ನಾನು ಮೆಚ್ಚಿದ ವಾಟ್ಸಪ್

Wednesday, October 2, 2019

ಸುಬ್ರಹ್ಮಣ್ಯದ ಕಡೆಗೆ ಬ್ರಹ್ಮರಥದ ಪಯಣ

ಸುಬ್ರಹ್ಮಣ್ಯದ ಕಡೆಗೆ ಬ್ರಹ್ಮರಥದ ಪಯಣ
ಸುಬ್ರಹ್ಮಣ್ಯ: ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿ್ಲ್ಲೆಯ  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದ್ದು, ಬ್ರಹ್ಮರಥವು ಇದೀಗ ಕೋಟೇಶ್ವರದಿಂದ ಹೊರಟು ಸುಬ್ರಹ್ಮಣ್ಯದ ಸಮೀಪಕ್ಕೆ ಬಂದಿದ್ದು, ಅಕ್ಟೋಬರ್  2ರ ಬುಧವಾರ ಸುಬ್ರಹ್ಮಣ್ಯವನ್ನು ತಲುಪಲಿದೆ.
ವಿವಿಧ ಜಾತಿಯ 2000 ಸಿ ಎಫ್ ಟಿ  ಮರ ಬಳಸಿ ಬ್ರಹ್ಮರಥವನ್ನು ನಿರ್ಮಿಸಲಾಗಿದೆ. ಕೋಟೇಶ್ವರದಲ್ಲಿ ಕೇವಲ 7 ತಿಂಗಳಲ್ಲಿ ಸುಂದರವಾದ ಕೆತ್ತನೆಗಳೊಂದಿಗೆ ನೂತನ ಬ್ರಹ್ಮರಥ ನಿರ್ಮಾಣವಾಗಿದೆ.
ನವರಾತ್ರಿ ಆರಂಭವಾಗುವ ಹೊತ್ತಿಗೆ,  ಸೆಪ್ಟೆಂಬರ  29 ರಂದು ರಥವನ್ನು ದೇವಾಲಯಕ್ಕೆ ಬಿಟ್ಟು ಕೊಡಲಾಗಿದ್ದು.  ಸೆಪ್ಟೆಂಬರ  30 ರಂದು ಬೆಳಗ್ಗೆ ರಥವು ಟ್ರಾಲಿಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಸ್ತುತ  ಸುಮಾರು 400 ವರ್ಷಗಳ ಪುರಾತನವಾದ ರಥ ಇದೆ. ಪುರಾತನ ರಥದ ಅಳತೆಗೆ, ಶಾಸ್ತ್ರಕ್ಕೆ ಯಾವುದೇ ಧಕ್ಕೆಯಾಗದಂತೆ ಅದೇ ಮಾದರಿಯಲ್ಲಿ ಈಗ ಹೊಸ ಬ್ರಹ್ಮರಥ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಕೋಟೇಶ್ವರದ  ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ರೈ ಕಡಬ ದಾನ ರೂಪದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ  ರಥವನ್ನು ನಿರ್ಮಿಸಿಕೊಟ್ಟಿದ್ದಾರೆ.
ಬ್ರಹ್ಮರಥವು ಸುಬ್ರಹ್ಮಣ್ಯಕ್ಕೆ ಸಾಗುತ್ತಿರುವ ಸಡಗರದ ದೃಶ್ಯ  ಇಲ್ಲಿದೆ. ಇದು ಬಿಸಿರೊಡಿನ  ದೃಶ್ಯ. ಕೃಪೆ: (ವಿಟ್ಲ ಸುದ್ದಿಗಳು)  ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್  ಮಾಡಿರಿ



No comments:

Post a Comment