ನಾನು ಮೆಚ್ಚಿದ ವಾಟ್ಸಪ್

Saturday, October 19, 2019

ಇಂದಿನ ಇತಿಹಾಸ History Today ಅಕ್ಟೋಬರ್ 19

ಇಂದಿನ ಇತಿಹಾಸ   History Today  ಅಕ್ಟೋಬರ್  19  
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸುವುದಾಗಿ ೧೯೬೪ರಲ್ಲೇ ಸಂಸತ್ತಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 19 ಶನಿವಾರ ಕಾಂಗ್ರೆಸ್ ವಿರುದ್ಧ  ಹರಿಹಾಯ್ದರು. ಹರಿಯಾಣ ವಿಧಾನಸಭೆಗೆ ಸೋಮವಾರ ನಡೆಯಲಿರುವ ಚುನಾವಣೆಗಾಗಿ ಪ್ರಚಾರದ ಕೊನೆಯ ದಿನ  ಸಿರ್ಸಾದಲ್ಲಿ ಭಾಷಣ ಮಾಡಿದ ಪ್ರಧಾನಿ, ’೧೯೬೪ರಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆಯಲ್ಲಿ ಕಾಂಗ್ರೆಸ್ ಪಕ್ಷ ಹೋಳಾಗಿದೆ ಎಂದು ರಾಷ್ಟ್ರದ ಉದ್ದಾಮ ನಾಯಕ ಭ್ರಮನಿರಸನಗೊಂಡಿದ್ದರು. ೩೭೦ನೇ ವಿಧಿಯನ್ನು ರದ್ದು ಪಡಿಸಬೇಕು ಮತ್ತು ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂಬ ಒತ್ತಾಯ ಆಗ ಕೇಳಿಬಂದಿತ್ತುಎಂದು ಹೇಳಿದರು.    ಸಮಯದಲ್ಲಿ ಕಾಂಗ್ರೆಸ್ ನಾಯಕರು ಕೈ ಮುಗಿದುಕೊಂಡು ಅವರ ಬೇಡಿಕೆಯನ್ನು ಈಡೇರಿಸಲಾಗುವುದು ಮತ್ತು ೩೭೦ನೇ ವಿಧಿಯನ್ನು ಒಂದು ವರ್ಷದ ಒಳಗಾಗಿ ರದ್ದು ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ವಿಷಯನ್ನು ಬಳಿಕ ಪುನಃ ಮೂಲೆಗುಂಪು ಮಾಡಲಾಯಿತು ಎಂದು ಶನಿವಾರ ದಿನದ ತಮ್ಮ ಎರಡನೇ ಪ್ರಚಾರಸಭೆಯಲ್ಲಿ ಮೋದಿ ನುಡಿದರು. ‘ಇದ್ದ ಒತ್ತಡ ಏನು? ಮತ್ತು ಎಂತಹ ಆಟವನ್ನು ಆಡಲಾಗುತ್ತಿದೆ?’ ಎಂದು ಪ್ರಧಾನಿ ಪ್ರಶ್ನಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಮುಂಬೈ: ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಕಾರಣ 2019 ಅಕ್ಟೋಬರ್ 19ರ ಶನಿವಾರ ಇಲ್ಲಿಗೆ ೧೬೦ ಕಿಮೀ ದೂರದ ನಾಸಿಕ್ ಓಜರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಅಕ್ಟೋಬರ್ ೨೧ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಕೊನೆಯ ದಿನದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಅಮಿತ್ ಶಾ ಅವರು ನಾಸಿಕ್ ಬಳಿ ವಾಯುಯಾನ ಮಾಡುತ್ತಿದ್ದಾಗ ಭಾರೀ ಮಳೆ ಸುರಿದುದನ್ನು ಅನುಸರಿಸಿ ಅಲ್ಲಿನ ಓಜರ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರನ್ನು ತುರ್ತಾಗಿ ಇಳಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹೆಲಿಕಾಪ್ಟರ್ ನಾಸಿಕ್ನಿಂದ ೭೦ ಕಿಮೀ ದೂರದ ಅಹ್ಮದ್ ನಗರ ಜಿಲ್ಲೆಯ ಅಕೋಲಾ ಕಡೆಗೆ ಹೊರಟಿತ್ತು. ಅಕೋಲಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಶಾ ಅವರು ಭಾಷಣ ಮಾಡಬೇಕಾಗಿತ್ತು. ಪ್ರತಿಕೂಲ ಹವಾಮಾನವನ್ನು ಅನುಸರಿಸಿ ಮಧ್ಯಾಹ್ನ .೨೫ರ ವೇಳೆಯಲ್ಲಿ ಓಜರ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರನ್ನು ಇಳಿಸಲು ಪೈಲಟ್ ತೀರ್ಮಾನಿಸಿದ ಎಂದು ಅಧಿಕಾರಿ ನುಡಿದರು. ಓಜರ್ ವಿಮಾನ ನಿಲ್ದಾಣದಲ್ಲಿ ೪೦ ನಿಮಿಷಗಳ ಕಾಲ ತಂಗಿದ ಬಳಿಕ ಹೆಲಿಕಾಪ್ಟರ್ ಮಧ್ಯಾಹ್ನ .೦೮ ಗಂಟೆಗೆ ಅಹ್ಮದ್ ನಗರದ ಕಡೆಗೆ ಹೊರಟಿತು ಎಂದು ಅಧಿಕಾರಿ ತಿಳಿಸಿದರು. ಅಮಿತ್ ಶಾ ಅವರು ಇದಕ್ಕೆ ಮುನ್ನ ಉತ್ತರ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಮುಂಬೈ:  ಸುರಿಯುತ್ತಿದ್ದ ಭಾರೀ ಮಳೆಯನ್ನೂ ಲೆಕ್ಕಿಸದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರ ಭಾಷಣದ ತುಣುಕು 2019 ಅಕ್ಟೋಬರ್ 19 ಶನಿವಾರ ಭಾರೀ ವೈರಲ್ ಆಯಿತು. ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಗೆಲ್ಲಲೇಬೇಕೆಂಬ ಶರದ್ ಪವಾರ್ ಅವರ ಹಠವನ್ನು ಮಳೆರಾಯನಿಗೂ ತಡೆಯಲಾಗಲಿಲ್ಲ" ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಾಗಿ ಎನ್ಸಿಪಿ ಬಿರುಸಿನ ಪ್ರಚಾರ ಮಾಡುತ್ತಿದೆ. ಇದರ ಭಾಗವಾಗಿಯೇ ಇಲ್ಲಿನ ಸತಾರಾದಲ್ಲಿ ಎನ್ಸಿಪಿ ಚುನಾವಣಾ ಪ್ರಚಾರ ಸಭೆ ಆಯೋಜಿಸಿತ್ತು. ಓತಪ್ರೋತವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಎನ್ಸಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರ ಭಾಷಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಮೂಲಕ ಶರದ್ ಪವಾರ್ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಕಂಡರು. ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ. ಇದಕ್ಕೆ ಮಳೆರಾಯನ ಆಶೀರ್ವಾದವೂ ನಮ್ಮ ಮೇಲಿದೆ. ನನ್ನ ಐವತ್ತು ವರ್ಷದ ರಾಜಕೀಯ ಇತಿಹಾಸದಲ್ಲೇ ನಾನು ಸೋಲು ಕಂಡಿಲ್ಲ. ಸತಾರಾ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಗಾಗಿ ನೀವು ನಮ್ಮ ಎನ್ಸಿಪಿ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಪವಾರ್ ಕರೆ ನೀಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಮಹೇಂದ್ರಘಡ: ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಮುಗಿಸಿ ವಾಪಸಾಗುವಾಗ ಪ್ರತಿಕೂಲ ಹವಾಮಾನದ ಕಾರಣ ತಾವು ಪಯಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಕ್ಕಳ ಜೊತೆಗೆ ಕ್ರಿಕೆಟ್ ಆಡಿ ಸಂಭ್ರಮಿಸುತ್ತಾ ಕಾಲ ಕಳೆದ ಘಟನೆ 2019 ಅಕ್ಟೋಬರ್ 19 ಶನಿವಾರ ಘಟಿಸಿತು. ಹರಿಯಾಣದ ಮಹೇಂದ್ರ ಘಡದಲ್ಲಿ ಚುನಾವಣಾ ಪ್ರಚಾರ ಮುಗಿಸಿ ವಾಪಸಾಗುತ್ತಿದ್ದಾಗ ರೇವರಿಯಲ್ಲಿ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಅವರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತು. ವೇಳೆಯಲ್ಲಿ ಅವರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅವರ ತಂಡ ಯತ್ನಿಸಿತು. ಮಧ್ಯೆ, ಲಭಿಸಿದ ಬಿಡುವಿನ ವೇಳೆಯನ್ನು ರಾಹುಲ್ ಅವರು ಸ್ಥಳೀಯ ಕಾಲೇಜಿನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಮಕ್ಕಳ ಜೊತೆಗೆ ಕಳೆದರು. ತಮ್ಮೊಂದಿಗೆ ಕ್ರಿಕೆಟ್ ಆಡಲು ಇಳಿದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರ ಜೊತೆಗೆ ಮಕ್ಕಳೂ ಸಂಭ್ರಮದೊಂದಿಗೆ ಕ್ರಿಕೆಟ್ ಆಡಿ ನಲಿದರು ಎಂದು ಸುದ್ದಿ ಮೂಲಗಳು ತಿಳಿಸಿದವು. ಹರಿಯಾಣ ವಿಧಾನಸಭಾ ಚುನಾವಣಾ ಅಂತಿಮ ದಿನದ ಪ್ರಚಾರದ ಬಳಿಕ ದೆಹಲಿಗೆ ರಾಹುಲ್ ಗಾಂಧಿಯವರು ದೆಹಲಿಗೆ ವಾಪಸ್ ಪಯಣ ಹೊರಟಿದ್ದಾಗ ಘಟನೆ ಘಟಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಬೆಂಗಳೂರು: ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿಯ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತು. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ 2019 ಅಕ್ಟೋಬರ್ 19 ಶನಿವಾರ ಪೊಲೀಸರಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದರು. ರಾಜ್ಯ ಸರ್ಕಾರ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿ ಮಾಡಿ ಅಧಿಕೃತ ಆದೇಶ ಹೊರಡಿಸಿತು. ಸದ್ಯ ವರದಿ ಶಿಫಾರಸ್ಸಿನಂತೆ ವೇತನವನ್ನು ಉನ್ನತೀಕರಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆದೇಶ 2019 ಆಗಸ್ಟ್ 1 ರಿಂದಲೇ ಜಾರಿಯಾಗಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

ಬೆಂಗಳೂರು: ಮಹದಾಯಿ ನೀರಿಗಾಗಿ ನಗರದಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಮೂರು ದಿನಗಳ ನಂತರ 2019 ಅಕ್ಟೋಬರ್ 19 ಶನಿವಾರ ಅಂತ್ಯಗೊಂಡಿತು. ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ಕ ಬೆನ್ನಲ್ಲೇ ಹೋರಾಟ ನಿಲ್ಲಿಸಲು ನಿರ್ಧರಿಸಲಾಯಿತು. ಈದಿನ ಮಧ್ಯಾಹ್ನ ಹೋರಾಟಗಾರರ ಪ್ರತಿನಿಧಿಯಾಗಿ ಮಹಿಳಾ ರೈತರ ತಂಡವೊಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿತು. ರೈತ ಮಹಿಳೆಯರು ಕಳಸಾ ಬಂಡೂರಿ, ಮಹದಾಯಿ ಯೋಜನೆ ಸಂಬಂಧ ತಮ್ಮ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಬಳಿಕ ಮಹದಾಯಿ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಲಖನೌ: ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು 2019 ಅಕ್ಟೋಬರ್ 19 ಶನಿವಾರ ಸೂರತ್ನಲ್ಲಿ ಮೂವರನ್ನು ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಸೂರತ್ನಲ್ಲಿ ನಾಲ್ವರು ಮತ್ತು ಅಹ್ಮದಾಬಾದಿನಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದರು. ಪೈಕಿ, ಮೌಲಾನಾ ಮೊಹ್ಸಿನ್ ಶೇಖ್, ಫೈಜಾನ್ ಮತ್ತು ಖುರ್ಷಿದ್ ಅಹ್ಮದ್ ಪಠಾಣ್ ಎಂಬುವವರನ್ನು ಬಂಧಿಸಲಾಯಿತು. ತಿವಾರಿ ಹತ್ಯೆಯಾದ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿದ್ದ ಸಿಹಿತಿಂಡಿ ಬಾಕ್ಸ್ನಲ್ಲಿ ಸೂರತ್ ವಿಳಾಸವಿತ್ತು. ಸಿಹಿತಿಂಡಿ ಪೊಟ್ಟಣವನ್ನು ಸೂರತ್ ನವ್ಸಾರಿ ಬಜಾರ್ನಲ್ಲಿರುವ ಧರ್ತಿ ಫರ್ಸನ್ ಅಂಗಡಿಯಿಂದ ಖರೀದಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಂಗಡಿಯ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದ ಸೂರತ್ ಕ್ರೈಂಬ್ರಾಂಚ್ ಪೊಲೀಸರು ಶಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅಂಗಡಿಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯನ್ನೂ ಕಲೆಹಾಕಿರುವ ಪೊಲೀಸರು ಅದನ್ನು ಪರಿಶೀಲನೆಗೆ ಒಳಪಡಿಸಿದ್ದರು. ಕೆಲವು ಶಂಕಿತ ಯುವಕರನ್ನೂ ವಿಚಾರಣೆಗೆ ಒಳಪಡಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಬೆಳಗಾವಿ: ಸಕ್ಕರೆ ಸಚಿವ ಸಿ.ಟಿ. ರವಿ ಅವರು 2019 ಅಕ್ಟೋಬರ್ 19 ಶನಿವಾರ ಮೊಬೈಲ್ ಫೋನ್ ಬೆಳಕಿನಲ್ಲೇ ಸಭೆ ನಡೆಸಿದ ಘಟನೆ ಇಲ್ಲಿ ಘಟಿಸಿತು. ಸಚಿವರು ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಬಗ್ಗೆ ಸಭೆ ನಡೆಸುತ್ತಿದ್ದಾಗ ಸಂಜೆಯಾಗಿತ್ತು. ಸುಮಾರು .೪೫ ರಷ್ಟೊತ್ತಿಗೆ ವಿದ್ಯುತ್ ಕಡಿತವಾಗಿ ಸಭಾಭವನ ಕತ್ತಲಲ್ಲಿ ಮುಳುಗಿತುಆಗ ಮೊಬೈಲ್ ಬೆಳಕಿನಲ್ಲೇ ಸಭೆ ಮುಂದುವರಿಸಿದ ಸಚಿವ ಸಿ.ಟಿ. ರವಿ ಅಧಿಕಾರಿಗಳಿಂದ ವಿವರ ಪಡೆದರು. ಎರಡು ನಿಮಿಷ ಬಳಿಕ ವಿದ್ಯುತ್ ಬಂದಿತು.  ಕೇಂದ್ರ, ರಾಜ್ಯ, ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರು ಸೇರಿ ಸಕ್ಕರೆ ಸ್ಥಿರ ನಿಧಿ ಸ್ಥಾಪಿಸಬೇಕು ಎನ್ನುವ ಬಗ್ಗೆ ತೀರ್ಮಾನ ಆಗಬೇಕು. ಹೊರ ರಾಜ್ಯಕ್ಕೆ ಕಬ್ಬು ರಪ್ತು ನಿಷೇಧ ಮಾಡಬೇಕು ಎನ್ನುವ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಹೇಳಿದರು.  ರಾಜ್ಯದಲ್ಲಿ ಒಟ್ಟು ೨೬ ಮಿಲಿಯನ್ ಟನ್ ಬೇಡಿಕೆ ಇದೆ. ಆದರೆ, ೨೮, ೨೯ ಮಿಲಿಯನ್ ಟನ್ ಉತ್ಪಾದನೆ ಇದೆ. ಹಾಗಾಗಿ ಸಮಸ್ಯೆ ಎಂದು ಸಚಿವ ಸಿಟಿ ರವಿ ತಿಳಿಸಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)




No comments:

Post a Comment