಕಟಿಸಿರುವ ಸಂಶೋಧನೆಯ ಪ್ರಕಾರ, ವಿಯೆಟ್ನಾಮಿನ ಆರ್ಥಿಕ ಕೇಂದ್ರವಾದ ಹೋ ಚಿ ಮಿನ್ಹ್ ನಗರ ಬಹುಪಾಲು ಕಣ್ಮರೆಯಾಗುತ್ತದೆ. ಭವಿಷ್ಯದ ಜನಸಂಖ್ಯೆಯ ಬೆಳವಣಿಗೆ ಅಥವಾ ಕರಾವಳಿ ಸವೆತಕ್ಕೆ ಕಳೆದುಹೋಗುವ ಭೂಮಿಯ ವಿವರಗಳನ್ನು ವರದಿ ನೀಡಿಲ್ಲ.ಉಪಗ್ರಹಗಳನ್ನು ಬಳಸುವ ಪ್ರಮಾಣಿತ ಎತ್ತರದ ಮಾಪನಗಳು ನಿಜವಾದ ನೆಲದ ಮಟ್ಟವನ್ನು ಮರಗಳು ಅಥವಾ ಕಟ್ಟಡಗಳ ಮೇಲ್ಭಾಗದಿಂದ ಪ್ರತ್ಯೇಕಿಸಲು ಹೆಣಗಾಡುತ್ತವೆ ಕಾರಣಕ್ಕಾಗಿ ತಾವು ಮತ್ತು ಕ್ಲೈಮೇಟ್ ಸೆಂಟ್ರಲ್  ಮುಖ್ಯಕಾರ್ಯನಿರ್ವಾಹಕ ಬೆಂಜಮಿನ್ ಸ್ಟ್ರಾಸ್ಕೃತಕ ಲೆಕ್ಕಾಚಾರದ ತಪ್ಪಿನ ಪ್ರಮಾಣವನ್ನು ನಿರ್ಧರಿಸಲು ಮತ್ತು ಅದನ್ನು ಸರಿಪಡಿಸಲು  ಬುದ್ಧಿಮತ್ತೆಯನ್ನು ಬಳಸಿರುವುದಾಗಿ ಎಂದು ಹವಾಮಾನ ಕೇಂದ್ರದ ಸಂಶೋಧಕ ಮತ್ತು ಸಂಶೋಧನಾ ಪ್ರಬಂಧದ ಲೇಖಕರಲ್ಲಿ ಒಬ್ಬರಾದ ಸ್ಕಾಟ್ . ಕುಲ್ಪ್ ಹೇಳಿದರು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2019: ಜೈಪುರ: ೨೦೧೭ರಲ್ಲಿ ಹತ್ಯೆಯ ಸಲುವಾಗಿ ಗೋವುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಗುಂಪು ಹಲ್ಲೆಗೆ ಗುರಿಯಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದ ಪೆಹ್ಲುಖಾನ್, ಅವರ ಇಬ್ಬರು ಪುತ್ರರು ಮತ್ತು ಟ್ರಕ್ ಚಾಲಕನ ವಿರುದ್ಧ ದಾಖಲಿಸಲಾಗಿದ್ದ ಜಾನುವಾರು ಕಳ್ಳಸಾಗಣೆ ಪ್ರಕರಣವನ್ನು ರಾಜಸ್ಥಾನ ಹೈಕೋರ್ಟ್  2019 ಕ್ಟೋಬರ್ 30ರ  ಬುಧವಾರ ರದ್ದು ಪಡಿಸಿತು. ನ್ಯಾಯಮೂರ್ತಿ ಪಂಕಜ್ ಭಂಡಾರಿ ಅವರ ಏಕಸದಸ್ಯ ಪೀಠವು ಹತ್ಯೆಯ ಸಲುವಾಗಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ಹೇಳಿ ರಾಜಸ್ಥಾನ ಗೋಜಾತಿಯ ಪ್ರಾಣಿಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ನಾಲ್ವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿತು. ಟ್ರಕ್ ಚಾಲಕ ಖಾನ್ ಮೊಹಮ್ಮದ್ ಮತ್ತು ಪೆಹ್ಲುಖಾನ್ ಅವರ ಇಬ್ಬರು ಪುತ್ರರು ರಾಜಸ್ಥಾನ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2019: ಮುಂಬೈ: ಮಹಾರಾಷ್ಟ್ರದ ಪಕ್ಷ ಶಾಸಕಾಗ ನಾಯಕರಾಗಿ ದೇವೇಂದ್ರ ಫಡ್ನವಿಸ್ ಅವರನ್ನು ಪುನರಾಯ್ಕೆ ಮಾಡುವುದರೊಂದಿಗೆ 2019 ಅಕ್ಟೊಬರ್ 30ರ ಬುಧವಾರ ಭಾರತೀಯ ಜನತಾ ಪಕ್ಷವು ಸರ್ಕಾರ ರಚನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಫಡ್ನವಿಸ್ ಅವರು ಶಿವಸೇನೆ ಜೊತೆಗೆ - ದಿನಗಳಲ್ಲಿ ಮಾತುಕತೆ ಪೂರ್ಣಗೊಳಿಸುವುದಾಗಿ ಪ್ರಕಟಿಸಿದರು. ಬಿಜೆಪಿಯ ಎಲ್ಲ ೧೦೫ ಮಂದಿ ಶಾಸಕರೂ ದಕ್ಷಿಣ ಮುಂಬೈಯ ವಿಧಾನಭವನದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದರು. ಕೇಂದ್ರ ಸಚಿವ ನರೇಂದ್ರ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ ರೈ ಖನ್ನಾ ಅವರು ಕೇಂದ್ರ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಮೇಲೆ ವಿಶ್ವಾಸ ಇಟ್ಟದ್ದಕ್ಕಾಗಿ ಮತ್ತು ರಾಜ್ಯದ ಸೇವೆ ಸಲ್ಲಿಸಲು ಇನ್ನೊಂದು ಅವಕಾಶ ನೀಡಿದ್ದಕ್ಕಾಗಿ ಫಡ್ನವಿಸ್ ಅವರು ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೂ ಸಂದರ್ಭದಲ್ಲಿ ಫಡ್ನವಿಸ್ ಧನ್ಯವಾದ ಸಲ್ಲಿಸಿದರು. ಮಹಾರಾಷ್ಟ್ರದಲ್ಲಿ ಜನಾದೇಶ ಲಭಿಸಿರುವುದುಮಹಾ ಮೈತ್ರಿಗೆ, ಆದ್ದರಿಂದ ಎರಡು-ಮೂರು ದಿನಗಳಲ್ಲಿ ಶಿವಸೇನೆಯ ಜೊತೆಗೆ ಮಾತುಕತೆ ಪೂರ್ಣಗೊಳಿಸಲಾಗುವುದು ಎಂದು ಅವರು ನುಡಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಫಡ್ನವಿಸ್ ಹೆಸರನ್ನು ಸೂಚಿಸಿದರು. ಪಕ್ಷದ ಹಿರಿಯ ನಾಯಕ ಸುಧೀರ್ ಮುಗಂತಿವಾರ್, ಹರಿಬಾಬು ಬಗಡೆ, ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮಂಗಲೋರಾಭಟ್  ಲೋಧಾ ಅವರು ಅದನ್ನು ಅನುಮೋದಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2019: ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಜೊತೆಗೆ  ಕದನಕ್ಕೆ ಇಳಿದಿರುವ ಶಿವಸೇನೆಗೆ 2019 ಅಕ್ಟೋಬರ್ 30ರ ಬುಧವಾರ ಇನ್ನೊಬ್ಬ ಪಕ್ಷೇತರ ಸದಸ್ಯ ಬೆಂಬಲನೀಡಿದ್ದು, ಶಿವಸೇನೆಗೆ ಬೆಂಬಲ ನೀಡಿರುವ ಪಕ್ಷೇತರರ ಬಲ ೬ಕ್ಕೆ ಏರಿತು. ಇದರಿಂದಾಗಿ ೫೬ ಸದಸ್ಯರನ್ನು ಹೊಂದಿರುವ ಶಿವಸೇನೆಯ ಬಲ ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ೬೨ಕ್ಕೇ ಏರಿತು. ಬಿಜೆಪಿ ಶಾಸಕಾಂಗ ಪಕ್ಷವು ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಸೇನೆಯನ್ನು ಬೆಂಬಲಿಸಿದ ಪಕ್ಷೇತರರ ಸಂಖ್ಯೆ ೬ಕ್ಕೆ ಏರಿತು ಎಂದು ಮೂಲಗಳು ಹೇಳಿದವು. ಧುಲೆ ಜಿಲ್ಲೆಯ ಸಕ್ರಿ ಕ್ಷೇತ್ರದಿಂದ ಗೆದ್ದಿರುವ ಪಕ್ಷೇತರ ಶಾಸಕಿ ಮಂಜುಳಾ ಗವಿಟ್ ಅವರು ಶಿವಸೇನೆಗೆ ಬೆಂಬಲ ನೀಡಿರುವ ೬ನೇ ಪಕ್ಷೇತರ ಶಾಸಕರಾಗಿದ್ದಾರೆ. ಇದಕ್ಕೆ ಮುನ್ನ ಅವರು ಬಿಜೆಪಿಯಲ್ಲಿ ಇದ್ದರು. ೧೩ಮಂದಿ ಪಕ್ಷೇತರರ ಪೈಕಿ ಮಂದಿ ಪಕ್ಷೇತರ ಶಾಸಕರು ಮುನ್ನ ಶಿವಸೇನೆಗೆ ಬೆಂಬಲ ಘೋಷಿಸಿದ್ದರು. ಎನ್ಸಿಪಿ ಬೆಂಬಲಿತ ಪಕ್ಷೇತರ ಶಾಸಕ ಶಂಕರರಾವ್ ಗಡಾಖ್ ಅಕ್ಟೋಬರ್ 28 ಸೋಮವಾರ  ಉದ್ಧವ್ ಠಾಕ್ರೆ ಜೊತೆ ಮಾತುಕತೆ ಬಳಿಕ ಸೇನೆಗೆ ಬೆಂಬಲ ಘೋಷಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2019: ಬೆಂಗಳೂರು: ಭ್ರಷ್ಟರನ್ನು ಮಟ್ಟ ಹಾಕುವಲ್ಲಿ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದುಎಂದು ಸಾಧಿಸಿ ತೋರಿಸಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಅವರು 2019 ಅಕ್ಟೋಬರ್ 30 (90) ಬುಧವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರುಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದರು. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂದಿತ್ತು. ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಹಿಂಭಾಗದ  ಲಕ್ಷ್ಮಿ ದೇವಾಲಯದ ಬಳಿಯ ತಮ್ಮ ನಿವಾಸದಲ್ಲಿದ್ದ ಅವರಿಗೆ ಬೆಳಿಗ್ಗೆ 5.45ಕ್ಕೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಒಬ್ಬ ಪುತ್ರ ಮತ್ತು ಪುತ್ರಿ ಸದ್ಯ ಅಮೆರಿಕದಲ್ಲಿದ್ದು ಅವರು ಬಂದ ನಂತರ 2019 ಅಕ್ಟೋಬರ್ 31ರ ಗುರುವಾರ ಅಂತ್ಯಕ್ರಿಯೆನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿದವು. ಹೆಂಡತಿ ಅನುಶ್ರೀಯಾಪುತ್ರರಾದ ಶೇಷಾಚಲ, ವೇದಾಚಲ (ಇಬ್ಬರೂ ವಕೀಲರು) ಮತ್ತು ಅರ್ಜುನಾಚಲ (ಸಾಫ್ಟ್ವೇರ್ ಡೆವಲಪರ್) ಮತ್ತು ಮಗಳು ಅರುಣಾಚಲ (ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರು) ಇದ್ದಾರೆ. ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೊಮ್ಮಗ ವರುಣ್ ತಿಳಿಸಿದರು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2019: ಶ್ರೀನಗರ: ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಐರೋಪ್ಯ ಒಕ್ಕೂಟದ ಸಂಸದರ ತಂಡ  2019 ಅಕ್ಟೋಬರ್ 30 ಬುಧವಾರ ಹೇಳಿತು. ಜಮ್ಮುಕಾಶ್ಮೀರಕ್ಕೆ ಈದಿನ ಭೇಟಿ ನೀಡಿದ ಬಳಿಕ ಆಯ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ತಂಡದ ಸದಸ್ಯರು, ‘ನಾವು ಸುದೀರ್ಘ ವರ್ಷಗಳ ಹೋರಾಟದ ಬಳಿಕ ಶಾಂತಿ ನೆಲೆಸಿದ ಯುರೋಪ್ಗೆ ಸೇರಿದವರು. ಭಾರತವು ವಿಶ್ವದಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರವಾಗುವುದನ್ನು ಕಾಣಲು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದ ಪರ ನಿಲ್ಲಲಿದ್ದೇವೆ. ಭೇಟಿಯು ಇಲ್ಲಿನ ವಾಸ್ತವದ ಅರಿವು ಮೂಡಿಸಿದೆಎಂದು ಹೇಳಿದರು. ನಾವು ಭಾರತದ ನಾಗರಿಕರು ದೇಶದ ಇತರ ಎಲ್ಲ ನಾಗರಿಕರಂತೆ ಇರಲು ಬಯಸುತ್ತೇವೆ. ದೇಶದ ಇತರ ಪ್ರದೇಶಗಳಂತೆಯೇ ನಮ್ಮಲ್ಲೂ ಅಭಿವೃದ್ಧಿಯಾಗುವುದನ್ನು ಆಶಿಸುತ್ತೇವೆ ಎಂಬುದಾಗಿ ಸ್ಥಳೀಯರು ನಮ್ಮ ಬಳಿ ಹೇಳಿದ್ದಾರೆಎಂದು ಸಂಸದರೊಬ್ಬರು ತಿಳಿಸಿದರು. ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿಯು ಭಾರತದ ಆಂತರಿಕ ವಿಚಾರ ಎಂದೂ ತಂಡ ಹೇಳಿತು. ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದ ಸಂಸದರ ನಿಯೋಗವನ್ನು ಬಿಗಿ ಭದ್ರತೆಯಲ್ಲಿ ದಾಲ್ಸರೋವರ ಸೇರಿದಂತೆ ಹಲವು ಪ್ರದೇಶಗಳಿಗೆ ಕರೆದೊಯ್ಯಲಾಯಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment