ನಾನು ಮೆಚ್ಚಿದ ವಾಟ್ಸಪ್

Tuesday, October 15, 2019

ಇಂದಿನ ಇತಿಹಾಸ History Today ಅಕ್ಟೋಬರ್ 15

2019: ನವದೆಹಲಿ:  ಪಯಾಣ ಮುಗಿಸಿ ಬಂದ ವಿಮಾನ ಮತ್ತು ಪಯಣ ಹೊರಡಲು ಸಜ್ಜಾಗಿ ರನ್ ವೇಗೆ ತೆರಳುವ ವಿಮಾನಗಳಲ್ಲಿ ಆಗುವ ಇಂಧನ ವ್ಯಯವನ್ನು ತಪ್ಪಿಸಲು ಪೈಲಟ್ ನಿರ್ದೇಶಿತ ಸೆಮಿ ರೊಬೋಟಿಕ್ ಟ್ಯಾಕ್ಸಿ ಬೋಟ್ ಎಂಬ ಹೆಸರಿನ ಟ್ರ್ಯಾಕ್ಟರ್ ಮಾದರಿಯ ಉಪಕರಣಗಳನ್ನು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ ಇಂಡಿಯಾ ಬಳಸಲು ಆರಂಭಿಸಿತು. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೊಬೋಟಿಕ್ ಟ್ಯಾಕ್ಸಿ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಇದು ಮೊದಲ ಬಾರಿಗೆ ಏರ್ ಬಸ್ - ೩೨೦ ದೆಹಲಿ- ಮುಂಬೈ ಎಐ ೬೬೫ ವಿಮಾನವನ್ನು  2019 ಅಕ್ಟೋಬರ್ 15ರ ಮಂಗಳವಾರ ರನ್ ವೇಗೆ ಎಳೆದು ತಂದು ನಿಲ್ಲಿಸಿತು. ಸದ್ಯ ಏರ್ ಬಸ್ ವಿಮಾನಗಳಿಗೆ ಮಾತ್ರ ಸೇವೆ ಲಭ್ಯವಿದ್ದು ವಿಶ್ವದ ಯಾವುದೇ ಕಡೆಯಿಂದ ಬಂದ ಏರ್ ಬಸ್  ವಿಮಾನಗಳು ಇವುಗಳನ್ನು ಬಳಸಬಹುದು. ಪಾರ್ಕಿಂಗ್ ಸ್ಥಳದಿಂದ ರನ್ ವೇಗೆ  ವಿಮಾನವನ್ನು ಎಳೆದು ತಂದು ನಿಲ್ಲಿಸುವ ಕೆಲಸವನ್ನು ಮಾತ್ರ ಸದ್ಯಕ್ಕೆ ಟ್ಯಾಕ್ಸಿ ಬೋಟ್ಗೆ ವಹಿಸಲಾಯಿತು. ಏನಿದು ಟ್ಯಾಕ್ಸಿ ಬೋಟ್ಸಾಮಾನ್ಯವಾಗಿ ಬೇರೆಡೆಯಿಂದ ಬಂದು ನಿಂತ ವಾವನವನ್ನು ತುಸು ಕಡೆ ಅಥವಾ ಕಡೆಗೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಬಳಸುತ್ತಾರೆ. ಆದರೆ ಟ್ಯಾಕ್ಸಿ ಬೋಟ್ ಹಾಗಲ್ಲ. ಇದು ಸೆಮಿ ರೊಬೊಟಿಕ್ ಮಾದರಿಯದ್ದು. ಹೆಚ್ಚು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಪೈಲಟ್ ಸೂಚನೆ ಮೇರೆಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್ ಸ್ಥಳಕ್ಕೆ ಅಥವಾ ರನ್ವೇಗೆ  ತರುವ ಕೆಲಸವನ್ನು ಮಾಡಬಲ್ಲದು. ವಿಮಾನದ ಎಂಜಿನ್ ಸಂಪೂರ್ಣ ಸ್ವಿಚ್ ಆಫ್ ಆಗಿದ್ದರೂ ಟ್ಯಾಕ್ಸಿ ಬೋಟ್ ಕಾರ್ಯನಿರ್ವಹಿಸುತ್ತದೆ. ಇದರಿಂದ ವಿಮಾನ ಇಳಿದ ಬಳಿಕ ರನ್ ವೇಗೆ  ಹೋಗುವಲ್ಲಿ ಅಥವಾ ರನ್ವೇಯಿಂದ ಪಾರ್ಕಿಂಗ್ ಜಾಗಕ್ಕೆ ಬರುವಲ್ಲಿ ಬೇಕಾಗುವ ಇಂಧನದ ಶೇ.೮೫ರಷ್ಟು ಉಳಿತಾಯವಾಗುತ್ತದೆ ಅಗಾಧ ಪ್ರಮಾಣದ ವಾಯುಮಾಲಿನ್ಯ ಕೂಡಾ ತಗ್ಗುತ್ತದೆ.  (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2019: ನವದೆಹಲಿ:  ರಾಜಕೀಯವಾಗಿ ಅತಿಸೂಕ್ಷ್ಮವಾಗಿರುವ ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಬುಧವಾರವೇ ಮುಕ್ತಾಯಗೊಳಿಸಲು ತಾನು ಬಯಸಿರುವುದಾಗಿ  2019 ಅಕ್ಟೋಬರ್ 15ರ ಮಂಗಳವಾರ ಹೇಳಿದ ಸುಪ್ರೀಂಕೊರ್ಟ್, ತಮ್ಮ ಅಂತಿಮ ವಾದಗಳನ್ನು 2019 ಅಕ್ಟೋಬರ್ 16ರ  ಬುಧವಾರ ಪರಿಸಮಾಪ್ತಿಗೊಳಿಸುವಂತೆ ಎಲ್ಲ ಕಕ್ಷಿದಾರರಿಗೂ ನಿರ್ದೇಶಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣದ ವಿಚಾರಣೆಯನ್ನು ೩೯ ದಿನಗಳಿಂದ ನಡೆಸುತ್ತಿದ್ದು ಮೊದಲು ಅಕ್ಟೋಬರ್ ೧೮ರಂದು ವಾದಮಂಡನೆ ಪೂರ್ಣಗೊಳಿಸುವಂತೆ ಸೂಚಿಸಿತ್ತುಬಳಿಕ ದಿನಾಂಕವನ್ನು ಹಿಂದೂಡಿದ ನ್ಯಾಯಾಲಯ ಅಕ್ಟೋಬರ್ ೧೭ರಂದು ವಾದ ಮಂಡನೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಆದರೆ, ಮಂಗಳವಾರ ಸಿಜೆಐ ಗೊಗೋಯಿ ಅವರು ಪೀಠವು ಗುರುವಾರದ ಬದಲಿಗೆ ಬುಧವಾರವೇ ಎಲ್ಲ ವಾದಗಳನ್ನೂ ಪರಿಸಮಾಪ್ತಿಗೊಳೀಸಲು ಬಯಸಿದೆ ಎಂಬ ಇಂಗಿತ ವ್ಯಕ್ತ ಪಡಿಸಿದರು. ಕಕ್ಷಿದಾರರಿಗೆ ಅಂತಿಮ ವಾದ ಮಂಡನೆಗೆ ಕಾಲ ಮಿತಿ ನಿಗದಿ ಪಡಿಸಿದ ಸುಪ್ರೀಂಕೋರ್ಟ್ ಪೀಠವು, ಅಂತಿಮ ವಾದ ಮಂಡನೆ ಹಾಗೂ ಉತ್ತರಗಳನ್ನು ನೀಡಲು  ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರಿಗೆ ಬುಧವಾರ ಗಂಟೆಯವರೆಗೂ ಕಾಲಾವಕಾಶ ನೀಡುವುದು ಎಂದು ಹೇಳಿತು. ನ್ಯಾಯಾಲಯವು ಮಂಗಳವಾರ ಕೂಡಾ ಸಂಜೆ ಗಂಟೆಯವರೆಗೂ ಕಲಾಪ ನಡೆಸಿತು. ವಾದಮಂಡನೆಗಳು ಪೂರ್ಣಗೊಂಡರೆ ಪೀಠವು ತೀರ್ಪನ್ನು ಕಾಯ್ದಿರಿಸಲಿದೆ. ನ್ಯಾಯಮೂರ್ತಿಗಳಾದ ಎಸ್ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್ ನಜೀರ್ ಅವರನ್ನೂ ಒಳಗೊಂಡಿರುವ ಪೀಠವು, ಸಿಜೆಐ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ದಿನದ ಒಳಗಾಗಿಯೇ ತೀರ್ಪು ನೀಡಬೇಕಾಗಿದೆ. ಸಿಜೆಐ ಅವರ ನಿವೃತ್ತಿಯ ಒಳಗಾಗಿ ತೀರ್ಪು ನೀಡದಿದ್ದರೆ, ಸಂಪೂರ್ಣ ವಿಷಯವನ್ನು ಪುನಃ ಹೊಸದಾಗಿ ಮೊದಲಿನಿಂದಲೇ ಆಲಿಸಬೇಕಾಗುತ್ತದೆ.  (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)
2019: ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಿಹಾರ್ ಸೆರೆಮನೆಯಲ್ಲಿ ಇರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್  ಅವರು ಜಾಮೀನು ಕೋರಿ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಅಕ್ಟೋಬರ್ ೧೭ಕ್ಕೆ ಮುಂದೂಡಿಕೆಯಾಗಿದ್ದು, ವಿಶೇಷ ಜಾರಿ ನಿರ್ದೇಶನಾಲಯ ನ್ಯಾಯಾಲಯವೂ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿತು. ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ 2019 ಅಕ್ಟೋಬರ್ 15ರ ಮಂಗಳವಾರವೂ ನ್ಯಾಯಾಲಯಗಳಲ್ಲಿ ಯಾವುದೇ ನಿರಾಳತೆ ಲಭಿಸಲಿಲ್ಲ. ದೆಹಲಿ ಹೈಕೋರ್ಟಿನಲ್ಲಿ ಮಂಗಳವಾರ ಜಾಮೀನು ಕೋರಿಕೆ  ಅರ್ಜಿಗೆ ಸಂಬಂಧಿಸಿದಂತೆ ಶಿವಕುಮಾರ್ ಪರ ವಕೀಲರ ವಾದ ಮಂಡನೆ ಮುಕ್ತಾಯಗೊಂಡಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ ೧೭ಕ್ಕೆ ಮುಂದೂಡಿತು.  ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯವು ಡಿಕೆಶಿ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತು. ದೆಹಲಿ ಹೈಕೋರ್ಟಿನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಕಾಂಗ್ರೆಸ್ ನಾಯಕನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರುಡಿಕೆ ಶಿವಕುಮಾರ್ ಬಾರಿ ಶಾಸಕರಾಗಿದ್ದವರು. ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರನ್ನು ಬಂಧಿಸುವುದಕ್ಕೂ ಮುನ್ನ ದಿನಗಳ ಕಾಲ ೩೫ ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿದೆ. ಬಳಿಕ ೪೫ ದಿನಗಳ ಕಾಲ ಕಸ್ಟಡಿಯಲ್ಲಿ ಇಡಲಾಗಿದೆ. ಇದು ಬಂಧಿಸುವಂತಹ ಪ್ರಕರಣವೇ ಅಲ್ಲಎಂದು ವಾದ ಮಂಡಿಸಿದರು. ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ಶಿವಕುಮಾರ್ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿತ್ತು ಎಂದೂ ಅವರು ವಾದಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ).
2019: ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ತಿಹಾರ್ ಸೆರೆಮನೆಯಲ್ಲಿ ಒಂದು ಸುತ್ತು ಪ್ರಶ್ನಿಸಿದ ಬಳಿಕ ಬೇಕಿದ್ದರೆ ಬಂಧಿಸಬಹುದು ಮತ್ತು ವಶಕ್ಕೆ ಪಡೆದುಕೊಳ್ಳಬಹುದು ಎಂದು ದೆಹಲಿಯ ವಿಶೇಷ ನ್ಯಾಯಾಲಯವು 2019 ಅಕ್ಟೋಬರ್ 15 ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿತು. ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆಗಸ್ಟ್ ೨೧ರಂದು ಸಿಬಿಐಯಿಂದ ಬಂಧಿತರಾಗಿದ್ದ ಚಿದಂಬರಂ ಅವರು ಈಗಾಗಲೇ ರಾಜಧಾನಿ ದೆಹಲಿಯ ತಿಹಾರ್ ಕೇಂದ್ರೀಯ ಸೆರೆಮನೆಯಲ್ಲಿ ೪೦ ದಿನಗಳನ್ನು ಕಳೆದಿದ್ದಾರೆಜಾರಿ ನಿರ್ದೇಶನಾಲಯವು  ಈದಿನ  ನ್ಯಾಯಾಲಯದಲ್ಲಿ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಲು ಮತ್ತು ತನಿಖೆಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿತು. ವಿಶೇಷ ಸಿಬಿಐ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಜಾರಿ ನಿರ್ದೇಶನಾಲಯದ ಎರಡೂ ಬೇಡಿಕೆಯನ್ನು ಒಪ್ಪಿದರು, ಆದರೆ  ’ಉಲ್ಟಾ ರೂಪದಲ್ಲಿ. ‘ಸಂಸ್ಥೆಯು ಮೊದಲು ಅವರನ್ನು ತನಿಖೆಗೆ ಗುರಿ ಪಡಿಸಬೇಕು. ಒಮ್ಮೆ ಪ್ರಶ್ನಿಸಿದ ಬಳಿಕ ಬೇಕಿದ್ದರೆ ಅವರನ್ನು ಬಂಧಿಸಬಹುದುಎಂದು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಹೇಳಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ತತ್ ಕ್ಷಣವೇ ಚಿದಂಬರಂ ಅವರನ್ನು ತತ್ ಕ್ಷಣವೇ ನ್ಯಾಯಾಲಯ ಸಮುಚ್ಚಯದ  ಪಕ್ಕದ ಕೊಠಡಿಯಲ್ಲಿ ೨೦ ನಿಮಿಷಗಳ ಕಾಲ ಪ್ರಶ್ನಿಸಬಹುದು ಎಂಬ ಸಲಹೆ ಮುಂದಿಟ್ಟರು. ‘ಅಷ್ಟೊಂದು ತರಾತುರಿ ಏಕೆ?’ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಸಾಲಿಸಿಟರ್ ಜನರಲ್ ಅವರ ಮನವಿಯನ್ನು ದೃಢವಾಗಿ ತಳ್ಳಿಹಾಕಿದರು. ‘ಸಂಸ್ಥೆಯು ಆರೋಪಿಯ ಘನತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಅವರ ಘನತೆಗೆ ಚ್ಯುತಿ ಉಂಟಾಗಬಾರಾದು. ಸಾರ್ವಜನಿಕರ ಎದುರಲ್ಲಿ ಬಂಧಿಸುವುದು ತರವಲ್ಲಎಂದು ಹೇಳಿದ ಕುಹರ್ ಅವರು ತಿಹಾರ್ ಸೆರೆಮನೆಯಲ್ಲಿ ಪ್ರಶ್ನಿಸಿ, ಬಳಿಕ ಅಗತ್ಯವಿದ್ದಲ್ಲಿ ಬಂಧಿಸಲು ಅನುಮತಿ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)



No comments:

Post a Comment