2019:
ವಾಷಿಂಗ್ಟನ್: ವಾಯುವ್ಯ ಸಿರಿಯಾದಲ್ಲಿ ಅಮೆರಿಕ
ಸೇನೆ 2019
ಅಕ್ಟೋಬರ್ 26ರ ಶನಿವಾರ ಶನಿವಾರ ನಡೆಸಿದ ದಾಳಿಯಲ್ಲಿ ಐಸಿಸ್ ನಾಯಕ ಅಬೂಬಕರ್ ಅಲ್-ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು
2019 ಅಕ್ಟೋಬರ್ 27ರ ಭಾನುವಾರ ತಿಳಿಸಿದರು. ಡಿಎನ್‌ಎ ಮತ್ತು ಬಯೋಮೆಟ್ರಿಕ್ ಪರೀಕ್ಷೆಯಿಂದ
ಬಾಗ್ದಾದಿ ಸಾವಿನ ಬಗ್ಗೆ ಅಂತಿಮ ದೃಢೀಕರಣ ಲಭಿಸಲಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಅಮೆರಿಕ
ಸೇನಾ ದಾಳಿಯ ಸಮಯದಲ್ಲಿ ಬಾಗ್ದಾದಿ ತಾನು
ಧರಿಸಿಕೊಂಡಿದ್ದ ಸ್ಫೋಟಕ ಕಟ್ಟಿಕೊಂಡ ಆತ್ಮಹತ್ಯೆ ಉಡುಪನ್ನು ಸ್ಫೋಟಿಸಿಕೊಂಡಿದ್ದಾನೆ
ಎಂದು ಎಂದು ರಕ್ಷಣಾ ಅಧಿಕಾರಿ ತಿಳಿಸಿದರು.
ಐಸಿಸ್
ನಾಯಕನ
ಗುರುತು ಪತ್ತೆ ಹಚ್ಚಲು ಸಿಐಎ ಸಹಕರಿಸಿದೆ ಎಂದು ರಕ್ಷಣಾ ಅಧಿಕಾರಿ ಹೇಳಿದರು.
ಬಾಗ್ದಾದಿಯನ್ನು ಕೊಲ್ಲಲಾಗಿದೆ ಎಂದು ನಂಬಲಾಗಿದೆ ಎಂದು ನ್ಯೂಸ್ವೀಕ್ ಮೊದಲು ವರದಿ ಮಾಡಿತು.
ಅಧ್ಯಕ್ಷ
ಡೊನಾಲ್ಡ್ ಟ್ರಂಪ್ ಭಾನುವಾರ ಬೆಳಿಗ್ಗೆ ೯ ಗಂಟೆಗೆ ಪ್ರಮುಖ ಘೋಷಣೆ ಮಾಡಲಿದ್ದಾರೆ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಹೊಗನ್ ಗಿಡ್ಲಿ ಪ್ರಕಟಿಸಿದ್ದರು.
ಆಡಳಿತ ಅಧಿಕಾರಿಯೊಬ್ಬರು ಸಿಎನ್ಎನ್ಗೆ ಪ್ರಕಟಣೆ ವಿದೇಶಿ ನೀತಿಗೆ ಸಂಬಂಧಿಸಿದೆ ಎಂದು ಹೇಳಿದರು.
ಪ್ರತಿಕ್ರಿಯೆ ಕೋರಿ ಮಾಡಿದ ಪೆಂಟಗನ್ ತತ್ ಕ್ಷಣ ಸ್ಪಂದಿಸಲಿಲ್ಲ. ಭಯೋತ್ಪಾದಕ ಗುಂಪಿನ ಮುಖಂಡ ಬಾಗ್ದಾದಿ ಕಳೆದ ಐದು ವರ್ಷಗಳಿಂದ ತಲೆ
ಮರೆಸಿಕೊಂಡಿದ್ದ. ಏಪ್ರಿಲ್
ತಿಂಗಳಲ್ಲಿ ಐಸಿಸ್ ಮಾಧ್ಯಮ ವಿಭಾಗದ ಅಲ್-ಫರ್ಖಾನ್ ವೀಡಿಯೊವನ್ನು ಪ್ರಕಟಿಸಿತ್ತು.
ವಿಡಿಯೋ ಒಬ್ಬ ವ್ಯಕ್ತಿಯನ್ನು ಬಾಗ್ದಾದಿ ಎಂದು ತೋರಿಸಿತ್ತು. ಮೊಸುಲ್‌ನ ಗ್ರೇಟ್ ಮಸೀದಿಯಲ್ಲಿ ಮಾತನಾಡಿದ್ದ
ಬಾಗ್ದಾದಿಯನ್ನು ಜುಲೈ ೨೦೧೪ ರ ಇದೇ ಮೊದಲು ಆಗಿತ್ತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment